ತಮಿಳುನಾಡು ಚುನಾವಣೆ | ಬಿಜೆಪಿ ‘ಕುತಂತ್ರ’ಕ್ಕೆ ಬಲಿಯಾಗ್ತಾರಾ ದಳಪತಿ ವಿಜಯ್‌!?

Date:

ಬಿಜೆಪಿ ಈಗಾಗಲೇ ಟಿವಿಕೆ ಜೊತೆ ಮೈತ್ರಿಗಾಗಿ ಕೈ ಚಾಚಿದ್ದು, ವಿಜಯ್‌ ಗೆ ಉಪ ಮುಖ್ಯಮಂತ್ರಿ ಸ್ಥಾನದ ಭರವಸೆ ಮುಂದೆ ಇಟ್ಟಿದೆ ಎನ್ನಲಾಗಿದೆ. ಒಂದು ವೇಳೆ ಬಿಜೆಪಿ ಜೊತೆಗೆ ವಿಜಯ್‌ ಮೈತ್ರಿ ಮಾಡಿಕೊಂಡಿದ್ದೇ ಆದಲ್ಲಿ, ಅಣ್ಣಾಮಲೈಗೆ ಬಂದ ಸ್ಥಿತಿಯೇ ಕಾಲಾನುಕ್ರಮದಲ್ಲಿ ಎದುರಾದರೆ ಆಶ್ಚರ್ಯವಿಲ್ಲ. ಬಳಸಿ ತ್ಯಜಿಸುವ ಬಿಜೆಪಿಯ “ಯ್ಯೂಸ್‌ ಅಂಡ್‌ ಥ್ರೋ” ರಾಜಕೀಯ ವಿಜಯ್‌ ಗೆ ತಿಳಿಯದ ಸಂಗತಿಯೇನೂ ಅಲ್ಲ.

ತಮಿಳುನಾಡಿನಂತಹ ದ್ರಾವಿಡ ನೆಲದಲ್ಲೂ ಬಿಜೆಪಿ ತನ್ನ ಒಡೆದು ಆಳುವ ವಿಷ ಬೀಜ ಬಿತ್ತಿದ್ದು, ತನ್ನ ನೆಲೆಯನ್ನು ವಿಸ್ತರಿಸಿಕೊಳ್ಳುವುದಕ್ಕೆ ನಿರಂತರ ಪ್ರಯತ್ನ ಮಾಡುತ್ತಿದೆ. ಆಡಳಿತರೂಢ ಡಿಎಂಕೆಯನ್ನು ಅಧಿಕಾರದಿಂದ ಕೆಳಗಿಳಿಸಿ ಎಐಎಡಿಎಂಕೆಯೊಂದಿಗಿನ ಮೈತ್ರಿಯ ಸಹಾಯದಿಂದ ಅಧಿಕಾರ ಅನುಭವಿಸುವ ಹಪಾಹಪಿಯಲ್ಲಿ ಬಿಜೆಪಿ ಯತ್ನಿಸುತ್ತಿದೆ. ಸಿನೆಮಾ ಕ್ಷೇತ್ರದಿಂದ ರಾಜಕೀಯ ಪ್ರವೇಶಿಸಿದ ವಿಜಯ್‌ ನೇತೃತ್ವದ ಟಿವಿಕೆಯೊಂದಿಗೆ ಮೈತ್ರಿಗೆ ಸತತ ಪ್ರಯತ್ನಿಸುತ್ತಿದ್ದು, ಹಿಂದುಳಿದ ವರ್ಗ ಮತ್ತು ಅತಿ ಹಿಂದುಳಿದ ವರ್ಗಗಳಿರುವ ರಾಜ್ಯದಲ್ಲಿ ಮೇಲ್ವರ್ಗಗಳನ್ನೇ ಸದಾ ತನ್ನ ರಾಜಕೀಯದ ಆಧಾರ ಎಂದು ನಂಬಿರುವ ಬಿಜೆಪಿ ಈ ಹಠ ಸಾಧನೆಗೆ ಮುಂದಾಗಿರುವುದು ಭೋಳೇತನ ಇಲ್ಲವೇ ಮೂರ್ಖತನ.

ದಕ್ಷಿಣ ಭಾರತದಲ್ಲಿ ಕರ್ನಾಟಕವನ್ನು ಬಿಟ್ಟರೆ, ತಮಿಳುನಾಡನ್ನೇ ಹೆಚ್ಚು ಗುರಿಯಾಗಿಟ್ಟುಕೊಂಡಿರುವ ಬಿಜೆಪಿ ತನ್ನ ಹಳೆಯ ಷಡ್ಯಂತ್ರ ರಾಜಕಾರಣವನ್ನೇ ಮುಂದುವರಿಸಿದೆ. ಬಳಸಿ ಬಿಸಾಕುವ ರಾಜಕಾರಣವನ್ನು ಬಿಜೆಪಿ ತಮಿಳುನಾಡಿನಲ್ಲೂ ಮಾಡಿದೆ ಎನ್ನುವುದಕ್ಕೆ ಅಲ್ಲಿನ ಮಾಜಿ ಬಿಜೆಪಿ ರಾಜ್ಯಾಧ್ಯಕ್ಷ ಕೆ. ಅಣ್ಣಾಮಲೈ ಅವರೇ ಸಾಕ್ಷಿ. ಎಐಎಡಿಎಂಕೆ ಜೊತೆಗೆ ಮೈತ್ರಿ ಮುರಿಯುವುದಕ್ಕೆ ಮುಖ್ಯ ಕಾರಣವೇ ಅಣ್ಣಾಮಲೈ ಎಂದು ಸಬೂಬು ನೀಡಿ ಅವರನ್ನು ಆ ಸ್ಥಾನದಿಂದ ವ್ಯವಸ್ಥಿತವಾಗಿ ಕೆಳಗಿಳಿಸಿ ಎಐಎಡಿಎಂಕೆ ಪಕ್ಷ ತೊರೆದು ಬಿಜೆಪಿಗೆ ಸೇರ್ಪಡೆಗೊಂಡಿದ್ದ ನೈನಾರ್‌ ನಾಗೇಂದ್ರನ್ ಅವರಿಗೆ ಅಧ್ಯಕ್ಷಗಿರಿ ನೀಡಿದ್ದು, ಬಿಜೆಪಿಯ ಕೊಳಕು ಜಾತಿ ರಾಜಕಾರಣಕ್ಕೆ ಹಿಡಿದ ಕೈಗನ್ನಡಿ. ದ್ರಾವಿಡ ಪಕ್ಷದಲ್ಲೇ ರಾಜಕೀಯ ಆರಂಭಿಸಿದ್ದ ನಾಗೇಂದ್ರನ್‌ ಅಧಿಕಾರಕ್ಕಾಗಿ, ಅಸ್ತಿತ್ವಕ್ಕಾಗಿ ಬಿಜೆಪಿಯನ್ನು ಸೇರಿಕೊಂಡು ದ್ರಾವಿಡ ರಾಜಕಾರಣವನ್ನೇ ಎದುರು ಹಾಕಿಕೊಂಡರು. ಬಿಜೆಪಿಗೆ ತಮಿಳುನಾಡಿನಲ್ಲಿ ಎಐಎಡಿಎಂಕೆಯೇ ದಿಕ್ಕು ದೆಸೆ. ಹಾಗಾಗಿ ಅಣ್ಣಾಮಲೈ ಕಾರಣದಿಂದ 2023ರಲ್ಲಿ ಎಐಎಡಿಎಂಕೆ ಮೈತ್ರಿ ತೊರೆಯುವ ಪರಿಸ್ಥಿತಿ ಬಂತು ಎಂದು ʼಹೇಳದೆಯೇ ಹೇಳಿದಂತೆʼ ಮಾಡಿ, ಎಐಎಡಿಎಂಕೆ ಜೊತೆಗಿನ ಮೈತ್ರಿಗೆ ಅನುಕೂಲ ಆಗುವಂತೆ ನೈನಾರ್‌ ನಾಗೇಂದ್ರನ್‌ ಅವರನ್ನು ಪ್ರತಿಷ್ಠಾಪಿಸಿದ್ದು ಗೊತ್ತಿಲ್ಲದ ವಿಷಯವೇನಲ್ಲ.

ಅಣ್ಣಾಮಲೈ ಹೇಳಿಕೇಳಿ ಪಶ್ಚಿಮ ತಮಿಳುನಾಡಿನ ಪ್ರಬಲ ಹಿಂದುಳಿದ ವರ್ಗವಾದ ಕೊಂಗು ವೆಲ್ಲಲರ್‌ ಗೌಂಡರ್‌ ಸಮುದಾಯಕ್ಕೆ ಸೇರಿದವರು. ಎಐಎಡಿಎಂಕೆಯ ನಾಯಕ ಏಡಪ್ಪಾಡಿ ಕೆ. ಪಳನಿಸ್ವಾಮಿ ಕೂಡ ಇದೇ ಸಮುದಾಯಕ್ಕೆ ಸೇರಿದವರು. ನೈನಾರ್ ನಾಗೇಂದ್ರನ್ ತೇವರ್ ಸಮುದಾಯಕ್ಕೆ ಸೇರಿದವರು. ಎಐಎಡಿಎಂಕೆ ಪಕ್ಷದ ನಾಯಕಿ ವಿ.ಕೆ. ಶಶಿಕಲಾ ಸಹ ಇದೇ ಸಮಯದಾಯಕ್ಕೆ ಸೇರಿದವರು. ಜಯಲಲಿತಾ ಮುಖ್ಯಮಂತ್ರಿಯಾಗಿದ್ದಾಗ ಪಕ್ಷದಲ್ಲಿ ತೇವರ್ ಸಮುದಾಯ ಬಹಳಷ್ಟು ಪ್ರಭಾವ ಹೊಂದಿತ್ತು. ನೈನಾರ್ ನಾಗೇಂದ್ರನ್, ಏಡಪ್ಪಾಡಿ ಕೆ. ಪಳನಿಸ್ವಾಮಿ ಮೂಲಕ ರಾಜ್ಯ ರಾಜಕೀಯದಲ್ಲಿ ಸಾಕಷ್ಟು ಬದಲಾವಣೆ ಮಾಡಬಹುದು ಎನ್ನುವುದು ಬಿಜೆಪಿ ಮತ್ತು ಎಐಎಡಿಎಂಕೆ ಮೈತ್ರಿಯ ರಾಜಕೀಯ ಕುತಂತ್ರದ ಭಾಗವೇ ಆಗಿದೆ. ಪಶ್ಚಿಮ ತಮಿಳುನಾಡಿನಲ್ಲಿ ಹಿಂದುಳಿದ ವರ್ಗಗಳ ಪ್ರಾಬಲ್ಯ ಇರುವ ಕಾರಣಕ್ಕೆ, ಪಶ್ಚಿಮ ತಮಿಳುನಾಡನ್ನು ಮೀರಿ ತನ್ನ ನೆಲೆಯನ್ನು ವಿಸ್ತರಿಸಿಕೊಳ್ಳುವುದಕ್ಕೆ ಬಿಜೆಪಿ, ಈ ಹೆಜ್ಜೆ ಇಟ್ಟಿದೆ ಎನ್ನಲಾಗಿದೆ.

ಈಗ ನಟ ವಿಜಯ್‌ ಅವರ ಟಿವಿಕೆಯೊಂದಿಗೆ ಮೈತ್ರಿ ಮಾಡಿಕೊಳ್ಳುವುದಕ್ಕೆ ಬಿಜೆಪಿ ಮುಂದಾಗಿದೆ. ಮೂಲತಃ ಕ್ರೈಸ್ತ ಕುಟುಂಬಕ್ಕೆ ಸೇರಿದವರಾಗಿರುವ ವಿಜಯ್‌ ವೆಳ್ಳಾಲರ್‌ ಸಮುದಾಯಕ್ಕೆ ಸೇರಿದವರು. ವಿಜಯ್‌ ಅವರನ್ನು ತನ್ನ ಕುತಂತ್ರ ರಾಜಕಾರಣಕ್ಕೆ ಬಳಸಿಕೊಂಡು ಡಿಎಂಕೆ ಮತ್ತು ಕಾಂಗ್ರೆಸ್‌ ಕಡೆಗೆ ವಾಲುವ ಕ್ರೈಸ್ತ ಮತಗಳನ್ನು ಒಡೆದು ಆಳುವುದಕ್ಕೆ ಮುಂದಾಗಿದೆ ಬಿಜೆಪಿ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ಇದನ್ನೂ ಓದಿ : ಪಶ್ಚಿಮ ಬಂಗಾಳ | ರಾಜಕೀಯ ಷಡ್ಯಂತ್ರವಿಲ್ಲದೆ ಗೆಲ್ಲುವುದೇ ಬಿಜೆಪಿ!?

ಇನ್ನು, ತಮಿಳುನಾಡಿನ ಒಟ್ಟು ಜನಸಂಖ್ಯೆಯಲ್ಲಿ, ಸುಮಾರು ಶೇ.68 ರಿಂದ ಶೇ.71ರಷ್ಟು ಹಿಂದುಳಿದ ವರ್ಗಗಳ ಜನರೇ ಇದ್ದಾರೆ. ಉತ್ತರ ತಮಿಳುನಾಡಿನಲ್ಲಿ ವಣ್ಣಿಯರ್ ಸಮುದಾಯ ಪ್ರಬಲವಾಗಿದ್ದು, ಒಟ್ಟು ಜನಸಂಖ್ಯೆಯಲ್ಲಿ ಅವರ ಪ್ರಮಾಣ ಸುಮಾರು ಶೇ.12 ರಿಂದ 13ರಷ್ಟು. ಇವರು ಪಾಟಾಳಿ ಮಕ್ಕಳ್‌ ಕಚ್ಚಿ(ಪಿಎಂಕೆ) ಪಕ್ಷದ ಪ್ರಮುಖ ವೋಟು ಬ್ಯಾಂಕ್. ದಕ್ಷಿಣ ತಮಿಳುನಾಡಿನಲ್ಲಿ ತೇವರ್‌ ಅಥವಾ ಮುಕ್ಕೋಲತ್ತೋರ್‌ ಸಮುದಾಯದ್ದೇ ಪಾರುಪತ್ಯ. ಈ ರಾಜ್ಯ ರಾಜಕೀಯದಲ್ಲಿ ತೇವರ್ ಗಳು ಸಾಂಪ್ರದಾಯಿಕವಾಗಿ ಎಐಎಡಿಎಂಕೆ ಪಕ್ಷದ ಬೆಂಬಲಿಗರು. ಪಶ್ಚಿಮ ತಮಿಳುನಾಡಿನಲ್ಲಿ ಅಥವಾ ಕೊಂಗುನಾಡಿನಲ್ಲಿ ಗೌಂಡರ್‌ ಸಮುದಾಯ ಸಾಕಷ್ಟು ಪ್ರಬಲ. ಕೃಷಿಯನ್ನೇ ಆಧರಿಸಿರುವ ಈ ಸಮುದಾಯದವರು ಆರ್ಥಿಕವಾಗಿ ಹಾಗೂ ರಾಜಕೀಯವಾಗಿ ಪ್ರಬಲರು. ರಾಜ್ಯದ ಒಟ್ಟು ಜನಸಂಖ್ಯೆಯ ಪೈಕಿ ಶೇ.19 ರಿಂದ 20ರಷ್ಟು ದಲಿತರು(ಎಸ್.ಸಿ) ರಾಜ್ಯದಾದ್ಯಂತ ಇದ್ದು ಇವರ ಮತಗಳು ಚುನಾವಣೆಯಲ್ಲಿ ನಿರ್ಣಾಯಕ ಎಂಬುದು ಗಮನಾರ್ಹ. ದೇಶದಲ್ಲೇ ಅತಿ ಹೆಚ್ಚು ಅಂದರೇ, ಶೇ.69ರಷ್ಟು ಮೀಸಲಾತಿಯನ್ನು ತಮಿಳುನಾಡು ಹೊಂದಿದೆ. ಇದು ಸುಪ್ರೀಂ ಕೋರ್ಟ್‌ ನಿಗದಿಪಡಿಸಿದ ಶೇ.50ರ ಮಿತಿಗಿಂತ ಹೆಚ್ಚಿದ್ದರೂ, ಸಂವಿಧಾನದ 9ನೇ ಅನುಸೂಚಿಯ ಅಡಿಯಲ್ಲಿ ರಕ್ಷಣೆ ಪಡೆದಿದೆ.  ಹಾಗಾಗಿ ತಮಿಳುನಾಡಿನಲ್ಲಿ ಬಿಜೆಪಿಯ ಬೇಳೆ ಇಲ್ಲಿ ಬೇಯುವುದು ಸುಲಭವಲ್ಲ. 

ಈ  ನಡುವೆ ತಮಿಳುನಾಡಿನ ರಾಜಕೀಯದಲ್ಲಿ ಹುಬ್ಬೇರಿಸುವ ಸಂಗತಿ ಏನೆಂದರೆ, ʼಮಕ್ಕಳ್‌ ಚಾಯ್ಸ್‌ʼ ಎನ್ನುವ ಸಮೀಕ್ಷೆಯೊಂದರ ಪ್ರಕಾರ, ಇಂದು ತಮಿಳುನಾಡಿನಲ್ಲಿ ಚುನಾವಣೆ ನಡೆದರೆ, ಯಾರನ್ನು ಮುಖ್ಯಮಂತ್ರಿಯನ್ನಾಗಿ ನೋಡುತ್ತೀರಿ ಎನ್ನುವ ಪ್ರಶ್ನೆಗೆ ಟಿವಿಕೆಯ ವಿಜಯ್‌ ಅವರನ್ನು ಶೇ.71ರಷ್ಟು ಮಂದಿ ಮುಖ್ಯಮಂತ್ರಿಯಾಗಿ ಆರಿಸಲು ಆಸಕ್ತಿ ತೋರಿದ್ದಾರೆ, ಇನ್ನು ಹಾಲಿ ಮುಖ್ಯಮಂತ್ರಿ ಎಂ.ಕೆ ಸ್ಟ್ಯಾಲಿನ್‌ ಅವರನ್ನು ಕೇವಲ ಶೇ.14ರಷ್ಟು ಮಂದಿ ಮುಖ್ಯಮಂತ್ರಿಯನ್ನಾಗಿ ಮರು ಆಯ್ಕೆ ಮಾಡಲು ಆಸಕ್ತಿ ತೋರಿದ್ದು, ಏಡಪ್ಪಾಡಿ ಪಳನಿಸ್ವಾಮಿ ಅವರನ್ನು ಶೇ.11ರಷ್ಟು ಮಂದಿ ಮುಖ್ಯಮಂತ್ರಿಯನ್ನಾಗಿ ನೋಡುವುದಕ್ಕೆ ಇಷ್ಟಪಟ್ಟಿದ್ದಾರೆ. ಸದ್ಯಕ್ಕೆ ವಿಜಯ್‌ ಮೇಲೆ ತಮಿಳು ಜನ ವಿಶ್ವಾಸ ಇರಿಸಿದ್ದಾರೆ ಎಂದು ಈ ಸಮೀಕ್ಷಾ ವರದಿ ಹೇಳುತ್ತದೆ. ಆದರೆ, ವಿಜಯ್‌ ಗೆ ಇರುವ ಸಿನೆಮಾ ಖ್ಯಾತಿ ಪೂರ್ಣ ಪ್ರಮಾಣದಲ್ಲಿ ಮತಗಳಾಗಿ ಪರಿವರ್ತನೆಯಾಗುತ್ತದೆಯೇ ಎಂಬ ಪ್ರಶ್ನೆ ಇದ್ದೇ ಇದೆ.

ಈಗಾಗಲೇ ಬಿಜೆಪಿ ಟಿವಿಕೆ ಜೊತೆ ಮೈತ್ರಿಗಾಗಿ ಮಾತುಕತೆ ನಡೆಸಿದೆ ಎನ್ನುವ ವರದಿಗಳಿದ್ದು, ವಿಜಯ್‌ ಗೆ ಉಪ ಮುಖ್ಯಮಂತ್ರಿ ಸ್ಥಾನದ ಭರವಸೆಯನ್ನೂ ನೀಡಿದೆಯೆನ್ನಲಾಗಿದೆ. ಒಂದು ವೇಳೆ ಬಿಜೆಪಿ ಜೊತೆಗೆ ವಿಜಯ್‌ ಮೈತ್ರಿ ಮಾಡಿಕೊಂಡಿದ್ದೇ ಹೌದಾದಲ್ಲಿ, ಅಣ್ಣಾಮಲೈಗೆ ಬಂದ ಸ್ಥಿತಿಯೇ ಬಂದೊದಗಲಿದೆ ಎನ್ನುವುದರಲ್ಲಿ ಅನುಮಾನವಿಲ್ಲ. ಬಳಸಿ ತ್ಯಜಿಸುವ ಬಿಜೆಪಿಯ “ಯ್ಯೂಸ್‌ ಅಂಡ್‌ ಥ್ರೋ” ರಾಜಕೀಯ ಗುಟ್ಟೇನೂ ಅಲ್ಲ. ದೇಶದಾದ್ಯಂತ ಅನೇಕ ನಾಯಕರನ್ನು ಬಳಸಿ ಬಿಸಾಕಿರುವ ಉದಾಹರಣೆಗಳಿವೆ.

ವಿಜಯ್‌ ಅವರನ್ನು ಮುಖ್ಯಮಂತ್ರಿ ಮಾಡುವುದಕ್ಕೆ ಒಪ್ಪುವ ಪಕ್ಷಗಳೊಂದಿಗೆ ಮಾತ್ರ ಟಿವಿಕೆ ಮೈತ್ರಿ ಮಾಡಿಕೊಳ್ಳಲಿದೆಯೆಂದು ಆ ಪಕ್ಷದ ಹಿರಿಯ ನಾಯಕ ಸೆಂಗೊಟ್ಟಿಯನ್‌ ಈಗಾಗಲೇ ಸ್ಪಷ್ಟಪಡಿಸಿದ್ದಾರೆ. ವಿಜಯ್‌ ಈ ಮೂಲಕ ತಮಿಳುನಾಡಿನಲ್ಲಿ ತನ್ನ ಗುರಿ ಮುಖ್ಯಮಂತ್ರಿ ಸ್ಥಾನವೇ ವಿನಾ ಉಪಮುಖ್ಯಮಂತ್ರಿ ಅಲ್ಲ ಎಂಬ ನಿಚ್ಚಳ ಇಂಗಿತ ನೀಡಿದ್ದಾರೆ. ತಮಿಳುನಾಡಿನಲ್ಲಿ ಪರ್ಯಾಯ ರಾಜಕಾರಣ ತರುವುದಕ್ಕೆ ಶಪಥ ಮಾಡಿರುವ ವಿಜಯ್‌ ಬಿಜೆಪಿಯಂತಹ ಪಕ್ಷದೊಂದಿಗೆ ಮೈತ್ರಿ ಮಾಡಿಕೊಳ್ಳುವರೇ?

  

  

IMG 20260316 WA0002
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಬ್ಯಾಲೆಟ್ ಪೇಪರ್ ಬಳಕೆ; ವಿಧಾನಸಭೆಯಲ್ಲಿ ಮಸೂದೆ ಅಂಗೀಕಾರ

ರಾಜ್ಯದ ಸ್ಥಳೀಯ ಸಂಸ್ಥೆಗಳ ಚುನಾವಣಾ ಪ್ರಕ್ರಿಯೆಯಲ್ಲಿ ಬದಲಾವಣೆ ತರಲು ರಾಜ್ಯ ಸರ್ಕಾರ...

ಪ್ರಧಾನಿ ಮೋದಿ ಅಮೆರಿಕಕ್ಕೆ 100% ಶರಣಾಗಿದ್ದಾರೆ: ರಾಹುಲ್ ಗಾಂಧಿ

ಪಶ್ಚಿಮ ಏಷ್ಯಾದಲ್ಲಿನ ಯುದ್ಧದ ಪರಿಸ್ಥಿತಿ ಮತ್ತು ದೇಶದ ಆರ್ಥಿಕ ನೀತಿಗಳ ಕುರಿತು...

‘ಟ್ರಂಪ್ ನಿಯಂತ್ರಣದಲ್ಲಿ ಮೋದಿ’: ಲೋಕಸಭೆಯ ಭಾಷಣದಲ್ಲಿ ಅಮೆರಿಕದ ಬಗ್ಗೆ ಮೌನಕ್ಕೆ ರಾಹುಲ್ ವಾಗ್ದಾಳಿ

ಮಧ್ಯಪ್ರಾಚ್ಯ ಬಿಕ್ಕಟ್ಟಿನ ಕುರಿತು ಭಾರತದ ನಿಲುವಿನ ಬಗ್ಗೆ ರಾಜಕೀಯ ವಾಗ್ದಾಳಿ ಸೋಮವಾರ...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ ರಾಷ್ಟ್ರೀಯವಾದ?

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ...