ಭೂ ಪರಿಹಾರಕ್ಕೆ ಬದಲಿಯಾಗಿ ನೀಡುವ ʼಟಿಡಿಆರ್‌ʼಗಳು ಆನ್‌ಲೈನ್ ಮಾರಾಟಕ್ಕೆ! ಏನಿದು ಟಿಡಿಆರ್?

Date:

ಹಸ್ತಾಂತರಿಸಬಹುದಾದ ಅಭಿವೃದ್ಧಿ ಹಕ್ಕುಗಳಿಗೆ (TDR) ಸಂಬಂಧಿಸಿದ ವ್ಯವಹಾರಗಳು ಒಂದು ತಿಂಗಳ ಅವಧಿಯಲ್ಲಿ ಡಿಜಿಟಲ್ ರೂಪಕ್ಕೆ ಬರಲಿವೆ. ಟಿಡಿಆರ್ ಅಡಿಯಲ್ಲಿ ಸಾರ್ವಜನಿಕ ಯೋಜನೆಗಳಿಗಾಗಿ ಭೂಮಿ ನೀಡಿದ ಭೂಮಾಲೀಕರಿಗೆ ನಗದು ಪರಿಹಾರದ ಬದಲಾಗಿ ನೀಡಲಾಗುವ ‘ಅಭಿವೃದ್ಧಿ ಹಕ್ಕುಗಳ ಪ್ರಮಾಣಪತ್ರ’ಗಳನ್ನು (DRC) ಆನ್‌ಲೈನ್‌ಲ್ಲಿ ಮಾರಾಟ ಮಾಡಲು ಗ್ರೇಟರ್ ಬೆಂಗಳೂರು ಪ್ರಾಧಿಕಾರ (GBA) ಆನ್‌ಲೈನ್ ಎಕ್ಸ್‌ಚೇಂಜ್‌ ಮಾದರಿಯ ವೇದಿಕೆಯನ್ನು ಸಿದ್ಧಪಡಿಸುತ್ತಿದೆ. ಈ ಡಿಜಿಟಲ್ ಮಾರುಕಟ್ಟೆಯು ಡಿಆರ್‌ಸಿ ಹೊಂದಿರುವವರನ್ನು ಮತ್ತು ಡೆವಲಪರ್‌ಗಳು ಸೇರಿದಂತೆ ಸಂಭಾವ್ಯ ಖರೀದಿದಾರರನ್ನು ನೇರವಾಗಿ ಸಂಪರ್ಕಿಸಲು ಅವಕಾಶ ಮಾಡಿಕೊಡುತ್ತದೆ ಎಂದು ಗ್ರೇಟರ್ ಬೆಂಗಳೂರು ಪ್ರಾಧಿಕಾರ (ಜಿಬಿಎ) ಹೇಳಿದೆ.

“ಟಿಡಿಆರ್ ಅಡಿಯಲ್ಲಿ ನೀಡಲಾದ ಎಲ್ಲ ಪ್ರಮಾಣಪತ್ರಗಳನ್ನು ಸಾರ್ವಜನಿಕ ವಲಯದಲ್ಲಿ ಪ್ರಕಟಿಸಲು ನಾವು ಸಾಫ್ಟ್‌ವೇರ್ ಒಂದನ್ನು ಅಭಿವೃದ್ಧಿಪಡಿಸಿದ್ದೇವೆ. ಈ ಡಿಜಿಟಲ್ ವೇದಿಕೆಯು ವಿತರಿಸಲಾದ ಟಿಡಿಆರ್‌ಗಳ ಪಟ್ಟಿ ಮತ್ತು ಖರೀದಿಗೆ ಲಭ್ಯವಿರುವ ಡಿಆರ್‌ಸಿಗಳ ಮಾಹಿತಿಯನ್ನು ವಿವರಿಸುತ್ತದೆ” ಎಂದು ನಗರಾಭಿವೃದ್ಧಿ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ತುಷಾರ್ ಗಿರಿನಾಥ್ ಹೇಳಿದ್ದಾರೆ.

ಏನಿದು ಟಿಡಿಆರ್?

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ಸರಳವಾಗಿ ಹೇಳುವುದಾದರೆ, ಸರ್ಕಾರವು ರಸ್ತೆ ಅಗಲೀಕರಣ, ಪಾರ್ಕ್ ನಿರ್ಮಾಣ ಅಥವಾ ಮೆಟ್ರೋದಂತಹ ಸಾರ್ವಜನಿಕ ಯೋಜನೆಗಳಿಗಾಗಿ ವ್ಯಕ್ತಿಯೊಬ್ಬರ ಖಾಸಗಿ ಜಮೀನನ್ನು ಸ್ವಾಧೀನಪಡಿಸಿಕೊಳ್ಳುತ್ತದೆ. ಆಗ, ಸ್ವಾಧೀನಪಡಿಸಿಕೊಂಡ ಭೂಮಿಗೆ ಪ್ರತಿಯಾಗಿ ಹಣದ ರೂಪದಲ್ಲಿ ಪರಿಹಾರ ನೀಡುವ ಬದಲು ‘ಅಭಿವೃದ್ಧಿ ಹಕ್ಕು’ಗಳ ರೂಪದಲ್ಲಿ ಪ್ರಮಾಣಪತ್ರ ನೀಡುತ್ತದೆ. ಈ ಪ್ರಮಾಣಪತ್ರಗಳನ್ನು ಹಸ್ತಾಂತರಿಸಬಹುದಾದ ಅಭಿವೃದ್ಧಿ ಹಕ್ಕು (ಟಿಡಿಆರ್) ಎಂದು ಕರೆಯಲಾಗಿದೆ. ಈ ಟಿಡಿಆರ್‌ಗಳನ್ನು ಭೂಮಾಲೀಕರು ತಾವೇ ಬಳಸಬಹುದು ಅಥವಾ ಬೇರೆಯವರಿಗೆ ಮಾರಾಟ ಅಥವಾ ಹಸ್ತಾಂತರ ಮಾಡಬಹುದು.

ಟಿಡಿಆರ್ ಅಡಿಯಲ್ಲಿ, ಭೂಮಾಲೀಕರೊಬ್ಬರು ತನ್ನ ಜಮೀನನ್ನು ಸರ್ಕಾರಕ್ಕೆ ನೀಡಿದಾಗ, ಆ ಜಮೀನಿನಲ್ಲಿ ಅವರು ಎಷ್ಟು ವಿಸ್ತೀರ್ಣದ ಕಟ್ಟಡ ಕಟ್ಟಬಹುದಿತ್ತೋ, ಅದಕ್ಕಿಂತ ಹೆಚ್ಚಿನ ವಿಸ್ತೀರ್ಣ ಮತ್ತು ಎತ್ತರದ ಕಟ್ಟಡವನ್ನು ಬೇರೆಡೆ ನಿರ್ಮಾಣ ಮಾಡಲು ಸರ್ಕಾರ ಅನುಮತಿ ನೀಡುತ್ತದೆ. ಇದಕ್ಕಾಗಿ ಡಿಆರ್‌ಸಿ ಎಂಬ ಪ್ರಮಾಣಪತ್ರವನ್ನು ನೀಡಲಾಗುತ್ತದೆ.

dkshivakumar 2 1756872943

ಈ ಪ್ರಮಾಣಪತ್ರವು ಸರ್ಕಾರಕ್ಕೆ ಭೂಮಿ ನೀಡಿದವರು ತಮ್ಮ ಉಳಿದ ಜಮೀನಿನಲ್ಲಿ ಅಥವಾ ನಗರದ ಬೇರೆ ಯಾವುದಾದರೂ ಭಾಗದಲ್ಲಿ ನಿಯಮಾನುಸಾರ ಅನುಮತಿಸಲಾದ ವಿಸ್ತೀರ್ಣಕ್ಕಿಂತ ಹೆಚ್ಚಿನ ಕಟ್ಟಡವನ್ನು, ಹೆಚ್ಚಿನ ಮಹಡಿಗಳನ್ನು ನಿರ್ಮಿಸಲು ಕಾನೂನಾತ್ಮಕ ಅವಕಾಶ ಕಲ್ಪಿಸುತ್ತದೆ. ಒಂದು ವೇಳೆ, ಅವರಿಗೆ ಪ್ರಮಾಣಪತ್ರದ ಅಗತ್ಯವಿಲ್ಲದಿದ್ದರೆ, ಅದನ್ನು ಬಿಲ್ಡರ್‌ಗಳಿಗೆ ಅಥವಾ ಹೆಚ್ಚಿನ ವಿಸ್ತೀರ್ಣದ ಕಟ್ಟಡ ಕಟ್ಟಲು ಬಯಸುವ ಇತರರಿಗೆ ನಗದು ಹಣಕ್ಕೆ ಮಾರಾಟ ಮಾಡಬಹುದು.

ಸರ್ಕಾರ ಟಿಡಿಆರ್ ಮೊರೆ ಹೋಗಿದ್ದೇಕೆ?

ಬೆಂಗಳೂರಿನಂತಹ ವೇಗವಾಗಿ ಬೆಳೆಯುತ್ತಿರುವ ನಗರದಲ್ಲಿ ರಸ್ತೆ ಅಗಲೀಕರಣ ಅಥವಾ ಮೆಟ್ರೋದಂತಹ ಸಾರ್ವಜನಿಕ ಯೋಜನೆಗಳಿಗಾಗಿ ಖಾಸಗಿ ಜಮೀನನ್ನು ಸ್ವಾಧೀನಪಡಿಸಿಕೊಳ್ಳುವುದು ಸರ್ಕಾರಕ್ಕೆ ದೊಡ್ಡ ಸವಾಲಾಗಿದೆ. ಭೂಮಿ ಕಳೆದುಕೊಂಡವರಿಗೆ ಮಾರುಕಟ್ಟೆ ದರದಲ್ಲಿ ನಗದು ಹಣ ನೀಡುವುದು ಸರ್ಕಾರದ ಬೊಕ್ಕಸಕ್ಕೆ ಭಾರೀ ಹೊರೆಯೂ ಆಗುತ್ತಿದೆ. ಈ ಸಮಸ್ಯೆಗೆ ಪರಿಹಾರ ಹುಡುಕುತ್ತಿದ್ದ ಸರ್ಕಾರವು, ಟಿಡಿಆರ್ ವ್ಯವಸ್ಥೆಯನ್ನು ಜಾರಿಗೆ ತಂದಿದೆ. ಇದರ ಅಡಿಯಲ್ಲಿ, ಸರ್ಕಾರವು ಯಾವುದೇ ಭೂಮಿಯನ್ನು ಸ್ವಾಧೀನಪಡಿಸಿಕೊಂಡಾಗ, ಅದಕ್ಕೆ ನಗದು ಪರಿಹಾರ ನೀಡುವ ಬದಲು ಟಿಡಿಆರ್ ನೀಡುತ್ತದೆ.

ಇಂತಹ ಟಿಡಿಆರ್‌ಗಳನ್ನು ಸಾಮಾನ್ಯವಾಗಿ ದೊಡ್ಡ ಅಪಾರ್ಟ್‌ಮೆಂಟ್ ಅಥವಾ ವಾಣಿಜ್ಯ ಸಂಕೀರ್ಣಗಳನ್ನು ನಿರ್ಮಿಸುವ ಡೆವಲಪರ್‌ಗಳು ಖರೀದಿಸುತ್ತಾರೆ. ಇದು, ಭೂಮಾಲೀಕರಿಗೆ ಹಣವನ್ನು ಒದಗಿಸುವುದರ ಜೊತೆಗೆ, ಸರ್ಕಾರಕ್ಕೆ ಪರಿಹಾರ ಪಾವತಿಯ ಹಣದ ಹೊರೆಯನ್ನು ತಪ್ಪಿಸುತ್ತದೆ.

ಈ ಸುದ್ದಿ ಓದಿದ್ದೀರಾ? ಎಪ್‌ಸ್ಟೀನ್‌ ಪ್ರಕರಣ: ಟ್ರಂಪ್ ಮೇಲಿನ ಲೈಂಗಿಕ ದೌರ್ಜನ್ಯ ಆರೋಪದ ಕಡತಗಳೇ ನಾಪತ್ತೆ

ಟಿಡಿಆರ್ ನಿಯಮಗಳೇನು?

ಬೆಂಗಳೂರಿನಲ್ಲಿ ಪ್ರಸ್ತುತ ಜಾರಿಯಲ್ಲಿರುವ ನಿಯಮದಂತೆ, ಸರ್ಕಾರಕ್ಕೆ ಭೂಮಿ ಬಿಟ್ಟುಕೊಡುವವರಿಗೆ ಅವರು ಬಿಟ್ಟುಕೊಟ್ಟ ಭೂಮಿಯ ವಿಸ್ತೀರ್ಣದ ಎರಡು ಪಟ್ಟು ಅಭಿವೃದ್ಧಿ ಹಕ್ಕನ್ನು ನೀಡಲಾಗುತ್ತದೆ. ಉದಾಹರಣೆಗೆ, ರಸ್ತೆಗಾಗಿ 1,000 ಚದರ ಅಡಿ ಜಾಗ ಕೊಟ್ಟರೆ, ಅವರಿಗೆ 2,000 ಚದರ ಅಡಿ ಹೆಚ್ಚುವರಿ ಕಟ್ಟಡ ಕಟ್ಟುವ ಹಕ್ಕು ಸಿಗುತ್ತದೆ.

ಬೃಹತ್ ಬೆಂಗಳೂರು ಪ್ರಾಧಿಕಾರದ (ಜಿಬಿಎ) ಹೊಸ ವ್ಯಾಪ್ತಿಗೆ ಬರುವ ಯಾವುದೇ ವಲಯದಲ್ಲಿ ಈ ಟಿಡಿಆರ್ ಬಳಸಲು ಅವಕಾಶ ನೀಡಲಾಗಿದೆ. ಆದರೆ, ನಗರದ ಸೌಂದರ್ಯ ಮತ್ತು ಸುರಕ್ಷತೆಯ ದೃಷ್ಟಿಯಿಂದ ಕೆಲವು ನಿರ್ಬಂಧಗಳಿವೆ. ಪ್ರಮುಖವಾಗಿ, 9 ಮೀಟರ್ ಗಿಂತ ಕಡಿಮೆ ಅಗಲವಿರುವ ರಸ್ತೆಗಳ ಪಕ್ಕದ ಜಮೀನುಗಳಲ್ಲಿ ಈ ಟಿಡಿಆರ್ ಬಳಸಲು ಅವಕಾಶವಿಲ್ಲ. ರಸ್ತೆ ಎಷ್ಟು ಅಗಲವಿರುತ್ತದೆಯೋ ಅದಕ್ಕೆ ಅನುಗುಣವಾಗಿ ಮಾತ್ರ ಹೆಚ್ಚುವರಿ ಮಹಡಿಗಳನ್ನು ಕಟ್ಟಲು ಅನುಮತಿ ನೀಡಲಾಗುತ್ತದೆ.

ಜೊತೆಗೆ, ಸರ್ಕಾರವು ‘ಪ್ರೀಮಿಯಂ FAR’ (ಹಣ ಪಾವತಿಸಿ ಹೆಚ್ಚುವರಿ ಕಟ್ಟಡ ವಿಸ್ತೀರ್ಣ ಪಡೆಯುವುದು) ಜಾರಿಗೆ ತಂದಿರುವುದರಿಂದ, ಟಿಡಿಆರ್ ಮೌಲ್ಯವನ್ನು ನಿರ್ಣಯಿಸಲು ಸರ್ಕಾರ ಹೊಸ ಕ್ರಮಗಳನ್ನು ಕೈಗೊಳ್ಳುತ್ತಿದೆ.

ಟಿಡಿಆರ್‌ಗೆ ಆನ್‌ಲೈನ್ ಮಾರುಕಟ್ಟೆ ಯಾಕೆ?

ಈವರೆಗೆ, ಟಿಡಿಆರ್ ವ್ಯವಹಾರಗಳು ಅತ್ಯಂತ ಅಸ್ತವ್ಯಸ್ತವಾಗಿದ್ದವು. ಭೂಮಿ ಕಳೆದುಕೊಂಡ ಸಾಮಾನ್ಯ ಜನರಿಗೆ ತಮ್ಮ ಬಳಿಯಿರುವ ಪ್ರಮಾಣಪತ್ರವನ್ನು ಯಾರಿಗೆ ಮಾರಬೇಕು ಅಥವಾ ಅದರ ನಿಜವಾದ ಮಾರುಕಟ್ಟೆ ಬೆಲೆ ಎಷ್ಟು ಎಂಬುದು ತಿಳಿಯುತ್ತಿರಲಿಲ್ಲ. ಇದರ ಲಾಭವನ್ನು ಮಧ್ಯವರ್ತಿಗಳು ಪಡೆದುಕೊಳ್ಳುತ್ತಿದ್ದರು. ಬಿಲ್ಡರ್‌ಗಳು ಕಡಿಮೆ ಬೆಲೆಗೆ ಇವುಗಳನ್ನು ಖರೀದಿಸಿ ಲಾಭ ಮಾಡಿಕೊಳ್ಳುತ್ತಿದ್ದರು.

ಈ ವ್ಯವಸ್ಥೆಯಲ್ಲಿ ಪಾರದರ್ಶಕತೆ ತರಲು ಮತ್ತು ಭೂಮಿ ಕಳೆದುಕೊಂಡವರಿಗೆ ನ್ಯಾಯಯುತ ಬೆಲೆ ಸಿಗುವಂತೆ ಮಾಡಲು ಸರ್ಕಾರ ಈಗ ‘ಡಿಜಿಟಲ್ ಎಕ್ಸ್‌ಚೇಂಜ್’ ವೇದಿಕೆಯನ್ನು ಸಿದ್ಧಪಡಿಸಿದೆ. ಈ ಆನ್‌ಲೈನ್ ವೇದಿಕೆಯಲ್ಲಿ ಯಾರು ಟಿಡಿಆರ್ ಹೊಂದಿದ್ದಾರೆ ಮತ್ತು ಯಾರಿಗೆ ಅದರ ಅವಶ್ಯಕತೆ ಇದೆ ಎಂಬ ಮಾಹಿತಿ ನೇರವಾಗಿ ಲಭ್ಯವಿರುತ್ತದೆ. ಇದು ನಕಲಿ ಪ್ರಮಾಣಪತ್ರಗಳ ಹಾವಳಿಯನ್ನು ತಡೆಯುತ್ತದೆ. ಜೊತೆಗೆ, ವ್ಯವಹಾರವನ್ನು ಶೀಘ್ರವಾಗಿ ಮುಗಿಸಲು ಸಹಕಾರಿಯಾಗುತ್ತದೆ.

ಸಾಧಕ ಮತ್ತು ಬಾಧಕಗಳು

ಈ ವ್ಯವಸ್ಥೆಯು ನಗರದ ಅಭಿವೃದ್ಧಿಗೆ ಪೂರಕವಾಗಿದೆ ಎಂಬುದು ಒಂದು ವಾದವಾದರೆ, ಮೂಲಸೌಕರ್ಯದ ಮೇಲೆ ಗಂಭೀರ ಪರಿಣಾಮ ಬೀರುತ್ತದೆ ಎಂಬ ಕಳವಳಗಳೂ ಇವೆ.

ಮುಖ್ಯವಾಗಿ, ಟಿಡಿಆರ್‌ನಿಂದ ಸರ್ಕಾರಕ್ಕೆ ಭೂಸ್ವಾಧೀನಕ್ಕಾಗಿ ಕೋಟ್ಯಂತರ ರೂಪಾಯಿ ನಗದು ಪರಿಹಾರ ನೀಡುವ ಹೊರೆ ತಪ್ಪುತ್ತದೆ. ಯೋಜನಾಬದ್ಧವಾಗಿ ಭೂಮಿ ಪಡೆಯಲು ಸರ್ಕಾರಕ್ಕೆ ಇದು ಸುಲಭದ ದಾರಿಯಾಗಿದೆ.

ಆದರೆ, ಟಿಡಿಆರ್ ಬಳಸಿ ನಗರದ ದಟ್ಟಣೆ ಇರುವ ಪ್ರದೇಶಗಳಲ್ಲಿ ಎತ್ತರದ ಕಟ್ಟಡಗಳು ನಿರ್ಮಾಣವಾದಾಗ, ಅಲ್ಲಿನ ರಸ್ತೆಗಳು, ಒಳಚರಂಡಿ ಹಾಗೂ ಕುಡಿಯುವ ನೀರಿನ ವ್ಯವಸ್ಥೆಯ ಮೇಲೆ ವಿಪರೀತ ಒತ್ತಡ ಬೀಳುತ್ತದೆ ಎಂದೂ ಹೇಳಲಾಗುತ್ತಿದೆ.

ಅಲ್ಲದೆ, ಸರ್ಕಾರವು ಇತ್ತೀಚೆಗೆ ‘ಪ್ರೀಮಿಯಂ ಎಫ್ಎಆರ್’ (Premium FAR) ಎಂಬ ಹೊಸ ನಿಯಮ ತಂದಿದೆ. ಅಂದರೆ, ಬಿಲ್ಡರ್‌ಗಳು ಟಿಡಿಆರ್ ಖರೀದಿಸುವ ಬದಲು ಸರ್ಕಾರಕ್ಕೆ ನೇರವಾಗಿ ಹಣ ಪಾವತಿಸಿ ಹೆಚ್ಚುವರಿ ಕಟ್ಟಡ ಕಟ್ಟುವ ಅನುಮತಿ ಪಡೆಯಬಹುದು. ಇದು ಟಿಡಿಆರ್ ಪ್ರಮಾಣ ಪತ್ರಗಳ ಬೇಡಿಕೆಯನ್ನು ತಗ್ಗಿಸುವ ಸಾಧ್ಯತೆ ಇದೆ. ಇದರಿಂದ ಭೂಮಿ ಕಳೆದುಕೊಂಡ ರೈತರು ಅಥವಾ ಮಾಲೀಕರು ಸಂಕಷ್ಟಕ್ಕೆ ಸಿಲುಕುವ ಅಪಾಯವೂ ಇದೆ.

ಈಗ ಟಿಡಿಆರ್ ಆನ್‌ಲೈನ್ ಮಾರಾಟ ವೇದಿಕೆ ಸಿದ್ದವಾಗಿದ್ದೇಕೆ?

ಬೆಂಗಳೂರಿನಲ್ಲಿ 74ಕಿ.ಮೀ. ಉದ್ದದ ಬೆಂಗಳೂರು ಬಿಸಿನೆಸ್ ಕಾರಿಡಾರ್ (BBC) ನಿರ್ಮಾಣ ಮಾಡಲು ಜಿಬಿಎ ಯೋಜನೆ ರೂಪಿಸಿದೆ. ಈ ಯೋಜನೆಗಾಗಿ ಸಾವಿರಾರು ಎಕರೆ ಭೂಮಿಯ ಅಗತ್ಯವಿದೆ. ಈ ಪ್ರಮಾಣದ ಭೂಸ್ವಾಧೀನಕ್ಕೆ ಸೂಕ್ತ ನಗದು ಪರಿಹಾರ ನೀಡುವುದು ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರಕ್ಕೆ (BDA) ಹೊರೆಯಾಗಲಿದೆ. ಆದ್ದರಿಂದ, ಈ ಹೊರೆಯನ್ನು ತಪ್ಪಿಸಿಲು ಟಿಡಿಆರ್‌ಗೆ ಹೆಚ್ಚು ಮೌಲ್ಯ ತುಂಬಲು ಸರ್ಕಾರ ಮುಂದಾಗಿದೆ. ಸ್ವಾಧೀನ ಪಡಿಸಿಕೊಂಡ ಭೂಮಿಗೆ ಪರಿಹಾರದ ಬದಲು ಟಿಡಿಆರ್ ಆಯ್ಕೆ ನೀಡಲು ಬಿಡಿಎ ಬಯಸಿದೆ.

ಅಲ್ಲದೆ, ಜಿಬಿಎ ನಗರದ ಹೊಸ ರಸ್ತೆ ಅಗಲೀಕರಣ ಯೋಜನೆಗಳಿಗೂ ಡಿಆರ್‌ಸಿಗಳನ್ನು ನೀಡಲು ಪ್ರಾರಂಭಿಸಿದೆ. ಹಲವು ವರ್ಷಗಳ ಹಿಂದೆ ನೀಡಲಾದ ಸುಮಾರು 1,500 ಟಿಡಿಆರ್‌ಗಳನ್ನು ಈಗ ಮರು-ಪರಿಶೀಲಿಸುವ ಪ್ರಕ್ರಿಯೆ ಆರಂಭಿಸಿದೆ. ಇದೆಲ್ಲವನ್ನೂ ಸುಗಮಗೊಳಿಸಲು ಟಿಡಿಆರ್ ಪ್ರಮಾಣಪತ್ರಗಳಿಗೆ; ಎಕ್ಸ್ ಚೇಂಜ್ ಪ್ಲಾಟ್ ಫಾರ್ಮ್’ ಒದಗಿಸುತ್ತಿದೆ.

“ಡಿಆರ್‌ಸಿಗಳನ್ನು ಖರೀದಿಸಲು ಆಸಕ್ತಿ ಇರುವವರು ನೇರವಾಗಿ ಮಾಲೀಕರನ್ನು ಸಂಪರ್ಕಿಸಬಹುದು. ಮುಂಬೈ, ಪುಣೆ ಮತ್ತು ಹೈದರಾಬಾದ್‌ನಂತಹ ನಗರಗಳಲ್ಲಿ ಈಗಾಗಲೇ ಇಂತಹ ವೇದಿಕೆಯನ್ನು ನಿರ್ಮಿಸಿವೆ. ನಾವು ಇದನ್ನು ಮಾರ್ಚ್ ವೇಳೆಗೆ ಜಾರಿಗೆ ತರುತ್ತೇವೆ. ಡಿಜಿಟಲ್ ಮಾರುಕಟ್ಟೆಯು ಭೂಮಿ ಕಳೆದುಕೊಂಡವರು ತಮ್ಮ TDR ಪ್ರಮಾಣಪತ್ರಗಳಿಗೆ ಸರಿಯಾದ ಮೌಲ್ಯವನ್ನು ಪಡೆಯಲು ಸಹಾಯ ಮಾಡುತ್ತದೆ” ಎಂದು ಜಿಬಿಎ ವಿಶೇಷ ಆಯುಕ್ತ (ಐಟಿ) ಮುನೀಶ್ ಮೌದ್ಗಿಲ್ ಹೇಳಿದ್ದಾರೆ.

ಇದನ್ನೂ ಓದಿ ಉಳ್ಳವರ ಆರ್ಥಿಕ ನೀತಿಗಳಿಂದ ಕುದಿಯುತ್ತಿರುವ ಜಗತ್ತು; ಕ್ರಾಂತಿಯಾಗಲೇಬೇಕಿರುವ ಕಾಲವಿದು!

e057b508e9e1b164fadd3c3edb023f5214f4d0a6d12066a30e302f9e3b0f6f24?s=150&d=mp&r=g
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಕೇಂದ್ರವನ್ನು ಟೀಕಿಸಿದ ಸಾಮಾಜಿಕ ಮಾಧ್ಯಮ ಖಾತೆಗಳು ಮಂಗಮಾಯ: ಉಳಿಯುವುದು ಬರೀ ಮೋದಿಮಯ!

ಹೀಗೆ ಮೋದಿ ಸರ್ಕಾರವನ್ನು ವಿರೋಧಿಸಿದವರ ಖಾತೆಗಳು ಸಾಮಾಜಿಕ ಮಾಧ್ಯಮಗಳಿಂದ ಅಳಿಸಿ ಕೊನೆಗೆ...

ಒಂದು ಕಡೆ ಖಾದ್ಯತೈಲ ಬೆಲೆ ಏರಿಕೆ; ಮತ್ತೊಂದು ಕಡೆ ಕುಸುಬೆ ಬೆಲೆ ಕುಸಿತದಿಂದ ರೈತರಿಗೆ ಹೊರೆ

ಖಾದ್ಯತೈಲ ಬೆಲೆ ಏರಿಕೆ ಗ್ರಾಹಕರ ಜೇಬಿಗೆ ಭಾರವಾದರೆ, ಕುಸುಬೆ ಬೆಲೆ ಕುಸಿತ...

ಡಾಲರ್ V/s ಯುವಾನ್: ಕೊಲ್ಲಿ ಯುದ್ಧ ಕರೆನ್ಸಿ ಯುದ್ಧವಾಗಿ ಮಾರ್ಪಾಡಾಗುತ್ತಿದೆಯೇ?

ಅಕಸ್ಮಾತ್ ಈ ಯುದ್ಧ ಮುಂದುವರೆದರೆ, ಕೆಲವು ದೇಶಗಳು ಡಾಲರ್ ಬದಲಿಗೆ ಯುವಾನ್...