ತೇಜಸ್ವಿ vs ತೇಜ್‌ ಪ್ರತಾಪ್: ಲಾಲೂ ಮಕ್ಕಳ ಜಗಳದಿಂದ ಯಾರಿಗೆ ಲಾಭ?

Date:

ತೇಜಸ್ವಿಯು ಕುಟುಂಬದ ಬೆಂಬಲದೊಂದಿಗೆ ರಾಜಕೀಯವಾಗಿ ಶಕ್ತಿಯುತವಾಗಿ ಹೊರಹೊಮ್ಮುತ್ತಿದ್ದರೆ, ತೇಜ್ ಪ್ರತಾಪ್ ಒಬ್ಬಂಟಿಯಾಗಿ ಕಾಣುತ್ತಿದ್ದರು. ಈ ಘಟನೆಯು ಲಾಲು ಪ್ರಸಾದ್‌ ಯಾದವ್‌ ಕುಟುಂಬದಲ್ಲಿ ನಡೆಯುತ್ತಿರುವ ರಾಜಕೀಯ ಅತೃಪ್ತಿ ಮತ್ತು ತೇಜಸ್ವಿ-ತೇಜ್ ಪ್ರತಾಪ್ ಸಹೋದರರ ನಡುವಿನ ಹೆಚ್ಚುತ್ತಿರುವ ಮನಸ್ತಾಪವನ್ನು ತೋರಿಸುತ್ತಿದೆ. ಇದು ಜನರ ಗಮನವನ್ನೂ ಸೆಳೆದುಕೊಂಡಿದೆ

ಬಿಹಾರದ ರಾಜಕೀಯ ಇತಿಹಾಸದಲ್ಲಿ ಲಾಲೂ ಪ್ರಸಾದ್ ಯಾದವ್ ಕುಟುಂಬ ಒಂದು ದೊಡ್ಡ ಶಕ್ತಿಯಾಗಿದೆ. ಆದರೆ 2025ರ ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ಆ ಕುಟುಂಬದ ಆಂತರಿಕ ಭಿನ್ನಾಭಿಪ್ರಾಯಗಳು ತಾರಕಕ್ಕೇರಿವೆ. ತೇಜಸ್ವಿ ಯಾದವ್ ಮಹಾಘಟಬಂಧನ್‌ ಮೈತ್ರಿಕೂಟದ ಮುಖ್ಯಮಂತ್ರಿ ಅಭ್ಯರ್ಥಿಯಾಗಿ, ನಿತೀಶ್ ಕುಮಾರ್ ಜಾಗಕ್ಕೆ ಬರಲು ಹೆಲಿಕಾಪ್ಟರ್ ಏರಿ ರಾಜ್ಯಾದ್ಯಂತ ಪ್ರಚಾರ ಮಾಡುತ್ತಿದ್ದರೆ, ಅವರ ಅಣ್ಣ ತೇಜ್ ಪ್ರತಾಪ್ ಜನಶಕ್ತಿ ಜನತಾ ದಳ ಎಂಬ ಸ್ವಂತ ಪಕ್ಷ ಸ್ಥಾಪಿಸಿ ಏಕಾಂಗಿ ಹೋರಾಟ ನಡೆಸುತ್ತಿದ್ದಾರೆ.

ತೇಜ್ ಪ್ರತಾಪ್ ಯಾದವ್ ಹೆಸರು ಬಿಹಾರ ರಾಜಕೀಯದಲ್ಲಿ ಹೊಸದಲ್ಲ. 2015ರಲ್ಲಿ ಮಹುವಾ ಕ್ಷೇತ್ರದಿಂದ ರಾಷ್ಟ್ರೀಯ ಜನತಾ ದಳ (ಆರ್‌ಜೆಡಿ) ಅಭ್ಯರ್ಥಿಯಾಗಿ ಗೆದ್ದು ರಾಜಕಾರಣಕ್ಕೆ ಪದಾರ್ಪಣೆ ಮಾಡಿದ್ದರು. ಒಮ್ಮೆ ಸಚಿವರು ಕೂಡ ಆಗಿದ್ದರು. ಆದರೆ ಈ ಬಾರಿ ನಾಮಪತ್ರ ಸಲ್ಲಿಸಲು ಅವರು ಏಕಾಂಗಿಯಾಗಿ ಆಗಮಿಸಿದ್ದರು. ಕುಟುಂಬದವರ್ಯಾರೂ ಜೊತೆಗಿರಲಿಲ್ಲ. ಕೈಯಲ್ಲಿ ತಮ್ಮ ಅಜ್ಜಿಯ ಭಾವಚಿತ್ರ ಹಿಡಿದುಕೊಂಡು ’ನನ್ನ ಅಜ್ಜಿಯೇ ಸರ್ವೋಚ್ಚ ನಾಯಕಿ. ಅವರ ಆಶೀರ್ವಾದದಿಂದ ನಾವು ಮಹುವಾ ಕ್ಷೇತ್ರದಲ್ಲಿ ಮಾತ್ರವಲ್ಲ, ನಮ್ಮ ಜನಶಕ್ತಿ ಜನತಾ ದಳ (ಜೆಜೆಡಿ) ಸ್ಪರ್ಧಿಸುತ್ತಿರುವ ಎಲ್ಲ 43 ಕ್ಷೇತ್ರಗಳಲ್ಲೂ ಗೆಲ್ಲುವೆವು. ಮಹುವಾ ಕ್ಷೇತ್ರವೇ ನನ್ನ ಕುಟುಂಬ” ಎಂದು ಸಾರಿದ್ದಾರೆ. ಈ ಹೇಳಿಕೆಯನ್ನು ಗಮನಿಸಿದರೆ ತೇಜ್ ಪ್ರತಾಪ್‌ ಮಹುವಾ ಮತದಾರರನ್ನು ಹೆಚ್ಚಾಗಿ ನೆಚ್ಚಿದಂತಿದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ಇದಕ್ಕೆ ಒಂದು ದಿನ ಮೊದಲು, ಅಕ್ಟೋಬರ್ 15ರಂದು ರಾಘೋಪುರ ಕ್ಷೇತ್ರದಲ್ಲಿ ತೇಜಸ್ವಿ ಯಾದವ್ ನಾಮಪತ್ರ ಸಲ್ಲಿಸಿದಾಗ, ಅವರ ಜೊತೆಯಲ್ಲಿ ತಂದೆ ಲಾಲು ಪ್ರಸಾದ್ ಯಾದವ್, ತಾಯಿ ರಾಬಡಿ ದೇವಿ ಹಾಗೂ ಸಹೋದರಿ ಮೀಸಾ ಭಾರತಿ ಇದ್ದರು. ಇದು ಕುಟುಂಬದ ಒಗ್ಗಟ್ಟಿನ ಪ್ರದರ್ಶನವಾಗಿತ್ತು. ಆದರೆ 24 ಗಂಟೆಗಳಲ್ಲಿ ನಡೆದ ಈ ಎರಡು ನಾಮಪತ್ರ ಸಲ್ಲಿಕೆಗಳಲ್ಲಿ ಕಾಣಿಸಿಕೊಂಡ ವ್ಯತ್ಯಾಸವು ಸಹೋದರರ ನಡುವಿನ ಅಂತರವನ್ನು ಸ್ಪಷ್ಟವಾಗಿ ತೋರಿಸಿತು. ತೇಜಸ್ವಿಯು ಕುಟುಂಬದ ಬೆಂಬಲದೊಂದಿಗೆ ರಾಜಕೀಯವಾಗಿ ಶಕ್ತಿಯುತವಾಗಿ ಹೊರಹೊಮ್ಮುತ್ತಿದ್ದರೆ, ತೇಜ್ ಪ್ರತಾಪ್ ಒಬ್ಬಂಟಿಯಾಗಿ ಕಾಣುತ್ತಿದ್ದರು. ಈ ಘಟನೆಯು ಲಾಲು ಪ್ರಸಾದ್‌ ಯಾದವ್‌ ಕುಟುಂಬದಲ್ಲಿ ನಡೆಯುತ್ತಿರುವ ರಾಜಕೀಯ ಅತೃಪ್ತಿ ಮತ್ತು ತೇಜಸ್ವಿ-ತೇಜ್ ಪ್ರತಾಪ್ ಸಹೋದರರ ನಡುವಿನ ಹೆಚ್ಚುತ್ತಿರುವ ಮನಸ್ತಾಪವನ್ನು ತೋರಿಸುತ್ತಿದೆ. ಇದು ಜನರ ಗಮನವನ್ನೂ ಸೆಳೆದುಕೊಂಡಿದೆ. ಏಕೆಂದರೆ ಸಹೋದರರು ಒಂದು ಕಾಲದಲ್ಲಿ ಜೊತೆಗಿದ್ದವರು, ಆದರೆ ಈಗ ಭಿನ್ನಮತಗಳು ಮತ್ತು ಜಗಳಗಳು ಕುಟುಂಬದ ಒಗ್ಗಟ್ಟನ್ನು ದುರ್ಬಲಗೊಳಿಸಿವೆ. ಇದರಿಂದ ಬಿಹಾರ ಚುನಾವಣೆಯಲ್ಲಿ ಯಾದವ ಮತಗಳು ಕೆಲ ಮಟ್ಟಿಗಾದರೂ ವಿಭಜನೆಯಾಗುವ ಸಾಧ್ಯತೆಯಿದೆ.

ತೇಜಸ್ವಿ ಯಾದವ್

ತೇಜ್ ಪ್ರತಾಪ್ ಯಾದವ್ ಮತ್ತು ತೇಜಸ್ವಿ ಯಾದವ್ ಇಬ್ಬರೂ ರಾಷ್ಟ್ರೀಯ ಜನತಾ ದಳ (ಆರ್‌ಜೆಡಿ) ಪಕ್ಷದ ಪ್ರಮುಖ ಯುವ ನಾಯಕರಾಗಿದ್ದರು. ಲಾಲು ಪ್ರಸಾದ್ ಯಾದವ್ ಕುಟುಂಬದ ಉತ್ತರಾಧಿಕಾರಿಗಳಾಗಿ, ಅವರನ್ನು ‘ಲಾಲು ಕುಟುಂಬದ ಯುವ ಶಕ್ತಿ’ ಎಂದು ಕರೆಯಲಾಗುತ್ತಿತ್ತು! ತೇಜಸ್ವಿ ಬಿಹಾರದ ಉಪಮುಖ್ಯಮಂತ್ರಿಯಾಗಿ ಪಕ್ಷದಲ್ಲಿ ಸಕ್ರಿಯರಾಗಿದ್ದರೆ, ತೇಜ್ ಪ್ರತಾಪ್ ಮಂತ್ರಿಯಾಗಿ ಗಮನ ಸೆಳೆಯುತ್ತಿದ್ದರು. ಆದರೆ 2025ರ ಮೇ ತಿಂಗಳಲ್ಲಿ ತೇಜ್ ಪ್ರತಾಪ್ ಅವರ ಒಂದು ವಿವಾದಾತ್ಮಕ ಸಾಮಾಜಿಕ ಜಾಲತಾಣ ಪೋಸ್ಟ್ ಎಲ್ಲವನ್ನೂ ಬದಲಾಯಿಸಿತು. ಸಾರ್ವಜನಿಕವಾಗಿ ತೀವ್ರ ಟೀಕೆ ಎದುರಾದ ನಂತರ ತಕ್ಷಣವೇ ತೇಜ್ ಪ್ರತಾಪ್ ಅವರನ್ನು ಆರ್‌ಜೆಡಿಯಿಂದ ಹೊರಹಾಕಲಾಯಿತು. ಜೊತೆಗೆ, ಕುಟುಂಬದಿಂದಲೂ ಅವರನ್ನು ದೂರವಿಡಲಾಯಿತು. ಈ ಘಟನೆ ತೇಜ್ ಪ್ರತಾಪ್ ಅವರ ರಾಜಕೀಯ ಜೀವನದಲ್ಲಿ ದೊಡ್ಡ ತಿರುವು ತಂದಿತು. ಅವರ ರಾಜಕೀಯ ಭವಿಷ್ಯ ಅನಿಶ್ಚಿತವಾಯಿತು. ಸದ್ಯದ ಪರಿಸ್ಥಿತಿಯಲ್ಲಿ ತೇಜಸ್ವಿ ಯಾದವ್ ಆರ್‌ಜೆಡಿಯ ಏಕೈಕ ಉತ್ತರಾಧಿಕಾರಿಯಾಗಿ ಹೊಮ್ಮಿದ್ದಾರೆ.

ಇದನ್ನು ಓದಿದ್ದೀರಾ? ಈ ದಿನ ಸಂಪಾದಕೀಯ | ʼವಂದೇ ಮಾತರಂ’ವಿವಾದ; ಪರಿವಾರ- ಪ್ರಧಾನಿ ಪೋಣಿಸಿದ ಸುಳ್ಳುಗಳ ಬೊಂತೆ

ಪಕ್ಷದಿಂದ ಹೊರಹಾಕಿದ ನಂತರ ಅವರು ಸುಮ್ಮನಿರಲಿಲ್ಲ. ಮೊದಲು ಐದು ಸಣ್ಣ ಪಕ್ಷಗಳನ್ನು ಒಳಗೊಂಡ “ಟೀಂ ತೇಜ್ ಪ್ರತಾಪ್” ಎಂಬ ಒಕ್ಕೂಟ ರಚಿಸಿದರು. ಬಳಿಕ ತಾವೇ ಜನಶಕ್ತಿ ಜನತಾ ದಳ (ಜೆಜೆಡಿ) ಎಂಬ ಹೊಸ ಪಕ್ಷದ ಅಧ್ಯಕ್ಷರಾಗಿ ಘೋಷಿಸಿಕೊಂಡರು. ಬಿಹಾರದ 243 ವಿಧಾನಸಭಾ ಕ್ಷೇತ್ರಗಳಲ್ಲಿ 43 ರಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದರು. ಈ ಕ್ಷೇತ್ರಗಳಲ್ಲಿ ಹೆಚ್ಚಿನವು ಯಾದವ ಸಮುದಾಯದ ಪ್ರಾಬಲ್ಯ ಹೊಂದಿದ್ದವು ಅಥವಾ ಆರ್‌ಜೆಡಿಯ ಸಾಂಪ್ರದಾಯಿಕ ಬಲಿಷ್ಠ ಕ್ಷೇತ್ರಗಳು. ಉದಾಹರಣೆಗೆ ಮೊಹಿಯುದ್ದೀನ್‌ ನಗರ, ಬಖ್ತಿಯಾರ್‌ಪುರ, ಸೋನ್‌ಪುರ, ಮಹುವಾ ಇತ್ಯಾದಿ. ಈ ಕ್ಷೇತ್ರಗಳಲ್ಲಿ ಆರ್‌ಜೆಡಿ ಟಿಕೆಟ್ ವಂಚಿತ ಮಾಜಿ ಶಾಸಕರು, ಸ್ಥಳೀಯ ನಾಯಕರು ಮತ್ತು ಹಳೆಯ ಆರ್‌ಜೆಡಿ ಕಾರ್ಯಕರ್ತರನ್ನು ಜೆಜೆಡಿ ಅಭ್ಯರ್ಥಿಗಳನ್ನಾಗಿ ಹೂಡಿ ನೇರ ಸವಾಲು ಎಸೆದಿದ್ದಾರೆ ತೇಜಪ್ರತಾಪ್.

Tej pratap yadav 1

ತೇಜಸ್ವಿ ಯಾದವ್‌ ಸಂಘಟಿತ ತಂತ್ರ

ತೇಜಸ್ವಿ ಯಾದವ್ ಪ್ರಚಾರವು ಒಂದು ಸಂಘಟಿತ ಅಭಿಯಾನವಾಗಿ ಕಾರ್ಯನಿರ್ವಹಿಸುತ್ತಿದೆ. ಹೆಲಿಕಾಪ್ಟರ್ ಮೂಲಕ ದಿನಕ್ಕೆ 10 ರಿಂದ 15 ಸಭೆಗಳನ್ನು ನಡೆಸುತ್ತಾ, ರಾಹುಲ್ ಗಾಂಧಿ, ದೀಪಂಕರ್ ಭಟ್ಟಾಚಾರ್ಯ ಮತ್ತು ಮುಕೇಶ್ ಸಾಹನಿ ಮುಂತಾದ ನಾಯಕರೊಂದಿಗೆ ವೇದಿಕೆ ಹಂಚಿಕೊಳ್ಳುತ್ತಿದ್ದಾರೆ. ಅವರ ಪ್ರಚಾರದ ಕೇಂದ್ರಬಿಂದುಗಳು ನಿರುದ್ಯೋಗ ನಿವಾರಣೆ, ಉದ್ಯೋಗ ಸೃಷ್ಟಿ, ಆಡಳಿತ ಸುಧಾರಣೆ ಮತ್ತು ನಿತೀಶ್ ಕುಮಾರ್ ವೈಫಲ್ಯಗಳ ವಿರುದ್ಧದ ಟೀಕೆ. ಪಕ್ಷದ ಕಾರ್ಯಕರ್ತರು ರಾಜ್ಯದಿಂದ ಬೂತ್ ಮಟ್ಟದವರೆಗೆ ಪ್ರಚಾರದ ಎಲ್ಲ ವ್ಯವಸ್ಥೆಗಳನ್ನು ನಿರ್ವಹಿಸುತ್ತಿದ್ದಾರೆ. ಎಂ-ವೈ (ಮುಸ್ಲಿಂ-ಯಾದವ) ಸಮೀಕರಣ ಮತ್ತು ವಿರೋಧ ಪಕ್ಷಗಳ ಒಕ್ಕೂಟದ ಮತಗಳು ಅವರ ಶಕ್ತಿಯ ಮೂಲ. ಮಹುವಾದಲ್ಲಿ ಅವರು ಪಕ್ಷ ನಿಷ್ಠೆಯನ್ನು ಒತ್ತಿ ಹೇಳುತ್ತಾ, “ಪಕ್ಷ ಉಳಿದರೆ ಎಲ್ಲ ಉಳಿಯುತ್ತದೆ, ಪಕ್ಷದ ಚಿಹ್ನೆಗೆ ಮತ ಹಾಕಿ” ಎಂದು ಜನರ ಮನವೊಲಿಸುತ್ತಿದ್ದಾರೆ.

ಪ್ರತಿಯಾಗಿ ತೇಜ್ ಪ್ರತಾಪ್ ಯಾದವ್ ಪ್ರಚಾರ ಸಣ್ಣಮಟ್ಟದ್ದು. ವ್ಯಕ್ತಿಗತ ಮತ್ತು ಭಾವನಾತ್ಮಕ ವಿಷಯವೇ ಹೆಚ್ಚು. ಅವರು ದಿನಕ್ಕೆ 2–3 ಸಭೆಗಳನ್ನು ಮಾತ್ರ ನಡೆಸುತ್ತಾ ಕೃಷ್ಣ-ರಾಮ ಉಲ್ಲೇಖಗಳು, ಆಧ್ಯಾತ್ಮಿಕ ಮಾತುಗಳು, ಕುಟುಂಬಕ್ಕೆ ಸಂಬಂಧಿಸಿದ ಹೇಳಿಕೆಗಳ ಮೂಲಕ ಜನರಿಗೆ ಹತ್ತಿರವಾಗಲು ಪ್ರಯತ್ನಿಸುತ್ತಿದ್ದಾರೆ. ಜೆಜೆಡಿ ಹೊಸ ಪಕ್ಕ್ಷವಾದ ಕಾರಣ ಸಂಘಟನೆ ದುರ್ಬಲ; ಕಾರ್ಯಕರ್ತರೇ ಹಲವು ಹೊಣೆಗಾರಿಕೆಗಳನ್ನು ನಿರ್ವಹಿಸುತ್ತಿದ್ದಾರೆ. ಚುನಾವಣಾ ಪ್ರಣಾಳಿಕೆ ಇಲ್ಲದ ಅವರ ಪ್ರಚಾರವು “ಶುದ್ಧ ರಾಜಕಾರಣ” ಮತ್ತು “ಜನಸಾಮಾನ್ಯರ ಹೋರಾಟ” ಎಂಬ ಅಂಶಗಳನ್ನೇ ಆಧರಿಸಿದೆ. ರಾಘೋಪುರ ಮತ್ತು ಮಹುವಾದಲ್ಲಿ ಅವರು ತೇಜಸ್ವಿಗೆ ತಿರುಗೇಟು ನೀಡುತ್ತಾ “ಜನತೆ ಸರ್ವೋಚ್ಚವೇ ವಿನಾ, ಯಾವುದೇ ಪಕ್ಷವಲ್ಲ” ಎಂದು ಹೇಳುತ್ತಿದ್ದಾರೆ. ತೇಜ್ ಪ್ರತಾಪ್ ಯಾದವ್ ಅವರು ತಮ್ಮ ತಂದೆ ಲಾಲೂ ಪ್ರಸಾದ್ ಯಾದವ್ ಅವರ ರಾಜಕೀಯ ಪರಂಪರೆಯ ಮೇಲೆ ತಮ್ಮ ಹಕ್ಕು ಸ್ಥಾಪನೆಗೆ ಪ್ರಯತ್ನಿಸುತ್ತಿದ್ದಾರೆ. ಅದಕ್ಕಾಗಿ ಅವರು “ನಿಜವಾದ ಲಾಲೂಜಿ ಅವರ ಪಕ್ಷ ನಮ್ಮ ಜೆಜೆಡಿ” ಲಾಲು ಯಾದವ್ ಅವರ ಮೂಲ ಆದರ್ಶಗಳು ಮತ್ತು ಅವರ ರಾಜಕೀಯ ಚಿಂತನೆಗಳನ್ನು ಈಗ ತಮ್ಮ ಪಕ್ಷವೇ ಮುಂದುವರಿಸುತ್ತಿದೆ ಎಂದು ಹೇಳುತ್ತಿದ್ದಾರೆ.

ಯಾದವ ಸಮುದಾಯದ ಕೆಲವರು ಅವರನ್ನು ಆರ್‌ಜೆಡಿಯಿಂದ ಹೊರಹಾಕಿದ ರೀತಿ ಸರಿಯಿಲ್ಲ ಎಂದು ಭಾವಿಸುತ್ತಾರೆ. ತಾಯಿ ರಾಬಡಿ ದೇವಿ ಕೂಡ ಇತ್ತೀಚಿನ ಸಂದರ್ಶನವೊಂದರಲ್ಲಿ “ತೇಜ್ ಪ್ರತಾಪ್ ಪಕ್ಷ ಬಿಟ್ಟರೂ ನಮ್ಮ ಹೃದಯ ಬಿಟ್ಟಿಲ್ಲ” ಎಂದು ಹೇಳಿದ್ದು, ಮತ್ತೆ ಒಂದಾಗುವ ಸಾಧ್ಯತೆ ಇದೆ ಎಂಬ ಸಂದೇಶ ನೀಡಿದ್ದಾರೆ. ಈ ರೀತಿಯ ಮಾತುಗಳು ಯಾದವ ಸಮುದಾಯದ ಜನರಲ್ಲಿ ತೇಜ್ ಪ್ರತಾಪ್ ಬಗ್ಗೆ ಸೌಮ್ಯತೆ ಹುಟ್ಟಿಸುತ್ತಿವೆ. ಚುನಾವಣೆಯ ಸಮಯದಲ್ಲಿ ಈ ಭಾವನಾತ್ಮಕ ಸಹಾನುಭೂತಿ ಅವರ ಪರ ಮತಗಳಲ್ಲಿ ಪರಿವರ್ತನೆಯಾಗುವ ಸಾಧ್ಯತೆ ಇದೆ.

ಈ ಸಹೋದರರ ರಾಜಕೀಯ ಕಾದಾಟ ಬಿಹಾರ ಚುನಾವಣೆಯ ಮೇಲೂ ಪರಿಣಾಮ ಬೀರಲಿದೆ. ಯಾದವ ಪ್ರಾಬಲ್ಯದ ಅನೇಕ ಕ್ಷೇತ್ರಗಳಲ್ಲಿ ಜೆಜೆಡಿ ಅಭ್ಯರ್ಥಿಗಳು ಸ್ಪರ್ಧಿಸುತ್ತಿದ್ದಾರೆ. ಯಾದವರ ಸಣ್ಣ ಪ್ರಮಾಣದ ಶೇಕಡಾವಾರು ಮತಗಳು ತೇಜ್ ಪ್ರತಾಪ್‌ ಕಡೆ ತಿರುಗಿದರೆ, ಆರ್‌ಜೆಡಿಗೆ ಹಾನಿಯಾಗಿ ಎನ್‌ಡಿಎಗೆ ಲಾಭವಾಗುವ ಸಾಧ್ಯತೆಯನ್ನು ತಳ್ಳಿ ಹಾಕಲು ಬರುವುದಿಲ್ಲ.

blank profile picture 973460 640
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಕೇಂದ್ರವನ್ನು ಟೀಕಿಸಿದ ಸಾಮಾಜಿಕ ಮಾಧ್ಯಮ ಖಾತೆಗಳು ಮಂಗಮಾಯ: ಉಳಿಯುವುದು ಬರೀ ಮೋದಿಮಯ!

ಹೀಗೆ ಮೋದಿ ಸರ್ಕಾರವನ್ನು ವಿರೋಧಿಸಿದವರ ಖಾತೆಗಳು ಸಾಮಾಜಿಕ ಮಾಧ್ಯಮಗಳಿಂದ ಅಳಿಸಿ ಕೊನೆಗೆ...

ಒಂದು ಕಡೆ ಖಾದ್ಯತೈಲ ಬೆಲೆ ಏರಿಕೆ; ಮತ್ತೊಂದು ಕಡೆ ಕುಸುಬೆ ಬೆಲೆ ಕುಸಿತದಿಂದ ರೈತರಿಗೆ ಹೊರೆ

ಖಾದ್ಯತೈಲ ಬೆಲೆ ಏರಿಕೆ ಗ್ರಾಹಕರ ಜೇಬಿಗೆ ಭಾರವಾದರೆ, ಕುಸುಬೆ ಬೆಲೆ ಕುಸಿತ...

ಡಾಲರ್ V/s ಯುವಾನ್: ಕೊಲ್ಲಿ ಯುದ್ಧ ಕರೆನ್ಸಿ ಯುದ್ಧವಾಗಿ ಮಾರ್ಪಾಡಾಗುತ್ತಿದೆಯೇ?

ಅಕಸ್ಮಾತ್ ಈ ಯುದ್ಧ ಮುಂದುವರೆದರೆ, ಕೆಲವು ದೇಶಗಳು ಡಾಲರ್ ಬದಲಿಗೆ ಯುವಾನ್...