ಬಸವ ಸಂಸ್ಕೃತಿ ಅಭಿಯಾನ ಸೃಷ್ಟಿಸಿದ ತಲ್ಲಣ

Date:

ಬಸವ ಸಂಸ್ಕೃತಿ ಅಭಿಯಾನ ನಿರೀಕ್ಷೆಗೆ ಮೀರಿ ಯಶ ಕಂಡಿದೆ. ಬೆಂಗಳೂರಿನ ಸಮಾರೋಪ ಸಮಾರಂಭ ಕೂಡ ಭರ್ಜರಿ ಯಶಸ್ವಿಯಾಗಿದೆ. ಇದು ಬಸವ ದ್ರೋಹಿಗಳು ಹಾಗೂ ಲಿಂಗಾಯತ ವಿರೋಧಿಗಳನ್ನು ಎಂದಿನಂತೆ ಆತಂಕಕ್ಕೀಡು ಮಾಡಿದೆ. ಲಿಂಗಾಯತ ಅಸ್ಮಿತೆಯ ರಕ್ಷಣೆ, ಬೆಳವಣಿಗೆ ಮತ್ತು ಲಿಂಗಾಯತ ಧರ್ಮದ ಸಂವಿಧಾನ ಮಾನ್ಯತೆಗಾಗಿ ಹೋರಾಡುವುದು ಬಸವ ಪರಂಪರೆಯ ವಿರಕ್ತ ಮಠಗಳ ಆದ್ಯ ಕರ್ತವ್ಯ ಹಾಗೂ ಮೂಲಭೂತ ಹಕ್ಕು, ಅದನ್ನು ಯಾರೂ ಪ್ರಶ್ನಿಸುವಂತಿಲ್ಲ, ಪ್ರಶ್ನಿಸುವವರು ನೇರವಾಗಿ ಲಿಂಗಾಯತ ವಿರೋಧಿಗಳು ಹಾಗು ಬಸವ ದ್ವೇಷಿಗಳು. ಈ ಕಾರ್ಯಕ್ಕೆ ಕೈಜೋಡಿಸದೇ ವಿರೋಧಿಸುತ್ತಿರುವ ಮಠಾಧೀಶರು ಹಾಗೂ ಲಿಂಗಾಯತ ರಾಜಕಾರಣಿಗಳು ಲಿಂಗಾಯತ ಧರ್ಮದ ಬದ್ಧ ವೈರಿಗಳು ಮತ್ತು ಗದ್ದಾರ್ ಗಳು. ಲಿಂಗಾಯತವು ಸ್ವಾತಂತ್ರಪೂರ್ವದಲ್ಲಿ ಹಿಂದೂ ಧರ್ಮದ ಭಾಗವಾಗಿರಲಿಲ್ಲ, ಅದೊಂದು ಪ್ರತ್ಯೇಕ ಧರ್ಮವಾಗಿತ್ತು. ಅದಕ್ಕೆ ಕಾರಣ ಬಸವಾದಿ ಶರಣರು ಪ್ರತಿಪಾದಿಸಿದ ಅವೈದಿಕ ವಚನ ಪ್ರಜ್ಞೆಯ ಪ್ರಣಾಳಿಕೆ. ಲಿಂಗಾಯತ ಹೋರಾಟ ಹಾಗು ಸಂಸ್ಕೃತಿ ಅಭಿಯಾನವನ್ನು ವಿರೋಧಿಸುವ, ತಟಸ್ಥರಾಗಿರುವ, ಪರೋಕ್ಷವಾಗಿ ಬೆಂಬಲಿಸಿ ಭೌತಿಕವಾಗಿ ದೂರವಿರುವ ಕಾರ್ಪೋರೇಟ್ ಮಠಾಧೀಶರು ಸಂಪೂರ್ಣ ಆತ್ಮವಂಚಕರು. ಅದರಂತೆ ಅಧಿಕಾರಕ್ಕಾಗಿ ಮನುವಾದಿಗಳ ಗುಲಾಮರಾಗಿರುವ ಲಿಂಗಾಯತ ರಾಜಕಾರಣಿಗಳು ಸಹ ಸ್ವಾರ್ಥಿಗಳು ಹಾಗೂ ಆತ್ಮ ವಂಚಕರು. ಇವರಿಂದ ಲಿಂಗಾಯತ ಸಮುದಾಯಕ್ಕೆ ದೊಡ್ಡ ಗಂಡಾಂತರವಿದೆ.

sidda ganga

ಬಸವಣ್ಣನವರನ್ನು ನಾಡಿನ ಸಾಂಸ್ಕೃತಿಕ ನಾಯಕ ಎಂದು ಸರಕಾರ ಘೋಷಿಸಿದಾಗ ಮನುವಾದಿ ಪಕ್ಷದ ಲಿಂಗಾಯತ ನಾಯಕರು ಅದನ್ನು ಸ್ವಾಗತಿಸಲಿಲ್ಲ, ಹಾಗೂ ಮನುವಾದಿಗಳ ಬಾಡಿಗೆ ಹಂತಕರಿಂದ ಹತ್ಯೆಗೊಳಗಾದ ಸಂಶೋಧಕ ಡಾ. ಎಂ. ಎಂ. ಕಲಬುರಗಿ ಹಾಗೂ ಗೌರಿ ಲಂಕೇಶ್ ಇವರ ಅಮಾನುಷ ಹತ್ಯೆನ್ನು ಖಂಡಿಸಲಿಲ್ಲ. ಇದೆ ಅಕ್ಟೋಬರ್ 3ರಂದು ಗದುಗಿನ ತೋಂಟದಾರ್ಯ ಮಠ ಕೊಡಮಾಡುವ ಡಾ ಎಂ ಎಂ ಕಲಬುರಗಿ ರಾಷ್ಟ್ರೀಯ ಪುರಸ್ಕಾರ ಕಾರ್ಯಕ್ರಮಕ್ಕೆ ಬರುವುದಾಗಿ ಒಪ್ಪಿಕೊಂಡು ಕೊನೆಯ ಗಳಿಗೆಯಲ್ಲಿ ಮನುವಾದಿ ಲಿಂಗಾಯತ ರಾಜಕಾರಣಿಗಳು ದೂರ ಉಳಿದರು. ಈಗ ಬಸವ ಸಂಸ್ಕೃತಿ ಅಭಿಯಾನದ ಸಮಾರೋಪಕ್ಕೆ ಇವರನ್ನು ಕರೆಯಲಿಲ್ಲ ಎಂದು ಇವರ ಬಾಲಂಗೋಚಿಗಳು ಪ್ರಲಾಪಿಸುತ್ತಿದ್ದಾರೆ. ಲಿಂಗಾಯತ ಸಂಸ್ಕೃತಿಯನ್ನು ನಖಶಿಖಾಂತ ದ್ವೇಷಿಸುವ ಮನುವಾದಿಗಳು ಈ ಹಿಂದೆ ಬಸವಕಲ್ಯಾಣದ ಅನುಭವ ಮಂಟಪ ನಿರ್ಮಾಣದ ಕಾಮಗಾರಿಯನ್ನು ನಿಲ್ಲಿಸಲು ಇನ್ನಿಲ್ಲದಂತೆ ಯತ್ನಿಸಿ ವಿಫಲವಾಗಿದ್ದರು. ಕೆಲವು ಬಸವದ್ವೇಷಿ ವೀರಶೈವ ಜಾತಿ ಜಂಗಮರನ್ನು ಮುಂದಿಟ್ಟುಕೊಂಡು ಮನುವಾದಿಗಳು ಪೀರ್ ಪಾಷ ದರ್ಗಾ ಇರುವ ಸ್ಥಳದಲ್ಲಿಯೇ ಅನುಭವ ಮಂಟಪ ಆಗಲಿ ಎಂದು ಹಾರಾಡಲು ಬಿಟ್ಟು ನಿರ್ಮಾಣ ಕಾಮಗಾರಿಯನ್ನು ವಿವಾದಾತ್ಮಕಗೊಳಿಸುವ ವಿಫಲ ಯತ್ನ ಮಾಡಿದರು. ಬಸವ ಸಂಸ್ಕೃತಿ ಅಭಿಯಾನ ಆರಂಭಗೊಳ್ಳುತ್ತಲೆ ದಿಗಿಲುಗೊಂಡ ಮನುವಾದಿಗಳು ಹಾಗೂ ವೀರಶೈವ ಆರಾಧ್ಯ ಬ್ರಾಹ್ಮಣ ಆಚಾರ್ಯರು ಹಲುಬಲು ಆರಂಭಿಸಿದ್ದರು.

ಅಭಿಯಾನವನ್ನು ವಿರೋಧಿಸಿ ಕ್ರಿಮಿನಲ್ ಹಾಗೂ ಹಫ್ತಾ ಕಲೆಕ್ಷನ್ ಹಿನ್ನೆಲೆಯ ವೀರಶೈವ ಜಂಗಮನ ನೇತೃತ್ವದಲ್ಲಿ ನಕಲಿ ಬೇಡಜಂಗಮರು ಲಿಂಗಾಯತರ ಹಣದಲ್ಲಿ ಹುಬ್ಬಳ್ಳಿಯಲ್ಲಿ ಏಕತೆಯ ನೆಪದಲ್ಲಿ ಮೋಜು ಮಾಡಿ ಏನನ್ನೂ ಸಾಧಿಸದೆ ತಮ್ಮ ಬಸವದ್ವೇಷ ಹಾಗೂ ಲಿಂಗಾಯತ ದ್ವೇಷವನ್ನು ಪ್ರದರ್ಶಿಸಿ ತೃಪ್ತಿರಾದರು. ಅಲ್ಲಿ ಮನುವಾದಿ ರಾಜಕಾರಣಿಗಳು ಹಿಂದೂ ಹಿಂದೂ ಎಂದು ಹಲುಬಿ ತಮ್ಮ ಖಾಲಿ ತಲೆ ಮತ್ತು ಗುಲಾಮಗಿರಿಯನ್ನು ಎತ್ತಿ ತೋರಿಸಿದರು. ಶಿವಮೊಗ್ಗೆಯಲ್ಲಿ ಯಡಿಯೂರಪ್ಪನವರ ಮಗ ಸಂಸ್ಕೃತಿ ಅಭಿಯಾನದಲ್ಲಿ ಭಾಗವಹಿಸಿದ್ದೆ ತಡ ಮನುವಾದಿಗಳು ಕೆಲವು ವೀರಶೈವ ಗುಲಾಮರ ಮೂಲಕ ಹಾಸನದ ಅಭಿಯಾನದಲ್ಲಿ ಗೂಂಡಾಗಿರಿ ಮಾಡಿಸಿದರು‌. ವಿಶ್ವವಾಣಿಯಲ್ಲಿ ಈರಶವ ವಿದ್ವಂಸಕ ನಿರಂತರವಾಗಿ ಕಳಪೆ ದರ್ಜೆಯ ಕಾಳಕೂಟ ವಿಷ ಕಕ್ಕುತ್ತಾ ಇನ್ನೂ ತೃಪ್ತನಾಗಿಲ್ಲ. ಮನುವಾದಿಗಳು ಹಾಗೂ “ಈರಶವ”ರ ವಿರೋಧ, ಆತಂಕ, ಮತ್ಸರ ಎಲ್ಲವನ್ನು ಮೆಟ್ಟಿ ಅಭಿಯಾನ ಜನಮನ್ನಣೆಯನ್ನು ಪಡೆಯಿತು, ಮನು ಸಂತಾನಗಳ ನಿದ್ರೆ ಕಳೆಯಿತು. ಮುಖ್ಯಮಂತ್ರಿಗಳನ್ನು ಅಭಿಯಾನದಲ್ಲಿ ಭಾಗವಹಿಸದಂತೆ ಎಚ್ಚರಿಕೆ ನೀಡಲಾಯಿತು. ಈರಶವಗಳ ಎಲ್ಲಾ ಪ್ರಯತ್ನಗಳು ನೀರಲ್ಲಿ ತೋಯ್ದ ಪಟಾಕಿಯಂತೆ “ಟುಸ್ಸ್” ಎಂದವು. ವಿಶೇಷವೆಂದರೆ, ಈರಶವಗಳ ಕಾರ್ಯಕ್ರಮಗಳಲ್ಲಿ ಕೇವಲ ತಮ್ಮವರು ಮಾತ್ರ ಭಾಗವಹಿಸಿದರೆ, ಲಿಂಗಾಯತರ ಅಭಿಯಾನಗಳಲ್ಲಿ ಲಿಂಗಾಯತೇತರ ಬಸವಾನುಯಾಯಿಗಳು ಸೇರಿದ್ದು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ಈ ಬಾರಿ ಲಿಂಗಾಯತ ಮಠಾಧಿಪತಿಗಳು ಲಿಂಗಾಯತ ಕಾಯಕ ವರ್ಗದ ಮಠಾಧೀಶರಿಗೆ ಹೆಚ್ಚಿನ ಮನ್ನಣೆ ನೀಡಿದ್ದಾರೆ, ಇದು ಆಶಾದಾಯಕ ಬೆಳವಣಿಗೆ. ಇದನ್ನು ಈರಶವ ಪಂಚಾಚಾರ್ಯರಿಂದ ನಿರೀಕ್ಷಿಸಲಾಗದು, ಏಕೆಂದರೆ ಪಂಚಪೀಠಗಳ ಶಾಖಾ ಮಠದ ಮಠಾಧೀಶರೇ ಪಂಚಾಚಾರ್ಯರ ಸರಿಸಮನಾಗಿ ಕೂಡುವಂತಿಲ್ಲ. ಇನ್ನು ಸಾಣೇಹಳ್ಳಿ ಶ್ರೀಗಳ ಮೇಲಿನ ವೈಯಕ್ತಿಕ ದ್ವೇಷಕ್ಕಾಗಿ ಮಧ್ಯ ಕರ್ನಾಟಕದ ಒಬ್ಬ ಮಠಾಧೀಶ ಬಸವಣ್ಣನವರಿಂದ (ಅಭಿಯಾನ) ಅಂತರ ಕಾಯ್ದುಕೊಂಡರೆ, ಮನುವಾದಿಗಳಿಗೆ ಮಾರಿಕೊಂಡ ಮತ್ತೊಂದು ಉಪವರ್ಗದ ಒಬ್ಬ ಮಠಾಧೀಶ ಅಭಿಯಾನದ ವಿರುದ್ಧ ಮಾತನಾಡಿದ. ಜಾತಿ ಜಂಗಮರೇ ಪೀಠದಲ್ಲಿರುವ ಇನ್ನೂ ಕೆಲವು ಬಸವ ಪರಂಪರೆಯ ವಿರಕ್ತ ಮಠಗಳು ಅಭಿಯಾನಕ್ಕೆ ಪರೋಕ್ಷ ಬೆಂಬಲ ನೀಡಿ ಎಂದಿನಂತೆ ಎಲ್ಲಾ ಕಡೆ ಸಲ್ಲುವ ನಾಟಕ ಆಡಿದವು. ಒಟ್ಟಾರೆ ಈ ಬಸವ ಸಂಸ್ಕೃತಿ ಅಭಿಯಾನ ಬಸವದ್ವೇಷಿ ಹಾಗು ಲಿಂಗಾಯತ ದ್ವೇಷಿಗಳನ್ನು ಸಾರಾ ಸಗಟಾಗಿ expose ಮಾಡುವಲ್ಲಿ ಯಶಸ್ವಿಯಾಯಿತು. ಎಂದಿನಂತೆ ಕೇಶವ ಕುಂಜದ ಅಘೋಷಿತ ಆದೇಶದಂತೆ ಮನುವಾದಿ ಪಕ್ಷದಲ್ಲಿರುವ ಬಹುತೇಕ ಲಿಂಗಾಯತ ಗುಲಾಮರು ಅಭಿಯಾನದಿಂದ ದೂರ ಉಳಿದರು. ಆದರೆ ಅವರ ಅಂಧ ಬಾಲಂಗೋಚಿಗಳು ಮಾತ್ರ ತಮ್ಮ ನಾಯಕರಿಗೆ ಅಹ್ವಾನಿಸಿಲ್ಲ ಎಂದು ಉಡಾಳಗಿರಿ ಮಾಡಿದವು. ಲಿಂಗಾಯತ ಧರ್ಮದ ಅಭಿಮಾನವುಳ್ಳವರು ಪಕ್ಷಭೇದ ಮರೆತು ಅಭಿಯಾನದಲ್ಲಿ ಭಾಗವಹಿಸಿದ್ದಾರೆ.

ಸಿಖ್ ಧರ್ಮವು ತತ್ವ ಕೇಂದ್ರಿತವಾಗಿದ್ದು ಅಲ್ಲಿ ವ್ಯಕ್ತಿ ನಗಣ್ಯನಾಗುತ್ತಾನೆ. ಧರ್ಮದ ವಿರುದ್ಧ ಮಾತನಾಡುವ ಸಿಖ್ ರಾಜಕಾರಣಿಗಳನ್ನು ಶಿಕ್ಷಿಸುವ ಅಧಿಕಾರ ಅಲ್ಲಿ ಧಾರ್ಮಿಕ ಸಂಸ್ಥೆಗೆ ಇದೆ. ಅದೇ ಮಾದರಿಯಲ್ಲಿ ಲಿಂಗಾಯತ ಧರ್ಮವನ್ನು ಮರು ಸಂಘಟಿಸುವುದು ಇಂದಿನ ತುರ್ತು ಅಗತ್ಯವಾಗಿದೆ. ಮನುವಾದಿಗಳು ತಮ್ಮ ಪಕ್ಷದಲ್ಲಿರುವ ಲಿಂಗಾಯತ ಗುಲಾಮರನ್ನು ನಿಯಂತ್ರಿಸುತ್ತಿದ್ದಾರೆ. ಹಣೆಯ ಮೇಲೆ ವಿಭೂತಿಯ ಬದಲಿಗೆ ರಕ್ತ ತಿಲಕವಿಡಬೇಕೆಂಬ, ಲಿಂಗಾಯತ ಬದಲಿಗೆ ಹಿಂದೂ ಎಂದು ಹೇಳಬೇಕೆಂಬ ಹಾಗು ಲಿಂಗಾಯತ ಧರ್ಮದ ಹೋರಾಟ ಬೆಂಬಲಿಸಬಾರದೆಂಬ ಆದೇಶವಿದೆ. ಕೇಶವಕುಂಜದ ಬ್ರಾಹ್ಮಣರಿಗೆ ಹೆದರಿ ಅಲ್ಲಿನ ಲಿಂಗಾಯತ ಗುಲಾಮರು ಧರ್ಮ ಭ್ರಷ್ಟರಾಗಿದ್ದಾರೆ. ಅಧಿಕಾರದ ಆಸೆ ಮತ್ತು ಸ್ವಾರ್ಥಕ್ಕಾಗಿ ಸ್ವಂತ ಧರ್ಮವನ್ನೆ ವಿರೋಧಿಸುವ ಗುಲಾಮರು ಬೇರೆಯವರನ್ನು ತಮ್ಮ ತಂದೆ ಎಂದು ಹೇಳಲು ಹೇಸದ ಅಧಃಪತನ ತಲುಪಿದ್ದಾರೆ. ಆದರೆ ಮುಂದಿನ ದಿನಗಳು ಈ ಗುಲಾಮರು ಪಾಲಿಗೆ ದುರ್ದಿನಗಳಾಗಲಿವೆ. ಏಕೆಂದರೆ, “ಹಾರುವರ ನಂಬಿದವರಿನ್ನಾರು ಉಳಿದಿಹರು? ಹಾರುವರ ನಂಬಿ ಭೂಪರು ಕೆಟ್ಟರು, ಇನ್ನಾರು ನಂಬುವರು ಸರ್ವಜ್ಞ” ಎನ್ನುವ ಕವಿ ವಾಣಿಯಂತೆ ಈ ಧರ್ಮ ದ್ರೋಹಿಗಳನ್ನು ಮನುವಾದಿಗಳು ಟಿಶ್ಯೂ ಪೇಪರಿನಂತೆ ಬಳಸಿ ಬಿಸಾಡುತ್ತಾರೆ. ಅದು ಅನೇಕ ವೇಳೆ ಸಾಬೀತಾಗಿದೆ, ಮುಂದಿನ ದಿನಗಳಲ್ಲೂ ಅದು ತಪ್ಪದೇ ಮುಂದುವರೆಯಲಿದೆ. ಇತಿಹಾಸ ಮರುಕಳಿಸುತ್ತಿದ್ದರೂ ಬುದ್ದಿ ಕಲಿಯದವರನ್ನು ಆ ದೇವರು ಕೂಡ ರಕ್ಷಿಸಲಾರ.

ಲಿಂಗಾಯತ ಮುಖ್ಯಮಂತ್ರಿಗಳಾರೂ ಕೊಡದಷ್ಟು ಲಿಂಗಾಯತ ತತ್ವ ಸಿದ್ಧಾಂತದ ಪ್ರಚಾರಕ್ಕೆ ಕೊಡುಗೆ ನೀಡಿರುವ ಮುಖ್ಯಮಂತ್ರಿ ಸಿದ್ಧರಾಮಯ್ಯನವರನ್ನು ಅಭಿಯಾನದ ಸಮಾರೋಪ ಸಮಾರಂಭದಲ್ಲಿ ಸತ್ಕರಿಸುವ ಮಠಾಧೀಶರ ಒಕ್ಕೂಟದ ನಿರ್ಣಯ ಸಮಂಜಸವಾಗಿತ್ತು. ಮುಖ್ಯಮಂತ್ರಿಯವರು ಮಠಾಧೀಶರ ಹೊಗಳಿಕೆಗೆ ಎಲ್ಲಾ ರೀತಿಯಿಂದಲೂ ಅರ್ಹರಾಗಿದ್ದಾರೆ. ಆದರೆ, ಅತಿಯಾದ ಹೊಗಳಿಕೆ ಎಂದು ಗೊಣಗಾಡಿದ ಜಾತಿ ಮನಸ್ಥಿತಿಯ ಕೆಲವರಿಗೆ ಅದು ಹಿಡಿಸದಿರುವುದು ಸಾಮಾನ್ಯ ಸಂಗತಿ. ವೀರೇಂದ್ರ ಪಾಟೀಲರ ನಂತರ ಲಿಂಗಾಯತ ಸಮುದಾಯ ಇರುವುದೇ ತಮ್ಮ ಕುಟುಂಬದ ರಾಜಕೀಯ ಏಳಿಗೆಗೆ ದುಡಿಯಲು ಎಂದುಕೊಂಡಿರುವ ಮನುವಾದಿಗಳ ಪಕ್ಷದ ಗುಲಾಮರಿಗೆ, ತಮ್ಮ ಪಕ್ಷದಲ್ಲಿ ಹಾಗೂ ಎದುರಾಳಿ ಪಕ್ಷದಲ್ಲಿ ಲಿಂಗಾಯತ ನಾಯಕರು ಬೆಳೆಯುವುದು ಬೇಕಿಲ್ಲ. ಲಿಂಗಾಯತರ ಪರವಾಗಿರುವ ಸಚಿವ ಎಂ ಬಿ ಪಾಟೀಲರ ಜನಪ್ರಿಯತೆಯನ್ನು ಸಹಿಸದ ಇವರು ಹಳೆ ಮೈಸೂರು ಹಾಗೂ ಚಾಮರಾಜನಗರ ಭಾಗದಲ್ಲಿ ಹೆಚ್ಚುತ್ತಿರುವ ಲಿಂಗಾಯತ ಪ್ರಜ್ಞೆಯಿಂದ ಕಂಗಾಲಾಗಿ ಅಲ್ಲಿನ ಲಿಂಗಾಯತ ಮಠಾಧೀಶರ ವಿರುದ್ಧ ಪುಂಡರನ್ನು ಎತ್ತಿ ಕಟ್ಟುವ ಕೃತ್ಯದಲ್ಲಿ ತೊಡಗಿರುವುದು ಕಂಡುಬಂದಿದೆ. ಅಭಿಯಾನದಲ್ಲಿ 2 ಲಕ್ಷಕ್ಕೂ ಹೆಚ್ಚು ಜನರು ಭಾಗವಹಿಸಿದ್ದರೆಂದು ರಾಜ್ಯ ಗುಪ್ತಚರ ಮಾಹಿತಿ ಹೇಳುತ್ತದೆ. ಇದು ಬಸವ ದ್ವೇಷಿಗಳಲ್ಲಿ ಆತಂಕ ಹೆಚ್ಚಿಸಿದೆ. ಆದರೆ, ಈ ಉಬ್ಬರವು ಲಿಂಗಾಯತ ಧರ್ಮವನ್ನು ವಿರೋಧಿಸುವವರ ವಿರುದ್ಧ ಚುನಾವಣೆಯಲ್ಲಿ ಮತವಾಗಿ ಪರಿವರ್ತನೆಯಾದರೆ ಮಾತ್ರ ಧರ್ಮಕ್ಕೆ ಮಾನ್ಯತೆ ಸುಲಭವಾಗಿ ಸಿಗಬಲ್ಲದು.

ದಲಿತ ಶಿಕ್ಷಕಿ ಕುಳಿತ ಕುರ್ಚಿಗಳನ್ನು ಸ್ವಚ್ಛಗೊಳಿಸಿದ ಸವರ್ಣೀಯರು; ಸಮೀಕ್ಷೆಯಲ್ಲಿ ಅಸ್ಪೃಶ್ಯತೆಯ ಕಹಿ ಅನುಭವಗಳು

ಲಿಂಗಾಯತರಲ್ಲಿ 2017ರಿಂದ ಈಚೆಗೆ ಸಾಕಷ್ಟು ಬಸವ ಪ್ರಜ್ಞೆ ಬೆಳೆದಿದೆ. ಅದು ರಾಜಕೀಯ ಪ್ರಜ್ಞೆಯಾಗಿ ಪಲ್ಲಟಗೊಂಡರೆ ಲಿಂಗಾಯತರು ಸಿಖ್ಖರಂತೆ ಅಭಿವೃದ್ಧಿ ಹೊಂದಲು ಸಹಾಯವಾಗಬಲ್ಲುದು. ಬಸವಣ್ಣನವರು ಬೇಕು, ಶರಣರ ಹತ್ಯೆಗೆ ಹಾಗೂ ಬಸವಣ್ಣನವರ ಗಡಿಪಾರಿಗೆ ಕಾರಣರಾದ ಮುಕುಂದ ಭಟ್ಟನ ಸಂತತಿಯ ಸಖ್ಯವೂ ಬೇಕು ಎನ್ನುವ ಸಾಮಾನ್ಯ ಮತಿಭ್ರಷ್ಟ ಲಿಂಗಾಯತರು ಹಾಗೂ ಮಠಾಧೀಶರು ಅರಿವುಗೊಳ್ಳುವಂತೆ ಮಾಡುವ ಗುರುತರ ಜವಾಬ್ದಾರಿ ಲಿಂಗಾಯತ ಮಠಾಧೀಶರ ಒಕ್ಕೂಟದ ಮೇಲಿದೆ.

WhatsApp Image 2025 11 17 at 3.54.12 PM
ಡಾ ಜೆ ಎಸ್‌ ಪಾಟೀಲ್‌
+ posts

ಬಸವ ತತ್ವ ಪ್ರಚಾರಕ, ಪ್ರಗತಿಪರ ಚಿಂತಕ

ಪೋಸ್ಟ್ ಹಂಚಿಕೊಳ್ಳಿ:

ಡಾ ಜೆ ಎಸ್‌ ಪಾಟೀಲ್‌
ಡಾ ಜೆ ಎಸ್‌ ಪಾಟೀಲ್‌
ಬಸವ ತತ್ವ ಪ್ರಚಾರಕ, ಪ್ರಗತಿಪರ ಚಿಂತಕ

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ ರಾಷ್ಟ್ರೀಯವಾದ?

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ...

18 ಸಾವಿರ ಕೋಟಿ ರೂ. ದಾಟಿದ ದೇಶದ ಕ್ರೀಡಾ ಅರ್ಥವ್ಯವಸ್ಥೆ; ಕ್ರಿಕೆಟ್ ದರ್ಬಾರಿನಲ್ಲಿ ಸೊರಗಿದ ಇತರ ಆಟಗಳು

ಐಪಿಎಲ್‌ನಲ್ಲಿ ಕೇವಲ ಬೆಂಚ್ ಕಾಯುವ ಸಾಮಾನ್ಯ ಕ್ರಿಕೆಟ್ ಆಟಗಾರನೊಬ್ಬ ಕೋಟ್ಯಾಧಿಪತಿಯಾಗಿ ಐಷಾರಾಮಿ...

ದಾವಣಗೆರೆ | ಸಮರ್ಥ್‌ ನಾಮಪತ್ರ ಸಲ್ಲಿಕೆ; ದೂರ ಉಳಿದ ರಾಜ್ಯ ಮುಸ್ಲಿಂ ಮುಖಂಡರು

ಡಿ.ಕೆ ಶಿವಕುಮಾರ್ ಮತ್ತು ಸಿದ್ದರಾಮಯ್ಯ ಅವರು ದಾವಣಗೆರೆ ಮುಸ್ಲಿಂ ಕಾಂಗ್ರೆಸ್‌ ಟಿಕೆಟ್...