ಬಿ ಎಂ ರೋಹಿಣಿ ಎಂಬ ಮಾನವೀಯತೆಯ ಪ್ರತಿರೂಪ

Date:

ಟೀಚರ್ ಅವರ ಮೊಗದಲ್ಲಿ ಸದಾ ಮುಗ್ಧ ಮಗುವಿನ ನಗುವಿರುತ್ತದೆ. ಈ ನಗುವಿನ ಮೂಲಕ ಅವರು ಎಲ್ಲರನ್ನೂ ಸುಲಭದಲ್ಲಿ ಮತ್ತು ಬಲುಬೇಗನೇ ಗೆದ್ದುಬಿಡುತ್ತಾರೆ. ಅಲ್ಲದೆ, ಅವರಲ್ಲಿನ ವಿನಯ, ಸರಳತೆ ಮತ್ತು ಎಲ್ಲರೊಂದಿಗೂ ಬೆರೆಯುವ ವಿಶಿಷ್ಟ ಗುಣದಿಂದಾಗಿಯೇ ಅವರು ಎಲ್ಲರಿಗೂ ಬಲುಬೇಗನೇ ಆಪ್ತರಾಗಿ ಬಿಡುತ್ತಾರೆ. ಅವರು ದೂರದವರಲ್ಲ, ನಮ್ಮವರೇ ಎಂದು ನಮಗೂ ಅನಿಸಿ ಬಿಡುವುದರಿಂದ ಅವರೊಡನೆ ಬೆರೆಯುವುದು ಸುಲಭ ಸಾಧ್ಯವಾಗುತ್ತದೆ.

ಹೆಸರು ಬಿ.ಎಂ.ರೋಹಿಣಿ. ಆದರೆ ನಾವು ಕರೆಯುವುದು ಟೀಚರ್ ಎಂದೇ. `ಟೀಚರ್’ ಎಂದು ಯಾರಾದರೂ ಹೇಳಿದಾಗ ನಮಗೆ ಮೊದಲು ನೆನಪಾಗುವುದೂ ರೋಹಿಣಿಯವರೇ. ನಮಗೆ ನೇರವಾಗಿ ಅವರು ಪಾಠ ಹೇಳಿದ ಟೀಚರ್ ಆಗಿಲ್ಲದಿರಬಹುದು. ಆದರೆ ಅವರಿಂದ ನಾವು ಕಲಿತುದು ಬಹಳ. ಹಾಗಾಗಿ, ಎಲ್ಲ ಅರ್ಥದಲ್ಲಿಯೂ ನಮಗೆ ಅವರು ಟೀಚರ್.

Once a soldier, always a soldier ಎಂದು, ಸೈನಿಕರ ಬದ್ಧತೆ ಮತ್ತು ಶಿಸ್ತಿನ ಬಗ್ಗೆ ಅಭಿಮಾನದಿಂದ ಹೇಳುವುದಿದೆ. ಹಾಗೆಯೇ once a teacher, always a teacher ಎಂದೂ ಹೇಳಬಹುದೇನೋ. ಇದು ಎಷ್ಟು ಮಂದಿ ಟೀಚರ್‌ಗಳಿಗೆ ಅನ್ವಯವಾಗುತ್ತದೋ ಗೊತ್ತಿಲ್ಲ, ಆದರೆ ನಮ್ಮ ರೋಹಿಣಿ ಟೀಚರಿಗಂತೂ ಖಂಡಿತಾ ಅನ್ವಯವಾಗುತ್ತದೆ. ಅವರು ಪರೋಕ್ಷವಾಗಿ ಅನೇಕರಿಗೆ ಅನೇಕ ವಿಚಾರಗಳನ್ನು ಕಲಿಸುತ್ತಲೇ ಇರುತ್ತಾರೆ. ಮಾತ್ರವಲ್ಲ, ಅವರು ಏಕಕಾಲಕ್ಕೆ ಟೀಚರೂ ಹೌದು ಸ್ಟೂಡೆಂಟೂ ಹೌದು. ಜೀವಮಾನ ಪೂರ್ತಿಯ ವಿದ್ಯಾರ್ಥಿ, ವಿಶೇಷವಾಗಿ ಸಾಹಿತ್ಯದ ವಿದ್ಯಾರ್ಥಿ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ವಿನಯ, ಆರ್ದ್ರ ಹೃದಯ ಮತ್ತು ಓದಿನ ಹಸಿವು

ರೋಹಿಣಿಯವರ ಉಲ್ಲೇಖ ಆದಾಗಲೆಲ್ಲ ನನಗೆ ಮೊದಲಿಗೆ ನೆನಪಾಗುವುದು ಅನುಸರಣೀಯ ಮತ್ತು ಅನುಕರಣೀಯ ಎನಿಸುವ ಅವರ ಮೂರು ಮುಖ್ಯ ಗುಣಗಳು. ಅವೆಂದರೆ ಅವರ ವಿನಯ, ಅಶಕ್ತರಿಗೆ, ಅಸಹಾಯಕರಿಗೆ ಮಿಡಿಯುವ ಅವರ ಆರ್ದ್ರ ಹೃದಯ ಮತ್ತು ಅವರ ಓದಿನ ಹಸಿವು.

ಅವರು ಸಾಹಿತ್ಯ ಮತ್ತು ಸಂಶೋಧನೆಯ ಕ್ಷೇತ್ರದಲ್ಲಿ ಮಾಡಿರುವ ಕೆಲಸ ಉಲ್ಲೇಖನೀಯವಾದುದು. ಅನೇಕ ಪುಸ್ತಕಗಳನ್ನು ಪ್ರಕಟಿಸಿ ಹೆಸರು ಕೂಡಾ ಸಂಪಾದಿಸಿದ್ದಾರೆ. ಇವತ್ತು ಬಿ.ಎಂ.ರೋಹಿಣಿಯವರ ಬಗ್ಗೆ ಗೊತ್ತಿಲ್ಲದವರು ಈ ಭಾಗದ ಸಾರಸ್ವತ ಲೋಕದಲ್ಲಿ ತೀರಾ ಕಡಿಮೆಯಿರಬಹುದು. ಆದರೆ ಈ ಪ್ರಸಿದ್ಧಿಯ ಹಮ್ಮು ಎಂದೂ ಅವರ ತಲೆಗೆ ಅಡರಿಲ್ಲ. ಅಪಾರ ಜ್ಞಾನ ಗಳಿಸಿಯೂ, ಅಪಾರ ಸಾಧನೆ ಮಾಡಿಯೂ, ತಾನು ಏನೂ ಅಲ್ಲ, ತಾನು ಏನನ್ನೂ ಸಾಧಿಸಿಲ್ಲ ಎಂಬಂತಹ ವಿನಯ ಮತ್ತು ನಿಗರ್ವಿ ವ್ಯಕ್ತಿತ್ವ ಅವರದ್ದು.

ಟೀಚರ್ ಅವರ ಮೊಗದಲ್ಲಿ ಸದಾ ಮುಗ್ಧ ಮಗುವಿನ ನಗುವಿರುತ್ತದೆ. ಈ ನಗುವಿನ ಮೂಲಕ ಅವರು ಎಲ್ಲರನ್ನೂ ಸುಲಭದಲ್ಲಿ ಮತ್ತು ಬಲುಬೇಗನೇ ಗೆದ್ದುಬಿಡುತ್ತಾರೆ. ಅಲ್ಲದೆ, ಅವರಲ್ಲಿನ ವಿನಯ, ಸರಳತೆ ಮತ್ತು ಎಲ್ಲರೊಂದಿಗೂ ಬೆರೆಯುವ ವಿಶಿಷ್ಟ ಗುಣದಿಂದಾಗಿಯೇ ಅವರು ಎಲ್ಲರಿಗೂ ಬಲುಬೇಗನೇ ಆಪ್ತರಾಗಿ ಬಿಡುತ್ತಾರೆ. ಅವರು ದೂರದವರಲ್ಲ, ನಮ್ಮವರೇ ಎಂದು ನಮಗೂ ಅನಿಸಿ ಬಿಡುವುದರಿಂದ ಅವರೊಡನೆ ಬೆರೆಯುವುದು ಸುಲಭ ಸಾಧ್ಯವಾಗುತ್ತದೆ.

ಯಾರಾದರೂ ಮಾತನಾಡುವಾಗ ಅವರು ಗಮನವಿಟ್ಟು ಆಲಿಸುತ್ತಾರೆ. ಮಾತನಾಡುವುದಕ್ಕಿಂತಲೂ ಆಲಿಸುವುದರಲ್ಲಿ ಅವರಿಗೆ ಹೆಚ್ಚು ಆಸಕ್ತಿ. ಕಲಿಯುವ ಆಸಕ್ತಿ ಇರುವವರಲ್ಲಿ ಇರಬೇಕಾದ ಬಹುದೊಡ್ಡ ಗುಣಸ್ವಭಾವ ಇದು. ವಿನಯ ಇಲ್ಲದ ಮಂದಿ, ತಮಗೆ ಎಲ್ಲವೂ ಗೊತ್ತಿದೆ ಎಂಬ ಜಂಬ ಇರುವ ಮಂದಿ ಬದುಕಿನಲ್ಲಿ ಎಂದೂ ಏನನ್ನೂ ಕಲಿಯುವುದಿಲ್ಲ.

ಎರಡನೆಯದಾಗಿ, ಅಶಕ್ತರಿಗೆ, ಅಸಹಾಯಕರಿಗೆ ತಮ್ಮಿಂದಾದ ಸಹಾಯ ಮಾಡುವ ಅವರ ಮಾನವೀಯ ಗುಣ. ರೋಹಿಣಿ ಟೀಚರ್ ಆರ್ಥಿಕವಾಗಿ ಬಹಳ ಶ್ರೀಮಂತರೇನಲ್ಲ. ಶಿಕ್ಷಕಿಯಾಗಿದ್ದಾಗ ಬರುತ್ತಿದ್ದ ವೇತನ ಮತ್ತು ನಿವೃತ್ತಿಯ ಬಳಿಕ ಸಿಗುತ್ತಿರುವ ಪಿಂಚಣಿ ಇವಿಷ್ಟು ಬಿಟ್ಟರೆ ಅವರ ಬಳಿ ವಿಶೇಷ ಆರ್ಥಿಕ ಮೂಲವೇನೂ ಇಲ್ಲ. ಆದರೆ ಕಡುಬಡತನದ ಹಿನ್ನೆಲೆಯಿಂದ ಮತ್ತು ಅನೇಕ ಅವಮಾನಗಳು, ಸವಾಲುಗಳು ಇತ್ಯಾದಿಗಳನ್ನು ಎದುರಿಸುತ್ತಲೇ ಬೆಳೆದು ಬಂದವರಾದ ಕಾರಣವೋ ಏನೋ, ಬಡವರ ಮತ್ತು ಅಸಹಾಯಕರ ಕಷ್ಟ ಅವರಿಗೆ ಬಲು ಬೇಗನೇ ಅರ್ಥವಾಗಿಬಿಡುತ್ತದೆ. ಅವರಿಗಾಗಿ ರೋಹಿಣಿಯವರ ಹೃದಯ ಬಹಳ ಬೇಗನೇ ಮಿಡಿದುಬಿಡುತ್ತದೆ. ರೋಹಿಣಿಯವರಿಂದ ಆರ್ಥಿಕ ಸಹಾಯ ಮತ್ತು ನೈತಿಕ ಬೆಂಬಲ ಪಡೆದವರ ಸಂಖ್ಯೆ ಲೆಕ್ಕಕ್ಕೆ ಸಿಗದೇನೋ.

ಆದರೆ ಇಲ್ಲೂ ಅವರು ಯಾವುದನ್ನೂ ಸ್ವಾರ್ಥಕ್ಕೆ, ಸ್ವಪ್ರಚಾರಕ್ಕೆ ಬಳಸಿಕೊಂಡವರಲ್ಲ. “ಎಡದ ಕೈಯಲ್ಲಿ ಮಾಡಿದ ಸಹಾಯ ಬಲದ ಕೈಗೆ ತಿಳಿಯಬಾರದು’’ ಎಂಬ ಒಂದು ಮಾತಿದೆಯಲ್ಲ, ಅದಕ್ಕೆ ಅನ್ವರ್ಥ ನಮ್ಮ ಟೀಚರ್ ಅವರ ಪರೋಪಕಾರದ ಮಾದರಿ ನಡೆವಳಿಕೆಗಳು.

23 6

ನಾನು ಅವಘಡವೊಂದರ ಕಾರಣ ಎಲ್ಲ ಆರ್ಥಿಕ ಮೂಲಗಳನ್ನೂ ಕಳೆದುಕೊಂಡು ದಿಕ್ಕೆಟ್ಟು ಕುಳಿತಿದ್ದಾಗ, ಆಗಾಗ ಭೇಟಿ, ಹರಟೆಗಳ ಮೂಲಕ ನೈತಿಕ ಬೆಂಬಲ ನೀಡಿದ್ದು ಮಾತ್ರವಲ್ಲ, ಶಾಲೆ ಓದುತ್ತಿದ್ದ ನಮ್ಮ ಮಗನಿಗೂ ಅವರು ತಮ್ಮದೇ ಮಿತಿಯಲ್ಲಿ ನಿರಂತರವಾಗಿ ಆರ್ಥಿಕ ಸಹಾಯ ಮಾಡಿದವರು. ಅವರು ಮಾಡಿದ ಸಹಾಯವನ್ನು ನನ್ನ ಮಗ ಈಗಲೂ ನೆನಪಿಸುತ್ತಾನೆ. ಈ ಸ್ವಂತ ಅನುಭವದ ಕಾರಣವಾಗಿಯೇ ಟೀಚರ್ ಅವರ ಈ ಮಾನವೀಯ ಗುಣದ ಬಗ್ಗೆ ನಾನು ಧೈರ್ಯದಿಂದ ಹೇಳಬಲ್ಲೆ.

ಕೊನೆಯದಾಗಿ, ನಾನು ಬಹಳವಾಗಿ ಮತ್ಸರಪಡುವ ಒಂದು ಸಂಗತಿಯೆಂದರೆ, ಅವರ ವಿಸ್ತಾರವಾದ ಓದು, ಅವರ ಓದಿನ ಹಸಿವು. ಅವರು ಇದುವರೆಗೆ ಯಾವ ಯಾವ ಪುಸ್ತಕಗಳನ್ನು ಓದಿರಬಹುದು? ಎಷ್ಟು ಪುಸ್ತಕಗಳನ್ನು ಓದಿರಬಹುದು? ಅವರು ಲೆಕ್ಕ ಇಟ್ಟಿರಲಿಕ್ಕಿಲ್ಲ. ಆದರೆ ಈಗಲೂ ಅವರ ಓದಿನ ಹಸಿವು ತಣಿದಂತಿಲ್ಲ. ಅಸಕ್ತಿ ಕೆರಳಿಸುವ ಯಾವುದೇ ಪುಸ್ತಕ ಅವರ ಕಣ್ಣಿಗೆ ಬೀಳಲಿ ಅದನ್ನು ಎರವಲು ಪಡೆದಾದರೂ ಅವರು ಓದುವವರೇ? ಕೆಲವೊಮ್ಮೆ ಒಂದು ಪುಸ್ತಕವನ್ನು ಇಡೀ ರಾತ್ರಿ ನಿದ್ದೆಗೆಟ್ಟು ಓದಿ ಮುಗಿಸಿ ಬಿಡುವುದೂ ಇದೆ ಎಂದು ಅವರು ಒಮ್ಮೆ ಹೇಳಿದ ನೆನಪು. ಬರೇ ಓದುವುದು ಮಾತ್ರವಲ್ಲ, ಅಲ್ಲಿನ ಮುಖ್ಯ ಕೆಲವು ವಿಷಯಗಳನ್ನು ಅವರು ಟಿಪ್ಪಣಿ ಮಾಡಿಟ್ಟುಕೊಳ್ಳುತ್ತಾರೆ, ನೆನಪಿನಲ್ಲೂ ಇರಿಸಿಕೊಳ್ಳುತ್ತಾರೆ.

ಅವರ ವಿಸ್ತಾರವಾದ ಓದು ಮತ್ತು ಅವರ ನೆನಪಿನ ಶಕ್ತಿಯನ್ನು ತಿಳಿಯಬೇಕಿದ್ದರೆ ಅವರ ಯಾವುದಾದರೊಂದು ಲೇಖನವನ್ನು ಓದಬೇಕು. ಅಲ್ಲಿ ಅವರು ಪುರಾಣ, ಇತಿಹಾಸ, ವರ್ತಮಾನ ಹೀಗೆ ಅನೇಕ ಮೂಲಗಳ ಕಥಾನಕಗಳನ್ನು ಐತಿಹ್ಯಗಳನ್ನು ಉದ್ಧರಿಸಿರುತ್ತಾರೆ (ಕೋಟ್). ಸಂದರ್ಭಕ್ಕೆ ಪೂರಕವಾಗುವಂತೆ ಪೋಣಿಸಿ ಲೇಖನವನ್ನು ಸುಂದರ, ಸುಪುಷ್ಟಗೊಳಿಸಿರುತ್ತಾರೆ.

ನಾನಿಲ್ಲಿ, ನನಗೆ ಮುಖ್ಯ ಅನಿಸಿದ ಮೂರು ಗುಣಗಳನ್ನು ಮಾತ್ರ ಉಲ್ಲೇಖಿಸಿದೆ. ಇದರರ್ಥ ಅವರಲ್ಲಿ ಇರುವುದು ಈ ಮೂರು ಗುಣಗಳು ಮಾತ್ರ ಎಂದಲ್ಲ. ಅವರ ಮಾನವೀಯ ವ್ಯಕ್ತಿತ್ವದ ನೂರು ಮುಖಗಳನ್ನು ವಿಸ್ತಾರವಾಗಿ ಬರೆಯಬಹುದು ಮತ್ತು ಅದಕ್ಕೆ ಒಂದು ಬೃಹತ್ ಪುಸ್ತಕವೇ ಬೇಕಾದೀತು.

ರೋಹಿಣಿ ಅವರು ಏಪ್ರಿಲ್ 6, 2026 ಕ್ಕೆ 82 ತುಂಬಿ 83ಕ್ಕೆ ಕಾಲಿಡುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಅವರಿಗೆ ಅವರ ಗೆಳತಿಯರು, ಅಭಿಮಾನಿಗಳು, ಕರಾವಳಿಯ ವಿದ್ವತ್ ವಲಯ, ಶಿಷ್ಯರು, ಸಹೋದ್ಯೋಗಿಗಳು, ಅವರು ಒಡನಾಡಿದ ಎಲ್ಲ ಸಂಘ ಸಂಸ್ಥೆಯವರು ಒಗ್ಗೂಡಿ ಅವರ ಮೇಲಿನ ತಮ್ಮ ಪ್ರೀತಿ, ಅಭಿಮಾನ, ಗೌರವಗಳ ಅಭಿವ್ಯಕ್ತಿಗಾಗಿ 21.02.2026 ರಂದು ʼನಾಗರಿಕ ಸನ್ಮಾನʼಮಾಡುತ್ತಿದ್ದಾರೆ. ಅವರಿಗೆ ತುಂಬು ಮನದ ಶುಭಾಶಯಗಳು.

56759201 10214091775274164 8688371072011075584 n
ಶ್ರೀನಿವಾಸ ಕಾರ್ಕಳ
+ posts

ಚಿಂತಕರು, ಸಾಮಾಜಿಕ ಕಾರ್ಯಕರ್ತರು

ಪೋಸ್ಟ್ ಹಂಚಿಕೊಳ್ಳಿ:

ಶ್ರೀನಿವಾಸ ಕಾರ್ಕಳ
ಶ್ರೀನಿವಾಸ ಕಾರ್ಕಳ
ಚಿಂತಕರು, ಸಾಮಾಜಿಕ ಕಾರ್ಯಕರ್ತರು

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಕೇಂದ್ರವನ್ನು ಟೀಕಿಸಿದ ಸಾಮಾಜಿಕ ಮಾಧ್ಯಮ ಖಾತೆಗಳು ಮಂಗಮಾಯ: ಉಳಿಯುವುದು ಬರೀ ಮೋದಿಮಯ!

ಹೀಗೆ ಮೋದಿ ಸರ್ಕಾರವನ್ನು ವಿರೋಧಿಸಿದವರ ಖಾತೆಗಳು ಸಾಮಾಜಿಕ ಮಾಧ್ಯಮಗಳಿಂದ ಅಳಿಸಿ ಕೊನೆಗೆ...

ಒಂದು ಕಡೆ ಖಾದ್ಯತೈಲ ಬೆಲೆ ಏರಿಕೆ; ಮತ್ತೊಂದು ಕಡೆ ಕುಸುಬೆ ಬೆಲೆ ಕುಸಿತದಿಂದ ರೈತರಿಗೆ ಹೊರೆ

ಖಾದ್ಯತೈಲ ಬೆಲೆ ಏರಿಕೆ ಗ್ರಾಹಕರ ಜೇಬಿಗೆ ಭಾರವಾದರೆ, ಕುಸುಬೆ ಬೆಲೆ ಕುಸಿತ...

ಡಾಲರ್ V/s ಯುವಾನ್: ಕೊಲ್ಲಿ ಯುದ್ಧ ಕರೆನ್ಸಿ ಯುದ್ಧವಾಗಿ ಮಾರ್ಪಾಡಾಗುತ್ತಿದೆಯೇ?

ಅಕಸ್ಮಾತ್ ಈ ಯುದ್ಧ ಮುಂದುವರೆದರೆ, ಕೆಲವು ದೇಶಗಳು ಡಾಲರ್ ಬದಲಿಗೆ ಯುವಾನ್...