ಹಬ್ಬದ ದೀಪಗಳ ಹಿಂದೆ ಮೌನದ ನೋವುಗಳು

Date:

ಈ ಲೇಖನ ಹಬ್ಬವನ್ನು ವಿರೋಧಿಸುವುದಿಲ್ಲ. ಆದರೆ, ಹಬ್ಬವನ್ನು ನೋಡುವ ದೃಷ್ಟಿಕೋನವನ್ನು ವಿಸ್ತಾರಗೊಳಿಸಲು ಒತ್ತು ನೀಡುತ್ತದೆ.

ಇದು ಕರ್ನಾಟಕದ ಹೆಮ್ಮೆಯ ಹಬ್ಬ, ವಿಶ್ವದಾದ್ಯಂತ ಸದ್ದು ಮಾಡುತ್ತದೆ. ಎಲ್ಲೆಲ್ಲೂ ದೀಪಗಳು, ಸಂಗೀತ, ಸಂಸ್ಕೃತಿ, ಸಂತೋಷ ತುಂಬಿರುತ್ತದೆ ಇಡಿ ನಗರವೇ ಒಂದು ಭವ್ಯ ವೇದಿಕೆಯಂತೆ ಬದಲಾಗುತ್ತದೆ. ಹಬ್ಬದ ಅಂದವನ್ನು ನೋಡಿ ಕಣ್ತುಂಬಿಕೊಳ್ಳಲು ಬಹಳ ಖುಷಿಯಾಗುತ್ತದೆ. ಪ್ರತಿ ಬಾರಿಯಂತೆ ಈ ಬಾರಿಯೂ ಇತ್ತೀಚೆಗೆ ನಾನು ಈ ಹಬ್ಬಕ್ಕೆ ಹಾಜರಾಗಿದ್ದೆ.

ಅಲಂಕೃತ ಬೀದಿಗಳ ಮಧ್ಯೆ, ಮಹಿಳೆಯರು ಮತ್ತು ಮಕ್ಕಳು ಬಲೂನುಗಳನ್ನು ಮಾರುತ್ತಿರುವುದನ್ನು ನಾನು ನೋಡಿದೆ. ಚೆಂದದ ದೀಪಾಲಂಕಾರದ ನಡುವೆ ಬಣ್ಣ ಬಣ್ಣದ ಲೈಟಿಂಗ್ ಬಲೂನುಗಳು ಮತ್ತಷ್ಟು ಮೆರುಗು ನೀಡುತ್ತಿದ್ದವು. ಅದನ್ನು ಕೊಂಡುಕೊಳ್ಳುವವರ ನಡುವೆ ಫೋಟೋ ವಿಡಿಯೋಗಳನ್ನು ಮಾಡುವವರೇ ನನ್ನ ಕಣ್ಣಿಗೆ ಹೆಚ್ಚಾಗಿ ಕಂಡಿದ್ದು. ಈ ಬಣ್ಣ ಬಣ್ಣದ ಬಲೂನುಗಳು ಇವರ ಹೊಟ್ಟೆಪಾಡು. ಮಳೆ, ಬಿಸಿಲು, ಹಸಿವು, ಚಳಿ ಯಾವುದನ್ನು ಲೆಕ್ಕಿಸದೆ ಬೀದಿ ಬೀದಿಗಳಲ್ಲಿ ಚೆಂದದ ಬಲೂನುಗಳ ಮಾರಾಟ, ಮೈಸೂರು ದಸರಾವನ್ನು ಸಂಭ್ರಮಿಸುವ ಜನರು ಬಲೂನುಗಳನ್ನು ಕೊಂಡಾಗ ಇವರ ಮುಖದ ಮೇಲೆ ಮೂಡುವ ನಗುವನ್ನು ನೋಡುವುದೇ ಒಂದು ಕುಶಿ ಮತ್ತು ತೃಪ್ತಿ.

ಕುಟುಂಬದ ಸಮೇತ ಬಂದು ಹಬ್ಬವನ್ನು ಕಣ್ತುಂಬಿ ಕೊಳ್ಳುವವರು ಒಂದೆಡೆಯಾದರೆ, ಹಬ್ಬದ ದೆಸೆಯಿಂದ ಹೊಟ್ಟೆ ತುಂಬಿಸಿಕೊಳ್ಳುವವರು ಮತ್ತೊಂದೆಡೆ. ಹಬ್ಬಗಳ ವ್ಯಾಖ್ಯಾನ ಎಲ್ಲರಿಗೂ ಒಂದೇ ಅಲ್ಲ ಎನ್ನುವುದಕ್ಕೆ ಇದೆ ಸಾಕ್ಷಿ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ಇವರು ಬಲೂನುಗಳನ್ನು ಮಾರಲು ದೂರದ ಹಳ್ಳಿಗಳಿಂದ ಬಂದ ವಲಸೆ ಕಾರ್ಮಿಕರು. ಇವರಿಗೆ ಮನೆ ಇಲ್ಲ, ಭದ್ರತೆ ಇಲ್ಲ. ಅವರ ಏಕೈಕ ಗುರಿ ಹೊಟ್ಟೆ ತುಂಬಿಸಲು ಸಾಕಷ್ಟು ಹಣ ಸಂಪಾದನೆ ಮಾಡುವುದು. ಒಂದು ಬಲೂನು ಮಾರಾಟವಾದರೆ, ಒಂದು ಹೊತ್ತಿನ ಊಟ ಸಿಗಬಹುದು. ಇವರಿಗೆ ದಸರಾ ಹಬ್ಬವಲ್ಲ-ಹಸಿವಿನಿಂದ ತಪ್ಪಿಸಿಕೊಳ್ಳಲು ಸಿಕ್ಕಿರುವ ಒಂದು ಅವಕಾಶ. ಇವರು ದಸರಾ ಸಂಭ್ರಮಿಸಲು ಅಲ್ಲ , ಆದರೆ ಬದುಕುಳಿಯಲು ಬಂದಿದ್ದರು.

ತಾತ್ಕಾಲಿಕ ಆಶ್ರಯಕ್ಕಾಗಿ ಪ್ಲಾಸ್ಟಿಕ್ ಶೀಟುಗಳಿಂದ ಶೆಡ್ ಮಾಡಿಕೊಳ್ಳುವ ಇವರಿಗೆ ರಕ್ಷಣೆಯ ಯಾವ ವ್ಯವಸ್ಥೆಯೂ ಇಲ್ಲ.
ಹಸಿವನ್ನು ತಣಿಸಲು ಬಂದವರು ತಮ್ಮ ಜೀವವನ್ನೇ ಕಳೆದುಕೊಂಡಾಗ ಆಗುವ ನೋವು ಅಷ್ಟಿಟ್ಟಲ್ಲ. ಹಬ್ಬದ ಭಾವೋದ್ವೇಗದ ಹಿಂದೆ, ಒಂದು ಕಡಕಡನೆ ಹೊಡೆಯುವ ಸತ್ಯ ಬಯಲಿಗೆ ಬಂತು.

ಮಹಿಳೆಯೊಬ್ಬಳು ರಸ್ತೆಯ ಬದಿಯಲ್ಲಿ ತಾತ್ಕಾಲಿಕ ಛಾವಣಿಯಲ್ಲಿ ಮಲಗಿರುವಾಗ, ಭದ್ರತೆ ಇಲ್ಲದ ಕಾರಣ ಹಬ್ಬದ ಬೆಳಕಿನಲ್ಲಿ ಆ 9 ವರ್ಷದ ಹೆಣ್ಣು ಮಗುವಿಗೆ ಆದ ನೋವು, ಹಿಂಸೆ, ಅತ್ಯಾಚಾರ ಮತ್ತು ಆ ಹೆಣದ ಹಾದಿ ನಾವು ಮರೆಯಬಲ್ಲವೇ? ಅವನ ಚಟಕ್ಕಾಗಿ ಆ ಮಗುವಿನ ಮೇಲೆ ಎಸೆದಿರುವ ಕ್ರೂರತನ ಮರೆಯುವಂತದ್ದೇ?

ಮಗುವನ್ನು ಕಳೆದುಕೊಂಡ ಕುಟುಂಬಕ್ಕೆ ಮಗುವಿಗೆ ಆದ ದುಸ್ಥಿತಿ ಚೀರಲಾಗದಂತಹ ಕಿಚ್ಚು, ಈ ನೋವಿನ ವ್ಯಾಪಕತೆ ಮತ್ತು ನಷ್ಟವು ಅವರ ಇಡೀ ಪ್ರಪಂಚವನ್ನು ಬಿಗಿಯುತ್ತದೆ. ಈ ದುಃಖವು ಕೇವಲ ದುಃಖವಲ್ಲ, ಅದು ಅವರ ಸಂಪೂರ್ಣ ಮನಸ್ಸನ್ನು ಕದಲಿಸುತ್ತದೆ. ಈ ನೋವಿನಿಂದ ಹೊರಗೆ ಬರುವುದು ಸುಲಭದ ಮಾತಲ್ಲ. ಆ ತಾಯಿ ತಂದೆಯ ಮನಸ್ಥಿತಿ ನೆನೆಯಲು ಅಸಾಧ್ಯ. ಅವರು ಇಷ್ಟು ದಿನ ಮಗುವೆಂದು ಮುದ್ದಾಡಿದ ಕಣ್ಣು, ಮೂಗು, ಬಾಯಿ, ಗದ್ದ ಯಾವುದು ಕೂಡ ಮೊದಲಿನ ಸ್ಥಿತಿಯಲ್ಲಿರುವುದಿಲ್ಲ. ಆ ಕ್ರೂರಿ ಹೀನಾಯವಾಗಿ ಹೀಗೆಲ್ಲ ತಿಂದು ಅವನ ಕ್ರೂರತ್ವವನ್ನು ನೀಚ ರೀತಿಯಲ್ಲಿ ಮೆರೆದಿದ್ದಾನೆ. ಈ ರೀತಿಯಲ್ಲಿ ಮಗುವನ್ನು ನೋಡಿದ ಅವರು ಹೇಗೆ ತಾನೇ ಸುಲಭವಾಗಿ ಇದರಿಂದ ಹೊರಗೆ ಬರುತ್ತಾರೆ?

ಈ ಘಟನೆ ಅವರಲ್ಲಿ ಆತಂಕ, ನಿರಾಶೆ ಹಾಗೂ ನಿರೀಕ್ಷೆಯ ಕೊರತೆಯನ್ನುಂಟುಮಾಡುತ್ತದೆ. ಮಾರ್ಜಿನಲೈಜ್ಡ್ ಸಮುದಾಯಗಳಲ್ಲಿ, ಈ ಮಾನಸಿಕ ನೋವು ಬಹಳ ಸಮಯ ಗಮನಿಸದಂತೆ ಉಳಿಯುತ್ತದೆ ಮತ್ತು ಚಿಕಿತ್ಸೆ ಅಂತು ದೂರದ ಯೋಚನೆ. ಬೆಂಬಲ ವ್ಯವಸ್ಥೆಗಳ ಕೊರತೆ ಮತ್ತು ಸಾಮಾಜಿಕ ಸುರಕ್ಷತಾ ಕೊರತೆ, ಅವರನ್ನು ಮತ್ತಷ್ಟು ಒಂಟಿತನಕ್ಕೆ ತಳ್ಳುತ್ತದೆ. ಗುಣಮುಖವಾಗಲು ಸಾಧ್ಯವಿಲ್ಲದಂತೆ ಮಾಡುತ್ತದೆ. ಇದು ಅವರ ಅವರ ನೋವನ್ನು ಮತ್ತಷ್ಟು ತೀವ್ರಗೊಳಿಸುತ್ತವೆ.

ಈ ಲೇಖನ ಓದಿದ್ದೀರಾ?: ಬಿಹಾರ ಚುನಾವಣೆ | ನಿತೀಶ್ ಕುಮಾರ್ ಮತ್ತು ಬಿಜೆಪಿಯ ಸ್ವಯಂ ಸೋಲು

ನಮ್ಮ ಸಂವಿಧಾನವು ಎಲ್ಲರಿಗೂ ಸಮಾನತೆ, ಭದ್ರತೆ, ಗೌರವದ ಹಕ್ಕನ್ನು ನೀಡುತ್ತದೆ. ಆದರೆ ಈ ವಲಸಿಗರಿಗೆ, ಮಹಿಳೆಯರಿಗೆ ಈ ಹಕ್ಕುಗಳು ಕಾಗದದ ಮಾತುಗಳಷ್ಟೇ. ಹಬ್ಬಗಳ ಸಮಯದಲ್ಲಿ ಅವರ ಭದ್ರತೆ ಯಾರು ಪರಿಗಣಿಸುತ್ತಾರೆ? ವಾಸ್ತವದಲ್ಲಿ ಅವರು ಸಂವಿಧಾನದ ಭದ್ರತೆಯಿಂದ ಹೊರಗಿನವರು.

ಇಂದು ವರ್ಣವ್ಯವಸ್ಥೆ, ಪಿತೃಪ್ರಧಾನ ಸಮಾಜ, ವರ್ಗಾಧಾರಿತ ವ್ಯವಸ್ಥೆ ಎಲ್ಲವೂ ಸೇರಿ ದುರ್ಬಲರನ್ನು ಇನ್ನೂ ಹೆಚ್ಚು ದುರ್ಬಲರನ್ನಾಗಿ ಮಾಡುತ್ತಿವೆ. ಇವರೆಲ್ಲರ ಮಧ್ಯೆ ಮಹಿಳೆಯರು ಮತ್ತು ಮಕ್ಕಳು ಮತ್ತಷ್ಟು ದುರ್ಬಲರನ್ನಾಗಿಸಿದ್ದಾರೆ.

ಬದುಕು ಎಂಬುದು ಎರಡು ಮುಖಗಳನ್ನು ಹೊಂದಿದೆ:
1. ಬದುಕು ಇರುವಿಕೆ-ದೈಹಿಕವಾಗಿ ಉಸಿರಾಡುವುದು.
2. ಬದುಕನ್ನು ನಡಿಸುವಿಕೆ — ಭದ್ರತೆ, ಆಯ್ಕೆ, ಘನತೆ, ಕನಸುಗಳೊಂದಿಗೆ ಜೀವಿಸುವುದು.

ಇವರ ಪಾಲಿಗೆ ಮೊದಲನೆಯದು ಮಾತ್ರ ಸಾಧ್ಯ. ಆಹಾರ, ಆಶ್ರಯ, ಭದ್ರತೆ ಎಲ್ಲವೂ ಹೋರಾಟದಿಂದ ಪಡೆಯಬೇಕು ಅಷ್ಟೇ. ಈ ಹೋರಾಟದ ಮಧ್ಯೆ ಜೀವವೇ ಹಾರಿ ಹೋದರೆ, ಅದು ದುರ್ಘಟನೆ ಅಲ್ಲ ಬದಲಿಗೆ ಅದು ಸಮಾಜದ ವೈಫಲ್ಯ. ಮೇಲಿಂದ ಮೇಲೆ ತಪ್ಪು ಮಾಡಿರುವವರನ್ನು ಶಿಕ್ಷೆಗೆ ಒಳಪಡಿಸದೆ ಸಮಾಜದಲ್ಲಿ ಆರಾಮಾಗಿರಲು ಬಿಟ್ಟಿರುವ ಕಾನೂನಿನ ವೈಫಲ್ಯ.

ಈ ಲೇಖನ ಹಬ್ಬವನ್ನು ವಿರೋಧಿಸುವುದಿಲ್ಲ. ಆದರೆ, ಹಬ್ಬವನ್ನು ನೋಡುವ ದೃಷ್ಟಿಕೋನವನ್ನು ವಿಸ್ತಾರಗೊಳಿಸಲು ಒತ್ತು ನೀಡುತ್ತದೆ.

ಹಬ್ಬ ಎಂದರೆ ಕೇವಲ ಸಂತೋಷವಲ್ಲ, ಸಂಭ್ರಮವಲ್ಲ, ಅದು ಜವಾಬ್ದಾರಿ ಕೂಡ ಆಗಬೇಕು. ನಾವು ಬೀದಿಯಲ್ಲಿ ಬಲೂನು ಮಾರುವವರನ್ನು ನೋಡಿದಾಗ ಅವರು ಕೂಡ ಇದೇ ಸಮಾಜದ ಭಾಗ ಎಂದು ಮನಸ್ಸಲ್ಲಿ ಇಟ್ಟುಕೊಳ್ಳೋಣ. ಅವರಿಗೆ ಮತ್ತು ನಮಗೆ ಭದ್ರತೆಯ ಹಕ್ಕು ಸಮಾನ.

ಸಮಾಜ ಎಷ್ಟು ಹಬ್ಬವನ್ನು ಘನವಾಗಿ ಆಚರಿಸುತ್ತೆ ಎಂಬುದರಿಂದಲ್ಲ, ಅದು ತನ್ನ ಅತ್ಯಂತ ದುರ್ಬಲರಿಗೆ ಎಷ್ಟು ಸುರಕ್ಷತೆ ನೀಡುತ್ತದೆ ಎಂಬುದರಿಂದ ಮಾಪನವಾಗಬೇಕು.

ಪ್ರತಿ ದಸರಾ ಹಬ್ಬವು ಅವರ ನೋವನ್ನು ಪುನಃ ಜೀವಂತಗೊಳಿಸುತ್ತದೆ. ಈ ಘಟನೆ ಮಾಸದ ಗಾಯದಂತೆ ಉಳಿದುಬಿಡುತ್ತದೆ. ಈ ನೋವು ಕೇವಲ ಅವರದ್ದಲ್ಲ, ಸೂಕ್ಷ್ಮತೆಗಳನ್ನು ಭಾರವೆಂದು ಗಾಳಿಗೆ ತೇಲಿಸಿರುವ, ಮತ್ತೊಬ್ಬರ ಸ್ವಾತಂತ್ರ ಹಾಗೂ ಹಕ್ಕು ಕಸಿದಿರುವವರಂತಹ ಇಡಿ ರಾಜ್ಯದ ಕೊರತೆಯಾಗಿದೆ.

ಏಕೆಂದರೆ, ಪ್ರತಿಯೊಂದು ಬೆಳಕು ಒಂದು ನೆರಳನ್ನು ಕೂಡ ಎಸೆದುಹೋಗುತ್ತದೆ. ಆ ನೆರಳಿನಲ್ಲಿ ಯಾರೂ ಮರೆತುಹೋಗಬಾರದು. ಅವರೆಲ್ಲರಿಗಾಗಿ ನಾವೆ ಬೆಳಕು ಹಾಯಿಸುವುದು ಅವಶ್ಯ.

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ ರಾಷ್ಟ್ರೀಯವಾದ?

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ...

18 ಸಾವಿರ ಕೋಟಿ ರೂ. ದಾಟಿದ ದೇಶದ ಕ್ರೀಡಾ ಅರ್ಥವ್ಯವಸ್ಥೆ; ಕ್ರಿಕೆಟ್ ದರ್ಬಾರಿನಲ್ಲಿ ಸೊರಗಿದ ಇತರ ಆಟಗಳು

ಐಪಿಎಲ್‌ನಲ್ಲಿ ಕೇವಲ ಬೆಂಚ್ ಕಾಯುವ ಸಾಮಾನ್ಯ ಕ್ರಿಕೆಟ್ ಆಟಗಾರನೊಬ್ಬ ಕೋಟ್ಯಾಧಿಪತಿಯಾಗಿ ಐಷಾರಾಮಿ...

ದಾವಣಗೆರೆ | ಸಮರ್ಥ್‌ ನಾಮಪತ್ರ ಸಲ್ಲಿಕೆ; ದೂರ ಉಳಿದ ರಾಜ್ಯ ಮುಸ್ಲಿಂ ಮುಖಂಡರು

ಡಿ.ಕೆ ಶಿವಕುಮಾರ್ ಮತ್ತು ಸಿದ್ದರಾಮಯ್ಯ ಅವರು ದಾವಣಗೆರೆ ಮುಸ್ಲಿಂ ಕಾಂಗ್ರೆಸ್‌ ಟಿಕೆಟ್...