ನುಗ್ಗೆಕಾಯಿ ಕೆಜಿಗೆ ₹700: ಬಹುದೊಡ್ಡ ಬೇಡಿಕೆ ಬರಲು ಕಾರಣವೇನು?

Date:

ನುಗ್ಗೆಕಾಯಿ ಬೇಡಿಕೆ ಹೆಚ್ಚಾಗಿದೆ. ಆ ಬೇಡಿಕೆಗೆ ತಕ್ಕಂತೆ ಸರಬರಾಜು ಇಲ್ಲದಿರುವುದರಿಂದ ಬೆಲೆ ಏರಿಕೆಯಾಗಿದೆ. ಈ ಬೆಲೆ ಏರಿಕೆ, ಬೆಳೆದ ರೈತರಿಗೆ ಸಿಕ್ಕರೆ, ಅದು ಇನ್ನಷ್ಟು ಬೆಳೆಗೆ, ಆ ಮೂಲಕ ಆರೋಗ್ಯಕರ ಸಮಾಜಕ್ಕೆ ಕಾರಣವಾಗಬಹುದು...

ಒಂದು ತಿಂಗಳಿನಿಂದ ನುಗ್ಗೆಕಾಯಿಯ ಬೆಲೆ ಏರಿಕೆಯಾಗಿದ್ದು, ಕೆಲ ರೈತರು ತಮ್ಮ ಹೊಲ ಗದ್ದೆಗಳಲ್ಲಿ, ಮನೆ, ಖಾಲಿ ಜಾಗಗಳಲ್ಲಿ ಬೆಳೆದ ನುಗ್ಗೆಕಾಯಿಗಳನ್ನು ತಂದು ಮಾರಾಟ ಮಾಡುತ್ತಿದ್ದಾರೆ. ಈ ಹಿಂದೆ ಪ್ರತಿ ಕೆಜಿಗೆ ₹10ರಿಂದ ₹50ರವರೆಗೆ ಮಾರಾಟವಾಗುತ್ತಿತ್ತು. ಹವಾಮಾನ ವೈಪರೀತ್ಯ ಹಾಗೂ ನುಗ್ಗೆಕಾಯಿ ಬೆಳೆ ಕಡಿಮೆಯಾಗಿರುವುದರಿಂದ ಇದೀಗ ಮಾರುಕಟ್ಟೆಯಲ್ಲಿ ಪ್ರತಿ ಕೆಜಿ ನುಗ್ಗೆಕಾಯಿಗೆ ₹600ರಿಂದ ₹700 ಬೆಲೆ ಇದೆ. 

ಬೆಂಗಳೂರಿನ ಹಾಪ್ ಕಾಮ್ಸ್, ಯಶವಂತಪುರ ಎಪಿಎಂಸಿ, ಮೈಸೂರು, ಹುಬ್ಬಳ್ಳಿ, ದಾವಣಗೆರೆ ಎಲ್ಲೆಡೆ ಒಂದು ಕಿಲೋ ನುಗ್ಗೆಕಾಯಿಗೆ ₹600–₹750 ರೂ.ವರೆಗೂ ಧಾರಣೆ ಏರಿಕೆಯಾಗಿದೆ. ಕಳೆದ ವರ್ಷ ಇದೇ ಸಮಯಕ್ಕೆ ₹120–₹180 ಇದ್ದ ಬೆಲೆ ಈ ಬಾರಿ ಐದರಿಂದ ಆರು ಪಟ್ಟು ಜಿಗಿದಿದೆ!

ರೈತರು ಹೆಚ್ಚಾಗಿ ನುಗ್ಗೆಕಾಯಿ ಬೆಳೆದಿಲ್ಲ. ಕೇವಲ ಮನೆ ಮುಂದೆ ಇರುವ ಮರದಿಂದಲೇ ನುಗ್ಗೆಕಾಯಿ ತಂದು ಮಾರಾಟ ಮಾಡುತ್ತಿರುವವರು, ಅಧಿಕ ಲಾಭ ಪಡೆಯುತ್ತಿದ್ದಾರೆ. ನುಗ್ಗೆಕಾಯಿ ಬೇಡಿಕೆ ಹೆಚ್ಚಾಗಿದೆ. 15 ದಿನಗಳಿಂದ ಹವಾಮಾನ ವೈಪರೀತ್ಯ ಉಂಟಾಗಿರುವುದರಿಂದ ಚಳಿ, ಗಾಳಿ, ಮಳೆ ಹೆಚ್ಚಾಗಿದೆ. ತರಕಾರಿ ಇಳುವರಿ ಕಡಿಮೆ ಆಗಿದೆ. ಕಟಾವಿಗೆ ಬಂದ ತರಕಾರಿಗಳು ನೆಲಕಚ್ಚಿವೆ. ನುಗ್ಗೆಕಾಯಿ ಬೆಳೆಯುವ ರೈತರು ಕಡಿಮೆ ಇದ್ದಾರೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ಯಾವ ತರಕಾರಿಗೆ ಬೆಲೆ ಇರುತ್ತದೆಯೋ ಅದೇ ತರಕಾರಿಗಳನ್ನು ರೈತರು ಬೆಳೆಯುತ್ತಾರೆ. ಆ ಸಂದರ್ಭದಲ್ಲಿ ಬೆಲೆ ಸಿಗುವುದಿಲ್ಲ. ಇದರಿಂದ ರೈತರು ಸಂಕಷ್ಟಕ್ಕೆ ಸಿಲುಕುತ್ತಾರೆ. ಸರ್ಕಾರ ತರಕಾರಿಗಳಿಗೆ ವೈಜ್ಞಾನಿಕ ಬೆಂಬಲ ಬೆಲೆ ನಿಗದಿ ಮಾಡಬೇಕು. ದಲ್ಲಾಳಿಗಳ ಮೂಲಕ ಮಾರಾಟ ಮಾಡದೇ ರೈತರೇ ನೇರವಾಗಿ ಮಾರಾಟ ಮಾಡಿದರೆ ರೈತರಿಗೆ ಲಾಭ ಸಿಗುತ್ತದೆ.

ಅಂತೆಯೇ ಬಾಗೇಪಲ್ಲಿ ಕೃಷಿ ಉತ್ಪನ್ನ ಮಾರುಕಟ್ಟೆಗೆ ಪ್ರತಿದಿನ 2 ಕ್ವಿಂಟಲ್‍ನಷ್ಟು ನುಗ್ಗೆಕಾಯಿಯನ್ನು ರೈತರು ತಂದು ಮಾರಾಟ ಮಾಡುತ್ತಿದ್ದಾರೆ. ಅದೂ ಕೂಡ ತಮ್ಮ ಮನೆ ಮತ್ತು ತೋಟಗಳಲ್ಲಿ ಬೆಳೆದಿರುವುದನ್ನು ತಂದು ಮಾರುಕಟ್ಟೆಯಲ್ಲಿ ಮಾರಾಟ ಮಾಡಿ ಲಾಭ ಗಳಿಸುತ್ತಿದ್ದಾರೆ.

ಕೊಪ್ಪಳ ಜಿಲ್ಲೆಯ ನುಗ್ಗೆಕಾಯಿ ಬೆಳೆಗಾರ ಬಸಯ್ಯ ಈ ದಿನ.ಕಾಮ್‌ನೊಂದಿಗೆ ಮಾತನಾಡಿ, “ನಾವು ಈಗಾಗಲೇ ನುಗ್ಗೆಯಿಂದ ಹಲವು ರೀತಿಯ ಉತ್ಪನ್ನಗಳನ್ನು ತಯಾರಿಸುತ್ತಿದ್ದೇವೆ. ಅವುಗಳನ್ನು ವಿದೇಶಗಳಿಗೂ ಸರಬರಾಜು ಮಾಡುತ್ತೇವೆ. ಪ್ರಸ್ತುತ ನುಗ್ಗೆಕಾಯಿ ಬೆಲೆ ಹೆಚ್ಚಳವಾಗಿದೆ. ಆದರೆ ನಾನು ನುಗ್ಗೆಕಾಯಿ ಮಾರಾಟ ಮಾಡುವುದಿಲ್ಲ, ಬದಲಿಗೆ ಅದರ ಬೀಜಗಳನ್ನು ಎಣ್ಣೆ ತಯಾರಿಕೆಗೆ ಬಳಸುತ್ತೇವೆ” ಎಂದು ತಿಳಿಸಿದರು.

ನುಗ್ಗೆಕಾಯಿ ಬೆಲೆ ಏಕೆ ವಿಪರೀತ ಏರಿಕೆ?

ಈ ವರ್ಷ ಮುಂಗಾರು ತಡವಾಗಿ ಆರಂಭವಾದರೂ ಸೆಪ್ಟೆಂಬರ್-ಅಕ್ಟೋಬರ್‌ನಲ್ಲಿ ಭಾರೀ ಮಳೆ ಸುರಿಯಿತು. ತುಮಕೂರು, ಚಿತ್ರದುರ್ಗ, ದಾವಣಗೆರೆ, ಚಿಕ್ಕಬಳ್ಳಾಪುರ, ಕೋಲಾರ ಜಿಲ್ಲೆಗಳಲ್ಲಿ ಬೆಳೆಯುವ ನುಗ್ಗೆಕಾಯಿ ಬೆಳೆಯ ಹೂವು-ಕಾಯಿ ಉದುರಿ ಹೋಗಿ, ಕಾಯಿ ಕೊಳೆತು ಹಾಳಾಯಿತು. ಬಳಿಕ ನವೆಂಬರ್‌ನಿಂದ ಆರಂಭವಾದ ತೀವ್ರ ಚಳಿಯಿಂದ ಉಳಿದ ಬೆಳೆಯ ಮೇಲೆ ʼಥ್ರಿಪ್ಸ್‌ʼ ಎಂಬ ಕೀಟದಿಂದ ಉಂಟಾದ ದಾಳಿಗೆ ಕೊಳೆ ರೋಗ ಆವರಿಸಿದೆ. ಇದರಿಂದಾಗಿ ಬೆಳೆ ಇಳುವರಿಯಿಂದಾಗಿ ಶೇ.70ರಿಂದ 80ರಷ್ಟು ಕುಸಿತ ಉಂಟಾಗಿದೆ.

ಕೃಷಿ ಇಲಾಖೆಯ ಪ್ರಾಥಮಿಕ ಅಂದಾಜು ಪ್ರಕಾರ ಈ ಬಾರಿ ರಾಜ್ಯದಲ್ಲಿ ಸುಮಾರು 1.8–2 ಲಕ್ಷ ಟನ್ ಮಾತ್ರ ನುಗ್ಗೆಕಾಯಿ ಉತ್ಪಾದನೆಯಾಗುತ್ತಿದೆ. ಕಳೆದ ವರ್ಷ 6–7 ಲಕ್ಷ ಟನ್ ಇತ್ತು. ಈ ಬಾರಿ 2 ಲಕ್ಷ ಟನ್‌ಗೆ ಇಳಿದಿದೆ. ಇದರಿಂದ ಆದ್ದರಿಂದ ಈ ಬಾ ಮಾರುಕಟ್ಟೆಗೆ ಬರುವ ಪ್ರಮಾಣವೇ ಬಹಳ ಕಡಿಮೆಯಾಗಿದೆ.

ನುಗ್ಗೆಕಾಯಿಯ ನೈಜ ವೈಜ್ಞಾನಿಕ ಗುಣಗಳು

ನುಗ್ಗೆಕಾಯಿ ನಿಜವಾಗಿಯೂ ‘ಸೂಪರ್‌ಫುಡ್’ ಎಂದೇ ಹೇಳಬಹುದು. ಅದರ ಎಲೆಗಳು ಕಾರ್ಬೊಹೈಡ್ರೇಟ್‌ಗಳು, ಪ್ರೋಟೀನ್‌ಗಳು, ಫ್ಯಾಟ್‌ಗಳು, ಕ್ಯಾರೋಟಿನಾಯ್ಡ್‌ಗಳು, ವಿಟಮಿನ್ A & E, ಪೊಟ್ಯಾಶಿಯಂ, ಕ್ಯಾಲ್ಸಿಯಂ, ಐರನ್ ಮತ್ತು ಮೆಗ್ನೀಷಿಯಂನಿಂದ ಸಂಪದ್ಭರಿತವಾಗಿವೆ. ಫ್ಲ್ಯಾವೊನಾಯ್ಡ್‌ಗಳು, ಫೀನಾಲಿಕ್ ಕಂಪೌಂಡ್‌ಗಳು ಮತ್ತು ಗ್ಲೂಕೋಸಿನೋಲೇಟ್‌ಗಳಂತಹ ಫೈಟೋಕೆಮಿಕಲ್‌ಗಳು ಅಂಟಿಆಕ್ಸಿಡೆಂಟ್ ಗುಣಗಳನ್ನು ನೀಡುತ್ತವೆ. ಅಧ್ಯಯನಗಳು ತೋರುವಂತೆ, ನುಗ್ಗೆಕಾಯಿ ಅನಾರೋಗ್ಯವನ್ನು ತಡೆಯುವಲ್ಲಿ ಸಹಾಯ ಮಾಡುತ್ತದೆ. ವಿಶೇಷವಾಗಿ ಮಕ್ಕಳಲ್ಲಿ ಅತ್ಯದ್ಭುತ ಕಾರ್ಯ ಮಾಡುತ್ತದೆ.

ನುಗ್ಗೆ ಮರದ ಪ್ರಮುಖ ಔಷಧೀಯ ಗುಣಗಳು ಮತ್ತು ಉಪಯೋಗಗಳು

ರೋಗನಿರೋಧಕ ಶಕ್ತಿ ಮತ್ತು ಉತ್ಕರ್ಷಣ ನಿರೋಧಕ ರಕ್ಷಣೆ, ಹೃದಯದ ಆರೋಗ್ಯ ಮತ್ತು ಕೊಲೆಸ್ಟ್ರಾಲ್ ನಿಯಂತ್ರಣ, ರಕ್ತದಲ್ಲಿನ ಸಕ್ಕರೆ ಸಮತೋಲನ ಮತ್ತು ಚಯಾಪಚಯ ಶಕ್ತಿ, ಮೂಳೆ, ರಕ್ತ ಮತ್ತು ಸೂಕ್ಷ್ಮ ಪೋಷಕಾಂಶಗಳ ಪೋಷಣೆ, ಜೀರ್ಣಕ್ರಿಯೆಗೆ ಅನುಕೂಲ ಹಾಗೂ ಕರುಳಿನ ಆರೋಗ್ಯಕ್ಕೂ ಯೋಗ್ಯವಾಗಿದೆ.

ಅತ್ಯಂತ ಪೌಷ್ಟಿಕಾಂಶ ಹೊಂದಿರುವ ಈ ಮರದ ಎಲೆಗಳಲ್ಲಿ ಕ್ಯಾರೆಟ್‌ಗಿಂತ 4 ಪಟ್ಟು ವಿಟಮಿನ್ A ಅಂಶವನ್ನು ಕಾಣಬಹುದು. ಕಿತ್ತಳೆಗಿಂತ 7 ಪಟ್ಟು ವಿಟಮಿನ್ C, ಹಾಲಿಗಿಂತ 4 ಪಟ್ಟು ಕ್ಯಾಲ್ಸಿಯಂ, ಅರಳಿ ಹಣ್ಣಿಗಿಂತ 3 ಪಟ್ಟು ಪೊಟಾಸಿಯಂ, ಹಾಲು/ಮೊಟ್ಟೆಗಿಂತ ಹೆಚ್ಚು ಪ್ರೊಟೀನ್ ಕಂಡುಬರುತ್ತದೆ. ಈ ಹಿನ್ನೆಲೆಯಲ್ಲಿ ಕೊರತೆಯ ಪೋಷಣೆ ನಿವಾರಣೆಗೆ UNICEF, WHO ಕೂಡ ನುಗ್ಗೆಮರದ ಎಲೆ, ಹೂವು, ಕಾಯಿ, ಮತ್ತು ಅದರ ಬೇರುಗಳನ್ನೂ ಕೂಡ ಶಿಫಾರಸು ಮಾಡುತ್ತವೆ.

ಆಂಟಿ-ಆಕ್ಸಿಡೆಂಟ್ ಸಮೃದ್ಧ: ಕ್ವೆರ್ಸೆಟಿನ್, ಕ್ಲೋರೊಜೆನಿಕ್ ಆಮ್ಲ, ಜೀಯಾಜಾಂಥಿನ್, ಬೀಟಾ-ಕ್ಯಾರೋಟೀನ್, 46ಕ್ಕೂ ಹೆಚ್ಚು ಆಂಟಿ-ಆಕ್ಸಿಡೆಂಟ್‌ಗಳಿವೆ. ಪ್ರೀ ರಾಡಿಕಲ್‌ಗಳ ಹಾನಿ ತಡೆಗಟ್ಟಿ ಕ್ಯಾನ್ಸರ್, ಹೃದ್ರೋಗ, ವಯಸ್ಸಾದ ಲಕ್ಷಣಗಳನ್ನು ತಡೆಯುತ್ತದೆ.

ಆಂಟಿ-ಇನ್‌ಫ್ಲಮೇಟರಿ(ಉರಿಯೂತ ನಿವಾರಕ): ಐಸೊಥಿಯೋಸೈನೇಟ್ ಸಂಯುಕ್ತಗಳು ಜಾಯಿಂಟ್ ನೋವು, ಸಂಧಿವಾತ(arthritis), ಉಸಿರಾಟದ ತೊಂದರೆಗಳಲ್ಲಿ ಪರಿಣಾಮಕಾರಿಯಾಗಿ ಕೆಲಸ ಮಾಡುತ್ತವೆ.

ರಕ್ತದಲ್ಲಿನ ಸಕ್ಕರೆ ಕಡಿಮೆ ಮಾಡುತ್ತದೆ: ಮಧುಮೇಹಿಗಳಲ್ಲಿ ಆಹಾರ ತಿನ್ನುವ ಮೊದಲು ಸಕ್ಕರೆ ಮತ್ತು HbA1c ಅಂಶವನ್ನು ಗಣನೀಯವಾಗಿ ಕಡಿಮೆ ಮಾಡುತ್ತದೆಂದು 2019–2023ರ ಸಂಶೋಧನೆಗಳು ತೋರಿಸಿವೆ.

ಕೆಟ್ಟ ಕೊಲೆಸ್ಟ್ರಾಲ್ ಕಡಿಮೆಗೊಳಿಸುವ ಮೂಲಕ ಹೃದಯದ ಆರೋಗ್ಯ ಕಾಪಾಡುತ್ತದೆ. ಪೊಟಾಸಿಯಂ ಮತ್ತು ಇತರ ಸಂಯುಕ್ತಗಳಿಂದ ರಕ್ತದೊತ್ತಡ ನಿಯಂತ್ರಣ ಮಾಡುತ್ತದೆ. ಟಾಕ್ಸಿನ್‌ಗಳನ್ನು ಹೊರಹಾಕಿ ಲಿವರ್(ಯಕೃತ್) ಆರೋಗ್ಯವನ್ನು ಕಾಪಾಡುತ್ತದೆ. ವಿಟಮಿನ್ C, ಜ಼ಿಂಕ್, ಆಂಟಿ-ಬ್ಯಾಕ್ಟೀರಿಯಲ್ ಗುಣಗಳಿಂದ ಇನ್‌ಫೆಕ್ಷನ್‌ಗಳ ವಿರುದ್ಧ ಹೋರಾಡಲು ರೋಗನಿರೋಧಕ ಶಕ್ತಿ ಹೆಚ್ಚಿಸುತ್ತದೆ. ಹೆಚ್ಚಿನ ಕಬ್ಬಿಣ ಮತ್ತು ಫೋಲಿಕ್ ಆಮ್ಲದಿಂದ ಹಿಮೋಗ್ಲೋಬಿನ್(ರಕ್ತದ ಅಂಶ) ಹೆಚ್ಚಿಸುತ್ತದೆ. ನುಗ್ಗೆಕಾಯಿ ಬೀಜದ ಎಣ್ಣೆ(Ben oil)ಯಲ್ಲಿ ತ್ವಚೆಯ ಉರಿಯೂತ, ಮೊಡವೆ, ಗಾಯಗಳನ್ನು ಗುಣಪಡಿಸುವ ಗುಣ ಹೊಂದಿದೆ. ಅಲ್ಲದೆ ಕೂದಲಿಗೆ ಪೌಷ್ಟಿಕತೆ ನೀಡುವುದರಿಂದ ಕೂದಲಿನ ಆರೋಗ್ಯವನ್ನೂ ಸುಧಾರಿಸಿಕೊಳ್ಳಬಹುದು.

ಆಹಾರ ಪದ್ದತಿಯಲ್ಲಿ ನುಗ್ಗೆ ಉಪಯೋಗ

ನುಗ್ಗೆ ಸೊಪ್ಪಿನ ಸಾರು/ಚಟ್ನಿ ಮಾಡುವುದರಿಂದ ಕಣ್ಣಿನ ಆರೋಗ್ಯ ಮತ್ತು ರೋಗನಿರೋಧಕ ಶಕ್ತಿಯನ್ನು ಬಲಪಡಿಸಿಕೊಳ್ಳಬಹುದು. ನುಗ್ಗೆಕಾಯಿ ಸಾಂಬಾರು ಸೇವಿಸುವುದರಿಂದ ಜೀರ್ಣಕ್ರಿಯೆಯಲ್ಲಿ ಉತ್ತಮವಾದ ಪಾತ್ರ ವಹಿಸುತ್ತದೆ. ಎಲೆ ಪುಡಿ ಬಳಕೆಯಿಂದ ಮಧುಮೇಹ, ಒತ್ತಡ, ಕೀಲು ನೋವಿನಂತಹ ರೋಗಗಳನ್ನು ನಿವಾರಿಸಿಕೊಳ್ಳಬಹುದು ಮತ್ತು ಇಂತಹ ರೋಗಗಳು ಬರದಂತೆ ತಡೆಯಬಹುದು. ನುಗ್ಗೆಕಾಯಿ ಬೀಜದ ಪುಡಿಯನ್ನು ಗರ್ಭಿಣಿಯರು ಸೇವಿಸುವುದರಿಂದ ಎದೆಹಾಲು ಹೆಚ್ಚಿಸಲು ಅನುಕೂಲ ಮಾಡುತ್ತದೆ.

ಭಾರತದಲ್ಲಿ ನಡೆದ ಪ್ರಮುಖ ಅಧ್ಯಯನಗಳು

2015ರಲ್ಲಿ ತಮಿಳುನಾಡಿನಲ್ಲಿ ನಡೆಸಿರುವ ಅಧ್ಯಯನದ ಪ್ರಕಾರ ಗರ್ಭಿಣಿಯರಿಗೆ ದಿನಕ್ಕೆ 7 ಗ್ರಾಂ ನುಗ್ಗೆ ಎಲೆ ಪುಡಿ ನೀಡಿದ ಬಳಿಕ ಮಗುವಿನ ಜನನವಾದಾಗ ಅದರ ತೂಕ 300 ಗ್ರಾಂ ಹೆಚ್ಚಳವಾಗಿದ್ದನ್ನು ದೃಢಪಡಿಸಿದೆ.

ಇದನ್ನೂ ಓದಿದ್ದೀರಾ? ʼಕೂಸಿನ ಮನೆʼ ಆರೈಕೆದಾರರ ಗೌರವಧನಕ್ಕೆ ಕೇಂದ್ರ ಕತ್ತರಿ: ಮನರೇಗಾ ಕಾರ್ಮಿಕರ ಅನ್ನ ಕಸಿಯುವ ಹುನ್ನಾರವೇ?

2018ರಂದು ರಾಜಸ್ಥಾನದಲ್ಲಿ ನಡೆಸಿದ ಅಧ್ಯಯನದ ಪ್ರಕಾರ HIV ರೋಗಿಗಳಿಗೆ 20 ಗ್ರಾಂ ಎಲೆ ಪುಡಿ ನೀಡಿದ ಬಳಿಕ CD4 ಕೌಂಟ್ ಹೆಚ್ಚಳವಾಗಿರುವುದು ಕಂಡುಬಂದಿದೆ.

ನುಗ್ಗೆಕಾಯಿಯ ಎಲೆಗಳು ನಿಜವಾಗಿಯೂ ‘ಮಿರಾಕಲ್ ಟ್ರೀ’ ಎಂದು ವೈಜ್ಞಾನಿಕವಾಗಿ ಸಾಬೀತಾಗಿದೆ. ಹೆಸರಿಗೆ ತಕ್ಕಂತೆ ಅನಾರೋಗ್ಯ ಹೆಚ್ಚಿರುವ ದೇಶಗಳಲ್ಲಿ ಇದರ ಉಪಯೋಗ ಹೇರಳವಾಗಿದೆ. ಆದರೆ ಎಲ್ಲಾ ಕಾಯಿಲೆಗೂ ಇದೊಂದೇ ಮದ್ದು ಅಲ್ಲ, ಸಮತೋಲಿತ ಆಹಾರದ ಭಾಗವಾಗಿ ಬಳಸಿದಾಗ ನುಗ್ಗೆಕಾಯಿ ಪ್ರಯೋಜನ ಅಪಾರ.

ಹೀಗೆ ನುಗ್ಗೆಕಾಯಿ, ಎಲೆ, ಪುಡಿ ಎಲ್ಲವೂ ಔಷಧೀಯ ಗುಣ ಹೊಂದಿರುವುದರಿಂದ, ಜನರಲ್ಲಿ ಆರೋಗ್ಯ ಕುರಿತ ಕಾಳಜಿ ಹೆಚ್ಚಾಗಿರುವುದರಿಂದ ನುಗ್ಗೆಕಾಯಿ ಬೇಡಿಕೆ ಹೆಚ್ಚಾಗಿದೆ. ಆ ಬೇಡಿಕೆಗೆ ತಕ್ಕಂತೆ ಸರಬರಾಜು ಇಲ್ಲದಿರುವುದರಿಂದ ಬೆಲೆ ಏರಿಕೆಯಾಗಿದೆ. ಈ ಬೆಲೆ ಏರಿಕೆ, ಬೆಳೆದ ರೈತರಿಗೆ ಸಿಕ್ಕರೆ, ಅದು ಇನ್ನಷ್ಟು ಬೆಳೆಗೆ, ಆ ಮೂಲಕ ಆರೋಗ್ಯಕರ ಸಮಾಜಕ್ಕೆ ಕಾರಣವಾಗಬಹುದು, ಅಲ್ಲವೇ?

WhatsApp Image 2025 07 12 at 17.38.34 e1752322718567
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ ರಾಷ್ಟ್ರೀಯವಾದ?

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ...

18 ಸಾವಿರ ಕೋಟಿ ರೂ. ದಾಟಿದ ದೇಶದ ಕ್ರೀಡಾ ಅರ್ಥವ್ಯವಸ್ಥೆ; ಕ್ರಿಕೆಟ್ ದರ್ಬಾರಿನಲ್ಲಿ ಸೊರಗಿದ ಇತರ ಆಟಗಳು

ಐಪಿಎಲ್‌ನಲ್ಲಿ ಕೇವಲ ಬೆಂಚ್ ಕಾಯುವ ಸಾಮಾನ್ಯ ಕ್ರಿಕೆಟ್ ಆಟಗಾರನೊಬ್ಬ ಕೋಟ್ಯಾಧಿಪತಿಯಾಗಿ ಐಷಾರಾಮಿ...

ದಾವಣಗೆರೆ | ಸಮರ್ಥ್‌ ನಾಮಪತ್ರ ಸಲ್ಲಿಕೆ; ದೂರ ಉಳಿದ ರಾಜ್ಯ ಮುಸ್ಲಿಂ ಮುಖಂಡರು

ಡಿ.ಕೆ ಶಿವಕುಮಾರ್ ಮತ್ತು ಸಿದ್ದರಾಮಯ್ಯ ಅವರು ದಾವಣಗೆರೆ ಮುಸ್ಲಿಂ ಕಾಂಗ್ರೆಸ್‌ ಟಿಕೆಟ್...