ಇದು ಆಕಸ್ಮಿಕವಲ್ಲ, ಮಹಾ ಷಡ್ಯಂತ್ರದ ಭಾಗ

Date:

ಮಹಾರಾಷ್ಟ್ರದ ಭೂಷಣ ರಾಮಕೃಷ್ಣ ಗವಾಯಿ ಅವರು 2025 ರ ಮೇ 14ರಂದು ಸುಪ್ರೀಂ ಕೋರ್ಟಿನ ಮುಖ್ಯ ನ್ಯಾಯಮೂರ್ತಿ ಯಾಗಿ ಪ್ರಮಾಣ ವಚನವನ್ನು ಸ್ವೀಕರಿಸಿ ‘ಜೈ ಭೀಮ್’ ಎಂದು ಘೋಷಿಸಿದಾಗಲೇ ಅವರು ಸಂಘ ಪರಿವಾರದ ಫ್ಯಾಸಿಸ್ಟರ ಉರಿಗಣ್ಣಿಗೆ ಗುರಿಯಾದರು.

ಇದು ಆಕಸ್ಮಿಕವಲ್ಲ, ಮತಿಗೆಟ್ಟ ವ್ಯಕ್ತಿಯೊಬ್ಬನ ದುಸ್ಸಾಹಸ ಮಾತ್ರವಲ್ಲ. ಇದು ಭಾರತದ ಸಂವಿಧಾನವನ್ನು ಬುಡಮೇಲು ಮಾಡಿ, ಪ್ರಜಾಪ್ರಭುತ್ವವನ್ನು ಹೂತು ಹಾಕಿ ಮನುವಾದಿ ಸನಾತನ ಹಿಂದು ರಾಷ್ಟ್ರವನ್ನು ನಿರ್ಮಿಸುವ ಮಹಾ ಸಂಚಿನ ಪ್ರಯೋಗಗಳಲ್ಲಿ ಇದೊಂದು. ಅತಿಶಯೋಕ್ತಿಯಲ್ಲ. ಸರ್ವೋಚ್ಚ ನ್ಯಾಯಾಲಯದ ಮುಖ್ಯ ನ್ಯಾಯಮೂರ್ತಿ ಬಿ ಆರ್ ಗವಾಯಿ ಅವರ ಮೇಲೆ ಸನಾತನಿ ಎಂದು ಹೇಳಿಕೊಂಡ ವಕೀಲನೊಬ್ಬ ಚಪ್ಪಲಿ ಎಸೆದ ಘಟನೆಯನ್ನು ಕ್ಷುಲ್ಲಕ ಎಂದು ಮರೆತು ಬಿಡುವಂಥದಲ್ಲ. ನ್ಯಾಯಮೂರ್ತಿಗಳೇನೋ ಅವನನ್ನು ಕ್ಷಮಿಸಿದ್ದಾರೆ. ಆದರೆ ಆತ ಕ್ಷಮಾರ್ಹನಲ್ಲ.

ಮಹಾರಾಷ್ಟ್ರದ ಭೂಷಣ ರಾಮಕೃಷ್ಣ ಗವಾಯಿ ಅವರು 2025 ರ ಮೇ 14ರಂದು ಸುಪ್ರೀಂ ಕೋರ್ಟಿನ ಮುಖ್ಯ ನ್ಯಾಯಮೂರ್ತಿಯಾಗಿ ಪ್ರಮಾಣ ವಚನವನ್ನು ಸ್ವೀಕರಿಸಿ ‘ಜೈ ಭೀಮ್’ ಎಂದು ಘೋಷಿಸಿದಾಗಲೇ ಅವರು ಸಂಘ ಪರಿವಾರದ ಫ್ಯಾಸಿಸ್ಟರ ಉರಿಗಣ್ಣಿಗೆ ಗುರಿಯಾದರು.

ಚುನಾವಣಾ ಆಯೋಗ, ರಿಜರ್ವ್ ಬ್ಯಾಂಕ್, ಯೋಜನಾ ಆಯೋಗ ಹೀಗೆ ಎಲ್ಲ ಸಂವಿಧಾನಿಕ ಸಂಸ್ಥೆಗಳ ಸ್ವಾಯತ್ತತೆಯನ್ನು ಸರ್ವನಾಶ ಮಾಡಿ ಬುಗುರಿಯಂತೆ ಆಡಿಸುತ್ತಿರುವ ನಾಗಪುರದ ಸಂವಿಧಾನೇತರ ಸಂಸ್ಥೆಯ ಸೂತ್ರದ ಗೊಂಬೆಯಾದ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರ ಮುಖ್ಯ ನ್ಯಾಯಮೂರ್ತಿ ಬಿ ಆರ್ ಗವಾಯಿ ಅವರ ಮೇಲೆ ನಿಗಾ ವಹಿಸಿತು. ಅಕ್ರಮ ಬುಲ್ಡೋಜರ್ ನ್ಯಾಯದ ಬಗ್ಗೆ ನೀಡಿದ ತೀರ್ಪು, ಕಾಶ್ಮೀರಕ್ಕೆ ರಾಜ್ಯದ ಸ್ಥಾನ ಮಾನ ನೀಡುವ ಆದೇಶ,ಚುನಾವಣಾ ಬಾಂಡ್ ಗಳ ನಿಷೇಧ, ಇವೆಲ್ಲವುಗಳು ಒಂದು ಕಾರಣವಾದರೆ, ದಲಿತ ಸಮುದಾಯದಿಂದ ಬಂದು ಬೌದ್ಧ ಧರ್ಮ ಸ್ವೀಕರಿಸಿದ ನ್ಯಾಯಾಂಗದ ಉನ್ನತ ಸ್ಥಾನವನ್ನು ಅಲಂಕರಿಸಿದ್ದನ್ನು ಸಹಿಸಲಾಗಲಿಲ್ಲ. ಈ ಅಸಹನೆ ನ್ಯಾಯಮೂರ್ತಿ ಗವಾಯಿಯವರು ಅಧಿಕಾರ ಸ್ವೀಕರಿಸಿ ತಮ್ಮ ಸ್ವಂತ ರಾಜ್ಯ ಮಹಾರಾಷ್ಟ್ರಕ್ಕೆ ಹೋದಾಗ ಸ್ಪೋಟವಾಯಿತು. ಮುಂಬಯಿನಲ್ಲಿ ಗವಾಯಿ ಅವರನ್ನು ಸ್ವಾಗತಿಸಲು ಶಿಷ್ಟಾಚಾರದ ಪ್ರಕಾರ ರಾಜ್ಯದ ಮುಖ್ಯಮಂತ್ರಿ, ಬರಬೇಕಾಗಿತ್ತು, ಬರಲಿಲ್ಲ. ಬೇರೆ ಮಂತ್ರಿಗಳು, ಬರಲಿಲ್ಲ. ರಾಜ್ಯದ ಮುಖ್ಯ ಕಾರ್ಯದರ್ಶಿ ಬರಲಿಲ್ಲ. ಪಾಲಿಕೆಯ ಮೇಯರ್ ಬರಲಿಲ್ಲ. ರಾಜ್ಯದ ಪೊಲೀಸ್ ವರಿಷ್ಟಾಧಿಕಾರಿ ಬರಲಿಲ್ಲ. ಆದರೂ ಇದನ್ನು ಗವಾಯಿಯವರು ಗಂಭೀರವಾಗಿ ಪರಿಗಣಿಸಲಿಲ್ಲ. ಇದರಿಂದಲೂ ನ್ಯಾಯಮೂರ್ತಿ ಗವಾಯಿಯವರನ್ನು ನಿಯಂತ್ರಣಕ್ಕೆ ತೆಗೆದುಕೊಳ್ಳಲು ಇನ್ನೊಂದು ಮಸಲತ್ತು ಮಾಡಿದರು. ಮಹಾರಾಷ್ಟ್ರದ ಅಮರಾವತಿಯಲ್ಲಿ ನಡೆಯಲಿದ್ದ ಆರ್ ಎಸ್ ಎಸ್ ನ ಕಾರ್ಯಕ್ರಮವೊಂದಕ್ಕೆ ಗವಾಯಿಯವರ ತಾಯಿಯವರನ್ನು ಮುಖ್ಯ ಅತಿಥಿಯಾಗಿ ಆಹ್ವಾನಿಸಿದರು. ಅವರು ಅಂಬೇಡ್ಕರ್ ವಾದಿಯಾದ ತಾವು ಆರ್ ಎಸ್ ಎಸ್ ಕಾರ್ಯಕ್ರಮಕ್ಕೆ ಬರುವುದಿಲ್ಲ ಎಂದು ಖಂಡ ತುಂಡವಾಗಿ ಹೇಳಿದರು. ಹೀಗೆ ಹಲವಾರು ಕಾರಣಗಳಿಂದಾಗಿ ಗವಾಯಿ ಅವರು ಮನುವಾದಿಗಳ ಕೋಪಕ್ಕೆ ಗುರಿಯಾದರು.

ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಬಿ ಆರ್ ಗವಾಯಿ ಅವರ ಮೇಲೆ ಚಪ್ಪಲಿ ಎಸೆದವ ಬರೀ ವ್ಯಕ್ತಿಯಲ್ಲ. ಅವನ ಹಿಂದೆ ಒಂದು ಸಿದ್ದಾಂತವಿದೆ. ಅದು ಗಾಂಧೀಜಿಯನ್ನು ಬಲಿ ತೆಗೆದುಕೊಂಡ ಸಿದ್ದಾಂತ. ತಳ ಸಮುದಾಯದಿಂದ ಬಂದವರು ನ್ಯಾಯಾಂಗದ ಉನ್ನತ ಸ್ಥಾನಕ್ಕೆ ಹೋಗುವುದನ್ನು ಅದು ಸಹಿಸುವುದಿಲ್ಲ. ನ್ಯಾ ಮೂ ಗವಾಯಿ ಅವರ ತಾಯಿ ಕೋಮುವಾದಿಗಳ ಕಾರ್ಯಕ್ರಮಕ್ಕೆ ಹೋಗಲು ತಿರಸ್ಕರಿಸಿದ್ದು ಕೂಡ ಸನಾತನಿಗಳ ಈ ಆಕ್ರೋಶಕ್ಕೆ ಕಾರಣವಿರಬಹುದು. ಬರಲಿರುವ ದಿನಗಳು ಇನ್ನೂ ಅಪಾಯಕಾರಿ ಇರಬಹುದು. ನಿರಂತರ ಎಚ್ಚರ ಇಂದಿನ ಅನಿವಾರ್ಯತೆ.

ಗಾಂಧೀಜಿಯವರ ಹತ್ಯೆ ನಡೆದಾಗ ದೇಶದ ಕೆಲವೆಡೆ ಸಿಹಿ ಹಂಚಿದರು. ಈಗ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಬಿ ಆರ್ ಗವಾಯಿ ಅವರ ಮೇಲೆ ಚಪ್ಪಲಿ ತೂರಿದ ಘಟನೆಯ ಬಗ್ಗೆ ಅದನ್ನು ಸಮರ್ಥಿಸುವ ಗೋಡ್ಸೆ ಮರಿಗಳು ಸಾಮಾಜಿಕ ಜಾಲತಾಣಗಳಲ್ಲಿ ನಂಜು ಕಾರುತ್ತಿದ್ದಾರೆ. ನ್ಯಾ. ಗವಾಯಿ ಅವರು ಹಿಂದೂ ದೇವರನ್ನು ಅವಮಾನಿಸಿದ್ದಾರೆ ಎಂದು ಸುಳ್ಳು ಸುದ್ದಿಯನ್ನು ಹರಡಿದ್ದಾರೆ. ಇದು ನಮ್ಮ ದೇಶದ ಇಂದಿನ ಪರಿಸ್ಥಿತಿ. ಕಳೆದ ನೂರು ವರ್ಷಗಳಲ್ಲಿ ಯಾವ ಪರಿ ಬ್ರೇನ್ ವಾಷ್ ಮಾಡಿದ್ದಾರೆ ಅಂದರೆ ಮನುಷ್ಯತ್ವದ ಜೀವ ಸೆಲೆಯನ್ನೇ ನಾಶ ಮಾಡಿದ್ದಾರೆ. ಸಹನೆ, ಸೌಹಾರ್ದ ಇರಬೇಕಾದ ಮಿದುಳಿಗೆ ವಿಷ ತುಂಬಿದ್ದಾರೆ. ಇದು ಸಂವಿಧಾನದ ಮತ್ತು ಪ್ರಜಾಪ್ರಭುತ್ವದ ವಿರುದ್ದ ನಡೆಯುತ್ತಿರುವ ಘನ ಘೋರ ಸಂಚಿನ ಮುನ್ಸೂಚನೆಯಾಗಿದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ಇದನ್ನೂ ಓದಿ ಅಂಬೇಡ್ಕರ್ ಒಬ್ಬ ಕೊಳಕು ಮನುಷ್ಯ..’; ನಾಲಗೆ ಹರಿಬಿಟ್ಟ ಮತ್ತೊಬ್ಬ ವಕೀಲ

ವಿಷಾದ ಪಡಬೇಕಾದ ಸಂಗತಿ ಅಂದರೆ ಇದನ್ನು ಸಮರ್ಥಿಸಿಕೊಳ್ಳಬೇಕಾದವರು ಹೆಚ್ಚಿನ ಸಂಖ್ಯೆಯಲ್ಲಿ ಸಮರ್ಥಿಸಿಲ್ಲ. ಆದರೆ ಬ್ರಾಹ್ಮಣೇತರ ಶೂದ್ರ ಸಮುದಾಯಗಳ ಭಕ್ತರೇ ಅಸಭ್ಯ ಭಾಷೆಯಲ್ಲಿ ಸಮರ್ಥಿಸಿದ್ದಾರೆ. ಇದನ್ನು ಯಾವ ಬೆಲೆ ತೆತ್ತಾದರೂ ವಿರೋಧಿಸಿ ನಮ್ಮ ಸಂವಿಧಾನ, ಬಹುತ್ವ ಭಾರತ, ಹಾಗೂ ಪ್ರಜಾಪ್ರಭುತ್ವಗಳನ್ನು ಉಳಿಸಿಕೊಳ್ಳಬೇಕಾಗಿದೆ. ಇದು ಎಷ್ಟು ವ್ಯವಸ್ಥಿತವಾಗಿದೆಯೆಂದರೆ ಚಪ್ಪಲಿ ತೂರಾಟದ ಘಟನೆ ನಡೆಯುತ್ತಲೇ ಸಾಮಾಜಿಕ ಜಾಲತಾಣದಲ್ಲಿ ಹಿಂದು ದೇವರಿಗೆ ಅವಮಾನ ಎಂಬ ವ್ಯಾಟ್ಸಪ್ ಯುನಿವರ್ಸಿಟಿಯ ಗೊಬ್ಬೆಲ್ಸ್ ಪ್ರಚಾರ ಆರಂಭವಾಗಿದೆ. ಸಂವಿಧಾನಿಕ ಸಂಸ್ಥೆಗಳನ್ನು ಒಂದೊಂದಾಗಿ ಮುಗಿಸಿ ಮನುವಾದಿ ಹಿಂದು ರಾಷ್ಟ್ರವನ್ನು ನಿರ್ಮಿಸುವ ಸಂಚಿನ ಮೊದಲ ಹೆಜ್ಜೆ ಇದು. ಕೊನೆಯದಾಗಿ ಚಪ್ಪಲಿ ತೂರಿದ್ದನ್ನು ಒಪ್ಪಿಕೊಂಡು ದೇವರ ಆದೇಶದಂತೆ ಚಪ್ಪಲಿ ಎಸೆದೆ ಎಂದು ಹೇಳಿದ್ದಾನೆ. ಇನ್ನು ಮುಂದೆ ಇಂಥ ವಿಕೃತ, ಕೋಮುವಾದಿ ದುಷ್ಟರಿಗೆ ಹಾದಿ, ಬೀದಿಯಲ್ಲಿ ಒದ್ದು ನಮಗೂ ದೇವರ ಆದೇಶವಾಗಿದೆ. ಅದಕ್ಕಾಗಿ ಒದ್ದೆವು ಎಂದು ಹೇಳುವ ದಿನಗಳು ಬಂದರೆ ಅಚ್ಚರಿ ಪಡಬೇಕಿಲ್ಲ.

sanathkumar
ಸನತ್ ಕುಮಾರ ಬೆಳಗಲಿ
+ posts

ಹಿರಿಯ ಪತ್ರಕರ್ತ, ಅಂಕಣಕಾರ

ಪೋಸ್ಟ್ ಹಂಚಿಕೊಳ್ಳಿ:

ಸನತ್ ಕುಮಾರ ಬೆಳಗಲಿ
ಸನತ್ ಕುಮಾರ ಬೆಳಗಲಿ
ಹಿರಿಯ ಪತ್ರಕರ್ತ, ಅಂಕಣಕಾರ

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಕೇಂದ್ರವನ್ನು ಟೀಕಿಸಿದ ಸಾಮಾಜಿಕ ಮಾಧ್ಯಮ ಖಾತೆಗಳು ಮಂಗಮಾಯ: ಉಳಿಯುವುದು ಬರೀ ಮೋದಿಮಯ!

ಹೀಗೆ ಮೋದಿ ಸರ್ಕಾರವನ್ನು ವಿರೋಧಿಸಿದವರ ಖಾತೆಗಳು ಸಾಮಾಜಿಕ ಮಾಧ್ಯಮಗಳಿಂದ ಅಳಿಸಿ ಕೊನೆಗೆ...

ಒಂದು ಕಡೆ ಖಾದ್ಯತೈಲ ಬೆಲೆ ಏರಿಕೆ; ಮತ್ತೊಂದು ಕಡೆ ಕುಸುಬೆ ಬೆಲೆ ಕುಸಿತದಿಂದ ರೈತರಿಗೆ ಹೊರೆ

ಖಾದ್ಯತೈಲ ಬೆಲೆ ಏರಿಕೆ ಗ್ರಾಹಕರ ಜೇಬಿಗೆ ಭಾರವಾದರೆ, ಕುಸುಬೆ ಬೆಲೆ ಕುಸಿತ...

ಡಾಲರ್ V/s ಯುವಾನ್: ಕೊಲ್ಲಿ ಯುದ್ಧ ಕರೆನ್ಸಿ ಯುದ್ಧವಾಗಿ ಮಾರ್ಪಾಡಾಗುತ್ತಿದೆಯೇ?

ಅಕಸ್ಮಾತ್ ಈ ಯುದ್ಧ ಮುಂದುವರೆದರೆ, ಕೆಲವು ದೇಶಗಳು ಡಾಲರ್ ಬದಲಿಗೆ ಯುವಾನ್...