ಅತಿ ಹೆಚ್ಚು ಅಸಮಾನತೆಯ ದೇಶಗಳಲ್ಲಿ ಭಾರತವೂ ಒಂದು: ಕೇವಲ 1% ಜನರಲ್ಲಿ ದೇಶದ 40% ಸಂಪತ್ತು

Date:

ಈ ವರದಿಯೇ ಹೇಳುವಂತೆ, ಸಂಘಟಿತ, ಜಾಗತಿಕವಾಗಿ ಪ್ರಯತ್ನಪಟ್ಟರೆ ಈ ಅಸಮಾನತೆಯನ್ನು ಸರಿದೂಗಿಸಬಹುದು. ಆದರೆ ಅಸಮಾನತೆ ಎಂಬುದು ಒಂದು ರಾಜಕೀಯ ಆಯ್ಕೆಯಾಗಿದೆ. ನಮ್ಮ ನೀತಿಗಳು, ಸಂಸ್ಥೆಗಳು ಮತ್ತು ಆಡಳಿತ ರಚನೆಗಳ ಪರಿಣಾಮದಿಂದಾಗಿ ಈ ಅಸಮಾನತೆ ಸೃಷ್ಟಿಯಾಗುತ್ತದೆ. "ಅಸಮಾನತೆಯನ್ನು ಕಡಿಮೆ ಮಾಡುವ ಸಾಧನಗಳಿವೆ. ಆದರೆ ರಾಜಕೀಯ ಇಚ್ಛಾಶಕ್ತಿಯೇ ಇದಕ್ಕೆ ಸವಾಲಾಗಿದೆ"

ವಿಶ್ವದಲ್ಲಿ ಅತಿ ಹೆಚ್ಚು ಅಸಮಾನತೆ ಹೊಂದಿರುವ ದೇಶಗಳಲ್ಲಿ ಭಾರತವೂ ಒಂದಾಗಿದೆ. ದೇಶದಲ್ಲಿ ಅಸಮಾನತೆ ಕಡಿಮೆಯಾಗುತ್ತಿರುವಂತೆ ಅಥವಾ ಯಾವುದೇ ಬದಲಾವಣೆ ಕಂಡುಬರುತ್ತಿಲ್ಲ ಎಂದು ಇತ್ತೀಚೆಗೆ ಬಿಡುಗಡೆಯಾದ ವಿಶ್ವ ಅಸಮಾನತೆ ವರದಿ 2026 ಹೇಳುತ್ತದೆ. ಹಾಗೆಯೇ ದೇಶದ ಕೇವಲ ಶೇಕಡ 1 ಜನರಲ್ಲಿ ದೇಶದ 40% ಸಂಪತ್ತಿದೆ ಎಂದೂ ವರದಿ ಉಲ್ಲೇಖಿಸಿದೆ.

ಅರ್ಥಶಾಸ್ತ್ರಜ್ಞರಾದ ಲ್ಯೂಕಸ್ ಚಾನ್ಸೆಲ್, ರಿಕಾರ್ಡೊ ಗೊಮೆಜ್-ಕ್ಯಾರೆರಾ, ರೊವೈಡಾ ಮೊಶ್ರಿಫ್ ಮತ್ತು ಥಾಮಸ್ ಪಿಕೆಟ್ಟಿ ಸಂಪಾದಿಸಿದ ವಿಶ್ವ ಅಸಮಾನತೆ ವರದಿ 2026 ಇತ್ತೀಚೆಗೆ ಬಿಡುಗಡೆಯಾಗಿದೆ. ಭಾರತ ಇಂದಿಗೂ ಅತಿ ಹೆಚ್ಚು ಆದಾಯ, ಸಂಪತ್ತು ಅಸಮಾನತೆ ಹೊಂದಿರುವ ದೇಶಗಳಲ್ಲಿ ಒಂದಾಗಿ ಉಳಿದಿದೆ ಎಂಬುದನ್ನು ಸ್ಪಷ್ಟಪಡಿಸುತ್ತದೆ.

ಇದನ್ನು ಓದಿದ್ದೀರಾ? ಭಾರತದಲ್ಲಿ ಆರ್ಥಿಕ ಅಸಮಾನತೆ ಹೆಚ್ಚಳ; ಬಡವರು ಮೇಲೇಳಲು ಆಗಬೇಕಾದ್ದು ಏನು?

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ವಿಶ್ವ ಅಸಮಾನತೆ ಪ್ರಯೋಗಾಲಯ ಬಿಡುಗಡೆ ಮಾಡಿದ ವರದಿ ಪ್ರಕಾರ ದೇಶದ 10% ಜನರು ರಾಷ್ಟ್ರೀಯ ಆದಾಯದ ಸುಮಾರು 58% ಆದಾಯವನ್ನು ಹೊಂದಿದ್ದಾರೆ. ಆದರೆ 50% ಜನರು ಕೇವಲ 15% ಆದಾಯವನ್ನು ಹೊಂದಿದ್ದಾರೆ. ಸಂಪತ್ತಿನ ಅಸಮಾನತೆ ಇನ್ನೂ ಹೆಚ್ಚಾಗಿದೆ. 10% ಶ್ರೀಮಂತರು ಒಟ್ಟು ಸಂಪತ್ತಿನ ಸುಮಾರು ಶೇ.65ರಷ್ಟು ಸಂಪತ್ತನ್ನು ಹೊಂದಿದ್ದಾರೆ. ಅದರಲ್ಲೂ ಬರೀ ಶೇ.1ರಷ್ಟು ಶ್ರೀಮಂತರ ಕೈಯಲ್ಲೇ ಶೇ.40ರಷ್ಟು ಸಂಪತ್ತಿದೆ!

ಇನ್ನು ವಿಶ್ವದಲ್ಲಿ ಆದಾಯ ಗಳಿಸುವವರಲ್ಲಿ ಶೇ.10ರಷ್ಟು ಮಂದಿ ಇತರ ಶೇ.90ರಷ್ಟು ಜನರ ಒಟ್ಟು ಸಂಪತ್ತಿಗಿಂತ ಹೆಚ್ಚು ಗಳಿಸುತ್ತಾರೆ. ವಿಶ್ವದ 60,000ಕ್ಕಿಂತ ಕಡಿಮೆ ಜನರು ವಿಶ್ವದ ಅರ್ಧದಷ್ಟು ಜನಸಂಖ್ಯೆಯ ಒಟ್ಟು ಸಂಪತ್ತಿಗಿಂತ ಮೂರು ಪಟ್ಟು ಹೆಚ್ಚು ಸಂಪತ್ತನ್ನು ನಿಯಂತ್ರಿಸುತ್ತಿದ್ದಾರೆ.

ಈ ವರದಿಯೇ ಹೇಳುವಂತೆ, ಸಂಘಟಿತ, ಜಾಗತಿಕವಾಗಿ ಪ್ರಯತ್ನಪಟ್ಟರೆ ಈ ಅಸಮಾನತೆಯನ್ನು ಸರಿದೂಗಿಸಬಹುದು. ಆದರೆ ಅಸಮಾನತೆ ಎಂಬುದು ಒಂದು ರಾಜಕೀಯ ಆಯ್ಕೆಯಾಗಿದೆ. ನಮ್ಮ ನೀತಿಗಳು, ಸಂಸ್ಥೆಗಳು ಮತ್ತು ಆಡಳಿತ ರಚನೆಗಳ ಪರಿಣಾಮದಿಂದಾಗಿ ಈ ಅಸಮಾನತೆ ಸೃಷ್ಟಿಯಾಗುತ್ತದೆ. “ಅಸಮಾನತೆಯನ್ನು ಕಡಿಮೆ ಮಾಡುವ ಸಾಧನಗಳಿವೆ. ಆದರೆ ರಾಜಕೀಯ ಇಚ್ಛಾಶಕ್ತಿಯೇ ಇದಕ್ಕೆ ಸವಾಲಾಗಿದೆ”

ವಿಭಜನೆ, ದುರ್ಬಲವಾದ ಪ್ರಜಾಪ್ರಭುತ್ವಗಳು ಮತ್ತು ಸುಧಾರಣೆಗೆ ತೋರದ ಆಸಕ್ತಿಯೇ ಅಸಮಾನತೆಯನ್ನು ಹೆಚ್ಚುತ್ತಿರುವುದು ಸ್ಪಷ್ಟವಾಗಿದೆ. ಸಂಪತ್ತಿನ ಮರುಹಂಚಿಕೆಯಾದರೆ, ತೆರಿಗೆಯನ್ನು ನ್ಯಾಯಯುತವಾಗಿ ಪಡೆದರೆ ಮತ್ತು ಖಾಸಗಿ ಬದಲಾಗಿ ಸರ್ಕಾರದ ಹೂಡಿಕೆಗೆ ಆದ್ಯತೆ ನೀಡಿದರೆ ಅಸಮಾನತೆ ಕಡಿಮೆಯಾಗುತ್ತದೆ ಎಂದು ವರದಿ ಸ್ಪಷ್ಟಪಡಿಸುತ್ತದೆ.

ಆದಾಯದಲ್ಲಿ ಮಹಿಳೆಯರ ಪಾಲು

ಇನ್ನು ವಿಶ್ವದಲ್ಲಿ ಆದಾಯದಲ್ಲಿ ಮಹಿಳೆಯರ ಪಾಲನ್ನು ನೀಡಿದಾಗ ಅದು ಇನ್ನೂ 1990ರಂತೆಯೇ ಶೇ.25ರಷ್ಟಿದೆ. “ಮಹಿಳೆಯರು ಪುರುಷರಿಗಿಂತ ಹೆಚ್ಚು ಕೆಲಸ ಮಾಡಿದರೂ ಕಡಿಮೆ ಆದಾಯವನ್ನು ಗಳಿಸುವ” ಲಿಂಗ ಅಸಮಾನತೆಯು ವಿಶ್ವದಾದ್ಯಂತ ಕಳವಳಕಾರಿಯಾಗಿದೆ. “ಪುರುಷರು ಒಂದು ಗಂಟೆಯಲ್ಲಿ ಎಷ್ಟು ಆದಾಯ ಗಳಿಸುತ್ತಾರೋ ಅದರ ಕೇವಲ ಶೇ.61ರಷ್ಟು ಆದಾಯವನ್ನು ಮಹಿಳೆಯರು ಪಡೆಯುತ್ತಿದ್ದಾರೆ. ಈ ಅಸಮಾನತೆಯು ಮಹಿಳೆಯರಿಗೆ ವೃತ್ತಿ ಅವಕಾಶವನ್ನೇ ತಡೆಹಿಡಿದಿದೆ.

ಇದನ್ನು ಓದಿದ್ದೀರಾ? ಮಾಧ್ಯಮ ರಂಗದ ಲಿಂಗ ಅಸಮಾನತೆಯ ಆಳ ಅಗಲ; ಪ್ರಶಸ್ತಿ ನೀಡಿಕೆಯಲ್ಲೂ ಅನಾವರಣ

ವಿಶ್ವದಲ್ಲಿ ಶಿಕ್ಷಣ, ಆರೋಗ್ಯ, ರಾಜಕೀಯ ಮತ್ತು ಆರ್ಥಿಕ ಕ್ಷೇತ್ರಗಳಲ್ಲಿ ಮಹಿಳೆಯರ ಪ್ರಗತಿ ಗಮನಾರ್ಹವಾದದ್ದು. ಇಂದು ಮಹಿಳೆಯರು ಬರೀ ಮನೆಗೆ ಸೀಮಿತವಾಗದೆ ಉದ್ಯಮಿಗಳಾಗಿ ಮತ್ತು ಕಾರ್ಪೊರೇಟ್ ವಲಯದ ಉನ್ನತ ಹುದ್ದೆಗಳನ್ನು ಅಲಂಕರಿಸುತ್ತಿದ್ದಾರೆ. ಆದರೆ, ಇಂದಿಗೂ ಆರ್ಥಿಕ ಅಸಮಾನತೆಗೆ ಮೊದಲು ತುತ್ತಾಗುವವರು ಮಹಿಳೆಯರು.

ಬದಲಾವಣೆ ಸಾಧ್ಯ ಎನ್ನುತ್ತದೆ ವರದಿ

ಅಸಮಾನತೆಯನ್ನು ಬದಲಾಯಿಸುವುದು ಸಾಧ್ಯ ಎಂದೂ ವರದಿ ಹೇಳುತ್ತದೆ. ತೆರಿಗೆ ರಚನೆ ಬದಲಾವಣೆ, ಸಂಪತ್ತು ಮರುಹಂಚಿಕೆಯಂತಹ ಕ್ರಮಗಳು ಅಸಮಾನತೆಯನ್ನು ಕಡಿಮೆ ಮಾಡಲು ಸಹಾಯಕ. ಯಾರು ಹೆಚ್ಚು ಶ್ರೀಮಂತರೋ ಅವರಿಂದ ಹೆಚ್ಚು ತೆರಿಗೆಯನ್ನು ಸಂಗ್ರಹಿಸಬೇಕು. ತೆರಿಗೆ ಕಟ್ಟುವಷ್ಟು ಸಾಮರ್ಥ್ಯ ಹೊಂದಿರುವ ಶ್ರೀಮಂತರಿಂದ ತೆರಿಗೆ ಪಡೆಯುವುದರಲ್ಲಿ ವಿಫಲವಾದ ಕಾರಣದಿಂದಾಗಿ ಅಸಮಾನತೆ ಮುಂದುವರಿಯುತ್ತದೆ ಎಂದು ವರದಿ ಹೇಳಿದೆ.

ಭಾರತದ ವಿಚಾರಕ್ಕೆ ಬಂದಾಗ ಇದು ಪ್ರಸ್ತುತ. ಹೂಡಿಕೆಗೆ ಪ್ರೋತ್ಸಾಹ ನೀಡುವ ನೆಪದಲ್ಲಿ ಸರ್ಕಾರವು ಕಾರ್ಪೊರೇಟ್ ಸಂಸ್ಥೆಗಳಿಗೆ ತೆರಿಗೆ ವಿನಾಯಿತಿ ನೀಡುತ್ತದೆ, ಮನ್ನಾವನ್ನೂ ಮಾಡುತ್ತದೆ. ದೇಶದಲ್ಲಿ ಇತ್ತೀಚಿನ ವರ್ಷಗಳಲ್ಲಿ ಕಾರ್ಪೊರೇಟ್ ತೆರಿಗೆಯಿಂದ ಬರುವ ಆದಾಯಕ್ಕಿಂತ ಜನಸಾಮಾನ್ಯರು ಪಾವತಿಸುವ ಆದಾಯ ತೆರಿಗೆಯಿಂದ ಬರುವ ಮೊತ್ತವೇ ಅಧಿಕವಾಗಿದೆ. ಕಾರ್ಪೋರೇಟ್ ದೊರೆಗಳಿಗೆ ನಿಯಮ ಸಡಿಲಿಸಿ ಸಂಬಳ ಪಡೆಯುವ ಮಧ್ಯಮ ವರ್ಗದ ಮೇಲೆ ತೆರಿಗೆಯ ಒತ್ತಡ ಹಾಕಲಾಗುತ್ತಿದೆ.

ಸಾಮಾನ್ಯ ಜನರ ಆದಾಯದ ದೊಡ್ಡ ಭಾಗ ತೆರಿಗೆ ಮತ್ತು ಬೆಲೆ ಏರಿಕೆಗೆ ವ್ಯಯವಾಗುವುದರಿಂದ ಉಳಿತಾಯ ಕಡಿಮೆಯಾಗುತ್ತಿದೆ. ಆದರೆ ಕಾರ್ಪೋರೇಟ್ ಸಂಸ್ಥೆಗಳು, ಅಂಬಾನಿ-ಅದಾನಿಯಂತಹ ಶ್ರೀಮಂತರು ತೆರಿಗೆ ವಿನಾಯಿತಿ ಪಡೆಯುತ್ತಿದ್ದಾರೆ. 2019ರಲ್ಲಿ ನರೇಂದ್ರ ಮೋದಿ ಸರ್ಕಾರವು ಕಾರ್ಪೊರೇಟ್ ತೆರಿಗೆಯನ್ನು 30% ರಿಂದ 22% ಕ್ಕೆ ಇಳಿಸಿದೆ. ಈ ಮೂಲಕ ಕಾರ್ಪೋರೇಟ್ ಸಂಸ್ಥೆಗಳಿಗೆ ಲಾಭ ಮಾಡಿಕೊಟ್ಟಿದೆ. ಶ್ರೀಮಂತರಿಗೆ ನೇರ ತೆರಿಗೆಯಲ್ಲಿ ರಿಯಾಯಿತಿ ಸಿಕ್ಕರೂ, ಬಡವರು ಮತ್ತು ಸಾಮಾನ್ಯ ಜನರು ಜಿಎಸ್‌ಟಿ ಮೊದಲಾದ ಪರೋಕ್ಷ ತೆರಿಗೆಗಳಿಗೆ ತಮ್ಮ ಆದಾಯವನ್ನು ವ್ಯಯಿಸಬೇಕಾಗಿದೆ.

ಇದನ್ನು ಓದಿದ್ದೀರಾ? ಸಮಾಜದ ಅಸಮಾನತೆ ಹೋಗಲಾಡಿಸಲು ಸಮೀಕ್ಷೆ ಅಗತ್ಯ: ಮುಖ್ಯಮಂತ್ರಿ ಸಿದ್ದರಾಮಯ್ಯ

ಕೇಂದ್ರ ಸರ್ಕಾರ ದೇಶ ಅಭಿವೃದ್ಧಿ ಹೊಂದುತ್ತಿದೆ ಎಂಬ ಮಂತ್ರವನ್ನು ಪಠಿಸುತ್ತಿದೆ. ಮೆಟ್ರೋ, ರೈಲು, ವಿಮಾನ, ಐಟಿ-ಬಿಟಿ, ತಂತ್ರಜ್ಞಾನ- ಹೀಗೆ ಎಲ್ಲ ಕ್ಷೇತ್ರಗಳಲ್ಲಿ ದೇಶ ಅಭಿವೃದ್ಧಿಯತ್ತ ಸಾಗುತ್ತಿದೆ ಎಂದು ಕೇಂದ್ರ ಸರ್ಕಾರ ಆಗಾಗೇ ಹೇಳುತ್ತಿದೆ. ಆದರೆ ಸಮಾನತೆ-ಅಸಮಾನತೆ ವಿಚಾರಕ್ಕೆ ಬಂದಾಗ ನಮ್ಮ ನಾಯಕರುಗಳು ತುಟಿ ಬಿಚ್ಚುವುದಿಲ್ಲ. ಯಾವುದೇ ಸರ್ಕಾರ ಬಂದರೂ ತಮ್ಮ ಹಿಂದಿನ ಸರ್ಕಾರದತ್ತ ಬೊಟ್ಟು ಮಾಡುತ್ತದೆಯೇ ಹೊರತು ಈ ಅಸಮಾನತೆ ಸರಿದೂಗಿಸಲು ನಾವು ಕೈಗೊಂಡ ಕ್ರಮವೇನು ಎಂಬ ವಿಮರ್ಶೆಗೆ ಇಳಿಯುವುದಿಲ್ಲ. ಕೈಗೊಳ್ಳಬಹುದಾದ ಕ್ರಮಗಳ ಬಗ್ಗೆಯೂ ಚಿಂತನೆ ನಡೆಸುವುದಿಲ್ಲ.

ಈ ಹಿಂದೆ 2014ಕ್ಕೂ ಮುನ್ನ ಬಿಜೆಪಿ ಕಾಂಗ್ರೆಸ್ ಸರ್ಕಾರದ ಆರ್ಥಿಕ ನೀತಿಗಳನ್ನು ಟೀಕಿಸಿದ್ದು, ಕಾಂಗ್ರೆಸ್ ನೀತಿಗಳಿಂದಾಗಿ ದೇಶದಲ್ಲಿ ಅಭಿವೃದ್ಧಿಯಿಲ್ಲ, ಅಸಮಾನತೆಯಿದೆ ಎಂದು ಹೇಳಿತ್ತು. ಈ ನಿಟ್ಟಿನಲ್ಲಿಯೇ ದೇಶದಲ್ಲಿ ‘ಅಚ್ಚೆ ದಿನ್ ಆನೇ ವಾಲೆ ಹೇ’ (ಉತ್ತಮ ದಿನಗಳು ಬರಲಿವೆ) ಎಂದು ಹೇಳಿಕೊಂಡು ಎಲ್ಲಾ ಭಾರತೀಯರಿಗೆ ಸಮೃದ್ಧ ಭವಿಷ್ಯದ ಪ್ರಮುಖ ಭರವಸೆಯನ್ನು ನೀಡಿತ್ತು. ಆರ್ಥಿಕ ಅಸಮಾನತೆಗಳನ್ನು ಕೊನೆಗೊಳಿಸುವುದಾಗಿ ಹೇಳಿತ್ತು. ಆದರೆ ಇಂದು ಆಗಿರುವುದೇನು? 2014ರಲ್ಲಿ ಭಾರತದ ಅಗ್ರ ಶೇ.1 ಶ್ರೀಮಂತರಲ್ಲಿ ಒಟ್ಟು ಸಂಪತ್ತಿನ 46% ಭಾಗವಿತ್ತು. ಬಿಜೆಪಿ ಸರ್ಕಾರ ಸುಧಾರಣೆ ತಂದಿದೆಯೇ? ಇಂದಿಗೂ ಅಸಮಾನತೆ ಹಾಗೆಯೇ ಇದೆ. ಅದಕ್ಕೂ ಮುಖ್ಯವಾಗಿ, ವಿಶೇಷವಾಗಿ ಭಾರತದಲ್ಲಿ ಆರ್ಥಿಕ ಅಸಮಾನತೆ ಅತ್ಯಂತ ತೀವ್ರ ಮಟ್ಟದಲ್ಲಿದೆ ಎಂದು ವರದಿ ಹೇಳುತ್ತದೆ.

WhatsApp Image 2025 11 17 at 4.20.34 PM
+ posts

ಪತ್ರಕರ್ತೆ, 2019ರಿಂದ ಪತ್ರಿಕೋದ್ಯಮವೇ ಬದುಕು. ರಾಜಕೀಯ, ಬ್ಯುಜಿನೆಸ್‌ ಸುದ್ದಿಗಳಲ್ಲಿ ಆಸಕ್ತಿ.

ಪೋಸ್ಟ್ ಹಂಚಿಕೊಳ್ಳಿ:

ಮಯೂರಿ ಬೋಳಾರ್
ಮಯೂರಿ ಬೋಳಾರ್
ಪತ್ರಕರ್ತೆ, 2019ರಿಂದ ಪತ್ರಿಕೋದ್ಯಮವೇ ಬದುಕು. ರಾಜಕೀಯ, ಬ್ಯುಜಿನೆಸ್‌ ಸುದ್ದಿಗಳಲ್ಲಿ ಆಸಕ್ತಿ.

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಕೇಂದ್ರವನ್ನು ಟೀಕಿಸಿದ ಸಾಮಾಜಿಕ ಮಾಧ್ಯಮ ಖಾತೆಗಳು ಮಂಗಮಾಯ: ಉಳಿಯುವುದು ಬರೀ ಮೋದಿಮಯ!

ಹೀಗೆ ಮೋದಿ ಸರ್ಕಾರವನ್ನು ವಿರೋಧಿಸಿದವರ ಖಾತೆಗಳು ಸಾಮಾಜಿಕ ಮಾಧ್ಯಮಗಳಿಂದ ಅಳಿಸಿ ಕೊನೆಗೆ...

ಒಂದು ಕಡೆ ಖಾದ್ಯತೈಲ ಬೆಲೆ ಏರಿಕೆ; ಮತ್ತೊಂದು ಕಡೆ ಕುಸುಬೆ ಬೆಲೆ ಕುಸಿತದಿಂದ ರೈತರಿಗೆ ಹೊರೆ

ಖಾದ್ಯತೈಲ ಬೆಲೆ ಏರಿಕೆ ಗ್ರಾಹಕರ ಜೇಬಿಗೆ ಭಾರವಾದರೆ, ಕುಸುಬೆ ಬೆಲೆ ಕುಸಿತ...