ಉನ್ನಾಂವ್ ಅತ್ಯಾಚಾರ ಹಗರಣ: ಕುಲದೀಪ್ ಸೆಂಗರ್‌ನ ಹೀನಕೃತ್ಯ; ಬಿಜೆಪಿ ನೈತಿಕ ದಿವಾಳಿತನ

Date:

ಅತ್ಯಾಚಾರದ ಆರೋಪಿಗೆ ಸರ್ಕಾರದಲ್ಲಿ ಮಂತ್ರಿಗಿರಿ ಕೊಡುವುದು, ಅತ್ಯಾಚಾರದ ಆರೋಪ ಹೊತ್ತು ಜೈಲಿಗೆ ಹೋಗಿಬಂದರೂ ಆರೋಪಿ ವಿರುದ್ಧ ಪಕ್ಷವು ಯಾವುದೇ ಕ್ರಮ ಕೈಗೊಳ್ಳದೇ ಇರುವುದು, ಆರೋಪಿಯ ರಕ್ಷಣೆಗೆ ಸರ್ಕಾರವೇ ಪರೋಕ್ಷವಾಗಿ ನಿಲ್ಲುವುದು, ಸಂತ್ರಸ್ತ ಕುಟುಂಬಕ್ಕೆ ಬೆದರಿಕೆವೊಡ್ಡುವುದು, ಅತ್ಯಾಚಾರ ಪ್ರಕರಣಗಳಲ್ಲಿ ಜೀವಾವಧಿ ಶಿಕ್ಷೆಗೆ ಗುರಿಯಾದ ಅಪರಾಧಿಗಳನ್ನು ಸನ್ನಡತೆ ಆಧಾರದಲ್ಲಿ ಬಿಡುಗಡೆ ಮಾಡುವುದು, ಪ್ರಭಾವಿ ರಾಜಕಾರಣಿ ವಿರುದ್ಧ ಪೋಕ್ಸೋ ಪ್ರಕರಣ ದಾಖಲಾದರೂ ಆತನ ಬಂಧನವಾಗದೇ ಇರುವುದು, ಬಂಧನಕ್ಕೆ ತಡೆಯೊಡ್ಡುವಂತೆ ಪ್ರಭಾವ ಬೀರುವುದು – ದೇಶವನ್ನು ಕಳೆದ 12 ವರ್ಷಗಳಿಂದ ಆಳುತ್ತಿರುವ ‘ಅತ್ಯಂತ ಪ್ರಭಾವಿ’ ಪಕ್ಷ ಬಿಜೆಪಿ ಈ ಎಲ್ಲ ಅನಿಷ್ಠಗಳನ್ನೂ ಮೈಗೂಡಿಸಿಕೊಂಡಿದೆ.

ಬಿಜೆಪಿ ಸರ್ಕಾರದ ಆಡಳಿತ ಇರುವ ಹಲವು ರಾಜ್ಯಗಳಲ್ಲಿ ಹಾಗೂ ಆಡಳಿತ ಇಲ್ಲದಿದ್ದರೂ ಪ್ರಭಾವ ಇರುವ ರಾಜ್ಯಗಳಲ್ಲಿ ಅತ್ಯಾಚಾರ ಆರೋಪಿಗಳ ರಕ್ಷಣೆಗಾಗಿ ಕೇಸರಿ ಪಕ್ಷ ನಡೆಸಿರುವ ಕಸರತ್ತುಗಳ ಉದಾಹರಣೆಗಳು ಬಹಳಷ್ಟಿವೆ. ಈಗ, ಉತ್ತರ ಪ್ರದೇಶದ ಉನ್ನಾಂವ್‌ ಬಿಜೆಪಿ ಮಾಜಿ ಶಾಸಕ ಕುಲದೀಪ್ ಸಿಂಗ್ ಸೆಂಗರ್‌ನ ದುಷ್ಕೃತ್ಯಗಳ ಮತ್ತೆ ಮುಂಬೆಳಕಿಗೆ ಬಂದಿವೆ.

ಬಿಜೆಪಿಯ ಮಾಜಿ ಶಾಸಕ, ಅತ್ಯಾಚಾರ ಪ್ರಕರಣದ ಅಪರಾಧಿ ಕುಲದೀಪ್ ಸಿಂಗ್ ಸೆಂಗರ್‌ಗೆ ವಿಚಾರಣಾ ನ್ಯಾಯಾಲಯ ವಿಧಿಸಿದ್ದ ಜೀವಾವಧಿ ಶಿಕ್ಷೆಯನ್ನು ದೆಹಲಿ ಹೈಕೋರ್ಟ್ ಅಮಾನತು ಮಾಡಿದೆ. ನ್ಯಾಯಾಲಯದ ಆದೇಶದ ವಿರುದ್ಧ ಸಂತ್ರಸ್ತೆ, ಆಕೆಯ ಕುಟುಂಬಸ್ಥರು ಹಾಗೂ ಹೋರಾಟಗಾರರು ದೆಹಲಿಯಲ್ಲಿ ಪ್ರತಿಭಟನೆ ನಡೆಸಿದ್ದು, ಅವರ ಮೇಲೆ ದೆಹಲಿ ಪೊಲೀಸರು ದೌರ್ಜನ್ಯ ಎಸಗಿದ್ದಾರೆ. ಪ್ರತಿಭಟನೆಯನ್ನು ಹತ್ತಿಕ್ಕಲು ಯತ್ನಿಸಿದ್ದಾರೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ಉನ್ನಾಂವ್ ಅತ್ಯಾಚಾರ ಪ್ರಕರಣವು 2017ರಲ್ಲಿ ನಡೆದಿತ್ತು. ಆಗಿನ ಯೋಗಿ ಆದಿತ್ಯನಾಥ್ ನೇತೃತ್ವದ ಸರ್ಕಾರದಲ್ಲಿ ಕುಲದೀಪ್ ಸಿಂಗ್ ಸೆಂಗರ್ ಬಿಜೆಪಿ ಶಾಸಕನಾಗಿದ್ದರು. ಅದೇ ವರ್ಷ  ಜೂನ್ 4ರಂದು 17 ವರ್ಷದ ಸಂತ್ರಸ್ತೆ ಕೆಲಸ ಕೇಳಿಕೊಂಡು ಆತನ ಮನೆಗೆ ಹೋಗಿದ್ದಾಗ, ಆಕೆಯ ಮೇಲೆ ಶಾಸಕ ಅತ್ಯಾಚಾರ ಎಸಗಿದ್ದ. ಅಲ್ಲದೆ, ಬೆದರಿಕೆಯೊಡ್ಡಿ ಹಲವು ಭಾರೀ ಆಕೆಯ ಮೇಲೆ ನಿರಂತರ ಅತ್ಯಾಚಾರಗೈದಿದ್ದ.

ಕಾಮುಕ ಶಾಸಕರ ದೌರ್ಜನ್ಯ ಮತ್ತು ಬೆದರಿಕೆಯಿಂದ ನೊಂದ ಸಂತ್ರಸ್ತೆ ಮೇಲಾಗುತ್ತಿರುವ ದೌರ್ಜನ್ಯಗಳ ಕುರಿತು ತಂದೆಯ ಬಳಿ ಹೇಳಿಕೊಂಡಿದ್ದರು. 2018ರ ಏಪ್ರಿಲ್‌ನಲ್ಲಿ ಸಂತ್ರಸ್ತೆ ಮತ್ತು ಆಕೆಯ ತಂದೆ ಉನ್ನಾಂವ್ ಪೊಲೀಸ್ ಠಾಣೆಯಲ್ಲಿ ಶಾಸಕನ ವಿರುದ್ಧ ದೂರು ದಾಖಲಿಸಿದರು. ಆದರೆ, ಪೊಲೀಸರು ಎಫ್‌ಐಆರ್ ದಾಖಲಿಸಲಿಲ್ಲ. ದೂರು ದಾಖಲಿಸಿದ ಕೆಲವೇ ಸಮಯದಲ್ಲಿ ಆರೋಪಿ ಸೆಂಗರ್‌ನ ಸಹೋದರ ಅತುಲ್ ಸಿಂಗ್ ಸಿಂಗರ್ ಮತ್ತು ಸಂಗಡಿಗರು ಸಂತ್ರಸ್ತೆಯ ತಂದೆ ಮೇಲೆ ದಾಳಿ ನಡೆಸಿದರು. ಅಮಾನುಷವಾಗಿ ಥಳಿಸಿದರು.

ಘಟನೆಯಿಂದ ಜರ್ಜರಿತರಾದ ಸಂತ್ರಸ್ತೆಯ ತಂದೆ, ಮುಖ್ಯಮಂತ್ರಿ ಸಿಎಂ ಯೋಗಿ ಆದಿತ್ಯನಾಥ್ ಮನೆ ಮುಂದೆ ಆತ್ಮಹತ್ಯೆಗೆ ಯತ್ನಿಸಿದರು. ಅವರ ಆತ್ಮಹತ್ಯೆಯ ಯತ್ನದ ಫಲವಾಗಿ, ಪ್ರಕರಣ ಬೆಳಕಿಗೆ ಬಂದಿತು. ಆರೋಪಿಯ ವಿರುದ್ಧ ಕ್ರಮ ಕೈಗೊಳ್ಳದ ಸರ್ಕಾರ ಮತ್ತು ಪೊಲೀಸ್‌ ವ್ಯವಸ್ಥೆಯ ವಿರುದ್ಧ ದೇಶಾದ್ಯಂತ ಆಕ್ರೋಶ ವ್ಯಕ್ತವಾಯಿತು. ಪ್ರತಿಭಟನೆಗಳು ಭುಗಿಲೆದ್ದವು. ಪರಿಣಾಮ, ಪೊಲೀಸರು ಆರೋಪಿ ಸೆಂಗರ್ ವಿರುದ್ಧ ಪ್ರಕರಣ ದಾಖಲಿಸಿಕೊಂಡರು. ಆದರೆ ಬಂಧಿಸಲಿಲ್ಲ.

ಸಂತ್ರಸ್ತೆ ತಂದೆ ಸಾವು (ಕಸ್ಟಡಿ ಕೊಲೆ)

ಈ ಅತ್ಯಾಚಾರ ಪ್ರಕರಣ ಬೆಳಕಿಗೆ ಬಂದ ಮರುದಿನವೇ, ಸಂತ್ರಸ್ತೆಯ ತಂದೆಯ ವಿರುದ್ಧ ಅಕ್ರಮ ಶಸ್ತ್ರಾಸ್ತ್ರ ಹೊಂದಿದ್ದಾರೆಂಬ ಆರೋಪ ಹೊರಿಸಿ, ಪೊಲೀಸರು ಬಂಧಿಸಿದರು. ಏಪ್ರಿಲ್ 9ರಂದು ಪೊಲೀಸ್‌ ಕಸ್ಟಡಿಯಲ್ಲಿಯೇ ಸಂತ್ರಸ್ತೆಯ ತಂದೆ ಸಾವನ್ನಪ್ಪಿದರು.

ಮರಣೋತ್ತರ ಪರೀಕ್ಷಾ ವರದಿಯಲ್ಲಿ, ಅವರ ದೇಹದಲ್ಲಿ ಗಂಭೀರ ಗಾಯಗಳಿರುವುದು ಮತ್ತು ಆಂತರಿಕ ರಕ್ತಸ್ರಾವವಾಗಿರುವುದು ಕಂಡುಬಂದಿತು. ಸೆಂಗಾರ್‌ನ ಪ್ರಭಾವದಿಂದ ಸಂತ್ರಸ್ತೆಯ ತಂದೆಯನ್ನು ಭೀಕರವಾಗಿ ಹೊಡೆದು ಕೊಲ್ಲಲಾಗಿದೆ ಎಂದು ಆರೋಪಿಸಲಾಯಿತು. ಅಲ್ಲದೆ, ಸಂತ್ರಸ್ತೆಗೂ ಬೆದರಿಕೆಗಳು ಬರಲಾರಂಭಿಸಿದವು.

ಆದರೂ, ನ್ಯಾಯಕ್ಕಾಗಿನ ಹೋರಾಟದಿಂದ ಹಿಂಜರಿಯದ ಸಂತ್ರಸ್ತೆ, ಆರೋಪಿ ಸೆಂಗಾರ್‌ನನ್ನು ಬಂಧಿಸದ ಪೊಲೀಸರ ನಡೆಯನ್ನು ಪ್ರಶ್ನಿಸಿ ನ್ಯಾಯಾಲಯದ ಮೊರೆ ಹೋದರು. ಕೋರ್ಟ್‌ ಆದೇಶದಂತೆ ಸೆಂಗರ್‌ನನ್ನು ಬಂಧಿಸಲಾಯಿತು.

ಸಂತ್ರಸ್ತೆ ಕೊಲೆಗೆ ಯತ್ನ

ಈ ನಡುವೆ, ಸಂತ್ರಸ್ತೆಯ ಹತ್ಯೆಗೂ ಮೂರು ಬಾರಿ ಪ್ರಯತ್ನಗಳು ನಡೆದವು. ಪ್ರಮುಖವಾಗಿ, 2019 ಜುಲೈ 28ರಂದು ನ್ಯಾಯಾಲಯದಲ್ಲಿ ವಿಚಾರಣೆಗೆ ಹಾಜರಾಗಿ ಮನೆಗೆ ಮರಳುವಾಗ ಸಂತ್ರಸ್ತೆ, ಆಕೆಯ ಇಬ್ಬರು ಚಿಕ್ಕಮ್ಮಂದಿರು ಹಾಗೂ ವಕೀಲರು ಪ್ರಯಾಣಿಸುತ್ತಿದ್ದ ಕಾರಿಗೆ ಅಪಘಾತ ಮಾಡಿ, ಕೊಲೆ ಮಾಡಲು ಯತ್ನಿಸಲಾಯಿತು. ಘಟನೆಯಲ್ಲಿ ಸಂತ್ರಸ್ತೆ ಮತ್ತು ವಕೀಲರು ಬದುಕುಳಿದರೂ, ಇಬ್ಬರೂ ಚಿಕ್ಕಮ್ಮಂದಿರು ಸಾವನ್ನಪ್ಪಿದರು. ಗಂಭೀರವಾಗಿ ಗಾಯಗೊಂಡಿದ್ದ ಸಂತ್ರಸ್ತೆಗೆ ಸುಮಾರು 100ಕ್ಕೂ ಹೆಚ್ಚು ಹೊಲಿಗೆಗಳನ್ನು ಹಾಕಲಾಗಿತ್ತು. ಅವರ ಕಾರಿಗೆ ಡಿಕ್ಕಿ ಅಪಘಾತ ಮಾಡಿದ ಟ್ರಕ್‌ನ ನಂಬರ್ ಪ್ಲೇಟ್‌ಗೆ ಕಪ್ಪು ಬಣ್ಣ ಬಳಿದು, ಮುಚ್ಚಲಾಗಿತ್ತು. ಇದು, ಸ್ಪಷ್ಟ ಕೊಲೆಯತ್ನ ಎಂಬುದು ಕಂಡುಬಂದಿತ್ತು.

ಈ ಅಪಘಾತಕ್ಕೂ ಕೆಲವು ದಿನಗಳ ಹಿಂದಷ್ಟೇ, ಆರೋಪಿ ಶಾಸಕ ಸೆಂಗರ್, ‘ಆಕೆಗೆ ಸರಿಯಾದ ಶಾಸ್ತಿಯಾಗಲಿದೆ’ ಎಂದು ಮಾಧ್ಯಮಗಳ ಎದುರೇ ಹೇಳಿಕೆ ನೀಡಿದ್ದ. ಈ ಕೃತ್ಯದ ಹಿಂದೆ ಸೆಂಗರ್‌ನ ಸಹೋದರ ಮತ್ತು ಬೆಂಬಲಿಗರ ಕೈವಾಡವಿದೆ ಎಂದು ಪ್ರಕರಣ ದಾಖಲಿಸಲಾಯಿತು.

ಈ ಲೇಖನ ಓದಿದ್ದೀರಾ?: ಮರ್ಯಾದೆಗೇಡು ಹತ್ಯೆ- ಅಪ್ಪನೆಂಬ ಸಂಬಂಧ ಅರ್ಥ ಕಳೆದುಕೊಂಡಿತೇ?

ಅತ್ಯಾಚಾರ, ಸಂತ್ರಸ್ತೆ ತಂದೆಯ ಸಾವು, ಕಾರು ಅಪಘಾತ ಮಾಡಿ ಚಿಕ್ಕಮ್ಮಂದಿರ ಕೊಲೆ ಮತ್ತು ಸಂತ್ರಸ್ತೆಯ ಕೊಲೆಯತ್ನ ಪ್ರಕರಣಗಳನ್ನು ಸಿಬಿಐ ತನಿಖೆಗೆ ವರ್ಗಾಯಿಸಲಾಯಿತು. ಅಲ್ಲದೆ, ಸಂತ್ರಸ್ತೆ ಮತ್ತು ಆಕೆಯ ಕುಟುಂಬಕ್ಕೆ ಕೇಂದ್ರ ಮೀಸಲು ಪೊಲೀಸ್ ಪಡೆಯಿಂದ ರಕ್ಷಣೆ ನೀಡಬೇಕೆಂದು ಸುಪ್ರೀಂ ಕೋರ್ಟ್‌ ಆದೇಶಿಸಿತು. ಅಲ್ಲದೆ, ಪ್ರಕರಣದ ವಿಚಾರಣೆಯನ್ನು ಉತ್ತರ ಪ್ರದೇಶದ ಹೊರಗಿನ ನ್ಯಾಯಾಲಯದಲ್ಲಿ ನಡೆಸುವಂತೆ ಸುಪ್ರೀಂ ಕೋರ್ಟ್‌ ಸೂಚಿಸಿತು.

ಶಿಕ್ಷೆ ವಿಧಿಸಿದ ಸೆಷನ್ಸ್ ಕೋರ್ಟ್‌ ಮತ್ತು ಶಿಕ್ಷೆ ಅಮಾನತು ಮಾಡಿದ ಹೈಕೋರ್ಟ್

ಪ್ರಕರಣಗಳ ತನಿಖೆ ನಡೆಸಿದ ಸಿಬಿಐ ಚಾರ್ಜ್‌ಶೀಟ್‌ ಸಲ್ಲಿಸಿತು. ವಿಚಾರಣೆ ನಡೆಸಿದ ದೆಹಲಿಯ ತೀಸ್ ಹಜಾರಿ ಸೆಷನ್ಸ್ ನ್ಯಾಯಾಲಯವು ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ 2019ರಲ್ಲಿ ತೀರ್ಪು ಪ್ರಕಟಿಸಿತು. ಸೆಂಗರ್‌ನನ್ನು ಅಪರಾಧಿ ಎಂದು ಘೋಷಿಸಿತು. ಆತನಿಗೆ ಜೀವಾವಧಿ ಶಿಕ್ಷೆ ವಿಧಿಸಿತು. ಜೊತೆಗೆ, ಸಂತ್ರಸ್ತೆಯ ತಂದೆ ಕಸ್ಟಡಿ ಸಾವು ಪ್ರಕರಣದಲ್ಲಿ ಸೆಂಗರ್‌ನನ್ನು ಜವಾಬ್ದಾರನ್ನಾಗಿ ಮಾಡಿದ ನ್ಯಾಯಾಲಯವು 2020ರಲ್ಲಿ ಆತನಿಗೆ 10 ವರ್ಷಗಳ ಜೈಲು ಶಿಕ್ಷೆ ವಿಧಿಸಿತು. ಆದರೆ, ಸಂತ್ರಸ್ತೆಯ ಮೇಲೆ ಅಪಘಾತ ಎಸಗಿ, ಕೊಲೆ ಮಾಡಲು ಯತ್ನಿಸಿದ ಪ್ರಕರಣದಲ್ಲಿ ಷಡ್ಯಂತ್ರ ಸಾಬೀತಾಗದ ಕಾರಣ 2021ರಲ್ಲಿ ಸೆಂಗರ್, ಆತನ ಸಹೋದರ ಹಾಗೂ ಸಹಚರರನ್ನು ಪ್ರಕರಣದಿಂದ ಖುಲಾಸೆಗೊಳಿಸಲಾಯಿತು.

ಅತ್ಯಾಚಾರ ಪ್ರಕರಣದಲ್ಲಿ ನ್ಯಾಯಾಲಯ ವಿಧಿಸಿದ್ದ ಶಿಕ್ಷೆಯನ್ನು ಪ್ರಶ್ನಿಸಿ ಸೆಂಗರ್ ದೆಹಲಿ ಹೈಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಿದ್ದ. ಆತನ ಅರ್ಜಿ ವಿಚಾರಣೆ ನಡೆಸಿರುವ ದೆಹಲಿ ಹೈಕೋರ್ಟ್‌, ಸೆಷನ್ಸ್‌ ನ್ಯಾಯಾಲಯ ವಿಧಿಸಿದ್ದ ಜೀವಾವಧಿ ಶಿಕ್ಷೆಗೆ ತಡೆಯೊಡ್ಡಿದೆ. ಆತನ ಮೇಲ್ಮನವಿಯ ಅರ್ಜಿಗಳ ವಿಚಾರಣೆ ಪೂರ್ಣಗೊಳ್ಳುವವರೆಗೂ ಶಿಕ್ಷೆಯನ್ನು ಅಮಾನತಿನಲ್ಲಿರಿಸಿದೆ. ಆದಾಗ್ಯೂ, ಸಂತ್ರಸ್ತೆ ತಂದೆಯ ಸಾವು ಪ್ರಕರಣದ ಶಿಕ್ಷೆ ಮುಂದುವರೆದಿದ್ದು, ಅಪರಾಧಿ ಸೆಂಗರ್ ಜೈಲಿನಲ್ಲಿಯೇ ಇದ್ದಾನೆ.

ಅತ್ಯಾಚಾರಿ ವಿಚಾರದಲ್ಲಿ ಬಿಜೆಪಿ ಮೃದುಧೋರಣೆ

2018ರಲ್ಲಿ ಶಾಸಕನೂ ಆಗಿದ್ದ ಸೆಂಗರ್ ಎಸಗಿದ್ದ ಅತ್ಯಾಚಾರ ಕೃತ್ಯ ಬೆಳಕಿಗೆ ಬಂದರೂ, ಬಿಜೆಪಿ ಆತನ ವಿರುದ್ಧ ಯಾವುದೇ ಕ್ರಮ ಕೈಗೊಳ್ಳಲಿಲ್ಲ. ಸಂತ್ರಸ್ತೆಯ ತಂದೆಯ ಸಾವು ಮತ್ತು ಪ್ರಕರಣದ ವಿರುದ್ಧ ದೇಶಾದ್ಯಂತ ವ್ಯಾಪಕ ಆಕ್ರೋಶ ವ್ಯಕ್ತವಾದ ಬಳಿಕವಷ್ಟೇ, ಆತನನ್ನು ಪಕ್ಷದಿಂದ ಅಮಾನತು ಮಾಡಲಾಯಿತು.

ಅತ ಅಮಾನತುಗೊಂಡಿದ್ದರೂ, 2019ರಲ್ಲಿ ಸಂತ್ರಸ್ತೆಯ ಕಾರು ಅಪಘಾತ ಮಾಡಿ, ಕೊಲೆ ಯತ್ನ ನಡೆಯುವವರೆಗೂ ಆತ ಪಕ್ಷದೊಂದಿಗೆ ಸಂಪರ್ಕದಲ್ಲಿದ್ದ. ಸಂತ್ರಸ್ತೆಯ ಕೊಲೆ ಯತ್ನ ನಡೆದ ಬಳಿಕ, 2019ರ ಆಗಸ್ಟ್‌ನಲ್ಲಿ ಆತನನ್ನು ಪಕ್ಷದಿಂದ ಉಚ್ಛಾಟನೆ ಮಾಡಲಾಯಿತು.

ಆದಾಗ್ಯೂ, 2021ರ ಉತ್ತರ ಪ್ರದೇಶ ಪಂಚಾಯತಿ ಚುನಾವಣೆಯಲ್ಲಿ ಅಪರಾಧಿ ಸೆಂಗಾರ್‌ನ ಪತ್ನಿ ಸಂಗೀತಾ ಸೆಂಗರ್‌ಗೆ ಬಿಜೆಪಿ ಟಿಕೆಟ್ ನೀಡಿತು. ಚುನಾವಣೆಯಲ್ಲಿ ಗೆಲುವು ಸಾಧಿಸಿ ಸೆಂಗಾರ್ ಪತ್ನಿ ಸಂಗೀತಾರನ್ನು ಉನ್ನಾಂವ್ ಜಿಲ್ಲಾ ಪಂಚಾಯತಿಯ ಅಧ್ಯಕ್ಷೆಯಾಗಿ ಬಿಜೆಪಿ ನೇಮಿಸಿತು.

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಕೇಂದ್ರವನ್ನು ಟೀಕಿಸಿದ ಸಾಮಾಜಿಕ ಮಾಧ್ಯಮ ಖಾತೆಗಳು ಮಂಗಮಾಯ: ಉಳಿಯುವುದು ಬರೀ ಮೋದಿಮಯ!

ಹೀಗೆ ಮೋದಿ ಸರ್ಕಾರವನ್ನು ವಿರೋಧಿಸಿದವರ ಖಾತೆಗಳು ಸಾಮಾಜಿಕ ಮಾಧ್ಯಮಗಳಿಂದ ಅಳಿಸಿ ಕೊನೆಗೆ...

ಒಂದು ಕಡೆ ಖಾದ್ಯತೈಲ ಬೆಲೆ ಏರಿಕೆ; ಮತ್ತೊಂದು ಕಡೆ ಕುಸುಬೆ ಬೆಲೆ ಕುಸಿತದಿಂದ ರೈತರಿಗೆ ಹೊರೆ

ಖಾದ್ಯತೈಲ ಬೆಲೆ ಏರಿಕೆ ಗ್ರಾಹಕರ ಜೇಬಿಗೆ ಭಾರವಾದರೆ, ಕುಸುಬೆ ಬೆಲೆ ಕುಸಿತ...

ಡಾಲರ್ V/s ಯುವಾನ್: ಕೊಲ್ಲಿ ಯುದ್ಧ ಕರೆನ್ಸಿ ಯುದ್ಧವಾಗಿ ಮಾರ್ಪಾಡಾಗುತ್ತಿದೆಯೇ?

ಅಕಸ್ಮಾತ್ ಈ ಯುದ್ಧ ಮುಂದುವರೆದರೆ, ಕೆಲವು ದೇಶಗಳು ಡಾಲರ್ ಬದಲಿಗೆ ಯುವಾನ್...