ಯುಎಸ್‌ ಡಾಲರ್‌ ಎದುರು ರೂಪಾಯಿ ಮೌಲ್ಯ ಕುಸಿತ: 1947ರಿಂದ 2025ರವರೆಗೆ ನಡೆದಿದ್ದೇನು?

Date:

'ಈ ದಿನ' ಸಂಶೋಧನಾ ತಂಡ ವಿವಿಧ ಮೂಲಗಳಿಂದ ಸಂಗ್ರಹಿಸಿದ ದತ್ತಾಂಶವನ್ನು ಅವಲೋಕಿಸಿದಾಗ ಪ್ರಧಾನಿ ನರೇಂದ್ರ ಮೋದಿ ಆಡಳಿತದಲ್ಲಿ ಡಾಲರ್ ಎದುರು ರೂಪಾಯಿ ಮೌಲ್ಯ ತೀವ್ರ ಪ್ರಮಾಣದಲ್ಲಿ ಕುಸಿದಿರುವುದು ಕಂಡು ಬಂದಿದೆ. 2014ರಲ್ಲಿ ಕಾಂಗ್ರೆಸ್ ವಿರುದ್ಧ ಬಿಜೆಪಿ ಬಳಸಿದ್ದ ಪ್ರಚಾರದ ಅಸ್ತ್ರದಲ್ಲಿ ರೂಪಾಯಿ ಮೌಲ್ಯ ಕುಸಿತವೂ ಒಂದಾಗಿತ್ತು. ಆದರೆ ಇದೀಗ ಆ ಅಸ್ತ್ರವನ್ನೇ ಕಾಂಗ್ರೆಸ್ ಪ್ರಯೋಗಿಸುತ್ತಿದೆ.

ಯುಎಸ್ ಡಾಲರ್ (USD) ಎದುರು ಭಾರತದ ರೂಪಾಯಿ (INR) ಮೌಲ್ಯವು ತೀವ್ರ ಪ್ರಮಾಣದಲ್ಲಿ ಕುಸಿತ ಕಾಣುತ್ತಿದೆ. 1947ರಲ್ಲಿ ಪ್ರತಿ ಡಾಲರ್ ಮುಂದೆ ರೂಪಾಯಿ ಮೌಲ್ಯಕ್ಕೂ ಇಂದಿನ ಮೌಲ್ಯಕ್ಕೂ ಅಗಾಧ ವ್ಯತ್ಯಾಸವಿದೆ. ನಿರಂತರವಾಗಿ ರೂಪಾಯಿ ಮೌಲ್ಯವನ್ನು ಕಳೆದುಕೊಳ್ಳುತ್ತಿದೆ. ಇವೆಲ್ಲವುದರ ನಡುವೆ ಈ ಹಿಂದಿನ ಕಾಂಗ್ರೆಸ್ ಸರ್ಕಾರದ ಭ್ರಷ್ಟಾಚಾರವೇ ರೂಪಾಯಿ ಮೌಲ್ಯ ಕುಸಿತಕ್ಕೆ ಕಾರಣ ಎಂದು ಹೇಳಿಕೊಂಡು ನರೇಂದ್ರ ಮೋದಿ ನೇತೃತ್ವದಲ್ಲಿ ಬಿಜೆಪಿ ಸರ್ಕಾರ ರಚಿಸಿಕೊಂಡಿದೆ. ಆದರೆ ಇಂದಿಗೂ ರೂಪಾಯಿ ಮಾತ್ರ ಡಾಲರ್ ಎದುರು ಪುಟಿದೇಳುತ್ತಿಲ್ಲ, ಬದಲಾಗಿ ಸಾರ್ವಕಾಲಿಕವಾಗಿ ಮೌಲ್ಯವನ್ನು ಕಳೆದುಕೊಳ್ಳುತ್ತಿದೆ.

ಕಳೆದ 50 ವರ್ಷಗಳಲ್ಲಿ ಡಾಲರ್ ಎದುರು ರೂಪಾಯಿ ಮೌಲ್ಯ ಗಮನಾರ್ಹವಾಗಿ ಕುಸಿದಿದೆ. 1975ರಲ್ಲಿ ಪ್ರತಿ ಡಾಲರ್‌ ಎದುರು ಸುಮಾರು 8.39 ಮೌಲ್ಯ ಹೊಂದಿದ್ದ ರೂಪಾಯಿ 2024ರ ವೇಳೆಗೆ 83ಕ್ಕೆ ಬಂದಿಳಿದಿದೆ. 2025ರಲ್ಲಿ 90.95ಕ್ಕೆ ತಲುಪಿದೆ. ತಜ್ಞರು ಹೇಳುವಂತೆ, ಹೀಗೆಯೇ ಮುಂದುವರೆದರೆ ಇನ್ನೆರಡು ವರ್ಷಗಳಲ್ಲಿ ನೂರು ರೂಪಾಯಿಗೆ ಒಂದು ಡಾಲರ್‌ ಸಮವಾಗಲಿದೆ.

ಇದನ್ನು ಓದಿದ್ದೀರಾ? ರೂಪಾಯಿ ಮೌಲ್ಯ ಸಾರ್ವಕಾಲಿಕ ಕುಸಿತ: ಪ್ರಧಾನಿಯ ಉತ್ತರ ಕೋರಿದ ಪ್ರಿಯಾಂಕಾ ಗಾಂಧಿ

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ವಿಶ್ವದ ಅತ್ಯಂತ ಪ್ರಭಾವಶಾಲಿ ಕರೆನ್ಸಿಗಳಲ್ಲಿ ಯುಎಸ್‌ ಡಾಲರ್ ಕೂಡಾ ಒಂದು. ಜಾಗತಿಕವಾಗಿ ವ್ಯಾಪಾರಕ್ಕಾಗಿ ಅಧಿಕ ಬಳಸುವ ಕರೆನ್ಸಿ. ಭಾರತದ ರೂಪಾಯಿಯ ಮೌಲ್ಯವನ್ನು ಅಳೆಯಲು ಸಾಮಾನ್ಯವಾಗಿ ಡಾಲರ್‌ ಅನ್ನು ಮಾನದಂಡವಾಗಿ ಬಳಸಲಾಗುತ್ತದೆ. ಇತ್ತೀಚೆಗೆ ಡಾಲರ್ ಎದುರು 90ರ ಗಡಿ ದಾಡಿದ್ದ ರೂಪಾಯಿ ಈ ಹಿಂದೆ 5ಕ್ಕಿಂತ ಕಡಿಮೆ ವಿನಿಮಯ ದರ ಹೊಂದಿತ್ತು ಎಂಬುದನ್ನು ನೀವು ನಂಬುತ್ತೀರಾ? ಡಾಲರ್ ಎದುರು ಭಾರತೀಯ ರೂಪಾಯಿ(ಐಎನ್ಆರ್) ವಿನಿಮಯ ದರವು ಹೇಗೆ ಕ್ರಮೇಣ ಹೆಚ್ಚಾಯಿತು ಎಂಬುದನ್ನು ವಿವರವಾಗಿ ತಿಳಿಯೋಣ.

ಡಾಲರ್ v/s ರೂಪಾಯಿ ಇತಿಹಾಸ

ಯುಎಸ್‌ ಡಾಲರ್ ಮತ್ತು ರೂಪಾಯಿ ಇತಿಹಾಸವನ್ನು ನಾವು ಆಳವಾಗಿ ಅವಲೋಕಿಸಿದಾಗ ತೀವ್ರ ಏರಿಳಿತಗಳು ಕಂಡುಬರುತ್ತವೆ. ಸ್ವಾತಂತ್ರ್ಯಪೂರ್ವ ಯುಗ 1947ಕ್ಕಿಂತ ಮೊದಲು ಬ್ರಿಟಿಷರ ಆಳ್ವಿಕೆ ಇರುವಾಗ ರೂಪಾಯಿಯು ಡಾಲರ್‌ನ ಪ್ರಭಾವಕ್ಕೆ ಒಳಗಾಯಿತು. ಎರಡನೇ ಮಹಾಯುದ್ಧದ ನಂತರ ಅಂತಾರಾಷ್ಟ್ರೀಯ ಆರ್ಥಿಕ ವ್ಯವಸ್ಥೆಯನ್ನು ಸ್ಥಿರಗೊಳಿಸುವ ನಿಟ್ಟಿನಲ್ಲಿ ಬ್ರೆಟನ್ ವುಡ್ಸ್ ಒಪ್ಪಂದವನ್ನು ಜಾರಿಗೆ ತರಲಾಯಿತು. ಈ ಒಪ್ಪಂದದಂತೆ ಯುಎಸ್‌ ಡಾಲರ್‌ ಅನ್ನು ಚಿನ್ನದ ಮೌಲ್ಯದೊಂದಿಗೆ ಹೋಲಿಸಲಾಗುತ್ತಿತ್ತು. ಆದರೆ 1971ರಲ್ಲಿ ಅಮೆರಿಕವು ಡಾಲರ್ ಮೌಲ್ಯವನ್ನು ಚಿನ್ನದೊಂದಿಗೆ ಹೋಲಿಸುವುದನ್ನು ಸ್ಥಗಿತಗೊಳಿಸಿದ ನಂತರ ಈ ವ್ಯವಸ್ಥೆಯು ಅಧಿಕೃತವಾಗಿ ಕೊನೆಗೊಂಡಿತು.

1930ರ ದಶಕದ ಮಹಾ ಆರ್ಥಿಕ ಕುಸಿತವು ವಿಶ್ವದ ಆರ್ಥಿಕತೆಯನ್ನೇ ಛಿದ್ರಗೊಳಿಸಿತು. ಬ್ರಿಟಿಷ್ ನಿಯಂತ್ರಣದಲ್ಲಿದ್ದ ಭಾರತದ ಆರ್ಥಿಕತೆಗೂ ಇದು ಪರಿಣಾಮ ಬೀರಿತು. ಆದಾಗ್ಯೂ 1947ರಲ್ಲಿ ರೂಪಾಯಿ ಡಾಲರ್‌ನಂತೆ ಉತ್ತಮ ಮೌಲ್ಯವನ್ನು ಹೊಂದಿತ್ತು ಎಂಬ ವಾದಗಳಿವೆ. ಬ್ರಿಟಿಷ್ ಪೌಂಡ್‌ನ ಮೌಲ್ಯವು ಯುಎಸ್ ಡಾಲರ್‌ನ ಮೌಲ್ಯಕ್ಕಿಂತ ಹೆಚ್ಚಿರುವುದರಿಂದ ಹೀಗಾಗಿರಬಹುದು. ಒಂದು ಡಾಲರ್ ಎಂದರೆ ₹13.37ಕ್ಕೆ ಸಮನಾಗಿತ್ತು ಎಂದು ನಂಬಲಾಗಿದೆ.

ಸ್ವಾತಂತ್ರ್ಯದ ನಂತರ: 1947ರಿಂದ 1991ರವರೆಗೆ

1947ರಲ್ಲಿ ಸ್ವಾತಂತ್ರ್ಯ ಪಡೆದ ನಂತರ, ಭಾರತವು ಸ್ಥಿರ ವಿನಿಮಯ ದರ ವ್ಯವಸ್ಥೆಯನ್ನು ಅಳವಡಿಸಿಕೊಂಡಿತು. ಸರ್ಕಾರದ ಮಧ್ಯಸ್ಥಿಕೆಯಲ್ಲಿ ವಿನಿಮಯ ದರಗಳಲ್ಲಿನ ಯಾವುದೇ ಏರಿಳಿತಗಳನ್ನು ನಿರ್ವಹಿಸಲು ಆರಂಭಿಸಲಾಗಿತ್ತು. ಈ ವ್ಯವಸ್ಥೆಯಡಿ ಭಾರತೀಯ ರೂಪಾಯಿಯ ಮೌಲ್ಯವು ಸ್ಥಿರವಾಗಿತ್ತು. ಆದರೆ ಪಾಕಿಸ್ತಾನ ಮತ್ತು ಚೀನಾದೊಂದಿಗೆ ಯುದ್ಧದ ಬಳಿಕ ಭಾರತೀಯ ರೂಪಾಯಿ ಸ್ಥಿರತೆ ಕಳೆದುಕೊಂಡಿತು.

ಇದಾದ ಬಳಿಕ 1970ರ ದಶಕದಲ್ಲಿ ತೈಲ ಬಿಕ್ಕಟ್ಟಿನಂತಹ ಜಾಗತಿಕ ಘಟನೆಗಳು ಹಣದುಬ್ಬರದ ಒತ್ತಡಗಳಿಗೆ ಆರ್ಥಿಕತೆಯನ್ನು ಒಡ್ಡಿತು, ಡಾಲರ್ ದರವೂ ಹೆಚ್ಚಾಯಿತು. ಈ ಅವಧಿಯಲ್ಲಿ ಆರ್ಥಿಕ ಬೆಳವಣಿಗೆ, ವಿದೇಶಾಂಗ ನೀತಿ ಮತ್ತು ಕರೆನ್ಸಿ ಸ್ಥಿರತೆಯನ್ನು ಸಮತೋಲನಗೊಳಿಸಲು ಭಾರತ ಮಾಡಿದ ಪ್ರಯತ್ನಗಳು ಡಾಲರ್ ಮತ್ತು ರೂಪಾಯಿಯ ವಿನಿಮಯ ದರವನ್ನು ಗಮನಾರ್ಹವಾಗಿ ನಿರ್ಧರಿಸಿತು.

1971ರಲ್ಲಿ ಅಮೆರಿಕದ ಅಧ್ಯಕ್ಷ ರಿಚರ್ಡ್ ನಿಕ್ಸಾನ್ ಕೈಗೊಂಡ ಸರಣಿ ಆರ್ಥಿಕ ಬದಲಾವಣೆಗಳ ಪ್ರಭಾವ ಮತ್ತು ಪ್ರಮುಖ ಕೈಗಾರಿಕೋದ್ಯಮ ದೇಶಗಳ ನಡುವೆ ನಡೆದ ಸ್ಮಿತ್ಸೋನಿಯನ್ ಒಪ್ಪಂದದ ಬಳಿಕ ಭಾರತೀಯ ರಿಸರ್ವ್ ಬ್ಯಾಂಕ್ ಮತ್ತು ಭಾರತ ಸರ್ಕಾರವು ರೂಪಾಯಿಗೆ ಬೆಲೆಗೆ ಹಲವು ಹೊಂದಾಣಿಕೆಗಳನ್ನು ಮಾಡಿಕೊಳ್ಳಲು ಆರಂಭಿಸಿತು. ಇವೆರೂ ಡಾಲರ್‌ಗೆ ಶಾಶ್ವತ ಪರಿಣಾಮಗಳನ್ನು ಬೀರಿದವು. 1975ರ ಹೊತ್ತಿಗೆ ರೂಪಾಯಿ ನಿಧಾನವಾಗಿ ಸಮಾನ ಮೌಲ್ಯ ವ್ಯವಸ್ಥೆಯಿಂದ ಬ್ಯಾಸ್ಕೆಟ್ ಪೆಗ್‌(Basket Peg) ವ್ಯವಸ್ಥೆಗೆ ಇಳಿಯಿತು. ಅಂದರೆ ಒಂದು ದೇಶವು ತನ್ನ ಕರೆನ್ಸಿಯ ಮೌಲ್ಯವನ್ನು ಯಾವುದೋ ಒಂದು ಕರೆನ್ಸಿಗೆ ಮಾತ್ರ ಜೋಡಿಸದೆ, ಹಲವಾರು ಪ್ರಮುಖ ವಿದೇಶಿ ಕರೆನ್ಸಿಗಳ ಸಮೂಹಕ್ಕೆ ಜೋಡಿಸುವ ವ್ಯವಸ್ಥೆಯಾಗಿದೆ.

ಆರ್ಥಿಕ ಸುಧಾರಣೆಗಳು, ಉದಾರೀಕರಣದ ಸಮಯದಲ್ಲಿ: 1991ರಿಂದ 2000

1991ರಿಂದ 2000ರವರೆಗಿನ ಅವಧಿಯು ಆರ್ಥಿಕ ಇತಿಹಾಸದಲ್ಲಿ ನಿರ್ಣಾಯಕ ತಿರುವು ನೀಡಿದೆ. 1991ರಲ್ಲಿ, ವಿದೇಶಿ ಹೂಡಿಕೆಗಳಿಗೆ ತೆರೆದುಕೊಳ್ಳಲು ಮತ್ತು ವ್ಯಾಪಾರ ಅಡೆತಡೆಗಳನ್ನು ಕಡಿಮೆ ಮಾಡಲು ಆರ್ಥಿಕ ಸುಧಾರಣೆಗಳು ಮತ್ತು ಉದಾರೀಕರಣ ಕ್ರಮಗಳನ್ನು ಕೈಗೊಳ್ಳಲಾಯಿತು. 2000ದ ವೇಳೆಗೆ, ಡಾಲರ್ ದರ ಹೆಚ್ಚಿದ್ದು, ರೂಪಾಯಿ ಮೌಲ್ಯ 45ಕ್ಕೆ ತಲುಪಿತು.

chart1

21ನೇ ಶತಮಾನ: 2001ರಿಂದ 2023ರವರೆಗೆ

21ನೇ ಶತಮಾನದ ಆರಂಭಿಕ ವರ್ಷಗಳಲ್ಲಿ, 2001ರಿಂದ 2023ರವರೆಗೆ ಯುಎಸ್‌ ಡಾಲರ್ ಎದುರು ಭಾರತೀಯ ರೂಪಾಯಿ ತನ್ನ ಮೌಲ್ಯವನ್ನು ನಿರಂತರವಾಗಿ ಕಳೆದುಕೊಳ್ಳುತ್ತಾ ಬಂದಿದೆ. 2001ರಲ್ಲಿ 1 ಡಾಲರ್‌ಗೆ 47ರಂತಿದ್ದ ರೂಪಾಯಿ ಮೌಲ್ಯ 2020ರ ವೇಳೆಗೆ 75ಕ್ಕೆ ಕುಸಿಯಿತು. 2023ರ ವೇಳೆಗೆ 80ಕ್ಕೆ ಇಳಿಯಿತು. ಎಷ್ಟೇ ವಿದೇಶಿ ಹೂಡಿಕೆಗಳನ್ನು ಆಕರ್ಷಿಸಿದರೂ ಕೇಂದ್ರ ಸರ್ಕಾರದ ಕೆಲವು ಆರ್ಥಿಕ ನೀತಿಗಳಿಂದಾಗಿ ರೂಪಾಯಿ ನಿರಂತರವಾಗಿ ಮೌಲ್ಯವನ್ನು ಕಳೆದುಕೊಳ್ಳುತ್ತಲೇ ಇದೆ.

chart

ಯುಪಿಎ ಅವಧಿಯಲ್ಲಿ ರೂಪಾಯಿ ಮೌಲ್ಯ

ವರ್ಷ ರೂಪಾಯಿ ಮೌಲ್ಯ
2004 45.32
2005 44.1
2006 45.31
2007 41.35
2008 43.51
2009 48.41
2010 46.21
2011 44.65
2012 53.06
2013 54.78
2014 60.95

ಎನ್‌ಡಿಎ ಅವಧಿಯಲ್ಲಿ ರೂಪಾಯಿ ಮೌಲ್ಯ

ಕಾಂಗ್ರೆಸ್ ನೇತೃತ್ವದ ಯುಪಿಎ ಅವಧಿಯಲ್ಲಿ ಆರಂಭಿಕವಾಗಿ ರೂಪಾಯಿ ವಾಸ್ತವವಾಗಿ ಬಲಗೊಂಡಿತ್ತು. ಆದರೆ 2008ರ ಜಾಗತಿಕ ಆರ್ಥಿಕ ಬಿಕ್ಕಟ್ಟಿನ ಸಂದರ್ಭದಲ್ಲಿ ರೂಪಾಯಿ ಮೌಲ್ಯ 48ಕ್ಕೆ ಇಳಿಯಿತು. 2012-2013ರ ಯುಪಿಎ ಎರಡನೇ ಅವಧಿಯ ಅಂತ್ಯದ ವೇಳೆಗೆ, ವಿಶೇಷವಾಗಿ 2013ರಲ್ಲಿ ರೂಪಾಯಿ ಮೌಲ್ಯ ಅತಿ ಹೆಚ್ಚು ಕುಸಿದು 69ಕ್ಕೆ ತಲುಪಿತ್ತು. ಜಾಗತಿಕ, ದೇಶೀಯ ಆರ್ಥಿಕ ಸ್ಥಿತಿಯಿಂದಾಗಿ ಈ ಬದಲಾವಣೆ ಉಂಟಾಗಿತ್ತು. ಇದನ್ನೇ ಮುಂದಿಟ್ಟುಕೊಂಡು ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್ ವಿರುದ್ಧ ಬಿಜೆಪಿ ಪ್ರಚಾರವನ್ನು ಮಾಡಿತ್ತು.

ವರ್ಷರೂಪಾಯಿ ಮೌಲ್ಯ(1 ಡಾಲರ್‌ಗೆ)
1999 43.06
2000 44.94
2001 47.19
2002 48.61
2003 46.58
2004 45.32
2014 60.95
2015 66.79
2016 67.63
2017 64.94
2018 70.64
2019 72.15
2020 74.31
2021 75.45
2022 81.62
2023 82.82
2024 ~85.58
2025 ~91

ರೂಪಾಯಿ ಮೌಲ್ಯ ಕುಸಿತವಾಗಲು ಆರ್ಥಿಕ ಕಾರಣಗಳಿಗಿಂತ ದೆಹಲಿಯಲ್ಲಿ ನಡೆಯುತ್ತಿರುವ ‘ಭ್ರಷ್ಟ ರಾಜಕೀಯವೇ’ ಮುಖ್ಯ ಕಾರಣ ಎಂದು ನರೇಂದ್ರ ಮೋದಿ ಆರೋಪಿಸಿದ್ದರು. ಮೋದಿಯವರು ರೂಪಾಯಿ ಮೌಲ್ಯದ ಕುಸಿತವನ್ನು ಟೀಕಿಸುತ್ತಾ, “ರೂಪಾಯಿ ಐಸಿಯುನಲ್ಲಿದೆ” ಅಥವಾ “ಸಾವಿನ ಹಾಸಿಗೆಯ ಮೇಲಿದೆ” ಎಂದು ಹೇಳಿಕೊಂಡಿದ್ದರು. ಇನ್ನು ಬಿಜೆಪಿ ನಾಯಕಿ ಸುಷ್ಮಾ ಸ್ವರಾಜ್ ಅವರು “ರೂಪಾಯಿ ತನ್ನ ಮೌಲ್ಯವನ್ನು ಕಳೆದುಕೊಂಡಿದೆ ಮತ್ತು ಪ್ರಧಾನಿ ಮನಮೋಹನ್ ಸಿಂಗ್ ತಮ್ಮ ಗೌರವವನ್ನು ಕಳೆದುಕೊಂಡಿದ್ದಾರೆ” ಎಂದು ವಾಗ್ದಾಳಿ ನಡೆಸಿದ್ದರು.

ಪಾಕಿಸ್ತಾನ, ಶ್ರೀಲಂಕಾ ಅಥವಾ ಬಾಂಗ್ಲಾದೇಶದ ಕರೆನ್ಸಿಗಳಿಗಿಂತ ಭಾರತೀಯ ರೂಪಾಯಿ ವೇಗವಾಗಿ ಕುಸಿಯುತ್ತಿದೆ ಎಂದು ಹೇಳಿದ್ದರು. ಅಷ್ಟು ಮಾತ್ರವಲ್ಲದೆ ಬಿಜೆಪಿ ಅಧಿಕಾರಕ್ಕೆ ಬಂದರೆ ರೂಪಾಯಿ ಮೌಲ್ಯವನ್ನು ಬಲಪಡಿಸುವುದಾಗಿ ಭರವಸೆ ನೀಡಿತ್ತು. ಸುಬ್ರಮಣಿಯನ್ ಸ್ವಾಮಿಯಂತಹ ನಾಯಕರು ಬಿಜೆಪಿ ಬಂದರೆ ರೂಪಾಯಿ ಮೌಲ್ಯ ಒಂದು ಡಾಲರ್‌ಗೆ ₹35 ಆಗಬಹುದು ಎಂದು ಹೇಳಿಕೆ ನೀಡಿದ್ದರು. ಇನ್ನು ಬಿಜೆಪಿ ನಾಯಕ ನಳಿನ್ ಕುಮಾರ್ ಕಟೀಲ್ ಮೋದಿ ಪ್ರಧಾನಿಯಾದ ಎರಡು ವರ್ಷಗಳಲ್ಲಿ ಒಂದು ಡಾಲರ್ ಮೌಲ್ಯವು 15 ರೂಪಾಯಿಗೆ ಬರಲಿದೆ ಎಂದು ಹೇಳಿದ್ದರು.

ಆದರೆ ಇದೀಗ ಬಿಜೆಪಿ ಆಡಳಿತಾವಧಿಯಲ್ಲಿ ರೂಪಾಯಿ ಮೌಲ್ಯ ಸಾರ್ವಕಾಲಿಕ ಕುಸಿತ ಕಂಡಿದೆ. 2014ರಿಂದ 2025ರವರೆಗೆ ಪ್ರತಿ ಡಾಲರ್‌ಗೆ 60ರಿಂದ 91ರ ಗಡಿಯನ್ನು ಮೀರಿದೆ. ಅಂದರೆ ಸರಿ ಸುಮಾರು 31 ರೂಪಾಯಿಯಷ್ಟು ವಿನಿಮಯ ದರವನ್ನು ರೂಪಾಯಿ ಹೆಚ್ಚಿಸಿಕೊಂಡು ಮೌಲ್ಯ ಕಳೆದುಕೊಂಡಿದೆ. ಬಾಂಗ್ಲಾದೇಶ ಮತ್ತು ಪಾಕಿಸ್ತಾನದ ನಂತರ ಭಾರತದ ರೂಪಾಯಿ ಎರಡನೇ ಅತ್ಯಂತ ಕಳಪೆ ಪ್ರದರ್ಶನ ನೀಡುವ ಕರೆನ್ಸಿಯಾಗಿದೆ. ಈ ನಡುವೆ ಅಂದಿನ ಬಿಜೆಪಿಯ ಹೇಳಿಕೆಗಳನ್ನು ವಿರೋಧ ಪಕ್ಷಗಳು ಪ್ರಸ್ತುತ ಸರ್ಕಾರದ ವಿರುದ್ಧ ಅಸ್ತ್ರವಾಗಿ ಬಳಸುತ್ತಿವೆ. ನೆಟ್ಟಿಗರೂ ಮೋದಿ ಸರ್ಕಾರವನ್ನು ಟ್ರೋಲ್ ಮಾಡುತ್ತಿದೆ.

WhatsApp Image 2025 11 17 at 4.20.34 PM
+ posts

ಪತ್ರಕರ್ತೆ, 2019ರಿಂದ ಪತ್ರಿಕೋದ್ಯಮವೇ ಬದುಕು. ರಾಜಕೀಯ, ಬ್ಯುಜಿನೆಸ್‌ ಸುದ್ದಿಗಳಲ್ಲಿ ಆಸಕ್ತಿ.

WhatsApp Image 2025 12 30 at 12.53.05 e1767182607658
Sanju N J

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಕೇಂದ್ರವನ್ನು ಟೀಕಿಸಿದ ಸಾಮಾಜಿಕ ಮಾಧ್ಯಮ ಖಾತೆಗಳು ಮಂಗಮಾಯ: ಉಳಿಯುವುದು ಬರೀ ಮೋದಿಮಯ!

ಹೀಗೆ ಮೋದಿ ಸರ್ಕಾರವನ್ನು ವಿರೋಧಿಸಿದವರ ಖಾತೆಗಳು ಸಾಮಾಜಿಕ ಮಾಧ್ಯಮಗಳಿಂದ ಅಳಿಸಿ ಕೊನೆಗೆ...

ಒಂದು ಕಡೆ ಖಾದ್ಯತೈಲ ಬೆಲೆ ಏರಿಕೆ; ಮತ್ತೊಂದು ಕಡೆ ಕುಸುಬೆ ಬೆಲೆ ಕುಸಿತದಿಂದ ರೈತರಿಗೆ ಹೊರೆ

ಖಾದ್ಯತೈಲ ಬೆಲೆ ಏರಿಕೆ ಗ್ರಾಹಕರ ಜೇಬಿಗೆ ಭಾರವಾದರೆ, ಕುಸುಬೆ ಬೆಲೆ ಕುಸಿತ...