ವಿಜಯಪುರ | ವಿಜಯ ಪತಾಕೆ ಹಾರಿಸಿದ ಸರ್ಕಾರಿ ವೈದ್ಯಕೀಯ ಕಾಲೇಜು ಹೋರಾಟ

Date:

ಹೋರಾಟಗಾರರ ಮೇಲೆ ಕೊಲೆಯ ಆರೋಪ ಮಾಡಿ ಆರು ಜನನಾಯಕರನ್ನು ಜೈಲಿಗಟ್ಟಿತು ಮತ್ತು ಉಳಿದ 27 ಜನರ‌ ಮೇಲೆ ಕೊಲೆಗೆ ಯತ್ನ, ಅಕ್ರಮ ಕೂಟ, ಸರ್ಕಾರಿ ಕೆಲಸಕ್ಕೆ ಅಡ್ಡಿ ಮುಂತಾದ ಪ್ರಕರಣಗಳನ್ನು ದಾಖಲಿಸಿತು. ಜನವರಿ 09 ರ ಮುಖ್ಯಮಂತ್ರಿಗಳ ಕಾರ್ಯಕ್ರಮ ಸಂಘಟಿಸುವುದೇ ರಾಜ್ಯ ಸರ್ಕಾರ ಮತ್ತು ಜಿಲ್ಲಾಡಳಿತಕ್ಕೆ ದೊಡ್ಡ ತಲೆನೋವಾಯಿತು. ಬೇರೆ ದಾರಿಯೇ ಇಲ್ಲದೇ ಸ್ವತ: ಮುಖ್ಯಮಂತ್ರಿಗಳು ಹಾವೇರಿಯ ಕಾರ್ಯಕ್ರಮದಲ್ಲಿ ವಿಜಯಪುರ ಸರ್ಕಾರಿ ವೈದ್ಯಕೀಯ ಕಾಲೇಜನ್ನು ಘೋಷಿಸುವಂತಾಯಿತು.

ಹೌದು, ವಿಜಯಪುರದ ಜನರು ಕಟ್ಟಿದರೆ ಗೋಲಗುಮ್ಮಟ ಇಲ್ಲದಿದ್ದರೆ ಬಾರಾಕಮಾನ್ ಎನ್ನುವ ಮಾತು ಮತ್ತೊಮ್ಮೆ ಸಾಬೀತಾಯಿತು. ನಾಲ್ಕು ತಿಂಗಳಿಂದ ಸರ್ಕಾರಿ ವೈದ್ಯಕೀಯ ಕಾಲೇಜಿಗಾಗಿ ಹೋರಾಡಿ ವಿಜಯಪತಾಕೆ ಹಾರಿಸಿದ ವಿಜಯಪುರ ಮತ್ತೊಮ್ಮೆ ರಾಜ್ಯದಲ್ಲಿ ಸುದ್ದಿಮಾಡುತ್ತಿದೆ. ಇಡೀ ರಾಜ್ಯ ಮತ್ತು ರಾಷ್ಟ್ರಮಟ್ಟದಲ್ಲಿ ದೊಡ್ಡ ಸದ್ದು ಮಾಡುತ್ತಿದೆ. ಈ ಗಟ್ಟಿ ಹೋರಾಟದ ಪರಿಣಾಮ ಎಷ್ಟಿತ್ತೆಂದರೆ ವಿಜಯಪುರವೂ ಸೇರಿದಂತೆ ಇಡೀ ರಾಜ್ಯಾದ್ಯಂತ ಎಲ್ಲಾ ಜಿಲ್ಲೆಗಳಲ್ಲೂ ಸರ್ಕಾರಿ ವೈದ್ಯಕೀಯ ಕಾಲೇಜನ್ನೇ ಆರಂಭಿಸುತ್ತೇವೆ. ಪಿಪಿಪಿ ಮಾದರಿ ಕೈ ಬಿಟ್ಟಿದ್ದೇವೆ ಎಂದು ಸ್ವತ: ಮುಖ್ಯಮಂತ್ರಿಯವರೇ ಘೋಷಿಸಬೇಕಾಯಿತು.

ಸರ್ಕಾರಿ ಸಂಸ್ಥೆಗಳನ್ನು ಕಟ್ಟಿ ಬೆಳೆಸಬೇಕಾದ ಶಾಸಕರುಗಳೇ ಸರ್ಕಾರಿ ಸಂಸ್ಥೆಗಳನ್ನು ಖರೀದಿಸುವ ಪರೋಕ್ಷ ಪ್ರಯತ್ನವು ವಿಜಯಪುರ ಜನರ ಕೆಂಗಣ್ಣಿಗೆ ಗುರಿಯಾಯಿತು. ಎರಡು ಬಾರಿ ರಾಷ್ಟ್ರಮಟ್ಟದಲ್ಲಿ ಅತ್ಯುತ್ತಮ‌ ಆಸ್ಪತ್ರೆ ಎಂದು ಹೆಸರು ಮಾಡಿದ ಜಿಲ್ಲಾಸ್ಪತ್ರೆಯೂ ಪಿಪಿಪಿ (ಪಬ್ಲಿಕ್ ಪ್ರೈವೇಟ್ ಪಾರ್ಟ್ನಶಿಪ್‌) ಹೆಸರಲ್ಲಿ ಖಾಸಗಿಯವರ ಪಾಲಾಗುತ್ತದೆ ಮತ್ತು ಜನ ಸಾಮಾನ್ಯರ ಆರೋಗ್ಯ ಸೌಲಭ್ಯ ಅಪಾಯಕ್ಕೆ ಸಿಲುಕುತ್ತದೆ ಎನ್ನುವುದು ಖಾತ್ರಿಯಾಯಿತು. ಇದು ಜಿಲ್ಲೆಯ ಜನರಿಗೆ ಸರ್ಕಾರವೇ ಬಗೆದ ಘೋರ ಅನ್ಯಾಯವಾಯಿತು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ದೇಶದಲ್ಲಿಯೇ ಅತಿ ಹೆಚ್ಚು ಜಮೀನು- 149 ಎಕರೆ 12 ಗುಂಟೆ ವಿಸ್ತೀರ್ಣ ಹೊಂದಿರುವ ಏಕೈಕ ಆಸ್ಪತ್ರೆ ಇದಾಗಿದೆ. ವೈದ್ಯಕೀಯ ಕಾಲೇಜು ಆರಂಭಿಸಲು ಒಂದಿಂಚು ಜಮೀನು ಖರೀದಿಸುವ ಭಾರವೂ ಸರಕಾರದ ಮೇಲೆ ಬೀಳುತ್ತಿರಲಿಲ್ಲ. ಪ್ರತಿ ದಿನಕ್ಕೆ ಅಂದಾಜು 1,500ಕ್ಕೂ ಹೆಚ್ಚು ಒಳ ರೋಗಿ ಹಾಗೂ ಹೊರರೋಗಿಗಳ ದಾಖಲಾತಿ ಇದೆ. ಜಿಲ್ಲಾಸ್ಪತ್ರೆಯಲ್ಲಿ ಎಂಆರ್‌ಐ ಸ್ಕ್ಯಾನಿಂಗ್ ಮತ್ತು ಸಿಟಿ ಸ್ಕ್ಯಾನ್ ಸೌಲಭ್ಯ, ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯ ದೊಡ್ಡ ಕಟ್ಟಡ, ಪಂಚಕರ್ಮ ಮತ್ತು ಪ್ರಕೃತಿ ಚಿಕಿತ್ಸಾಲಯ ಸೌಲಭ್ಯ ಕಟ್ಟಡ ಹೊಂದಿದೆ.

670 ಬೆಡ್‌ಗಳ ಜನರಲ್ ಆಸ್ಪತ್ರೆ, 150 ಬೆಡ್‌ಗಳು ತಾಯಿ ಮತ್ತು ಮಕ್ಕಳ ಆಸ್ಪತ್ರೆ, 60 ಬೆಡ್‌ಗಳ ಟ್ರಾಮಾಸೆಂಟರ್ ಇದೆ. ತುರ್ತುನಿಗಾ ಘಟಕ, ಆಕ್ಸಿಜನ್ ಪ್ಲಾಂಟ್, ತುರ್ತು ಅಪಘಾತ ಘಟಕ, ಹೈಟೆಕ್ ಶವಾಗಾರ ಸಾರ್ವಜನಿಕರ ಸೇವೆಯಲ್ಲಿದೆ. ಈಗಾಗಲೇ ಬಿ.ಎಸ್‌ಸಿ ನರ್ಸಿಂಗ್ ಕಾಲೇಜು ಇತರೆ ವೃತ್ತಿಪರ ಪ್ಯಾರಾ ಮೆಡಿಕಲ್ ಕೋರ್ಸ್ ಕಟ್ಟಡ ಹೊಂದಿ, ಕಾರ್ಯನಿರ್ವಹಿಸುತ್ತಿವೆ. ಸ್ವತ: ಸರ್ಕಾರವೇ ಡಿ.ಎನ್.ಬಿ ಮತ್ತು ಎಮ್ ಎಸ್ ಎಮ್ ಡಿ‌ಗೂ‌ ಮುಂದಿನ‌ ಶೈಕ್ಷಣಿಕ‌ ವರ್ಷದಿಂದ ಅನುಮತಿ ನೀಡಿತ್ತು. ಇಷ್ಟೆಲ್ಲಾ ಮೂಲ ಸೌಕರ್ಯಗಳನ್ನು ಹೊಂದಿರುವ ಸ್ಥಳದಲ್ಲಿ ಸರ್ಕಾರಿ ಕಾಲೇಜು ನೀಡದ ರಾಜ್ಯ ಸರ್ಕಾರ ಮತ್ತು ಪಿಪಿಪಿಯಡಿ ಬೆಣ್ಣೆ ಮೇಯಲುದ್ದೇಶಿಸಿದ ಜಿಲ್ಲೆಯ ಜನಪ್ರತಿನಿಧಿಗಳ ಧೂರ್ತ ನೀತಿಯು ಜನರಿಗೆ ಇನ್ನಷ್ಟು ಆಕ್ರೋಶ ಉಂಟುಮಾಡಿತು.

ಪಿಪಿಪಿ ನೀತಿಯ ವಿರುದ್ದ ಅಲ್ಲಲ್ಲಿ ಹೋರಾಟದ ಜರಿಗಳು ಕಾಣತೊಡಗಿದವು. ಹಲವು ದಶಕಗಳ ಹಿಂದೆಯ ದ್ವನಿ‌ ಎತ್ತಿದ ವಿದ್ಯಾರ್ಥಿ- ಯುವಜನ ಸಂಘಟನೆಗಳು, ಶಿಕ್ಷಣ ಪ್ರೇಮಿಗಳು ಕೂಗು ಹೆಚ್ಚುತ್ತಾ ಹೋಯಿತು. ಜನರ ನಂಬಿಕೆಯನ್ನು ದುರುಪಯೋಗ ಪಡಿಸಿಕೊಳ್ಳುವ ಶಕ್ತಿಗಳ ಅಟ್ಟಹಾಸ ಎಲ್ಲೆಡೆ ಕಾಣುತ್ತಿರುವ ಸಂದರ್ಭದಲ್ಲಿ ಪ್ರಾಮಾಣಿಕ ಹೋರಾಟಗಾರರ ನಾಯಕತ್ವದಲ್ಲಿ ಹಲವಾರು ಸಂಘಟನೆಗಳನ್ನೊಳಗೊಂಡ ಪಾರದರ್ಶಕ, ಪಕ್ಷಾತೀತ, ಜಾತ್ಯತೀತ ಹೋರಾಟದ ಶಿಶುವೊಂದು ಆಗಷ್ಟ್‌ 26ರಂದು ಉದಯಿಸಿತು. ಮೊದಲ ಅಂಬೆಗಾಲನ್ನು ಸೆಪ್ಟೆಂಬರ್ 28 ರಂದು ಇಟ್ಟು‌ ಜಿಲ್ಲಾಧಿಕಾರಿಗಳ ಮೂಲಕ ಮಾನ್ಯ ಮುಖ್ಯ ಮಂತ್ರಿಗಳಿಗೆ ಮನವಿ ಸಲ್ಲಿಸಲಾಯಿತು. ಅದಾದ ಮೇಲಿಂದ ಮುಂದೆ ಇಟ್ಟ ಪ್ರತಿ ಹೆಜ್ಜೆಯೂ ಐತಿಹಾಸಿಕವಾಗುತ್ತಲೇ ಹೊರಟಿತು.

ಆರಂಭದಲ್ಲಿ ಈ ಹೋರಾಟ ಕೂಡ ಮಿಂಚಿ ಮಾಯವಾಗುವ ಮಿಂಚುಳ್ಳಿ ಎಂದೇ ಕೆಲವರು‌ ಭಾವಿಸಿದ್ದರು. ಆದರೆ, ಅವರಿಗೆ ಗೊತ್ತಿರಲಿಲ್ಲ ಹೋರಾಟದ ಆಧಾರ ಸ್ತಂಭದಂತಿದ್ದ ಕೆಲವರೆದೆಯಲ್ಲಿ ಎಂದೂ ಬತ್ತದ ಉತ್ಸಾಹಪೂರಿತ ಹೋರಾಟದ ನಿಗಿನಿಗಿ ಸೂರ್ಯನಿದ್ದ ಎನ್ನುವುದು. ಆರಂಭದಲ್ಲಿ ಹೋರಾಟಗಾರರು ನಿಧಾನವಾಗಿದ್ದರು. ಆದರೆ ಪಿಪಿಪಿ(ಗಳು)ಯು ನಿಧಾನವಾಗಿರಲಿಲ್ಲ. ಸೆಪ್ಪೆಂಬರ್ 22ಕ್ಕೆ ಜಾರಿಯಾಗುವಂತೆ ನೋಡಲ್‌ ಅಧಿಕಾರಿಯ ನೇಮಕವಾಗಿ ಕಾರ್ಯಪ್ರವೃತ್ತರಾಗಲೂ ಆದೇಶವನ್ನೂ ತಂದರು. ಅಲ್ಲಿಂದ ಹೋರಾಟದ ಓಘವೇ ಬೇರೆಯಾಯಿತು. ಅನಿರ್ದಿಷ್ಟ ಧರಣಿಗೆ ಸೆಪ್ಟೆಂಬರ್ 20-21 ತಡವಾಗುತ್ತದೆ, 16-17 ಬೇಗನೆ‌ಯಾಗುತ್ತದೆ ಎಂದು ಯೋಚಿಸಿ ಸೆಪ್ಟೆಂಬರ್ 18 ರಂದು ಸುರಿವ ಮಳೆಯ ಮಧ್ಯದಲ್ಲಿಯೇ ಹಳೆ ಬ್ಯಾನರ್ ಪ್ಲಾಸ್ಟಿಕ್ ಕವರ್‌ಗಳನ್ನೇ ಛತ್ರಿಯನ್ನಾಗಿಸಿಕೊಂಡು ಸುರಿವ ಮಳೆಯ ಮಧ್ಯದಲ್ಲೇ ಅನಿರ್ದಿಷ್ಟ ಧರಣಿ ಆರಂಭಗೊಂಡಿತು.

ಆರಂಭದಲ್ಲಿ‌ ಎಲ್ಲರೂ 500, 1000 ಹಣ ಸೇರಿಸಿ ಖರ್ಚು ಮಾಡಿದೆವು. ಮತ್ತೊಮ್ಮೆ ಎರಡನೆ ಬಾರಿಯೂ ಇದೇ ರೀತಿ ಹಣ ಸಂಗ್ರಹಿಸಿ ಖರ್ಚು ಮಾಡಿದೆವು. ನಂತರ ಜನರ ಬಳಿ ಸಹಾಯ ಕೇಳುವುದು ಅನಿವಾರ್ಯವಾಯಿತು. ಹೋರಾಟಗಳು ಮತ್ತು ಅದರ ನಾಯಕತ್ವ ಪ್ರಾಮಾಣಿಕವಾಗಿದ್ದರೆ ಜನ ಉದಾರವಾಗಿ ಸಹಾಯ ಹಸ್ತ ಚಾಚಬಲ್ಲರು ಎನ್ನುವುದಕ್ಕೆ ದೊಡ್ಡ ನಿದರ್ಶನವೇ ಈ ಹೋರಾಟ!

ಆರಂಭದಲ್ಲಿ ಬುತ್ತಿಕಟ್ಟಿಕೊಂಡು ಊಟ ಮಾಡುತ್ತಿದ್ದೆವು. ಮುಂದೆ ಕೆಲವರು ದಾನಿಗಳು ಸ್ವಯಂಪ್ರೇರಿತವಾಗಿ ಊಟವನ್ನು ಕೊಡಲಾರಂಭಿಸಿದರು. ಒಂದೊಂದು ಸಂದರ್ಭವೂ ಬದುಕಿನುದ್ದಕ್ಕೂ ಮೆಲುಕು ಹಾಕುವಂತಹವುಗಳೆ. ಓರ್ವ ತಾಯಿ 70 ಕಿ.ಮೀ. ದೂರದ ಹಳ್ಳಿಯಿಂದ ಅಡುಗೆ ಮಾಡಿಕೊಂಡು ತಂದು ಊಟ ಬಡಿಸಿದ್ದಾರೆ, ಇನ್ನೊಬ್ಬರು ನುಚ್ಚ ಮಜ್ಜಿಗೆಯನ್ನೂ ತಂದೂ ಕೊಟ್ಟಿದ್ದಾರೆ, ಒಮ್ಮೊಮ್ಮೆ ದಾನಿಗಳು ಹೋಳಿಗೆಯೂಟವನ್ನೂ ಮಾಡಿಸಿದ್ದಾರೆ. ಯಾರೂ ದಾನಿಗಳು ಸಿಗದೇ ಇದ್ದಾಗ ಹೋರಾಟಗಾರರೇ ತಲೆಪಟ್ಟಿ ಹಾಕಿ ಅಂದಿನ‌ ಊಟ ಮಾಡಿದ್ದಾರೆ. ಆದರೂ ‘ಪೇಮೆಂಟ್ ಗಿರಾಕಿ’ ಎಂಬ ಹಣೆಪಟ್ಟಿಯನ್ನು ನಗರ ಶಾಶಕರು ಕಟ್ಟಿದರು. ಅವರ ಮಾತನ್ನು ತುಂಬಾ ಸಂತಸದಿಂದ ಸ್ವೀಕರಿಸಿ ಹೌದು ನಾವು ‘ಜನರ ಪೇಮೆಂಟ್ ಗಿರಾಕಿ‌ಗಳು’ ಎಂದು ಸಾರಿ ಹೇಳಿದೆವು. ಅತಿ ಕಡಿಮೆ ವಸ್ತುಗಳನ್ನು ಖರೀದಿಸಿದ್ದು ಅಥವಾ ಬಾಡಿಗೆ ಕೊಟ್ಟದ್ದು ಬಿಟ್ಟರೆ ಕುಳಿತುಕೊಳ್ಳಲು ಚಾಪೆ, ಜಮಖಾನಾ, ಟೆಂಟ್, ಪೆಂಡಾಲ್, ಊಟದ ತಟ್ಟೆ, ಪಾತ್ರೆಗಳು, ಬ್ಯಾರಲ್, ಮೈಕ್, ಪೆನ್ನು, ಪೇಪರ್, ಅಡುಗೆಗೆ ಕಟ್ಟಿಗೆ ಎಲ್ಲವನ್ನೂ ಜನರೇ ನೀಡಿದರು. ಹೊಗಳಿಕೆ, ತೆಗಳಿಕೆ, ಬೊಗಳುವಿಕೆ ಎಲ್ಲವನ್ನೂ ಸಮಾನ ಮನಸ್ಥಿತಿಯಿಂದ ತೆಗೆದುಕೊಳ್ಳುತ್ತಾ ಹೋರಾಟ ಇನ್ನಷ್ಟು ಗಟ್ಟಿಗೊಳ್ಳುತ್ತಾ ಹೋಯಿತು.

ಈ ಹೋರಾಟವನ್ನು ಬಿಜೆಪಿ, ಕಾಂಗ್ರೆಸ್, ಜೆಡಿಎಸ್, ಆಮ್‌ ಆದ್ಮಿ, ಎಸ್ ಡಿ‌ಪಿಐ ಕಮ್ಯೂನಿಷ್ಟ್ ಪಕ್ಷಗಳು ಬೆಂಬಲಿಸಿದವು. ಜೊತೆಗೆ ವಿಶ್ವ ಹಿಂದೂ ಪರಿಷತ್, ಜಮಾಅತ್ ಎ ಇಸ್ಲಾಂ, ದಲಿತ, ಕಾರ್ಮಿಕ, ರೈತ ಸಂಘಟನೆಗಳು ಒಟ್ಟಾಗಿ ಹೋರಾಟಕ್ಕೆ ಧುಮುಕಿದರು. ಜಾತಿ, ಧರ್ಮ, ಭಾಷೆ , ಸಿದ್ದಾಂತ, ವೈಚಾರಿಕತೆ ಎಲ್ಲವನ್ನು ಮೀರಿ ಜನರು ಒಂದಾದರು. ತಮ್ಮೆಲ್ಲ ಸಂಘ ಸಂಸ್ಥೆಗಳ ಅಸ್ಮಿತೆಯನ್ನು ಪಕ್ಕಕ್ಕಿಟ್ಟು ಜಿಲ್ಲೆಯ ಹಿತಾಸಕ್ತಿಗೆ ಪಕ್ಷ ಭೇದ ಮರೆತು ಹೋರಾಟದಲ್ಲಿ ಜೊತೆಯಾಗಿ ಹೆಜ್ಜೆ ಹಾಕಿದರು. ಈ ಎಲ್ಲ ಕಾರಣಗಳಿಗಾಗಿ ನಿಜಕ್ಕೂ ಈ ಹೋರಾಟ ಒಂದು ನಿದರ್ಶನೀಯ ಮತ್ತು ಅನುಕರಣೀಯ ಹೋರಾಟವಾಗಿದೆ. ಹೋರಾಟದ ನಾಯಕತ್ವವೂ ಈ ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಹೋರಾಟದ ಧ್ಯೇಯವನ್ನು ಒಂದಿಂಚು ಅಲುಗಾಡಲು ಬಿಡಲಿಲ್ಲ. ಕಸಕಡ್ಡಿಗಳನ್ನು ತೂರಿಬಿಡುತ್ತಾ, ಹೋರಾಟದ ಹಾದಿಯಲ್ಲಿನ ಕಲ್ಲು ಮುಳ್ಳುಗಳನ್ನು ಪಕ್ಕಕ್ಕೆ ತಳ್ಳುತ್ತಾ ಬಹಳ ಅದ್ಬುತವಾಗಿ ಹೋರಾಟ ಸಂಘಟಿಸಿತು.

WhatsApp Image 2026 01 08 at 2.50.25 PM

ರಾಜ್ಯ ಮತ್ತು ದೇಶದ ರಾಜಕೀಯವೇ ಗಬ್ಬೆದ್ದು ನಾರುತ್ತಿರುವಾಗ ವಿಜಯಪುರದ ರಾಜಕೀಯವೂ ಇದಕ್ಕೆ ಹೊರತಾಗಿಲ್ಲ. ಕೆಲವರನ್ನು ಮಾತ್ರ ಹೊರತುಪಡಿಸಿ ಧರಣಿ ಸ್ಥಳಕ್ಕೆ ಬಂದ ರಾಜಕಾರಣಿಗಳೆಲ್ಲರೂ ಮೆಡಿಕಲ್ ಕಾಲೇಜು ಹೋರಾಟದ ಬೆಂಕಿಯಲ್ಲಿ ತಮ್ಮ ಬೇಳೆಯನ್ನು ಬೇಯಿಸಿಕೊಳ್ಳಲು ಬಂದವರೇ. ನಂತರದ ದಿನಗಳಲ್ಲಿ ಜಿಲ್ಲೆಯ ಇಬ್ಬರೂ ಸಚಿವರುಗಳು ಪ್ರಾಮಾಣಿಕ ಕೆಲಸ ಮಾಡಿದರಾದರೂ ಆರಂಭದಲ್ಲಿ ಈ ಹೋರಾಟದಲ್ಲೂ ರಾಜಕೀಯವನ್ನೇ ಮಾಡಿದರು. ಕೆಲವು ಶಾಸಕರುಗಳು ಬಂದು ಮುಖ ತೋರಿಸಿ ಹೋದವರು ಇತ್ತ ಸುಳಿಯಲೇ ಇಲ್ಲ. ಇನ್ನು ಕೆಲವರು ಅಂಬೇಡ್ಕರ್ ವೃತ್ತಕ್ಕೆ ಹಲವಾರು ಬಾರಿ‌ ಬಂದರೂ ಧರಣಿ ಸ್ಥಳಕ್ಕೆ ಬಂದು ಬೆಂಬಲಿಸಲಿಲ್ಲ. ಕೆಲವು ಶಾಸಕರು ಇತ್ತ ಮುಖವನ್ನೂ ತೋರಿಸಲಿಲ್ಲ. ಹೌದು, ಇತಿಹಾಸವಷ್ಟೇ ಅಲ್ಲ, ಅವರ ಆತ್ಮಸಾಕ್ಷಿಯೂ ಚಿರಿ ಚಿರಿ ಹೇಳುತ್ತಿರುತ್ತದೆ ಈ ಐತಿಹಾಸಿಕ ಹೋರಾಟದಲ್ಲಿ ಅವರು ಅನ್ಯಾಯದ ಪರವಾಗಿದ್ದರು ಎಂದು.

ಈ ಹೋರಾಟದಲ್ಲಿ ಹೊಸ ಹೊಸ ಹೋರಾಟದ ಮಾದರಿಗಳೇ ರೂಪುಗೊಂಡವು. ಕವಿಗೋಷ್ಠಿ, ಅರ್ಕೆಸ್ಟ್ರಾ ತಂಡಗಳು, ಒಂದು ಲಕ್ಷ ಪತ್ರಗಳ ಚಳವಳಿ, ರಕ್ತಸಹಿ ಸಂಗ್ರಹ, ಭಜನೆ ಮಾಡುವುದು, ಚಿತ್ರ ಬಿಡಿಸುವುದು, ರಂಗೋಲಿ ಹಾಕುವುದು ಆಹೋರಾತ್ರಿ ಧರಣಿ, ಹೀಗೆ ಹಲವಾರು ವಿಧದ ಹೋರಾಟಗಳನ್ನು ಸಂಘಟಿಸಲಾಯಿತು. ದಸರಾ, ದೀಪಾವಳಿ, ಹೊಸವರ್ಷ, ಎಳ್ಳಮವಾಸ್ಯೆ ಹೀಗೆ ಬಂದ ಎಲ್ಲ ಹಬ್ಬಹರಿದಿನಗಳು ಹೋರಾಟದ ಭಾಗವಾಗಿಯೇ ಕಳೆದವು. ಸುರಿವ ಮಳೆ, ಕೊರೆವ ಚಳಿ ಎಲ್ಲದರ ಮಧ್ಯದಲ್ಲೂ ಸಹಸ್ರಾರು ವಿದ್ಯಾರ್ಥಿಗಳು, ಮಹಿಳೆಯರು, ಕಾರ್ಮಿಕರು, ರೈತರು ಬೀದಿಗಿಳಿದರು.

ಜಿಲ್ಲೆಯ ಎಲ್ಲಾ ಜನ ಪ್ರತಿನಿಧಿಗಳಿಗೆ ಮತ್ತು ರಾಜ್ಯ ಸರ್ಕಾರಕ್ಕೆ ಈ ಹೋರಾಟ ಬಿಸಿ ತುಪ್ಪವಾಯಿತು. ಅದರಿಂದಾಗಿಯೇ ಹೋರಾಟಗಾರರ ಮೇಲೆ ಕೊಲೆಯ ಆರೋಪ ಮಾಡಿ ಆರು ಜನನಾಯಕರನ್ನು ಜೈಲಿಗಟ್ಟಿತು ಮತ್ತು ಉಳಿದ 27 ಜನರ‌ ಮೇಲೆ ಕೊಲೆಗೆ ಯತ್ನ, ಅಕ್ರಮ ಕೂಟ, ಸರ್ಕಾರಿ ಕೆಲಸಕ್ಕೆ ಅಡ್ಡಿ ಮುಂತಾದ ಪ್ರಕರಣಗಳನ್ನು ದಾಖಲಿಸಿತು. ಅಷ್ಟೇ ಅಲ್ಲ ಮಧ್ಯರಾತ್ರಿ ವಿಜಯಪುರದ ಎಲ್ಲಾ ಪೊಲೀಸ್ ಅಧಿಕಾರಿಗಳು, ಮಹಾನಗರ ಪಾಲಿಕೆಯ ಸಿಬ್ಬಂದಿ, ಜೆಸಿಬಿಗಳು, ಟ್ರ್ಯಾಕ್ಟರ್ ಗಳು, ವ್ಯಾನ್ ಗಳು, ನೂರಾರು ಪೊಲೀಸರು ಸೇರಿ ಧರಣಿ ಸ್ಥಳವನ್ನು ತೆರವುಗೊಳಿಸಿದರು. ತೆರವುಗೊಳಿಸಿದರು ಎನ್ನುವುದಕ್ಕಿಂತಲೂ ದರೋಡೆಕೋರರಂತೆ ಎಲ್ಲವನ್ನೂ ದೋಚಿಕೊಂಡು ಹೋದರು.

WhatsApp Image 2026 01 08 at 2.50.23 PM

ಒಟ್ಟಿನಲ್ಲಿ ಇಡೀ ಹೋರಾಟ ಹೊಸಕಿ ಹಾಕಿ, ಹೆಡೆಮುರಿ ಕಟ್ಟಿದೆವು ಎಂದು ರಾಜ್ಯ ಸರ್ಕಾರ ಮತ್ತು ಜಿಲ್ಲಾಡಳಿತ ಮಣ್ಣಲ್ಲಿ ಮುಖ ಮುಚ್ಚಿಕೊಂಡ ಉಷ್ಟ್ರಪಕ್ಷಿಯಂತೆ ಭಾವಿಸಿತು. ಜಿಲ್ಲಾಡಳಿತ ಬೆಳಿಗ್ಗೆ ಕಣ್ಣು ತೆರೆಯುವಷ್ಟರಲ್ಲಿ. ನೂರಾರು‌ ಅಗ್ರಹಗಳು, ಪ್ರತಿಭಟನೆಗಳು, ಪ್ರಕರಣ ಕೈ ಬಿಡಲು ಮನವಿ, ಹೋರಾಟಗಾರನ್ನು ಜೈಲಿಂದ ಬಿಡಿಸಲು ಒತ್ತಾಯ, ಪತ್ರಿಕಾಗೋಷ್ಠಿಗಳು, ಆರಂಭಗೊಂಡವು. ಇಡೀ ವಿಜಯಪುರ ವಾತಾವರಣವೇ ಬೂದಿ ಮುಚ್ಚಿದ ಕೆಂಡದಂತಾಯಿತು. ಜನವರಿ 09 ರ ಮುಖ್ಯಮಂತ್ರಿಗಳ ಕಾರ್ಯಕ್ರಮ ಸಂಘಟಿಸುವುದೇ ರಾಜ್ಯ ಸರ್ಕಾರ ಮತ್ತು ಜಿಲ್ಲಾಡಳಿತಕ್ಕೆ ದೊಡ್ಡ ತಲೆನೋವಾಯಿತು. ಆದುದರಿಂದಲೇ ರಾಜ್ಯ ಸರ್ಕಾರಕ್ಕೆ ಬೇರೆ ದಾರಿಯೇ ಇಲ್ಲದೇ ಸ್ವತ: ಮುಖ್ಯಮಂತ್ರಿಗಳು ಹಾವೇರಿಯ ಕಾರ್ಯಕ್ರಮದಲ್ಲಿ ಈ ವಿಜಯಪುರ ಸರ್ಕಾರಿ ವೈದ್ಯಕೀಯ ಕಾಲೇಜನ್ನು ಘೋಷಿಸುವಂತಾಯಿತು.

‘ಜನರಲ್ಲಿ ಒಗ್ಗಟ್ಟಿಲ್ಲ, ಜಾತಿ ಧರ್ಮಗಳಲ್ಲಿ ಕಳೆದು ಹೋಗಿದ್ದಾರೆ, ರಾಜಕೀಯ ಪಕ್ಷಗಳಲ್ಲಿ‌ ಮುಳುಗಿದ್ದಾರೆ, ಸಾಮಾಜಿಕ ಕಳಕಳಿ ಇಲ್ಲ, ಜನ ಹೋರಾಟಗಳಿಗೆ ಭವಿಷ್ಯವಿಲ್ಲ’ ಎಂಬ ನಿರಾಶಾವಾದಿಗಳಿಗೆ ಈ ಹೋರಾಟದಲ್ಲೊಂದು ಪಾಠವಿದೆ. ಕಾರ್ಪೋರೇಟ್ ಮನೆತನಗಳ ವಿರುದ್ದವೂ ಸಂಘಟಿತ ಪ್ರಯತ್ನಗಳು ಜಯಗಳಿಸಬಲ್ಲವು ಎನ್ನುವುದು ತೋರಿಸಿಕೊಟ್ಟಿದೆ. ಹೋರಾಟದಿಂದ ಏನೂ ಆಗುವುದಿಲ್ಲ ಎನ್ನುವವರಿಗೆ ‘ಹೇಳದಿರು, ಹೋರಾಡಿ ಫಲವಿಲ್ಲವೆಂದು’ ಎಂಬ ಪಾಠವನ್ನು ಗಟ್ಟಿಯಾಗಿ ಹೇಳಿದೆ.

ಮುಂದಿನ‌ ದಿನಗಳಲ್ಲಿ ಜಿಲ್ಲೆಯ ಜನಪ್ರತಿನಿಧಿಗಳು ಮತ್ತು ರಾಜ್ಯ ಸರ್ಕಾರ ಕೊಟ್ಟ ಮಾತು ಉಳಿಸಿಕೊಳ್ಳುವ ಜವಾಬ್ದಾರಿ ತೋರಿಸಬೇಕಿದೆ. ಮತ್ತೊಂದೆಡೆ ಸರ್ಕಾರಿ ವೈದ್ಯಕೀಯ ಕಾಲೇಜಿನ ಈ ಘೋಷಣೆ ಕಾರ್ಯರೂಪಕ್ಕೆ ತರುವವರೆಗೂ ಎಚ್ಚರದಿಂದಿರುವ ಜವಾಬ್ದಾರಿ ಜಿಲ್ಲೆಯ ಜನರ ಮೇಲಿದೆ.

WhatsApp Image 2025 11 01 at 11.43.46 AM
ಹೆಚ್.ಟಿ. ಭರತಕುಮಾರ
+ posts

ಲೇಖಕರು,
ಸಾಮಾಜಿಕ ಕಾರ್ಯಕರ್ತರು, ವಿಜಯಪುರ

ಪೋಸ್ಟ್ ಹಂಚಿಕೊಳ್ಳಿ:

ಹೆಚ್.ಟಿ. ಭರತಕುಮಾರ
ಹೆಚ್.ಟಿ. ಭರತಕುಮಾರ
ಲೇಖಕರು, ಸಾಮಾಜಿಕ ಕಾರ್ಯಕರ್ತರು, ವಿಜಯಪುರ

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಕೇಂದ್ರವನ್ನು ಟೀಕಿಸಿದ ಸಾಮಾಜಿಕ ಮಾಧ್ಯಮ ಖಾತೆಗಳು ಮಂಗಮಾಯ: ಉಳಿಯುವುದು ಬರೀ ಮೋದಿಮಯ!

ಹೀಗೆ ಮೋದಿ ಸರ್ಕಾರವನ್ನು ವಿರೋಧಿಸಿದವರ ಖಾತೆಗಳು ಸಾಮಾಜಿಕ ಮಾಧ್ಯಮಗಳಿಂದ ಅಳಿಸಿ ಕೊನೆಗೆ...

ಒಂದು ಕಡೆ ಖಾದ್ಯತೈಲ ಬೆಲೆ ಏರಿಕೆ; ಮತ್ತೊಂದು ಕಡೆ ಕುಸುಬೆ ಬೆಲೆ ಕುಸಿತದಿಂದ ರೈತರಿಗೆ ಹೊರೆ

ಖಾದ್ಯತೈಲ ಬೆಲೆ ಏರಿಕೆ ಗ್ರಾಹಕರ ಜೇಬಿಗೆ ಭಾರವಾದರೆ, ಕುಸುಬೆ ಬೆಲೆ ಕುಸಿತ...

ಡಾಲರ್ V/s ಯುವಾನ್: ಕೊಲ್ಲಿ ಯುದ್ಧ ಕರೆನ್ಸಿ ಯುದ್ಧವಾಗಿ ಮಾರ್ಪಾಡಾಗುತ್ತಿದೆಯೇ?

ಅಕಸ್ಮಾತ್ ಈ ಯುದ್ಧ ಮುಂದುವರೆದರೆ, ಕೆಲವು ದೇಶಗಳು ಡಾಲರ್ ಬದಲಿಗೆ ಯುವಾನ್...