ವಕ್ಫ್‌ ತಿದ್ದುಪಡಿ ಮಸೂದೆ: ರಾಹುಲ್ ಗಾಂಧಿ ಮಾತನಾಡದಿದ್ದರೆ ಏನಂತೆ..?

Date:

ಕಾಂಗ್ರೆಸ್ ಕೇರಳದ ಕ್ಯಾಥೋಲಿಕ್ ಬಿಷಪ್ ಕೌನ್ಸಿಲ್‌ನ ಉರಿನಂಜನ್ನು ಒಡೆದ ರೀತಿ ಮಾತ್ರ ತುಂಬಾ ಚೆನ್ನಾಗಿತ್ತು. ಕಾಂಗ್ರೆಸ್‌ನ ಒಟ್ಟು ಏಳು ಮಂದಿ ಸಂಸದರು ವಕ್ಫ್ ತಿದ್ದುಪಡಿ ಬಿಲ್ಲನ್ನು ವಿರೋಧಿಸಿ ಚೆನ್ನಾಗಿಯೇ ಮಾತನಾಡಿದರು. ಹಾಗೆ ಮಾತನಾಡುವ ಅವಕಾಶವನ್ನೂ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅತ್ಯಂತ ಸೆಕ್ಯುಲರ್ ಆಗಿ ಹಂಚಿ ಕೊಟ್ಟರು. ಕಾಂಗ್ರೆಸ್‌ನ ಹಿಂದು, ಮುಸ್ಲಿಂ, ಕ್ರೈಸ್ತ ಮತ್ತು ಸಿಖ್ ಸದಸ್ಯರು ಬಿಲ್ಲನ್ನು ವಿರೋಧಿಸಿ ಪ್ರಬಲವಾಗಿ ಮತ್ತು ವಸ್ತುನಿಷ್ಟವಾಗಿ ವಿಚಾರ ಮಂಡಿಸಿದರು.

ಅದರಲ್ಲೂ ರಾಹುಲ್ ಗಾಂಧಿಯವರು ಕೇರಳದ ಹೈಬಿ ಈಡನ್ ಎಂಬ ಕ್ಯಾಥೋಲಿಕ್ ಕ್ರೈಸ್ತ ಸಂಸದನನ್ನೂ ಬಿಲ್ ವಿರೋಧಿಸಿ ಮಾತನಾಡಲು ಬಳಸಿದ್ದು ರಾಹುಲ್ ಗಾಂಧಿಯವರ ದೂರದೃಷ್ಟಿ ಮತ್ತು ಕಾಂಗ್ರೆಸ್‌ನ ಸೆಕ್ಯುಲರ್ ಬದ್ಧತೆಯನ್ನು ಎತ್ತಿ ತೋರಿಸಿದೆ.

ಮಸೂದೆ ಲೋಕಸಭೆಯಲ್ಲಿ ಅಂಗೀಕಾರವಾದುದಕ್ಕೆ ಕೆಲವರು ರಾಹುಲ್ ಗಾಂಧಿಯನ್ನು ಆಕ್ಷೇಪಿಸುವುದು ನೋಡಿದರೆ ನಗು ಬರುತ್ತದೆ. ಒಟ್ಟು ವಿರೋಧ ಪಕ್ಷಗಳ ಸದಸ್ಯರ ಸಂಖ್ಯೆ ಲೋಕಸಭೆಯಲ್ಲಿರುವುದು 232. ಎನ್‌ಡಿ‌ಎ ಒಕ್ಕೂಟದ ಸದಸ್ಯರ ಸಂಖ್ಯೆ 288 ಇದೆ. ಹೀಗಿರುವಾಗ ಸಹಜವಾಗಿಯೇ ಗೆಲುವು ಬಿಲ್ ಮಂಡಿಸಿದವರದ್ದೇ ಆಗಿದೆ. ನಾವು ಅದಕ್ಕಾಗಿ ಮುಸ್ಲಿಮರ ರಾಜಕೀಯ ದೌರ್ಬಲ್ಯವನ್ನು ದೂರಬೇಕೇ ಹೊರತು ಬಿಲ್ ವಿರುದ್ಧ ಏಳು ಮಂದಿ ಸದಸ್ಯರು ಬಲವಾಗಿ ಮಾತನಾಡುವಂತೆ ಸಜ್ಜುಗೊಳಿಸಿದ ಕಾಂಗ್ರೆಸ್ಸನ್ನಲ್ಲ. ಪಲ್ಟಿ ಕುಮಾರ ಮತ್ತು ನಾಯಿಡು ಬಿಜೆಪಿಯ ಸಾಕು ನಾಯಿಗಳು ಎಂದು ಗೊತ್ತಿದ್ದೂ ಗೊತ್ತಿದ್ದು ಅವರಿಗೆ ಟೊಪ್ಪಿ ತೊಡಿಸುವ, ಅವರಿಂದ ನಮಾಜು ಮಾಡಿಸುವ ನಮ್ಮವರ ಹುಂಬತನವನ್ನೇಕೆ ನಾವು ಟೀಕಿಸುತ್ತಿಲ್ಲ..?ಅವರ ಪಕ್ಷಕ್ಕೆ ಒಂದಷ್ಟು ಸೀಟು ಬರುವಲ್ಲಿ ಮುಸ್ಲಿಮರ ಪಾತ್ರ ಇದ್ದೇ ಇದೆಯಲ್ವಾ..?

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ರಾಹುಲ್ ಗಾಂಧಿ ಮಧ್ಯಾಹ್ನದ ಬಳಿಕ ಬಂದದ್ದು,ಪ್ರಿಯಾಂಕ ಗಾಂಧಿ ನಿನ್ನೆ ಸಂಸತ್ತಿಗೆ ಗೈರಾದದ್ದನ್ನು ಟೀಕಿಸುವವರಿಗೆ ಕನಿಷ್ಟ ಬುದ್ಧಿ ಬೇಡವೇ.? ವಿರೋಧ ಪಕ್ಷ ಮತ್ತು ಆಡಳಿತ ಪಕ್ಷದ ಮಧ್ಯೆ ಒಂದೆರಡು ಸಂಖ್ಯೆಯ ಸದಸ್ಯರ ಅಂತರವಿರುವುದಲ್ಲ,ಬರೋಬ್ಬರಿ 50 ಸದಸ್ಯರ ಅಂತರವಿದೆ. ಹಾಗಿರುವಾಗ ಪ್ರಿಯಾಂಕ ಹಾಜರಾದ ಮಾತ್ರಕ್ಕೆ ಬಿಲ್ ಏನೂ ಬಿದ್ದು ಹೋಗುತ್ತಿರಲಿಲ್ಲ.

ರಾಹುಲ್ ಗಾಂಧಿಯವರು ಬಿಲ್ ವಿರುದ್ಧ ಮಾತನಾಡಲು ಏಳು ಮಂದಿಯನ್ನು ಪ್ರಿಪೇರ್ ಮಾಡಿದ್ದರು ಎಂಬುವುದನ್ನು ಒತ್ತಿ ಹೇಳಬೇಕಾಗುತ್ತದೆ.ನಮಗೆಲ್ಲಾ ಗೊತ್ತಿರುವಂತೆಯೇ ಈ ಹಿಂದೆಯೂ ರಾಹುಲ್ ಗಾಂಧಿ ಮಾತನಾಡಲು ಎದ್ದು ನಿಂತಾಗ ಆರೆಸ್ಸೆಸ್ ಗುಲಾಮ ಸ್ಪೀಕರ್ ಮಾತನಾಡಲು ಅವಕಾಶ ನೀಡದಿರುವುದು, ಮೈಕ್ರೋ ಫೋನ್ ಸಂಪರ್ಕ ಕಟ್ ಮಾಡುವುದು ಮುಂತಾದ ನೀಚ ಪಾಲಿಟಿಕ್ಸ್ ಮಾಡಿದ್ದಾರೆ.

ಈ ವರದಿ ಓದಿದ್ದೀರಾ?: ವಕ್ಫ್‌ ತಿದ್ದುಪಡಿ ಮಸೂದೆ: ಮುಸ್ಲಿಮರ ಧಾರ್ಮಿಕ-ಸಾಮಾಜಿಕ ಚಟುವಟಿಕೆಗಳಿಗೆ ಕಡಿತ ಖಂಡಿತ

ರಾಹುಲ್ ಮಾತನಾಡಲು ನಿಂತರೆ ಅವರ ಜನಪ್ರಿಯತೆ ದೇಶದಾದ್ಯಂತ ಇನ್ನಷ್ಟು ಹೆಚ್ಚುತ್ತದೆ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಈಗಾಗಲೇ ಮೋದಿಗಿಂತ ರಾಹುಲ್‌ಗೆ ಹೆಚ್ಚು ಬೆಲೆಯಿದೆ ಎನ್ನುವುದು ಬಿಜೆಪಿಗೆ ಗೊತ್ತಿಲ್ಲದ ವಿಷಯವೇನಲ್ಲ. ಅಂತಹ ರಾಹುಲ್ ಮಾತನಾಡಿದರೆ ಇಡೀ ಸರಕಾರವನ್ನೇ ಬೆತ್ತಲು ಮಾಡುತ್ತಾರೆಂದು ಸ್ಪೀಕರ್ ಮುಖಾಂತರ ಬಿಜೆಪಿ ಇಂತಹ ಮೋಸದಾಟ ಆಡಿಸುತ್ತದೆ. ಹಾಗಿರುವುದರಿಂದ ರಾಹುಲ್ ಮಾತು ಯಾರಿಗೂ ತಲುಪದೇ ಇರುವುದಕ್ಕಿಂತ ರಾಹುಲ್ ಮಾತನಾಡಬೇಕಾದುದನ್ನು ಬೇರೆ ಸದಸ್ಯರಿಂದ ಮಾತನಾಡಿಸಿ ದೇಶಕ್ಕೆ ಮತ್ತು ಜಗತ್ತಿಗೆ ಸರಕಾರದ ನೀಚ ಪ್ರವೃತ್ತಿಯನ್ನು ಮತ್ತು ಮುಸ್ಲಿಂ ವಿರೋಧಿ ನೀತಿಯನ್ನು ತಿಳಿಯಪಡಿಸುವುದು ಲೇಸಲ್ಲವೇ..?

ಪೋಸ್ಟ್ ಹಂಚಿಕೊಳ್ಳಿ:

ಇಸ್ಮತ್ ಪಜೀರ್
ಇಸ್ಮತ್ ಪಜೀರ್
ಮಂಗಳೂರಿನ ಲೇಖಕರಾದ ಇಸ್ಮತ್ ಪಜೀರ್, ಬ್ಯಾರಿ ಪಠ್ಯಪುಸ್ತಕ ರಚನಾ ಸಮಿತಿಯ ಸದಸ್ಯರಾಗಿದ್ದರು. ಸರ್ಕಾರದ ನೀತಿಗಳನ್ನು ಖಂಡಿಸಿ ರಾಜೀನಾಮೆ ನೀಡಿದ್ದರು. ಮುಸ್ಲಿಂ ಸಮುದಾಯದ ಕುರಿತು ಬಿತ್ತಲಾಗುತ್ತಿರುವ ಸುಳ್ಳುಗಳನ್ನು ಬಯಲು ಮಾಡುತ್ತಿರುವ ಮಹತ್ವದ ಲೇಖಕರಲ್ಲಿ ಇವರೂ ಒಬ್ಬರು.

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಕೇಂದ್ರವನ್ನು ಟೀಕಿಸಿದ ಸಾಮಾಜಿಕ ಮಾಧ್ಯಮ ಖಾತೆಗಳು ಮಂಗಮಾಯ: ಉಳಿಯುವುದು ಬರೀ ಮೋದಿಮಯ!

ಹೀಗೆ ಮೋದಿ ಸರ್ಕಾರವನ್ನು ವಿರೋಧಿಸಿದವರ ಖಾತೆಗಳು ಸಾಮಾಜಿಕ ಮಾಧ್ಯಮಗಳಿಂದ ಅಳಿಸಿ ಕೊನೆಗೆ...

ಒಂದು ಕಡೆ ಖಾದ್ಯತೈಲ ಬೆಲೆ ಏರಿಕೆ; ಮತ್ತೊಂದು ಕಡೆ ಕುಸುಬೆ ಬೆಲೆ ಕುಸಿತದಿಂದ ರೈತರಿಗೆ ಹೊರೆ

ಖಾದ್ಯತೈಲ ಬೆಲೆ ಏರಿಕೆ ಗ್ರಾಹಕರ ಜೇಬಿಗೆ ಭಾರವಾದರೆ, ಕುಸುಬೆ ಬೆಲೆ ಕುಸಿತ...

ಡಾಲರ್ V/s ಯುವಾನ್: ಕೊಲ್ಲಿ ಯುದ್ಧ ಕರೆನ್ಸಿ ಯುದ್ಧವಾಗಿ ಮಾರ್ಪಾಡಾಗುತ್ತಿದೆಯೇ?

ಅಕಸ್ಮಾತ್ ಈ ಯುದ್ಧ ಮುಂದುವರೆದರೆ, ಕೆಲವು ದೇಶಗಳು ಡಾಲರ್ ಬದಲಿಗೆ ಯುವಾನ್...