ಬಂಗಾಳದಲ್ಲಿ ಬದಲಾಯ್ತು SIR ವರಸೆ; ದೇಶದ ಉಳಿದ ರಾಜ್ಯಗಳ ಮೇಲಿನ ಪ್ರಭಾವವೇನು?

Date:

ಕೆಲವೇ ವಾರಗಳಲ್ಲಿ ವಿಧಾನಸಭಾ ಚುನಾವಣೆ ನಡೆಯಲಿರುವ ಪಶ್ಚಿಮ ಬಂಗಾಳದಲ್ಲಿ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್‌) ಪ್ರಹಸನ ಮುಗಿದಿದೆ. ನಾಲ್ಕು ತಿಂಗಳ ಕಾಲ ನಡೆದ ಎಸ್‌ಐಆರ್‌ ಪ್ರಕ್ರಿಯೆ ಅಂತ್ಯಗೊಂಡು, ಫೆಬ್ರವರಿ 28 ರಂದು ಅಂತಿಮ ಮತದಾರರ ಪಟ್ಟಿ ಪ್ರಕಟವಾಗಿದೆ. ಈ ಪಟ್ಟಿಯಲ್ಲಿ, 63.66 ಲಕ್ಷ ಮತದಾರರನ್ನು (8%) ಮತದಾರರನ್ನು ಹೊರಹಾಕಲಾಗಿದೆ.

ವಾಸ್ತವವಾಗಿ, ಈ 63.66 ಲಕ್ಷ ಮತದಾರರ ಪೈಕಿ, 61.06 ಲಕ್ಷ ಮತದಾರರು ಈಗಲೂ ಪಟ್ಟಿಯಲ್ಲಿದ್ದಾರೆ. ಆದರೆ, ಅವರ ಹೆಸರಿನ ಮೇಲೆ ‘ವಿಚಾರಣಾಧೀನ’ ಎಂಬ ಮುದ್ರೆ ಇದೆ.

ಎಸ್‌ಐಆರ್‌ ವಿಚಾರವಾಗಿ ಚುನಾವಣಾ ಆಯೋಗ ಮತ್ತು ಬಂಗಾಳ ಸರ್ಕಾರದ ನಡುವಿನ ತಿಕ್ಕಾಟ ಸುಪ್ರೀಂ ಕೋರ್ಟ್‌ ಪಡಸಾಲೆ ತಲುಪಿತ್ತು. ಆಯೋಗ-ಸರ್ಕಾರದ ಕುಸ್ತಿಯನ್ನು ಗಮನಿಸಿದ ಕೋರ್ಟ್‌, ಸುಮಾರು 500 ನ್ಯಾಯಾಂಗ ಅಧಿಕಾರಿಗಳನ್ನು ನೇಮಿಸಿ ಆರ್‌ಎಸ್‌ಎಸ್‌ ಪ್ರಕ್ರಿಯೆಯನ್ನು ಪಾರದರ್ಶಕವಾಗಿ ಪೂರ್ಣಗೊಳಿಸಲು ಸೂಚಿಸಿದೆ. ನ್ಯಾಯಾಂಗ ಅಧಿಕಾರಿಗಳು ವಿಚಾರಣಾಧೀನ ಮುದ್ರೆ ಹೊಂದಿರುವ 61.06 ಲಕ್ಷ ಮತದಾರರ ವಿವರವನ್ನು ಪರಿಶೀಲಿಸಿ, ಹೆಸರನ್ನು ಪಟ್ಟಿಯಲ್ಲಿ ಉಳಿಸಲು ಅನುಮೋದಿಸಿದರೆ, ಅವರನ್ನು ಪೂರಕ ಪಟ್ಟಿಯಲ್ಲಿ ಮತಪಟ್ಟಿಯೊಳಗೆ ಸೇರಿಸಲಾಗುತ್ತದೆ. ಸದ್ಯ, ಈ ಪ್ರಕ್ರಿಯೆ ಇನ್ನೂ ಚಾಲ್ತಿಯಲ್ಲಿದೆ. ಆದರೂ, ಈ ಪ್ರಕ್ರಿಯೆ ಮುಗಿಯುವವರೆಗೆ ಅವರೆಲ್ಲರೂ ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಮತ ಚಲಾಯಿಸಲು ಸಾಧ್ಯವಿಲ್ಲ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ಎಸ್‌ಐಆರ್ ಸಮಯದಲ್ಲಿ ಮತದಾರರು ಸಲ್ಲಿಸಿದ ದಾಖಲೆಗಳ ಆಧಾರದ ಮೇಲೆ ಅನರ್ಹರು ಎಂದು ಕಂಡುಬಂದವರ ಹೆಸರನ್ನು ಪಟ್ಟಿಯಿಂದ ತೆಗೆದುಹಾಕಲಾಗುತ್ತದೆ. ಅವರು ಮತದಾನದ ಹಕ್ಕನ್ನು ಕಳೆದುಕೊಳ್ಳುತ್ತಾರೆ. ಚುನಾವಣಾ ಆಯೋಗವು ಇದುವರೆಗೆ ಎಸ್‌ಐಆರ್‌ ಪೂರ್ಣಗೊಳಿಸಿರುವ ಒಂಬತ್ತು ರಾಜ್ಯಗಳು ಮತ್ತು ಮೂರು ಕೇಂದ್ರಾಡಳಿತ ಪ್ರದೇಶಗಳಲ್ಲಿ ನಡೆದಿರುವುದೂ ಇದೆ. ಆದರೆ, ಬಂಗಾಳದಲ್ಲಿ ಎಸ್‌ಐಆರ್‌ ಪ್ರಕ್ರಿಯೆಯು ನ್ಯಾಯಾಂಗ ಅಧಿಕಾರಿಗಳ ಮಧ್ಯಪ್ರವೇಶಿಕೆ ಪಡೆದಿದೆ. ಇದಕ್ಕೆ ಮುಖ್ಯ ಕಾರಣ, ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರ ದಿಟ್ಟ ಹೋರಾಟ.

ಆರಂಭದಲ್ಲಿ, ಚುನಾವಣಾ ಆಯೋಗ ಘೋಷಿಸಿದ ಎಸ್‌ಐಆರ್‌ ಪ್ರಕ್ರಿಯೆ ಹೇಗಿತ್ತು?

ಚುನಾವಣಾ ಆಯೋಗವು ಕಳೆದ 20 ವರ್ಷಗಳಿಂದ ಪ್ರತಿ ವರ್ಷ ಅಥವಾ ಪ್ರತಿ ಲೋಕಸಭಾ ಮತ್ತು ವಿಧಾನಸಭಾ ಚುನಾವಣೆಗಳ ಸಮಯದಲ್ಲಿ ಮತದಾರರನ್ನು ಸೇರಿಸುವ ಮತ್ತು ಮೃತ ಅಥವಾ ಅಹರ್ನ ಮತದಾರರನ್ನು ತೆಗೆದುಹಾಕುವ ಪ್ರಕ್ರಿಯೆ ನಡೆಸುತ್ತಿತ್ತು. ಆಗ್ಗಾಗ್ಗೆ, ಮತದಾರರ ಪಟ್ಟಿಯನ್ನು ನವೀಕರಿಸುತ್ತಿತ್ತು. ಆದರೆ, 2025ರ ಜೂನ್ 24ರಂದು, ಆಯೋಗವು ಎಸ್‌ಐಆರ್‌ ಎಂಬ ಹೊಸ ಪ್ರಕ್ರಿಯೆ ಘೋಷಿಸಿತು. ಮೊದಲಿಗೆ, ಚುನಾವಣೆಯ ಹೊಸ್ತಿಲಿನಲ್ಲಿದ್ದ ಬಿಹಾರದಲ್ಲಿ ಅನುಷ್ಠಾನಕ್ಕೆ ತಂದಿತು.

ಎಸ್‌ಐಆರ್‌ ಅಡಿಯಲ್ಲಿ ಮತದಾರರ ಗಣತಿ ಪ್ರಕ್ರಿಯೆ ನಡೆಯುತ್ತದೆ. ಪ್ರಕ್ರಿಯೆ ನಡೆಯುವ ಅವಧಿಯಲ್ಲಿ ಎಲ್ಲ ಮತದಾರರು ತಮ್ಮ ಸ್ಥಳೀಯ ಬೂತ್ ಮಟ್ಟದ ಅಧಿಕಾರಿಗಳಿಗೆ (BLO) ಅಥವಾ ಆನ್‌ಲೈನ್ ಮೂಲಕ ತಾವು ಮತದಾರರು ಎಂಬುದನ್ನು ಸಾಬೀತು ಮಾಡುವ ದಾಖಲೆಗಳನ್ನು ಕಡ್ಡಾಯವಾಗಿ ಸಲ್ಲಿಸಬೇಕಿತ್ತು.

ಆಯೋಗವು ಕೇಳಿದ ದಾಖಲೆಗಳಲ್ಲಿ;  1987ಕ್ಕಿಂತ ಮೊದಲು ಜನಿಸಿದವರು ತಮ್ಮ ಜನ್ಮ ದಿನಾಂಕ ಅಥವಾ ಜನ್ಮ ಸ್ಥಳವನ್ನು ಸಾಬೀತುಪಡಿಸಬೇಕು. 1987ರ ಜುಲೈ 1 ಮತ್ತು 2004ರ ಡಿಸೆಂಬರ್ 2ರ ನಡುವೆ ಜನಿಸಿದವರು ತಮ್ಮ ಜನ್ಮ ದಿನಾಂಕ ಮತ್ತು ತಮ್ಮ ಒಬ್ಬ ಪೋಷಕರ ಜನ್ಮ ದಿನಾಂಕ/ಸ್ಥಳವನ್ನು ಸಾಬೀತುಪಡಿಸಬೇಕು. 2004ರ ಡಿಸೆಂಬರ್ 2ರ ನಂತರ ಜನಿಸಿದವರು ತಮ್ಮ ಜನ್ಮ ದಿನಾಂಕ/ಸ್ಥಳ ಮತ್ತು ತಮ್ಮ ಇಬ್ಬರು ಪೋಷಕರ ಜನ್ಮ ದಿನಾಂಕ/ಸ್ಥಳವನ್ನು ಸಾಬೀತುಪಡಿಸುವ ದಾಖಲೆಗಳನ್ನು ಸಲ್ಲಿಸಬೇಕೆಂದು ಸೂಚಿಸಿತ್ತು.

ಇದು, ಅಕ್ಷರಶಃ ಪೌರತ್ವವನ್ನು ದೃಢೀಕರಿಸಬೇಕೆಂಬ ನಿಯಮವೇ ಆಗಿತ್ತು. ಹಾಗಾಗಿಯೇ, ಇದನ್ನು 2019ರಲ್ಲಿ ಕೇಂದ್ರ ಸರ್ಕಾರ ಜಾರಿಗೆ ತಂದಿದ್ದ ಮತ್ತು ಜನಾಕ್ರೋಶಕ್ಕೆ ಮಣಿದು ಸ್ಥಗಿತಗೊಂಡ ‘ರಾಷ್ಟ್ರೀಯ ಪೌರತ್ವ ನೋಂದಣಿ’ಯ (ಎನ್‌ಆರ್‌ಸಿ) ಪರೋಕ್ಷ ಜಾರಿಯೆಂದು ಆರೋಪಿಸಲಾಗಿತ್ತು. ಮಾತ್ರವಲ್ಲದೆ, ಪೌರತ್ವದ ದಾಖಲೆ ಕೇಳುವ ಎಸ್‌ಐಆರ್ ವಿರುದ್ಧ ಸುಪ್ರೀಂಕೋರ್ಟ್‌ನಲ್ಲಿ ಅರ್ಜಿಗಳೂ ದಾಖಲಾದವು. ಆಧಾರ್‌ ಕಾರ್ಡ್‌ಅನ್ನೂ ಪುರಾವೆಯಾಗಿ ಪರಿಗಣಿಸಲು ಕೋರ್ಟ್‌ ಸೂಚಿಸಿತು. ಆದರೂ, ಆಧಾರ್‌ ಕಾರ್ಡ್‌ಗೆ ಎಸ್‌ಐಆರ್ ಪ್ರಕ್ರಿಯೆಯಲ್ಲಿ ಮನ್ನಣೆ ದೊರೆತಿಲ್ಲ.

ಎಸ್‌ಐಅರ್

ಇದೆಲ್ಲದರ ನಡುವೆ, 2025ರ ಅಕ್ಟೋಬರ್‌ 2ರಂದು ಆಯೋಗವು ಎಸ್‌ಐಆರ್‌ಅನ್ನು ಛತ್ತೀಸ್‌ಗಢ, ರಾಜಸ್ಥಾನ, ಗೋವಾ, ಮಧ್ಯಪ್ರದೇಶ, ತಮಿಳುನಾಡು, ಕೇರಳ, ಗುಜರಾತ್, ಪಶ್ಚಿಮ ಬಂಗಾಳ, ಉತ್ತರ ಪ್ರದೇಶ, ಪುದುಚೇರಿ, ಅಂಡಮಾನ್-ನಿಕೋಬಾರ್ ಹಾಗೂ ಲಕ್ಷದ್ವೀಪಕ್ಕೆ ವಿಸ್ತರಿಸಿತು.

ಅಕ್ಟೋಬರ್‌ನಲ್ಲಿ ಘೋಷಿಸಲಾದ ಎಸ್‌ಐಆರ್‌ ಪ್ರಕ್ರಿಯೆಗಾಗಿ ಗಣತಿ ಸಮೂನೆಯಲ್ಲಿ ಆಯೋಗವು ಕೆಲವು ಬದಲಾವಣೆಗಳನ್ನು ಮಾಡಿತು. ಇದರಡಿ, ಎಲ್ಲ ಮತದಾರರು ಎಸ್‌ಐಆರ್‌ ಪ್ರಕ್ರಿಯೆಯೊಂದಿಗೆ ತಮ್ಮನ್ನು ತಾವು ತಮ್ಮ ರಕ್ತ ಸಂಬಂಧಿ ಮತದಾರರ ಜೊತೆಗಿನ ಸಂಬಂಧದೊಂದಿಗೆ ದೃಢಪಡಿಸಬೇಕು. ಅಂದರೆ, ಹಳೆಯ ಮತಪಟ್ಟಿಯಲ್ಲಿ ತಮ್ಮ ಹೆಸರಿರಬೇಕು ಅಥವಾ ತಮ್ಮ ಸಂಬಂಧಿಯ ಹೆಸರಿರಬೇಕು. ಯಾರು ತಾವು ಅಥವಾ ತಮ್ಮ ಸಂಬಂಧಿಕರು ನೋಂದಾಯಿತರಾಗಿರುವ ಕ್ರಮ ಸಂಖ್ಯೆಯ ವಿವರಗಳನ್ನು ನೀಡಲು ಸಾಧ್ಯವಾಗುವುದಿಲ್ಲವೋ, ಅವರಿಗೆ ನೋಟಿಸ್ ನೀಡಿ ಅರ್ಹತೆಯನ್ನು ದೃಢೀಕರಿಸಲು ದಾಖಲೆಗಳನ್ನು ಕೇಳಲಾಗಿತ್ತು.

ಪಶ್ಚಿಮ ಬಂಗಾಳದಲ್ಲಿ SIR ಹೇಗೆ ಭಿನ್ನವಾಗಿತ್ತು?

ಅಕ್ಟೋಬರ್‌ನಲ್ಲಿ ಘೋಷಿಸಲಾದ 12 ರಾಜ್ಯ/ಕೇಂದ್ರಡಇತ ಪ್ರದೇಶಗಳ ಎಸ್‌ಐಆರ್‌ ಪ್ರಕ್ರಿಯೆಯು ನವೆಂಬರ್ 4ರಂದು ಒಂದೇ ರೀತಿ ಜಾರಿಯಾಯಿತು. ಡಿಸೆಂಬರ್‌ನಲ್ಲಿ ಕರಡು ಪಟ್ಟಿಗಳು ಪ್ರಕಟವಾದವು. ಅದರಲ್ಲಿ, ಪಶ್ಚಿಮ ಬಂಗಾಳದ 58 ಲಕ್ಷ ಮತದಾರರನ್ನು ಹೊರಹಾಕಿ, ಮತದಾರರ ಸಂಖ್ಯೆಯನ್ನು 7.66 ಕೋಟಿಯಿಂದ 7.08 ಕೋಟಿಗೆ ಇಳಿಸಲಾಗಿತ್ತು.

“ಎಸ್‌ಐಆರ್‌ ಹಂತದಲ್ಲಿ ಸಮೂನೆಗಳ ಜೊತೆಗೆ ದಾಖಲೆಗಳನ್ನು ಸಂಗ್ರಹಿಸದಂತೆ ಬಿಎಲ್‌ಒಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿತ್ತು. ಮತದಾರರಿಂದ ಕೇವಲ ಅವರ ಪೋಷಕರು ಅಥವಾ ಅಜ್ಜ-ಅಜ್ಜಿಯರೊಂದಿಗೆ ಸಂಬಂಧ ಸಾಬೀತು ಮಾಡುವ ದಾಖಲೆಗಳನ್ನು ಮಾತ್ರವೇ ಪಡೆಯಬೇಕೆಂದು ಸೂಚಿಸಲಾಗಿತ್ತು” ಎಂದು ಹೆಸರು ಹೇಳಲಿಚ್ಛಿಸದ ಪಶ್ಚಿಮ ಬಂಗಾಳದ ಅಧಿಕಾರಿಯೊಬ್ಬರು ಹೇಳಿರುವುದಾಗಿ ‘ದಿ ಇಂಡಿಯನ್ ಎಕ್ಸ್‌ಪ್ರೆಸ್‌’ ವರದಿ ಮಾಡಿದೆ.

ಆದರೆ ಇತರ ರಾಜ್ಯಗಳಲ್ಲಿ ಹೀಗಿರಲಿಲ್ಲ. ಉದಾಹರಣೆಗೆ, ಉತ್ತರ ಪ್ರದೇಶದಲ್ಲಿ ಬಿಎಲ್‌ಒಗಳು ಮೊದಲ ಹಂತದಲ್ಲೇ ಮತದಾರರ ದಾಖಲೆಗಳನ್ನು ಸಂಗ್ರಹಿಸಿದ್ದರು. ಬಿಹಾರದಲ್ಲಿ ಮತದಾರರು ಹಿಂದಿನ ಪಟ್ಟಿಯಲ್ಲಿದ್ದ ಚಿಕ್ಕಪ್ಪ ಅಥವಾ ಅತ್ತೆಯಂತಹ ಯಾವುದೇ ವಯಸ್ಕ ಸಂಬಂಧಿಗಳೊಂದಿಗೆ ತಮ್ಮ ಸಂಬಂಧವನ್ನು ಗುರುತಿಸಿ, ಮತದಾನದ ಅರ್ಹತೆಯನ್ನು ದೃಢಪಡಿಸಲು ಅವಕಾಶ ನೀಡಲಾಗಿತ್ತು.

ಡಿಸೆಂಬರ್ ಮತ್ತು ಜನವರಿಯಲ್ಲಿ ಕರಡು ಪಟ್ಟಿಗಳು ಪ್ರಕಟವಾದ ನಂತರ, ಮತದಾರರ ನೋಂದಣಿ ಅಧಿಕಾರಿಗಳು (ERO) ‘ದೃಢಪಡದ’ ಮತದಾರರಿಗೆ ನೋಟಿಸ್ ನೀಡುವುದು, ವಿಚಾರಣೆ ನಡೆಸುವುದು ಹಾಗೂ ದಾಖಲೆಗಳನ್ನು ಸಂಗ್ರಹಿಸುವ ಪ್ರಕ್ರಿಯೆಯನ್ನು ಆರಂಭಿಸಿದರು.

ಪಶ್ಚಿಮ ಬಂಗಾಳದಲ್ಲಿ ಈ ಪ್ರಕ್ರಿಯೆಯೂ ಬೇರೆಯೇ ರೀತಿಯಲ್ಲಿ ಬದಲಾಯಿತು. ಕರಡು ಪಟ್ಟಿ ಪ್ರಕಟವಾದ ಮೂರು ದಿನಗಳ ನಂತರ, 2025ರ ಡಿಸೆಂಬರ್ 19 ರಂದು, ಚುನಾವಣಾ ಆಯೋಗವು ಪಶ್ಚಿಮ ಬಂಗಾಳದ ಮುಖ್ಯ ಚುನಾವಣಾ ಅಧಿಕಾರಿಗೆ ಪತ್ರ ಬರೆದು, ವಿಚಾರಣೆ ಹಂತದಲ್ಲಿ ಇಆರ್‌ಒಗಳ ಮೇಲೆ ಕಣ್ಣಿಡಲು ‘ಮೈಕ್ರೋ-ಅಬ್ಸರ್ವರ್‌’ಗಳನ್ನು (ಸೂಕ್ಷ್ಮ ವೀಕ್ಷಕರು) ನೇಮಿಸಿತು.

ಬ್ಯಾಂಕ್‌ಗಳು ಮತ್ತು ಸಾರ್ವಜನಿಕ ವಲಯದ ಉದ್ದಿಮೆಗಳಲ್ಲಿ ಕೆಲಸ ಮಾಡುವ ಒಟ್ಟು 8,100 ಕೇಂದ್ರ ಸರ್ಕಾರಿ ನೌಕರರನ್ನು ವಿಚಾರಣೆಯ ಸಮಯದಲ್ಲಿ ಮತದಾರರು ಸಲ್ಲಿಸುವ ದಾಖಲೆಗಳನ್ನು ಪರಿಶೀಲಿಸಲು ನಿಯೋಜಿಸಲಾಯಿತು. ಮತದಾರರ ಪಟ್ಟಿ ಪರಿಷ್ಕರಣೆಗಾಗಿ ಮೈಕ್ರೋ-ಅಬ್ಸರ್ವರ್‌ಗಳನ್ನು ನಿಯೋಜಿಸಿದ್ದು ಇದೇ ಮೊದಲು ಮತ್ತು ಇದು ನಡೆದಿದ್ದು ಪಶ್ಚಿಮ ಬಂಗಾಳದಲ್ಲಿ ಮಾತ್ರ.

ಮುಸ್ಲಿಂ

ಇದು ಆಡಳಿತಾರೂಢ ಟಿಎಂಸಿ ಆಕ್ರೋಶಕ್ಕೆ ಕಾರಣವಾಯಿತು. ಆಯೋಗವು ಪಶ್ಚಿಮ ಬಂಗಾಳ ವಿಚಾರದಲ್ಲಿ ಪಕ್ಷಪಾತ ಮಾಡುತ್ತಿದೆ. ಶಾಸನಬದ್ಧ ಅಧಿಕಾರಿಯಾದ ಇಆರ್‌ಒ ಕೆಲಸದಲ್ಲಿ ಮೈಕ್ರೋ-ಅಬ್ಸರ್ವರ್‌ಗಳು ಹಸ್ತಕ್ಷೇಪ ಮಾಡುತ್ತಿದ್ದಾರೆ ಎಂದು ಆರೋಪಿಸಿತು.

ಮತದಾರರ ವಿಚಾರಣೆಯ ಕೊನೆಯ ದಿನಾಂಕ (ಫೆಬ್ರವರಿ 14) ಹತ್ತಿರ ಬರುತ್ತಿದ್ದಂತೆ, ಇಆರ್‌ಒಗಳು ಮತ್ತು ಮೈಕ್ರೋ-ಅಬ್ಸರ್ವರ್‌ಗಳ ನಡುವಿನ ಸಂಘರ್ಷ ಹೆಚ್ಚಾಯಿತು. ಆಯೋಗದ ಎಸ್‌ಐಆರ್‌ ಪ್ರಕ್ರಿಯೆಯ ಕಾನೂನುಬದ್ಧತೆಯನ್ನು ಪ್ರಶ್ನಿಸಿ ಸಲ್ಲಿಕೆಯಾಗಿರುವ ಅರ್ಜಿಗಳ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್, ರಾಜ್ಯ ಸರ್ಕಾರ ಮತ್ತು ಆಯೋಗದ ನಡುವಿನ ‘ವಿಶ್ವಾಸದ ಕೊರತೆ’ಯನ್ನು ಗಮನಿಸಿತು. ನ್ಯಾಯಾಲಯವು ಸಂವಿಧಾನದ 142ನೇ ವಿಧಿಯಡಿ ತನ್ನ ವಿಶೇಷ ಅಧಿಕಾರವನ್ನು ಬಳಸಿ, ಬಾಕಿ ಇರುವ ಪ್ರಕರಣಗಳನ್ನು ನಿರ್ಧರಿಸಲು ನ್ಯಾಯಾಂಗ ಅಧಿಕಾರಿಗಳನ್ನು ನೇಮಿಸುವಂತೆ ಫೆಬ್ರವರಿ 20ರಂದು ಆದೇಶಿಸಿತು. ಇದು ಕೂಡ ಪಶ್ಚಿಮ ಬಂಗಾಳಕ್ಕೆ ಮಾತ್ರ ಸೀಮಿತವಾಗಿತ್ತು.

ಈ ಲೇಖನ ಓದಿದ್ದೀರಾ?: ಯಾವ ಅಬಕಾರಿ ನೀತಿಗಾಗಿ ಕೇಜ್ರೀವಾಲರನ್ನು ಜೈಲಿಗೆ ತಳ್ಳಿತೋ, ಅದೇ ನೀತಿಯನ್ನು ಮುಂದುವರೆಸಿದೆ ಬಿಜೆಪಿ ಸರ್ಕಾರ!

ಫೆಬ್ರವರಿ 28ರಂದು ಅಂತಿಮ ಪಟ್ಟಿ ಪ್ರಕಟವಾದಾಗ 60.06 ಲಕ್ಷ ಪ್ರಕರಣಗಳನ್ನು ‘ವಿಚಾರಣಾಧೀನ’ ಎಂದು ವರ್ಗೀಕರಿಸಲು ಇದೇ ಕಾರಣ. ನ್ಯಾಯಾಂಗ ಅಧಿಕಾರಿಗಳು ಮತದಾರರ ಅರ್ಹತೆಯನ್ನು ನಿರ್ಧರಿಸಿದ ಬಳಿಕ ಪೂರಕ ಪಟ್ಟಿಗಳನ್ನು ಪ್ರಕಟಿಸಲಾಗುತ್ತದೆ ಎಂದು ಕೋರ್ಟ್ ಹೇಳಿದೆ. ಆದರೆ, ವಿಧಾನಸಭಾ ಚುನಾವಣೆಗಳು ಸಮೀಪಿಸುತ್ತಿರುವುದರಿಂದ, ಸಮಯಕ್ಕೆ ಸರಿಯಾಗಿ ಈ ಪ್ರಿಕ್ರಿಯೆ ಮುಗಿಯದಿದ್ದರೆ, ಮುಂದಿನ ಚುನಾವಣೆಯಲ್ಲಿ ಈ ಮತದಾರರು ಮತದಾನದ ಹಕ್ಕನ್ನು ಕಳೆದುಕೊಳ್ಳುವ ಅಪಾಯವಿದೆ.

ಬಂಗಾಳದ ಜಠಿಲತೆಯು ದೇಶದ ಉಳಿದ ರಾಜ್ಯಗಳಿಗೆ ಏನನ್ನು ಸೂಚಿಸುತ್ತದೆ?

ಪಶ್ಚಿಮ ಬಂಗಾಳದಲ್ಲಿ ಮೈಕ್ರೋ-ಅಬ್ಸರ್ವರ್‌ ಮತ್ತು ನ್ಯಾಯಾಂಗ ಅಧಿಕಾರಿಗಳ ನಿಯೋಜನೆಯು ಇಆರ್‌ಒಗಳ ಅಧಿಕಾರವನ್ನು ಕುಗ್ಗಿಸಿದೆ ಎಂದು ಚುನಾವಣಾ ಅಧಿಕಾರಿಗಳು ಒಪ್ಪಿಕೊಳ್ಳುತ್ತಾರೆ. ಆದರೆ, ರಾಜ್ಯ ಸರ್ಕಾರವು ಆಯೋಗದೊಂದಿಗೆ ಪೂರ್ಣವಾಗಿ ಸಹಕರಿಸದ ಕಾರಣ ಇದು ಅಗತ್ಯವಾಗಿತ್ತು ಎಂದು ತನ್ನ ಕೃತ್ಯಗಳನ್ನು ಸಮರ್ಥಿಸಿಕೊಳ್ಳುತ್ತಾರೆ.

ಮಾರ್ಚ್ 1 ರಂದು ಸುದ್ದಿಗೋಷ್ಠಿ ನಡೆಸಿದ ಟಿಎಂಸಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅಭಿಷೇಕ್ ಬ್ಯಾನರ್ಜಿ, “ಕೇವಲ 14 ಲಕ್ಷ ಪ್ರಕರಣಗಳು ಮಾತ್ರ ಬಾಕಿ ಇವೆ ಎಂದು ಇಆರ್‌ಒಗಳು ಹೇಳಿದ್ದರು. ಆದರೆ, ಅಂತಿಮ ಪಟ್ಟಿಯಲ್ಲಿ 60.06 ಲಕ್ಷಕ್ಕೂ ಹೆಚ್ಚು ಹೆಸರುಗಳನ್ನು ವಿಚಾರಣಾಧೀನವೆಂದು ಗುರುತಿಸಲಾಗಿದೆ. ಈ 60 ಲಕ್ಷ ಹೆಸರುಗಳಲ್ಲಿ ಅತಿ ಹೆಚ್ಚು ಹೆಸರುಗಳು ಅಲ್ಪಸಂಖ್ಯಾತರು ಹೆಚ್ಚಿರುವ ಮುರ್ಷಿದಾಬಾದ್, ಮಾಲ್ಡಾ, ಉತ್ತರ ಮತ್ತು ದಕ್ಷಿಣ 24 ಪರಗಣ ಜಿಲ್ಲೆಗಳಿಗೆ ಸೇರಿವೆ. ಯಾವ ಮತದಾರರು ವಿಚಾರಣೆಗೆ ಒಳಪಡಬೇಕು ಎಂದು ನಿರ್ಧರಿಸಿದವರು ಯಾರು” ಎಂದು ಪ್ರಶ್ನಿಸಿದ್ದಾರೆ.

ನ್ಯಾಯಾಂಗ ಅಧಿಕಾರಿಗಳು ಈಗ ಇಆರ್‌ಒಗಳು ಅಪ್‌ಲೋಡ್ ಮಾಡಿದ ದಾಖಲೆಗಳನ್ನು ಪರಿಶೀಲಿಸುತ್ತಿದ್ದಾರೆ; ಅವರು ಮತ್ತೆ ಹೊಸದಾಗಿ ವಿಚಾರಣೆ ನಡೆಸುತ್ತಿಲ್ಲ. 2002-2003ರ ಮತದಾರರ ಪಟ್ಟಿಗಳು ಬೆಂಗಾಲಿಯಿಂದ ಇಂಗ್ಲಿಷ್‌ಗೆ ಭಾಷಾಂತರವಾಗುವಾಗ ದೋಷಗಳಾಗಿದ್ದವು. ಈಗ ಅದರೊಂದಿಗೆ ತಮ್ಮ ಮತದಾನದ ಅರ್ಹತೆಯನ್ನು ದೃಢಪಡಿಸುವುದು ಮತದಾರರಿಗೆ ಸಮಸ್ಯೆಯಾಗುತ್ತಿದೆ ಎಂದು ಕೆಲವು ಅಧಿಕಾರಿಗಳು ಆತಂಕ ವ್ಯಕ್ತಪಡಿಸಿದ್ದಾರೆ.

ಇದೆಲ್ಲದರ ನಡುವೆ, ಚುನಾವಣಾ ಆಯೋಗದ ಏಕಪಕ್ಷೀಯ ಧೋರಣೆಯನ್ನು ಬಗ್ಗುಬಡಿದು ನ್ಯಾಯಾಲಯದ ಮಧ್ಯಪ್ರವೇಶವಾಗುವಂತೆ ಬಂಗಾಳ ಸರ್ಕಾರ ಮಾಡಿದೆ. ಸ್ವತಃ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರೇ ಸುಪ್ರೀಂ ಕೋರ್ಟ್‌ ಮೆಟ್ಟಿಲೇರಿ ತನ್ನ ಜನರಿಗಾಗಿ ವಾದಿಸಿ ಇತಿಹಾಸ ಸೃಷ್ಟಿಸಿದ್ದಾರೆ. ಆಡಳಿತಾರೂಢ ಟಿಎಂಸಿಯ ದೃಢ ಹೋರಾಟದಿಂದಾಗಿ, ಚುನಾವಣಾ ಆಯೋಗವು ಏಕಾಏಕಿ ಕಿತ್ತುಹಾಕಬಹುದಾಗಿದ್ದ ಮತದಾರರ ಹೆಸರುಗಳನ್ನು ಈಗ ನ್ಯಾಯಾಂಗದ ಅಧಿಕಾರಿಗಳು ಪರಿಶೀಲಿಸುತ್ತಿದ್ದಾರೆ. ಇದು, ಎಸ್‌ಐರ್‌ ವಿರುದ್ಧದ ಹೋರಾಟದಲ್ಲಿ ಇಡೀ ದೇಶಕ್ಕೆ ಹೊಸ ಮಾದರಿಯನ್ನು ಹುಟ್ಟುಹಾಕಿದೆ. ಮುಂದಿನ ದಿನಗಳಲ್ಲಿ ದೇಶದ ಉಳಿದೆಲ್ಲ ರಾಜ್ಯಗಳಲ್ಲಿಯೂ ಆಯೋಗವು ಎಸ್‌ಐಆರ್‌ ಆರಂಭಿಸಲಿದೆ. ಗಮನಾರ್ಹವಾಗಿ, ವಿಪಕ್ಷಗಳು ಅಧಿಕಾರದಲ್ಲಿರುವ ರಾಜ್ಯಗಳ ಸರ್ಕಾರಗಳು ಎಸ್‌ಐಆರ್‌ ವಿರುದ್ಧ ಬಂಗಾಳ ಮಾದರಿ ಗಟ್ಟಿ ಹೋರಾಟ ನಡೆಸಿದರೆ ಮಾತ್ರ, ತಮ್ಮ ಮತದಾರರ ಹಕ್ಕುಗಳನ್ನು ರಕ್ಷಿಸಲು ಸಾಧ್ಯ!

ಮಾಹಿತಿ ಮೂಲ: ದಿ ಇಂಡಿಯನ್ ಎಕ್ಸ್‌ಪ್ರೆಸ್‌

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಬ್ಯಾಲೆಟ್ ಪೇಪರ್ ಬಳಕೆ; ವಿಧಾನಸಭೆಯಲ್ಲಿ ಮಸೂದೆ ಅಂಗೀಕಾರ

ರಾಜ್ಯದ ಸ್ಥಳೀಯ ಸಂಸ್ಥೆಗಳ ಚುನಾವಣಾ ಪ್ರಕ್ರಿಯೆಯಲ್ಲಿ ಬದಲಾವಣೆ ತರಲು ರಾಜ್ಯ ಸರ್ಕಾರ...

ಪ್ರಧಾನಿ ಮೋದಿ ಅಮೆರಿಕಕ್ಕೆ 100% ಶರಣಾಗಿದ್ದಾರೆ: ರಾಹುಲ್ ಗಾಂಧಿ

ಪಶ್ಚಿಮ ಏಷ್ಯಾದಲ್ಲಿನ ಯುದ್ಧದ ಪರಿಸ್ಥಿತಿ ಮತ್ತು ದೇಶದ ಆರ್ಥಿಕ ನೀತಿಗಳ ಕುರಿತು...

‘ಟ್ರಂಪ್ ನಿಯಂತ್ರಣದಲ್ಲಿ ಮೋದಿ’: ಲೋಕಸಭೆಯ ಭಾಷಣದಲ್ಲಿ ಅಮೆರಿಕದ ಬಗ್ಗೆ ಮೌನಕ್ಕೆ ರಾಹುಲ್ ವಾಗ್ದಾಳಿ

ಮಧ್ಯಪ್ರಾಚ್ಯ ಬಿಕ್ಕಟ್ಟಿನ ಕುರಿತು ಭಾರತದ ನಿಲುವಿನ ಬಗ್ಗೆ ರಾಜಕೀಯ ವಾಗ್ದಾಳಿ ಸೋಮವಾರ...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ ರಾಷ್ಟ್ರೀಯವಾದ?

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ...