ಅರಾವಳಿ | ಸುಪ್ರೀಂ ಕೋರ್ಟಿಗೆ CEC ನೀಡಿದ ವರದಿ ಏನು ಹೇಳುತ್ತದೆ?

Date:

ರಾಜಸ್ಥಾನದ 15 ಜಿಲ್ಲೆಗಳಲ್ಲಿ 100 ಮೀಟರ್‌ಗಿಂತ ಕಡಿಮೆ ಇರುವ ಪ್ರದೇಶಗಳನ್ನು ಕನಿಷ್ಠ 3 ಡಿಗ್ರಿಗಳಷ್ಟು ಇಳಿಜಾರಿನೊಂದಿಗೆ ಅರಾವಳಿ ಬೆಟ್ಟಗಳು ಇದೆ ಎಂದು ಎಫ್‌ಎಸ್‌ಐ ಗುರುತಿಸಿದೆ. ಈ ವ್ಯಾಖ್ಯಾನದ ಪ್ರಕಾರ, ಕೆಳಗಿನ ಬೆಟ್ಟಗಳನ್ನು ಅಂದರೆ 100 ಮೀಟರ್‌ಗಿಂತ ಕಡಿಮೆ ಇರುವುದನ್ನು ಸಹ ಅರಾವಳಿ ಎಂದು ಹೇಳಲಾಗಿದೆ.

ಅರಾವಳಿ ಪರ್ವತ ಶ್ರೇಣಿಯಲ್ಲಿ 100 ಮೀಟರ್‌ಗಿಂತ ಕಡಿಮೆ ಇರುವ ಬೆಟ್ಟಗಳಿಗೆ ಸಂಬಂಧಿಸಿದಂತೆ ಕೇಂದ್ರ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯವು ಸುಪ್ರೀಂ ಕೋರ್ಟಿಗೆ ಅಭಿವೃದ್ಧಿಯ ಕೆಲಸಗಳಿಗಾಗಿ ಅರಣ್ಯ ಎಂದು ಪರಿಗಣಿಸಬಾರದು ಎಂದು ಕೋರಿದ್ದ ಮನವಿಯನ್ನು ಸುಪ್ರೀಂ ಕೋರ್ಟ್ ಅಂಗೀಕರಿಸಿ ಏಕ ರೂಪದ ವ್ಯಾಖ್ಯಾನವನ್ನು ಪ್ರಸ್ತಾಪಿಸಿದೆ.

ಅಕ್ಟೋಬರ್ 13 ರಂದು ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯ (MoEF&CC) ಸುಪ್ರೀಂ ಕೋರ್ಟ್‌ಗೆ ಸುತ್ತಮುತ್ತಲಿನ ಭೂಪ್ರದೇಶದಿಂದ 100 ಮೀಟರ್ ಎತ್ತರದಲ್ಲಿರುವ ಪ್ರದೇಶಗಳು ಮಾತ್ರ ಅರಾವಳಿ ಎಂದು ಅರ್ಹತೆ ಪಡೆಯಬೇಕು ಎಂದು ಪ್ರಸ್ತಾಪಿಸಿದೆ ಎಂದು ಇಂಡಿಯನ್ ಎಕ್ಸ್‌ಪ್ರೆಸ್ ವರದಿ ಮಾಡಿತ್ತು. ಒಂದು ದಿನದ ನಂತರ, ನ್ಯಾಯಾಲಯದ ಕೇಂದ್ರೀಯ ಅಧಿಕಾರ ಸಮಿತಿ (CEC) ಸುಪ್ರೀಂ ಕೋರ್ಟ್ ಪೀಠಕ್ಕೆ ಸಹಾಯ ಮಾಡುವ ಅಮಿಕಸ್ ಕ್ಯೂರಿಗೆ ಪತ್ರ ಬರೆದು, ಶಿಫಾರಸ್ಸನ್ನು ಪರಿಶೀಲಿಸಿಲ್ಲ ಅಥವಾ ಅನುಮೋದಿಸಿಲ್ಲ ಎಂದು ಸ್ಪಷ್ಟಪಡಿಸಿತು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ಇದನ್ನೂ ಓದಿ : ಅರಾವಳಿ ಉಳಿವಿಗಾಗಿ ರಾಜಸ್ಥಾನದಾದ್ಯಂತ ಬೃಹತ್ ಪ್ರತಿಭಟನೆ

CEC ಪರಿಸರ ಮತ್ತು ಅರಣ್ಯಗಳಿಗೆ ಸಂಬಂಧಿಸಿದ ತನ್ನ ಆದೇಶಗಳ ಅನುಸರಣೆಯನ್ನು ಮೇಲ್ವಿಚಾರಣೆ ಮಾಡಲು ಮತ್ತು ಖಚಿತಪಡಿಸಿಕೊಳ್ಳಲು 2002ರಲ್ಲಿ ಸುಪ್ರೀಂಕೋರ್ಟ್ ಸ್ಥಾಪಿಸಿದ ಸಮಿತಿಯಾಗಿದೆ.

ಕೇಂದ್ರೀಯ ಅಧಿಕಾರ ಸಮಿತಿ (CEC) ಎಂದರೇನು?

ಕೇಂದ್ರೀಯ ಅಧಿಕಾರ ಸಮಿತಿ (CEC)ಯನ್ನು ಮೇ 9, 2002ರಂದು ಭಾರತದ ಸುಪ್ರೀಂ ಕೋರ್ಟ್ ಪರಿಸರ ಮತ್ತು ಅರಣ್ಯಗಳಿಗೆ ಸಂಬಂಧಿಸಿದಂತೆ ಆದೇಶಗಳನ್ನು ಮೇಲ್ವಿಚಾರಣೆ ಮಾಡಲು ರಚಿಸಲಾಯಿತು.

ಟಿ.ಎನ್.ಗೋದವರ್ಮನ್ ತಿರುಮಲಪಾಡ್ V/S ಯೂನಿಯನ್ ಆಫ್ ಇಂಡಿಯಾ ಪ್ರಕರಣದ ರಿಟ್ ಅರ್ಜಿಯಲ್ಲಿ ಅಂಗೀಕರಿಸಿದ ಆದೇಶದ ಮೂಲಕ ಈ ಸಿಇಸಿಯನ್ನು ರಚಿಸಲಾಗಿತ್ತು. ಸುಪ್ರೀಂ ಕೋರ್ಟ್‌ನ ಈ ಆದೇಶದ ಪ್ರಕಾರ, CEC ಅನ್ನು ರಾಷ್ಟ್ರೀಯ ಮಟ್ಟದಲ್ಲಿ, ನ್ಯಾಯಾಲಯದ ಆದೇಶಗಳ ಅನುಷ್ಠಾನದ ಮೇಲ್ವಿಚಾರಣೆಗಾಗಿ ಮತ್ತು ಅತಿಕ್ರಮಣ ತೆಗೆಯುವಿಕೆ, ಕಾರ್ಯ ಯೋಜನೆಗಳ ಅನುಷ್ಠಾನ, ಅರಣ್ಯೀಕರಣ, ತೋಟಗಳು ಮತ್ತು ಇತರ ಪರಿಸರ ಸಂರಕ್ಷಣಾ ವಿಷಯಗಳು ಸೇರಿದಂತೆ ಅನುಸರಣೆಯಲ್ಲಿಲ್ಲದ ಪ್ರಕರಣಗಳನ್ನು ನ್ಯಾಯಾಲಯದ ಮುಂದೆ ಇಡಲು ರಚಿಸಲಾಗಿದೆ. CEC ಅನ್ನು ಡಿಸೆಂಬರ್ 8, 2023 ರಂದು ಪುನರ್ರಚಿಸಲಾಗಿದೆ.

ಅರಾವಳಿಗೆ ಸಂಬಂಧಿಸಿದ ಕೇಂದ್ರೀಯ ಅಧಿಕಾರ ಸಮಿತಿಯ ಮನವಿ ಏನು?

ಅಕ್ಟೋಬರ್ 14 ರಂದು ಸುಪ್ರೀಂ ಕೋರ್ಟಿನ ಕೇಂದ್ರೀಯ ಅಧಿಕಾರ ಸಮಿತಿ ಬರೆದ ಪತ್ರದಲ್ಲಿ, ಅರಾವಳಿ ಬೆಟ್ಟಗಳು ಮತ್ತು ಅದರ ವ್ಯಾಪ್ತಿಯಲ್ಲಿನ ಪರಿಸರದ ರಕ್ಷಣೆ ಮತ್ತು ಅದರ ಉಳಿವಿಗಾಗಿ ಭಾರತೀಯ ಅರಣ್ಯ ಸಮೀಕ್ಷೆ (ಎಫ್‌ಎಸ್‌ಐ) ರೂಪಿಸಿದ ಹೊಸ ವ್ಯಾಖ್ಯಾನವನ್ನು ಅಳವಡಿಸಿಕೊಳ್ಳಬೇಕು ಎಂದು ಹೇಳಿರುವುದನ್ನು ದಿ ಇಂಡಿಯನ್ ಎಕ್ಸ್‌ಪ್ರೆಸ್ ವರದಿ ಮಾಡಿತ್ತು.

ರಾಜಸ್ಥಾನದ 15 ಜಿಲ್ಲೆಗಳಲ್ಲಿ 100 ಮೀಟರ್‌ಗಿಂತ ಕಡಿಮೆ ಇರುವ ಪ್ರದೇಶಗಳನ್ನು ಕನಿಷ್ಠ 3 ಡಿಗ್ರಿಗಳಷ್ಟು ಇಳಿಜಾರಿನೊಂದಿಗೆ ಅರಾವಳಿ ಬೆಟ್ಟಗಳು ಇದೆ ಎಂದು ಎಫ್‌ಎಸ್‌ಐ ಗುರುತಿಸಿದೆ. ಈ ವ್ಯಾಖ್ಯಾನದ ಪ್ರಕಾರ, ಕೆಳಗಿನ ಬೆಟ್ಟಗಳನ್ನು ಅಂದರೆ 100 ಮೀಟರ್‌ಗಿಂತ ಕಡಿಮೆ ಇರುವುದನ್ನು ಸಹ ಅರಾವಳಿ ಎಂದು ಹೇಳಲಾಗಿದೆ.

ಸಚಿವಾಲಯವು ಸಲ್ಲಿಸಿದ ಅರಾವಳಿಯ 100 ಮೀಟರ್ ವ್ಯಾಖ್ಯಾನದ ವಿರುದ್ಧ ಸಿಇಸಿಯ ನಿಲುವನ್ನು ಆಗಿನ ಮುಖ್ಯ ನ್ಯಾಯಮೂರ್ತಿ ಬಿಆರ್ ಗವಾಯಿ ನೇತೃತ್ವದ ಎಸ್‌ಸಿ ಪೀಠಕ್ಕೆ ತಿಳಿಸಲಾಗಿದೆಯೇ ಎಂದು ದಿ ಇಂಡಿಯನ್ ಎಕ್ಸ್‌ಪ್ರೆಸ್ ವರದಿಗಾರರು ಕೇಳಿದಾಗ, ಅಮಿಕಸ್ ಕ್ಯೂರಿ ಕೆ ಪರಮೇಶ್ವರ್ ಪ್ರತಿಕ್ರಿಯಿಸಲು ನಿರಾಕರಿಸಿದರು.

ಮೇ 2024ರಲ್ಲಿ, ಗಣಿಗಾರಿಕೆಯಿಂದ ಬೆಟ್ಟಗಳನ್ನು ರಕ್ಷಿಸಲು ಅರವಳಿಗೆ “ಏಕರೂಪದ ವ್ಯಾಖ್ಯಾನದೊಂದಿಗೆ ಹೊರಬರಲು” ಪರಿಸರ ಕಾರ್ಯದರ್ಶಿಯ ಅಡಿಯಲ್ಲಿ ಸಮಿತಿಯನ್ನು ರಚಿಸುವಂತೆ ಸುಪ್ರೀಂ ಕೋರ್ಟ್ ಕೇಂದ್ರ ಅಧಿಕಾರ ಸಮಿತಿಯ ಡಾ.ಜೆ.ಆರ್.ಭಟ್ ಸಚಿವಾಲಯಕ್ಕೆ ನಿರ್ದೇಶನ ನೀಡಿದ್ದರು.

ಗಣಿಗಾರಿಕೆ ವಿರುದ್ಧ ತೆಗೆದುಕೊಂಡ ಕ್ರಮಗಳೇನು?

1990ರ ದಶಕದಿಂದಲೂ ಪರಿಸರ ಸಚಿವಾಲಯವು ಮಂಜುರಾದ ಯೋಜನೆಗಳಿಗೆ ಮಾತ್ರ ಗಣಿಗಾರಿಕೆ ಮಾಡಲು ಸೀಮಿತ ನಿಯಮಗಳೊಂದಿಗೆ ಅವಕಾಶ ನೀಡಲಾಗಿತ್ತು. ಆದರೆ, ಈ ನಿಯಮಗಳನ್ನು ಸಂಪೂರ್ಣವಾಗಿ ಉಲ್ಲಂಘಿಸಲಾಗಿದೆ. 2009ರಲ್ಲಿ ಸುಪ್ರೀಂಕೋರ್ಟ್ ಮಧ್ಯ ಪ್ರವೇಶಿಸಿ ಹರಿಯಾಣದ ಫರಿದಾಬಾದ್, ಗುರುಗ್ರಾಮ್ ಮತ್ತು ಮೇವಾತ್ ಜಿಲ್ಲೆಗಳಲ್ಲಿ ನಡೆಯುತ್ತಿದ್ದ ಗಣಿಗಾರಿಕೆಗೆ ಸಂಪೂರ್ಣ ನಿಷೇಧ ಹೇರಿತ್ತು. 2024ರ ಮೇ ತಿಂಗಳಿನಲ್ಲಿ ಸುಪ್ರೀಂ ಕೋರ್ಟ್ ಈ ವ್ಯಾಪ್ತಿಯಲ್ಲಿ ಹೊಸ ಗಣಿಗಾರಿಕೆ ಗುತ್ತಿಗೆಗಳು ಮತ್ತು ಹೊಸ ನವೀಕರಣ ಮಾಡುವುದನ್ನು ನಿಷೇಧಿಸಿ, ತಮ್ಮ ಕೇಂದ್ರಿಯ ಅಧಿಕಾರ ಸಮಿತಿಗೆ ಪರಿಸರದ ವಿವರವಾದ ಪರಿಶೀಲನೆ ನಡೆಸುವಂತೆ ನಿರ್ದೇಶನ ನೀಡಿತ್ತು.

ಸುಪ್ರೀಂ ಕೋರ್ಟ್ ಅರಾವಳಿ ವರದಿಯನ್ನು ಬದಿಗಿಟ್ಟಿತೆ?

ಅರಾವಳಿ ಪರ್ವತ ಶ್ರೇಣಿಗಳು ಬರುವ ಎಲ್ಲಾ ರಾಜ್ಯಗಳಲ್ಲಿ ಸಂಪೂರ್ಣ ವೈಜ್ಞಾನಿಕ ಮ್ಯಾಪಿಂಗ್ (ನಕ್ಷೆ) ತಯಾರಿಸುವುದು, ಗಣಿಗಾರಿಕೆ ಚಟುವಟಿಕೆಗಳಿಂದ ಪರಿಸರದ ಮೇಲೆ ಆಗುವ ಸೂಕ್ಷ್ಮ ಪರಿಣಾಮಗಳ ಬಗ್ಗೆಯೂ ಮೌಲ್ಯಮಾಪನ ಮಾಡುವುದು ಮತ್ತು ಸಂರಕ್ಷಿತ ಆವಾಸ್ಥಾನಗಳು, ಜಲಮೂಲಗಳು, ಹುಲಿ ಕಾರಿಡಾರ್‌ಗಳು ಮತ್ತು ರಾಷ್ಟ್ರೀಯ ರಾಜಧಾನಿ ಪ್ರದೇಶದೊಳಗಿನ ಪ್ರದೇಶಗಳಂತಹ ಪರಿಸರ ಸೂಕ್ಷ್ಮ ಪ್ರದೇಶಗಳಲ್ಲಿ ಗಣಿಗಾರಿಕೆಯನ್ನು ನಿಷೇಧಿಸುವಂತೆ ಕಟ್ಟುನಿಟ್ಟಾಗಿ ಕ್ರಮಕೈಗೊಳ್ಳಬೇಕು ಮತ್ತು ಈ ಕೂಡಲೇ ಜಾರಿಗೆ ತರಬೇಕು ಎಂದು ಸುಪ್ರೀಂ ಕೋರ್ಟ್ ತನ್ನ ಕೇಂದ್ರಿಯ ಅಧಿಕಾರ ಸಮಿತಿಗೆ ಆದೇಶಿಸಿತ್ತು.

“ನೀಲಿ ರೇಖೆಗಳು ಬೆಟ್ಟದ ರಚನೆ ಪ್ರಾರಂಭವಾಗುವ ಮೂಲ ಅಥವಾ ತಪ್ಪಲಿನ ಬಾಹ್ಯರೇಖೆಗಳನ್ನು ಪ್ರತಿನಿಧಿಸುತ್ತವೆ. ಆದರೆ, ಹಸಿರು ರೇಖೆಯು ಅದರ ಬಫರ್ ಪ್ರದೇಶವನ್ನು ಒಳಗೊಂಡಂತೆ ಅರಾವಳಿ ಗಡಿಯನ್ನು ಗುರುತಿಸುತ್ತದೆ. ಈ ನಕ್ಷೆಯ ಒಳಗೆ ಬೃಹತ್ ಗುಡ್ಡಗಳು ಇರುತ್ತವೆ. ಇದು ಅರಾವಳಿ ಶ್ರೇಣಿಯಾದ್ಯಂತ ಸಾಮಾನ್ಯವಾದ ವಿದ್ಯಮಾನವಾಗಿದೆ ಮತ್ತು ಯಾವುದೇ ನಿರ್ದಿಷ್ಟ ಸ್ಥಳಕ್ಕೆ ಸೀಮಿತವಾಗಿಲ್ಲ” ಎಂದು FSIಯ ವ್ಯಾಖ್ಯಾನದ ಪ್ರಕಾರ ಅರಾವಳಿ ಗಡಿಯನ್ನು ವಿವರಿಸುವ ನಕ್ಷೆಯನ್ನು ಬಳಸಿ, ಅಮಿಕಸ್ ಕ್ಯೂರಿ ಪರಮೇಶ್ವರ್ ಹೇಳಿದ್ದಾರೆ.

ಆದಾಗ್ಯೂ, “ಪ್ರಸ್ತಾವಿತ (100-ಮೀಟರ್) ವ್ಯಾಖ್ಯಾನವನ್ನು ಅನ್ವಯಿಸಿದರೆ ಗಣಿಗಾರಿಕೆಗೆ ಹೆಚ್ಚಾಗಬಹುದು. ಇದರಿಂದ ನಿಸ್ಸಂದೇಹವಾಗಿ ಥಾರ್ ಮರುಭೂಮಿಯ ಪೂರ್ವಕ್ಕೆ ವಿಸ್ತರಣೆಯಾಗುತ್ತದೆ ಮತ್ತು ತೀವ್ರ ಪರಿಸರ ಪರಿಣಾಮಗಳಿಗೆ ಕಾರಣವಾಗುತ್ತದೆ” ಎಂದು ಹೇಳಿದ್ದಾರೆ.

ಇದಾದ ನಂತರವು ಸುಪ್ರೀಂ ಕೋರ್ಟ್ ಹೇಳಿರುವ 100 ಮೀಟರ್ ವರೆಗಿನ ಅರಾವಳಿ ಪರ್ವತ ಶ್ರೇಣಿಗಳನ್ನು ಗಣಿಗಾರಿಕೆ ಅವಕಾಶ ನೀಡಬಹುದು ಎಂಬುದು, ಪರಿಸರವಾದಿಗಳ ಕೋಪಕ್ಕೆ ಗುರಿಯಾಗಿದೆ. 2024ರ ಅಕ್ಟೋಬರಿನಲ್ಲಿ ಭಾರತೀಯ ಅರಣ್ಯ ಸಮೀಕ್ಷೆ ಸ್ವತಃ ಪ್ರಸ್ತಾಪವಿಟ್ಟು, 30 ಮೀಟರ್ ಎತ್ತರವಿರುವ 4.57ರ ಇಳಿಜಾರಿನಲ್ಲಿರುವ ಗುಡ್ಡಗಳನ್ನು ಸಂರಕ್ಷಿಸಬೇಕು ಎಂದು ಹೇಳಕೊಂಡಿತ್ತು. ಭಾರತೀಯ ಅರಣ್ಯ ಸಮೀಕ್ಷೆಯ ಆಂತರಿಕ ಮೌಲ್ಯಮಾಪನದ ಪ್ರಕಾರ ರಾಜಸ್ಥಾನದ 15 ಜಿಲ್ಲೆಗಳಲ್ಲಿ ವ್ಯಾಪಿಸಿರುವ 12,081 ಗುಡ್ಡಗಳು 20 ಮೀಟರ್ ಗಳಷ್ಟು ಎತ್ತರದಲ್ಲಿವೆ. ಇವುಗಳಲ್ಲಿ 1,048 ಗುಡ್ಡಗಳು ಅಂದರೆ, ಶೇ 8.7 ರಷ್ಟು ಮಾತ್ರ 10 ಮೀಟರ್ ಗಿಂತ ಎತ್ತರ ಇವೆ. ಅಂದರೆ ಪರಿಸರ ಸಚಿವಾಲಯ ಹೊರಡಿಸಿರುವ ಹೊಸ ನಿಯಮದ ಪ್ರಕಾರ ಅರಾವಳಿಯ ಶೇ 90ರಷ್ಟು ಬೆಟ್ಟಗಳು 100 ಮೀ.ಗಿಂತ ಕಡಿಮೆ ಇವೆ. ಹೊಸ ನಿಯಮದಲ್ಲಿ ತೋರಿಸಿರುವ ಪ್ರಕಾರ ಅರಾವಳಿ ಬೆಟ್ಟಗಳಲ್ಲಿ 1594 ಬೆಟ್ಟಗಳು 80 ಮೀಟರ್ ಎತ್ತರದಲ್ಲಿವೆ, 2656 ಬೆಟ್ಟಗಳು 60 ಮೀಟರ್ ಎತ್ತರದಲ್ಲಿವೆ ಮತ್ತು 50,009 ಬೆಟ್ಟಗಳು 49 ಮೀಟರ್ ಎತ್ತರದಲ್ಲಿವೆ. ಸುಮಾರು 1,07,494 ಬೆಟ್ಟಗಳು 20 ಮೀಟರ್ ಗಿಂತ ಕಡಿಮೆ ಇವೆ. ಈ ದತ್ತಾಂಶದ ಪ್ರಕಾರ ಲಕ್ಷಾಂತರ ಬೆಟ್ಟಗಳಿರುವ ಸಾಲುಗಳು ಗಣಿಗಾರಿಕೆಗೆ ಆಕ್ರಮಿಸಿಕೊಂಡರೆ, ಭಾರತದ ಶ್ವಾಸಕೋಶದಂತಿರುವ ಅರಾವಳಿ ಪ್ರದೇಶವೇ ಜೀವ ತೆಗೆಯುವ ಸಾಧನವಾಗುತ್ತದೆ.

Manoj
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಕೇಂದ್ರವನ್ನು ಟೀಕಿಸಿದ ಸಾಮಾಜಿಕ ಮಾಧ್ಯಮ ಖಾತೆಗಳು ಮಂಗಮಾಯ: ಉಳಿಯುವುದು ಬರೀ ಮೋದಿಮಯ!

ಹೀಗೆ ಮೋದಿ ಸರ್ಕಾರವನ್ನು ವಿರೋಧಿಸಿದವರ ಖಾತೆಗಳು ಸಾಮಾಜಿಕ ಮಾಧ್ಯಮಗಳಿಂದ ಅಳಿಸಿ ಕೊನೆಗೆ...

ಒಂದು ಕಡೆ ಖಾದ್ಯತೈಲ ಬೆಲೆ ಏರಿಕೆ; ಮತ್ತೊಂದು ಕಡೆ ಕುಸುಬೆ ಬೆಲೆ ಕುಸಿತದಿಂದ ರೈತರಿಗೆ ಹೊರೆ

ಖಾದ್ಯತೈಲ ಬೆಲೆ ಏರಿಕೆ ಗ್ರಾಹಕರ ಜೇಬಿಗೆ ಭಾರವಾದರೆ, ಕುಸುಬೆ ಬೆಲೆ ಕುಸಿತ...

ಡಾಲರ್ V/s ಯುವಾನ್: ಕೊಲ್ಲಿ ಯುದ್ಧ ಕರೆನ್ಸಿ ಯುದ್ಧವಾಗಿ ಮಾರ್ಪಾಡಾಗುತ್ತಿದೆಯೇ?

ಅಕಸ್ಮಾತ್ ಈ ಯುದ್ಧ ಮುಂದುವರೆದರೆ, ಕೆಲವು ದೇಶಗಳು ಡಾಲರ್ ಬದಲಿಗೆ ಯುವಾನ್...