ಏನಿದು ಕಾಶ್ಮೀರದ ‘ಕುನನ್ – ಪೋಶ್ಪೋರ ಕಗ್ಗತ್ತಲ ರಾತ್ರಿ’? ಎಬಿವಿಪಿ ತಗಾದೆ ಯಾಕೆ?

Date:

ಕಗ್ಗತ್ತಲೆಯ ಛಾಯೆಯು ಇಂದಿಗೂ ಕಾಶ್ಮೀರಿ ಮಹಿಳೆಯರ ಹೋರಾಟದ ಪ್ರತೀಕವಾಗಿ ನಿಲ್ಲುತ್ತದೆ ಮತ್ತು ಇದನ್ನು ಕೆಲವು ಸಂದರ್ಭಗಳಲ್ಲಿ 'ಡಾರ್ಕ್ ನೈಟ್' ಎಂಬ ಸಾರ್ಕಾಸ್ಟಿಕ್ ಅಥವಾ ಡಾರ್ಕ್ ಹ್ಯೂಮರ್ ರೂಪದಲ್ಲಿ ಉಲ್ಲೇಖಿಸಲಾಗುತ್ತದೆ. ರಕ್ಷಕರು ಎಂದುಕೊಂಡವರೇ ಕ್ರೌರ್ಯದ ಕತ್ತಲೆಯನ್ನು ಹರಡಿದರು ಎಂಬ ಆರೋಪವನ್ನು ಸೂಚಿಸುತ್ತಾ, ಘಟನೆಯ ಹಿನ್ನೆಲೆಯನ್ನು ನೋಡೋಣ.

ಬೆಂಗಳೂರಿನ ಸರ್ಜಾಪುರದಲ್ಲಿರುವ ವಿಶ್ವ ಪ್ರಖ್ಯಾತ ವಿದ್ಯಾ ಸಂಸ್ಥೆಯಾಗಿದೆ ಅಜೀಂ ಪ್ರೇಮ್‌ಜಿ ವಿದ್ಯಾಸಂಸ್ಥೆ. ಈ ವಿದ್ಯಾ ಸಂಸ್ಥೆಯು ಶಿಕ್ಷಣದಲ್ಲಿ ಹೊಸ ಹೊಸ ವಿಚಾರಗಳನ್ನು ಒಳಗೊಂಡು ಮುನ್ನಡೆಯುತ್ತಿರುವ ಕಾರಣಕ್ಕೆ ಪ್ರಖ್ಯಾತಗೊಂಡಿದೆ. ಎಲ್ಲಿಯವರೆಗೆಂದರೆ ಕೇಂದ್ರ ಸರ್ಕಾರ ರೂಪಿಸಿದ ಹೊಸ ಶಿಕ್ಷಣ ನೀತಿ (New Education Policy)ಯ ತಂಡದಲ್ಲಿ ಅಜೀಂ ಪ್ರೇಮ್‌ಜಿ ಸಂಸ್ಥೆಯ ಉಪನ್ಯಾಸಕರೊಬ್ಬರು ಸ್ಥಾನ ಪಡೆದಿದ್ದರು. ಇಂತಹ ಹೆಗ್ಗಳಿಕೆ ಇರುವ ಅಜೀಂ ಪ್ರೇಮ್‌ಜಿ ವಿದ್ಯಾರ್ಥಿಗಳಿಗೆ ಎಲ್ಲಾ ವಿಚಾರಗಳ ಕುರಿತು ಜ್ಞಾನ ಹೊಂದಿರಬೇಕೆಂಬ ಉದ್ದೇಶದಿಂದ ಬಹಳಷ್ಟು ವಿಚಾರಗಳನ್ನು ವಿದ್ಯಾರ್ಥಿಗಳ ಶಿಕ್ಷಣದಲ್ಲಿ ಸೇರ್ಪಡೆ ಮಾಡಿ ವಿದ್ಯಾರ್ಥಿಗಳನ್ನು ಅಭಿವೃದ್ಧಿಪಡಿಸುತ್ತದೆ. ಅದೇ ಉದ್ದೇಶದ ಭಾಗವಾಗಿ ಆಗಿದೆ ‘ಕುನನ್ – ಪೋಶ್ಪೋರ ಕಗ್ಗತ್ತಲ ರಾತ್ರಿ’ ಎಂಬ ವಿಷಯದ ಕುರಿತು ಚರ್ಚೆ ಹಮ್ಮಿಕೊಂಡಿರುವುದು.

ಯಾವುದೇ ವಿಚಾರದ ಕುರಿತು ಋಣಾತ್ಮಕ ಮತ್ತು ಸಕಾರಾತ್ಮಕ ಚರ್ಚೆ ನಡೆಸಿ ಅಧ್ಯಾಪಕರು ಸಮಾರೋಪಗೊಳಿಸುವುದು ಸಾಮಾನ್ಯ. ಆ ನಡುವೆ ಎಬಿವಿಪಿ ತಗಾದೆ ಎಬ್ಬಿಸಲು ಶಿಕ್ಷಣ ಸಂಸ್ಥೆ ಮೇಲೆ ದಾಳಿ ಮಾಡಲು ಮುಂದಾಗಿದೆ. ಅಷ್ಟಕ್ಕೂ ಎಬಿವಿಪಿ ರೊಚ್ಚಿಗೇಳಲು ಕಾರಣವೇನೆಂದು ತಿಳಿಯಬೇಕಾದರೆ ಕುನನ್ – ಪೋಶ್ಪೋರ ಡಾರ್ಕ್ ನೈಟ್ ಕುರಿತು ತಿಳಿಯಬೇಕು!

ABVP 5

ಇದನ್ನು ಓದಿದ್ದೀರಾ? ಅಜೀಂ ಪ್ರೇಮ್‌ಜಿ ವಿವಿ ಆವರಣದಲ್ಲಿ ಎಬಿವಿಪಿ ಕಾರ್ಯಕರ್ತರ ದಾಂಧಲೆ: ವಿದ್ಯಾರ್ಥಿಗಳ ಮೇಲೆ ಹಲ್ಲೆ

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ಕುನನ್ – ಪೋಶ್ಪೋರ ಘಟನೆ: ಕಾಶ್ಮೀರದ ಕಗ್ಗತ್ತಲೆಯ ರಾತ್ರಿ

ಕಾಶ್ಮೀರದ ಕಪ್ವಾರ ಜಿಲ್ಲೆಯಲ್ಲಿ ಸ್ಥಿತವಾಗಿರುವ ಕುನನ್ ಮತ್ತು ಪೋಶ್ಪೋರ ಎಂಬ ಎರಡು ಸಣ್ಣ ಹಳ್ಳಿಗಳು, 1991ರ ಫೆಬ್ರವರಿ 23ರ ಆ ಚಳಿಯ ರಾತ್ರಿಯನ್ನು ಇಂದಿಗೂ ಮರೆಯಲು ಸಾಧ್ಯವಿಲ್ಲ. ಆ ರಾತ್ರಿ, ಭಾರತೀಯ ಸೇನೆಯ ಸೈನಿಕರು ಹಳ್ಳಿಗಳನ್ನು ಸುತ್ತುವರಿದು ಹುಡುಕಾಟ ನಡೆಸಿದ ಹೆಸರಿನಲ್ಲಿ ನಡೆದ ಘಟನೆಯು, ಕಾಶ್ಮೀರದ ಇತಿಹಾಸದಲ್ಲಿ ಒಂದು ಕಪ್ಪು ಅಧ್ಯಾಯವಾಗಿ ಉಳಿದಿದೆ. ಈ ಘಟನೆಯನ್ನು ಹಲವರು “ಕುನನ್ – ಪೋಶ್ಪೋರ ಮಾಸ್ ರೇಪ್” (Kunan Poshpora Mass Rape Case) ಎಂದು ಬಣ್ಣಿಸಿದ್ದಾರೆ ಮತ್ತು ಇದರಲ್ಲಿ ಸಾಮೂಹಿಕ ಅತ್ಯಾಚಾರದ ಆರೋಪಗಳು ಭಾರತೀಯ ಸೇನೆಯ ಮೇಲೆ ಬಿದ್ದಿವೆ.

ಈ ಘಟನೆಯ ಕಗ್ಗತ್ತಲೆಯ ಛಾಯೆಯು ಇಂದಿಗೂ ಕಾಶ್ಮೀರಿ ಮಹಿಳೆಯರ ಹೋರಾಟದ ಪ್ರತೀಕವಾಗಿ ನಿಲ್ಲುತ್ತದೆ ಮತ್ತು ಇದನ್ನು ಕೆಲವು ಸಂದರ್ಭಗಳಲ್ಲಿ ‘ಡಾರ್ಕ್ ನೈಟ್’ ಎಂಬ ಸಾರ್ಕಾಸ್ಟಿಕ್ ಅಥವಾ ಡಾರ್ಕ್ ಹ್ಯೂಮರ್ ರೂಪದಲ್ಲಿ ಉಲ್ಲೇಖಿಸಲಾಗುತ್ತದೆ. ರಕ್ಷಕರು ಎಂದುಕೊಂಡವರೇ ಕ್ರೌರ್ಯದ ಕತ್ತಲೆಯನ್ನು ಹರಡಿದರು ಎಂಬ ಆರೋಪವನ್ನು ಸೂಚಿಸುತ್ತಾ, ಘಟನೆಯ ಹಿನ್ನೆಲೆಯನ್ನು ನೋಡೋಣ.

1990ರ ದಶಕದ ಆರಂಭದಲ್ಲಿ ಕಾಶ್ಮೀರದಲ್ಲಿ ಸ್ವಾತಂತ್ರ್ಯ ಕಾಶ್ಮೀರ ಹೋರಾಟದ ಚಟುವಟಿಕೆಗಳು ತೀವ್ರಗೊಂಡಿದ್ದವು. ಭಾರತೀಯ ಸೇನೆಯು ಈ ಪ್ರದೇಶದಲ್ಲಿ ಹೋರಾಟಗಾರರ ಮೇಲೆ ಉಗ್ರ ಚಟುವಟಿಕೆಯ ಆರೋಪ ಹಾಕಿ ಅದರಲ್ಲಿ ಭಾಗವಹಿಸುವವರನ್ನು ಹುಡುಕುವ ಸಲುವಾಗಿ ಹಲವು ಹುಡುಕಾಟ ಕಾರ್ಯಾಚರಣೆಗಳನ್ನು ನಡೆಸುತ್ತಿತ್ತು. ಫೆಬ್ರವರಿ 23, 1991ರಂದು, ಕಪ್ವಾರದ ಕುನನ್ ಮತ್ತು ಪೋಶ್ಪೋರಾ ಹಳ್ಳಿಗಳಲ್ಲಿ ಸೇನೆಯ 4ನೇ ರೈಫಲ್ಸ್ ಘಟಕದ ಸೈನಿಕರು – ಸುಮಾರು 300ಕ್ಕೂ ಹೆಚ್ಚು ಸಂಖ್ಯೆಯಲ್ಲಿ – ಹುಡುಕಾಟಕ್ಕಾಗಿ ಬಂದರು. ಹಳ್ಳಿಗಳನ್ನು ಸುತ್ತುವರಿದು, ಹೋರಾಟಗಳಲ್ಲಿ ಭಾಗಿ ಇರುವ ಮತ್ತು ಇಲ್ಲದ ಪುರುಷರನ್ನು ಮನೆಯಿಂದ ಹೊರಗೆ ಕರೆದುಕೊಂಡು ಹೋಗಿ ವಿಚಾರಣೆ ಮಾಡಿದರು ಎಂದು ಹೇಳಲಾಗುತ್ತದೆ. ಆದರೆ, ಆ ರಾತ್ರಿಯಲ್ಲಿ ನಡೆದದ್ದು ಕೇವಲ ಹುಡುಕಾಟವಲ್ಲ ಎಂಬುದು ಸಂತ್ರಸ್ತರು‌ಗಳ ಹೇಳಿಕೆಗಳಿಂದ ತಿಳಿದುಬರುತ್ತದೆ. ಹಲವು ಮಹಿಳೆಯರು – 13 ವರ್ಷದ ಬಾಲಕಿಯರಿಂದ ಹಿಡಿದು 60 ವರ್ಷದ ವಯಸ್ಸಿನ ಹಿರಿಯರವರೆಗೆ, ಗರ್ಭಿಣಿಯರನ್ನೂ ಸೇರಿದಂತೆ – ಸೈನಿಕರಿಂದ ಸಾಮೂಹಿಕ ಅತ್ಯಾಚಾರಕ್ಕೆ ಒಳಗಾದರು ಎಂಬ ಆರೋಪಗಳು ಕೇಳಿಬಂದವು. ಹಳ್ಳಿಯವರು ಹೇಳುವಂತೆ, ಪುರುಷರನ್ನು ಹೊರಗಡೆ ತೆಗೆದುಕೊಂಡು ಹೋಗಿ ಹಿಂಸಿಸಲಾಯಿತು, ಮತ್ತು ಮಹಿಳೆಯರನ್ನು ಮನೆಯೊಳಗೆಯೇ ಹಿಂಸಿಸಲಾಯಿತು.

ಈ ಘಟನೆಯ ನಂತರ, ಸಂತ್ರಸ್ತರು‌ ನ್ಯಾಯಕ್ಕಾಗಿ ಹೋರಾಡಲು ಪ್ರಾರಂಭಿಸಿದರು. ಮಾರ್ಚ್ 1991ರಲ್ಲಿ, ಹಳ್ಳಿಯವರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದರು, ಆದರೆ ತನಿಖೆಯು ನಿಧಾನಗತಿಯಲ್ಲಿತ್ತು. ಭಾರತೀಯ ಸೇನೆಯು ಈ ಆರೋಪಗಳನ್ನು ನಿರಾಕರಿಸಿತು ಮತ್ತು ಇದನ್ನು ‘ಅಪಪ್ರಚಾರದ ಭಾಗ’ ಅಥವಾ ‘ಉಗ್ರಗಾಮಿಗಳ ಕುತಂತ್ರ’ ಎಂದು ಕರೆಯಿತು. ಸರ್ಕಾರಿ ತನಿಖಾ ಸಮಿತಿಗಳು –ಉದಾಹರಣೆಗೆ ಪ್ರೆಸ್ ಕೌನ್ಸಿಲ್ ಆಫ್ ಇಂಡಿಯಾ – ಆರೋಪಗಳನ್ನು ತಳ್ಳಿಹಾಕಿದವು, ಮತ್ತು ಸಂತ್ರಸ್ತೆಯರ ಹೇಳಿಕೆಗಳನ್ನು ‘ಅತಿಶಯೋಕ್ತಿ’ ಎಂದು ಹೇಳಿದವು. ಆದರೆ, ಅಂತಾರಾಷ್ಟ್ರೀಯ ಮಾನವ ಹಕ್ಕುಗಳ ಸಂಸ್ಥೆಗಳು ಹ್ಯೂಮನ್ ರೈಟ್ಸ್ ವಾಚ್ ಮತ್ತು ಆಮ್ನೆಸ್ಟಿ ಇಂಟರ್‌ನ್ಯಾಷನಲ್‌ನಂತಹ ಸಂಸ್ಥೆಗಳು ಘಟನೆಯನ್ನು ದೃಢೀಕರಿಸಿದವು ಮತ್ತು ಸಂತ್ರಸ್ತೆಯರ ಟೆಸ್ಟಿಮೋನಿಗಳನ್ನು ‘ನಂಬಲಾರ್ಹ’ ಎಂದು ಪರಿಗಣಿಸಿದವು ಮತ್ತು ಮಾಧ್ಯಮಗಳಲ್ಲಿ ತನಿಖಾ ವರದಿಗಳನ್ನು ಬಿಡುಗಡೆ ಗೊಳಿಸಿದವು. 2013ರಲ್ಲಿ, ಜಮ್ಮು ಮತ್ತು ಕಾಶ್ಮೀರ ಹೈಕೋರ್ಟ್ ಕೇಸನ್ನು ಮರು ತೆರೆಯಲು ಆದೇಶಿಸಿತು ಮತ್ತು ಸಂತ್ರಸ್ತರು ತಮ್ಮ ಹೋರಾಟವನ್ನು ಮುಂದುವರಿಸಿದರು.

ಇದನ್ನು ಓದಿದ್ದೀರಾ? ʼಅಜೀಂ ಪ್ರೇಮ್‌ಜಿʼ ಎಂಬ ಮಹಾದಾನಿ; ಅಡುಗೆ ಎಣ್ಣೆ ವ್ಯಾಪಾರಿಯಿಂದ ಐಟಿ ದಿಗ್ಗಜನವರೆಗೆ…

ಈ ಘಟನೆಯು ಕೇವಲ ಒಂದು ದುರಂತವಲ್ಲ, ಬದಲಿಗೆ ಕಾಶ್ಮೀರದಲ್ಲಿ ಮಹಿಳೆಯರ ಮೇಲಿನ ಹಿಂಸೆಯ ಮತ್ತು ಸೇನಾ ದೌರ್ಜನ್ಯದ ಪ್ರತೀಕವಾಗಿದೆ. ಸಂತ್ರಸ್ತರು ಸಮಾಜದಿಂದ ತಿರಸ್ಕಾರಕ್ಕೆ ಒಳಗಾದರು – ಕೆಲವರು ವಿವಾಹದಿಂದ ವಂಚಿತರಾದರು, ಇನ್ನು ಕೆಲವರು ಮಾನಸಿಕ ಆಘಾತಕ್ಕೆ ತುತ್ತಾದರು. ಆದರೆ, ಅವರ ಹೋರಾಟವು ಪ್ರೇರಣೆಯ ಮೂಲವಾಗಿದೆ. “Do You Remember Kunan Poshpora?” ಎಂಬ ಪುಸ್ತಕ – ಈ ಘಟನೆಯನ್ನು ದಾಖಲಿಸಿವೆ ಮತ್ತು ಪ್ರತಿ ವರ್ಷ ಫೆಬ್ರವರಿ 23ನ್ನು “ಕಾಶ್ಮೀರಿ ವುಮೆನ್ಸ್ ರೆಸಿಸ್ಟೆನ್ಸ್ ಡೇ” ಎಂದು ಆಚರಿಸಲಾಗುತ್ತದೆ. ಈ ದಿನವು ಸಂತ್ರಸ್ತರ ಧೈರ್ಯವನ್ನು ಸ್ಮರಿಸುತ್ತದೆ ಮತ್ತು ನ್ಯಾಯಕ್ಕಾಗಿ ಹೋರಾಡುವ ಮಹಿಳೆಯರನ್ನು ಗೌರವಿಸುತ್ತದೆ ಹಾಗೂ ಅವರ ಘನತೆಯನ್ನು ಎತ್ತಿ ಹಿಡಿಯುತ್ತದೆ.

ವಿವಾದದ ಇನ್ನೊಂದು ಆಯಾಮ ನೋಡುವುದಾದರೆ, ಘಟನೆಯ ಕುರಿತು ಆಗಿನ ಸರ್ಕಾರ ಮತ್ತು ಸೇನೆಯ ಪ್ರತಿಕ್ರಿಯೆ. ಭಾರತೀಯ ಸರ್ಕಾರ ಮತ್ತು ಸೇನೆಯು ಇದನ್ನು “ಮಿಥ್” ಅಥವಾ “ಪ್ರಾಪಗಂಡಾ” ಎಂದು ಕರೆದಿದೆ ಮತ್ತು ಕೆಲವು ತನಿಖೆಗಳು ಆರೋಪಗಳನ್ನು ತಳ್ಳಿಹಾಕಿವೆ. ಆದರೆ, ಸ್ಥಳೀಯರು ಮತ್ತು ಮಾನವ ಹಕ್ಕುಗಳ ಸಂಸ್ಥೆಗಳು ಇದನ್ನು ನಿಜವೆಂದು ನಂಬುತ್ತಾರೆ. ಕೆಲವು ಸಾಮಾಜಿಕ ಮಾಧ್ಯಮಗಳಲ್ಲಿ ಈ ಘಟನೆಯನ್ನು “ಡಾರ್ಕ್ ನೈಟ್” ಎಂಬ ರೂಪಕದಲ್ಲಿ ಚರ್ಚಿಸಲಾಗುತ್ತದೆ. ಸಾಮಾಜಿಕ ಜಾಲತಾಣಗಳಲ್ಲಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಕೆಲವು ಪೋಸ್ಟ್‌ಗಳು ಈ ಘಟನೆಯನ್ನು ಸ್ಮರಿಸಿ, ನ್ಯಾಯಕ್ಕಾಗಿ ಈಗಲೂ ಕರೆ ನೀಡುತ್ತವೆ ಮತ್ತು ಚರ್ಚೆ ನಡೆಸುತ್ತವೆ.

35 ವರ್ಷಗಳ ನಂತರವೂ ಈ ಪ್ರಕರಣದ ಸಂತ್ರಸ್ತರು ನ್ಯಾಯಕ್ಕಾಗಿ ಕಾಯುತ್ತಿದ್ದಾರೆ. ಸಂತ್ರಸ್ತರಲ್ಲಿ ಹಲವಾರು ನಿಧನರಾಗಿದ್ದರೆ, ಬದುಕುಳಿದ ಕೆಲವರು ತಮ್ಮ ಕಥೆಗಳನ್ನು ಹೇಳುತ್ತಾ, ಕಾಶ್ಮೀರದಲ್ಲಿ ಮಹಿಳೆಯರ ಮೇಲಿನ ಹಿಂಸೆಯ ವಿರುದ್ಧ ಹೋರಾಡುತ್ತಿದ್ದಾರೆ. ಇದು ಕೇವಲ ಒಂದು ಘಟನೆಯಲ್ಲ, ಬದಲಿಗೆ ಸಂಘರ್ಷದ ಪ್ರದೇಶಗಳಲ್ಲಿ ನಡೆಯುವ ದೌರ್ಜನ್ಯದ ಸಾಮಾನ್ಯ ಚಿತ್ರಣವಾಗಿದೆ. ನ್ಯಾಯದ ಕಗ್ಗತ್ತಲೆಯಲ್ಲಿ ಬೆಳಕು ಹರಡುವವರೆಗೆ, ಕುನನ್ – ಪೋಶ್ಪೋರ ಇತಿಹಾಸದಲ್ಲಿ ಒಂದು ಡಾರ್ಕ್ ನೈಟ್ – ಕಗ್ಗತ್ತಲಾಗಿ ಉಳಿಯುತ್ತದೆ.

ಇದನ್ನೂ ಓದಿ ಅಜೀಂ ಪ್ರೇಮ್‌ಜಿ ವಿವಿ ಆವರಣದಲ್ಲಿ ಎಬಿವಿಪಿ ಕಾರ್ಯಕರ್ತರ ದಾಂಧಲೆ: ವಿದ್ಯಾರ್ಥಿಗಳ ಮೇಲೆ ಹಲ್ಲೆ

ಇದನ್ನು ಸಂಘಪರಿವಾರ ಸಹಿಸೋದಿಲ್ಲ. ಕಾಶ್ಮೀರಿ ಪಂಡಿತರ ಮೇಲಿನ ದಾಳಿಗಳ ಕುರಿತು ಭಾವನಾತ್ಮಕವಾಗಿ ದೇಶದ ಜನತೆಯನ್ನು ಕೆರಳಿಸಿ ಅದರಿಂದ ರಾಜಕೀಯ ಲಾಭ ಪಡೆದು ಕಾಶ್ಮೀರದ ಜನತೆಯ ಸಂವಿಧಾನಿಕ ಹಕ್ಕಾಗಿದ್ದ ವಿಧಿ 370ಯನ್ನು ಕಸಿದು ಪ್ರಜಾಪ್ರಭುತ್ವಕ್ಕೆ ವಿರುದ್ಧವಾಗಿ ದೇಶವನ್ನು ನಡೆಸುವ ಬಿಜೆಪಿಯ ಅಂಗವಾದ ಸಂಘಪರಿವಾರದ ವಿದ್ಯಾರ್ಥಿ ಗೂಂಡಾ ಪಡೆ ದೇಶದಲ್ಲಿ ವಾಕ್ ಸ್ವಾತಂತ್ರ್ಯ ಮತ್ತು ಭಿನ್ನಾಭಿಪ್ರಾಯದ ಸ್ವಾತಂತ್ರ್ಯವನ್ನು ಕಸಿದುಕೊಂಡು ಬಿಜೆಪಿ ಸರ್ಕಾರ ನಡೆಸುವಾಗ, ದೇಶದ ಏಕತೆಗೆ ವಿರುದ್ಧವಾಗಿ ಈ ರೀತಿಯ ಶೈಕ್ಷಣಿಕ ಅಭಿವೃದ್ಧಿಗಳನ್ನು ತಡೆಯುತ್ತದೆ. ದೇಶದ ಎಲ್ಲಾ ಜನತೆ ಬಿಜೆಪಿ IT ಸೆಲ್‌ನಿಂದ ಬರುವ ಕೇವಲ ವಾಟ್ಸಾಪ್ ಯೂನಿವರ್ಸಿಟಿಗಳ ಬಾಲಂಗೋಚಿಗಳಾಗಬೇಕೆಂದು ಬಯಸುತ್ತದೆ. ಈ ಷಡ್ಯಂತ್ರವನ್ನು ರಾಜ್ಯದ ಜನತೆ ಒಟ್ಟಾಗಿ ವಿರೋಧಿಸಿ ಕರ್ನಾಟಕ ಮಣ್ಣಿನ ಚಿಂತನೆಯ, ಆವಿಷ್ಕಾರಗಳ, ಸಂಶೋಧನೆಯ ಪರಂಪರೆಯನ್ನು ಉಳಿಸಬೇಕಿದೆ.

ಕಡಂಬು
ಮೊಹಮ್ಮದ್‌ ರಿಯಾಝ್‌ ಕಡಂಬು
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಕೇಂದ್ರವನ್ನು ಟೀಕಿಸಿದ ಸಾಮಾಜಿಕ ಮಾಧ್ಯಮ ಖಾತೆಗಳು ಮಂಗಮಾಯ: ಉಳಿಯುವುದು ಬರೀ ಮೋದಿಮಯ!

ಹೀಗೆ ಮೋದಿ ಸರ್ಕಾರವನ್ನು ವಿರೋಧಿಸಿದವರ ಖಾತೆಗಳು ಸಾಮಾಜಿಕ ಮಾಧ್ಯಮಗಳಿಂದ ಅಳಿಸಿ ಕೊನೆಗೆ...

ಒಂದು ಕಡೆ ಖಾದ್ಯತೈಲ ಬೆಲೆ ಏರಿಕೆ; ಮತ್ತೊಂದು ಕಡೆ ಕುಸುಬೆ ಬೆಲೆ ಕುಸಿತದಿಂದ ರೈತರಿಗೆ ಹೊರೆ

ಖಾದ್ಯತೈಲ ಬೆಲೆ ಏರಿಕೆ ಗ್ರಾಹಕರ ಜೇಬಿಗೆ ಭಾರವಾದರೆ, ಕುಸುಬೆ ಬೆಲೆ ಕುಸಿತ...

ಡಾಲರ್ V/s ಯುವಾನ್: ಕೊಲ್ಲಿ ಯುದ್ಧ ಕರೆನ್ಸಿ ಯುದ್ಧವಾಗಿ ಮಾರ್ಪಾಡಾಗುತ್ತಿದೆಯೇ?

ಅಕಸ್ಮಾತ್ ಈ ಯುದ್ಧ ಮುಂದುವರೆದರೆ, ಕೆಲವು ದೇಶಗಳು ಡಾಲರ್ ಬದಲಿಗೆ ಯುವಾನ್...