ಯುಎಪಿಎ ಪ್ರಕರಣದಲ್ಲಿ ಎನ್‌ಐಎ ಕೋರ್ಟ್‌ ದೋಷಿ ಎಂದು ಸಾರಿರುವ ಕಾಶ್ಮೀರದ ಆಸಿಯಾ ಅಂದ್ರಾಬಿ ಯಾರು?

Date:

1991ರಲ್ಲಿ ಜಮ್ಮು ಕಾಶ್ಮೀರದಲ್ಲಿ ಮಹಿಳೆಯರಿಗೆ ಮುಖಪರದೆ (Veil) ಕಡ್ಡಾಯವಾಗಿ ಜಾರಿಗೊಳಿಸಬೇಕು ಎಂಬ ಅಭಿಯಾನವನ್ನು ಆಸಿಯಾ ಅಂದ್ರಾಬಿ ಅವರ ಸಂಘಟನೆ ದುಖ್ತರನ್-ಎ-ಮಿಲ್ಲತ್ ನಡೆಸಿತ್ತು. ಮುಖಪರದೆ ಧರಿಸದ ಮಹಿಳೆಯರ ಮುಖಕ್ಕೆ ಬಣ್ಣ ಬಳಿಯುವುದು ಅಥವಾ ಬಣ್ಣ ಎರಚುವಂತಹ ಕೃತ್ಯಗಳನ್ನು ಅಂದ್ರಾಬಿ ಸಂಘಟನೆಯ ಕಾರ್ಯಕರ್ತರು ನಡೆಸಿದ್ದರು. 

ದೆಹಲಿಯ ಎನ್‌ಐಎ ಕೋರ್ಟ್ ಮಹಿಳಾ ಪ್ರತ್ಯೇಕತಾವಾದಿ ನಾಯಕಿ ಆಸಿಯಾ ಅಂದ್ರಾಬಿ ಮತ್ತು ಅವರಿಬ್ಬರು ಸಹಚರರನ್ನು ಕಾನೂನುಬಾಹಿರ ಚಟುವಟಿಕೆಗಳ ತಡೆ ಕಾಯ್ದೆ (ಯುಎಪಿಎ) ಅಡಿಯಲ್ಲಿ ದೋಷಿ ಎಂದು ತೀರ್ಪು ನೀಡಿದೆ. 2019ರಲ್ಲಿ 370ನೇ ವಿಧಿ ರದ್ದುಗೊಳಿಸುವ ಮೂಲಕ ಜಮ್ಮು ಮತ್ತು ಕಾಶ್ಮೀರದ ವಿಶೇಷ ಸ್ಥಾನಮಾನವನ್ನು ಹಿಂಪಡೆದ ಬಳಿಕ ಯಾಸಿನ್ ಮಲಿಕ್ ನಂತರ ಎನ್‌ಐಎ ಕೋರ್ಟ್‌ನಿಂದ ಶಿಕ್ಷೆಗೊಳಗಾದ ಎರಡನೇ ಪ್ರತ್ಯೇಕತಾವಾದಿ ನಾಯಕಿ ಅಂದ್ರಾಬಿ ಆಗಿದ್ದಾರೆ.

ನಿಷೇಧಿತ ಕಾಶ್ಮೀರಿ ಸಂಘಟನೆ ದುಖ್ತರನ್-ಎ-ಮಿಲ್ಲತ್ (ಡಿಇಎಂ) ಮುಖ್ಯಸ್ಥೆಯಾದ ಅಂದ್ರಾಬಿ ಅವರನ್ನು 2018ರಲ್ಲಿ ಭಾರತದ ಸಮಗ್ರತೆ, ಭದ್ರತೆ ಮತ್ತು ಸಾರ್ವಭೌಮತ್ವಕ್ಕೆ ಅಪಾಯ ಉಂಟು ಮಾಡುವ, ದ್ವೇಷಪೂರಿತ ಭಾಷಣಗಳನ್ನು ಹಂಚಿಕೊಂಡ ಆರೋಪದಲ್ಲಿ ಬಂಧಿಸಲಾಗಿತ್ತು. ಜತೆಗೆ ಅವರ ಸಹಚರರಾದ ನಹಿದಾ ನಸ್ರೀನ್ ಮತ್ತು ಫಹ್ಮೀದಾ ಸೋಫಿ ಅವರನ್ನೂ 2018ರ ಜುಲೈನಲ್ಲಿ ಎನ್‌ಐಎ ಬಂಧಿಸಿತ್ತು.

ಇದನ್ನು ಓದಿದ್ದೀರಾ? ‘ದೇಶದ್ರೋಹಿ’ಯೊಬ್ಬನ ಅಪೂರ್ಣ ಆಂದೋಲನ

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

“ನಿಷೇಧಿತ ಸಂಘಟನೆಯ ಭಾಗವಾಗಿರುವುದು, ದೇಶದ ವಿರುದ್ಧವಾಗಿ ನಡೆದುಕೊಳ್ಳುವುದು, ದೇಶದ್ರೋಹ ಮತ್ತು ಕ್ರಿಮಿನಲ್ ಪಿತೂರಿ” ಆರೋಪದ ಮೇಲೆ ಅಂದ್ರಾಬಿ ಮತ್ತು ಇತರ ಸಹಚರರ ವಿರುದ್ಧ ಕೇಂದ್ರ ಸಂಸ್ಥೆಯು 2018ರ ಏಪ್ರಿಲ್‌ನಲ್ಲಿ ಯುಎಪಿಎ ಅಡಿಯಲ್ಲಿ ಪ್ರಕರಣ ದಾಖಲಿಸಿತ್ತು.

ಕಾಶ್ಮೀರದ ಆಸಿಯಾ ಅಂದ್ರಾಬಿ ಯಾರು?

ಪ್ರತ್ಯೇಕತಾವಾದಿ ಎಂದು ಘೋಷಿಸಲ್ಪಟ್ಟ 62 ವರ್ಷದ ಅಂದ್ರಾಬಿ, ಮೂಲತಃ ಸಾಮಾಜಿಕ ಸುಧಾರಣೆಗಾಗಿ ರಚಿಸಲಾದ ಮಹಿಳಾ ಸಂಘಟನೆಯಾದ ದುಖ್ತರನ್-ಎ-ಮಿಲ್ಲತ್ (ಡಿಇಎಂ) ನ ಸ್ಥಾಪಕಿ. ಆದರೆ 2018ರಲ್ಲಿ, ಕೇಂದ್ರ ಸರ್ಕಾರವು ಅದನ್ನು ಭಯೋತ್ಪಾದಕ ಸಂಘಟನೆ ಎಂದು ಘೋಷಿಸಿ ನಿಷೇಧಿಸಿದೆ.

1963ರಲ್ಲಿ ಜನಿಸಿದ ಅಂದ್ರಾಬಿ ಶ್ರೀನಗರದಲ್ಲಿ ಗೃಹ ವಿಜ್ಞಾನ (Home Science) ಪದವಿ ಪಡೆದಿದ್ದಾರೆ. ಅದಾದ ಬಳಿಕ ಡಾರ್ಜಿಲಿಂಗ್‌ನಲ್ಲಿ ಸ್ನಾತಕೋತ್ತರ ಪದವಿ ಪಡೆಯಲು ಬಯಸಿದ್ದರು. ಆದರೆ ಅವರಿಗೆ ಪೋಷಕರು ಅವಕಾಶ ನೀಡಿಲ್ಲ. ಅದಾದ ಬಳಿಕ ಶ್ರೀನಗರದಲ್ಲೇ ಇಸ್ಲಾಮಿಕ್ ಸಾಹಿತ್ಯದ ಅಧ್ಯಯನ ಪ್ರಾರಂಭಿಸಿದರು. ಬಳಿಕ 2019ರಲ್ಲಿ ಕೇಂದ್ರದಿಂದ ನಿಷೇಧಿಸಲ್ಪಟ್ಟ ಸಾಮಾಜಿಕ-ರಾಜಕೀಯ ಪಕ್ಷವಾದ ಜಮಾತ್-ಎ-ಇಸ್ಲಾಮಿಯ ಮಹಿಳಾ ವಿಭಾಗವನ್ನು ಸೇರಿದರು.

1985ರಲ್ಲಿ, ಅಂದ್ರಾಬಿ ಜಮಾತ್-ಎ-ಇಸ್ಲಾಮಿಯಿಂದ ದೂರವಾಗಿ ದುಖ್ತರನ್-ಎ-ಮಿಲ್ಲತ್ (ಸಮುದಾಯದ ಪುತ್ರಿಯರು) ಅನ್ನು ರಚಿಸಿ ಅದನ್ನು ಸುಧಾರಣಾವಾದಿ ಸಂಘಟನೆ ಎಂದು ಕರೆದರು. ಅದಾದ ಬಳಿಕ 1991ರಲ್ಲಿ ಜಮ್ಮು ಕಾಶ್ಮೀರದಲ್ಲಿ ಮಹಿಳೆಯರಿಗೆ ಮುಖಪರದೆ ಅಥವಾ ಬುರ್ಖಾ (Veil) ಕಡ್ಡಾಯವಾಗಿ ಜಾರಿಗೊಳಿಸಬೇಕು ಎಂಬ ಅಭಿಯಾನವನ್ನು ಈ ಸಂಘಟನೆ ನಡೆಸಿತ್ತು. ಈ ವೇಳೆ ಸಂಘಟನೆ ಹೆಚ್ಚು ಚರ್ಚೆಗೆ ಒಳಗಾಗಿತ್ತು.

ಶ್ರೀನಗರದ ಮಹಿಳೆಯರು ಮುಖಪರದೆ ಧರಿಸದೆ ಹೊರಬರಬಾರದು ಎಂದು ಎಚ್ಚರಿಕೆ ನೀಡಿತ್ತು.  ಮುಖಪರದೆ ಧರಿಸದ ಮಹಿಳೆಯರ ಮುಖಕ್ಕೆ ಬಣ್ಣ ಬಳಿಯುವುದು ಅಥವಾ ಬಣ್ಣ ಎರಚುವಂತಹ ಕೃತ್ಯಗಳನ್ನು ಈ ಸಂಘಟನೆ ನಡೆಸಿತ್ತು. ಹಾಗೆಯೇ ಮಹಿಳೆಯರು ಉದ್ಯೋಗಕ್ಕೆ ಹೋಗಬಾರದು, ಮನೆಯಲ್ಲೇ ಇರಬೇಕು ಎಂಬ ಮಹಿಳಾ ವಿರೋಧಿ ವಾದ ಅಂದ್ರಾನಿದ್ದಾಗಿತ್ತು. ಹಲವು ಮಹಿಳಾ ಸಂಘಟನೆಗಳು ಇದನ್ನು ವೈಯಕ್ತಿಕ ಸ್ವಾತಂತ್ರ್ಯದ ಹರಣ ಎಂದು ಖಂಡಿಸಿದ್ದವು. ಮಹಿಳಾ ಹೋರಾಟಗಾರ್ತಿ ನಯೀಮ್ ಜಮ್ರೂದಾ ಹಬೀಬ್ ಬಹಿರಂಗವಾಗಿ ಅಂದ್ರಾಬಿಗೆ ವಿರೋಧ ವ್ಯಕ್ತಪಡಿಸಿದ್ದರು.

ಇದನ್ನು ಓದಿದ್ದೀರಾ? ಪೋಕ್ಸೋ ಪ್ರಕರಣದಲ್ಲಿ ಮುರುಘಾ ಶ್ರೀ ಖುಲಾಸೆ: ‘ತೀರ್ಪು ನೋವುಂಟು ಮಾಡಿದೆ’ ಎಂದ ಮಹಿಳಾ ಹೋರಾಟಗಾರರು

1990ರಲ್ಲಿ ಅಂದ್ರಾಬಿ ಜಮ್ಮು ಕಾಶ್ಮೀರದ ಉಗ್ರಗಾಮಿ ನಾಯಕ ಮೊಹಮ್ಮದ್ ಖಾಸಿಮ್ ಎಂದೇ ಜನಪ್ರಿಯವಾಗಿರುವ ಆಶಿಕ್ ಹುಸೇನ್ ಫಕ್ತೂ ಅವರನ್ನು ವಿವಾಹವಾದರು. ಫಕ್ತೂ ಜೀವಾವಧಿ ಶಿಕ್ಷೆಯನ್ನು ಅನುಭವಿಸುತ್ತಿದ್ದಾರೆ.

ಇದನ್ನೂ ಓದಿ ಭಾರತದಲ್ಲಿ ದ್ವೇಷವೆಂಬುದು ಹೇಗೆಲ್ಲ ಅಧಿಕಾರಸ್ಥರ ವ್ಯಾಕರಣ ಆಗಿ ಹೋಯಿತು!

ಎರಡು ಮಕ್ಕಳ ತಾಯಿಯಾದ ಅಂದ್ರಾಬಿಯನ್ನು 1993ರಲ್ಲಿ ಮೊದಲ ಬಾರಿಗೆ ಅವರ ಪತಿ ಮತ್ತು 13 ತಿಂಗಳ ಮಗುವಿನೊಂದಿಗೆ ಬಂಧಿಸಲಾಗಿತ್ತು. ಅದಾದ ಬಳಿಕ ಸಾರ್ವಜನಿಕ ಸುರಕ್ಷತಾ ಕಾಯ್ದೆ (ಪಿಎಸ್ಎ) ಅಡಿಯಲ್ಲಿ ಹಲವಾರು ಬಾರಿ ಅಂದ್ರಾಬಿ ಬಂಧನವಾಗಿದೆ. ಪ್ರೇಮಿಗಳ ದಿನಾಚರಣೆಯನ್ನು ‘ಇಸ್ಲಾಂ ವಿರೋಧಿ’ ಎಂದು ಅಂದ್ರಾಬಿ ಕರೆದಿದ್ದಾರೆ. ಪ್ರತ್ಯೇಕತಾವಾದಿ ಸೈಯದ್ ಅಲಿ ಗಿಲಾನಿ ಅವರನ್ನೂ ಅಂದ್ರಾಬಿ ಟೀಕಿಸಿದ್ದು ಅತ್ಯಂತ ಕಠಿಣ ಪ್ರತ್ಯೇಕತಾವಾದಿ ನಾಯಕಿಯರಲ್ಲಿ ಒಬ್ಬರೆಂದು ಪರಿಗಣಿಸಲಾಗಿದೆ. ಅಂದ್ರಾಬಿ ಬಂಧನದ ನಂತರ ಎನ್‌ಐಎ 2019ರ ಜುಲೈನಲ್ಲಿ ಶ್ರೀನಗರದ ಮನೆಯನ್ನು ಮುಟ್ಟುಗೋಲು ಹಾಕಿಕೊಂಡಿದೆ. ಅದಾದ ಬಳಿಕ ದುಖ್ತರನ್-ಎ-ಮಿಲ್ಲತ್ ನಿಷ್ಕ್ರೀಯವಾಗಿದೆ.

WhatsApp Image 2025 11 17 at 4.20.34 PM
+ posts

ಪತ್ರಕರ್ತೆ, 2019ರಿಂದ ಪತ್ರಿಕೋದ್ಯಮವೇ ಬದುಕು. ರಾಜಕೀಯ, ಬ್ಯುಜಿನೆಸ್‌ ಸುದ್ದಿಗಳಲ್ಲಿ ಆಸಕ್ತಿ.

ಪೋಸ್ಟ್ ಹಂಚಿಕೊಳ್ಳಿ:

ಮಯೂರಿ ಬೋಳಾರ್
ಮಯೂರಿ ಬೋಳಾರ್
ಪತ್ರಕರ್ತೆ, 2019ರಿಂದ ಪತ್ರಿಕೋದ್ಯಮವೇ ಬದುಕು. ರಾಜಕೀಯ, ಬ್ಯುಜಿನೆಸ್‌ ಸುದ್ದಿಗಳಲ್ಲಿ ಆಸಕ್ತಿ.

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಕೇಂದ್ರವನ್ನು ಟೀಕಿಸಿದ ಸಾಮಾಜಿಕ ಮಾಧ್ಯಮ ಖಾತೆಗಳು ಮಂಗಮಾಯ: ಉಳಿಯುವುದು ಬರೀ ಮೋದಿಮಯ!

ಹೀಗೆ ಮೋದಿ ಸರ್ಕಾರವನ್ನು ವಿರೋಧಿಸಿದವರ ಖಾತೆಗಳು ಸಾಮಾಜಿಕ ಮಾಧ್ಯಮಗಳಿಂದ ಅಳಿಸಿ ಕೊನೆಗೆ...

ಒಂದು ಕಡೆ ಖಾದ್ಯತೈಲ ಬೆಲೆ ಏರಿಕೆ; ಮತ್ತೊಂದು ಕಡೆ ಕುಸುಬೆ ಬೆಲೆ ಕುಸಿತದಿಂದ ರೈತರಿಗೆ ಹೊರೆ

ಖಾದ್ಯತೈಲ ಬೆಲೆ ಏರಿಕೆ ಗ್ರಾಹಕರ ಜೇಬಿಗೆ ಭಾರವಾದರೆ, ಕುಸುಬೆ ಬೆಲೆ ಕುಸಿತ...

ಡಾಲರ್ V/s ಯುವಾನ್: ಕೊಲ್ಲಿ ಯುದ್ಧ ಕರೆನ್ಸಿ ಯುದ್ಧವಾಗಿ ಮಾರ್ಪಾಡಾಗುತ್ತಿದೆಯೇ?

ಅಕಸ್ಮಾತ್ ಈ ಯುದ್ಧ ಮುಂದುವರೆದರೆ, ಕೆಲವು ದೇಶಗಳು ಡಾಲರ್ ಬದಲಿಗೆ ಯುವಾನ್...