ಲಡಾಖ್‌ ಗ್ರೌಂಡ್ ರಿಪೋರ್ಟ್ ಸರಣಿ-4 | ಲಡಾಖಿನ ವಿದ್ಯಾರ್ಥಿಗಳ ಅಳಲು ಕೇಳುವವರಾರು?

Date:

ಹಲವು ವರ್ಷಗಳ ಅಸಮಾಧಾನ, ವೈರುಧ್ಯವನ್ನು ಬದಿಗೊತ್ತಿ ಲೇಹ್, ಕಾರ್ಗಿಲ್ ಜನರು ಒಂದಾಗಿದ್ದಾರೆ. ಪ್ರಮುಖ ನಾಲ್ಕು ಬೇಡಿಕೆಗಳ ಈಡೇರಿಕೆಗಾಗಿ ಒತ್ತಾಯಿಸಿ ಜತೆಯಾಗಿ ಹೋರಾಟ ನಡೆಸುತ್ತಿದ್ದಾರೆ. ಹೋರಾಟ ಹಿಂಸಾಚಾರಕ್ಕೆ ತಿರುಗಿ ಅದನ್ನು ಹತ್ತಿಕ್ಕಲಾಗಿದೆ. ಆದರೆ ಈ ನಡುವೆ ಈ ಸೀಮೆಯ ವಿದ್ಯಾರ್ಥಿಗಳ ಪಾಲಿಗೆ ಶಿಕ್ಷಣ ಮತ್ತು ಉದ್ಯೋಗಾವಕಾಶಗಳು ಮರೀಚಿಕೆಯಾಗಿವೆ. ಇವರ ಸಮಸ್ಯೆಗಳನ್ನು ಆಲಿಸುವವರು ದಿಕ್ಕಿಲ್ಲವಾಗಿದೆ.

ಕೇಂದ್ರ ಸರ್ಕಾರ 2019ರ ಆಗಸ್ಟ್ 5ರಂದು 370 ವಿಧಿಯನ್ನು ರದ್ದುಗೊಳಿಸಿದೆ. ಈ ಬಳಿಕ ಜಮ್ಮು ಕಾಶ್ಮೀರವನ್ನು ಮತ್ತು ಲಡಾಖ್ ಅನ್ನು ಪ್ರತ್ಯೇಕ ಕೇಂದ್ರಾಡಳಿತ ಪ್ರದೇಶವನ್ನಾಗಿ ಘೋಷಿಸಿದೆ. ಇತ್ತ ಜಮ್ಮು ಕಾಶ್ಮೀರ, ಶಾಸನಸಭೆಯನ್ನು ಹೊಂದಿರುವ ಕೇಂದ್ರಾಡಳಿತ ಪ್ರದೇಶವಾದರೆ, ಲಡಾಖ್‌ ಸಂಪೂರ್ಣವಾಗಿ ಕೇಂದ್ರ ಸರ್ಕಾರದ ನಿಯಂತ್ರಣದಲ್ಲಿರುವ ಕೇಂದ್ರಾಡಳಿತ ಪ್ರದೇಶವಾಗಿದೆ. 1947ರಿಂದಲೇ ಕೇಂದ್ರಾಡಳಿತ ಪ್ರದೇಶದ ಬೇಡಿಕೆ ಹೊಂದಿದ್ದ ಲಡಾಖ್‌ನ ಲೇಹ್‌ ಜಿಲ್ಲೆಯ ಜನರು ಜಮ್ಮು ಕಾಶ್ಮೀರದಿಂದ ಪ್ರತ್ಯೇಕವಾದ ಬಳಿಕ ಸಂಭ್ರಮಿಸಿದರು. ಆದರೆ ಕಾರ್ಗಿಲ್‌ನ ಆಗಸ್ಟ್ 5 ಅನ್ನು ಕಪ್ಪು ದಿನವನ್ನಾಗಿ ಪರಿಗಣಿಸುತ್ತಾರೆ. ದಿನ ಕಳೆದಂತೆ ತಮಗೆ ಈ ಹಿಂದೆ ಎಲ್ಲ ಪ್ರಾತಿನಿಧ್ಯವನ್ನು ಕಳೆದುಕೊಂಡ ಬಗ್ಗೆ ಮನವರಿಕೆಯಾದ ಲೇಹ್‌ನ ಜನರು ಎಚ್ಚೆತ್ತುಕೊಂಡಿದ್ದಾರೆ.

ಹಲವು ವರ್ಷಗಳಿಂದ ರಾಜಕೀಯ ಕಾರಣಗಳಿಂದಾಗಿ ಸೃಷ್ಟಿಯಾಗಿದ್ದ ಪರಸ್ಪರರ ವಿರುದ್ಧ ಅಸಮಾಧಾನ, ಹಗೆತನಗಳನ್ನು ಬದಿಗೊತ್ತಿ ಲೇಹ್, ಕಾರ್ಗಿಲ್ ಜನರು ಒಂದಾಗಿದ್ದಾರೆ. ಲಡಾಖ್‌ಗೆ ರಾಜ್ಯತ್ವ, ಆರನೇ ಪರಿಚ್ಛೇದಕ್ಕೆ ಸೇರ್ಪಡೆ, ಸಾರ್ವಜನಿಕ ಸೇವಾ ಆಯೋಗ(ಪಿಎಸ್‌ಎ), ಲೇಹ್ ಮತ್ತು ಕಾರ್ಗಿಲ್‌ಗೆ ತಲಾ ಒಂದು ಲೋಕಸಭೆ ಸ್ಥಾನ ನೀಡಬೇಕು ಎಂಬ ಒಟ್ಟು ಪ್ರಮುಖ ನಾಲ್ಕು ಬೇಡಿಕೆಗಳನ್ನು ಮುಂದಿಟ್ಟು ನಿರಂತರವಾಗಿ ಹೋರಾಟ ನಡೆಸುತ್ತಿದ್ದಾರೆ. ಈ ನಡುವೆ ಸ್ಥಳೀಯ ಪದವಿ ಮತ್ತು ಸಂಶೋಧಕ ವಿದ್ಯಾರ್ಥಿಗಳ ಸಮಸ್ಯೆಗಳು ಅರಣ್ಯ ರೋದನ ಆಗಿವೆ.

ಇದನ್ನು ಓದಿದ್ದೀರಾ? ಲಡಾಖ್ ಗ್ರೌಂಡ್ ರಿಪೋರ್ಟ್ ಸರಣಿ | ಶಿಖರಗಳ ನಡುವೆ ಸಾಗಿದಷ್ಟು ಸಿಕ್ಕಿದ್ದು ನೆಮ್ಮದಿ

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

370ನೇ ವಿಧಿ ರದ್ದು ಪಡಿಸಿದ ಬಳಿಕ ಲಡಾಖ್‌ನ ಜನತೆಗೆ ತಮ್ಮ ಸಂಸ್ಕೃತಿ, ಭೂಮಿಯನ್ನು, ಪರಿಸರ ಸಮತೋಲನವನ್ನು ಕಾಪಿಟ್ಟುಕೊಳ್ಳುವುದೇ ಸವಾಲಾಗಿ ಪರಿಣಮಿಸಿದೆ. ಈ ನಿಟ್ಟಿನಲ್ಲಿ ಲಡಾಖ್‌ನ ಹಿರಿಯ ಜೀವಗಳು ಹೋರಾಟದ ಹಾದಿ ತುಳಿದಿದ್ದಾರೆ. ಇನ್ನೊಂದೆಡೆ ಯುವಜನರು ತಮ್ಮ ಇಂದಿನ ಮತ್ತು ಮುಂದಿನ ಪೀಳಿಗೆಯ ಉಳಿವಿಗಾಗಿ, ಕಾನೂನು ರಕ್ಷಣೆಗಾಗಿ ಆಂದೋಲನಕ್ಕೆ ಧುಮುಕಿದೆ. ಯುವಜನರ ಆಕ್ರೋಶವು ಸಂಘರ್ಷದ ಹಾದಿ ತುಳಿದು ನಾಲ್ಕು ಜೀವಗಳನ್ನೂ ಬಲಿ ತೆಗೆದುಕೊಂಡಿದೆ. ವಿದ್ಯಾರ್ಥಿಗಳು, ಸಂಶೋಧನಾ ವಿದ್ಯಾರ್ಥಿಗಳು, ಅರ್ಹತೆಯಿದ್ದರೂ ಉದ್ಯೋಗವಿಲ್ಲದೆ, ತಮ್ಮದೇ ನೆಲದಲ್ಲಿ ಉದ್ಯೋಗ ಕೈ ಜಾರಿ ಬೇರೆ ರಾಜ್ಯದ ಅಭ್ಯರ್ಥಿಗಳ ಕೈಸೇರುವುದನ್ನು ನೋಡಿ ನಲುಗುತ್ತಿದ್ದಾರೆ.

ಈ ಬಗ್ಗೆ ಈದಿನ ಡಾಟ್‌ ಕಾಮ್ ಜೊತೆ ಮಾತನಾಡಿದ ಲಡಾಖ್ ಸಂಶೋಧನಾ ವಿದ್ಯಾರ್ಥಿಗಳ ಸಂಘಟನೆಯ ಮುಖಂಡ ಲಿಯಾಖತ್ ಅಲಿ, “370ನೇ ವಿಧಿ ರದ್ದು ಮಾಡಿದ ಬಳಿಕ ಅತಿ ಹೆಚ್ಚು ಸಮಸ್ಯೆ ಎದುರಿಸುತ್ತಿರುವುದು ನಿರುದ್ಯೋಗಿಗಳು. 370ನೇ ವಿಧಿ ಜಾರಿಯಲ್ಲಿದ್ದಾಗ ನಾವು ಜಮ್ಮು ಕಾಶ್ಮೀರದ ವಿದ್ಯಾರ್ಥಿಗಳಾಗಿದ್ದೆವು. ಲಡಾಖ್‌ನ ವಿದ್ಯಾರ್ಥಿಗಳು ವಿದ್ಯಾರ್ಜನೆ ಬಳಿಕ ಉದ್ಯೋಗಕ್ಕಾಗಿ ಅಧಿಕ ಅವಕಾಶವಿರುವ ಜಮ್ಮು ಕಾಶ್ಮೀರಕ್ಕೆ ಸಾಗುತ್ತಿದ್ದೆವು. ಆದರೆ ಈಗ ಪರಿಸ್ಥಿತಿ ಹಾಗಿಲ್ಲ. ನಮಗೆ ಎಲ್ಲಿಯೂ ಸರಿಯಾದ ಅವಕಾಶ ಇಲ್ಲದಂತಾಗಿದೆ” ಎಂದು ಹೇಳಿದ್ದಾರೆ.

ಲಡಾಖ್‌ನಲ್ಲಿ ಶಿಕ್ಷಣ ಸ್ಥಿತಿ ಹೇಗಿದೆ?

ಒಟ್ಟು 59,146 ಕಿಲೋ ಮೀಟರ್ ವಿಸ್ತೀರ್ಣ ಹೊಂದಿರುವ ಲಡಾಖ್‌ನಲ್ಲಿ ಒಟ್ಟು ಆರು ಪದವಿ ಕಾಲೇಜುಗಳಿದ್ದು, ಅವುಗಳು ಲಡಾಖ್ ವಿಶ್ವವಿದ್ಯಾಲಯದಡಿಯಲ್ಲಿ ಬರುತ್ತದೆ. ಲೇಹ್, ಖಲ್‌ಸ್ತಿ, ನುಬ್ರಾ, ಕಾರ್ಗಿಲ್, ಝಂಸ್ಕರ್‌, ಡ್ರಾಸ್ -ಅನುಕ್ರಮವಾಗಿ ಮೂರು ಸರ್ಕಾರಿ ಪದವಿ ಕಾಲೇಜುಗಳು ಲೇಹ್‌ನಲ್ಲಿ, ಮೂರು ಕಾರ್ಗಿಲ್‌ ಜಿಲ್ಲೆಯಲ್ಲಿದೆ. ಆದರೆ ಸ್ನಾತಕೋತ್ತರ ಪದವಿ ಕೇಂದ್ರಗಳಿರುವುದು ಎರಡೇ ಎರಡು. ಒಂದು ಲೇಹ್ ನಲ್ಲಿದ್ದರೆ ಮತ್ತೊಂದು ಕಾರ್ಗಿಲ್‌ ನಲ್ಲಿದೆ. 370ನೆಯ ವಿಧಿ ರದ್ದು ಮಾಡುತ್ತಿದ್ದಂತೆಯೇ ಕೇಂದ್ರ ಸರ್ಕಾರವು ಲಡಾಖ್‌ನ ಅಭಿವೃದ್ಧಿಗಾಗಿ ಯೋಜನೆಗಳ, ಜತೆಗೆ ಸಿಂಧೂ ಕೇಂದ್ರ ವಿಶ್ವವಿದ್ಯಾಲಯ ಸ್ಥಾಪನೆಯ ಘೋಷಣೆ ಮಾಡಿತ್ತು. ಆದರೆ ಇನ್ನೂ ನಿರ್ಮಾಣ ಕಾರ್ಯ ಪೂರ್ಣವಾಗಿಲ್ಲ. ನೋಡುಗರಿಗೆ ಲಡಾಖ್ ಈಗ ಅಭಿವೃದ್ಧಿಯಾಗುತ್ತಿರುವ ಕೇಂದ್ರಾಡಳಿತ ಪ್ರದೇಶ. ಆದರೆ ತಂಪು ಮರುಭೂಮಿಯಾದ ಲಡಾಖ್‌ ಜನರ ಸಮಸ್ಯೆಗಳು ವಿವರಿಸಲಾಗದಷ್ಟು, ಊಹಿಸಲಾಗದಷ್ಟು ಕಠಿಣ. ಲಡಾಖ್‌ ಭೇಟಿ ವೇಳೆ ನಾವು ಕಂಡಿದ್ದು ನೂರಾರು ಕಿಲೋಮೀಟರ್ ಅಂತರದಲ್ಲಿರುವ ಶಿಕ್ಷಣ ಸಂಸ್ಥೆಗಳಿಗೆ ವಿದ್ಯಾರ್ಥಿಗಳ ಓಡಾಟದ ಶೋಚನೀಯ ಸ್ಥಿತಿಯನ್ನು. ಈ ಓಡಾಟ ಸಾಧ್ಯವಾಗದೆ ಶಿಕ್ಷಣದಿಂದ ವಂಚಿತರಾಗುವವರನ್ನು.

ಇದನ್ನು ಓದಿದ್ದೀರಾ? ಲಡಾಖ್ ಗ್ರೌಂಡ್ ರಿಪೋರ್ಟ್ ಸರಣಿ-2 | ‘ಥ್ರೀ ಇಡಿಯಟ್ಸ್’ ಸಿನಿಮಾದ ಸ್ಪೂರ್ತಿ ಸೋನಮ್ ವಾಂಗ್‌ಚುಕ್‌ ಮೇಲೆ ಕೇಂದ್ರದ ಕೆಂಗಣ್ಣೇಕೆ?

ದೇಶದ ಇತರೆ ರಾಜ್ಯಗಳಲ್ಲಿ ವಿದ್ಯಾರ್ಥಿಗಳು ಮೂಲಭೂತ ಸೌಕರ್ಯ ಕೊರತೆ, ಶಿಕ್ಷಕರ ಕೊರತೆ, ಅಧಿಕ ಶುಲ್ಕ ಮೊದಲಾದ ಸಮಸ್ಯೆಗಳಿಗೆ ಮೈಯೊಡ್ಡಿಕೊಂಡಿದ್ದರೆ, ಲಡಾಖ್‌ನಲ್ಲಿ ಈ ಸಮಸ್ಯೆಯೊಂದಿಗೆ ಹವಾಮಾನವೂ ಒಂದು ತೊಡಕು. ಲಡಾಖ್‌ನಲ್ಲಿ ಇರುವುದೇ ಬೆರಳೆಣಿಕೆಯ ಸರ್ಕಾರಿ ಶಿಕ್ಷಣ ಸಂಸ್ಥೆಗಳು, ಅಲ್ಲಿಗೆ ಪ್ರತಿನಿತ್ಯ ಸಂಚರಿಸುವುದು ವಿದ್ಯಾರ್ಥಿಗಳಿಗೆ ಸವಾಲು. ತಾಪಮಾನ -35 ಡಿಗ್ರಿಗೂ ಕೆಳ ಜಾರುವ ಪ್ರದೇಶದಲ್ಲಿ ವಿದ್ಯಾರ್ಥಿಗಳು ಪ್ರತಿನಿತ್ಯ ಹಿಮದ ನಡುವೆ ಸಾಗಿ ಶಾಲಾ-ಕಾಲೇಜು ತಲುಪಬೇಕು. ಇದರಿಂದಾಗಿ ಕೊಂಚ ಉಳ್ಳವರು ಸ್ನಾತಕೋತ್ತರ ಪದವಿ ಮತ್ತು ಸಂಶೋಧನೆಗಾಗಿ ತಮ್ಮ ಮಕ್ಕಳನ್ನು ದೇಶದ ಇತರೆ ಭಾಗಗಳಿಗೆ ಕಳುಹಿಸುತ್ತಾರೆ. ಆದರೆ ಆರ್ಥಿಕವಾಗಿ ದುರ್ಬಲ ಕುಟುಂಬಗಳ ಮಕ್ಕಳಿಗೆ ಶಿಕ್ಷಣ ಎಂಬುದು ಇಂದಿಗೂ ಕೈಗೆಟುಕದ ಹಣ್ಣು. ಶಿಕ್ಷಣ ಪಡೆಯುವುದು ಒಂದು ರೀತಿಯ ಬಿಕ್ಕಟ್ಟಿನ ಸ್ಥಿತಿಯಾದರೆ, ಶಿಕ್ಷಣ ಪಡೆದ ಬಳಿಕ ಮುಂದೇನು ಎಂಬುದು ದೊಡ್ಡ ಪ್ರಶ್ನೆ.

ವಿದ್ಯಾಭ್ಯಾಸ ಮುಗಿಸಿದರೆ ಉದ್ಯೋಗವಿಲ್ಲ

370 ವಿಧಿ ರದ್ಧತಿಗೂ ಮುನ್ನ ಜಮ್ಮು ಮತ್ತು ಕಾಶ್ಮೀರ ಸಾರ್ವಜನಿಕ ಸೇವಾ ಆಯೋಗವು ಭರ್ತಿ ಮಾಡುವ ಗೆಜೆಟೆಡ್ ಹುದ್ದೆಗಳಲ್ಲಿ ಲೇಹ್ ಮತ್ತು ಕಾರ್ಗಿಲ್‌ನ ಯುವಜನರು ಸಾಮಾನ್ಯವಾಗಿ ನ್ಯಾಯಯುತವಾದ ಪಾಲನ್ನು ಪಡೆಯುತ್ತಿದ್ದರು. ಲಡಾಖ್ ತಂಪು ಮರುಭೂಮಿ ಪ್ರದೇಶವಾದ ಕಾರಣ ಸರ್ಕಾರಿ ಹುದ್ದೆಗಳ ಅವಕಾಶ ಜಮ್ಮು ಕಾಶ್ಮೀರದಲ್ಲಿ ಅಧಿಕವಾಗಿರುತ್ತಿತ್ತು.

ಪ್ರತಿ ವರ್ಷ ಜಮ್ಮು ಮತ್ತು ಕಾಶ್ಮೀರದಲ್ಲಿ ಖಾಲಿ ಹುದ್ದೆಗಳನ್ನು ಭರ್ತಿ ಮಾಡಲಾಗುತ್ತಿತ್ತು, ನೇಮಕಾತಿ ಪ್ರಕ್ರಿಯೆಯಲ್ಲಿ ಲೇಹ್ ಮತ್ತು ಕಾರ್ಗಿಲ್‌ನ ವಿದ್ಯಾವಂತ ಯುವಜನರು ಉತ್ಸಾಹದಿಂದ ಭಾಗಿಯಾಗುತ್ತಿದ್ದರು. ಕಾರ್ಗಿಲ್ ಡೆಮಾಕ್ರೆಟಿಕ್ ಅಲಯನ್ಸ್(ಕೆಡಿಎ) ಸದಸ್ಯ ಸಜ್ಜಾದ್ ಕಾರ್ಗಿಲಿ ಹೇಳುವಂತೆ, “2010ರ ನಂತರ ಜಮ್ಮು ಕಾಶ್ಮೀರದಲ್ಲಿ ಹುದ್ದೆಗಳಿಗೆ ವಿದ್ಯಾವಂತ ಯುವಕರ ಆಯ್ಕೆಯು ಹೆಚ್ಚಾಗಿತ್ತು. ಸ್ಥಳೀಯವಾಗಿ ಎಷ್ಟೇ ಕಷ್ಟದ ಸ್ಥಿತಿ ಇದ್ದರೂ ಲಡಾಖಿ ಪೋಷಕರು ತಮ್ಮ ಮಕ್ಕಳನ್ನು ದೇಶದ ಇತರೆ ಭಾಗಗಳ ಶಾಲಾ-ಕಾಲೇಜುಗಳಿಗೆ ಕಳುಹಿಸಿ ವಿದ್ಯಾಭ್ಯಾಸ ನೀಡುತ್ತಿದ್ದಾರೆ. 370 ರದ್ದತಿಗೂ ಮುನ್ನ ಲಡಾಖ್‌ನ ಅನೇಕ ಅಭ್ಯರ್ಥಿಗಳನ್ನು ಸಹಾಯಕ ಪ್ರಾಧ್ಯಾಪಕರು ಮತ್ತು ಉಪನ್ಯಾಸಕರಾಗಿ ಆಯ್ಕೆ ಮಾಡಲಾಗಿತ್ತು, ಕೆಲವರು ಶ್ರೀನಗರ ಮತ್ತು ಜಮ್ಮುವಿನ ಕಾಲೇಜುಗಳಲ್ಲಿ ಸೇವೆ ಸಲ್ಲಿಸಿದ್ದಾರೆ”

sajjad
ಲೇಹ್‌ನ ಪ್ರತಿಭಟನಾ ಸ್ಥಳದಲ್ಲಿ ಸಜ್ಜಾದ್ ಕಾರ್ಗಿಲಿ (Photo: Mahesh Pandey)

2019ರ ಆಗಸ್ಟ್ 5ರಿಂದ ಸಾರ್ವಜನಿಕ ಉದ್ಯೋಗ ನೇಮಕಾತಿ ಸ್ಥಗಿತಗೊಂಡಿದೆ. ಜಮ್ಮು ಮತ್ತು ಕಾಶ್ಮೀರದಿಂದ ಲಡಾಖ್‌ ಅನ್ನು ಬೇರ್ಪಡಿಸಿ ಪ್ರತ್ಯೇಕ ಕೇಂದ್ರಾಡಳಿತ ಪ್ರದೇಶ ಸ್ಥಾಪಿಸಿದ್ದು ಲಡಾಖ್‌ನ ಯುವಕರಿಂದ ಸಾರ್ವಜನಿಕ ಉದ್ಯೋಗವಕಾಶವನ್ನೇ ಕಿತ್ತುಕೊಂಡಿತು. ಇತ್ತ ಲಡಾಖ್‌ನಲ್ಲೂ ನೇಮಕಾತಿ ಇಲ್ಲದೆ, ಅತ್ತ ಜಮ್ಮು ಕಾಶ್ಮೀರದಲ್ಲೂ ಅವಕಾಶವಿಲ್ಲದೆ ಲಡಾಖ್‌ನ ಪ್ರತಿಭಾವಂತ, ವಿದ್ಯಾರ್ಹತೆ ಹೊಂದಿರುವ ಯುವಜನರು ಅತಂತ್ರರಾಗಿದ್ದಾರೆ.

ಇದನ್ನು ಓದಿದ್ದೀರಾ? ಲಡಾಖ್ ಗ್ರೌಂಡ್ ರಿಪೋರ್ಟ್ ಸರಣಿ-3 | ಬೌದ್ಧರು, ಮುಸ್ಲಿಮರನ್ನು ಒಂದು ಮಾಡಿದೆ ಅಸ್ಮಿತೆಯ ಹೋರಾಟ: ಬಿಜೆಪಿ ಕುತಂತ್ರಕ್ಕಿಲ್ಲ ಆಸ್ಪದ

ಸದ್ಯ ಯುಪಿಎಸ್‌ಸಿ ಆಕಾಂಕ್ಷಿಗಳ ನೇಮಕಾತಿ ನಡೆಯುತ್ತಿದೆ. ಆದರೆ ಅದರಲ್ಲೂ ನಮಗೆ ಕಾನೂನುಬದ್ಧವಾಗಿ ಸಿಗಬೇಕಾದ ಉದ್ಯೋಗಾವಕಾಶ ಸಿಗುತ್ತಿಲ್ಲ ಎಂದು ಆರೋಪಿಸುತ್ತಾರೆ ಸಂಶೋಧನಾ ವಿದ್ಯಾರ್ಥಿ ಲಿಯಾಖತ್ ಅಲಿ. “370 ವಿಧಿ ರದ್ಧತಿ ಬಳಿಕ ಜಮ್ಮು ಮತ್ತು ಕಾಶ್ಮೀರದಲ್ಲಿ ಮೂರು ಬಾರಿ ಖಾಲಿ ಹುದ್ದೆಗಳಿಗೆ ನೇಮಕಾತಿ ನಡೆದಿದೆ. ಆದರೆ ಲಡಾಖ್‌ನಲ್ಲಿ ಈವರೆಗೂ ನೇಮಕಾತಿ ಪ್ರಕ್ರಿಯೆ ನಡೆದಿಲ್ಲ. ಯುಪಿಎಸ್‌ಸಿ ಕೆಲವು ಹುದ್ದೆಗಳ ನೇಮಕಾತಿ ಮಾಡುತ್ತಿದ್ದು ಅದರ ಅರ್ಜಿ ಸಲ್ಲಿಕೆ ಪ್ರಕ್ರಿಯೆ ನಡೆಯುತ್ತಿದೆ. ಆದರೆ ಕಾಲೇಜು ಮಟ್ಟದಲ್ಲಾಗಲಿ ಅಥವಾ ವಿಶ್ವವಿದ್ಯಾಲಯ ಮಟ್ಟದಲ್ಲಾಗಲಿ ಯಾವುದೇ ನೇಮಕಾತಿ ನಡೆದಿಲ್ಲ. ಲಡಾಖ್‌ನಲ್ಲಿ ಒಟ್ಟು ಆರು ಪದವಿ ಕಾಲೇಜುಗಳಿದ್ದು, ಪ್ರತಿ ಕಾಲೇಜಿನಲ್ಲಿ 60ಕ್ಕೂ ಅಧಿಕ ಹುದ್ದೆಗಳು ಖಾಲಿಯಿವೆ. ಈ ಹುದ್ದೆಗಳನ್ನು ಭರ್ತಿ ಮಾಡಲಾಗುವುದು ಎಂದು ಲಡಾಖ್ ವಿಶ್ವವಿದ್ಯಾಲಯ ಹೇಳುತ್ತಿದೆ. ಆದರೆ “ನಾವು ಈ ಪ್ರಕ್ರಿಯೆಯ ವಿರುದ್ಧವಾಗಿದ್ದೇವೆ. ಕಾಲೇಜುಗಳಲ್ಲಿ ಸಹಾಯಕ ಪ್ರಾಧ್ಯಾಪಕರು ಮೊದಲಾದ ಹುದ್ದೆಗಳನ್ನು ಉನ್ನತ ಶಿಕ್ಷಣದ ಆಧಾರದಲ್ಲಿ ಭರ್ತಿ ಮಾಡಬೇಕು ಸರಿ, ಆದರೆ ಸ್ಥಳೀಯರಿಗೆ ಪ್ರಾತಿನಿಧ್ಯ ಇರಬೇಕು. ಜಮ್ಮು ಕಾಶ್ಮೀರದಲ್ಲಿ ಲಡಾಖ್ ಜನರಿಗೆ ಉದ್ಯೋಗ ಪಡೆಯುವ ಅರ್ಹತೆ ಇಲ್ಲ ಎಂದಾಗ ಲಡಾಖ್‌ಗೆ ಬಂದು ಜಮ್ಮುವಿನ ಜನರು ಉದ್ಯೋಗ ಪಡೆಯಲು ಅವಕಾಶ ಯಾಕೆ ನೀಡಬೇಕು” ಎಂದು ಪ್ರಶ್ನಿಸುತ್ತಾರೆ ಲಿಯಾಖತ್ ಅಲಿ.

“ಜಮ್ಮು ಕಾಶ್ಮೀರದಲ್ಲಿ ಎಲ್ಲಾ ನೇಮಕಾತಿಗೂ ಸ್ಥಳೀಯರಿಗೆ ಪ್ರಾತಿನಿಧ್ಯವಿದೆ, ಮೀಸಲಾತಿಯಿದೆ. ಆದರೆ ಲಡಾಖ್‌ನಲ್ಲಿ ಇವೆಲ್ಲವೂ ಕಾಗದಕ್ಕೆ ಸೀಮಿತ. ಸದ್ಯ ಒಂದು ವರ್ಷದ ಅವಧಿಗೆ ಅತಿಥಿ ಶಿಕ್ಷಕರಾಗಿ ನೇಮಕಾತಿ ಮಾಡಲಾಗುತ್ತಿದೆ. ಆದರೆ ಅದರಲ್ಲೂ ಬರೀ ಶೇಕಡ 20ರಷ್ಟು ಸ್ಥಳೀಯರಿಗೆ, ಶೇ. 80ರಷ್ಟು ಬೇರೆ ರಾಜ್ಯಗಳಾದ ಉತ್ತರ ಪ್ರದೇಶ, ಜಮ್ಮು, ಬಿಹಾರದ ಅಭ್ಯರ್ಥಿಗಳಿಗೆ ಅವಕಾಶ ನೀಡಲಾಗುತ್ತಿದೆ” ಎಂದು ಈದಿನ ಡಾಟ್ ಕಾಮ್‌ಗೆ ಪ್ರತಿಕ್ರಿಯಿಸುತ್ತಾ ದೂರಿದ್ದಾರೆ.

liyakat
ಕಾರ್ಗಿಲ್ ಡೆಮಾಕ್ರೆಟಿಕ್ ಅಲಯನ್ಸ್(ಕೆಡಿಎ) ನಾಯಕರುಗಳೊಂದಿಗೆ ನಿಯೋಗದ ಸಭೆಯ ವೇಳೆ ವಿದ್ಯಾರ್ಥಿಗಳ ಸಮಸ್ಯೆ ಬಗ್ಗೆ ಮಾತನಾಡುತ್ತಿರುವ ಸಂಶೋಧನಾ ವಿದ್ಯಾರ್ಥಿ ಲಿಯಾಖತ್ ಅಲಿ

“ಜಮ್ಮು ಮತ್ತು ಕಾಶ್ಮೀರದಲ್ಲಿ ಯಾವುದೇ ಉದ್ಯೋಗಕ್ಕೂ ಸ್ಥಳೀಯರಾಗಿರುವುದು ಅಗತ್ಯ, ಸ್ಥಳೀಯರಿಗೆ ಆದ್ಯತೆ. ಆದರೆ ಲಡಾಖ್‌ನಲ್ಲಿ ಈ ಚಿತ್ರಣ ತೀವ್ರ ಭಿನ್ನವಾಗಿದೆ. ನಮಗೆ ಅತ್ತ ಜಮ್ಮು ಕಾಶ್ಮೀರದಲ್ಲೂ ಅವಕಾಶವಿಲ್ಲ, ಲಡಾಖ್‌ನಲ್ಲೂ ಇಲ್ಲ ಎಂಬಂತಾಗಿದೆ. ಜಮ್ಮು ಕಾಶ್ಮೀರದಲ್ಲಿ ಹಲವು ಹುದ್ದೆಗಳಿಗೆ ಸ್ಥಳೀಯರಿಗೆ ಮಾತ್ರ ಅರ್ಜಿ ಸಲ್ಲಿಸಲು ಅವಕಾಶವಿದೆ. ಆದರೆ ಲಡಾಖ್‌ನಲ್ಲಿ ಯಾರು ಬೇಕಾದರೂ ಉದ್ಯೋಗಕ್ಕಾಗಿ ಅರ್ಜಿ ಸಲ್ಲಿಸಬಹುದು. ಲಡಾಖ್‌ನಲ್ಲಿ ಒಂದು ವರ್ಷದ ಅವಧಿಗೆ ಸಹಾಯಕ ಪ್ರಾಧ್ಯಾಪಕ ಹುದ್ದೆಗಾಗಿ ಶೇಕಡ 40ರಿಂದ 50 ಲಡಾಖ್ ಸಂಶೋಧಕರು ಅರ್ಜಿ ಸಲ್ಲಿಸಿದ್ದಾರೆ. ಈ ಪೈಕಿ ಶೇಕಡ 15-20ರಷ್ಟು ಹುದ್ದೆಗಳಿಗೆ ಮಾತ್ರ ಲಡಾಖಿ ಸಂಶೋಧಕರನ್ನು ಆಯ್ಕೆ ಮಾಡಲಾಗಿದೆ. ಉಳಿದಂತೆ ಜಮ್ಮು, ಉತ್ತರ ಪ್ರದೇಶ, ಬಿಹಾರ ಹೀಗೆ ಬೇರೆ ಬೇರೆ ರಾಜ್ಯದ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗಿದೆ. ಕೆಲವು ಹುದ್ದೆಗಳ ಆಯ್ಕೆಗೆ ಪಿಎಚ್‌ಡಿ ಮಾಡಿರುವುದು ಕಡ್ಡಾಯವಾಗಿದ್ದರೂ ಉಪರಾಜ್ಯಪಾಲರ ಅಧಿಕಾರ ದುರ್ಬಳಕೆ ಮಾಡಿ ಪಿಎಚ್‌ಡಿ ಇಲ್ಲದವರನ್ನೂ ಆರಿಸಿದ್ದಾರೆ. ಲಡಾಖಿಗಳಾದ ನಾವು ಪಿಎಚ್‌ಡಿ ಪಡೆದು ಅರ್ಹತೆ ಹೊಂದಿದ್ದರೂ ನಮ್ಮನ್ನು ಕಡೆಗಣಿಸಲಾಗಿದೆ. ಜಾಹೀರಾತಿನಲ್ಲಿ ಎಲ್ಲೆಡೆ ಮೊದಲ ಆದ್ಯತೆ ಲಡಾಖಿಗಳಿಗೆಂದು ಬರೆಯಲಾಗಿರುತ್ತದೆ. ಆದರೆ ವಾಸ್ತವವೇ ಬೇರೆ. ನಮಗೆ ಯಾವ ಆದ್ಯತೆಯೂ ಇಲ್ಲ.. ಆದ್ಯತೆ ಹೊರ ರಾಜ್ಯದವರಿಗೆ ನೀಡಲಾಗುತ್ತಿದೆ, ಅದೂ ವಿದ್ಯಾರ್ಹತೆಯ ಅಂಶಗಳನ್ನು ಗಾಳಿಗೆ ತೂರಿ” ಎನ್ನುತ್ತಾರೆ ಸಂಶೋಧನಾ ವಿದ್ಯಾರ್ಥಿ.

ಲಡಾಖ್‌ಗೆ ಯಾರೂ ಬೇಕಾದರೂ ಹೋಗಬಹುದು ಎಂದಿರುವಂತೆ, ಲಡಾಖಿಗಳೂ ಬೇರೆ ರಾಜ್ಯಗಳಿಗೆ ಹೋಗಿ ನೆಲೆಸಬಹುದಲ್ಲವೇ? ಇತರೆಡೆ ಶಿಕ್ಷಣ ಪಡೆಯಬಹುದಲ್ಲವೇ? ಉದ್ಯೋಗವನ್ನು ಮಾಡಬಹುದಲ್ಲವೇ ಎಂಬ ಬಾಲಿಶ ಪ್ರಶ್ನೆಯನ್ನೂ ದೇಶದ ಇತರೆ ಭಾಗಗಳ ಅಂಧಭಕ್ತರು ಕೇಳಿದ್ದಾರೆ. ಇಂತಹವರು ಒಮ್ಮೆ ಲಡಾಖ್‌ಗೆ ಹೋಗಿ ಅಲ್ಲಿನ ಜನರ ಕಷ್ಟಗಳನ್ನು, ತಮ್ಮ ಸಂಸ್ಕೃತಿ ಉಳಿವಿಗಾಗಿ ಅವರು ಪಡುವ ಪಾಡನ್ನು ಕಣ್ಣಾರೆ ಕಾಣಲೇಬೇಕು. ಲಡಾಖ್‌ನ ಜನರು ಕೃಷಿ, ಪ್ರವಾಸೋದ್ಯಮವನ್ನು ನಂಬಿ ಬದುಕುವವರು. ದೇಶದ ಇತರೆ ರಾಜ್ಯಗಳ ರೈತರಂತೆಯೇ ಲಡಾಖ್ ರೈತರ ಸ್ಥಿತಿ ಶೋಚನೀಯ. ಇತರೆ ರಾಜ್ಯದಲ್ಲಿ ಬೆಳೆ ಹಾನಿ ಸಂಕಷ್ಟವಾದರೆ, ಲಡಾಖ್‌ ಜನರಿಗೆ ಉತ್ತಮ ಬೆಳೆ ಬಂದರೂ ಅದರ ಸಾಗಾಟಕ್ಕೆ ಸರಿಯಾದ ಸಾರಿಗೆ ವ್ಯವಸ್ಥೆ ಇಲ್ಲ. ಅವರ ಆರ್ಥಿಕ ಸ್ಥಿತಿ ನಗರ ಬದುಕನ್ನು ಭರಿಸುವಷ್ಟು ಬಲಿಷ್ಠವಾಗಿಲ್ಲ. ಹೀಗಾಗಿ ಬೇರೆ ರಾಜ್ಯದ ಕಾಲೇಜುಗಳ ದುಬಾರಿ ಶುಲ್ಕವನ್ನು ಲಡಾಖಿಗಳು ಭರಿಸುವುದಾದರೂ ಹೇಗೆ ಎಂಬ ಪ್ರಶ್ನೆ ಎತ್ತುತ್ತಾರೆ ವಿದ್ಯಾರ್ಥಿ ಲಿಯಾಖತ್.

WhatsApp Image 2025 11 17 at 4.20.34 PM
+ posts

ಪತ್ರಕರ್ತೆ, 2019ರಿಂದ ಪತ್ರಿಕೋದ್ಯಮವೇ ಬದುಕು. ರಾಜಕೀಯ, ಬ್ಯುಜಿನೆಸ್‌ ಸುದ್ದಿಗಳಲ್ಲಿ ಆಸಕ್ತಿ.

ಪೋಸ್ಟ್ ಹಂಚಿಕೊಳ್ಳಿ:

ಮಯೂರಿ ಬೋಳಾರ್
ಮಯೂರಿ ಬೋಳಾರ್
ಪತ್ರಕರ್ತೆ, 2019ರಿಂದ ಪತ್ರಿಕೋದ್ಯಮವೇ ಬದುಕು. ರಾಜಕೀಯ, ಬ್ಯುಜಿನೆಸ್‌ ಸುದ್ದಿಗಳಲ್ಲಿ ಆಸಕ್ತಿ.

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಕೇಂದ್ರವನ್ನು ಟೀಕಿಸಿದ ಸಾಮಾಜಿಕ ಮಾಧ್ಯಮ ಖಾತೆಗಳು ಮಂಗಮಾಯ: ಉಳಿಯುವುದು ಬರೀ ಮೋದಿಮಯ!

ಹೀಗೆ ಮೋದಿ ಸರ್ಕಾರವನ್ನು ವಿರೋಧಿಸಿದವರ ಖಾತೆಗಳು ಸಾಮಾಜಿಕ ಮಾಧ್ಯಮಗಳಿಂದ ಅಳಿಸಿ ಕೊನೆಗೆ...

ಒಂದು ಕಡೆ ಖಾದ್ಯತೈಲ ಬೆಲೆ ಏರಿಕೆ; ಮತ್ತೊಂದು ಕಡೆ ಕುಸುಬೆ ಬೆಲೆ ಕುಸಿತದಿಂದ ರೈತರಿಗೆ ಹೊರೆ

ಖಾದ್ಯತೈಲ ಬೆಲೆ ಏರಿಕೆ ಗ್ರಾಹಕರ ಜೇಬಿಗೆ ಭಾರವಾದರೆ, ಕುಸುಬೆ ಬೆಲೆ ಕುಸಿತ...

ಡಾಲರ್ V/s ಯುವಾನ್: ಕೊಲ್ಲಿ ಯುದ್ಧ ಕರೆನ್ಸಿ ಯುದ್ಧವಾಗಿ ಮಾರ್ಪಾಡಾಗುತ್ತಿದೆಯೇ?

ಅಕಸ್ಮಾತ್ ಈ ಯುದ್ಧ ಮುಂದುವರೆದರೆ, ಕೆಲವು ದೇಶಗಳು ಡಾಲರ್ ಬದಲಿಗೆ ಯುವಾನ್...