2012 ರಲ್ಲಿ ಬಂದ ‘ರೈಸಿಂಗ್ ಸ್ಟಾರ್’ ಶೋ ಅವರ ಜೀವನ ಬದಲಾಯಿಸಿತು. ಭಕ್ತಿಗೀತೆಗಳಲ್ಲಿ ಉತ್ತಮ ಪ್ರದರ್ಶನ ನೀಡಿ ಫೈನಲ್‌ಗೆ ಬಂದರು. ರನ್ನರ್-ಅಪ್ ಆದರು. ಕೇವಲ ಎರಡು ಮತಗಳಿಂದ ಗೆಲುವು ಕೈ ತಪ್ಪಿತ್ತು. ಆದರೆ ಈ ಶೋ ಅವರನ್ನು ದೇಶಾದ್ಯಂತ ಪರಿಚಯಿಸಿತು.
ಬಿಹಾರ 2025ರ ವಿಧಾನಸಭಾ ಚುನಾವಣೆಯಲ್ಲಿ ಎನ್‌ಡಿಎ ಗೆಲುವು ಸಾಧಿಸಿದೆ. ಈ ಚುನಾವಣೆಯಲ್ಲಿ ಹೊಸ ಅಭ್ಯರ್ಥಿಗಳು ಗೆದ್ದು ಬಂದಿದ್ದಾರೆ. ವಿಶೇಷವಾಗಿ, 25 ವರ್ಷದ ಜನಪ್ರಿಯ ಜಾನಪದ ಗಾಯಕಿ ಮೈಥಿಲಿ ಠಾಕೂರ್ ಅವರ ಗೆಲುವು ಎಲ್ಲರ ಗಮನ ಸೆಳೆದಿದೆ. ಅಲಿನಗರ ಕ್ಷೇತ್ರದಿಂದ ಬಿಜೆಪಿಯ ಟಿಕೆಟ್‌ನಲ್ಲಿ ಸ್ಪರ್ಧಿಸಿದ ಅವರು, ಹಿರಿಯ ಆರ್‌ಜೆಡಿ ನಾಯಕ ವಿನೋದ್ ಮಿಶ್ರಾ ಅವರನ್ನು 11,700ಕ್ಕೂ ಹೆಚ್ಚು ಮತಗಳಿಂದ ಸೋಲಿಸಿದ್ದಾರೆ. ಈ ಮೂಲಕ ಮೈಥಿಲಿ ಬಿಹಾರದಲ್ಲಿ ಯುವ ಶಾಸಕಿಯಾಗಿ ಇತಿಹಾಸ ನಿರ್ಮಿಸಿದ್ದಾರೆ. ಅಲಿನಗರದಲ್ಲಿ ಬಿಜೆಪಿಯ ಮೊದಲ ಗೆಲುವು ಇದು. ಜನಸೂರ್ಯ ಪಕ್ಷದ ಬಿಪ್ಲಬ್ ಕುಮಾರ್ ಚೌಧರಿ ಅವರೂ ಸ್ಪರ್ಧಿಸಿದ್ದರು.
ಮೈಥಿಲಿ ಠಾಕೂರ್ ಹಾಡು ಕೇಳಿ ಬೆಳೆದ ಕುಟುಂಬದಿಂದ ಬಂದ ಅವರು, ಸಂಗೀತದಲ್ಲಿ ಯಶಸ್ಸು ದೊರೆತ ನಂತರ ರಾಜಕೀಯದ ಕಡೆ ಮುಖ ಮಡಿದ್ದಾರೆ. ಮೈಥಿಲಿ ಠಾಕೂರ್ ಅವರು 2000 ರ ಜುಲೈ 25ರಂದು ಬಿಹಾರದ ಮಧುಬನಿ ಜಿಲ್ಲೆಯ ಬೆನಿಪಟ್ಟಿ ಊರಿನಲ್ಲಿ ಜನಿಸಿದ್ದಾರೆ. ಅವರ ತಂದೆ ರಾಮೇಶ್ ಠಾಕೂರ್ ಅವರು ಒಳ್ಳೆಯ ಶಾಸ್ತ್ರೀಯ ಗಾಯಕರು. ತಾಯಿ ಭಾರತಿ ಠಾಕೂರ್ ಗೃಹಿಣಿಯಾಗಿ ಮಕ್ಕಳ ಸಂಗೀತಕ್ಕೆ ನೀರೆರೆದವರು. ಮೈಥಿಲಿಗೆ ಇಬ್ಬರು ತಮ್ಮಂದಿರು. ಈ ಮೂವರೂ ಒಟ್ಟಾಗಿ ‘ಠಾಕೂರ್ ಬ್ರದರ್ಸ್’ ಎಂಬ ಗುಂಪು ಕಟ್ಟಿಕೊಂಡು, ಭಾರತದ ಜಾನಪದ ಹಾಡುಗಳನ್ನು ಜನರಿಗೆ ತಲುಪಿಸುತ್ತಿದ್ದಾರೆ.
ಮೈಥಿಲಿ ಭಾರತೀಯ ಶಾಸ್ತ್ರೀಯ ಸಂಗೀತದಲ್ಲಿ ತರಬೇತಿ ಪಡೆದಿದ್ದಾರೆ. ಆದರೆ ಅವರ ಮುಖ್ಯ ಆಸಕ್ತಿ ಜಾನಪದ ಸಂಗೀತ. ಬಾಲ್ಯದಿಂದಲೇ ಟಿವಿ ಶೋಗಳಲ್ಲಿ ಸ್ಪರ್ಧಿಸಲು ಹೊರಟಿದ್ದರು.
ಆದರೆ, 2012 ರಲ್ಲಿ ಬಂದ ‘ರೈಸಿಂಗ್ ಸ್ಟಾರ್’ ಶೋ ಅವರ ಜೀವನ ಬದಲಾಯಿಸಿತು. ಭಕ್ತಿಗೀತೆಗಳಲ್ಲಿ ಉತ್ತಮ ಪ್ರದರ್ಶನ ನೀಡಿ ಫೈನಲ್‌ಗೆ ಬಂದರು. ರನ್ನರ್-ಅಪ್ ಆದರು. ಕೇವಲ ಎರಡು ಮತಗಳಿಂದ ಗೆಲುವು ಕೈ ತಪ್ಪಿತ್ತು. ಆದರೆ ಈ ಶೋ ಅವರನ್ನು ದೇಶಾದ್ಯಂತ ಪರಿಚಯಿಸಿತು. ನಂತರ ಸೋಷಿಯಲ್ ಮೀಡಿಯಾಕ್ಕೆ ಬಂದರು. ತಮ್ಮಂದಿರ ಜೊತೆಗೆ ಶಾಸ್ತ್ರೀಯ, ಜಾನಪದ ಮತ್ತು ಭಕ್ತಿಗೀತೆಗಳ ವೀಡಿಯೋಗಳನ್ನು ಹಾಕಿದರು. ಇಂದು ಇನ್‌ಸ್ಟಾಗ್ರಾಂನಲ್ಲಿ 7 ಮಿಲಿಯನ್, ಯೂಟ್ಯೂಬ್‌ನಲ್ಲಿ 5.2 ಮಿಲಿಯನ್, ಫೇಸ್‌ಬುಕ್‌ನಲ್ಲಿ 15.8 ಮಿಲಿಯನ್ ಅನುಯಾಯಿಗಳನ್ನ ಹೊಂದಿದ್ದಾರೆ. ಅವರು ಸೂಫಿ ಮತ್ತು ಜಾನಪದ ಹಾಡುಗಳನ್ನು ಬೆರೆಸಿ, 12 ಭಾಷೆಗಳಲ್ಲಿ ಹಾಡುತ್ತಾರೆ. “ಇದು ನಮ್ಮ ಸಂಸ್ಕೃತಿ. ನಮ್ಮ ಬೇರುಗಳು. ತಂದೆಯಿಂದ ಕಲಿತಿದ್ದೇವೆ,” ಎಂದು ಅವರು ಹೇಳುತ್ತಾರೆ. ಮೈಥಿಲಿ ಭಾರತದ ಜಾನಪದ ಸಂಸ್ಕೃತಿಯನ್ನು ವಿದೇಶಗಳಿಗೂ ತಲುಪಿಸುತ್ತಿದ್ದಾರೆ.
https://twitter.com/JayamAshok15/status/1989371263920615684?s=20
2025 ರ ಬಿಹಾರ ಚುನಾವಣೆಯಲ್ಲಿ ಬಿಜೆಪಿ ಮೈಥಿಲಿಯನ್ನು ಅಲಿನಗರ ಕ್ಷೇತ್ರಕ್ಕೆ ಅಭ್ಯರ್ಥಿಯಾಗಿ ಆಯ್ಕೆ ಮಾಡಿತು. ಇದು ನಿಜವಾಗಿಯೂ ಆಶ್ಚರ್ಯ! ಯಾಕಂದ್ರೆ ರಾಜಕೀಯ ಅನುಭವ ಇಲ್ಲದ ಯುವ ಗಾಯಕಿಯನ್ನು ಯಾಕೆ ಸೆಲೆಕ್ಟ್ ಮಾಡಿದ್ದು ಎಂದು ಜನರು ಕೇಳಿದ್ದರು. ಠಾಕೂರ್ ಕಂಠಕ್ಕೆ ಬಹಳ ಅಭಿಮಾನಿಗಳಿದ್ದರು. ಆದರೆ, ಆ ಅಭಿಮಾನ ಮತವಾಗಿ ಬದಲಾಗುತ್ತಾ ಎಂಬ ಅನುಮಾನವಂತೂ ಇದ್ದೇ ಇತ್ತು.
ಆದರೂ ವಿನೋದ್ ಮಿಶ್ರಾ ಅವರನ್ನು 11 ಸಾವಿರ ಮತಗಳಿಂದ ಸೋಲಿಸಿ ಮೈಥಿಲಿ ಗೆದ್ದರು. ಇದು ಅಲಿನಗರದಲ್ಲಿ ಬಿಜೆಪಿಯ 17 ವರ್ಷಗಳ ನಂತರದ ಮೊದಲ ಗೆಲುವಾಗಿತ್ತು. “ಜನರು ನನ್ನಿಂದ ದೊಡ್ಡ ನಿರೀಕ್ಷೆಗಳನ್ನು ಹೊಂದಿದ್ದಾರೆ. ನಾನು ಅಲಿನಗರದ ಮೇಲೆ ಮಾತ್ರ ಗಮನ ಕೊಡುತ್ತೇನೆ,” ಎಂದು ಗೆಲುವಿನ ನಂತರ ಹೇಳಿದರು. ಮೈಥಿಲಿ ಭಾರತದ ಮೊದಲ ಜೆನ್ ಜೀ (Gen z) ಶಾಸಕಿಯಾಗಿದ್ದಾರೆ. ಇದಕ್ಕೂ ಮೊದಲು, ಬಿಹಾರದ ಅತ್ಯಂತ ಕಿರಿಯ ಶಾಸಕರಾಗಿ 2005 ರಲ್ಲಿ 26 ವರ್ಷದ ಸ್ವತಂತ್ರ ಅಭ್ಯರ್ಥಿ ತೌಸೀಫ್ ಆಲಂ, ನಂತರ 2015ರಲ್ಲಿ ರಘೋಪುರದಿಂದ 26 ನೇ ವಯಸ್ಸಿನಲ್ಲಿ ಚುನಾಯಿತರಾದ ಆರ್‌ಜೆಡಿಯ ತೇಜಸ್ವಿ ಯಾದವ್ ಇದ್ದರು.
ಚುನಾವಣೆಯ ವೆಬ್‌ಸೈಟ್ ಪ್ರಕಾರ, ಮೈಥಿಲಿಯ ಆಸ್ತಿ ಸುಮಾರು 3 ಕೋಟಿ ರೂಪಾಯಿಗಳು. ಇದು ಹಾಡು, ಸೋಷಿಯಲ್ ಮೀಡಿಯಾ ಮತ್ತು ಜಾಹೀರಾತುಗಳಿಂದ ಬಂದಿದೆ. ನಗದು 1.80 ಲಕ್ಷ, ಬ್ಯಾಂಕ್‌ನಲ್ಲಿ 72 ಲಕ್ಷ, ಷೇರುಗಳು 31 ಲಕ್ಷ, ಚಿನ್ನ 52 ಲಕ್ಷ ಇದೆ. ದೆಹಲಿಯಲ್ಲಿ 1.152 ಚದರ ಅಡಿ ಮನೆ (1.50 ಕೋಟಿ ಮೌಲ್ಯ) ಇದೆ. ಇನ್ನೂ, ಪ್ರಚಾರದ ಸಮಯದಲ್ಲಿ ಮೈಥಿಲಿ ಕಾಂಟ್ರವರ್ಸಿಯನ್ನೂ ಮಾಡಿಕೊಂಡ ಉದಾಹರಣೆಗಳಿವೆ. “ಅಲಿನಗರದ ಮತದಾರರಿಗೆ ತಾವು ಚುನಾಯಿತರಾದರೆ ಕ್ಷೇತ್ರವನ್ನು ಸೀತಾನಗರ ಎಂದು ಮರುನಾಮಕರಣ ಮಾಡುವುದಾಗಿ” ಹೇಳಿ ವಿವಾದದ ಕೇಂದ್ರಬಿಂದುವಾಗಿದ್ದರು. “ನಾನು ಈ ಸ್ಥಾನದಿಂದ ಗೆದ್ದರೆ ಅಲಿನಗರವು ಸೀತಾನಗರವಾಗಲಿದೆ” ಎಂದು ಮೈಥಿಲಿ ತಮ್ಮ ಪ್ರಚಾರದ ಸಂದರ್ಭದಲ್ಲಿ ಹೇಳಿದ್ದರು.
https://twitter.com/JaikyYadav16/status/1985540220130115712?s=20
ಮೊದಲ ಚುನಾವಣಾ ಸ್ಪರ್ಧೆಯಲ್ಲೇ ಅವರು ಅಲಿನಗರದ ಹೆಸರು ಬದಲಾಯಿಸುವ ಪಕ್ಕಾ ಕೋಮುವಾದಿ ಹೇಳಿಕೆ ನೀಡಿದ್ದು, ಹಿಮಾಚಲದ ಯುವ ಸಂಸದೆ, ನಟಿ ಕಂಗನಾ ಹಾದಿಯಲ್ಲಿ ಸಾಗುವ ಸುಳಿವು ನೀಡಿದ್ದಾರೆ. ಜೆನ್ ಜೀ ಗಳ ನಡೆ ಭಾರತದ ಭವಿಷ್ಯ ನಿರ್ಧರಿಸಲಿದೆ.





