ಥೈರಾಯ್ಡ್‌ ಅಂದ್ರೆ ಭಯವೇ? ವೈದ್ಯರು ಏನಂತಾರೆ ಗೊತ್ತಾ?

Date:

ದೇಹ ಎಷ್ಟು ಶಕ್ತಿ ಬಳಕೆ ಮಾಡಬೇಕು, ಹೃದಯ ಎಷ್ಟು ವೇಗವಾಗಿ ಬಡಿಯಬೇಕು, ದೇಹದ ತಾಪಮಾನ ಹೇಗಿರಬೇಕು, ತೂಕ ಹೆಚ್ಚಳ ಅಥವಾ ಇಳಿಕೆ ಹೇಗಿರಬೇಕು, ಇವೆಲ್ಲದರ ಹಿಂದೆ ಥೈರಾಯ್ಡ್ ಗ್ರಂಥಿಯ ಪಾತ್ರವಿದೆ. ಮಹಿಳೆಯರಲ್ಲಿನ ಮಾಸಿಕ ಋತುಚಕ್ರ, ಗರ್ಭಧಾರಣೆ ಹಾಗೂ ಮಕ್ಕಳ ಬೆಳವಣಿಗೆಯ ಮೇಲೂ ಇದು ನೇರ ಪರಿಣಾಮ ಬೀರುತ್ತದೆ.

ಮಾನವನ ಕೊರಳ ಭಾಗದಲ್ಲಿ ಕಂಠಕ್ಕೆ ಅಂಟಿಕೊಂಡಂತಿರುವ ಚಿಕ್ಕ ಗ್ರಂಥಿಯೊಂದು ತೂಕ, ದಣಿವು, ಮನೋಸ್ಥಿತಿ, ಹೃದಯದ ಬಡಿತದಿಂದ ಹಿಡಿದು ಗರ್ಭಧಾರಣೆಯವರೆಗೆ ದೇಹದ ಬಹುಪಾಲು ಚಯಾಪಚಯ (Metabolism) ಕಾರ್ಯಗಳನ್ನು ನಿರ್ವಹಿಸುತ್ತದೆ ಎಂಬುದು ಎಷ್ಟು ಮಂದಿಗೆ ಗೊತ್ತು? ಅದೇ ಥೈರಾಯ್ಡ್. ಇತ್ತೀಚೆಗೆ ಈ ಪದ ಕೇಳಿದರೆ ಸಾಕು ಅದೊಂದು ಗ್ರಂಥಿ ಎನ್ನುವುದಕ್ಕಿಂತ ಕಾಯಿಲೆ ಎಂದು ಗ್ರಹಿಸುವವರೇ ಹೆಚ್ಚು.

ಈ ʼಥೈರಾಯ್ಡ್ʼ ಎಂಬ ಪದ ಕೇಳುತ್ತಿದ್ದಂತೆ ಅನೇಕ ಜನರಲ್ಲಿ ಭಯ ಮೂಡುತ್ತದೆ. ಒಮ್ಮೆ ಬಂದರೆ ʼಜೀವನಪೂರ್ತಿ ಮಾತ್ರೆ ತೆಗೆದುಕೊಳ್ಳಬೇಕಂತೆʼ, ʼತೂಕ ಇಳಿಯಲ್ಲವಂತೆʼ, ʼಮಕ್ಕಳಾಗಲ್ಲವಂತೆʼ, ʼಇದೊಂದು ಮಹಿಳೆಯರ ಕಾಯಿಲೆಯಂತೆʼ ಇತ್ಯಾದಿ ಅಂತೆ ಕಂತೆ ಮಾತುಗಳು ಕಾಯಿಲೆಗಿಂತ ಹೆಚ್ಚು ಆತಂಕ ಹುಟ್ಟಿಸುತ್ತವೆ. ಆದರೆ ವೈದ್ಯಕೀಯವಾಗಿ ನೋಡಿದರೆ, ಥೈರಾಯ್ಡ್ ಒಂದು ಭಯಾನಕ ಕಾಯಿಲೆ ಅಲ್ಲವೇ ಅಲ್ಲ; ಅದು ಸರಿಯಾದ ಚಿಕಿತ್ಸೆಯಿಂದ ಸಂಪೂರ್ಣ ನಿಯಂತ್ರಣದಲ್ಲಿಡಬಹುದಾದ ಆರೋಗ್ಯ ಸ್ಥಿತಿ. ಸಮಸ್ಯೆ ಕಾಯಿಲೆಯಲ್ಲ, ಅದರ ಬಗ್ಗೆ ಇರುವ ತಪ್ಪು ಕಲ್ಪನೆಗಳಲ್ಲಿ ಇದೆ. ದೇಹ ಎಷ್ಟು ಶಕ್ತಿ ಬಳಕೆ ಮಾಡಬೇಕು, ಹೃದಯ ಎಷ್ಟು ವೇಗವಾಗಿ ಬಡಿಯಬೇಕು, ದೇಹದ ತಾಪಮಾನ ಹೇಗಿರಬೇಕು, ತೂಕ ಹೆಚ್ಚಳ ಅಥವಾ ಇಳಿಕೆ ಹೇಗಿರಬೇಕು, ಇವೆಲ್ಲದರ ಹಿಂದೆ ಥೈರಾಯ್ಡ್ ಗ್ರಂಥಿಯ ಪಾತ್ರವಿದೆ. ಮಹಿಳೆಯರಲ್ಲಿನ ಮಾಸಿಕ ಋತುಚಕ್ರ, ಗರ್ಭಧಾರಣೆ ಹಾಗೂ ಮಕ್ಕಳ ಬೆಳವಣಿಗೆಯ ಮೇಲೂ ಇದು ನೇರ ಪರಿಣಾಮ ಬೀರುತ್ತದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...
thyroid and parathyroid

ಥೈರಾಯ್ಡ್‌ ಕುರಿತು ಡಾ. ಸ್ನೇಹಾ ಎನ್‌ ಹೀಗೆನ್ನುತ್ತಾರೆ.. “ಥೈರಾಯ್ಡ್‌ ಅಂದ್ರೆ ದೊಡ್ಡ ರೋಗ ಅಂತ ಭಯಪಡುವ ಅಗತ್ಯವೇ ಇಲ್ಲ. ಸರಿಯಾದ ಸಮಯದಲ್ಲಿ ಪತ್ತೆ ಹಚ್ಚಿ ಚಿಕಿತ್ಸೆ ಶುರು ಮಾಡಿದರೆ ಇದು ಸಂಪೂರ್ಣವಾಗಿ ನಿಯಂತ್ರಣದಲ್ಲಿರುತ್ತದೆ. ಗಂಡಸಿಗೂ ಹೆಂಗಸಿಗೂ ಈ ಸಮಸ್ಯೆ ಬರುತ್ತದೆ, ಆದರೆ ಮಹಿಳೆಯರಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುವುದಕ್ಕೆ ಕಾರಣ ಅವರು ಗರ್ಭಧಾರಣೆ ಹಾಗೂ ಮಕ್ಕಳಾಗುವ ಸಮಯದಲ್ಲಿ ಹೆಚ್ಚಾಗಿ ಪರೀಕ್ಷೆಗೊಳಪಡುತ್ತಾರೆ. ಗಂಡಸರಲ್ಲಿ ನಿಯಮಿತ ಆರೋಗ್ಯ ತಪಾಸಣೆ ಕಡಿಮೆ ನಡೆಯುವುದರಿಂದ ಪ್ರಕರಣಗಳು ಕಡಿಮೆ ಅನ್ನಿಸಬಹುದು”

“ಥೈರಾಯ್ಡ್‌ಗೆ ಹೈಪೋ ಮತ್ತು ಹೈಪರ್‌ ಅಂತ ಎರಡು ವಿಧಗಳಿವೆ. ಹೈಪೋ ಥೈರಾಯ್ಡ್‌ ಇರುವ ಶೇ.80ರಿಂದ 85 ಜನರಿಗೆ ಜೀವನಪರ್ಯಂತ ಔಷಧಿ ತೆಗೆದುಕೊಳ್ಳಬೇಕಾಗುತ್ತದೆ. ಇದಕ್ಕೂ ಹಲವರು ಭಯಪಡುತ್ತಾರೆ. ಅದರ ಅಗತ್ಯವಿಲ್ಲ. ಥೈರಾಯ್ಡ್‌ ಗ್ರಂಥಿ ಸರಿಯಾಗಿ ಹಾರ್ಮೋನ್‌ ಉತ್ಪಾದಿಸದಾಗ, ಆ ಹಾರ್ಮೋನನ್ನೇ ಮಾತ್ರೆಯ ಮೂಲಕ ಪೂರೈಸಲಾಗುತ್ತದೆ. ಈ ಔಷಧಿ ಹಾರ್ಮೋನಲ್‌ ಆದರೂ ಸೈಡ್‌ ಎಫೆಕ್ಟ್‌ ಬಹಳ ಕಡಿಮೆ. ಹೆಚ್ಚಿನ ಸಂದರ್ಭಗಳಲ್ಲಿ ಇದು ಜನ್ಯ ಕಾರಣಗಳಿಂದಲೇ ಬರುತ್ತದೆ. ಕೆಲವೊಮ್ಮೆ ಜೀವನಶೈಲಿಯ ಕಾರಣದಿಂದ ಕಂಡರೂ ಅದರ ಹಿಂದೆ ಜೆನೆಟಿಕ್ ಅಂಶ ಇರುತ್ತದೆ. ಸಮಯಕ್ಕೆ ಸರಿಯಾಗಿ ಚಿಕಿತ್ಸೆ ತೆಗೆದುಕೊಂಡರೆ ಯಾವುದೇ ಗಂಭೀರ ಸಮಸ್ಯೆ ಎದುರಾಗುವುದಿಲ್ಲ. ಐಯೋಡೈಸ್ಡ್‌ ಉಪ್ಪು, ಸರಿಯಾದ ಆಹಾರ ಕ್ರಮ ಪಾಲಿಸಬೇಕು. ಕೆಲವು ಆಹಾರಗಳನ್ನು ತಾತ್ಕಾಲಿಕವಾಗಿ ತಪ್ಪಿಸುವುದು ಸಹ ಉಪಯುಕ್ತ. ಸ್ವಯಂ ಔಷಧೋಪಚಾರ ಬೇಡ, ವೈದ್ಯರ ಸಲಹೆ ಪಡೆದುಕೊಂಡರೆ ಸಾಕು” ಎಂದರು.

‘ಥೈರಾಯ್ಡ್ ಆಗಿ ದಪ್ಪ ಆದೆ’, ‘ಥೈರಾಯ್ಡ್ ಆಗಿ ಸಣ್ಣ ಆದೆ’ ಎಂದು ಸಾಮಾನ್ಯವಾಗಿ ಥೈರಾಯ್ಡ್‌ನಿಂದ ಬಳಲಿದವರು ಹೇಳುತ್ತಾರೆ. ಹಾಗೆಂದು ಥೈರಾಯ್ಡ್‌ಗೆ ಹೆದರಬೇಕಿಲ್ಲ. ಸೂಕ್ತ ಚಿಕಿತ್ಸೆ ಪಡೆದರೆ, ಥೈರಾಯ್ಡ್‌ ಸಮಸ್ಯೆಯನ್ನು ಸಂಪೂರ್ಣ ನಿಯಂತ್ರಿಸಬಹುದು. ಥೈರಾಯ್ಡ್ ಗ್ರಂಥಿಯು ಹಾರ್ಮೋನ್ ಅನ್ನು ಅತಿಯಾಗಿ ಉತ್ಪಾದಿಸಿದಾಗ ಅಥವಾ ತುಂಬಾ ಕಡಿಮೆ ಉತ್ಪಾದಿಸಿದಾಗ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ. ಇದೇ ‘ಥೈರಾಯ್ಡ್’ ಸಮಸ್ಯೆ.

ಥೈರಾಯ್ಡ್‌ ಬಗ್ಗೆ ಇರುವ ಕೆಲ ಸಾಮಾನ್ಯ ಮಿತ್‌ಗಳು ಮತ್ತು ವಾಸ್ತವ

ಮಿತ್‌ 1: ಥೈರಾಯ್ಡ್ ಅಂದ್ರೆ ಭಯಾನಕ ಕಾಯಿಲೆ

ವಾಸ್ತವ:
ಥೈರಾಯ್ಡ್ ಒಂದು ಕಾಯಿಲೆಯಲ್ಲ; ಅದು ಹಾರ್ಮೋನಲ್ ಅಸಮತೋಲನದಿಂದ ಉಂಟಾಗುವ ಆರೋಗ್ಯ ಸ್ಥಿತಿ. ಸರಿಯಾದ ಸಮಯದಲ್ಲಿ ಪತ್ತೆ ಮಾಡಿ ಚಿಕಿತ್ಸೆ ತೆಗೆದುಕೊಂಡರೆ ಸಂಪೂರ್ಣ ನಿಯಂತ್ರಣದಲ್ಲಿರುತ್ತದೆ.

ಮಿತ್‌ 2: ಒಮ್ಮೆ ಥೈರಾಯ್ಡ್ ಬಂದರೆ ಜೀವನಪೂರ್ತಿ ಮಾತ್ರೆ ತೆಗೆದುಕೊಳ್ಳಲೇಬೇಕು

ವಾಸ್ತವ:
ಹೈಪೋಥೈರಾಯ್ಡಿಸಮ್‌ನಲ್ಲಿ ಹಲವರಿಗೆ ದೀರ್ಘಕಾಲ ಮಾತ್ರೆ ಬೇಕಾಗಬಹುದು. ಆದರೆ ಇದು ಇನ್ಸುಲಿನ್‌ನಂತೆ ದೇಹಕ್ಕೆ ಹಾರ್ಮೋನ್ ಪೂರೈಸುವ ಕ್ರಮ. ಅಡಿಕ್ಷನ್ ಆಗುವುದಿಲ್ಲ. ಕೆಲವರಿಗೆ ಜೀವನಶೈಲಿ ಬದಲಾವಣೆಯಿಂದ ಡೋಸ್ ಕಡಿಮೆಯಾಗಬಹುದು.

ಮಿತ್‌ 3: ಥೈರಾಯ್ಡ್ ಇದ್ದರೆ ತೂಕ ಯಾವತ್ತೂ ಇಳಿಯಲ್ಲ

ವಾಸ್ತವ:
ಸರಿಯಾದ ಔಷಧಿ, ಆಹಾರ ಕ್ರಮ ಮತ್ತು ವ್ಯಾಯಾಮ ಇದ್ದರೆ ತೂಕ ನಿಯಂತ್ರಣಕ್ಕೆ ಬರಬಹುದು. ತೂಕ ಹೆಚ್ಚಳವು ಥೈರಾಯ್ಡ್‌ನ ಲಕ್ಷಣ ಮಾತ್ರ, ಶಾಶ್ವತ ಸ್ಥಿತಿ ಅಲ್ಲ.

ಮಿತ್‌ 4: ಥೈರಾಯ್ಡ್ ಮಹಿಳೆಯರ ಕಾಯಿಲೆ ಮಾತ್ರ

ವಾಸ್ತವ:
ಇಬ್ಬರಿಗೂ ಥೈರಾಯ್ಡ್ ಬರುತ್ತದೆ. ಮಹಿಳೆಯರು ಹೆಚ್ಚು ಆರೋಗ್ಯ ಪರೀಕ್ಷೆಗೊಳಗಾವುದರಿಂದ ಅವರಲ್ಲಿ ಪತ್ತೆಯಾಗುವ ಪ್ರಮಾಣ ಹೆಚ್ಚು

thyroid

ಮಿತ್‌ 5: ಥೈರಾಯ್ಡ್ ಇದ್ದರೆ ಮಕ್ಕಳಾಗಲ್ಲ

ವಾಸ್ತವ:
ಥೈರಾಯ್ಡ್ ಸರಿಯಾಗಿ ನಿಯಂತ್ರಣದಲ್ಲಿದ್ದರೆ ಸಾಮಾನ್ಯ ಗರ್ಭಧಾರಣೆ ಸಾಧ್ಯ. ಚಿಕಿತ್ಸೆ ಇಲ್ಲದೆ ಇದ್ದಾಗ ಮಾತ್ರ ಸಮಸ್ಯೆ ಉಂಟಾಗಬಹುದು.

ಮಿತ್‌ 6: ಥೈರಾಯ್ಡ್ ಮಾತ್ರೆಗಳು ಕಿಡ್ನಿ, ಲಿವರ್ ಹಾಳು ಮಾಡುತ್ತವೆ

ವಾಸ್ತವ:
ವೈದ್ಯರ ಸಲಹೆಯಂತೆ ಸರಿಯಾದ ಡೋಸೇಜ್‌ನಲ್ಲಿ ತೆಗೆದುಕೊಂಡರೆ ಥೈರಾಯ್ಡ್ ಔಷಧಿಗಳು ಸುರಕ್ಷಿತ. ಅವು ದೇಹಕ್ಕೆ ಬೇಕಾದ ಹಾರ್ಮೋನ್‌ ಮಾತ್ರ ಪೂರೈಸುತ್ತವೆ.

ಮಿತ್‌ 7: ಐಯೋಡಿನ್ ಉಪ್ಪು ತಿಂದರೆ ಥೈರಾಯ್ಡ್ ಆಗಲ್ಲ

ವಾಸ್ತವ:
ಐಯೋಡಿನ್ ಕೊರತೆ ಒಂದು ಕಾರಣ ಮಾತ್ರ. ಬಹುಪಾಲು ಪ್ರಕರಣಗಳಲ್ಲಿ ಆಟೋಇಮ್ಯೂನ್ (ದೇಹದ ರೋಗನಿರೋಧಕ ವ್ಯವಸ್ಥೆಯು ತನ್ನದೇ ಆದ ಆರೋಗ್ಯಕರ ಜೀವಕೋಶಗಳು ಮತ್ತು ಅಂಗಾಂಶಗಳನ್ನು ತಪ್ಪಾಗಿ ಶತ್ರುಗಳೆಂದು ಭಾವಿಸಿ ದಾಳಿ ಮಾಡುವ ಸ್ಥಿತಿ, Hashimoto’s) ಅಥವಾ ಜೆನೆಟಿಕ್ ಕಾರಣಗಳಿರುತ್ತವೆ.

ಮಿತ್‌ 8: ಒಮ್ಮೆ ರಿಪೋರ್ಟ್ ನಾರ್ಮಲ್ ಬಂದರೆ ಥೈರಾಯ್ಡ್ ಗುಣವಾಗಿರುತ್ತದೆ

ವಾಸ್ತವ:
ರಿಪೋರ್ಟ್ ನಾರ್ಮಲ್ ಆಗಿರುವುದು ಔಷಧಿಯ ಪರಿಣಾಮದಿಂದ. ಔಷಧಿ ನಿಲ್ಲಿಸಿದರೆ ಮತ್ತೆ ಅಸಮತೋಲನ ಉಂಟಾಗಬಹುದು. ವೈದ್ಯರ ಸಲಹೆ ಇಲ್ಲದೆ ಮಾತ್ರೆ ಬಿಡಬಾರದು.

ಮಿತ್‌ 9: ಆಯುರ್ವೇದ / ಮನೆಮದ್ದುಗಳಿಂದ ಥೈರಾಯ್ಡ್ ಸಂಪೂರ್ಣ ಗುಣವಾಗುತ್ತದೆ

ವಾಸ್ತವ:
ಪೂರಕ ಚಿಕಿತ್ಸೆಗಳು ಸಹಾಯಕವಾಗಬಹುದು. ಆದರೆ ವೈದ್ಯಕೀಯ ಔಷಧಿಗೆ ಪರ್ಯಾಯವಲ್ಲ. ಸ್ವಯಂ ಔಷಧೋಪಚಾರ ಅಪಾಯಕಾರಿ.

ಮಿತ್‌ 10: ಥೈರಾಯ್ಡ್ ಇದ್ದವರು ಸಾಮಾನ್ಯ ಜೀವನ ನಡೆಸಲಾರರು

ವಾಸ್ತವ:
ಸರಿಯಾದ ಚಿಕಿತ್ಸೆ ಇದ್ದರೆ ಥೈರಾಯ್ಡ್ ಇರುವವರೂ ಸಂಪೂರ್ಣ ಸಾಮಾನ್ಯ ಜೀವನ ನಡೆಸಬಹುದು. ಕೆಲಸ, ಗರ್ಭಧಾರಣೆ, ವ್ಯಾಯಾಮ ಎಲ್ಲವೂ ಸಾಧ್ಯ.

ಥೈರಾಯ್ಡ್‌ನಲ್ಲಿ ಮುಖ್ಯವಾಗಿ 2 ವಿಧಗಳಿವೆ.

ಒಂದನೆಯದು ಹೈಪೋಥೈರಾಯ್ಡಿಸಮ್ (ಕಡಿಮೆ ಹಾರ್ಮೋನ್): ದೇಹದ ತೂಕ ಇದ್ದಕ್ಕಿದ್ದಂತೆ ಹೆಚ್ಚಾಗುವುದು, ಸದಾ ಸುಸ್ತು, ಆಲಸ್ಯ, ಚರ್ಮ ಒಣಗುವುದು, ಕೂದಲು ಉದುರುವುದು, ಮರೆವು, ಖಿನ್ನತೆ (Depression), ಚಳಿ ತಡೆಯಲು ಕಷ್ಟವಾಗುವುದು, ಮಲಬದ್ಧತೆ ಇದರ ಸಾಮಾನ್ಯ ಗುಣಲಕ್ಷಣಗಳು.

ಎರಡನೆಯದ್ದು ಹೈಪರ್ ಥೈರಾಯ್ಡಿಸಮ್ (ಹೆಚ್ಚು ಹಾರ್ಮೋನ್): ತೂಕ ಅತಿಯಾಗಿ ಇಳಿಕೆಯಾಗುವುದು, ಅತಿಯಾದ ದಣಿವು ಆದರೆ ನಿದ್ರೆ ಬಾರದಿರುವುದು, ಕೂದಲು ತೆಳುವಾಗುವುದು, ಆತಂಕ, ಕಿರಿಕಿರಿ, ಕೈ ನಡುಗುವುದು, ಅತಿಯಾದ ಬೆವರುವಿಕೆ, ಶಾಖ ತಡೆಯಲಾಗದಿರುವುದು ಇದರ ಗುಣಲಕ್ಷಣಗಳು.

image 2026 02 05T115633.612

ಈ ಲಕ್ಷಣಗಳಿದ್ದರೆ ಥೈರಾಯ್ಡ್ ಸಮಸ್ಯೆ ಎದುರಾಗಿರಬಹುದು. ಆದರೆ ಥೈರಾಯ್ಡ್‌ಗೆ ಭಯಪಡಬೇಕಿಲ್ಲ. ಥೈರಾಯ್ಡ್ ಅನ್ನು ಸಂಪೂರ್ಣವಾಗಿ ಗುಣಪಡಿಸುವುದು ಕಷ್ಟವಾದರೂ, ಅದನ್ನು ಸಂಪೂರ್ಣವಾಗಿ ನಿಯಂತ್ರಣದಲ್ಲಿಡಬಹುದು. ಅಯೋಡಿನ್ ಯುಕ್ತ ಉಪ್ಪು, ಸೊಪ್ಪು, ತರಕಾರಿ, ಹಣ್ಣುಗಳನ್ನು ಸೇವಿಸಬೇಕು. ಸೋಯಾ ಉತ್ಪನ್ನಗಳು ಮತ್ತು ಎಲೆಕೋಸು (Cabbage/Cauliflower) ಅತಿಯಾಗಿ ಸೇವಿಸಬಾರದು. ದಿನಕ್ಕೆ ಕನಿಷ್ಠ 30 ನಿಮಿಷ ನಡಿಗೆ ಅಥವಾ ಯೋಗ ಮಾಡುವುದು ಹಾರ್ಮೋನ್ ಸಮತೋಲನಕ್ಕೆ ಸಹಕಾರಿ ಎನ್ನುತ್ತಾರೆ ವೈದ್ಯರು.

ಥೈರಾಯ್ಡ್ ಎನ್ನುವುದು ಜೀವಕ್ಕೆ ಅಪಾಯ ತರುವ ಕಾಯಿಲೆಯಲ್ಲ. ಸರಿಯಾದ ಸಮಯದಲ್ಲಿ ರಕ್ತ ಪರೀಕ್ಷೆ (TSH Test) ಮಾಡಿಸಿಕೊಂಡು, ವೈದ್ಯರ ಸಲಹೆಯಂತೆ ಮಾತ್ರೆಗಳನ್ನು ತೆಗೆದುಕೊಂಡರೆ ನೀವು ಸಾಮಾನ್ಯರಂತೆ ಜೀವಿಸಬಹುದು. ಆದರೆ ಒಂದು ಎಚ್ಚರಿಕೆ ವಹಿಸಬೇಕಾಗುತ್ತದೆ. ವೈದ್ಯರ ಸಲಹೆ ಇಲ್ಲದೆ ಸ್ವತಃ ಮಾತ್ರೆಗಳನ್ನು ನಿಲ್ಲಿಸಬಾರದು ಅಥವಾ ಡೋಸೇಜ್ ಬದಲಾಯಿಸಬಾರದು. ವರ್ಷಕ್ಕೊಮ್ಮೆ ಅಥವಾ ಆರು ತಿಂಗಳಿಗೊಮ್ಮೆ ರಕ್ತ ಪರೀಕ್ಷೆ ಮಾಡಿಸಿ ಹಾರ್ಮೋನ್ ಮಟ್ಟವನ್ನು ಪರೀಕ್ಷಿಸಿಕೊಳ್ಳುವುದು ಸೂಕ್ತ.

ಥೈರಾಯ್ಡ್ ಪರೀಕ್ಷೆ ಹೀಗಿರುತ್ತದೆ..

ಥೈರಾಯ್ಡ್‌ ಲಕ್ಷಣಗಳಿದ್ದರೆ ವೈದ್ಯರು ‘Thyroid Profile’ ರಕ್ತ ಪರೀಕ್ಷೆ ಮಾಡಿಸಿಕೊಳ್ಳಲು ಸಲಹೆ ನೀಡುತ್ತಾರೆ. ಸಾಮಾನ್ಯವಾಗಿ ಒಂದು ಕಂಪ್ಲೀಟ್ ಥೈರಾಯ್ಡ್ ಪ್ರೊಫೈಲ್ನಲ್ಲಿ ಮೂರು ಮುಖ್ಯ ಅಂಶಗಳನ್ನು ಪರೀಕ್ಷಿಸಲಾಗುತ್ತದೆ.

1. TSH (Thyroid Stimulating Hormone): ಇದು ಮೆದುಳಿನ ಪಿಟ್ಯುಟರಿ ಗ್ರಂಥಿಯಿಂದ ಬಿಡುಗಡೆಯಾಗುತ್ತದೆ. ಇದು ಥೈರಾಯ್ಡ್ ಗ್ರಂಥಿಗೆ “ಕೆಲಸ ಮಾಡು” ಎಂದು ಸೂಚನೆ ನೀಡುತ್ತದೆ. ಒಂದು ವೇಳೆ TSH ಹೆಚ್ಚಿದ್ದರೆ ನಿಮ್ಮ ಥೈರಾಯ್ಡ್ ಕಡಿಮೆ ಕೆಲಸ ಮಾಡುತ್ತಿದೆ ಎಂದರ್ಥ (Hypothyroidism).

  • T3 (Triiodothyronine): ಇದು ಥೈರಾಯ್ಡ್ ಗ್ರಂಥಿ ಉತ್ಪಾದಿಸುವ ಸಕ್ರಿಯ ಹಾರ್ಮೋನ್.
  • T4 (Thyroxine): ಇದು ಥೈರಾಯ್ಡ್ ಗ್ರಂಥಿ ಉತ್ಪಾದಿಸುವ ಮುಖ್ಯ ಹಾರ್ಮೋನ್.

ಪರೀಕ್ಷೆಯ ವರದಿಯಲ್ಲಿ TSH ಮಟ್ಟವು 4.0 ಕ್ಕಿಂತ ಹೆಚ್ಚಿದ್ದರೆ ಅದು ‘ಹೈಪೋಥೈರಾಯ್ಡಿಸಮ್’ ಮತ್ತು 0.4 ಕ್ಕಿಂತ ಕಡಿಮೆ ಇದ್ದರೆ ಅದು ‘ಹೈಪರ್ ಥೈರಾಯ್ಡಿಸಮ್’ ಎಂದು ಪರಿಗಣಿಸಲಾಗುತ್ತದೆ. ಥೈರಾಯ್ಡ್‌ ಸಮಸ್ಯೆ ಇರುವವರು ಪ್ರತಿ 3 ರಿಂದ 6 ತಿಂಗಳಿಗೊಮ್ಮೆ ರಕ್ತ ಪರೀಕ್ಷೆ (TSH) ಮಾಡಿಸಿ ವೈದ್ಯರನ್ನು ಸಂಪರ್ಕಿಸಬೇಕು. ದಿನಕ್ಕೆ ಕನಿಷ್ಠ ಸ್ವಲ್ಪ ಸಮಯವಾದರೂ ದೈಹಿಕ ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳಬೇಕು.

ದೇಹದ ಚಯಾಪಚಯ ಕ್ರಿಯೆಯನ್ನು ಹೆಚ್ಚಿಸಲು ಮತ್ತು ಥೈರಾಯ್ಡ್ ಗ್ರಂಥಿ ಸರಿಯಾಗಿ ಕೆಲಸ ಮಾಡಲು ಸಹಕಾರಿಯಾದ ಆಹಾರ ಪದಾರ್ಥಗಳನ್ನು ಸೇವಿಸುವುದು ಉತ್ತಮ. ಅಯೋಡಿನ್ ಇರುವ ಉಪ್ಪು, ಮೊಟ್ಟೆ, ನಾರಿನಂಶವಿರುವ ಆಹಾರ, ಸೇಬು, ಕಿತ್ತಳೆ, ಬಾಳೆಹಣ್ಣು, ಕ್ಯಾರೆಟ್, ಬೆಂಡೆಕಾಯಿ, ಸೋರೆಕಾಯಿ ಮುಂತಾದ ತರಕಾರಿಗಳನ್ನು ಸೇವಿಸಬಹುದು. ಕುಂಬಳಕಾಯಿ ಬೀಜ, ಬಾದಾಮಿ ಮತ್ತು ಅಕ್ರೋಟ್ (Walnuts) ಸೇವಿಸಬಹುದು.

ಇದನ್ನೂ ಓದಿ: ನಮ್ಮ ನಿಮ್ಮೊಳಗಿನ ʼಸ್ಟೀರಿಯೋಟೈಪ್‌ʼ ಗುಮ್ಮ, ಹೆಗಲೇರೀತು ಜೋಕೆ!

ಕೆಲವು ಆಹಾರಗಳು ಥೈರಾಯ್ಡ್ ಗ್ರಂಥಿಯು ಅಯೋಡಿನ್ ಅನ್ನು ಹೀರಿಕೊಳ್ಳದಂತೆ ತಡೆಯುತ್ತವೆ. ಇವುಗಳನ್ನು ಕಡಿಮೆ ಮಾಡುವುದು ಅಥವಾ ಬಿಡುವುದು ಒಳ್ಳೆಯದು ಎನ್ನುತ್ತಾರೆ ವೈದ್ಯರು. ಸೋಯಾ ಹಾಲು, ಸೋಯಾ ಚಂಕ್ಸ್ ಅಥವಾ ಪನೀರ್ ರೀತಿಯ ಸೋಯಾ ಪದಾರ್ಥಗಳನ್ನು ಆದಷ್ಟು ದೂರವಿಡುವುದು ಉತ್ತಮ. ಎಲೆಕೋಸು (Cabbage), ಹೂಕೋಸು (Cauliflower), ಬ್ರೊಕೋಲಿ.. ಇವುಗಳನ್ನು ಹಸಿಯಾಗಿ ತಿನ್ನಬಾರದು. ಬೇಯಿಸಿದಾಗ ಇವುಗಳ ಪ್ರಭಾವ ಕಡಿಮೆಯಾಗುತ್ತದೆ, ಹಾಗಾಗಿ ಮಿತವಾಗಿ ಬೇಯಿಸಿ ತಿನ್ನಬಹುದು. ಸಕ್ಕರೆ ಮತ್ತು ಸಂಸ್ಕರಿಸಿದ ಆಹಾರ ಸೇವನೆ ಬಿಡಬೇಕು. ಬೇಕರಿ ತಿಂಡಿಗಳು, ಬಿಳಿ ಸಕ್ಕರೆ, ಮೈದಾ ಮತ್ತು ಕೂಲ್ ಡ್ರಿಂಕ್ಸ್ ತೂಕ ಹೆಚ್ಚಳಕ್ಕೆ ಕಾರಣವಾಗುತ್ತವೆ ಎಂಬುದನ್ನು ಮರೆಯಬಾರದು.

ಕೆಲವು ಜನರಿಗೆ ಗೋಧಿ ಮತ್ತು ಮೈದಾ ಪದಾರ್ಥಗಳು ಅಲರ್ಜಿ ಉಂಟುಮಾಡಿ ಥೈರಾಯ್ಡ್ ಸಮಸ್ಯೆ ಹೆಚ್ಚಿಸಬಹುದು.
ಒಟ್ಟಾರೆಯಾಗಿ ಥೈರಾಯ್ಡ್‌ ಸಮಸ್ಯೆಯನ್ನು ನಮ್ಮ ಜೀವನ ಶೈಲಿಯ ಬದಲಾವಣೆ ಮತ್ತು ಮುಂಜಾಗ್ರತೆಯಿಂದ ಸಂಪೂರ್ಣ ನಿಯಂತ್ರಿಸಬಹುದು. ಥೈರಾಯ್ಡ್‌ ಗುಣಲಕ್ಷಣಗಳಿದ್ದರೆ ಸೂಕ್ತ ವೈದ್ಯರನ್ನು ಸಂಪರ್ಕಿಸುವುದನ್ನು ತಪ್ಪಿಸದಿರಿ.

WhatsApp Image 2025 05 16 at 6.54.26 PM
Sub Editor at Eedina.com |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಕೇಂದ್ರವನ್ನು ಟೀಕಿಸಿದ ಸಾಮಾಜಿಕ ಮಾಧ್ಯಮ ಖಾತೆಗಳು ಮಂಗಮಾಯ: ಉಳಿಯುವುದು ಬರೀ ಮೋದಿಮಯ!

ಹೀಗೆ ಮೋದಿ ಸರ್ಕಾರವನ್ನು ವಿರೋಧಿಸಿದವರ ಖಾತೆಗಳು ಸಾಮಾಜಿಕ ಮಾಧ್ಯಮಗಳಿಂದ ಅಳಿಸಿ ಕೊನೆಗೆ...

ಒಂದು ಕಡೆ ಖಾದ್ಯತೈಲ ಬೆಲೆ ಏರಿಕೆ; ಮತ್ತೊಂದು ಕಡೆ ಕುಸುಬೆ ಬೆಲೆ ಕುಸಿತದಿಂದ ರೈತರಿಗೆ ಹೊರೆ

ಖಾದ್ಯತೈಲ ಬೆಲೆ ಏರಿಕೆ ಗ್ರಾಹಕರ ಜೇಬಿಗೆ ಭಾರವಾದರೆ, ಕುಸುಬೆ ಬೆಲೆ ಕುಸಿತ...

ಡಾಲರ್ V/s ಯುವಾನ್: ಕೊಲ್ಲಿ ಯುದ್ಧ ಕರೆನ್ಸಿ ಯುದ್ಧವಾಗಿ ಮಾರ್ಪಾಡಾಗುತ್ತಿದೆಯೇ?

ಅಕಸ್ಮಾತ್ ಈ ಯುದ್ಧ ಮುಂದುವರೆದರೆ, ಕೆಲವು ದೇಶಗಳು ಡಾಲರ್ ಬದಲಿಗೆ ಯುವಾನ್...