ಇಷ್ಟೊಂದು ಸುಳ್ಳು ಹೇಳುವ ಅವಶ್ಯಕತೆ ರಕ್ಷಣಾ ಸಚಿವರಿಗೆ ಯಾಕಾಗಿ ಬಂತು?

Date:

ಜವಾಹರಲಾಲ್ ನೆಹರೂ ಮತ್ತು ಸರ್ದಾರ ಪಟೇಲ್ ಸೇರಿ ಕೆಲಸ ಮಾಡಿದ್ದು 1950ಕ್ಕಿಂತ ಮುಂಚೆ. ಪಟೇಲರು 1950ರಲ್ಲಿ ತೀರಿಕೊಂಡಿದ್ದರು. ಆ ಸಂದರ್ಭದಲ್ಲಿ ಬಾಬ್ರಿ ಮಸೀದಿ ಕಟ್ಟುವ ಸ್ಥಿತಿ ಸರಕಾರಕ್ಕೆ ಇರಲಿಲ್ಲ. ಯಾಕೆಂದರೆ ಆಗ ಬಾಬರಿ ಮಸೀದಿ ಸುಸಜ್ಜಿತವಾಗಿತ್ತು. ಅದನ್ನು ಕಟ್ಟುವ ಅವಶ್ಯಕತೆಯೇ ಇರಲಿಲ್ಲ. ಇಷ್ಟೊಂದು ಸುಳ್ಳು ಹೇಳುವ ಅವಶ್ಯಕತೆ ಒಬ್ಬ ರಕ್ಷಣಾ ಸಚಿವರಿಗೆ ಯಾಕಾಗಿ ಬಂತೋ ಗೊತ್ತಿಲ್ಲ.

ಬಾಬ್ರಿ ಮಸೀದಿ 1528ರಲ್ಲಿ ಕಟ್ಟಲಾಗಿದ್ದು, 1949ರವರೆಗೆ ಅದರೊಳಗೆ ಮುಸ್ಲಿಮರು ಪ್ರಾರ್ಥನೆ ಸಲ್ಲಿಸುತ್ತಿದ್ದರು. 1949ರಲ್ಲಿ ಬಾಬ್ರಿ ಮಸೀದಿ ಒಳಗಡೆ ಎರಡು ಹಿಂದೂ ದೇವರ ಮೂರ್ತಿಗಳನ್ನು ಇಡಲಾಗಿತ್ತು. ಇದು ವಿವಾದಕ್ಕೆ ಕಾರಣವಾಗಿ ಮುಸ್ಲಿಮರು ಮತ್ತು ಹಿಂದೂಗಳಿಗೆ ಬಾಬ್ರಿ ಮಸೀದಿ ಪ್ರವೇಶ ನಿರ್ಭಂಧಿಸಲಾಗಿತ್ತು. ಕೆಲವು ಹಿಂದೂ ಸಂಘಟನೆಗಳು ಬಾಬ್ರಿ ಮಸೀದಿ ಸ್ಥಳವು ರಾಮನ ಜನ್ಮಸ್ಥಳವೆಂದು ದೇಶಾದ್ಯಂತ ರಥಯಾತ್ರೆ ನಡೆಸಿ ಡಿಸೆಂಬರ್ 6, 1992ರಂದು ಬಾಬ್ರಿ ಮಸೀದಿಯ ಮೂರು ಗುಂಬಜ್‌ಗಳಲ್ಲಿ ಒಂದು ಗುಂಬಜ್ ಧ್ವಂಸಗೊಳಿಸಿದರು. ಅದರ ನಂತರ ಭಾರತ ಸರಕಾರ 1947ಕ್ಕಿಂತ ಮುಂಚೆ ಯಾವ ಸ್ಥಿತಿಯಲ್ಲಿ ಯಾವ ಪ್ರಾರ್ಥನಾ ಸ್ಥಳಗಳು ಇದ್ದವೋ ಅವುಗಳನ್ನು ಹಾಗೆಯೇ ಮುಂದುವರೆಸಲು ಕಾಯ್ದೆ ಮಾಡಿತು. ಅದಾಗ್ಯೂ ಇತ್ತೀಚೆಗೆ ಸುಪ್ರೀಂ ಕೋರ್ಟ್‌ ಆದೇಶದಂತೆ ಬಾಬ್ರಿ ಮಸೀದಿ ಸ್ಥಳವನ್ನು ಹಿಂದೂಗಳಿಗೆ ನೀಡಿ, ಮುಸ್ಲಿಮರಿಗೆ ಅಯೋಧ್ಯಾ ನಗರದ ಹೊರಭಾಗದಲ್ಲಿ ಐದು ಎಕರೆ ಜಮೀನು ನೀಡಲು ಉತ್ತರ ಪ್ರದೇಶ ಸರಕಾರಕ್ಕೆ ಸೂಚಿಸಿತು. ಆದರೆ, ಇತ್ತೀಚಿಗೆ ಕೇಂದ್ರ ರಕ್ಷಣಾ ಸಚಿವ ರಾಜನಾಥ ಸಿಂಗ್ ಅವರು ಬಾಬ್ರಿ ಮಸ್ಜೀದ ಬಗ್ಗೆ ಸುಳ್ಳನ್ನು ಹೇಳಿ ವಿವಾದ ಉಂಟು ಮಾಡಲು ಪ್ರಯತ್ನ ಮಾಡಿದ್ದು ಸರಿಯಲ್ಲ.

ರಾಜನಾಥ ಸಿಂಗ್ ಪ್ರಕಾರ ಪ್ರಥಮ ಪ್ರಧಾನಿ ಜವಾಹರ ಲಾಲ್ ನೆಹರು ಅವರು ಸರಕಾರದ ಅನುದಾನದಲ್ಲಿ ಬಾಬ್ರಿ ಮಸ್ಜೀದ ಕಟ್ಟಲು ಮುಂದಾಗಿದ್ದರು. ಆದರೆ ಸರ್ದಾರ ಪಟೇಲ್ ಒಪ್ಪಲಿಲ್ಲ. ಆದರೆ, ಜವಾಹರ ಲಾಲ್ ಮತ್ತು ಸರ್ದಾರ್‌ ಪಟೇಲ್ ಸೇರಿ ಕೆಲಸ ಮಾಡಿದ್ದು 1950ಕ್ಕಿಂತ ಮುಂಚೆ. ಪಟೇಲರು 1950ರಲ್ಲಿ ತೀರಿಕೊಂಡಿದ್ದರು. ಆ ಸಂದರ್ಭದಲ್ಲಿ ಬಾಬ್ರಿ ಮಸೀದಿ ಕಟ್ಟುವ ಸ್ಥಿತಿ ಸರಕಾರಕ್ಕೆ ಇರಲಿಲ್ಲ. ಯಾಕೆಂದರೆ 1950ರಲ್ಲಿ ಬಾಬ್ರಿ ಮಸೀದಿ ಸುಸಜ್ಜಿತವಾಗಿತ್ತು. ಅದನ್ನು ಕಟ್ಟುವ ಅವಶ್ಯಕತೆಯೇ ಇರಲಿಲ್ಲ. ಇಷ್ಟೊಂದು ಸುಳ್ಳು ಹೇಳುವ ಅವಶ್ಯಕತೆ ಒಬ್ಬ ರಕ್ಷಣಾ ಸಚಿವರಿಗೆ ಯಾಕಾಗಿ ಬಂತೋ ಗೊತ್ತಿಲ್ಲ. ಬಾಬ್ರಿ ಮಸೀದಿ ಬಗ್ಗೆ ಮುಸ್ಲಿಮರೇ ಏನೂ ಮಾತನಾಡುತ್ತಿಲ್ಲ, ರಕ್ಷಣಾ ಸಚಿವರು ಮಾತನಾಡುವ ಅನಿವಾರ್ಯತೆ ಯಾಕಾಗಿ ಬಂತೋ ಗೊತ್ತಿಲ್ಲ.

ಈ ಬಿಜೆಪಿ ನಾಯಕರಿಗೆ ಮುಸ್ಲಿಮರು, ಮಸೀದಿ, ದರ್ಗಾ, ಖಬರಸ್ಥಾನ, ಹಿಜಾಬ್, ಹಲಾಲ್ ಕುರಿತು ಪುಂಖಾನು ಪುಂಖವಾಗಿ ಸುಳ್ಳು ಹೇಳುವುದು ಒಂದು ಚಾಳಿಯಾಗಿದೆ. ಸರಕಾರ ನಡೆಸುತ್ತಿರುವ ಬಿಜೆಪಿ ನಾಯಕರಿಗೆ ಕನಿಷ್ಠ ಜ್ಞಾನ ಇರಬೇಕು. ದೇಶದಲ್ಲಿ 2,70,179 ಮಸೀದಿಗಳಿವೆ, 8,72,000 ವಕ್ಫ ಮಂಡಳಿಯಲ್ಲಿ ನೋಂದಣಿಯಾಗಿರುವ ವಕ್ಫ್‌ ಸಂಸ್ಥೆಗಳಿವೆ. ಸ್ವಾತಂತ್ರ್ಯ ಬಂದಾಗಿನಿಂದ ಇಲ್ಲಿಯವರೆಗೆ ಯಾವುದೇ ಸರಕಾರ ಮಸ್ಜೀದ ಕಟ್ಟಲು ಒಂದು ರೂಪಾಯಿ ಅನುದಾನ ನೀಡಿಲ್ಲ. ಯಾವ ರಾಜ್ಯದ ಸರಕಾರ ಸಹ ನೀಡಿಲ್ಲ. ಯಾಕೆಂದರೆ ಮುಸ್ಲಿಮರು ಸರಕಾರದ ದುಡ್ಡಲ್ಲಿ ಮಸೀದಿ ಕಟ್ಟಲು ಒಪ್ಪುವದಿಲ್ಲ. ಹಾಗಾಗಿ ಯಾವ ಮುಸ್ಲಿಮರು ಮಸೀದಿ ಕಟ್ಟಲು ಸರಕಾರಕ್ಕೆ ಅನುದಾನ ಕೇಳುವುದಿಲ್ಲ. ಅಲ್ಲದೇ ಇಸ್ಲಾಂ ಧರ್ಮವನ್ನು ಅನುಸರಿಸದೇ ಇರುವವರ ಹಣದಲ್ಲಿಯೂ ಸಹ ಮಸೀದಿ ಕಟ್ಟಲು ಅವಕಾಶವಿಲ್ಲ. ಇತರರಿಂದ ಕೇವಲ ತಾರತ್ ಖಾನಾ ನಿರ್ಮಾಣ ಮಾಡಲು ಹಣ ಪಡೆಯಬಹುದೇ ವಿನಃ ಮಸೀದಿ ಕಟ್ಟಲು ಪಡೆಯುವಂತಿಲ್ಲ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...
Babri Masjid 2

ರಾಜ್ಯ ವಕ್ಫ್‌ ಮಂಡಳಿ ಮೂಲಕ ವಕ್ಫ್ ಮಂಡಳಿಯಲ್ಲಿ ನೋಂದಣಿಯಾಗಿರುವ ಧಾರ್ಮಿಕ ವಕ್ಫ್‌ ಸಂಸ್ಥೆಗಳ ಅಭಿವೃದ್ದಿಗೆ ಅನುದಾನ ನೀಡಲಾಗುತ್ತಿದೆಯೇ ವಿನಃ ಮಸೀದಿ ಕಟ್ಟಲು ಅನುದಾನ ನೀಡುವುದಿಲ್ಲ, ವಕ್ಫ್‌ ಮಂಡಳಿಯಲ್ಲಿ ನೋಂದಣಿಯಾಗಿರುವ ವಕ್ಫ್‌ ಸಂಸ್ಥೆಗಳೆಂದರೆ ಧಾರ್ಮಿಕ ಸಂಸ್ಥೆಗಳಾದ ಖಬರಸ್ಥಾನ, ಮಸೀದಿ ಕಾಂಪೌಂಡ್‌, ವಜುಖಾನಾ, ತಾರತ್ ಖಾನಾ, ದರ್ಗಾ, ಆಶುರಖಾನಾ ಅಭಿವೃದ್ದಿಗಳಿಗೆ ಸರಕಾರ ವಕ್ಫ ಮಂಡಳಿ ಮೂಲಕ ಅನುದಾನ ನೀಡುತ್ತದೆ. ಅದೂ ಅಂತಹ ಸಂಸ್ಥೆಗಳು ವಕ್ಫ್‌ ಮಂಡಳಿಯಲ್ಲಿ ನೋಂದಣಿಯಾಗಿರಬೇಕು ಮತ್ತು ಅನುಮೋದಿತ ಆಡಳಿತ ಮಂಡಳಿ ಇರಬೇಕು, ವಕ್ಫ ಮಂಡಳಿಯಲ್ಲಿ ನೋಂದಣಿಯಾಗದ ಯಾವ ಧಾರ್ಮಿಕ ಸಂಸ್ಥೆಗೂ ವಕ್ಫ್‌ ಮಂಡಳಿ ಅನುದಾನ ನೀಡುವುದಿಲ್ಲ.

ಈ ವಿಷಯ ಆಡಳಿತ ನಡೆಸಿದ ಎಲ್ಲಾ ಪಕ್ಷದ ನಾಯಕರಿಗೆ ಗೊತ್ತಿದೆ. ಆದರೂ ಜನರನ್ನು ದಾರಿ ತಪ್ಪಿಸಲು ಸುಳ್ಳು ಹೇಳುವ ಚಾಳಿ ಬಿಜೆಪಿ ನಾಯಕರಿಗಿದೆ. ಇನ್ನೂ ಕೆಲವು ಬಿಜೆಪಿ ನಾಯಕರು ದೇವಸ್ಥಾನದ ದುಡ್ಡನ್ನು ವಕ್ಫ್‌ ಮಂಡಳಿಗೆ ಸರಕಾರ ನೀಡುತ್ತದೆ ಎಂದು ಪದೇ ಪದೇ ಸುಳ್ಳು ಹೇಳುವ ಚಾಳಿ ಬೆಳೆಸಿಕೊಂಡಿದ್ದಾರೆ. ಅದೂ ಸಹ ಅತ್ಯಂತ ಸುಳ್ಳು ಎನ್ನುವುದು ಅವರ ಮನಸಾಕ್ಷಿಗೆ ಗೊತ್ತಿರುತ್ತದೆ, ಆದರೂ ಜನರಲ್ಲಿ ಗೊಂದಲ ಉಂಟು ಮಾಡಲು ಇಂತಹ ಹೇಳಿಕೆಗಳನ್ನು ಕೊಡುತ್ತಾರೆ. ರಾಷ್ಟ್ರೀಯ ವಕ್ಫ್‌ ಕೌನ್ಸಿಲ್ ಮೂಲಕ ದೇಶದ ವಕ್ಫ್‌ ಸಂಸ್ಥೆಗಳ ಅಭಿವೃದ್ದಿಗೆ ಬಡ್ಡಿ ರಹಿತ ಸಾಲದ ರೂಪದಲ್ಲಿ ಅನುದಾನ ನೀಡುವ ಯೋಜನೆ ರೂಪಿಸಲಾಗಿತ್ತು, ಆದರೆ ಕಳೆದ 11 ವರ್ಷಗಳಲ್ಲಿ ಒಂದೇ ಒಂದು ರೂಪಾಯಿ ಅನುದಾನ ರಾಷ್ಟ್ರೀಯ ವಕ್ಫ್‌ ಕೌನ್ಸಿಲ್ ನೀಡಲ್ಲ, ವಕ್ಫ್‌ ಆಸ್ತಿಗಳನ್ನು ವಾಣಿಜ್ಯ ಉದ್ದೇಶಕ್ಕಾಗಿ ಅಭಿವೃದ್ದಿಪಡಿಸಲು ಈ ಅನುದಾನ ಬಳಸಲು ಯೋಜನೆ ರೂಪಿಸಲಾಗಿತ್ತು, ದುರಾದೃಷ್ಟ ಕೇಂದ್ರ ಸರಕಾರ ಅದನ್ನು ನಿಲ್ಲಿಸಿದೆ.

ಬಾಬರಿ ಮಸೀದಿ ನಿರ್ಮಿಸಲು ನೆಹರು ಬಯಸಿದ್ದರೇ? ರಾಜನಾಥ್ ಸಿಂಗ್ ಹೇಳಿಕೆಯ ಉದ್ದೇಶವೇನು?

ಮುಸ್ಲಿಮರು ಶರಿಯತ್ ಪ್ರಕಾರ ಒಂದು ಮಸೀದಿ ಕಟ್ಟಬೇಕಾದರೆ, ವಿವಾದರಹಿತ ಜಮೀನು ದಾನದ ರೂಪದಲ್ಲಿಯೋ ಅಥವಾ ಖರೀದಿ ಮೂಲಕವೋ ಪಡೆದು ಸಾರ್ವಜನಿಕರಿಂದ ಹಣ ಪಡೆದು ಮಸೀದಿ ಕಟ್ಟುತ್ತಾರೆ, ಕಟ್ಟಿದ ನಂತರ ಆ ಮಸೀದಿಯನ್ನು ವಕ್ಫ್‌ ಮಂಡಳಿಗೆ ಹಸ್ತಾಂತರಿಸುತ್ತಾರೆ, ಈ ರೀತಿ ದೇಶದಲ್ಲಿ ಪ್ರತಿ ವರ್ಷ ಸಾವಿರಾರು ಮಸೀದಿಗಳು ಸಾರ್ವಜನಕರು ತಾವೇ ಕಟ್ಟಿ ವಕ್ಫ್‌ ಮಂಡಳಿಗೆ ಹಸ್ತಾಂತರಿಸುತ್ತಾರೆ, ವಕ್ಫ್‌ ಮಾಡುವದು ಒಂದು ವಿಧಾನ, ಅದನ್ನು ಶೇ 99ರಷ್ಟು ಜನ ಅನುಸರಿಸುತ್ತಾರೆ, ಇದರಲ್ಲಿ ಯಾವುದೇ ಗೊಂದಲಗಳಿಲ್ಲ. ವಕ್ಫ್‌ ಮಂಡಳಿಗೆ ಹಸ್ತಾಂತರಿಸಿದ ನಂತರ ಅವುಗಳಿಗೆ ಮೂಲಭೂತ ಸೌಕರ್ಯ ಒದಗಿಸಲು ಅಂದರೆ ಕಾಂಪೌಂಡ್‌ ಗೋಡೆ, ವಜುಖಾನಾ, ತಾರತ್ ಖಾನಾ ಇತ್ಯಾದಿಗಳಿಗಾಗಿ ವಕ್ಫ್‌ ಮಂಡಲಿ ಮೂಲಕ ಅನುದಾನ ಪಡೆಯಲಾಗುತ್ತದೆ.

ದೇಶದಲ್ಲಿ ಮಾತನಾಡಲು ರಾಜಕೀಯ ಪಕ್ಷಗಳಿಗೆ ಸಾಕಷ್ಟು ವಿಷಯಗಳಿವೆ, ಆದರೆ ದುರಾದೃಷ್ಟ ಬಿಜೆಪಿ ನಾಯಕರು ಬೆಳಿಗ್ಗೆ ಎದ್ದ ತಕ್ಷಣ ಮುಸ್ಲಿಮರು, ಮಸೀದಿ, ಖಬರಸ್ಥಾನ, ದರ್ಗಾ, ಹಿಜಾಬ್, ಹಲಾಲ್ ಎಂದು ಜನರ ದಾರಿ ತಪ್ಪಿಸುವ ಕೆಲಸ ಮಾಡುತ್ತಿರುವದು ನಾಚಿಕೆಗೇಡಿನ ವಿಷಯ.

WhatsApp Image 2025 11 17 at 3.55.49 PM
ಡಾ ರಝಾಕ್‌ ಉಸ್ತಾದ್‌
+ posts

ರಾಜ್ಯ ಉಪಾಧ್ಯಕ್ಷರು, ಹೈದ್ರಾಬಾದ್‌ ಕರ್ನಾಟಕ ಹೋರಾಟ ಸಮಿತಿ ರಾಯಚೂರು

ಪೋಸ್ಟ್ ಹಂಚಿಕೊಳ್ಳಿ:

ಡಾ ರಝಾಕ್‌ ಉಸ್ತಾದ್‌
ಡಾ ರಝಾಕ್‌ ಉಸ್ತಾದ್‌
ರಾಜ್ಯ ಉಪಾಧ್ಯಕ್ಷರು, ಹೈದ್ರಾಬಾದ್‌ ಕರ್ನಾಟಕ ಹೋರಾಟ ಸಮಿತಿ ರಾಯಚೂರು

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಕೇಂದ್ರವನ್ನು ಟೀಕಿಸಿದ ಸಾಮಾಜಿಕ ಮಾಧ್ಯಮ ಖಾತೆಗಳು ಮಂಗಮಾಯ: ಉಳಿಯುವುದು ಬರೀ ಮೋದಿಮಯ!

ಹೀಗೆ ಮೋದಿ ಸರ್ಕಾರವನ್ನು ವಿರೋಧಿಸಿದವರ ಖಾತೆಗಳು ಸಾಮಾಜಿಕ ಮಾಧ್ಯಮಗಳಿಂದ ಅಳಿಸಿ ಕೊನೆಗೆ...

ಒಂದು ಕಡೆ ಖಾದ್ಯತೈಲ ಬೆಲೆ ಏರಿಕೆ; ಮತ್ತೊಂದು ಕಡೆ ಕುಸುಬೆ ಬೆಲೆ ಕುಸಿತದಿಂದ ರೈತರಿಗೆ ಹೊರೆ

ಖಾದ್ಯತೈಲ ಬೆಲೆ ಏರಿಕೆ ಗ್ರಾಹಕರ ಜೇಬಿಗೆ ಭಾರವಾದರೆ, ಕುಸುಬೆ ಬೆಲೆ ಕುಸಿತ...

ಡಾಲರ್ V/s ಯುವಾನ್: ಕೊಲ್ಲಿ ಯುದ್ಧ ಕರೆನ್ಸಿ ಯುದ್ಧವಾಗಿ ಮಾರ್ಪಾಡಾಗುತ್ತಿದೆಯೇ?

ಅಕಸ್ಮಾತ್ ಈ ಯುದ್ಧ ಮುಂದುವರೆದರೆ, ಕೆಲವು ದೇಶಗಳು ಡಾಲರ್ ಬದಲಿಗೆ ಯುವಾನ್...