ಇರಾನ್ ಮೇಲೆ ಅಮೆರಿಕ ದಾಳಿ ಮಾಡಿದ್ದೇಕೆ? ಇಲ್ಲಿದೆ ಅಸಲಿ ಕಾರಣ

Date:

ಇರಾನ್ ಜಗತ್ತಿನ ರಾಷ್ಟ್ರಗಳ ಪ್ರಮುಖ ವ್ಯಾಪಾರ-ವಹಿವಾಟುಗಳಿಗೆ ಕೇಂದ್ರವಾಗುವತ್ತ ಹೆಜ್ಜೆ ಹಾಕಿತ್ತು. ಇದು ಅಮೆರಿಕಕ್ಕೆ ಇನ್ನಿಲ್ಲದ ಸಂಕಟಕ್ಕೆ ಗುರಿಮಾಡಿತ್ತು. ಬಲಿಷ್ಠ ಪ್ರತಿಸ್ಪರ್ಧಿಯ ಬಗೆಗಿನ ಭಯವೇ, ಇರಾನ್ ಮೇಲೆ ದಾಳಿ ಮಾಡಲು ಕಾರಣವಾಗಿತ್ತು.

ಇರಾನ್, ಅಂದಿನ ಪರ್ಷಿಯ ದೇಶವಾಗಿತ್ತು. ಆ ಕಾಲದ ಪರ್ಷಿಯ ಜಗತ್ತಿನ ಅತಿ ಪ್ರಮುಖ ದೇಶವಾಗಿತ್ತು. ಸಂಸ್ಕೃತಿ, ಭಾಷೆ, ಸಾಹಿತ್ಯ, ವ್ಯಾಪಾರ, ನಾಗರಿಕತೆಯ ಮುಂಚೂಣಿಯಲ್ಲಿತ್ತು. ಅದರ ಭೌಗೋಳಿಕ ರಚನೆಯೇ ಅದನ್ನು ಜಾಗತಿಕ ವಾಣಿಜ್ಯದ ಪ್ರಮುಖ ಕೊಂಡಿಯನ್ನಾಗಿಸಿತ್ತು.

2020ರ ದಶಕದ ವೇಳೆಗೆ ಏಷ್ಯಾ, ಯುರೋಪ್ ಮತ್ತು ಮಧ್ಯಪ್ರಾಚ್ಯ ದೇಶಗಳ ನಡುವೆ ಭೂಮಿ, ವಾಯು ಮತ್ತು ಸಮುದ್ರ ಮಾರ್ಗಗಳನ್ನು ಸಂಪರ್ಕಿಸುವ ಬಹು-ಮಾದರಿ ಸಾರಿಗೆ ಕೇಂದ್ರವಾಗಿ ಹೊರಹೊಮ್ಮಲು ಇರಾನ್ ಸಜ್ಜಾಗಿತ್ತು. ಅದನ್ನು ಕಾರ್ಯರೂಪಕ್ಕಿಳಿಸಲು ಬೇಕಾದ ತಯಾರಿಯನ್ನೂ ಮಾಡಿಕೊಂಡಿತ್ತು.

ಬಹುಮಾದರಿ ಸಾರಿಗೆ ಕೇಂದ್ರವಾಗಿ ಹೊರಹೊಮ್ಮಲು ಐದು ಅಂತಾರಾಷ್ಟ್ರೀಯ ಮಾರ್ಗಗಳು ಮುಖ್ಯವಾಗಿದ್ದವು. ಆ ಮಾರ್ಗಗಳು ಹೇಗೆ ಕಾರ್ಯರೂಪಕ್ಕೆ ಬರಬೇಕು, ಯಾವೆಲ್ಲ ದೇಶಗಳು ಅದರಲ್ಲಿ ಭಾಗಿಯಾಗಬೇಕು ಎಂಬುದರ ಕುರಿತು ನೀಲನಕ್ಷೆಯೂ ಸಿದ್ಧವಾಗಿತ್ತು. ಆ ಐದು ಮಾರ್ಗಗಳ ವಿವರ ಇಂತಿದೆ:

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

1. ಅಂತಾರಾಷ್ಟ್ರೀಯ ಉತ್ತರ-ದಕ್ಷಿಣ ಸಾರಿಗೆ ಕಾರಿಡಾರ್ (INSTC)

ಇದು ಐದು ರಾಜಮಾರ್ಗಗಳಲ್ಲಿ ಅತ್ಯಂತ ಪ್ರಮುಖವಾದುದು. INSTC- ಈ ಯೋಜನೆಯು ಭಾರತದ ಮುಂಬೈನಿಂದ ರಷ್ಯಾದ ಸೇಂಟ್ ಪೀಟರ್ಸ್‌ಬರ್ಗ್‌ ಅನ್ನು ಸಂಪರ್ಕಿಸುವ 7,200 ಕಿಮೀ ಉದ್ದದ ಮಾರ್ಗವಾಗಿತ್ತು. ಇರಾನ್ ಇದರ ಕೇಂದ್ರಬಿಂದುವಾಗಿತ್ತು.

ಇದರಿಂದ ಸೂಯೆಜ್ ಕಾಲುವೆ ಮೂಲಕ ನಡೆಯುತ್ತಿದ್ದ ವ್ಯಾಪಾರ ವಹಿವಾಟಿಗಿಂತ ಶೇ. 40ಕ್ಕಿಂತ ಹೆಚ್ಚು ಮತ್ತು ವೇಗದ ಸರಕು ಸಾಗಣೆ ಸಾಧ್ಯವಾಗುತ್ತಿತ್ತು. ಇದು ರಷ್ಯಾಕ್ಕೆ ಪ್ರಯಾಣದ ಸಮಯವನ್ನು ಶೇ. 40ರಷ್ಟು ಕಡಿಮೆ ಮಾಡುತ್ತಿತ್ತು. ಅತ್ಯಂತ ಹೆಚ್ಚಿನ ಮಟ್ಟದಲ್ಲಿ ಲಾಭ ತರುವ ಯೋಜನೆಯಾಗಿತ್ತು. ಹಾಗೆಯೇ 2030ರ ವೇಳೆಗೆ ವಾರ್ಷಿಕ 30 ಮಿಲಿಯನ್ ಟನ್ ಸರಕು ಸಾಗಾಣಿಕೆಯ ಗುರಿ ಹೊಂದಲಾಗಿತ್ತು. ಇದರಿಂದ ಇರಾನ್‌ಗೆ ವಾರ್ಷಿಕ 1.5 ಬಿಲಿಯನ್ ಡಾಲರ್ ಆದಾಯವಿತ್ತು.

ಇದನ್ನು ಓದಿದ್ದೀರಾ?: ಯುದ್ಧ ಅಂತ್ಯವಾಗಲು ಅಮೆರಿಕ, ಇಸ್ರೇಲ್ ಮುಂದೆ 3 ಷರತ್ತುಗಳನ್ನಿಟ್ಟ ಇರಾನ್

ನವೆಂಬರ್ 2025 ರಲ್ಲಿ, ರಶ್ಟ್-ಅಸ್ತಾರಾ (Rasht-Astara) ರೈಲು ಮಾರ್ಗವನ್ನು ಪೂರ್ಣಗೊಳಿಸಲು ಇರಾನ್, ಅಜೆರ್ಬೈಜಾನ್ ಮತ್ತು ರಷ್ಯಾ ಒಪ್ಪಂದಕ್ಕೆ ಸಹಿ ಹಾಕಿದ್ದವು.

1750683137 Strait of Hormuz

2. ಚೀನಾ-ಯುರೋಪ್ ರೈಲು ಮಾರ್ಗ

2024ರಲ್ಲಿ ಇರಾನ್, ಚೀನಾ, ಕಝಾಕಿಸ್ತಾನ್, ಉಜ್ಬೇಕಿಸ್ತಾನ್, ತುರ್ಕಮೆನಿಸ್ತಾನ್ ಮತ್ತು ಟರ್ಕಿ ದೇಶಗಳು ಒಂದೆಡೆ ಸೇರಿ, ಮಹತ್ವದ ಒಪ್ಪಂದಕ್ಕೆ ಬಂದವು. ಆ ಒಪ್ಪಂದದ ಪ್ರಕಾರ ಇರಾನ್ ಅನ್ನು ಚೀನಾ ಮತ್ತು ಯುರೋಪ್ ನಡುವಿನ ರೈಲು ಸಂಚಾರದ ‘ಗೋಲ್ಡನ್ ಗೇಟ್’ ಎಂದು ಘೋಷಿಸಿದವು. ಇರಾನ್‌ನ ದಕ್ಷಿಣ ರೈಲು ಮಾರ್ಗದ ಮೂಲಕ ವಾರ್ಷಿಕ 60 ಮಿಲಿಯನ್ ಟನ್ ಸರಕು ಸಾಗಿಸುವ ಉದ್ದೇಶ ಹೊಂದಲಾಗಿತ್ತು. ಸಮುದ್ರ ಮಾರ್ಗಕ್ಕೆ ಹೋಲಿಸಿದರೆ ಈ ಹೊಸ ರೈಲು ಸಂಪರ್ಕವು ಸಾರಿಗೆ ಸಮಯವನ್ನು 30 ದಿನಗಳಷ್ಟು ಕಡಿಮೆ ಮಾಡುತ್ತದೆ.

3. ಚಾಬಹಾರ್ ಬಂದರು: ಭಾರತದ ಪ್ರವೇಶ ದ್ವಾರ

ಮೇ 2024ರಲ್ಲಿ, ಆಗ್ನೇಯ ಇರಾನ್‌ನ ಚಾಬಹಾರ್ ಬಂದರಿನಲ್ಲಿರುವ ‘ಶಾಹಿದ್ ಬೆಹೆಷ್ಟಿ’ ಟರ್ಮಿನಲ್ ಅನ್ನು ಅಭಿವೃದ್ಧಿಪಡಿಸಲು ಭಾರತವು 10 ವರ್ಷಗಳ ಒಪ್ಪಂದಕ್ಕೆ ಸಹಿ ಹಾಕಿತು. ಇದಕ್ಕೆ ಇಂಡಿಯನ್ ಪೋರ್ಟ್ಸ್ ಗ್ಲೋಬಲ್‌ನಿಂದ 120 ಮಿಲಿಯನ್ ಡಾಲರ್ ಆರಂಭಿಕ ಹೂಡಿಕೆ ಮಾಡಲಾಗಿತ್ತು.

ಚಾಬಹಾರ್ ನೇರ ಮುಕ್ತ ಸಮುದ್ರ ಪ್ರವೇಶವನ್ನು ಹೊಂದಿರುವ ಇರಾನ್‌ನ ಏಕೈಕ ಬಂದರು. ಇದು ಹಾರ್ಮುಜ್ ಜಲಸಂಧಿಯ ಅಡಚಣೆಗಳನ್ನು ತಪ್ಪಿಸಿ ನೇರವಾಗಿ INSTCಗೆ ದಾರಿಯಾಗುವುದು ಇದರ ವಿಶೇಷವಾಗಿತ್ತು.

4. ಅಫ್ಘಾನಿಸ್ತಾನದ ಮುಕ್ತ ಹಾದಿ

ಖಾಫ್-ಹೇರಾತ್ (Khaf-Herat) ರೈಲು ಮಾರ್ಗವು ಇರಾನ್ ಅನ್ನು ಅಫ್ಘಾನಿಸ್ತಾನದೊಂದಿಗೆ ಸಂಪರ್ಕಿಸುತ್ತದೆ. ಇದರಿಂದಾಗಿ ಭೂಕುಸಿತ ಹೊಂದಿರುವ ಅಫ್ಘಾನಿಸ್ತಾನಕ್ಕೆ ಜಾಗತಿಕ ಮಾರುಕಟ್ಟೆಗಳ ಪ್ರವೇಶ ಸುಲಭವಾಗಿ ಸಿಗುತ್ತದೆ. ಜುಲೈ 2025ರಲ್ಲಿ, ಬೀಜಿಂಗ್ 1,000 ಕಿಮೀ ಉದ್ದದ ಸರಖ್ಸ್-ರಾಜಿ ರೈಲುಮಾರ್ಗವನ್ನು ವಿದ್ಯುದ್ದೀಕರಿಸಲು ಒಪ್ಪಂದಕ್ಕೆ ಸಹಿ ಹಾಕಿತು. ಇದು ಚೀನಾ ಮತ್ತು ಯುರೋಪ್ ನಡುವಿನ ‘ಅತ್ಯಂತ ಸುರಕ್ಷಿತ ಮತ್ತು ಆರ್ಥಿಕ ಸಂಪರ್ಕ’ಕ್ಕೆ ರಹದಾರಿಯಾಗಿತ್ತು.

5. ಹಾರ್ಮುಜ್ ಜಲಸಂಧಿ

ಪರ್ಷಿಯನ್ ಗಲ್ಫ್ ರಾಷ್ಟ್ರಗಳಲ್ಲಿ ಇರಾನ್‌ನ ಸ್ಥಾನವು ಮುಂಚೂಣಿಯಲ್ಲಿದೆ. ಅದಕ್ಕೆ ಕಾರಣ, ವಿಶ್ವದ ಅತ್ಯಂತ ನಿರ್ಣಾಯಕ ಸಮುದ್ರ ಮಾರ್ಗಗಳಲ್ಲಿ ಒಂದಾದ ಹಾರ್ಮುಜ್ ಜಲಸಂಧಿಯ ಮೇಲೆ ಅದು ನಿಯಂತ್ರಣ ಹೊಂದಿರುವುದಾಗಿದೆ. 2025ರ ಅಂಕಿ-ಅಂಶಗಳ ಪ್ರಕಾರ, ವಿಶ್ವದ ಕಚ್ಚಾ ತೈಲದ ಶೇ. 30ರಷ್ಟು ಪ್ರತಿದಿನ ಈ ಜಲಸಂಧಿಯ ಮೂಲಕ ಸಾಗಿಸಲಾಗಿದೆ.

hormuz 1

ಈ ಐದು ಮುಖ್ಯ ವಾಣಿಜ್ಯ ಮಾರ್ಗಗಳಲ್ಲದೆ, ಇರಾನ್ ಮತ್ತು ಕತಾರ್ ಅನ್ನು ಸಂಪರ್ಕಿಸುವ 185 ಕಿಮೀ ಉದ್ದದ ನೀರೊಳಗಿನ ಸುರಂಗ ಮಾರ್ಗ; ಮಕ್ರಾನ್ ಕರಾವಳಿಯುದ್ದಕ್ಕೂ ಲಾಜಿಸ್ಟಿಕ್ಸ್ ಹಬ್‌ಗಳು ಕೂಡ ಈ ಯೋಜನೆಯ ಭಾಗವಾಗಿದ್ದವು.

ಎಲ್ಲಾ ಅಂದುಕೊಂಡಂತೆ ನಡೆದಿದ್ದರೆ, 2026ರಲ್ಲಿ ರೈಲ್ವೆ ಮಾರ್ಗಗಳು ಸಮುದ್ರ ಮಾರ್ಗಗಳಿಗಿಂತ 30 ದಿನಗಳ ಸಮಯವನ್ನು ಉಳಿಸುತ್ತಿದ್ದವು. ಚಾಬಹಾರ್ ಭಾರತೀಯ ಸರಕುಗಳನ್ನು ಮಧ್ಯ ಏಷ್ಯಾಕ್ಕೆ ಸಾಗಿಸಲು ಸಿದ್ಧವಾಗಿತ್ತು. ಮತ್ತು INSTCಯು ಯುರೇಷಿಯನ್ ವ್ಯಾಪಾರವನ್ನು ಸೂಯೆಜ್ ಕಾಲುವೆಯಿಂದ ತನ್ನತ್ತ ತಿರುಗಿಸಲು ಸಜ್ಜಾಗಿತ್ತು. ಇರಾನ್‌ನ ಈ ಅತಿವೇಗದ ಬೆಳವಣಿಗೆ ಮತ್ತು ಅದು ಯುರೇಷಿಯಾದ ವ್ಯಾಪಾರ ಕೇಂದ್ರವಾಗಿ ಮಾರ್ಪಡುತ್ತಿರುವುದು ಅಮೆರಿಕಕ್ಕೆ ತನ್ನ ಜಾಗತಿಕ ಪ್ರಾಬಲ್ಯದ ಮೇಲೆ ಅತಿದೊಡ್ಡ ಬೆದರಿಕೆಯಾಗಿ ಕಂಡಿತು.

ಇದರ ಜೊತೆಗೆ ಜಾಗತಿಕ ಮಟ್ಟದಲ್ಲಿ ಬಲಿಷ್ಠ ರಾಷ್ಟ್ರಗಳೆನಿಸಿಕೊಂಡ ರಷ್ಯಾ ಮತ್ತು ಚೈನಾ ದೇಶಗಳ ಮುಂದಾಳತ್ವದಲ್ಲಿ ಅಭಿವೃದ್ಧಿ ಹೊಂದುತ್ತಿರುವ 11 ರಾಷ್ಟ್ರಗಳು- ಬ್ರೆಜಿಲ್, ಚೈನಾ, ಈಜಿಪ್ಟ್, ಇಥಿಯೋಪಿಯಾ, ಇಂಡಿಯಾ, ಇಂಡೋನೇಷಿಯಾ, ಇರಾನ್, ರಷ್ಯಾ, ಸೌದಿ ಅರೇಬಿಯಾ, ಸೌತ್ ಆಫ್ರಿಕಾ ಮತ್ತು ಯುನೈಟೆಡ್ ಅರಬ್ ಎಮಿರೇಟ್ಸ್- ಒಂದಾಗಿ ಬ್ರಿಕ್ಸ್ ಎಂಬ ಒಕ್ಕೂಟವನ್ನು ರಚಿಸಿಕೊಂಡಿದ್ದವು.

ಬ್ರಿಕ್ಸ್‌ನ ಮುಖ್ಯ ಉದ್ದೇಶ, ಈ 11 ದೇಶಗಳ ನಡುವೆ ನಡೆಯುವ ಆಮದು-ರಫ್ತು ವ್ಯವಹಾರ, ಆಯಾಯ ದೇಶಗಳ ಕರೆನ್ಸಿಯಲ್ಲಿಯೇ ನಡೆಯುವುದಾಗಿತ್ತು. ಇದರಿಂದ ಜಾಗತಿಕ ಮಟ್ಟದಲ್ಲಿ ತನ್ನ ಏಕಸ್ವಾಮ್ಯ ಸ್ಥಾಪಿಸಿದ್ದ ಅಮೆರಿಕದ ಹಿಡಿತದಿಂದ ಬಿಡಿಸಿಕೊಳ್ಳುವ, ಸ್ವತಂತ್ರವಾಗಿ ವ್ಯವಹರಿಸುವ ಉದ್ದೇಶ ಹೊಂದಲಾಗಿತ್ತು. ಇದರಿಂದ 11 ರಾಷ್ಟ್ರಗಳಿಗೆ ಅಪಾರ ಲಾಭವಾಗುತ್ತಿತ್ತು. ಹಾಗೆಯೇ ಜಗತ್ತಿನ ಯಾವುದೇ ಮೂಲೆಯಲ್ಲಿ ಆಮದು-ರಫ್ತು ನಡೆದರೂ, ಅದು ಡಾಲರ್ ಮೂಲಕವೇ ನಡೆಯುವಂತೆ ಮಾಡಿದ್ದ ಅಮೆರಿಕದ ಈ ಹಿಂದಿನ ಒಪ್ಪಂದ, ಈ ಹೊಸ ಒಕ್ಕೂಟದಿಂದ ಮುರಿದುಬಿದ್ದಿತ್ತು. ಅಮೆರಿಕ ಭಾರೀ ನಷ್ಟಕ್ಕೊಳಗಾಗಿ ಆಘಾತಗೊಂಡಿತ್ತು.

ಇದನ್ನು ಓದಿದ್ದೀರಾ?: ಯುದ್ಧಪೀಡಿತ ಹಾರ್ಮುಜ್ ಜಲಸಂಧಿ ದಾಟಿ ಮುಂಬೈ ತಲುಪಿದ ಮೊದಲ ತೈಲ ಟ್ಯಾಂಕರ್

ಇದಲ್ಲದೆ, ಕಳೆದವರ್ಷ ಮೊದಲ ಸರಕು ಸಾಗಣೆ ರೈಲು ಇರಾನ್ ದೇಶದ ರಾಜಧಾನಿ ಟೆಹ್ರಾನ್ ತಲುಪಿತ್ತು. ಅದೇ ವರ್ಷ ಚೈನಾದ ಅಧ್ಯಕ್ಷ ಕ್ಸಿ ಪಿಂಗ್ ಇರಾನ್‌ಗೆ ಭೇಟಿ ನೀಡಿದ್ದರು. ಆ ಭೇಟಿ ಇರಾನ್ ಮತ್ತು ಚೈನಾ ನಡುವಿನ ದೂರಗಾಮಿ ವ್ಯಾಪಾರ-ಒಪ್ಪಂದಗಳಿಗೆ ಸಹಿ ಹಾಕಲಾಗಿತ್ತು. ಮುಂದಿನ ಎಲ್ಲ ರೈಲ್ವೇ ಯೋಜನೆಗಳಿಗೆ ಚೈನಾ ಸಹಕರಿಸಲಿದೆ ಎಂಬ ಭರವಸೆಯನ್ನೂ ನೀಡಿತ್ತು.  

ಇಷ್ಟಕ್ಕೆಲ್ಲ ಕಾರಣ ಇರಾನ್ ಎನ್ನುವುದು ಅಮೆರಿಕದ ಕಣ್ಣುರಿಗೆ ಕಾರಣವಾಗಿತ್ತು. ಅಲ್ಲದೆ, ಇನ್ನುಮುಂದೆ ಇರಾನ್, ಜಗತ್ತಿನ ರಾಷ್ಟ್ರಗಳೊಂದಿಗೆ ಪ್ರಮುಖ ವ್ಯಾಪಾರ-ವಹಿವಾಟುಗಳಿಗೆ ಕೇಂದ್ರವಾಗುವುದು ಇನ್ನಿಲ್ಲದ ಸಂಕಟಕ್ಕೆ ಗುರಿಮಾಡಿತ್ತು. ಬಲಿಷ್ಠ ಪ್ರತಿಸ್ಪರ್ಧಿಯ ಬಗೆಗಿನ ಭಯವೇ, ಇರಾನ್ ಮೇಲೆ ಕೆಂಡಕಾರಲು ಕಾರಣವಾಗಿತ್ತು. ಅಮೆರಿಕದ ಈ ಹೊಟ್ಟೆಕಿಚ್ಚಿಗೆ ಇಸ್ರೇಲ್ ಖಾರ ಅರೆದಿತ್ತು. ಹಾಗಾಗಿ, ಜೊತೆಯಾಗಿ ಇರಾನ್ ಮೇಲೆ ದಾಳಿ ಮಾಡಿತ್ತು.

Basavaraju Megalkeri
+ posts

ಲೇಖಕ, ಪತ್ರಕರ್ತ

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಪುದುಚೆರಿ ಚುನಾವಣೆ | ‘ಇಂಡಿಯಾ’ ಗೊಂದಲ ನಿವಾರಣೆ: ಕಾಂಗ್ರೆಸ್ 16, ಡಿಎಂಕೆ 14 ಕ್ಷೇತ್ರಗಳಲ್ಲಿ ಸ್ಪರ್ಧೆ

ಪುದುಚೆರಿಯ 'ಇಂಡಿಯಾ' ಮೈತ್ರಿಕೂಟದ ಪ್ರಮುಖ ಪಕ್ಷಗಳಾದ ಡಿಎಂಕೆ ಮತ್ತು ಕಾಂಗ್ರೆಸ್‌ ಪಕ್ಷಗಳ...

ತಮಿಳುನಾಡು ಚುನಾವಣೆ | ಎಐಎಡಿಎಂಕೆ 178, ಬಿಜೆಪಿ 27 ಕ್ಷೇತ್ರಗಳಲ್ಲಿ ಸ್ಪರ್ಧೆ

ಈ ಬಾರಿಯ ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲಿ ಗೆದ್ದು ಅಧಿಕಾರಕ್ಕೇರಲೇ ಬೇಕೆಂದು ಪಣ...

ಮಧ್ಯಪ್ರಾಚ್ಯ ಸಂಘರ್ಷ | ಕದನ ವಿರಾಮ ಎಂದ ಟ್ರಂಪ್; ಮಾತುಕತೆ ನಡೆದಿಲ್ಲವೆಂದ ಇರಾನ್

ಮಧ್ಯಪ್ರಾಚ್ಯದಲ್ಲಿ ಉಲ್ಬಣಗೊಳ್ಳುತ್ತಿರುವ ಸಂಘರ್ಷವನ್ನು ಕೊನೆಗಾಣಿಸಲು ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್ ನಾನಾ...

ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಬ್ಯಾಲೆಟ್ ಪೇಪರ್ ಬಳಕೆ; ವಿಧಾನಸಭೆಯಲ್ಲಿ ಮಸೂದೆ ಅಂಗೀಕಾರ

ರಾಜ್ಯದ ಸ್ಥಳೀಯ ಸಂಸ್ಥೆಗಳ ಚುನಾವಣಾ ಪ್ರಕ್ರಿಯೆಯಲ್ಲಿ ಬದಲಾವಣೆ ತರಲು ರಾಜ್ಯ ಸರ್ಕಾರ...