ಧರ್ಮಸ್ಥಳಕ್ಕೆ ಈ ಪರಿಯ ದೌಡು ಏಕೆ?

Date:

ಸೆಪ್ಟಂಬರ್‌ 1ರಂದು ಬಿಜೆಪಿಯವರು ʼಧರ್ಮಸ್ಥಳ ಚಲೋʼ ನಡೆಸಿದರೆ, ಜೆಡಿಎಸ್‌ ಪಕ್ಷದ ಯುವ ಘಟಕದ ಅಧ್ಯಕ್ಷ ನಿಖಿಲ್‌ ಕುಮಾರಸ್ವಾಮಿ ನೇತೃತ್ವದಲ್ಲಿ ಆಗಸ್ಟ್‌ 31ರಂದು ʼಧರ್ಮಸ್ಥಳ ಸತ್ಯಯಾತ್ರೆʼಯನ್ನು ನಡೆಸಿತು. ಅದಕ್ಕೂ ಮೊದಲು ಬೇರೆ ಬೇರೆ ತಂಡಗಳು ಧರ್ಮಸ್ಥಳಕ್ಕೆ ತೆರಳಿ ವೀರೇಂದ್ರ ಹೆಗ್ಗಡೆಯವರಿಗೆ ಬೆಂಬಲ ಸೂಚಿಸಿವೆ.

ಆಗಸ್ಟ್‌ 29ರಂದು ಧರ್ಮಸ್ಥಳದಲ್ಲಿ ವಿವಿಧ ಜಿನ ಮಠಗಳ ಭಟ್ಟಾರಕ ಮುನಿಗಳು, ಶ್ರವಕರು, ಶ್ರವಿಕರು ಸೇರಿ ʼ ಧರ್ಮ ಸಂರಕ್ಷಣಾ ಸಮಾವೇಶʼವನ್ನು ನಡೆಸಿದರು. ಮುಖ್ಯವಾಗಿ ಧರ್ಮಸ್ಥಳ (Dharmastala)ದ ಧರ್ಮ ಪರಂಪರೆಯನ್ನು ಸಂರಕ್ಷಿಸಲು ಮತ್ತು ಧರ್ಮಾಧಿಕಾರಿ ಡಿ ವೀರೇಂದ್ರ ಹೆಗ್ಗಡೆಯವರಿಗೆ ಬೆಂಬಲವನ್ನು ಸೂಚಿಸಲು ಈ ಸಮಾವೇಶವನ್ನು ಆಯೋಜಿಸಲಾಗಿತ್ತು. ಆ ಸಂದರ್ಭದಲ್ಲಿ ಅರಿಹಂತಗಿರಿಯ ದಿಗಂಬರ ಜಿನ ಮಠದ ಧವಳಕೀರ್ತಿ ಭಟ್ಟಾರಕ ಪಟ್ಟಾಚಾರ್ಯವರ್ಯ ಮಾತನಾಡುತ್ತ, “ಎಲ್ಲ ಭಟ್ಟಾರಕರು ಮತ್ತು ಶ್ರವಕರು ಧರ್ಮಸ್ಥಳ ಕ್ಷೇತ್ರ ಮತ್ತು ವೀರೇಂದ್ರ ಹೆಗ್ಗಡೆಯವರ ಜೊತೆ ನಿಂತಿದ್ದೇವೆ. ಹೆಗ್ಗಡೆ ಕುಟುಂಬದ ಹೆಸರನ್ನು ಕೆಡಿಸುವ ಯಾವುದೇ ಪ್ರಯತ್ನ ಅವರಿಗೆ ಕಳಂಕವನ್ನು ತರುವುದಿಲ್ಲ. ಸತ್ಯ ಯಾವಾಗಲೂ ವಿಜಯಶಾಲಿಯಾಗುತ್ತದೆ. ಹೆಗ್ಗಡೆ ಮತ್ತು ಅವರ ಕುಟುಂಬ ಸತ್ಯವನ್ನು ಪ್ರತಿಪಾದಿಸುತ್ತಾರೆ” ಎಂದರು (ಡೆಕ್ಕನ್‌ ಹೆರಾಲ್ಡ್‌ ವರದಿ- 29/08/2025).

Dharmastala 3

ಅದೇ ಸಂದರ್ಭದಲ್ಲಿ ಕನ್ನಡ ಸಾರಸ್ವತ ಲೋಕದ ಖ್ಯಾತ ವಿದ್ವಾಂಸ ಹಾಗೂ ಬರಹಗಾರರಾಗಿರುವ ಹಂಪ ನಾಗರಾಜಯ್ಯ, “ಧರ್ಮಸ್ಥಳ ವಿರುದ್ಧದ ಷಡ್ಯಂತರ ಬೆಳೆಯುವ ಮುನ್ನ ಪ್ರಾರಂಭದಲ್ಲೇ ಚಿವುಟಿ ಹಾಕಬೇಕಿತ್ತು. ಇಲ್ಲಿಯವರೆಗೆ ಅದು ಬೆಳೆಯುವುದಕ್ಕೆ ಅವಕಾಶವನ್ನು ನೀಡಿರಬಾರದು. ಯುವ ಮನಸ್ಸುಗಳ ದಾರಿಯನ್ನು ತಪ್ಪಿಸಲಾಗಿದೆ. ಅವರನ್ನು ಸರಿಯಾದ ಮಾರ್ಗದಲ್ಲಿ ತರುವುದು ನಮ್ಮ ಕರ್ತವ್ಯವಾಗಿದೆ. ಸತ್ಯವನ್ನು ಮುಂದಿಡುವ ಮೂಲಕ ಸುಳ್ಳನ್ನು ಹೊರಗೆಳೆಯಬಹುದು. ನಮ್ಮ ದೇಶದ ಅನುಕರಿಸಬಹುದಾದ ಮಾದರಿ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ. ಸಂಯಮ ಮತ್ತು ಮೌನವೇ ಅವರ ದೊಡ್ಡ ಶಕ್ತಿಗಳು. ಒಬ್ಬ ದೊಡ್ಡ ವ್ಯಕ್ತಿತ್ವದ ಸೂಚಕವೆಂದರೇ ಅದು ಸಮಚಿತ್ತ” ಎಂದರು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ಒಂದೆಡೆ ಮತೀಯ ನಾಯಕರು ಧರ್ಮಸ್ಥಳದ ವಿಷಯದಲ್ಲಿ ಬಹಿರಂಗವಾಗಿ ಹೆಗ್ಗಡೆ ಕುಟುಂಬಕ್ಕೆ ಬೆಂಬಲವನ್ನು ಸೂಚಿಸಿದ್ದವರೇ, ಇನ್ನೊಂದೆಡೆ ನಮ್ಮ ರಾಜ್ಯದ ವಿರೋಧ ಪಕ್ಷಗಳಾದ ಬಿಜೆಪಿ ಮತ್ತು ಜೆಡಿಎಸ್‌ ಪಕ್ಷಗಳು ಕೂಡ ಧರ್ಮಸ್ಥಳದ ಹೆಸರಿಗೆ ಮಸಿಯನ್ನು ಬಳಿಯಲಾಗುತ್ತಿದೆ ಎಂದು ಆಪಾದಿಸುತ್ತ ಬಂದಿವೆ. ಧರ್ಮಸ್ಥಳದಲ್ಲಿ ಜರುಗಿದೆ ಎಂದು ಆಪಾದಿಸಲಾಗಿರುವ ಅನೇಕ ಶವಗಳ ಅಕ್ರಮ ಹೂಳುವಿಕೆಯ ಪ್ರಕರಣ ಜುಲೈ 2025ರಲ್ಲಿ ಅನಾವರಣಗೊಂಡಾಗ ಕೆಲವು ವಾರಗಳ ಕಾಲ ಬಿಜೆಪಿ ಮುಗುಮ್ಮಾಗಿತ್ತು. ರಾಜ್ಯ ಸರ್ಕಾರ ವಿಶೇಷ ತನಿಖಾ ತಂಡ (SIT)ವನ್ನು ರಚಿಸಿದಾಗ, ಅದನ್ನು ಸ್ವಾಗತಿಸಿತು. ನಂತರ ಉಲ್ಟಾ ಹೊಡೆಯಿತು!

ಒಂದು ಪ್ರೆಸ್‌ಮೀಟ್‌ನಲ್ಲಿ ವಿಧಾನ ಸಭೆಯ ವಿರೋಧ ಪಕ್ಷದ ನಾಯಕ ಆರ್‌ ಅಶೋಕ್‌ ಮಾತನಾಡುತ್ತ, “ಧರ್ಮಸ್ಥಳದ ಷಡ್ಯಂತರದ ಹಿಂದೆ ಕಮ್ಯುನಿಸ್ಟರು ಇದ್ದಾರೆ. ಈ ವಿಷಯದಲ್ಲಿ ಕೇರಳ ಸರ್ಕಾರ ಏಕೆ ಮಧ್ಯಪ್ರವೇಶಿಸಬೇಕು? ಅಲ್‌ ಜಝೀರ ಚಾನೆಲ್‌ನಲ್ಲಿ ಧರ್ಮಸ್ಥಳದ ಪ್ರಸ್ತಾಪವಾಗಿದೆ. ಅವರು ಏಕೆ ಇದನ್ನು ವರದಿ ಮಾಡಬೇಕು? ಯಾರ ಕೈವಾಡ ಇಂತಹ ಪ್ರಯತ್ನಗಳ ಹಿಂದೆ ಅಡಗಿದೆ?….” ಎಂಬರ್ಥದ ಮಾತುಗಳನ್ನು ಹರಿಬಿಟ್ಟರು!

ವಿಧಾನ ಸಭೆಯ ಮುಂಗಾರು ಅಧಿವೇಶನದಲ್ಲಿ ಕಾರ್ಕಳದ ಬಿಜೆಪಿ ಶಾಸಕ ವಿ ಸುನಿಲ್‌ ಕುಮಾರ್‌ ಮಾತನಾಡುತ್ತ, “ಒಂದು ಹಿಂದೂ ಧಾರ್ಮಿಕ ಕ್ಷೇತ್ರದ ಹೆಸರನ್ನು ತನಿಖಾ ನೆಪದಲ್ಲಿ ಕೆಡಿಸಲಾಗುವ ಪ್ರಯತ್ನಗಳು ಜರುಗಿವೆ” ಎಂದು ಆಪಾದಿಸಿದರು. ಅಲ್ಲದೆ ಬಿಜೆಪಿ, SIT ಮಧ್ಯಂತರ ವರದಿಯನ್ನು ಬಿಡುಗಡೆ ಮಾಡಬೇಕು ಮತ್ತು ಧರ್ಮಸ್ಥಳದ ಸುತ್ತ ಸುಳ್ಳನ್ನು ಕಟ್ಟುತ್ತಿರುವವರ ವಿರುದ್ಧ ಕ್ರಮವನ್ನು ಜರುಗಿಸಬೇಕು ಎಂದು ಆಗ್ರಹಿಸಿತು.

ಆಗಸ್ಟ್‌ 17, 2025ರಂದು ಬಿಜೆಪಿಯ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ ತಮ್ಮ ಪಕ್ಷದ 20 ಶಾಸಕರ ನಿಯೋಗದ ನೇತೃತ್ವವನ್ನು ವಹಿಸಿ ಧರ್ಮಸ್ಥಳದ ಮಂಜುನಾಥೇಶ್ವರ ದೇಗುಲಕ್ಕೆ ಹೋಗಿ, ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆಯವರನ್ನು ಭೇಟಿ ಮಾಡಿದರು; ತಮ್ಮ ಬೆಂಬಲವನ್ನು ಸೂಚಿಸಿದರು. ಸೆಪ್ಟಂಬರ್‌ 1ರಂದು ಬಿಜೆಪಿ ʼಧರ್ಮಸ್ಥಳ ಚಲೋʼ ಕಾರ್ಯಕ್ರಮವನ್ನು ಧರ್ಮಸ್ಥಳದಲ್ಲಿ ಜರುಗಿಸಿತು. ಪ್ರಸ್ತುತ ಅದು ಧರ್ಮಸ್ಥಳದ ವಿಚಾರ ಕುರಿತಂತೆ ಎಸ್‌ಐಟಿ ತನಿಖೆ ಜರುಗಬೇಕು ಎಂದು ಆಗ್ರಹಿಸಿದೆ. ಜೆಡಿಎಸ್‌ ಪಕ್ಷ, ಅದರ ಯುವ ಘಟಕದ ನೇತಾರ ನಿಖಿಲ್‌ ಕುಮಾರಸ್ವಾಮಿ ನಾಯಕತ್ವದಲ್ಲಿ ಆಗಸ್ಟ್‌ 31ರಂದು ʼಧರ್ಮಸ್ಥಳ ಸತ್ಯ ಯಾತ್ರೆʼಯನ್ನು ನಡೆಸಿತು.

nikhil

ಇನ್ನು ಕಾಂಗ್ರೆಸ್‌ ಪಕ್ಷ ಧರ್ಮಸ್ಥಳ ವಿಷಯದ ಬಗೆಗೆ ಹೇಗೆ ವರ್ತಿಸುತ್ತಿದೆ ಎಂಬುದರ ಬಗೆಗೆ ನೋಟವನ್ನು ಹರಿಸೋಣ. ವಿಧಾನಸಭೆಯ ಸಭಾಪತಿ ಯು ಟಿ ಖಾದರ್‌ ಧರ್ಮಸ್ಥಳದ ಹೆಸರಿಗೆ ಚ್ಯುತಿ ತರಬಾರದೆಂದು ಸೂಚ್ಯವಾಗಿ ತಿಳಿಸಿದರು. ವಿಧಾನ ಸಭೆಯಲ್ಲಿ ನಮ್ಮ ರಾಜ್ಯದ ಉಪಮುಖ್ಯಮಂತ್ರಿ ಹಾಗೂ ಕರ್ನಾಟಕ ಪ್ರದೇಶ ಕಾಂಗ್ರೆಸ್‌ ಅಧ್ಯಕ್ಷ ಡಿ ಕೆ ಶಿವಕುಮಾರ್‌ ಮಾತನಾಡುತ್ತ, “ಧರ್ಮಸ್ಥಳದ ವಿಚಾರದ ಹಿಂದೆ ಷಡ್ಯಂತರವಿದೆ. ಪ್ರಸ್ತುತ ನಾನು ಅದರ ಹಿಂದೆ ಯಾರು ಇದ್ದಾರೆಂದು ಹೇಳುವುದಿಲ್ಲ. ಆದರೆ ಧರ್ಮಸ್ಥಳದ ಶತಮಾನಗಳ ಪರಂಪರೆಗೆ ಘಾಸಿ ಮಾಡುವುದರ ಬಗೆಗೆ ಆಯೋಜಿತ ಕಾರ್ಯತಂತ್ರವಿದೆ” ಎಂದು ತಮ್ಮ ಅಭಿಪ್ರಾಯವನ್ನು ಮಂಡಿಸಿದರು. ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್‌ ಈ ಹೇಳಿಕೆಯನ್ನು ಸಮರ್ಥಿಸಿದರು.

ಬಿಜೆಪಿ ಅಥವಾ ಜೆಡಿಎಸ್‌ ಪಕ್ಷಗಳ ಧರ್ಮಸ್ಥಳ ವಿಷಯ ಕುರಿತ ನಿಲುವು/ಧೋರಣೆ ನಿರೀಕ್ಷಿತವಾಗಿಯೇ ಇದೆ. ಆದರೆ ರಾಜ್ಯ ಸರ್ಕಾರದ ಉಪಮುಖ್ಯಮಂತ್ರಿ ಸ್ಥಾನವನ್ನು ಅಲಂಕರಿಸಿರುವ ಡಿ ಕೆ ಶಿವಕುಮಾರ್‌ ತಮ್ಮ ಸರ್ಕಾರವೇ ರಚಿಸಿರುವ SIT ಕಾರ್ಯ ನಿರ್ವಹಿಸುತ್ತಿರುವಾಗ ಈ ಪರಿಯ ಹೇಳಿಕೆಯನ್ನು ವಿಧಾನಸಭೆಯಲ್ಲಿ ನೀಡಿರುವುದು ಸರಿಯೇ? ಸಮಂಜಸವೇ? ಏನು ಸಂದೇಶವನ್ನು ಅವರು ತಲುಪಿಸುತ್ತಿದ್ದಾರೆ? ಅವರ ಉದ್ದೇಶವೇನು ಎಂಬ ಪ್ರಶ್ನೆಗಳು ಸ್ವಾಭಾವಿಕವಾಗಿಯೇ ಉದ್ಭವಿಸುತ್ತವೆ.

ಇದನ್ನೂ ಓದಿ ಯುಗಧರ್ಮ | ಮತ ಕಳ್ಳತನದ ಆರೋಪವನ್ನು ಹಗುರವಾಗಿ ಪರಿಗಣಿಸಬೇಡಿ

ಬಿಜೆಪಿ, ಜೆಡಿಎಸ್‌ ನಾಯಕರು ಮತ್ತು ಕಾಂಗ್ರೆಸ್‌ನ ಕೆಲವು ನೇತಾರರು, ಮತೀಯ ನಾಯಕರು SIT ಮೇಲೆ ಒತ್ತಡಗಳನ್ನು ಹೇರುತ್ತಿದ್ದಾರೆಯೇ ಎಂಬ ಪ್ರಶ್ನೆ ಉಂಟಾದರೆ ಅಚ್ಚರಿಪಡಬೇಕಿಲ್ಲ. ಇವರ್ಯಾರೂ ವೇದವಲ್ಲಿ(1979), ಪದ್ಮಲತಾ(1987), ಆನೆ ಮಾವುತ ನಾರಾಯಣ ಮತ್ತು ಆತನ ಸಹೋದರಿ ಯಮುನಾ(2012), ಸೌಜನ್ಯಾ(2012) ಮುಂತಾದವರ ಅತ್ಯಾಚಾರ, ಕೊಲೆಗಳು ಮತ್ತು ಅನೇಕ ಅಸಹಜ ಸಾವುಗಳ ಬಗೆಗೆ ಮಾತನಾಡಿದ್ದಾರೆಯೇ, ಅಪರಾಧಿಗಳನ್ನು ಕಂಡು ಹಿಡಿದು, ಅವರಿಗೆ ಕಾನೂನುರೀತ್ಯ ತಕ್ಕ ಶಿಕ್ಷೆಯನ್ನು ನೀಡಬೇಕು, ಸಂತ್ರಸ್ಥರ ಕುಟುಂಬದವರಿಗೆ ನ್ಯಾಯ ದೊರಕಬೇಕು ಎಂದು ಆಗ್ರಹಿಸಿದ್ದಾರೆಯೇ? ಇಂತಹ ಪ್ರಶ್ನೆಗಳಿಗೆ ಸ್ಪಷ್ಟವಾದ ಉತ್ತರ: “ಇಲ್ಲ“.

ಧರ್ಮಸ್ಥಳದಲ್ಲಿ ಹೂತುಹೋಗಿರುವ ಸತ್ಯಗಳು(ದೇಶಾದ್ಯಂತ ಇಂತಹವು ಅನೇಕ ಇವೆ) ಹೊರಬರದಿದ್ದರೇ, ಪ್ರಜಾಪ್ರಭುತ್ವದ ನಮ್ಮ ರಾಜಕೀಯ, ಕಾನೂನು ವ್ಯವಸ್ಥೆಗಳ ಬಗೆಗೆ ಸಾರ್ವಜನಿಕರಲ್ಲಿ ಉಳಿದಿರಬಹುದಾದ ನಂಬಿಕೆ ಹಾಗೂ ವಿಶ್ವಾಸ ಮಣ್ಣುಪಾಲಾಗುತ್ತವೆ. ಇದು ನಮ್ಮನ್ನಾಳುತ್ತಿರುವವರಿಗೆ ಪ್ರಶಸ್ತವಾದ ಬೆಳವಣಿಗೆಯಾಗಿ ಪರಿಣಮಿಸುತ್ತದೆ. ಅವರಿಗೆ ಬೇಕಿರುವುದು ಇದೇ.

WhatsApp Image 2025 11 17 at 4.18.26 PM
ಮ ಶ್ರೀ ಮುರಳಿ ಕೃಷ್ಣ
+ posts

ಬರಹಗಾರ, ಸಾಮಾಜಿಕ ಕಾರ್ಯಕರ್ತ

ಪೋಸ್ಟ್ ಹಂಚಿಕೊಳ್ಳಿ:

ಮ ಶ್ರೀ ಮುರಳಿ ಕೃಷ್ಣ
ಮ ಶ್ರೀ ಮುರಳಿ ಕೃಷ್ಣ
ಬರಹಗಾರ, ಸಾಮಾಜಿಕ ಕಾರ್ಯಕರ್ತ

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಕೇಂದ್ರವನ್ನು ಟೀಕಿಸಿದ ಸಾಮಾಜಿಕ ಮಾಧ್ಯಮ ಖಾತೆಗಳು ಮಂಗಮಾಯ: ಉಳಿಯುವುದು ಬರೀ ಮೋದಿಮಯ!

ಹೀಗೆ ಮೋದಿ ಸರ್ಕಾರವನ್ನು ವಿರೋಧಿಸಿದವರ ಖಾತೆಗಳು ಸಾಮಾಜಿಕ ಮಾಧ್ಯಮಗಳಿಂದ ಅಳಿಸಿ ಕೊನೆಗೆ...

ಒಂದು ಕಡೆ ಖಾದ್ಯತೈಲ ಬೆಲೆ ಏರಿಕೆ; ಮತ್ತೊಂದು ಕಡೆ ಕುಸುಬೆ ಬೆಲೆ ಕುಸಿತದಿಂದ ರೈತರಿಗೆ ಹೊರೆ

ಖಾದ್ಯತೈಲ ಬೆಲೆ ಏರಿಕೆ ಗ್ರಾಹಕರ ಜೇಬಿಗೆ ಭಾರವಾದರೆ, ಕುಸುಬೆ ಬೆಲೆ ಕುಸಿತ...

ಡಾಲರ್ V/s ಯುವಾನ್: ಕೊಲ್ಲಿ ಯುದ್ಧ ಕರೆನ್ಸಿ ಯುದ್ಧವಾಗಿ ಮಾರ್ಪಾಡಾಗುತ್ತಿದೆಯೇ?

ಅಕಸ್ಮಾತ್ ಈ ಯುದ್ಧ ಮುಂದುವರೆದರೆ, ಕೆಲವು ದೇಶಗಳು ಡಾಲರ್ ಬದಲಿಗೆ ಯುವಾನ್...