ಗಿಡ ನೆಡುವುದರಿಂದಲೂ ಹವಾಮಾನ ವೈಪರೀತ್ಯ ಉಂಟಾಗುತ್ತದೆ, ನಂಬುತ್ತೀರಾ?

Date:

ಗಿಡ ನೆಡುವುದರಿಂದಲೂ ಕೆಲವೊಂದು ಸಮಸ್ಯೆಗಳು ಆಗುತ್ತಿವೆ. ಗಿಡವೂ ಹವಾಮಾನ ವೈಪರೀತ್ಯಕ್ಕೆ ಕಾರಣವಾಗುತ್ತಿದೆ ಎಂಬುದನ್ನು ಈ ಅಧ್ಯಯನ ವರದಿ ಬಹಿರಂಗಪಡಿಸಿದೆ. 

ಒಂದು ಮರ ಕಡಿದರೆ ನಾಲ್ಕು ಗಿಡ ನೆಡಿ; ಹಸಿರೇ ನಮ್ಮ ಉಸಿರು; ಆಮ್ಲಜನಕದ ಮೂಲ- ಮೊದಲಾದ ವಿಚಾರಗಳನ್ನು ಹಲವು ವರ್ಷಗಳಿಂದ ಪರಿಸರವಾದಿಗಳು ಸಾರುತ್ತಾ ಬರುತ್ತಿದ್ದಾರೆ. ಸದ್ಯ ಜಾಗತಿಕವಾಗಿ ಕಾಡುತ್ತಿರುವ ಹವಾಮಾನ ವೈಪರೀತ್ಯಕ್ಕೆ ಅವೈಜ್ಞಾನಿಕ, ಪರಿಸರ ವಿರೋಧಿ ಅಭಿವೃದ್ಧಿಯೇ ಕಾರಣ. ತೀರಾ ಹದಗೆಟ್ಟಿರುವ ಈ ಸ್ಥಿತಿಗೆ ಆದಷ್ಟು ಗಿಡಗಳನ್ನು ನೆಡುವುದು, ಬೆಳೆಸುವುದೊಂದೇ ಪರಿಹಾರ ಎಂಬ ಮಾತು ಜಗಜ್ಜಾಹೀರು. ಆದರೆ ಮರಗಳು ನಮ್ಮನ್ನು ಉಳಿಸಬಲ್ಲವೇ? ಖಂಡಿತವಾಗಿಯೂ ಇಲ್ಲ. ನಮ್ಮ ಪರಿಸರ ಅಂತಹ ದುಃಸ್ಥಿತಿಗೆ ತಲುಪಿದೆ, ಅಧಃಪತನದತ್ತ ಮುಖ ಮಾಡಿದೆ. ಗಿಡ ನೆಡುವುದರಿಂದಲೂ ಹವಾಮಾನ ವೈಪರೀತ್ಯ ಉಂಟಾಗುತ್ತದೆ ಎನ್ನುತ್ತದೆ ಅಧ್ಯಯನ ವರದಿ.

ಹಸಿರೇ ಉಸಿರು ನಿಜ. ಆದರೆ ಹಸಿರು ಬೆಳೆಸುವ ಜೊತೆಯಲ್ಲೇ ಪರಿಸರದ ಸಮತೋಲನ ಕಾಯ್ದುಕೊಳ್ಳುವತ್ತಲೂ ಗಮನ ಹರಿಸುವುದು ಅತ್ಯಗತ್ಯ. ಚೀನಾ ಮೂಲದ ವಿಜ್ಞಾನಿಗಳ ತಂಡವೊಂದು ಈ ಸಂಬಂಧ ಸಂಶೋಧನೆಯನ್ನು ಮಾಡಿದೆ. ಹೊಸದಾಗಿ ಅರಣ್ಯೀಕರಣ ಮತ್ತು ಈಗಾಗಲೇ ಅರಣ್ಯವಿದ್ದ ಸ್ಥಳದಲ್ಲಿ ಮರು ಅರಣ್ಯೀಕರಣ(ಮತ್ತೆ ಗಿಡ ನೆಟ್ಟು ಬೆಳೆಸುವುದು) ಮಾಡುವುದರ ಕುರಿತಾಗಿ ಸಂಶೋಧನೆಯನ್ನು ಮಾಡಿದ್ದು, ಈ ಹಿಂದಿನಿಗಿಂತ ಭಿನ್ನವಾದ, ಆಶ್ಚರ್ಯಕರವಾದ ಫಲಿತಾಂಶವನ್ನು ಕಂಡುಕೊಂಡಿದೆ.

ಇದನ್ನು ಓದಿದ್ದೀರಾ? ಹಸಿರಾಗುತ್ತಿದೆ ಅಂಟಾರ್ಟಿಕ; ಸಕಲ ಜೀವ ಸಂಕುಲಕ್ಕೆ ಅಪಾಯದ ಸಂಕೇತ!

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ಗಿಡ ನೆಡುವುದರಿಂದಲೂ ಕೆಲವೊಂದು ಸಮಸ್ಯೆಗಳು ಆಗುತ್ತಿವೆ. ಗಿಡವೂ ಹವಾಮಾನ ವೈಪರೀತ್ಯಕ್ಕೆ ಕಾರಣವಾಗುತ್ತಿದೆ ಎಂಬುದನ್ನು ಈ ಅಧ್ಯಯನ ವರದಿ ಬಹಿರಂಗಪಡಿಸಿದೆ. ಭೂಮಿಯ ಎಲ್ಲಾ ಪ್ರದೇಶದ ಮಣ್ಣು, ವಾತಾವರಣ ಗಿಡಗಳ ಬೆಳವಣಿಗೆಗೆ ಸಹಾಯಕವಾಗಿರದು. ಭೂಮಿಗೂ ಹವಾಮಾನ ಬದಲಾವಣೆಯಾಗುವಂತೆ ಗಿಡಗಳು ಹೊಂದಿಕೊಳ್ಳುವ ಪರಿಸರಕ್ಕೂ ವ್ಯತ್ಯಾಸಗಳಿವೆ. ಉತ್ತರ ಭಾರತದ ಮಂದಿ ದಕ್ಷಿಣ ಭಾರತದಲ್ಲಿ ಹೊಂದಿಕೊಳ್ಳುವುದು ಹೇಗೆ ಕಷ್ಟವೋ ಹಾಗೆಯೇ ಗಿಡಗಳಿಗೂ ಹೊಂದಿಕೊಳ್ಳುವುದು ಕಷ್ಟವಾಗುತ್ತದೆ. ಮಾನವರು ಕೊಂಚ ಸಮಯ ತೆಗೆದುಕೊಂಡು ಹೊಂದಾಣಿಕೆ ಮಾಡಿಕೊಳ್ಳಬಲ್ಲರು, ಆದರೆ ಗಿಡಗಳು ಹಾಗಲ್ಲ. ನಮಗೆಲ್ಲರಿಗೂ ತಿಳಿದಂತೆ ಜೀವವನ್ನೇ ಕಳೆದುಕೊಳ್ಳುತ್ತವೆ. ಅದಕ್ಕೂ ಅಧಿಕವಾಗಿ ಪರಿಸರಕ್ಕೂ ಹಾನಿ ಉಂಟು ಮಾಡುತ್ತವೆ!

ಗಿಡ ನೆಡುವುದೂ ಸಮಸ್ಯೆ ಹೇಗೆ?

ವರ್ಷಕೊಮ್ಮೆ ವನಮಹೋತ್ಸವ ನೆಪದಲ್ಲಿ ಅಲ್ಲಲ್ಲಿ ಗಿಡ ನೆಡುವ ನಾಟಕ ಭಾರತದಲ್ಲಿ ನಡೆದರೆ, ಇನ್ನೂ ಹಲವು ದೇಶಗಳಲ್ಲಿ ಗಿಡ ನೆಡುವ ಅಭಿಯಾನ ನಡೆಸಲಾಗುತ್ತದೆ. ಈ ವೇಳೆ ಯಾವುದೋ ಗಿಡವನ್ನು ಇನ್ಯಾವುದೋ ಗಿಡದ ಬಳಿ ನೆಡಲಾಗುತ್ತದೆ. ಗಿಡ ನೆಟ್ಟರೆ ಪರಿಸರಕ್ಕೆ ಉತ್ತಮ ಎಂಬ ಅಭಿಪ್ರಾಯ ಒಂದೆಡೆಯಾದರೆ, ಇನ್ನೊಂದೆಡೆ ಅದೊಂದು ‘ಫ್ಯಾಷನ್’ ಆಗಿದೆ. ಈ ವೇಳೆ ಆಗುವ ಎಡವಟ್ಟುಗಳು ಸಾಮಾನ್ಯವಾಗಿ ಜನರಿಗೆ ತಿಳಿದಿಲ್ಲ. ಗಿಡ ನೆಟ್ಟರೂ ಪರಿಸರಕ್ಕೆ ದುಷ್ಪರಿಣಾಮ ಆಗುತ್ತದೆ. ಅದು ಹೇಗೆ ಎಂಬುದನ್ನು ಅಧ್ಯಯನ ವರದಿ ವಿವರಿಸಿದೆ.

ಯೂಕಲಿಪ್ಟಸ್ (Eucalyptus) ಮತ್ತು ಸ್ಥಳೀಯ ಗಿಡಗಳನ್ನು ಜೊತೆಯಾಗಿ ನೆಟ್ಟರೆ, ಯೂಕಲಿಪ್ಟಸ್ ಮಣ್ಣಿನಿಂದ ಹೆಚ್ಚಿನ ಪೋಷಕಾಂಶಗಳು ಮತ್ತು ನೀರನ್ನು ಹೀರಿಕೊಳ್ಳುತ್ತದೆ. ಇದರಿಂದಾಗಿ ಇತರ ಗಿಡಗಳ ಬೆಳವಣಿಗೆ ಕುಂಠಿತವಾಗುತ್ತದೆ. ಇಂದೇ ರೀತಿಯ ಸ್ಥಿತಿ ಜಾಗತಿಕವಾಗಿ ಹೆಚ್ಚಾಗುತ್ತಿದೆ. ಸ್ಥಳೀಯ ಪರಿಸರಕ್ಕೆ ಹೊಂದಿಕೊಳ್ಳದ ಗಿಡಗಳು ಮಣ್ಣಿನ ಗುಣಮಟ್ಟವನ್ನು ಹಾಳುಗೆಡವುತ್ತಿದೆ, ನೀರನ್ನು ಇಂಗಿಸುತ್ತಿದೆ, ಹಿಮ ಕರಗಿಸುತ್ತಿದೆ, ಒಟ್ಟಾರೆಯಾಗಿ ಇತರ ಜೀವಿಗಳ ಮೇಲೆ ನಕರಾತ್ಮಕ ಪರಿಣಾಮ ಬೀರಬಹುದು. ನೀರನ್ನು ಒಂದೇ ಗಿಡ ಹೀರಿ ಕೃಷಿ ಮತ್ತು ಇತರೆ ಜೀವಿಗಳಿಗೆ ಹಾನಿ ಉಂಟಾಗಬಹುದು.

ಈವರೆಗೂ ಹಸಿರು ಬೆಳೆಯದ ಪ್ರದೇಶದಲ್ಲಿ ಹಸಿರು ಬೆಳೆದಾಗ ಸುತ್ತ ಪರಿಸರವೂ ಬದಲಾಗುತ್ತದೆ. ಹಿಮ ವಾತಾವರಣದಲ್ಲೇ ಬೆಳೆದ ಪ್ರಾಣಿ, ಪಕ್ಷಿಗಳು, ಇತರೆ ಜೀವ ಸಂಕುಲಗಳು ಈ ಬದಲಾದ ಪರಿಸರಕ್ಕೆ ಹೊಂದಿಕೊಳ್ಳಲಾಗದೆ ಅಳಿವು ಕಾಣುತ್ತದೆ. ಹಿಮ ಪ್ರದೇಶದಲ್ಲಿ ಗಿಡ ಬೆಳವಣಿಗೆ ಎಂದರೆ ಸಾಮಾನ್ಯವಾಗಿ ಹಿಮವಿದ್ದ ಪ್ರದೇಶ ಕರಗಿ ಹರಿದು ಹೋಗುತ್ತಿದೆ ಎಂದರ್ಥ. ಅಂದರೆ ಇನ್ನೊಂದೆಡೆ ಹಿಮವೂ ನೀರಾಗುತ್ತಾ ಸಾಗುತ್ತದೆ. ಭೂಮಿಯಲ್ಲಿ ನೀರಿನ ಪ್ರಮಾಣ ಹೆಚ್ಚಾಗಿ ಅಪಾಯ ಉಂಟಾಗುತ್ತದೆ.

ಅಧ್ಯಯನ ವರದಿ ಪ್ರಕಾರ ಹಿಮಭರಿತ ಪ್ರದೇಶಗಳಲ್ಲಿ ಗಿಡಗಳನ್ನು ನೆಡುವುದರಿಂದ ಗಿಡದ ಮೇಲ್ಮೈ ಕಪ್ಪಾಗುತ್ತದೆ. ಏಕೆಂದರೆ ಗಿಡಗಳು ಹಿಮಕ್ಕಿಂತ ಗಾಢವಾಗಿರುತ್ತವೆ, ವಿಸ್ತಾರವಾಗಿ ಹರಡುತ್ತವೆ. ಶಾಖವನ್ನು ಹೀರಿಕೊಳ್ಳುತ್ತವೆ. ಇದರಿಂದಾಗಿ ಭೂಮಿಯ ತಾಪಮಾನ ಹೆಚ್ಚಾಗುತ್ತದೆ. ಇದು ವಾಸ್ತವವಾಗಿ ಮತ್ತಷ್ಟು ತಾಪಮಾನ ಏರಿಕೆಗೆ ಕಾರಣವಾಗಬಹುದು. ಭೂಮಿಯ ನೀರಿನ ಅಂಶವನ್ನೆಲ್ಲಾ ಮರಗಳು ಬೆಳೆಯಲು ಹೀರಿಕೊಳ್ಳಬಹುದು. ಇದು ಖಂಡಿತವಾಗಿಯೂ ಜೀವವೈವಿಧ್ಯತೆಗೆ ಕಂಟಕವಾಗಿ ಪರಿಣಮಿಸುತ್ತದೆ.

ತಂಪಾದ, ಹಿಮನದಿಗಳು ಇರುವ ಪ್ರದೇಶದಲ್ಲಿ ಗಿಡಗಳನ್ನು ನೆಡುವುದು ಅಥವಾ ಗಿಡಗಳನ್ನು ಬೆಳೆಯುವುದು ಪರಿಸರದ ಅಸಮತೋಲನಕ್ಕೆ ಕಾರಣವಾಗಲಿದೆ. ಗಿಡಗಳು ಮರವಾಗಿ ಬೆಳೆಯುತ್ತಾ ಸಾಗುವಾಗ ಬೇರುಗಳು ಹಿಮನದಿಯ ಸಮೀಪದ ಮಣ್ಣನ್ನು ದುರ್ಬಲಗೊಳಿಸುತ್ತದೆ. ಇದರಿಂದಾಗಿ ಭೂಕುಸಿತ, ಸವೆತದಂತಹ ಪ್ರಕೃತಿ ವಿಕೋಪಗಳು ಸಂಭವಿಸಬಹುದು.

ಸೂಕ್ತ ಭೂಮಿಯ ಪರೀಕ್ಷೆ ಅತ್ಯಗತ್ಯ

ಗಿಡ ನೆಡುವುದೆಂದರೆ ಎಲ್ಲಿ ಬೇಕೋ ಅಲ್ಲಿ ನೆಡುವುದಲ್ಲ. ಅದಕ್ಕೂ ಒಂದು ಮಾನದಂಡವಿದೆ. ಗಿಡ ಬೆಳೆಯಲು ಸೂಕ್ತವಾದ ಭೂಮಿ ಯಾವುದು ಎಂಬ ಪರೀಕ್ಷೆ ಅಗತ್ಯ. ಭತ್ತ, ರಾಗಿ, ಗೋಧಿ ಬೆಳೆ ಬೆಳೆಯಲೂ ಸೂಕ್ತ ಭೂಮಿ ಹೇಗೆ ಮುಖ್ಯವೋ ಹಾಗೆಯೇ ಯಾವುದೇ ಗಿಡ ನೆಡಲು ಆ ವಾತಾವರಣ ಹೇಗಿದೆ ಎಂಬುದು ಮುಖ್ಯ. ಅದರಂತೆ ಈ ಹಿಂದೆ ನಡೆಸಿದ ಪರೀಕ್ಷೆಯಲ್ಲಿ ಗಿಡಗಳನ್ನು ಬೆಳೆಸಲು ಸೂಕ್ತವೆಂದೆನಿಸಿಕೊಂಡಿದ್ದ 200 ಮಿಲಿಯನ್‌ನಿಂದ 2,000 ಮಿಲಿಯನ್ ಹೆಕ್ಟೇರ್ ಪ್ರದೇಶ ಈಗ ಯೋಗ್ಯವಾದ ಭೂಮಿಯಾಗಿ ಉಳಿದಿಲ್ಲ. ಅಧ್ಯಯನದ ಪ್ರಕಾರ ವಿಶ್ವದಲ್ಲಿ ಸದ್ಯ ಅರಣ್ಯೀಕರಣಕ್ಕೆ ಸೂಕ್ತವಾದ ಭೂಮಿ 389 ಮಿಲಿಯನ್ ಹೆಕ್ಟೇರ್‌ಗಳು ಮಾತ್ರ.

ಈ ಪ್ರದೇಶದಲ್ಲಿ ಗಿಡಗಳನ್ನು ನೆಟ್ಟು ಬೆಳೆಸಿದರೆ 2050ರ ವೇಳೆಗೆ ಪರಿಸರದಲ್ಲಿರುವ ಇಂಗಾಲದ ಪ್ರಮಾಣ ಸುಮಾರು 40 ಬಿಲಿಯನ್ ಟನ್‌ಗಳಷ್ಟಾಗುತ್ತದೆ. ಆದರೆ ಈ ಸಣ್ಣ ಭೂಪ್ರದೇಶದಲ್ಲಿಯೂ, ಪ್ರಸ್ತುತ ಸುಮಾರು 120 ಮಿಲಿಯನ್ ಹೆಕ್ಟೇರ್‌ಗಳನ್ನು ಮಾತ್ರ ಅರಣ್ಯೀಕರಣಕ್ಕಾಗಿ ಮೀಸಲಿಡಲಾಗಿದೆ. ಇದರಿಂದಾಗಿ 2050ರ ವೇಳೆಗೆ ಪರಿಸರದಲ್ಲಿ ಕೇವಲ 12.5 ಬಿಲಿಯನ್ ಟನ್ ಇಂಗಾಲವಷ್ಟೇ ಇರುತ್ತದೆ. ಗಾಳಿಯಲ್ಲಿ ಆಮ್ಲಜನಕದಂತೆಯೇ ಕಾರ್ಬನ್ ಕೂಡಾ ಮುಖ್ಯ. ಹವಾಮಾನ ಬದಲಾವಣೆಯನ್ನು ತಗ್ಗಿಸುವ, ಗಾಳಿಯ ಗುಣಮಟ್ಟ ಸುಧಾರಣೆ ಮಾಡುವ, ಜೈವಿಕ ವೈವಿಧ್ಯತೆಯ ರಕ್ಷಣೆಗೆ ಸಹಕಾರಿಯಾಗಿರುವ ಕಾರ್ಬನ್ ಮಟ್ಟ ಸಮತೋಲನವೂ ಅತ್ಯಗತ್ಯ.

ಇದನ್ನು ಓದಿದ್ದೀರಾ? ಜಾಗತಿಕ ತಾಪಮಾನ ಏರಿಕೆ: ಬಿಸಿಗಾಳಿಗೆ ಕೈಗೊಳ್ಳಬೇಕಾದ ಮುನ್ನೆಚ್ಚರಿಕಾ ಕ್ರಮಗಳೇನು?

ಮರ ನೆಡುವುದು ಪರಿಸರ ಸಮತೋಲನಕ್ಕೆ ಸಹಾಯ ಮಾಡಬಲ್ಲದು. ಆದರೆ ಜಾಗತಿಕ ತಾಪಮಾನವನ್ನು +1.5°C ಅಥವಾ +2°C ಗಿಂತ ಕಡಿಮೆ ಇರಿಸಬೇಕು ಎಂಬ ಗುರಿಯನ್ನು ತಲುಪುವುದು ಬರೀ ಗಿಡ ನೆಟ್ಟರೆ ಸಾಧ್ಯವಾಗದು. ಜೊತೆ ಜೊತೆಗೆ ಹೊಗೆ ಹೊರಸೂಸುವಿಕೆಯನ್ನೂ ಕಡಿಮೆ ಮಾಡುವುದು ಆದ್ಯತೆಯಾಗಿರಬೇಕು. ಅಂದರೆ ವಾಹನದ ಹೊಗೆ, ಕಾರ್ಖಾನೆ ಹೊಗೆ ಹೊರಸೂಸುವಿಕೆ ನಿಯಂತ್ರಿಸಬೇಕು. ಎರಡೂ ಜೊತೆಯಲ್ಲಿ ಸಾಗಬೇಕಾದ ಪ್ರಕ್ರಿಯೆ. ಅದರಲ್ಲೂ ಮುಖ್ಯವಾಗಿ ಬ್ರೆಜಿಲ್, ಕೊಲಂಬಿಯಾ, ಚೀನಾ ಮತ್ತು ಭಾರತದಲ್ಲಿ ಅರಣ್ಯೀಕರಣಕ್ಕೆ ಅಧಿಕ ಪ್ರೋತ್ಸಾಹ ನೀಡಬೇಕು. ಈ ಪ್ರದೇಶಗಳಲ್ಲಿ ಗಿಡ ಮರವಾಗಿ ಶೀಘ್ರವಾಗಿ ಬೆಳೆಯಬಲ್ಲದು. ಆದರೆ ಅಮೆರಿಕ, ರಷ್ಯಾದಲ್ಲಾದರೆ ಬೆಳವಣಿಗೆ ಪ್ರಕ್ರಿಯೆ ಅತಿ ನಿಧಾನ ಎಂಬ ಅಭಿಪ್ರಾಯ ತಜ್ಞರದ್ದು.

ಒಂದೆಡೆ ಅಂಟಾರ್ಟಿಕ ಹಸಿರಾಗುತ್ತಿದೆ. ಹಸಿರು ಪರಿಸರಕ್ಕೆ ಉತ್ತಮವಾದರೂ ಹಿಮ ಪ್ರದೇಶ ಹಸಿರಾಗುವುದು ಎಂದಿಗೂ ಒಳ್ಳೆಯದಲ್ಲ ಎನ್ನುತ್ತಾರೆ ತಜ್ಞರು. ಸದ್ಯ ಪರಿಸರದ ಸ್ಥಿತಿ ನಾವು ಎಷ್ಟು ರಿಪೇರಿ ಮಾಡಿದರೂ ಸರಿಯಾಗದ ಹಳೇ ವಾಹನದಂತೆ. ಮಾನವ ಮಾಡಿದ, ಮಾಡುತ್ತಿರುವ ಹಾನಿಯನ್ನು ಸರಿಮಾಡಲು ಎಷ್ಟೇ ಪ್ರಯತ್ನ ಪಟ್ಟರೂ ಸುಟ್ಟ ಗಾಯ ಮಾಯದು.

WhatsApp Image 2025 11 17 at 4.20.34 PM
+ posts

ಪತ್ರಕರ್ತೆ, 2019ರಿಂದ ಪತ್ರಿಕೋದ್ಯಮವೇ ಬದುಕು. ರಾಜಕೀಯ, ಬ್ಯುಜಿನೆಸ್‌ ಸುದ್ದಿಗಳಲ್ಲಿ ಆಸಕ್ತಿ.

ಪೋಸ್ಟ್ ಹಂಚಿಕೊಳ್ಳಿ:

ಮಯೂರಿ ಬೋಳಾರ್
ಮಯೂರಿ ಬೋಳಾರ್
ಪತ್ರಕರ್ತೆ, 2019ರಿಂದ ಪತ್ರಿಕೋದ್ಯಮವೇ ಬದುಕು. ರಾಜಕೀಯ, ಬ್ಯುಜಿನೆಸ್‌ ಸುದ್ದಿಗಳಲ್ಲಿ ಆಸಕ್ತಿ.

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಕೇಂದ್ರವನ್ನು ಟೀಕಿಸಿದ ಸಾಮಾಜಿಕ ಮಾಧ್ಯಮ ಖಾತೆಗಳು ಮಂಗಮಾಯ: ಉಳಿಯುವುದು ಬರೀ ಮೋದಿಮಯ!

ಹೀಗೆ ಮೋದಿ ಸರ್ಕಾರವನ್ನು ವಿರೋಧಿಸಿದವರ ಖಾತೆಗಳು ಸಾಮಾಜಿಕ ಮಾಧ್ಯಮಗಳಿಂದ ಅಳಿಸಿ ಕೊನೆಗೆ...

ಒಂದು ಕಡೆ ಖಾದ್ಯತೈಲ ಬೆಲೆ ಏರಿಕೆ; ಮತ್ತೊಂದು ಕಡೆ ಕುಸುಬೆ ಬೆಲೆ ಕುಸಿತದಿಂದ ರೈತರಿಗೆ ಹೊರೆ

ಖಾದ್ಯತೈಲ ಬೆಲೆ ಏರಿಕೆ ಗ್ರಾಹಕರ ಜೇಬಿಗೆ ಭಾರವಾದರೆ, ಕುಸುಬೆ ಬೆಲೆ ಕುಸಿತ...

ಡಾಲರ್ V/s ಯುವಾನ್: ಕೊಲ್ಲಿ ಯುದ್ಧ ಕರೆನ್ಸಿ ಯುದ್ಧವಾಗಿ ಮಾರ್ಪಾಡಾಗುತ್ತಿದೆಯೇ?

ಅಕಸ್ಮಾತ್ ಈ ಯುದ್ಧ ಮುಂದುವರೆದರೆ, ಕೆಲವು ದೇಶಗಳು ಡಾಲರ್ ಬದಲಿಗೆ ಯುವಾನ್...