ವಾರಕ್ಕೆ 80 ತಾಸು ದುಡಿಯುತ್ತಿರುವ ಮಹಿಳೆಯರು! AI ಬಂದರೂ ನಾರಿಗಿಲ್ಲ ವೇತನರಹಿತ ಕೆಲಸದಿಂದ ಮುಕ್ತಿ

Date:

ಬಹುತೇಕ ಎಲ್ಲ ವಯೋಮಾನದ ಮಹಿಳೆಯರ ಕೆಲಸದ ಸಮಯವು ಪುರುಷರಿಗಿಂತ ಅಧಿಕವಾಗಿದೆ. ಪುರುಷರಿಗೆ ಇರುವಷ್ಟೇ ಮಹಿಳೆಯರಿಗೂ ದಿನದಲ್ಲಿ 24 ತಾಸುಗಳು ಇರುವುದು. ಆದರೆ ಮಹಿಳೆಯರು ಎರಡು ಪಾಳಿಯಲ್ಲಿ ಕೆಲಸ ಮಾಡಿ, ಅತಿ ಕಡಿಮೆ ಅವಧಿ ನಿದ್ರಿಸುತ್ತಾರೆ. 25–39 ವಯಸ್ಸಿನ ಮಹಿಳೆಯರು ಪುರುಷರಿಗಿಂತ ಎರಡು ಪಟ್ಟು ಹೆಚ್ಚು ಸಮಯವನ್ನು ವೇತನರಹಿತವಾಗಿ ಮಕ್ಕಳ, ವೃದ್ಧರ ಆರೈಕೆಯಲ್ಲಿ ಕಳೆಯುತ್ತಾರೆ.

ನಾವೀಗ 2025ರ ಅಂತ್ಯದಲ್ಲಿದ್ದೇವೆ. ಈ ವರ್ಷವೂ ಎಂದಿನಂತೆ ಕಾರ್ಮಿಕರ ಬದುಕಿನಲ್ಲಿ ಆಘಾತಕಾರಿ ಬದಲಾವಣೆಯನ್ನು ತಂದಿದೆ. ಭವಿಷ್ಯದಲ್ಲಿ ಉದ್ಯೋಗ ಭದ್ರತೆಗಿರುವ ಅಪಾಯದ ಬಗ್ಗೆ ಕಾರ್ಮಿಕರು ಚಿಂತನೆ ನಡೆಸುತ್ತಿದ್ದಾರೆ. ಒಂದೆಡೆ ಕೃತಕ ಬುದ್ಧಿಮತ್ತೆ (AI) ಬಹುತೇಕ ಕ್ಷೇತ್ರಗಳಲ್ಲಿ ಉದ್ಯೋಗಗಳನ್ನು ಆಕ್ರಮಿಸಿಕೊಳ್ಳುತ್ತಿರುವಾಗ ನಮ್ಮ ಉದ್ಯೋಗಕ್ಕೆ ಕುತ್ತು ಬರುವ ಆತಂಕ ಯುವಸಮುದಾಯದ್ದು. ಇನ್ನೊಂದೆಡೆ ವಾರಕ್ಕೆ 80 ತಾಸು ಕೆಲಸ ಮಾಡುವುದು ಕಡ್ಡಾಯವಾಗಬಹುದೇ? ಎಂಬ ಭೀತಿ. ಜತೆಗೆ ಕಚೇರಿ ಸಮಯದ ನಂತರ ಸಂಪರ್ಕ ಕಡಿತಗೊಳಿಸುವ ಹಕ್ಕು ಜಾರಿಯಾಗಬಹುದೇ ಎಂಬ ಕುತೂಹಲ. ಆದರೆ, ದೇಶದಲ್ಲಿ ಈಗಾಗಲೇ ಮಹಿಳೆಯರು ವಾರಕ್ಕೆ 80 ತಾಸು ದುಡಿಯುತ್ತಿದ್ದಾರೆ ಮತ್ತು AI ಬಂದರೂ ಹೆಣ್ಣುಮಕ್ಕಳಿಗೆ ಅಡುಗೆ, ಸ್ವಚ್ಛತೆ, ಆರೈಕೆ ಮೊದಲಾದ ವೇತನರಹಿತ ಕೆಲಸದಿಂದ ಮುಕ್ತಿ ಸಿಕ್ಕಿಲ್ಲ!

ಇತ್ತೀಚಿನ ಸಮಯ ಬಳಕೆಯ ಸಮೀಕ್ಷೆ (2024) -Time Use Survey (2024) ಈ ವಾಸ್ತವವನ್ನು ಬಿಚ್ಚಿಟ್ಟಿದೆ. ದೇಶದಲ್ಲಿ ಮಹಿಳೆಯರನ್ನು ಹೇಗೆ ವೇತನರಹಿತವಾಗಿ ದುಡಿಸಲಾಗುತ್ತಿದೆ ಎಂಬುದನ್ನು ಈ ಸಮೀಕ್ಷೆ ಬಹಿರಂಗಪಡಿಸಿದೆ. ಸಮೀಕ್ಷೆಗಳ ಪ್ರಕಾರ ದೇಶದಲ್ಲಿ ಶೇ.40ರಷ್ಟು ಮಹಿಳೆಯರು ಈಗ ಕಾರ್ಯನಿರ್ವಹಿಸುತ್ತಿದ್ದಾರೆ. ಕೇವಲ ವೇತನ ಸಿಗುವ ಕೆಲಸ ಮಾತ್ರವಲ್ಲ, ವೇತನವಿಲ್ಲದೆಯೇ ಎರಡನೇ ಪಾಳಿಯಲ್ಲಿ ಕೆಲಸ ಮಾಡುತ್ತಿದ್ದಾರೆ. ಅಧಿಕ ವೇತನದ ಉದ್ಯೋಗವನ್ನು ಮಾಡುವ ಮಹಿಳೆಯರೂ ಪಾವತಿ ಇಲ್ಲದೆ ದುಡಿಯುವ ಪರ್ಯಾಯ ಕೆಲಸ ಕಡಿಮೆಯಾಗುತ್ತಿಲ್ಲ. ಇದರಿಂದಾಗಿಯೇ ಕೆಲಸ ಮಾಡುವ ಮಹಿಳೆಯರಿಗೆ ವೈಯಕ್ತಿಕ ಅಭಿವೃದ್ಧಿ, ವಿರಾಮ ಅಥವಾ ವಿಶ್ರಾಂತಿಗಾಗಿ ಅತಿ ಕಡಿಮೆ ಸಮಯ ಉಳಿಯುತ್ತದೆ.

ಇದನ್ನು ಓದಿದ್ದೀರಾ? ಶೇ.97.5 ಪ್ರಕರಣಗಳ ವಿಚಾರಣೆ ಬಾಕಿ: ಆ್ಯಸಿಡ್ ದಾಳಿ ಸಂತ್ರಸ್ತರಿಗೆ ಬೇಕಾಗಿರುವುದು ಸಹಾನುಭೂತಿಯಲ್ಲ ನ್ಯಾಯ

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ಇನ್ನು ಸಮೀಕ್ಷೆ ಹೇಳುವಂತೆ ಮಹಿಳೆಯರು ಮತ್ತು ಪುರುಷರ ಕೆಲಸದ ಸಮಯದಲ್ಲಿ ತೀವ್ರ ಅಸಮತೋಲನವಿದೆ. ದುಡಿಯುವ ಮಹಿಳೆಯರು ದಿನಕ್ಕೆ ಸುಮಾರು 9.6 ಗಂಟೆಗಳ ಕಾಲ ಸಂಭಾವನೆ ಮತ್ತು ಸಂಭಾವನೆ ಇಲ್ಲದೆ ಕೆಲಸದಲ್ಲಿ ಕಳೆಯುತ್ತಿದ್ದಾರೆ. ಈ ಪೈಕಿ ವೃದ್ಧರು, ಮಕ್ಕಳ ಆರೈಕೆ, ಅಡುಗೆ ಸ್ವಚ್ಛತೆಗಾಗಿಯೇ ಹೆಚ್ಚು ಸಮಯ ವ್ಯಯಿಸುತ್ತಿದ್ದಾರೆ. ಅದೂ 25ರಿಂದ 39 ವರ್ಷಗಳಲ್ಲಿ ಈ ಹೊರೆ ಹೆಚ್ಚಾಗುತ್ತದೆ. ವಾರದ ಕೆಲಸದ ಅವಧಿ 70 ಗಂಟೆಗೂ ಅಧಿಕವಾಗುತ್ತದೆ.

ಇದಕ್ಕೆ ವ್ಯತಿರಿಕ್ತವಾಗಿ ಪುರುಷರು ಮಹಿಳೆಯರಿಗಿಂತ ಕಡಿಮೆ ಕೆಲಸದ ಸಮಯವನ್ನು ಹೊಂದಿದ್ದಾರೆ. ದಿನಕ್ಕೆ ಸುಮಾರು 8.6 ಗಂಟೆಗಳ ಕಾಲ ಸಂಭಾವನೆ ಇಲ್ಲದ ಮತ್ತು ಸಂಭಾವನೆ ಪಡೆಯುವ ಕೆಲಸ ಮಾಡುತ್ತಿದ್ದಾರೆ. ಇದರಲ್ಲಿ ಶೇಕಡ 80ರಷ್ಟು ವೇತನಸಹಿತ ಕೆಲಸವೇ ಆಗಿದೆ. ವೇತನರಹಿತ ಕೆಲಸ ಅತಿ ಕಡಿಮೆಯಾಗಿದೆ. ವಾರಕ್ಕೆ 54ರಿಂದ 60 ಗಂಟೆಗಳ ಕಾಲ ಪುರುಷರು ಕೆಲಸ ಮಾಡುತ್ತಾರೆ.

ಬಹುತೇಕ ಎಲ್ಲ ವಯೋಮಾನದ ಮಹಿಳೆಯರ ಕೆಲಸದ ಸಮಯವು ಪುರುಷರಿಗಿಂತ ಅಧಿಕವಾಗಿದೆ. ಪುರುಷರಿಗೆ ಇರುವಷ್ಟೇ ಮಹಿಳೆಯರಿಗೂ ದಿನದಲ್ಲಿ 24 ತಾಸುಗಳು ಇರುವುದು. ಆದರೆ ಮಹಿಳೆಯರು ಎರಡು ಪಾಳಿಯಲ್ಲಿ ಕೆಲಸ ಮಾಡಿ, ಅತಿ ಕಡಿಮೆ ಅವಧಿ ನಿದ್ರಿಸುತ್ತಾರೆ. 25–39 ವಯಸ್ಸಿನ ಮಹಿಳೆಯರು ಪುರುಷರಿಗಿಂತ ಎರಡು ಪಟ್ಟು ಹೆಚ್ಚು ಸಮಯವನ್ನು ವೇತನರಹಿತವಾಗಿ ಮಕ್ಕಳ, ವೃದ್ಧರ ಆರೈಕೆಯಲ್ಲಿ ಕಳೆಯುತ್ತಾರೆ. ಪ್ರತಿ ವಾರ ಪುರುಷರು ಸ್ವ-ಅಭಿವೃದ್ಧಿಗಾಗಿ ಮೀಸಲಿಡುವ ಅಥವಾ ಕಳೆಯುವ ಸಮಯಕ್ಕಿಂತ 10 ಗಂಟೆಗಳಷ್ಟು ಕಡಿಮೆ ಸಮಯವನ್ನು ಮಹಿಳೆಯರು ಸ್ವ-ಅಭಿವೃದ್ಧಿ ಚಟುವಟಿಕೆಗಳಿಗಾಗಿ ಕಳೆಯುತ್ತಾರೆ.

ಇದನ್ನು ಓದಿದ್ದೀರಾ? ಅತ್ಯಾಚಾರಕ್ಕೆ ಒಳಗಾದ ಮಹಿಳೆಯರನ್ನೇ ದೂಷಿಸುವ ಸಮಾಜ, ‘ವಿಕ್ಟಿಮ್ ಬ್ಲೇಮಿಂಗ್’ ನಿಲ್ಲುವುದು ಯಾವಾಗ?

ಇನ್ನು ದೇಶದಲ್ಲಿ ಮಹಿಳೆಯರು ಜಿಡಿಪಿಗೆ ಕೇವಲ ಶೇ.17ರಷ್ಟು ಕೊಡುಗೆಯನ್ನು ನೀಡುತ್ತಾರೆ. ಮಹಿಳೆಯರು ತುಂಬಾ ಕಡಿಮೆ ಕೆಲಸ ಮಾಡುವುದರಿಂದ ಕೊಡುಗೆ ಕಡಿಮೆಯಲ್ಲ. ಬದಲಾಗಿ ಅವರು ಹೆಚ್ಚಾಗಿ ವೇತನರಹಿತವಾಗಿಯೇ ಕೆಲಸ ಮಾಡುವುದರಿಂದಾಗಿ ಜಿಡಿಪಿಗೆ ಅವರ ಕೊಡುಗೆ ಕಡಿಮೆಯಾಗಿದೆ. ಹಾಗೆಯೇ ಮಹಿಳೆಯರು ಉದ್ಯೋಗದಲ್ಲಿ ತೊಡಗದಿರಲು ಮುಖ್ಯ ಕಾರಣವೇ ಈ ಮನೆಯ ಜವಾಬ್ದಾರಿಗಳು ಎಂದು ಸಮೀಕ್ಷೆ ಹೇಳುತ್ತದೆ.

ಇವೆಲ್ಲವುದರ ನಡುವೆ ಮಹಿಳೆಯರ ವೇತನಸಹಿತ ಉದ್ಯೋಗಕ್ಕೆ ಎಐ ಕೆಟ್ಟ ಪರಿಣಾಮ ಬೀರುವ ಸಾಧ್ಯತೆಯಿದೆ. ಡೇಟಾ ಎಂಟ್ರಿ ಮತ್ತು ಗ್ರಾಹಕ ಸೇವೆಗಳಂತಹ ಕ್ಷೇತ್ರಗಳಲ್ಲಿ ಮಹಿಳೆಯರು ಅಧಿಕವಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಇಂತಹ ಕೆಲಸಗಳನ್ನು ಎಐ ಸುಲಭವಾಗಿ ಮಾಡಬಹುದಾದ ಕಾರಣದಿಂದಾಗಿ ಈ ಉದ್ಯೋಗಗಳಿಗೆ ಕುತ್ತು ಬರುವ ಸಾಧ್ಯತೆ ಹೆಚ್ಚಾಗಿದೆ. ಇನ್ನೊಂದೆಡೆ ಎಐಗೆ ಸಂಬಂಧಿಸಿದ ತಂತ್ರಜ್ಞಾನ ಕ್ಷೇತ್ರದಲ್ಲಿ ಮಹಿಳೆಯರ ಪಾಲ್ಗೊಳ್ಳುವಿಕೆ ಕಡಿಮೆ ಇರುವುದರಿಂದ, ಎಐ ಆಧಾರಿತ ಹೊಸ ತಾಂತ್ರಿಕ ಉದ್ಯೋಗಗಳನ್ನು ಪಡೆದುಕೊಳ್ಳಲು ಮಹಿಳೆಯರಿಗೆ ಇನ್ನೂ ಅಧಿಕ ತರಬೇತಿಯ ಅಗತ್ಯವಿದೆ. ಇವೆಲ್ಲವುದರ ನಡುವೆ ಆರೈಕೆ ಮೊದಲಾದ ವೇತನರಹಿತ ಕೆಲಸಕ್ಕೆ ಮಹಿಳೆಯ ಸಮಯವೇ, ಶಕ್ತಿಯೇ ವ್ಯಯವಾಗುತ್ತಿದೆ.

ಉದ್ಯೋಗ ಮತ್ತು ಪ್ರತಿಭೆಗೆ ಸಂಬಂಧಿಸಿದ ಆನ್‌ಲೈನ್ ಪ್ಲಾಟ್‌ಫಾರ್ಮ್‌ ಆದ ಫಂಡಿಟ್ ಪ್ರಕಾರ ದೇಶದಲ್ಲಿ 2025ರ ನವೆಂಬರ್ ವೇಳೆಗೆ ಮಹಿಳಾ ಕಾರ್ಮಿಕ ಬಲದ ಪಾಲ್ಗೊಳ್ಳುವಿಕೆ ದರ (LFPR) ಶೇ. 35.1ಕ್ಕೆ ಏರಿಕೆಯಾಗಿದೆ. ಗ್ರಾಮೀಣ ಭಾಗದ ಮಹಿಳೆಯರ ಉದ್ಯೋಗ ಪ್ರಮಾಣವು ನವೆಂಬರ್ ವೇಳೆಗೆ ಶೇ. 39.7ಕ್ಕೆ ತಲುಪಿದೆ. ನಗರ ಪ್ರದೇಶಗಳಲ್ಲಿ ಸುಮಾರು ಶೇ. 25ರ ಆಸುಪಾಸಿನಲ್ಲಿದೆ. ಮಹಿಳೆಯರು ಆರ್ಥಿಕವಾಗಿ ಸ್ವತಂತ್ರರಾಗುವುದು, ಉದ್ಯೋಗ ಮಾಡುವುದರಿಂದ ಮಹಿಳಾ ಸಬಲೀಕರಣವಾಗುತ್ತಿದೆ ಎಂದು ಹೇಳುವವರು ಇದ್ದಾರೆ. ಆದರೆ ನಿಜವಾಗಿಯೂ ಸಬಲೀಕರಣವಾಗುತ್ತಿದೆಯೇ? ಸಬಲೀಕರಣದ ನೆಪದಲ್ಲಿಯೂ ಮಹಿಳೆಯರಿಗೆ ಕಡಿಮೆ ವೇತನ ನೀಡಿ ಅಧಿಕ ದುಡಿಸುತ್ತಿರುವುದು ವಾಸ್ತವವಲ್ಲವೆ? ಪುರುಷರಿಗೆ ಹೋಲಿಸಿದರೆ ಮಹಿಳೆಯರ ವೇತನದಲ್ಲಿ ಇನ್ನೂ ಅಂತರವಿದೆ. ಇವೆಲ್ಲವೂ ಸರಿದೂಗಿದರಷ್ಟೇ ಸಬಲೀಕರಣ ಎನಿಸುವುದಲ್ಲವೇ?

ಮಾಹಿತಿ: ದಿ ಹಿಂದೂ

WhatsApp Image 2025 11 17 at 4.20.34 PM
+ posts

ಪತ್ರಕರ್ತೆ, 2019ರಿಂದ ಪತ್ರಿಕೋದ್ಯಮವೇ ಬದುಕು. ರಾಜಕೀಯ, ಬ್ಯುಜಿನೆಸ್‌ ಸುದ್ದಿಗಳಲ್ಲಿ ಆಸಕ್ತಿ.

ಪೋಸ್ಟ್ ಹಂಚಿಕೊಳ್ಳಿ:

ಮಯೂರಿ ಬೋಳಾರ್
ಮಯೂರಿ ಬೋಳಾರ್
ಪತ್ರಕರ್ತೆ, 2019ರಿಂದ ಪತ್ರಿಕೋದ್ಯಮವೇ ಬದುಕು. ರಾಜಕೀಯ, ಬ್ಯುಜಿನೆಸ್‌ ಸುದ್ದಿಗಳಲ್ಲಿ ಆಸಕ್ತಿ.

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಕೇಂದ್ರವನ್ನು ಟೀಕಿಸಿದ ಸಾಮಾಜಿಕ ಮಾಧ್ಯಮ ಖಾತೆಗಳು ಮಂಗಮಾಯ: ಉಳಿಯುವುದು ಬರೀ ಮೋದಿಮಯ!

ಹೀಗೆ ಮೋದಿ ಸರ್ಕಾರವನ್ನು ವಿರೋಧಿಸಿದವರ ಖಾತೆಗಳು ಸಾಮಾಜಿಕ ಮಾಧ್ಯಮಗಳಿಂದ ಅಳಿಸಿ ಕೊನೆಗೆ...

ಒಂದು ಕಡೆ ಖಾದ್ಯತೈಲ ಬೆಲೆ ಏರಿಕೆ; ಮತ್ತೊಂದು ಕಡೆ ಕುಸುಬೆ ಬೆಲೆ ಕುಸಿತದಿಂದ ರೈತರಿಗೆ ಹೊರೆ

ಖಾದ್ಯತೈಲ ಬೆಲೆ ಏರಿಕೆ ಗ್ರಾಹಕರ ಜೇಬಿಗೆ ಭಾರವಾದರೆ, ಕುಸುಬೆ ಬೆಲೆ ಕುಸಿತ...

ಡಾಲರ್ V/s ಯುವಾನ್: ಕೊಲ್ಲಿ ಯುದ್ಧ ಕರೆನ್ಸಿ ಯುದ್ಧವಾಗಿ ಮಾರ್ಪಾಡಾಗುತ್ತಿದೆಯೇ?

ಅಕಸ್ಮಾತ್ ಈ ಯುದ್ಧ ಮುಂದುವರೆದರೆ, ಕೆಲವು ದೇಶಗಳು ಡಾಲರ್ ಬದಲಿಗೆ ಯುವಾನ್...