ತುಮಕೂರಿನಲ್ಲಿ ಮಹಿಳಾ ಆಡಳಿತ; ಸಮರ್ಥ ನಾಯಕತ್ವದಿಂದ ರೂಪುಗೊಳ್ಳುತ್ತಿರುವ ಹೊಸ ಮಾದರಿ

Date:

ಪ್ರಸ್ತುತ ದೇಶದ ಆಡಳಿತ ವ್ಯವಸ್ಥೆಯಲ್ಲಿ ಮಹಿಳೆಯರು ಪ್ರತಿನಿಧಿಗಳಾಗಿ, ನಿರ್ಣಯಕಿಯರಾಗಿ, ನಾಯಕಿಯರಾಗಿ ತಮ್ಮ ಸಾಮರ್ಥ್ಯವನ್ನು ಸಾಬೀತುಪಡಿಸುತ್ತಿದ್ದಾರೆ. ರಾಷ್ಟ್ರಪತಿ ಭವನದಿಂದ ಹಿಡಿದು ರಾಜ್ಯಗಳ ಮುಖ್ಯಮಂತ್ರಿ, ರಾಜ್ಯಪಾಲರ ಹುದ್ದೆ, ಸರ್ಕಾರದ ಮುಖ್ಯ ಕಾರ್ಯದರ್ಶಿಗಳವರೆಗೂ ಉನ್ನತ ಆಡಳಿತದ ಬಹುತೇಕ ಹಂತಗಳಲ್ಲಿ ಮಹಿಳೆಯರಿದ್ದಾರೆ. ಸದ್ಯ ತುಮಕೂರು ಜಿಲ್ಲೆ ಕೂಡ ಇಂಥದ್ದೇ ಒಂದು ಮಾದರಿ ನಿರ್ಮಿಸಿದೆ. ಜಿಲ್ಲಾ ಅಧಿಕಾರದಿಂದ ಹಿಡಿದು ತಾಲೂಕು ಮಟ್ಟದ ಅಧಿಕಾರವನ್ನೂ ಮಹಿಳಾ ಮಣಿಗಳೇ ನಿರ್ವಹಿಸುತ್ತಿದ್ದು, ಇತಿಹಾಸ ನಿರ್ಮಿಸಿದ್ದಾರೆ. ಈ ಸ್ಥಾನಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಮಹಿಳೆಯರು ತಮ್ಮ ದೃಢ ನಿರ್ಧಾರಗಳು, ಪಾರದರ್ಶಕ ಆಡಳಿತ ಹಾಗೂ ಜನಪರ ದೃಷ್ಟಿಕೋನದಿಂದ ಉತ್ತಮ ಆಡಳಿತದ ಮಾದರಿಯನ್ನು ನಿರ್ಮಿಸುತ್ತಿದ್ದಾರೆ.

ಈ ಬದಲಾವಣೆಯ ಪ್ರತಿಬಿಂಬವನ್ನು ತುಮಕೂರು ಜಿಲ್ಲೆಯಲ್ಲೂ ಕಾಣಬಹುದು. ಜಿಲ್ಲೆಯ ಪ್ರಮುಖ ಆಡಳಿತಾತ್ಮಕ ಹುದ್ದೆಗಳನ್ನು ಮಹಿಳೆಯರೇ ಮುನ್ನಡೆಸುತ್ತಿದ್ದು, ಬಹುತೇಕ ಎಲ್ಲಾ ಉನ್ನತ ಸ್ಥಾನಗಳನ್ನು ಅಲಂಕರಿಸಿರುವುದು ಗಮನಾರ್ಹ. ಜವಾಬ್ದಾರಿಯುತ ನಿರ್ವಹಣೆ, ಜನಸ್ನೇಹಿ ಕ್ರಮಗಳು ಮತ್ತು ಪರಿಣಾಮಕಾರಿ ಕಾರ್ಯಕ್ಷಮತೆ ಮೂಲಕ ಅವರು ಆಡಳಿತಕ್ಕೆ ಹೊಸ ಶಕ್ತಿ ತುಂಬಿದ್ದಾರೆ. ಇದು ಮಹಿಳಾ ನಾಯಕತ್ವದ ಮೇಲಿನ ನಂಬಿಕೆಯನ್ನು ಮತ್ತಷ್ಟು ಗಟ್ಟಿಗೊಳಿಸುವುದರ ಜೊತೆಗೆ, ಮುಂದಿನ ತಲೆಮಾರಿಗೆ ಪ್ರೇರಣೆಯ ದೀಪವಾಗಿ ಬೆಳಗುತ್ತಿದೆ.

ರಾಜ್ಯದ ಎರಡನೇ ಅತಿ ದೊಡ್ಡ ಜಿಲ್ಲೆಯಾದ ತುಮಕೂರು ಜಿಲ್ಲೆಯ ಕಂದಾಯ ಇಲಾಖೆ ಹಾಗೂ ಇಡೀ ಜಿಲ್ಲೆಯ ಆಡಳಿತ ನಿರ್ವಹಣೆಯ ಜವಾಬ್ದಾರಿ ಹೊತ್ತು ಎರಡು ದಸರಾ ಉತ್ಸವ, ಸವಲತ್ತು ವಿತರಣೆಯ ಸಾಧನಾ ಸಮಾವೇಶ ಸೇರಿದಂತೆ ಕಂದಾಯ ಇಲಾಖೆ ಕಾರ್ಯಕ್ರಮ ಅನುಷ್ಠಾನದಲ್ಲಿ ಪ್ರಶಸ್ತಿಗಳಿಸಿದ್ದಾರೆ ತುಮಕೂರು ಡಿಸಿ ಶುಭ ಕಲ್ಯಾಣ್.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ತಿಪಟೂರು, ತುಮಕೂರು ಉಪವಿಭಾಗದ ಮಹಿಳಾ ಉಪವಿಭಾಗಾಧಿಕಾರಿಗಳು ಇವರಿಗೆ ಸಾಥ್ ನೀಡಿದ್ದಾರೆ. ಜಿಪಂ ಸಿಇಒ ಆಗಿ ನಿಯುಕ್ತಿಗೊಂಡಿರುವ ಬಿ ವಿ ಅಶ್ವಿಜಾ ಅವರು ಹಿಂದೆ ತುಮಕೂರು ಮಹಾನಗರಪಾಲಿಕೆ ಆಯುಕ್ತೆ, ಸ್ಮಾರ್ಟ್‌ ಸಿಟಿ ಎಂಡಿಯಾಗಿ ನಗರದಲ್ಲಿ ಮೂಲಸೌಕರ್ಯ ಸಮರ್ಪಕ ಪೂರೈಕೆಯಲ್ಲಿ ಛಾಪು ಮೂಡಿಸಿದ್ದಾರೆ. ಈಗ ಗ್ರಾಮೀಣಾಭಿವೃದ್ಧಿ ಕ್ಷೇತ್ರದಲ್ಲಿ ಸಾಧಿಸಿ ತೋರಿಸುವ ಸಂಕಲ್ಪದೊಂದಿಗೆ ಶುಕ್ರವಾರ ಅಧಿಕಾರ ವಹಿಸಿಕೊಂಡಿದ್ದಾರೆ. ತುಮಕೂರು ಜಿಲ್ಲೆಯಲ್ಲಿ ಕಳೆದ ಎರಡು ವರ್ಷದಿಂದ ಶುಭ ಕಲ್ಯಾಣ್‌ ಜಿಲ್ಲಾಧಿಕಾರಿಗಳಾಗಿ ಕಾರ್ಯನಿರ್ವಹಿಸುತ್ತಿದ್ದು, ಜಿಲ್ಲಾ ಪಂಚಾಯಿತಿ ಸಿಇಒ ಆಗಿಯೂ ಪ್ರಭಾರ ವಹಿಸಿಕೊಂಡಿದ್ದರು.

ಪ್ರಸಕ್ತ ತುಮಕೂರು ಮಹಾನಗರ ಪಾಲಿಕೆ ಆಯುಕ್ತರಾಗಿ ಶುಭ ಅವರು ಕಾರ್ಯನಿರ್ವಹಿಸುತ್ತಿದ್ದು, ಜಿಲ್ಲೆಯ ಮೂರು ಉಪವಿಭಾಗದ ಪೈಕಿ ಎರಡು ಉಪವಿಭಾಗಕ್ಕೆ ಮಹಿಳೆಯರು ಉಪವಿಭಾಗಾಧಿಕಾರಿಗಳಾಗಿರುವುದು ವಿಶೇಷವಾಗಿದೆ. ತುಮಕೂರು ವಿಶ್ವ ವಿದ್ಯಾಲಯದ ಕುಲಸಚಿವೆಯೂ ಆಗಿರುವ ನಾಹಿದಾ ಜಮ್ ಜಮ್ ಅವರು ತುಮಕೂರು ಉಪ ವಿಭಾಗಾಧಿಕಾರಿಯಾಗಿಯೂ ಕಾರ್ಯನಿರ್ವಹಿಸುತ್ತಿದ್ದಾರೆ. ತಿಪಟೂರು ಉಪವಿಭಾಗಾಧಿಕಾರಿಯಾಗಿ ಸಪ್ತಶ್ರೀ ಅವರು ಆಡಳಿತ ನಿರ್ವಹಿಸುತ್ತಿದ್ದಾರೆ. ಜಿಲ್ಲೆಯ ಹತ್ತು ತಾಲೂಕುಗಳಲ್ಲಿ ಮೂವರು ಮಹಿಳಾ ತಹಶೀಲ್ದಾರ್‌ಗಳಿದ್ದಾರೆ. ಕೆಎಎಸ್ ಅಧಿಕಾರಿಗಳಾದ ರಾಜೇಶ್ವರಿ, ಬಿ ಆರತಿ ಹಾಗೂ ಮಮತಾ ಕ್ರಮವಾಗಿ, ತುಮಕೂರು, ಗುಬ್ಬಿ ಹಾಗೂ ಚಿಕ್ಕನಾಯಕನಹಳ್ಳಿ ತಹಶೀಲ್ದಾ‌ರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ.

ಇದೇ ರೀತಿ ರಾಜ್ಯ ಗೃಹಸಚಿವರು ಪ್ರತಿನಿಧಿಸುವ ಕೊರಟಗೆರೆ ತಾಲೂಕಿನ ತಾಲೂಕು ಪಂಚಾಯತಿ ಕಾರ್ಯನಿರ್ವಹಣಾಧಿಕಾರಿಯಾಗಿ ಅಪೂರ್ವ ಅವರು ಕಾರ್ಯನಿರ್ವಹಿಸುತ್ತಿದ್ದಾರೆ.

ಜಿಲ್ಲಾ ಮಟ್ಟದ ಹಲವು ಇಲಾಖೆಗಳ ಮುಖ್ಯಸ್ಥರಾಗಿ ಮಹಿಳೆಯರೇ ಕಾರ್ಯನಿರ್ವಹಿಸುತ್ತಿದ್ದು, ತೋಟಗಾರಿಕಾ ಇಲಾಖೆ ಉಪನಿರ್ದೇಶಕರಾಗಿ ಶಾರದಮ್ಮ, ಜಿಲ್ಲಾ ಸರ್ವೆ ಇಲಾಖೆ ಉಪನಿರ್ದೇಶಕರಾಗಿ ಭಾವನಾ, ಜಿಲ್ಲಾ ಬಿಸಿಎಂ ಅಧಿಕಾರಿಯಾಗಿ ಸೋನಿಯಾ ವರ್ಣೇಕರ್, ಜಿಲ್ಲಾ ಖಜಾನಾಧಿಕಾರಿಯಾಗಿ ಉಮಾ ಪವನ್, ಆಹಾರ ಇಲಾಖೆ ಜಂಟಿ ನಿರ್ದೇಶಕರಾಗಿ ಸೌಮ್ಯ ಸತೀಶ್, ಉಪ ಅರಣ್ಯ ಸಂರಕ್ಷಣಾಧಿಕಾರಿಯಾಗಿ ನಮಿತಾ, ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿಯಾಗಿ ಪವಿತ್ರಾ, ತುಮಕೂರು, ಗುಬ್ಬಿ ಹಾಗೂ ತುರುವೇಕೆರೆ ತಾಲೂಕು ಗ್ರೇಡ್-2 ತಹಶೀಲ್ದಾರ್ ಆಗಿ ಕ್ರಮವಾಗಿ ಕಮಲಮ್ಮ, ಶಶಿಕಲಾ, ಸುಮತಿ, ಜಿಲ್ಲೆ ಸೆನ್ ಠಾಣೆ ಡಿವೈಎಸಿಯಾಗಿ ಜಯಲಕ್ಷ್ಮಿ, ಡಿಸಿ ಕಚೇರಿ ಲೆಕ್ಕಾಧಿಕಾರಿಯಾಗಿ ಮೀನಾ, ಹೇಮಾವತಿ ವಿಶೇಷ ಭೂಸ್ವಾಧೀನ ಅಧಿಕಾರಿಯಾಗಿ ಮಂಜುಳಮ್ಮ, ಖಾದಿ ಗ್ರಾಮೋದ್ಯೋಗ ಜಿಲ್ಲಾಧಿಕಾರಿಯಾಗಿ ರತ್ನಮ್ಮ, ಜಿಲ್ಲಾ ತರಬೇತಿ ಕೇಂದ್ರದ ಪ್ರಾಂಶುಪಾಲರಾಗಿ ಅನಿತಾ ಲಕ್ಷ್ಮಿ, ಜಿಲ್ಲಾ ಮಕ್ಕಳ ಸಂರಕ್ಷಣಾಧಿಕಾರಿಯಾಗಿ ಪವಿತ್ರಾ, ಜಿಲ್ಲಾ ನಿರೂಪಣಾಧಿಕಾರಿಯಾಗಿ ಅಂಬಿಕಾ, ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಭೂ ವಿಜ್ಞಾನಿಯಾಗಿ ಶಿರಸ್ತೇದಾರ್‌ ಆಗಿ ವೀಣಾ, ಪ್ರೋಟೋಕಾಲ್ ಅಧಿಕಾರಿಯಾಗಿ ಸುಶೀಲಮ್ಮ, ತುಮಕೂರು ಉಪನೋಂದಣಾಧಿಕಾರಿಯಾಗಿ ಸೌಮ್ಯ, ವಾರ್ತಾ ಸಹಾಯಕಿಯಾಗಿ ರೂಪಕಲಾ, ತುಮಕೂರು ಮಹಾನಗರ ಪಾಲಿಕೆ ಆಡಳಿತ ಉಪ ಆಯುಕ್ತರಾಗಿ ಕೆಎಎಸ್ ಅಧಿಕಾರಿ ಸುಪ್ರಿಯಾ ಬಣಗಾ‌ರ್, ಕಲ್ಯಾಣಾಧಿಕಾರಿಯಾಗಿ ಪುಷ್ಪಲತಾ ಹಾಗೂ ಐವರು ಎಇಇಗಳು ಮಹಿಳೆಯರೇ ಆಗಿದ್ದು, ನೋಂದಣಿ, ಶಿಕ್ಷಣ ಸೇರಿದಂತೆ ವಿವಿಧ ಇಲಾಖೆಗಳಲ್ಲಿ ಮಹಿಳೆಯರು ಪುರುಷರನ್ನು ಮೀರಿಸುವಂತೆ ಆಡಳಿತದಲ್ಲಿ ಸೈ ಎನಿಸಿಕೊಂಡು ಕಾರ್ಯನಿರ್ವಹಿಸುತ್ತಿದ್ದಾರೆ.

ತುಮಕೂರು ಜಿಲ್ಲೆಯ ಉಸ್ತುವಾರಿ ಕಾರ್ಯದರ್ಶಿಯಾಗಿ ಹಿರಿಯ ಐಎಎಸ್ ಅಧಿಕಾರಿ ದೀಪಾ ಚೋಳನ್ ಅವರು ಕಾರ್ಯನಿರ್ವಹಿಸುತ್ತಿದ್ದು, ಜಿಲ್ಲಾ ಪಂಚಾಯತ್ ಆಡಳಿತಾಧಿಕಾರಿಯಾಗಿಯೂ ಹೊಣೆ ಹೊತ್ತಿದ್ದಾರೆ. ತುಮಕೂರು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಯಾಗಿ ಹಿರಿಯ ಸಿವಿಲ್ ನ್ಯಾಯಾಧೀಶರಾದ ನೂರುನ್ನೀಸಾ ಅವರು ಕಳೆದ ಎರಡಕ್ಕಿಂತ ಹೆಚ್ಚು ವರ್ಷಗಳಿಂದ ಕಾರ್ಯನಿರ್ವಹಿಸುತ್ತಿದ್ದು, ಗಮನಸೆಳೆದಿದ್ದಾರೆ.

‌ಇದನ್ನೂ ಓದಿ: ತುಮಕೂರು | ನಂದಿಹಳ್ಳಿ, ಮಲ್ಲಸಂದ್ರ, ವಸಂತನರಸಾಪುರ ಔಟರ್‌ ರಿಂಗ್ ರಸ್ತೆ ಡಿಪಿಆರ್ ರೈತ ವಿರೋಧಿ : ಡಿ.ಸಿ.ಗೌರಿಶಂಕರ್

ಜಿಲ್ಲಾಧಿಕಾರಿ ಸ್ಥಾನದಿಂದ ಹಿಡಿದು ಉಪವಿಭಾಗ, ತಾಲೂಕು, ಜಿಲ್ಲಾ ಮಟ್ಟದ ವಿವಿಧ ಇಲಾಖೆಗಳವರೆಗೆ ಮಹಿಳೆಯರು ಮುಂಚೂಣಿಯಲ್ಲಿ ನಿಂತು ಆಡಳಿತವನ್ನು ಮುನ್ನಡೆಸುತ್ತಿರುವುದು ಉತ್ತಮ ಆಡಳಿತಕ್ಕೆ ಹೊಸ ಅರ್ಥ ನೀಡಿದೆ. ಪಾರದರ್ಶಕ ನಿರ್ವಹಣೆ, ಜನಸ್ನೇಹಿ ಕ್ರಮಗಳು ಹಾಗೂ ಅಭಿವೃದ್ಧಿ ಕೇಂದ್ರೀಕೃತ ದೃಷ್ಟಿಕೋನದಿಂದ ಮಹಿಳಾ ಆಡಳಿತ ಚುಕ್ಕಾಣಿ ಜನರ ವಿಶ್ವಾಸವನ್ನು ಗಳಿಸಿದೆ.

ಈ ಮಹಿಳಾ ಅಧಿಕಾರಿಗಳ ಸಾಧನೆಗಳು ಮುಂದಿನ ತಲೆಮಾರಿಗೆ ಸ್ಪೂರ್ತಿಯಾಗಿದೆ. “ಆಡಳಿತ ಪುರುಷರ ಕ್ಷೇತ್ರ” ಎಂಬ ಹಳೆಯ ಮನೋಭಾವವನ್ನು ಕಿತ್ತುಹಾಕಿ ಜಿಲ್ಲೆಯ ಮಹಿಳಾ ನಾಯಕಿಯರು ಮುಂದುವರೆದಿದ್ದಾರೆ. ಇದು ರಾಜ್ಯ ಮತ್ತು ದೇಶದ ಆಡಳಿತ ವ್ಯವಸ್ಥೆಗೆ ಮಾದರಿಯಾಗಿದೆ. ಮಹಿಳೆಯರಿಗೆ ಅವಕಾಶ ಸಿಕ್ಕಾಗ ಅವರು ಆಡಳಿತವನ್ನು ಇನ್ನಷ್ಟು ಸಂವೇದನಾಶೀಲ, ಪರಿಣಾಮಕಾರಿ ಮತ್ತು ಜನಪರವಾಗಿ ರೂಪಿಸಬಲ್ಲರು ಎಂಬುದಕ್ಕೆ ತುಮಕೂರು ಇಂದು ಜೀವಂತ ಸಾಕ್ಷಿಯಾಗಿದೆ.

WhatsApp Image 2024 08 09 at 10.52.48 1578a566
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಕೇಂದ್ರವನ್ನು ಟೀಕಿಸಿದ ಸಾಮಾಜಿಕ ಮಾಧ್ಯಮ ಖಾತೆಗಳು ಮಂಗಮಾಯ: ಉಳಿಯುವುದು ಬರೀ ಮೋದಿಮಯ!

ಹೀಗೆ ಮೋದಿ ಸರ್ಕಾರವನ್ನು ವಿರೋಧಿಸಿದವರ ಖಾತೆಗಳು ಸಾಮಾಜಿಕ ಮಾಧ್ಯಮಗಳಿಂದ ಅಳಿಸಿ ಕೊನೆಗೆ...

ಒಂದು ಕಡೆ ಖಾದ್ಯತೈಲ ಬೆಲೆ ಏರಿಕೆ; ಮತ್ತೊಂದು ಕಡೆ ಕುಸುಬೆ ಬೆಲೆ ಕುಸಿತದಿಂದ ರೈತರಿಗೆ ಹೊರೆ

ಖಾದ್ಯತೈಲ ಬೆಲೆ ಏರಿಕೆ ಗ್ರಾಹಕರ ಜೇಬಿಗೆ ಭಾರವಾದರೆ, ಕುಸುಬೆ ಬೆಲೆ ಕುಸಿತ...

ಡಾಲರ್ V/s ಯುವಾನ್: ಕೊಲ್ಲಿ ಯುದ್ಧ ಕರೆನ್ಸಿ ಯುದ್ಧವಾಗಿ ಮಾರ್ಪಾಡಾಗುತ್ತಿದೆಯೇ?

ಅಕಸ್ಮಾತ್ ಈ ಯುದ್ಧ ಮುಂದುವರೆದರೆ, ಕೆಲವು ದೇಶಗಳು ಡಾಲರ್ ಬದಲಿಗೆ ಯುವಾನ್...