ಏಷ್ಯಾ ಲಯನ್ಸ್ ಮಡಿಲಿಗೆ ಲೆಜೆಂಡ್ಸ್ ಕ್ರಿಕೆಟ್‌ ಲೀಗ್ ಕಿರೀಟ

Date:

ಉಪುಲ್‌ ತರಂಗ ಮತ್ತು ತಿಲಕರತ್ನೆ ದಿಲ್ಶನ್ ಶತಕದ ಜೊತೆಯಾಟದ ನೆರವಿನಿಂದ ಏಷ್ಯಾ ಲಯನ್ಸ್ ತಂಡ, ಲೆಜೆಂಡ್ಸ್ ಕ್ರಿಕೆಟ್‌ ಲೀಗ್ ಟೂರ್ನಿಯ ಚಾಂಪಿಯನ್‌ ಪಟ್ಟವನ್ನಲಂಕರಿಸಿದೆ. ದೋಹಾದ ಏಷ್ಯನ್ ಟೌನ್ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದ ಫೈನಲ್‌ನಲ್ಲಿ ಶಾಹೀದ್​ ಅಫ್ರಿದಿ ಸಾರಥ್ಯದ ಲಯನ್ಸ್‌ ತಂಡ, ವರ್ಲ್ಡ್ ಜೈಂಟ್ಸ್ ವಿರುದ್ಧ 7 ವಿಕೆಟ್‌ಗಳ ಜಯಭೇರಿ ಭಾರಿಸಿದೆ.

ಟಾಸ್‌ ಗೆದ್ದು ಮೊದಲು ಬ್ಯಾಟ್‌ ಮಾಡಿದ್ದ ಶೇನ್‌ ವಾಟ್ಸನ್‌ ನಾಯಕತ್ವದ ವರ್ಲ್ಡ್ ಜೈಂಟ್ಸ್, ಜ್ಯಾಕ್‌ ಕಾಲಿಸ್‌ ಗಳಿಸಿದ ಅಬ್ಬರದ ಅರ್ಧಶತಕದ (78 ರನ್‌, 54 ಎಸೆತ, 4×5, 6×3) ನೆರವಿನಿಂದ ನಿಗದಿತ 20 ಓವರ್‌ಗಳಲ್ಲಿ 4 ವಿಕೆಟ್‌ ನಷ್ಟದಲ್ಲಿ 147 ರನ್‌ಗಳಿಸಿತ್ತು. ಚೇಸಿಂಗ್‌ ವೇಳೆ ಏಷ್ಯಾ ಲಯನ್ಸ್ ಆರಂಭಿಕರಾದ ಉಪುಲ್‌ ತರಂಗ (57 ರನ್‌, 28 ಎಸೆತ) ಮತ್ತು ತಿಲಕರತ್ನೆ ದಿಲ್ಶನ್ (58 ರನ್‌, 42 ಎಸೆತ) ಶತಕದ ಜೊತೆಯಾಟದ (115 ರನ್)‌ ನೆರವಿನಿಂದ 16.1 ಓವರ್‌ಗಳಲ್ಲಿ 3 ವಿಕೆಟ್‌  ನಷ್ಟದಲ್ಲಿ ಇನ್ನೂ 23 ಎಸೆತಗಳು ಬಾಕಿ ಇರುವಂತೆಯೇ ಗುರಿ ತಲುಪಿತು.

ವರ್ಲ್ಡ್ ಜೈಂಟ್ಸ್ ತಂಡದ ಬೌಲಿಂಗ್‌ ವಿಭಾಗವನ್ನು ನಿರ್ದಯವಾಗಿ ದಂಡಿಸಿದ ತರಂಗ ಮತ್ತು ದಿಲ್ಶನ್ ಜೋಡಿ, ಕೇವಲ 9.6 ಓವರ್‌ಗಳಲ್ಲಿ ತಂಡದ ಮೊತ್ತವನ್ನು 115 ರನ್‌ಗಳಿಗೆ ತಲುಪಿಸಿತ್ತು. ದಿಲ್ಶಾನ್ 42 ಎಸೆತಗಳಲ್ಲಿ ಎಂಟು ಬೌಂಡರಿಗಳೊಂದಿಗೆ 58 ರನ್ ಗಳಿಸಿದರೆ, ತರಂಗ 28 ಎಸೆತಗಳಲ್ಲಿ ಐದು ಬೌಂಡರಿ ಮತ್ತು ಮೂರು ಸಿಕ್ಸರ್‌ಗಳೊಂದಿಗೆ 57 ರನ್ ಗಳಿಸಿ ಸರಣಿ ಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು. ಎಲಿಮಿನೇಟರ್‌ ಪಂದ್ಯದಲ್ಲಿ ʻಇಂಡಿಯಾ ಮಹಾರಾಜಾಸ್‌ʼ ವಿರುದ್ಧದ  ಗೆಲುವಿನಲ್ಲೂ ಉಪುಲ್‌ ತರಂಗ ನಿರ್ಣಾಯಕ ಪಾತ್ರ ವಹಿಸಿದ್ದರು.

e761f9abfdc9ef87e6de54ca37fd3aa1e8b74659897c34d58aff74e9b6c9aa14?s=150&d=mp&r=g
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಮತ್ತೆ ಲಲಿತ್ ಮೋದಿ: ಐಪಿಎಲ್ 2026ಕ್ಕೂ ಮುನ್ನ ಭಾರೀ ಬದಲಾವಣೆ ಸಾಧ್ಯತೆ?

ರಾಜಸ್ಥಾನ ರಾಯಲ್ಸ್ ಫ್ರಾಂಚೈಸಿಯ ಮಾಲೀಕತ್ವದಲ್ಲಿ ಶೀಘ್ರದಲ್ಲೇ ಬದಲಾವಣೆಯಾಗುವ ಸಾಧ್ಯತೆಯಿದ್ದು, ಜಾಗತಿಕ ಹೂಡಿಕೆ...

ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಐಪಿಎಲ್ ಪಂದ್ಯಗಳ ಆಯೋಜನೆಗೆ ಸರ್ಕಾರದ ಅನುಮತಿ

ಬೆಂಗಳೂರಿನ ಐತಿಹಾಸಿಕ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಐಪಿಎಲ್ 2026 ಹಾಗೂ ಅಂತರರಾಷ್ಟ್ರೀಯ...

ಟೀಕೆಗಳ ಸುಳಿಯಲ್ಲೂ ಮಿನುಗಿದ ಕೇರಳದ ತಾರೆ: ಸಂಜು ಸ್ಯಾಮ್ಸನ್ ಎಂಬ ಛಲದಂಕಮಲ್ಲ

ಮೈದಾನದಲ್ಲಿ ಎಂ ಎಸ್  ಧೋನಿಯಂತೆಯೇ ಅತೀವ ಶಾಂತ ಸ್ವಭಾವವನ್ನು ಕಾಯ್ದುಕೊಳ್ಳುವ ಸಂಜು...