ಭಾರತೀಯ ಹಾಕಿಗೆ ನೂರು ವರ್ಷಗಳ ವೈಭವ: ಏಳುಬೀಳಿನ ನಡುವೆ ಸುದೀರ್ಘ ಪಯಣ

Date:

ಆರಂಭದಲ್ಲಿ ಹಾಕಿ ಮುಖ್ಯವಾಗಿ ಪಂಜಾಬ್, ಬಂಗಾಳ ಮತ್ತು ಮದ್ರಾಸ್ ಪ್ರಾಂತ್ಯಗಳಲ್ಲಿ ಜನಪ್ರಿಯವಾಗಿತ್ತು. ಫೆಡರೇಶನ್ ಸ್ಥಾಪನೆಯೊಂದಿಗೆ ರಾಷ್ಟ್ರೀಯ ಟೂರ್ನಿಗಳು ಆರಂಭವಾದವು. ಆನಂತರ ಆಟಗಾರರಿಗೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಸ್ಪರ್ಧಿಸುವ ಅವಕಾಶ ಸಿಕ್ಕಿತು. 1926ರಲ್ಲಿ ನ್ಯೂಜಿಲೆಂಡ್ ಪ್ರವಾಸದಲ್ಲಿ ಭಾರತ 21 ಪಂದ್ಯಗಳಲ್ಲಿ 18ರಲ್ಲಿ ಗೆದ್ದಿತ್ತು. ಅದು ಧ್ಯಾನ್ ಚಂದ್ ಅವರ ಪದಾರ್ಪಣೆಯ ಪ್ರವಾಸವಾಗಿತ್ತು.

ಭಾರತದ ಕ್ರೀಡಾ ಇತಿಹಾಸದಲ್ಲಿ ಹಾಕಿ ವಿಶೇಷ ಸ್ಥಾನವನ್ನು ಪಡೆದಿದೆ. 1925ರ ನವೆಂಬರ್ 7ರಂದು ಗ್ವಾಲಿಯರ್‌ನಲ್ಲಿ ʼಭಾರತೀಯ ಹಾಕಿ ಫೆಡರೇಶನ್ (IHF)ʼ ಸ್ಥಾಪನೆಯೊಂದಿಗೆ ಆರಂಭವಾದ ಈ ಪಯಣ, ಇಂದು ನೂರು ವರ್ಷಗಳನ್ನು ಪೂರೈಸಿದೆ. ಹಾಕಿ ಭಾರತಕ್ಕೆ ಬ್ರಿಟಿಷ್ ಆಳ್ವಿಕೆಯ ಕಾಲದಲ್ಲಿ ಪರಿಚಯವಾಯಿತು. 19ನೇ ಶತಮಾನದ ಕೊನೆಯಲ್ಲಿ ಬ್ರಿಟಿಷ್ ಸೈನ್ಯದ ಮೂಲಕ ಈ ಕ್ರೀಡೆ ದೇಶದಲ್ಲಿ ಜನಪ್ರಿಯವಾಯಿತು. ಆದರೆ, ಸಂಘಟಿತ ರೂಪವಿಲ್ಲದೆ ಇದ್ದ ಕಾರಣ, 1925ರ ನವೆಂಬರ್ 7ರಂದು ಗ್ವಾಲಿಯರ್‌ನಲ್ಲಿ ಕೆಲವು ಉತ್ಸಾಹಿಗಳು ಸಭೆ ಸೇರಿ ಭಾರತೀಯ ಹಾಕಿ ಫೆಡರೇಶನ್ (IHF) ಅನ್ನು ಸ್ಥಾಪಿಸಿದರು. ಅದೇ ದಿನ ಅಂತಾರಾಷ್ಟ್ರೀಯ ಹಾಕಿ ಫೆಡರೇಶನ್ (FIH) ಇದನ್ನು ಗುರುತಿಸಿತು. ಈ ಸ್ಥಾಪನೆಯು ಭಾರತೀಯ ಹಾಕಿಗೆ ದೃಢವಾದ ಅಡಿಪಾಯವನ್ನು ಹಾಕಿತು. ಮೂರು ವರ್ಷಗಳ ನಂತರವೇ, 1928ರ  ಆಮ್‌ಸ್ಟರ್‌ಡ್ಯಾಮ್‌ ಒಲಿಂಪಿಕ್ಸ್‌ನಲ್ಲಿ ಭಾರತ ತನ್ನ ಮೊದಲ ಚಿನ್ನದ ಪದಕವನ್ನು ಗೆದ್ದುಕೊಂಡಿತು. ಇದು ಭಾರತೀಯ ಹಾಕಿಯ ಸುವರ್ಣಯುಗದ ಆರಂಭವಾಗಿತ್ತು.

ಆರಂಭದಲ್ಲಿ ಹಾಕಿ ಮುಖ್ಯವಾಗಿ ಪಂಜಾಬ್, ಬಂಗಾಳ ಮತ್ತು ಮದ್ರಾಸ್ ಪ್ರಾಂತ್ಯಗಳಲ್ಲಿ ಜನಪ್ರಿಯವಾಗಿತ್ತು. ಫೆಡರೇಶನ್ ಸ್ಥಾಪನೆಯೊಂದಿಗೆ ರಾಷ್ಟ್ರೀಯ ಟೂರ್ನಿಗಳು ಆರಂಭವಾದವು. ಆನಂತರ ಆಟಗಾರರಿಗೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಸ್ಪರ್ಧಿಸುವ ಅವಕಾಶ ಸಿಕ್ಕಿತು. 1926ರಲ್ಲಿ ನ್ಯೂಜಿಲೆಂಡ್ ಪ್ರವಾಸದಲ್ಲಿ ಭಾರತ 21 ಪಂದ್ಯಗಳಲ್ಲಿ 18ರಲ್ಲಿ ಗೆದ್ದಿತು. ಇದು ಧ್ಯಾನ್ ಚಂದ್ ಅವರ ಪದಾರ್ಪಣೆಯ ಪ್ರವಾಸವಾಗಿತ್ತು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...
dhaynchand

ಸುವರ್ಣಯುಗ: ಒಲಿಂಪಿಕ್ ವೈಭವದ ದಶಕಗಳು (1928–1980)

ಭಾರತದ ಹಾಕಿಯ ಸುವರ್ಣಯುಗವು ವಿಶ್ವ ಕ್ರೀಡಾ ಇತಿಹಾಸದಲ್ಲಿ ಅಪ್ರತಿಮವಾಗಿದೆ. 1928ರಿಂದ 1980ರವರೆಗೆ ಭಾರತ ಹಾಕಿ ತಂಡ 13 ಒಲಿಂಪಿಕ್ ಪದಕಗಳನ್ನು ಗೆದ್ದಿತ್ತು. ಅದರಲ್ಲಿ 8 ಚಿನ್ನ, 1 ಬೆಳ್ಳಿ ಮತ್ತು 4 ಕಂಚು ಇದ್ದವು. ಇದು ಯಾವುದೇ ಕ್ರೀಡೆಯಲ್ಲಿ ಒಂದು ದೇಶದ ಪ್ರಾಬಲ್ಯಕ್ಕೆ ಸಾಟಿಯಿಲ್ಲದ ಉದಾಹರಣೆ.

ಮೊದಲ ಚಿನ್ನ (1928, ಆಮ್‌ಸ್ಟರ್‌ಡ್ಯಾಮ್‌): ಜೈಪಾಲ್ ಸಿಂಗ್ ಮುಂದಾ ನಾಯಕತ್ವದಲ್ಲಿ ಭಾರತ ನೆದರ್ಲ್ಯಾಂಡ್ಸ್ ತಂಡವನ್ನು 3-0ರಿಂದ ಸೋಲಿಸಿತು. ಇಡೀ ಟೂರ್ನಿಯಲ್ಲಿ ಒಂದು ಗೋಲನ್ನೂ ಬಿಟ್ಟುಕೊಡಲಿಲ್ಲ.

ಇದನ್ನು ಓದಿದ್ದೀರಾ? ಅನಿಲ್ ಅಂಬಾನಿ: ಧೀರೂಭಾಯಿಯ ಮಗ ದಿವಾಳಿತನದ ಆಳಕ್ಕೆ ಕುಸಿದದ್ದು ಹೇಗೆ?

ಎರಡನೇ ಚಿನ್ನ (1932, ಲಾಸ್ ಏಂಜಲೀಸ್): ಅಮೆರಿಕವನ್ನು 24-1ರಿಂದ ಸೋಲಿಸಿದ ಭಾರತದ ದಾಖಲೆ ಇಂದಿಗೂ ಅಜೇಯ ದಾಖಲೆಯಾಗಿದೆ. ಧ್ಯಾನ್ ಚಂದ್ ಈ ಪಂದ್ಯದಲ್ಲಿ 8 ಗೋಲುಗಳು ರೂಪ್ ಸಿಂಗ್ 10 ಗೋಲುಗಳು ಬಾರಿಸಿದ್ದರು.

ಬರ್ಲಿನ್ ಹ್ಯಾಟ್ರಿಕ್ ಚಿನ್ನ(1936): ಧ್ಯಾನ್ ಚಂದ್ ನಾಯಕತ್ವದಲ್ಲಿ ಜರ್ಮನಿಯನ್ನು 8-1ರಿಂದ ಸೋಲಿಸಿದರು. ಧ್ಯಾನ್‌ಚಂದ್ ಅವರ ಆಟವು ಹಿಟ್ಲರ್ ಅವರನ್ನು ಮೋಡಿಮಾಡಿತು ಎಂದು ಹೇಳಲಾಗುತ್ತದೆ.

Balbeer singh

ಸ್ವಾತಂತ್ರ್ಯದ ನಂತರದ ಗೆಲುವುಗಳು ಇನ್ನಷ್ಟು ಭಾವನಾತ್ಮಕವಾಗಿದ್ದವು:

1948, ಲಂಡನ್: ಬ್ರಿಟನ್ ಅನ್ನು 4-0 ರಿಂದ ಸೋಲಿಸಿ ಸ್ವಾತಂತ್ರ್ಯದ ನಂತರದ ಮೊದಲ ಚಿನ್ನ ಗಳಿಸಲಾಗಿತ್ತು.

1952, ಹೆಲ್ಸಿಂಕಿ: ನೆದರ್ಲ್ಯಾಂಡ್ಸ್ ಅನ್ನು 6-1ರಿಂದ ಸೋಲಿಸಿ ಸತತ ಐದನೇ ಚಿನ್ನ. ಬಲ್ಬೀರ್ ಸಿಂಗ್ ಸೀನಿಯರ್ 5 ಗೋಲುಗಳು ಗಳಿಸಿದ್ದರು.

1956, ಮೆಲ್ಬೋರ್ನ್: ಪಾಕಿಸ್ತಾನವನ್ನು 1-0ರಿಂದ ಸೋಲಿಸಿ ಆರನೇ ಚಿನ್ನ. ಟೂರ್ನಿಯಲ್ಲಿ ಉಧಮ್ ಸಿಂಗ್ 15 ಗೋಲುಗಳೊಂದಿಗೆ ದಾಖಲೆ ನಿರ್ಮಿಸಿದ್ದರು.

1964, ಟೋಕಿಯೋ: ಪಾಕಿಸ್ತಾನ ಸೋಲಿಸಿ ಏಳನೇ ಚಿನ್ನ ಗಳಿಸಿದ ಭಾರತದ ಹಾಕಿ ತಂಡ.

1975 ವಿಶ್ವಕಪ್: ಕೌಲಾಲಂಪುರದಲ್ಲಿ ಪಾಕಿಸ್ತಾನವನ್ನು ಸೋಲಿಸಿ ಮೊದಲ ಮತ್ತು ಏಕೈಕ ವಿಶ್ವಕಪ್.

1980, ಮಾಸ್ಕೋ: ಸ್ಪೇನ್ ಅನ್ನು 4-3ರಿಂದ ಸೋಲಿಸಿ ಎಂಟನೇ ಚಿನ್ನ ಪಡೆದ ಟೀಂ ಇಂಡಿಯಾ.

ಇದನ್ನು ಓದಿದ್ದೀರಾ? ಜೆಮಿಮಾ ರಾಡ್ರಿಗ್ಸ್ | ಭಾರತದ ಹೆಮ್ಮೆ; ಕಣ್ಣೀರಿನೊಳಗೆ ಕಂಗೊಳಿಸಿದ ಗೆಲುವು

ಈ ಯುಗದಲ್ಲಿ ಧ್ಯಾನ್ ಚಂದ್ (ಮೂರು ಚಿನ್ನದ ಪದಕಗಳೊಂದಿಗೆ 570 ಗೋಲುಗಳು), ಬಲ್ಬೀರ್ ಸಿಂಗ್ ಸೀನಿಯರ್ (ಮೂರು ಚಿನ್ನ, 246 ಗೋಲುಗಳು), ಉಧಮ್ ಸಿಂಗ್ (ಮೂರು ಚಿನ್ನ, ಒಂದು ಬೆಳ್ಳಿ) ಗಳಿಸಿದ್ದರೆ ಮೊಹಮ್ಮದ್ ಷಾಹಿದ್ ಮತ್ತು ಧನರಾಜ್ ಪಿಳ್ಳೈ ಅವರಂತಹ ದಂತಕಥೆಗಳು ಹಾಕಿಯನ್ನು ರಾಷ್ಟ್ರೀಯ ಗುರುತಾಗಿ ಮಾಡಿದರು.

ಹಿನ್ನಡೆಯ ಕಾಲ (1984- 2016)

1980ರ ನಂತರ ಭಾರತೀಯ ಹಾಕಿ ಹಿನ್ನಡೆಯನ್ನು ಕಂಡಿತು. 1975ರಲ್ಲಿ FIH ಆಸ್ಟ್ರೋಟರ್ಫ್ ಪರಿಚಯಿಸಿದ್ದು ಇದಕ್ಕೆ ಪ್ರಮುಖ ಕಾರಣವಾಗಿತ್ತು. ಭಾರತೀಯ ಆಟಗಾರರು ಹುಲ್ಲಿನ ಮೈದಾನಕ್ಕೆ ಹೊಂದಿಕೊಂಡಿದ್ದರು, ಆದರೆ ಹೊಸ ಟರ್ಫ್‌ಗೆ ಹೊಂದಿಕೊಳ್ಳಲು ಸಾಧ್ಯವಾಗಲಿಲ್ಲ. ಹಣದ ಕೊರತೆಯಿಂದ ಟರ್ಫ್ ಸೌಲಭ್ಯಗಳು ತಡವಾದವು. 1984 ರಿಂದ 2016ರವರೆಗೆ ಒಲಿಂಪಿಕ್ ಪದಕಗಳು ಸಿಗಲಿಲ್ಲ. 2008ರಲ್ಲಿ ಒಲಿಂಪಿಕ್ಸ್‌ಗೆ ಅರ್ಹತೆ ಪಡೆಯದಿರುವುದು ದೊಡ್ಡ ಆಘಾತವಾಗಿತ್ತು.

ಕ್ರಿಕೆಟ್‌ನ ಉದಯವು ಹಾಕಿಯನ್ನು ಕಡೆಗಣಿಸಲು ಕಾರಣವಾಯಿತು. ಆದರೆ, 2009ರಲ್ಲಿ ಹಾಕಿ ಇಂಡಿಯಾ ಸ್ಥಾಪನೆಯೊಂದಿಗೆ ಸುಧಾರಣೆಗಳು ಆರಂಭವಾದವು. ಹಾಕಿ ಇಂಡಿಯಾ ಲೀಗ್ (HIL) ವೃತ್ತಿಪರತೆಯನ್ನು ತಂದಿತು. ಸರ್ಕಾರದ ಯೋಜನೆಗಳಾದ ಟಾರ್ಗೆಟ್ ಒಲಿಂಪಿಕ್ ಪೋಡಿಯಂ ಸ್ಕೀಮ್ (TOPS), ಟಾರ್ಗೆಟ್ ಏಷ್ಯನ್ ಗೇಮ್ಸ್ ಗ್ರೂಪ್ (TAGG) ಮತ್ತು ASMITA ಹಾಕಿ ಲೀಗ್ ಮಹಿಳಾ ಹಾಕಿಯನ್ನು ಉತ್ತೇಜಿಸಿದವು.

Udam singh

ಮೈಲಿಗಲ್ಲುಗಳು

2016 ರಿಯೋ ಒಲಿಂಪಿಕ್ಸ್: ಕ್ವಾರ್ಟರ್ ಫೈನಲ್ ತಲುಪಿ ಸಕಾರಾತ್ಮಕ ಆರಂಭ.

2020 ಟೋಕಿಯೋ ಒಲಿಂಪಿಕ್ಸ್: 41 ವರ್ಷಗಳ ನಂತರ ಕಂಚು ಪದಕ. ಮಹಿಳಾ ತಂಡ 4ನೇ ಸ್ಥಾನ.

2024 ಪ್ಯಾರಿಸ್ ಒಲಿಂಪಿಕ್ಸ್: ಹರ್ಮನ್‌ಪ್ರೀತ್ ಸಿಂಗ್ ನಾಯಕತ್ವದಲ್ಲಿ ಕಂಚು.

ಇತ್ತೀಚಿನ ವರ್ಷಗಳಲ್ಲಿ ಏಷ್ಯನ್ ಗೇಮ್ಸ್ ಮತ್ತು ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಸಾಧನೆಗಳೊಂದಿಗೆ ಭಾರತ ವಿಶ್ವದ ಬಲಿಷ್ಠ ತಂಡಗಳಲ್ಲಿ ಒಂದಾಗಿದೆ. ಭಾರತೀಯ ಹಾಕಿಗೆ 100 ವರ್ಷ ಸಂದಿರುವುದಕ್ಕೆ ಇಡೀ ದೇಶದಲ್ಲಿ 500 ಜಿಲ್ಲೆಗಳಲ್ಲಿ 1000 ಪಂದ್ಯಗಳನ್ನು ಆಯೋಜಿಸಲಾಗಿದೆ. ಒಟ್ಟು 36 ಸಾವಿರ ಆಟಗಾರರು ಭಾಗವಹಿಸಲಿದ್ದಾರೆ.

ಇದನ್ನು ಓದಿದ್ದೀರಾ? ವ್ಯಕ್ತಿಚಿತ್ರ | ಸ್ಮೃತಿ ಮಂಧಾನ ಎಂಬ ವಿಶ್ವ ಕ್ರಿಕೆಟ್‌ನ ಮಿಂಚು

ಭಾರತೀಯ ಹಾಕಿಯನ್ನು ರೂಪಿಸಿದ ದಿಗ್ಗಜರು

ಧ್ಯಾನ್ ಚಂದ್: ಹಾಕಿ ಮಾಂತ್ರಿಕ. 1928, 1932, 1936 ಚಿನ್ನಗಳು. 570 ಅಂತಾರಾಷ್ಟ್ರೀಯ ಗೋಲುಗಳು. ಅವರ ಜನ್ಮದಿನವನ್ನು ರಾಷ್ಟ್ರೀಯ ಕ್ರೀಡಾ ದಿನವಾಗಿ ಆಚರಿಸಲಾಗುತ್ತದೆ.

ಬಲ್ಬೀರ್ ಸಿಂಗ್ ಸೀನಿಯರ್: ಮೂರು ಚಿನ್ನಗಳು (1948, 1952, 1956). 246 ಗೋಲುಗಳು. ಒಲಿಂಪಿಕ್ ಫೈನಲ್‌ಗಳಲ್ಲಿ ಅತಿ ಹೆಚ್ಚು ಗೋಲುಗಳ ದಾಖಲೆ.

ಉಧಮ್ ಸಿಂಗ್: ನಾಲ್ಕು ಒಲಿಂಪಿಕ್ ಪದಕಗಳು. 1956ರಲ್ಲಿ 15 ಗೋಲುಗಳ ದಾಖಲೆ.

ಧನರಾಜ್ ಪಿಳ್ಳೈ: ಆಧುನಿಕ ಯುಗದ ದಂತಕಥೆ. ನಾಲ್ಕು ಒಲಿಂಪಿಕ್ಸ್‌, ನಾಲ್ಕು ವಿಶ್ವಕಪ್‌ಗಳಲ್ಲಿ ಭಾಗಿ, 170 ಗೋಲುಗಳ ಸಾಧನೆ.

ಮೊಹಮ್ಮದ್ ಷಾಹಿದ್: ಡ್ರಿಬ್ಲಿಂಗ್ ಮಾಂತ್ರಿಕ. 1980ರ ಒಲಿಂಪಿಕ್ಸ್‌ ಚಿನ್ನದಲ್ಲಿ ಭಾಗಿ.

Dhanaraj pellay

ಮಹಿಳಾ ಹಾಕಿಯಲ್ಲಿ ರಾಣಿ ರಾಂಪಾಲ್, ಸವಿತಾ ಪೂನಿಯಾ ಮತ್ತು ವಂದನಾ ಕಟಾರಿಯಾ ಅವರು ಟೋಕಿಯೋ ಒಲಿಂಪಿಕ್ಸ್‌ನಲ್ಲಿ 4ನೇ ಸ್ಥಾನಕ್ಕೆ ಕಾರಣರಾದರು.

ಭಾರತೀಯ ಹಾಕಿ ಶತಮಾನೋತ್ಸವವು ನಮ್ಮ ಕ್ರೀಡಾ ಇತಿಹಾಸದ ಅತ್ಯಂತ ಹೆಮ್ಮೆಯ ಕ್ಷಣವಾಗಿದೆ. ಒಂದು ಶತಮಾನದಿಂದ ಭಾರತ ಹಾಕಿ ಕೇವಲ ಒಂದು ಕ್ರೀಡೆ ಮಾತ್ರವಲ್ಲ, ಅದು ದೇಶದ ಗೌರವ ಮತ್ತು ಏಕತೆಯ ಪ್ರತೀಕವಾಗಿದೆ. ಧ್ಯಾನ್ ಚಂದ್ ಅವರ ಅದ್ಭುತ ಕೌಶಲ್ಯದಿಂದ ಹಿಡಿದು ಹರ್ಮನ್‌ಪ್ರೀತ್‌ ಸಿಂಗ್ ಅವರ ಶಕ್ತಿಶಾಲಿ ಡ್ರ್ಯಾಗ್ ಫ್ಲಿಕ್‌ಗಳವರೆಗೆ, ಪ್ರತಿ ಪೀಳಿಗೆಯ ಆಟಗಾರರು ತಮ್ಮ ಶ್ರಮ, ನಿಷ್ಠೆ ಮತ್ತು ದೇಶಭಕ್ತಿಯಿಂದ ಭಾರತವನ್ನು ವಿಶ್ವ ವೇದಿಕೆಯಲ್ಲಿ ಮೆರೆದಿದ್ದಾರೆ. ಇಂದಿನ ದಿನಗಳಲ್ಲಿ ಹಾಕಿ ಇಂಡಿಯಾ ಗ್ರಾಮೀಣ ಪ್ರದೇಶಗಳಲ್ಲಿ ತಳಮಟ್ಟದ ಅಭಿವೃದ್ಧಿಗೆ ಹೆಚ್ಚು ಒತ್ತು ನೀಡುತ್ತಿದೆ. ಹೊಸ ಪ್ರತಿಭೆಗಳನ್ನು ಹುಡುಕಲು ಮತ್ತು ಬೆಳೆಸಲು ಡಿಜಿಟಲ್ ತರಬೇತಿ ಮತ್ತು ಆಧುನಿಕ ಸೌಲಭ್ಯಗಳನ್ನು ಒದಗಿಸಲಾಗುತ್ತಿದೆ. ಮಹಿಳಾ ಮತ್ತು ಪುರುಷ ಆಟಗಾರರಿಗೆ ಸಮಾನ ಅವಕಾಶಗಳು ಸಿಕ್ಕಿವೆ, ಇದು ಸಮಾನತೆಯ ಹೊಸ ದಾರಿಯಾಗಿದೆ.

blank profile picture 973460 640
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಮತ್ತೆ ಲಲಿತ್ ಮೋದಿ: ಐಪಿಎಲ್ 2026ಕ್ಕೂ ಮುನ್ನ ಭಾರೀ ಬದಲಾವಣೆ ಸಾಧ್ಯತೆ?

ರಾಜಸ್ಥಾನ ರಾಯಲ್ಸ್ ಫ್ರಾಂಚೈಸಿಯ ಮಾಲೀಕತ್ವದಲ್ಲಿ ಶೀಘ್ರದಲ್ಲೇ ಬದಲಾವಣೆಯಾಗುವ ಸಾಧ್ಯತೆಯಿದ್ದು, ಜಾಗತಿಕ ಹೂಡಿಕೆ...

ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಐಪಿಎಲ್ ಪಂದ್ಯಗಳ ಆಯೋಜನೆಗೆ ಸರ್ಕಾರದ ಅನುಮತಿ

ಬೆಂಗಳೂರಿನ ಐತಿಹಾಸಿಕ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಐಪಿಎಲ್ 2026 ಹಾಗೂ ಅಂತರರಾಷ್ಟ್ರೀಯ...

ಟೀಕೆಗಳ ಸುಳಿಯಲ್ಲೂ ಮಿನುಗಿದ ಕೇರಳದ ತಾರೆ: ಸಂಜು ಸ್ಯಾಮ್ಸನ್ ಎಂಬ ಛಲದಂಕಮಲ್ಲ

ಮೈದಾನದಲ್ಲಿ ಎಂ ಎಸ್  ಧೋನಿಯಂತೆಯೇ ಅತೀವ ಶಾಂತ ಸ್ವಭಾವವನ್ನು ಕಾಯ್ದುಕೊಳ್ಳುವ ಸಂಜು...