2026ರ ಫಿಫಾ ವಿಶ್ವಕಪ್​ ಅರ್ಹತಾ ಟೂರ್ನಿ | ಕತಾರ್​ ಮೋಸದಾಟಕ್ಕೆ ಭಾರತ ಫುಟ್ಬಾಲ್​ ತಂಡ ‘ಔಟ್’; ವ್ಯಾಪಕ ಆಕ್ರೋಶ

Date:

ಕ್ರಿಕೆಟ್​​ನಂತೆ ಫುಟ್ಬಾಲ್​ನಲ್ಲಿ ಮಹತ್ತರ ಬದಲಾವಣೆ ತರಬೇಕಿದೆ ಎಂಬ ಕೂಗು ಸಾಮಾಜಿಕ ಜಾಲತಾಣಗಳಲ್ಲಿ ಜೋರಾಗಿ ಕೇಳಿ ಬರುತ್ತಿದೆ. ಇದಕ್ಕೆ ಕಾರಣ, ಕತಾರ್​ ತಂಡದ ಮೋಸದಾಟಕ್ಕೆ ಭಾರತದ ಫುಟ್ಬಾಲ್​ ತಂಡ ಬಲಿಯಾಗಿದೆ.

2026ರ ಫಿಫಾ ವಿಶ್ವಕಪ್​ ಅರ್ಹತಾ ಟೂರ್ನಿಯಲ್ಲಿ ಕತಾರ್​ ತಂಡವು ನಡೆಸಿದ ಮೋಸದಾಟಕ್ಕೆ ಭಾರತೀಯ ಫುಟ್ಬಾಲ್​ ತಂಡ ಔಟ್ ಆಗಿದ್ದು, ಸೋಷಿಯಲ್ ಮೀಡಿಯಾಗಳಲ್ಲಿ ವ್ಯಾಪಕ ಆಕ್ರೋಶ ವ್ಯಕ್ತವಾಗುತ್ತಿದೆ.

ಕತಾರ್ ವಿರುದ್ಧ 2-1 ಗೋಲಿನ ಅಂತರದ ಸೋಲಿನಿಂದ ಭಾರತ ತಂಡ 2026ರ ಫಿಫಾ ವಿಶ್ವಕಪ್​ ಅರ್ಹತಾ ಟೂರ್ನಿಯಿಂದ ಹೊರಬಿದ್ದರೆ, 2027ರ ಏಷ್ಯನ್​ ಕಪ್​ಗೆ ನೇರ ಅರ್ಹತೆ ಪಡೆಯಲು ವಿಫಲವಾಗಿ ಡಬಲ್​ ಶಾಕ್​ ಅನುಭವಿಸಬೇಕಾಯಿತು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ದೋಹಾದಲ್ಲಿ ನಿನ್ನೆ (ಮಂಗಳವಾರ) ನಡೆದ ಫಿಫಾ ವಿಶ್ವಕಪ್​ ಅರ್ಹತಾ ಟೂರ್ನಿಯ 2ನೇ ಸುತ್ತಿನಲ್ಲಿ ಏಷ್ಯನ್​ ಚಾಂಪಿಯನ್​ ಕತಾರ್​ ತಂಡದ ವಿರುದ್ಧದ ಪಂದ್ಯದಲ್ಲಿ ಭಾರತ ತಂಡ ಮೋಸದಾಟಕ್ಕೆ ಸೋಲು ಕಂಡಿತು. ನಿರ್ಣಾಯಕ ಪಂದ್ಯದಲ್ಲಿ ಗೆಲುವಿಗಾಗಿ ಹೋರಾಡುತ್ತಿದ್ದ ಭಾರತಕ್ಕೆ ಕತಾರ್​ ಎಸಗಿದ ದ್ರೋಹದಿಂದ 1-2 ಗೋಲುಗಳಿಂದ ನಿರಾಸೆ ಅನುಭವಿಸಿತು.

2 ಬಾರಿಯ ಏಷ್ಯನ್​ ಚಾಂಪಿಯನ್​ ಆದ ಕತಾರ್​ ವಿರುದ್ಧ ಭಾರತ ಉತ್ತಮ ಆಟವಾಡುತ್ತಿತ್ತು. ಮೊದಲಾರ್ಧದ 37ನೇ ನಿಮಿಷದಲ್ಲಿ ಭಾರತದ ಲಾಲಿಯನ್ಜುವಾಲಾ ಚಾಂಗ್ಟೆ ಆಕರ್ಷಕ ಕಾಲ್ಚಳಕದಿಂದ ಮೊದಲ ಗೋಲು ದಾಖಲಾಯಿತು. 1-0 ಯಲ್ಲಿ ಮುನ್ನಡೆದ ಭಾರತ ಮೊದಲಾರ್ಧದಲ್ಲಿ ಕತಾರ್​ಗೆ ಗೋಲು ಬಿಟ್ಟುಕೊಡದೇ ಮುನ್ನಡೆ ಸಾಧಿಸಿತು.

ಕತಾರ್​ ಮೋಸದಾಟ ಹೇಗೆ?

ಬಳಿಕ ದ್ವಿತೀಯಾರ್ಧದಲ್ಲಿ ಗೋಲು ಬಾರಿಸುವ ಬದಲಿಗೆ ರಕ್ಷಣಾತ್ಮಕ ಆಟಕ್ಕೆ ಮೊರೆ ಹೋದ ಭಾರತಕ್ಕೆ ಕತಾರ್​ ಮೋಸ ಮಾಡಿತು. 75ನೇ ನಿಮಿಷದಲ್ಲಿ ಕತಾರ್ ಗೋಲು ಗಳಿಸುವ ಪ್ರಯತ್ನ ಮಾಡಿತು. ಗೋಲು ಪೆಟ್ಟಿಗೆಯ ಅಂಚಿನಲ್ಲಿ ನಡೆದ ಚಕಮಕಿಯಲ್ಲಿ ಚೆಂಡು ಗೆರೆ ದಾಟಿ ಹೋಯಿತು. ಇದರಿಂದ ಭಾರತದ ಗೋಲ್​ಕೀಪರ್​ ಮತ್ತು ನಾಯಕರಾದ ಗುರ್​ಪ್ರೀತ್​ ಸಿಂಗ್ ಚೆಂಡನ್ನು ಹಿಡಿಯಲು ಪ್ರಯತ್ನಿಸಲಿಲ್ಲ.

ಆದರೆ, ಕತಾರ್​ನ ಅಲ್​ ಹಸನ್​ ಹೊರ ಹೋಗಿದ್ದ ಚೆಂಡನ್ನು ಒಳಗೆ ಮೆಲ್ಲ ಎಳೆದುಕೊಂಡು ಇನ್ನೋರ್ವ ಆಟಗಾರ ಯೂಸುಫ್​ ಅಯೆಮ್​ಗೆ ಪಾಸ್​ ನೀಡಿದರು. ಯೂಸುಫ್​ ಚೆಂಡನ್ನು ತಕ್ಷಣವೇ ಗೋಲಿಗೆ ತಳ್ಳಿ ಸಂಭ್ರಮಿಸಲು ಶುರು ಮಾಡಿದರು. ಭಾರತೀಯ ಆಟಗಾರರು ಇದನ್ನು ಪ್ರಶ್ನಿಸಿದರು. ಚೆಂಡು ಹೋಗಿದೆ ಎಂದು ರೆಫ್ರಿ ಬಳಿ ದೂರಿದರು. ಆದರೆ, ರೆಫ್ರಿಗಳು ಗೋಲು ಗಳಿಸಿದ ಅಂಕವನ್ನು ಕತಾರ್​ ನೀಡಿದರು. ಇದರಿಂದ ಭಾರತೀಯರು ಭಾರೀ ನಿರಾಸೆಗೆ ಒಳಗಾದರು.

ಬಳಿಕ ಆಟ ಮುಗಿಯಲು 5 ನಿಮಿಷ ಇದ್ದಾಗ (85ನೇ ನಿಮಿಷ) ಕತಾರ್​ ಮತ್ತೊಂದು ಗೋಲು ದಾಖಲಿಸಿ ಸಂಭ್ರಮಾಚರಣೆ ಮಾಡಿತು. ಮೊದಲ ಗೋಲಿನ ಈ ವಿಡಿಯೋ ಸದ್ಯ ಸೋಷಿಯಲ್ ಮೀಡಿಯಾಗಳಲ್ಲಿ ವೈರಲಾಗಿದ್ದು, ಮೈದಾನದಲ್ಲಿ ರೆಫ್ರಿಗಳಿಗೆ ಕಣ್ಣಿಲ್ಲವೇ ಎಂದು ಆಕ್ರೋಶ ಹೊರಹಾಕಿದ್ದಾರೆ.

ಕತಾರ್​ಗೆ ಮುಖ್ಯವಾಗಿಲ್ಲದ ಪಂದ್ಯದಲ್ಲಿ ಬಾರತ ತಂಡದ ವಿರುದ್ಧ ಮೋಸದಾಟವಾಡಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ತಂಡದ ವಿರುದ್ಧ ಭಾರೀ ಟೀಕೆ ವ್ಯಕ್ತವಾಗಿದೆ.

ಭಾರತಕ್ಕೆ ಡಬಲ್​ ಶಾಕ್​; ಫಿಫಾಗೆ ದೂರು:

ಈ ಸೋಲಿನ ಮೂಲಕ ಭಾರತ ಎರಡು ಆಘಾತ ಅನುಭವಿಸಿತು. 2026 ರಲ್ಲಿ ನಡೆಯುವ ಫಿಫಾ ವಿಶ್ವಕಪ್​ ಮತ್ತು 2027 ರ ಏಷ್ಯನ್​ ಕಪ್​ಗೆ ಅರ್ಹತೆ ಪಡೆಯುವಲ್ಲಿ ವಿಫಲವಾಯಿತು. ಪಂದ್ಯದಲ್ಲಾದ ಮೋಸದ ಬಗ್ಗೆ ಭಾರತ ಫುಟ್ಬಾಲ್​ ಸಂಸ್ಥೆ ಅಂತಾರಾಷ್ಟ್ರೀಯ ಫುಟ್ಬಾಲ್​ ಸಂಸ್ಥೆಗೆ(FIFA) ಪತ್ರ ಬರೆದು ದೂರು ನೀಡಿದೆ.

Qatar 1

ವಿವಾದಾತ್ಮಕ ಗೋಲು ನೀಡಿದ್ದು, ಭಾರತೀಯರನ್ನು ಘಾಸಿಗೊಳಿಸಿದೆ. ಗೆಲುವು, ಸೋಲನ್ನು ತಂಡ ವಿನಮ್ರವಾಗಿ ಒಪ್ಪುತ್ತದೆ. ಆದರೆ, ಮಂಗಳವಾರ ರಾತ್ರಿ ನಡೆದ ಪಂದ್ಯದಲ್ಲಿ ಕೆಲವು ಪ್ರಶ್ನೆಗಳಿಗೆ ಉತ್ತರ ಸಿಕ್ಕಿಲ್ಲ ಎಂದು ಪತ್ರದಲ್ಲಿ ನಮೂದಿಸಲಾಗಿದೆ.

ಇದನ್ನು ಓದಿದ್ದೀರಾ? ಜಿಜ್ಞಾಸೆ | ರಿಷಬ್ ಪಂತ್‌ಗೆ ಸಿಕ್ಕ ಸೌಲಭ್ಯ ಸಾಮಾನ್ಯರಿಗೇಕಿಲ್ಲ, ಸರ್ಕಾರಗಳ ಆದ್ಯತೆಗಳೇನು?

ಪತ್ರಿಕಾಗೋಷ್ಠಿಯಲ್ಲಿ ತಂಡದ ಪ್ರದರ್ಶನದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿರುವ ಮುಖ್ಯ ಕೋಚ್​ ಇಗೊರ್​ ಸ್ಟಿಮ್ಯಾಕ್​, “ಭಾರತೀಯರು ಹೆಮ್ಮೆ ಪಡುವಂತೆ ಆಟಗಾರರು ಉತ್ತಮ ಪ್ರದರ್ಶನ ನೀಡಿದರು. ಮೊದಲ ಗೋಲಿನ ವಿವಾದದಿಂದಾಗಿ ತಂಡ ಸೋತಿದೆ. ಟಿವಿ ರಿಪ್ಲೈನಲ್ಲಿ ಸತ್ಯ ಕಾಣಿಸುತ್ತದೆ. ಆದಾಗ್ಯೂ ತಂಡ ಸೋತು ಭಾರತೀಯರನ್ನು ನಿರಾಸೆ ತಂದಿದ್ದಕ್ಕೆ ಬೇಸರವಿದೆ” ಎಂದರು.

WhatsApp Image 2025 11 17 at 3.21.38 PM
ಈ ದಿನ ಡೆಸ್ಕ್
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಮತ್ತೆ ಲಲಿತ್ ಮೋದಿ: ಐಪಿಎಲ್ 2026ಕ್ಕೂ ಮುನ್ನ ಭಾರೀ ಬದಲಾವಣೆ ಸಾಧ್ಯತೆ?

ರಾಜಸ್ಥಾನ ರಾಯಲ್ಸ್ ಫ್ರಾಂಚೈಸಿಯ ಮಾಲೀಕತ್ವದಲ್ಲಿ ಶೀಘ್ರದಲ್ಲೇ ಬದಲಾವಣೆಯಾಗುವ ಸಾಧ್ಯತೆಯಿದ್ದು, ಜಾಗತಿಕ ಹೂಡಿಕೆ...

ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಐಪಿಎಲ್ ಪಂದ್ಯಗಳ ಆಯೋಜನೆಗೆ ಸರ್ಕಾರದ ಅನುಮತಿ

ಬೆಂಗಳೂರಿನ ಐತಿಹಾಸಿಕ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಐಪಿಎಲ್ 2026 ಹಾಗೂ ಅಂತರರಾಷ್ಟ್ರೀಯ...

ಟೀಕೆಗಳ ಸುಳಿಯಲ್ಲೂ ಮಿನುಗಿದ ಕೇರಳದ ತಾರೆ: ಸಂಜು ಸ್ಯಾಮ್ಸನ್ ಎಂಬ ಛಲದಂಕಮಲ್ಲ

ಮೈದಾನದಲ್ಲಿ ಎಂ ಎಸ್  ಧೋನಿಯಂತೆಯೇ ಅತೀವ ಶಾಂತ ಸ್ವಭಾವವನ್ನು ಕಾಯ್ದುಕೊಳ್ಳುವ ಸಂಜು...