6 ಬಾಲ್‌ಗೆ 6 ಸಿಕ್ಸ್‌ | ಒಂದೇ ಓವರ್‌ನಲ್ಲಿ 37 ರನ್‌ ಕೊಟ್ಟ ರಾಬಿನ್ ಉತ್ತಪ್ಪ

Date:

ಹಾಂಗ್‌ ಕಾಂಗ್‌ನಲ್ಲಿ ನಡೆಯುತ್ತಿರುವ ಹಾಂಗ್‌ ಕಾಂಗ್‌ ಸಿಕ್ಸಸ್ ಪಂದ್ಯಾವಳಿಯಲ್ಲಿ ಭಾರತ ಮತ್ತು ಇಂಗ್ಲೆಂಡ್‌ ನಡುವೆ ಪಂದ್ಯ ನಡೆದಿದೆ. ಈ ವೇಳೆ, ಭಾರತ ತಂಡದ ರಾಬಿನ್ ಉತ್ತಪ್ಪ ಬರೋಬ್ಬರಿ 37 ರನ್‌ಗಳನ್ನು ಕೊಟ್ಟಿದ್ದಾರೆ. ಅವರ ಬೌಲಿಂಗ್ ಎದುರಿಸಿದ ಇಂಗ್ಲೆಂಡ್‌ ತಂಡದ ರವಿ ಬೋಪಾರಾ ಆರು ಬಾಲ್‌ಗಳಿಗೆ 6 ಸಿಕ್ಸ್‌ ಪೇರಿಸಿದ್ದಾರೆ.

ಉತ್ತಪ್ಪ ಮಾಡಿದ ಬೌಲಿಂಗ್‌ನಲ್ಲಿ ಮೊದಲ 5 ಬಾಲ್‌ಗಳಿಗೆ ಬೋಪಾರಾ 5 ಸಿಕ್ಸ್‌ ಸಿಡಿಸಿದ್ದಾರೆ. ಬಳಿಕ, ಒಂದು ‘ವೈಡ್‌’ ಆಗಿದ್ದು, ಆರನೇ ಬಾಲ್‌ಗೆ ಮತ್ತೊಂದು ಸಿಕ್ಸ್‌ ಸಿಡಿಸಿದ್ದಾರೆ (6, 6, 6, 6, 6, ವೈಡ್, 6). ಈ ಆರು ಸಿಕ್ಸ್‌ಗಳೊಂದಿಗೆ ಕೇವಲ 14 ಎಸೆತಗಳಲ್ಲಿಯೇ ಬೋಪಾರಾ ಅರ್ಧಶತಕ ಸಿಡಿಸಿದ್ದಾರೆ.

ಓವರ್ ಚೇಂಜ್ ಆದ ಬಳಿಕ, ಬೌಲಿಂಗ್ ಎದುರಿಸಿದ ಇಂಗ್ಲೆಂಡ್‌ ಆಟಗಾರ ಶಹಬಾಜ್ ನದೀಮ್, ಮೊದಲ ಎಸತಕ್ಕೆ ಸಿಕ್ಸ್‌ ಬಾರಿಸಿದರು. ಇದು, ಇಂಗ್ಲೆಂಡ್‌ ತಂಡ ಸತತ 7 ಸಿಕ್ಸ್‌ ಗಳಿಕೆಗೆ ಕಾರಣವಾಯಿತು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ಇಂಗ್ಲೆಂಡ್ ತಂಡದ ನಾಯಕರಾಗಿದ್ದ ಬೋಪಾರಾ ತಮ್ಮ ಇನ್ನಿಂಗ್ಸ್‌ನಲ್ಲಿ ಎಂಟು ಸಿಕ್ಸರ್‌ಗಳ ಸಹಾಯದೊಂದಿಗೆ ಕೇವಲ 14 ಎಸೆತಗಳಲ್ಲಿ 53 ರನ್ ಗಳಿಸಿದರು. ಸಮಿತ್ ಪಟೇಲ್ ಅವರು ಕೇವಲ 18 ಎಸೆತಗಳಲ್ಲಿ ನಾಲ್ಕು ಬೌಂಡರಿ ಮತ್ತು ಐದು ಸಿಕ್ಸರ್‌ಗಳ ಸಹಾಯದಿಂದ 51 ರನ್ ಪೇರಿಸಿದರು.

ಪಂದ್ಯದಲ್ಲಿ ಬೋಪಾರಾ ಅವರು ಬ್ಯಾಟಿಂಗ್‌ನ ವಿಡಿಯೋ ಹಂಚಿಕೊಂಡಿರುವ ‘ಹಾಂಗ್‌ ಕಾಂಗ್‌ ಸಿಕ್ಸ್‌’ ಟ್ವಿಟರ್‌ ಹ್ಯಾಂಡಲ್, “ಇಂಗ್ಲೆಂಡ್‌ ತಂಡದ ನಾಯಕ ರವಿ ಬೋಪಾರಾ ಹಾಂಕಾಂಗ್‌ನಲ್ಲಿ ಸಿಕ್ಸರ್‌ಗಳ ಮಳೆಗರೆಯುತ್ತಿದ್ದಾರೆ!” ಎಂದು ಪೋಸ್ಟ್‌ ಮಾಡಿದೆ.

ಬೋಪಾರಾ ಮತ್ತು ಪಟೇಲ್ ಅವರ ಭರ್ಜರಿ ಪ್ರದರ್ಶನದೊಂದಿಗೆ ಇಂಗ್ಲೆಂಡ್ ತಂಡವು 6 ಓವರ್‌ಗಳಲ್ಲಿ ಒಂದು ಟಿಕೆಟ್‌ ನಷ್ಟದೊಂದಿಗೆ ಒಟ್ಟು 120 ರನ್‌ ಕಲೆ ಹಾಕಿತು. ಇಂಗ್ಲೆಂಡ್‌ ನೀಡಿದ ಗುರಿಯ ಬೆನ್ನತ್ತಿದ ಭಾರತದ ತಂಡ 6 ಓವರ್‌ಗಳಲ್ಲಿ 105 ರನ್‌ಗಳನ್ನು ಗಳಿಸಿ, ಸೋಲುಂಡಿತು.

ಹಾಂಗ್‌ ಕಾಂಗ್‌ ಸಿಕ್ಸ್‌ ಪಂದ್ಯಾವಳಿಯಲ್ಲಿ ಭಾರತವು ಇನ್ನೂ ಒಂದೇ ಒಂದು ಪಂದ್ಯವನ್ನು ಗೆದ್ದಿಲ್ಲ. ಈಗಾಗಲೇ ಪಾಕಿಸ್ತಾನ, ಯುಎಇ ಮತ್ತು ಇಂಗ್ಲೆಂಡ್ ವಿರುದ್ಧ ಭಾರತ ಸೋಲುಂಡಿದೆ.

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಮತ್ತೆ ಲಲಿತ್ ಮೋದಿ: ಐಪಿಎಲ್ 2026ಕ್ಕೂ ಮುನ್ನ ಭಾರೀ ಬದಲಾವಣೆ ಸಾಧ್ಯತೆ?

ರಾಜಸ್ಥಾನ ರಾಯಲ್ಸ್ ಫ್ರಾಂಚೈಸಿಯ ಮಾಲೀಕತ್ವದಲ್ಲಿ ಶೀಘ್ರದಲ್ಲೇ ಬದಲಾವಣೆಯಾಗುವ ಸಾಧ್ಯತೆಯಿದ್ದು, ಜಾಗತಿಕ ಹೂಡಿಕೆ...

ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಐಪಿಎಲ್ ಪಂದ್ಯಗಳ ಆಯೋಜನೆಗೆ ಸರ್ಕಾರದ ಅನುಮತಿ

ಬೆಂಗಳೂರಿನ ಐತಿಹಾಸಿಕ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಐಪಿಎಲ್ 2026 ಹಾಗೂ ಅಂತರರಾಷ್ಟ್ರೀಯ...

ಟೀಕೆಗಳ ಸುಳಿಯಲ್ಲೂ ಮಿನುಗಿದ ಕೇರಳದ ತಾರೆ: ಸಂಜು ಸ್ಯಾಮ್ಸನ್ ಎಂಬ ಛಲದಂಕಮಲ್ಲ

ಮೈದಾನದಲ್ಲಿ ಎಂ ಎಸ್  ಧೋನಿಯಂತೆಯೇ ಅತೀವ ಶಾಂತ ಸ್ವಭಾವವನ್ನು ಕಾಯ್ದುಕೊಳ್ಳುವ ಸಂಜು...