ಐದನೇ ಟೆಸ್ಟ್ | ಅಶ್ವಿನ್ ದಾಳಿಗೆ ಆಂಗ್ಲರು ಧೂಳಿಪಟ; ಭಾರತಕ್ಕೆ 4-1 ಸರಣಿ ಜಯ

Date:

ಸ್ಪಿನ್ನರ್ ಆರ್‌ ಅಶ್ವಿನ್ ದಾಳಿಗೆ ಇಂಗ್ಲೆಂಡ್ ತಂಡದ ಬ್ಯಾಟ್ಸ್‌ಮನ್‌ಗಳು ಸರದಿ ಸಾಲಿನಲ್ಲಿ ಪೆವಿಲಿಯನ್‌ ಕಡೆ ಹೆಜ್ಜೆ ಹಾಕಿದರು. 259 ರನ್‌ಗಳ ಹಿನ್ನಡೆಯೊಂದಿಗೆ ಎರಡನೇ ಇನಿಂಗ್ಸ್ ಆರಂಭಿಸಿದ ಬೆನ್‌ ಸ್ಟೋಕ್ಸ್‌ ನೇತೃತ್ವದ ಪ್ರವಾಸಿ ತಂಡ 195 ರನ್‌ಗಳಿಗೆ ಆಲೌಟ್‌ ಆಗಿ ಭಾರತಕ್ಕೆ ಇನಿಂಗ್ಸ್‌ ಹಾಗೂ 64 ರನ್‌ಗಳ ಗೆಲುವಿನ ಕಾಣಿಕೆ ನೀಡಿತು.

ಧರ್ಮಶಾಲಾದಲ್ಲಿ ನಡೆಯುತ್ತಿರುವ ಐದನೇ ಹಾಗೂ ಅಂತಿಮ ಟೆಸ್ಟ್‌ ಪಂದ್ಯದ ಮೂರನೇ ದಿನವಾದ ಇಂದು ಭಾರತ ಮೊದಲ ಇನಿಂಗ್ಸ್‌ನಲ್ಲಿ 124.1 ಓವರ್‌ಗಳಲ್ಲಿ 477 ರನ್‌ಗಳಿಗೆ ಆಲೌಟ್‌ ಆಗಿ 259 ರನ್‌ಗಳ ಮುನ್ನಡೆ ಪಡೆಯಿತು. ಎರಡನೆ ಇನಿಂಗ್ಸ್‌ ಆರಂಭಿಸಿರುವ ಇಂಗ್ಲೆಂಡ್ ತಂಡ 48.1 ಓವರ್‌ಗಳಲ್ಲಿ ತನ್ನೆಲ್ಲ ವಿಕೆಟ್ ಕಳೆದುಕೊಂಡಿತು. ಇದರೊಂದಿಗೆ ರೋಹಿತ್ ಶರ್ಮಾ ನೇತೃತ್ವದ ಭಾರತ ತಂಡ 4-1 ಸರಣಿ ಜಯಿಸಿತು.

ಎರಡನೇ ಓವರ್‌ನಿಂದಲೇ ದಾಳಿ ಆರಂಭಿಸಿದ ಸ್ಪಿನ್ನರ್ ಮಾಂತ್ರಿಕ ಆರ್‌ ಅಶ್ವಿನ್ ಐದು ವಿಕೆಟ್ ಕಬಳಿಸಿದರು. 2ನೇ ಇನಿಂಗ್ಸ್‌ನಲ್ಲಿ 5 ವಿಕೆಟ್‌ ಪಡೆಯುವುದರೊಂದಿಗೆ ತಮ್ಮ ನೂರನೇ ಟೆಸ್ಟ್‌ನಲ್ಲಿ  9 ವಿಕೆಟ್ ಗೊಂಚಲನ್ನು ತಮ್ಮ ಮಡಿಲಿಗೆ ಹಾಕಿಕೊಂಡಿದ್ದಾರೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ತಮ್ಮ 100ನೇ ಟೆಸ್ಟ್‌ನಲ್ಲಿ 5 ವಿಕೆಟ್‌ ಕಬಳಿಸಿದ ಭಾರತದ ಎರಡನೇ ಬೌಲರ್‌ ಎಂಬ ಕೀರ್ತಿಗೂ ಅಶ್ವಿನ್‌ ಭಾಜನರಾದರು. ಈ ಮೊದಲು ಅನಿಲ್‌ ಕುಂಬ್ಳೆ ಈ ಸಾಧನೆ ಮಾಡಿದ್ದರು. ಅತಿ ಹೆಚ್ಚು ಬಾರಿ 5 ವಿಕೆಟ್ ಪಡೆದ ಸಾಲಿನಲ್ಲಿ ಅಶ್ವಿನ್‌ (36 ಬಾರಿ) ಮೂರನೇ ಸಾಲಿನಲ್ಲಿ  ರಿಚರ್ಡ್‌ ಹ್ಯಾಂಡ್ಲಿ ಜೊತೆ ಸ್ಥಾನ ಪಡೆಸಿದ್ದಾರೆ. ಮೊದಲ ಎರಡರ ಸ್ಥಾನದಲ್ಲಿ ಮುತ್ತಯ್ಯ ಮುರಳೀಧರನ್‌ (67 ಬಾರಿ) ಹಾಗೂ ಶೇನ್‌ ವಾರ್ನ್‌ (37 ಬಾರಿ) ಇದ್ದಾರೆ.

ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ʼಮಹಿಳಾ ದಿನʼ ಅರ್ಥಪೂರ್ಣವಾಗೋದು ಆಕೆಗೆ ಘನತೆಯಿಂದ ಬದುಕಲು ಬಿಟ್ಟಾಗ ಮಾತ್ರ

ಜಾಕ್‌ ಕ್ರಾಲಿ, ಬೆನ್‌ ಡೆಕೆಟ್, ನಾಯಕ ಬೆನ್‌ ಸ್ಟೋಕ್ಸ್‌, ಬೆನ್‌ ಫೋಕ್ಸ್‌ ಸೇರಿದಂತೆ ಐವರು ಪ್ರಮುಖ ಬ್ಯಾಟರ್‌ಗಳನ್ನು ಅಶ್ವಿನ್ ಔಟ್‌ ಮಾಡಿ ಪೆವಿಲಿಯನ್‌ ಕಡೆ ಅಟ್ಟಿದ್ದಾರೆ. ಜಾನಿ ಬೈರ್‌ಸ್ಟೋ ಅವರನ್ನು ಕುಲ್‌ದೀಪ್‌ ಯಾದವ್‌ ಎಲ್‌ಬಿ ಬಲೆಗೆ ಬೀಳಿಸುವುದರ ಮೂಲಕ ವಿಕೆಟ್ ತನ್ನದಾಗಿಸಿಕೊಂಡರು. 20 ರನ್‌ ಕಬಳಿಸಿದ್ದ ಟಾಮ್‌ ಹಾರ್ಟ್ಲಿ ಹಾಗೂ ಮಾರ್ಕ್‌ ವುಡ್‌ ಅವರನ್ನು ಬುಮ್ರಾ ಔಟ್‌ ಮಾಡಿದರು.

ಟೀಂ ಇಂಡಿಯಾ ಪರ ಆರ್‌ ಅಶ್ವಿನ್‌ 77/5, ಬುಮ್ರಾ 38/2, ರವೀಂದ್ರ ಜಡೇಜಾ 24/1 ಹಾಗೂ ಕುಲ್‌ದೀಪ್‌ ಯಾದವ್‌ 40/2 ವಿಕೆಟ್ ಕಬಳಿಸಿದರು.

ತಮ್ಮ 137ನೇ ಟಸ್ಟ್‌ ಆಡಿದ 41 ವರ್ಷದ ಇಂಗ್ಲೆಂಡ್‌ ವೇಗಿ ಜೇಮ್ಸ್‌ ಆಂಡರ್ಸನ್‌ ಭಾರತ ಮೊದಲ ಇನಿಂಗ್ಸ್‌ ಆಡುವಾಗ ಕುಲದೀಪ್‌ ಯಾದವ್‌ ಅವರನ್ನು ಔಟ್‌ ಮಾಡುವ ಮೂಲಕ 700 ವಿಕೆಟ್‌ಗಳ ಸಾಧನೆ ಮಾಡಿದರು. ಟೆಸ್ಟ್‌ ವೃತ್ತಿ ಜೀವನದಲ್ಲಿ 700 ವಿಕೆಟ್ ಪಡೆದ ಮೊದಲ ವೇಗಿ ಎಂಬ ಶ್ರೇಯಕ್ಕೂ ಆಂಡರ್ಸನ್‌ ಪಾತ್ರರಾದರು.

500ಕ್ಕಿಂತ ಹೆಚ್ಚು ಟೆಸ್ಟ್‌ ವಿಕೆಟ್ ಪಡೆದ ಪಟ್ಟಿಯಲ್ಲಿ ಶ್ರೀಲಂಕಾದ ಸ್ಪಿನ್ ಮಾಂತ್ರಿಕ ಮುತ್ತಯ್ಯ ಮುರಳೀಧರನ್ 800 ವಿಕೆಟ್ ಪಡೆದು ಮೊದಲ ಸ್ಥಾನದಲ್ಲಿದ್ದರೆ, ಆಸೀಸ್‌ನ ಶೇನ್ ವಾರ್ನ್(708) ಎರಡನೇ ಸ್ಥಾನದಲ್ಲಿದ್ದಾರೆ. ಆ್ಯಂಡರ್‌ಸನ್ 700 ವಿಕೆಟ್ ಪಡೆಯುವ ಮೂಲಕ ಮೂರನೇ ಸ್ಥಾನ ಕಾಯ್ದುಕೊಂಡಿದ್ದಾರೆ.

ಉಳಿದಂತೆ ಭಾರತದ ಸ್ಪಿನ್ ಮಾಂತ್ರಿಕ ಅನಿಲ್ ಕುಂಬ್ಳೆ 619, ಇಂಗ್ಲೆಂಡ್‌ನ ಸ್ಟುವರ್ಟ್‌ ಬ್ರಾಡ್ 604, ಆಸೀಸ್‌ನ ಗ್ಲೆನ್ ಮೆಕ್‌ಗ್ರಾಥ್ 563, ಆಸ್ಟ್ರೇಲಿಯಾದ ಸ್ಪಿನ್ನರ್ ನಾಥನ್ ಲಿಯಾನ್ 527, ವೆಸ್ಟ್‌ ಇಂಡೀಸ್ ಕರ್ಟ್ನಿ ವಾಲ್ಶ್ 519, ಭಾರತದ ಆರ್ ಅಶ್ವಿನ್ 513 ವಿಕೆಟ್ ಪಡೆದಿದ್ದು, ಅಗ್ರ 10ರೊಳಗಿನ ಪಟ್ಟಿಯಲ್ಲಿದ್ದಾರೆ.

ಸಂಕ್ಷಿಪ್ತ ಸ್ಕೋರ್

ಭಾರತ ಮೊದಲ ಇನಿಂಗ್ಸ್ 477

ಇಂಗ್ಲೆಂಡ್ 218 ಮತ್ತು 195

ಫಲಿತಾಂಶ: ಭಾರತಕ್ಕೆ ಇನಿಂಗ್ಸ್ ಹಾಗೂ 64 ರನ್‌ ಜಯ

WhatsApp Image 2025 11 17 at 3.21.17 PM
ಈ ದಿನ ಡೆಸ್ಕ್
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಮತ್ತೆ ಲಲಿತ್ ಮೋದಿ: ಐಪಿಎಲ್ 2026ಕ್ಕೂ ಮುನ್ನ ಭಾರೀ ಬದಲಾವಣೆ ಸಾಧ್ಯತೆ?

ರಾಜಸ್ಥಾನ ರಾಯಲ್ಸ್ ಫ್ರಾಂಚೈಸಿಯ ಮಾಲೀಕತ್ವದಲ್ಲಿ ಶೀಘ್ರದಲ್ಲೇ ಬದಲಾವಣೆಯಾಗುವ ಸಾಧ್ಯತೆಯಿದ್ದು, ಜಾಗತಿಕ ಹೂಡಿಕೆ...

ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಐಪಿಎಲ್ ಪಂದ್ಯಗಳ ಆಯೋಜನೆಗೆ ಸರ್ಕಾರದ ಅನುಮತಿ

ಬೆಂಗಳೂರಿನ ಐತಿಹಾಸಿಕ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಐಪಿಎಲ್ 2026 ಹಾಗೂ ಅಂತರರಾಷ್ಟ್ರೀಯ...

ಟೀಕೆಗಳ ಸುಳಿಯಲ್ಲೂ ಮಿನುಗಿದ ಕೇರಳದ ತಾರೆ: ಸಂಜು ಸ್ಯಾಮ್ಸನ್ ಎಂಬ ಛಲದಂಕಮಲ್ಲ

ಮೈದಾನದಲ್ಲಿ ಎಂ ಎಸ್  ಧೋನಿಯಂತೆಯೇ ಅತೀವ ಶಾಂತ ಸ್ವಭಾವವನ್ನು ಕಾಯ್ದುಕೊಳ್ಳುವ ಸಂಜು...