ಏಷ್ಯಾ ಕಪ್ 2025 | ಪಾಕ್‌ ವಿರುದ್ಧ ಭಾರತಕ್ಕೆ ಸುಲಭ ಗೆಲುವು, ನಾಟಕೀಯ ಕ್ಷಣಗಳಿಗೂ ಸಾಕ್ಷಿಯಾದ ಪಂದ್ಯ

Date:

ಏಷ್ಯಾ ಕಪ್ 2025 ಕ್ರಿಕೆಟ್ ಟೂರ್ನಿಯಲ್ಲಿ ಪಾಕಿಸ್ತಾನ ವಿರುದ್ಧ ಭಾರತ ತಂಡವು ಅನಾಯಾಸ ಜಯ ದಾಖಲಿಸಿತು. 7 ವಿಕೆಟ್ ಅಂತರದಿಂದ ಪಾಕ್ ತಂಡವನ್ನು ಸೂರ್ಯ ಕುಮಾರ್ ಯಾದವ್ ಪಡೆ ಸೋಲಿಸಿತು.

ದುಬೈ ಅಂತರಾಷ್ಟ್ರೀಯ ಕ್ರೀಡಾಂಗಣದಲ್ಲಿ ಭಾನುವಾರ ರಾತ್ರಿ ನಡೆದ ಪಂದ್ಯದಲ್ಲಿ ಪಾಕ್ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ದುಕೊಂಡಿತು. ಭಾರತದ ಮಾರಕ ಬೌಲಿಂಗ್ ದಾಳಿಗೆ ತತ್ತರಿಸಿದ ಪಾಕ್ ಕೇವಲ 128 ರನ್​ ಗುರಿ ನೀಡಿತ್ತು. ಈ ಸಾಧಾರಣ ಗುರಿ ಬೆನ್ನತ್ತಿದ ಟೀಂ ಇಂಡಿಯಾ 15.5 ಓವರ್​ಗಳಲ್ಲಿ 3 ವಿಕೆಟ್ ನಷ್ಟಕ್ಕೆ 131 ರನ್ ಪೇರಿಸಿ ಜಯಭೇರಿ ಬಾರಿಸಿತು.

ಕ್ರೀಡಾಂಗಣದ ಎಂದಿನಂತೆ ಉಭಯ ತಂಡಗಳ ಪಂದ್ಯಕ್ಕೆ ಸೇರುವಂತೆ ಗ್ಯಾಲರಿಗಳು ನಿರೀಕ್ಷೆಯಂತೆ ಪೂರ್ಣ ತುಂಬಿರಲಿಲ್ಲ.
ಆದರೆ, ಇದರಿಂದ ಭಾರತದ ಆಟಗಾರರ ಆಲ್‌ರೌಂಡ್ ಆಟದ ಮೇಲೆ ಯಾವುದೇ ಪರಿಣಾಮ ಬೀರಲಿಲ್ಲ. ಆರಂಭಿಕರಾಗಿ ಆಗಮಿಸಿದ ಅಭಿಷೇಕ್ ಶರ್ಮಾ 13 ಎಸೆತಗಳಲ್ಲಿ 2 ಸಿಕ್ಸರ್, 4 ಬೌಂಡರಿ ಮೂಲಕ 31 ರನ್ ಪೇರಿಸಿದರೆ, ಶುಭಮನ್ ಗಿಲ್ 10 ರನ್ ಗಳಿಸಿ ಔಟಾದರು. ಬಳಿಕ ನಾಯಕ ಸೂರ್ಯ ಕುಮಾರ್ ಯಾದವ್ ಔಟಾಗದೇ 47 ರನ್ ಗಳಿಸಿದರೆ, ತಿಲಕ್ ವರ್ಮಾ 31 ರನ್ ಪೇರಿಸಿ ವಿಕೆಟ್ ಒಪ್ಪಿಸಿದರು. ಶಿವಂ ದುಬೆ ಔಟಾಗದೇ 7 ರನ್ ಬಾರಿಸಿದರು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ಕಳೆದ ಏಪ್ರಿಲ್‌ನಲ್ಲಿ ಪಹಲ್ಗಾಂನಲ್ಲಿ ನಡೆದಿದ್ದ ಭೀಕರ ಉಗ್ರ ದಾಳಿಯನ್ನು ಖಂಡಿಸಿ ಭಾರತದ ಹಲವು ಕ್ರಿಕೆಟ್‌ ಅಭಿಮಾನಿಗಳು, ರಾಜಕೀಯ ಗಣ್ಯರು ಪಾಕ್‌ ಜತೆಗಿನ ಪಂದ್ಯವನ್ನು ಬಹಿಷ್ಕರಿಸುವಂತೆ ಕರೆ ನೀಡಿದ್ದರು. ಆದರೆ ಕೇಂದ್ರ ಸರ್ಕಾರದ ಅನುಮತಿ ಸಿಕ್ಕಿದ್ದರಿಂದ ಪಾಕಿಸ್ತಾನ ವಿರುದ್ಧ ಭಾರತ ಕಣಕ್ಕೆ ಇಳಿದಿತ್ತು. ಪಹಲ್ಗಾಮ್‌ ದಾಳಿ ಬಳಿಕ ಮೊದಲ ಬಾರಿ ಉಭಯ ತಂಡಗಳು ಭಾನುವಾರ ಮುಖಾಮುಖಿಯಾದ ವೇಳೆ ಹಲವು ನಾಟಕೀಯ ಕ್ಷಣಗಳಿಗೂ ಪಂದ್ಯ ಸಾಕ್ಷಿಯಾಯಿತು.

ಭಾರತದ ವಿರುದ್ಧ ಮೈದಾನಕ್ಕೆ ಕಾಲಿಟ್ಟಾಗಿನಿಂದ ಪಾಕಿಸ್ತಾನ ತಂಡ ನಿರಂತರವಾಗಿ ಮುಜುಗರ ಅನುಭವಿಸಿದ್ದು,ಆ ಮುಜುಗರದಿಂದಲೇ ಪಾಕ್ ತಂಡ ಮೈದಾನದಿಂದ ಹೊರಗೆ ಕಾಲಿಟ್ಟಿದೆ.‌ ವಾಡಿಕೆಯಂತೆ ಉಭಯ ದೇಶಗಳ ರಾಷ್ಟ್ರಗೀತೆ ಕೇಳಿಸಲಾಯಿತು. ಆದರೆ ಪಾಕಿಸ್ತಾನದ ರಾಷ್ಟ್ರಗೀತೆಗೆ ಸಂಬಂಧಿಸಿದಂತೆ ದೊಡ್ಡ ವಿವಾದವೊಂದು ಇದೀಗ ಭುಗಿಲೆದ್ದಿದೆ. ಆಯೋಜಕರು ಪಾಕಿಸ್ತಾನ ರಾಷ್ಟ್ರಗೀತೆಗೆ ಬದಲು ಪಾಪ್‌ ಸಂಗೀತವೊಂದನ್ನು ನುಡಿಸಿದ್ದು, ದೊಡ್ಡ ವಿವಾದಕ್ಕೆ ಕಾರಣವಾಗಿದೆ.

ಈಗ ಪಾಕಿಸ್ತಾನದ ರಾಷ್ಟ್ರಗೀತೆ” ಎಂದು ಆಯೋಜಕ ಘೋಷಣೆ ಮಾಡುತ್ತಲೇ, ಪಾಕ್‌ ಆಟಗಾರರು ಮತ್ತು ಅಭಿಮಾನಿಗಳು ರಾಷ್ಟ್ರಗೀತೆ ಹಾಡಲು ಗಾಂಭೀರ್ಯದಿಂದ ಎದ್ದು ನಿಂತರು. ಆದರೆ ರಾಷ್ಟ್ರಗೀತೆ ಬದಲು ಪಾಪ್‌ ಸಂಗೀತವೊಂದು ಕೇಳಿಸಿದಾಗ ಎಲ್ಲರೂ ಗೊಂದಲಕ್ಕೀಡಾದರು.

ಟಾಸ್ ವೇಳೆ ಉಭಯ ತಂಡದ ನಾಯಕರು ಹಸ್ತಲಾಘವ ಮಾಡುವುದು ಸಂಪ್ರದಾಯ, ಆದರೆ ಪಾಕಿಸ್ತಾನ ತಂಡದ ನಾಯಕ ಸಲ್ಮಾನ್ ಅಲಿ ಆಘಾ ಅವರೊಂದಿಗೆ ಭಾರತ ತಂಡದ ನಾಯಕ ಸೂರ್ಯಕುಮಾರ್ ಯಾದವ್ ಕೈ ಕುಲುಕಲಿಲ್ಲ. ಭಾರತ ತಂಡದ ನಾಯಕ ಸೂರ್ಯಕುಮಾರ್ ಯಾದವ್ ಅವರು ಜಯದ ಸಿಕ್ಸ‌ರ್ ಬಾರಿಸುವ ಮೂಲಕ ಎದುರಾಳಿ ಆಟಗಾರರನ್ನು ತಲೆ ಎತ್ತಿಯೂ ನೋಡದೆ ಡಗೌಟ್‌ನತ್ತ ಸಾಗಿದರು. ಪಂದ್ಯದ ಬಳಿಕವೂ ಉಭಯ ತಂಡದ ಆಟಗಾರರು ಪರಸ್ಪರ ಹಸ್ತಲಾಘವ ಮಾಡಲಿಲ್ಲ.

WhatsApp Image 2025 11 17 at 3.21.17 PM
ಈ ದಿನ ಡೆಸ್ಕ್
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಮತ್ತೆ ಲಲಿತ್ ಮೋದಿ: ಐಪಿಎಲ್ 2026ಕ್ಕೂ ಮುನ್ನ ಭಾರೀ ಬದಲಾವಣೆ ಸಾಧ್ಯತೆ?

ರಾಜಸ್ಥಾನ ರಾಯಲ್ಸ್ ಫ್ರಾಂಚೈಸಿಯ ಮಾಲೀಕತ್ವದಲ್ಲಿ ಶೀಘ್ರದಲ್ಲೇ ಬದಲಾವಣೆಯಾಗುವ ಸಾಧ್ಯತೆಯಿದ್ದು, ಜಾಗತಿಕ ಹೂಡಿಕೆ...

ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಐಪಿಎಲ್ ಪಂದ್ಯಗಳ ಆಯೋಜನೆಗೆ ಸರ್ಕಾರದ ಅನುಮತಿ

ಬೆಂಗಳೂರಿನ ಐತಿಹಾಸಿಕ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಐಪಿಎಲ್ 2026 ಹಾಗೂ ಅಂತರರಾಷ್ಟ್ರೀಯ...

ಟೀಕೆಗಳ ಸುಳಿಯಲ್ಲೂ ಮಿನುಗಿದ ಕೇರಳದ ತಾರೆ: ಸಂಜು ಸ್ಯಾಮ್ಸನ್ ಎಂಬ ಛಲದಂಕಮಲ್ಲ

ಮೈದಾನದಲ್ಲಿ ಎಂ ಎಸ್  ಧೋನಿಯಂತೆಯೇ ಅತೀವ ಶಾಂತ ಸ್ವಭಾವವನ್ನು ಕಾಯ್ದುಕೊಳ್ಳುವ ಸಂಜು...