ಭಾರತದಲ್ಲಿ ನಡೆಯಲಿರುವ ಮುಂಬರುವ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಪಾಲ್ಗೊಳ್ಳದಿರಲು ಬಾಂಗ್ಲಾದೇಶ ಕ್ರಿಕೆಟ್ ಮಂಡಳಿ (ಬಿಸಿಬಿ) ಪುನಃ ತನ್ನ ನಿಲುವನ್ನು ಸ್ಪಷ್ಟಪಡಿಸಿದೆ.
ಭದ್ರತಾ ಕಾರಣಗಳು ಹಾಗೂ ರಾಜಕೀಯ ಸನ್ನಿವೇಶಗಳನ್ನು ಮುಂದಿಟ್ಟುಕೊಂಡು ಬಾಂಗ್ಲಾದೇಶ ಈ ತೀರ್ಮಾನಕ್ಕೆ ಬಂದಿದೆ ಎನ್ನಲಾಗಿದೆ. “ನಾವು ಸದ್ಯದ ಪರಿಸ್ಥಿತಿಯಲ್ಲಿ ಭಾರತಕ್ಕೆ ಪ್ರಯಾಣಿಸುವುದು ಸೂಕ್ತವಲ್ಲ. ಹೀಗಾಗಿ, ಐಸಿಸಿ ಟೂರ್ನಿಯ ಸ್ಥಳವನ್ನು ಬದಲಾಯಿಸಬೇಕು ಅಥವಾ ನಮ್ಮ ಪಂದ್ಯಗಳಿಗಾದರೂ ಪರ್ಯಾಯ ವ್ಯವಸ್ಥೆ ಕಲ್ಪಿಸಬೇಕು,” ಎಂದು ಬಿಸಿಬಿ ಐಸಿಸಿಗೆ ಪುನಃ ಮನವಿ ಮಾಡಿದೆ ಎಂದು ವರದಿಯಾಗಿದೆ.
ಇದನ್ನು ಒದಿದ್ದೀರಾ? ‘ನನ್ನ ಆಟದ ಸ್ಫೂರ್ತಿ ಹಾರ್ದಿಕ್’ ಎಂದ ಆರ್‌ಸಿಬಿ ತಾರೆಗೆ ವಿಶೇಷ ಸಂದೇಶ
ಈ ಹಿಂದೆ ಪಾಕಿಸ್ತಾನ ಆಯೋಜನೆಯ ಟೂರ್ನಿಗಳಿಗೆ ಭಾರತ ನಿರಾಕರಿಸಿದಾಗ ‘ಹೈಬ್ರಿಡ್ ಮಾದರಿ’ ಅನುಸರಿಸಲಾಗಿತ್ತು. ಈಗ ಬಾಂಗ್ಲಾದೇಶ ಕೂಡ ಇದೇ ಮಾದರಿಯ ಬೇಡಿಕೆ ಇಟ್ಟಿದೆಯೇ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಆದಾಗ್ಯೂ, ಐಸಿಸಿ ಅಂತಿಮವಾಗಿ ಯಾವ ತೀರ್ಮಾನ ಕೈಗೊಳ್ಳಲಿದೆ ಎಂಬುದರ ಮೇಲೆ ಬಾಂಗ್ಲಾದೇಶದ ಮುಂದಿನ ನಡೆ ನಿರ್ಧಾರವಾಗಲಿದೆ.





