ಬೆಂಗಳೂರು ಟ್ಯಾಕ್ಸಿ ಚಾಲಕನ ಸಲಹೆಗೆ ಕೃತಜ್ಞತೆ ಸಲ್ಲಿಸಿದ ಕ್ರಿಕೆಟಿಗ ಜಾಂಟಿ ರೋಡ್ಸ್

Date:

1990 -2000ರ ದಶಕದಲ್ಲಿ ಅತ್ಯುತ್ತಮ ಕ್ಷೇತ್ರ ರಕ್ಷಣೆ ಮೂಲಕ ವಿಶ್ವ ಕ್ರಿಕೆಟ್ ಪ್ರಿಯರಲ್ಲಿ ಮನೆಮಾತಾಗಿದ್ದ ದಕ್ಷಿಣ ಆಫ್ರಿಕಾದ ಕ್ರಿಕೆಟ್ ದಂತಕತೆ ಜಾಂಟಿ ರೋಡ್ಸ್ ಇತ್ತೀಚಿಗೆ ಬೆಂಗಳೂರಿಗೆ ಭೇಟಿ ನೀಡಿದ್ದ ತಮ್ಮ ಅನುಭವವನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ.

ಖಾಸಗಿ ಕಾರ್ಯಕ್ರಮದ ಕಾರಣ ಇತ್ತೀಚೆಗೆ ಕ್ರಿಕೆಟಿಗ ಜಾಂಟಿ ರೋಡ್ಸ್ ಬೆಂಗಳೂರಿಗೆ ಆಗಮಿಸಿದ್ದರು. ವಿಮಾನ ನಿಲ್ದಾಣದಿಂದ ತಾವಿರುವ ಸ್ಥಳಕ್ಕೆ ತೆರಳಲು ಕಾರ್‌ ಬುಕ್‌ ಮಾಡಿಕೊಂಡಿದ್ದರು.

ಜಾಂಟಿ ರೋಡ್ಸ್‌ ಅವರನ್ನು ಕರೆದುಕೊಂಡು ಹೋಗಲು ಕಾರಿನ ಚಾಲಕ ವಿಮಾನ ನಿಲ್ದಾಣಕ್ಕೆ ಆಗಮಿಸಿದ್ದಾನೆ. ಸಂಚಾರ ದಟ್ಟಣೆ ಉಂಟಾಗುವ ಕಾರಣದಿಂದ ನಗರದಿಂದ ಬೆಂಗಳೂರು ವಿಮಾನ ನಿಲ್ದಾಣದಿಂದ ನಗರಕ್ಕೆ ತಲುಪಲು ಹೆಚ್ಚು ಸಮಯವಾಗುವ ಕಾರಣ ಹತ್ತಿರದಲ್ಲೇ ರಸ್ತೆಬದಿಯಲ್ಲಿನ ಹೋಟೆಲ್‌ನಲ್ಲಿ ರುಚಿಕರವಾದ ಆಹಾರ ಸವಿದು ನಂತರ ಪ್ರಯಾಣಿಸೋಣ ಎಂದು ಚಾಲಕ ಸಲಹೆ ನೀಡಿದ್ದಾನೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ಚಾಕಲನ ಮಾತಿಗೆ ಸಮ್ಮತಿಸಿದ ಜಾಂಟಿ ರೋಡ್ಸ್ ರಸ್ತೆಬದಿಯಲ್ಲಿರುವ ಹೋಟೆಲ್‌ಗೆ ಚಾಲಕನೊಟ್ಟಿಗೆ ತೆರಳಿದ್ದಾರೆ. ಈ ಬಗ್ಗೆ ತಮ್ಮ ಟ್ವಿಟರ್‌ ಅಕೌಂಟ್‌ನಲ್ಲಿ ಬರೆದುಕೊಂಡಿರುವ ಅವರು, “ಬೆಂಗಳೂರು ವಿಮಾನ ನಿಲ್ದಾಣದಿಂದ ತೆರಳುವಾಗ ಟ್ಯಾಕ್ಸಿ ಚಾಲಕ ತನ್ನ ನೆಚ್ಚಿನ ರೆಸ್ಟೋರೆಂಟ್‌ನಲ್ಲಿ ರಸ್ತೆಬದಿಯಲ್ಲಿ ಆಹಾರ ಸೇವಿಸಲು ನಿಲ್ಲಿಸಲು ಸೂಚಿಸಿದಾಗ, ಕೃತಜ್ಞತೆಯಿಂದ ನಾನು ಅವರ ಸಲಹೆಯನ್ನು ತೆಗೆದುಕೊಂಡೆ. ರುಚಿಕರವಾದ ಮಂಗಳೂರು ಬನ್ಸ್ ಮತ್ತು ಮೈಸೂರು ಮಸಾಲೆ ದೋಸೆ, ಮಸಾಲಾಚಾಯ್‌ನೊಂದಿಗೆ ಮುಗಿದಿದೆ. ಲವ್ ಇಂಡಿಯಾ,” ಎಂದು ಬರೆದಿದ್ದಾರೆ. ಜೊತೆಗೆ ಹೋಟೆಲ್ ಸಿಬ್ಬಂದಿ ಜೊತೆ ಭಾವಚಿತ್ರ ಹಂಚಿಕೊಂಡಿರುವ ಅವರು, ಅತ್ಯುತ್ತಮ ಸಿಬ್ಬಂದಿ ಎಂದು ಹೊಗಳಿದ್ದಾರೆ.

ಈ ಸುದ್ದಿ ಓದಿದ್ದೀರಾ? ರಚಿನ್‌ ರವೀಂದ್ರ ರೀತಿ ಶ್ರೇಯಸ್‌ ಅಯ್ಯರ್‌ಗೂ ಕೂಡ ಇದೆ ಕರ್ನಾಟಕದ ನಂಟು

ಜಾಂಟಿ ಪ್ರಕಟಿಸಿರುವ ಪೋಸ್ಟ್‌ ಇದುವರೆಗೂ 5.26 ಲಕ್ಷ ವೀಕ್ಷಣೆಗಳನ್ನು ಕಂಡಿದೆ. 11 ಸಾವಿರ ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

“ಫೀಲ್ಡಿಂಗ್‌ನ ಅರ್ಥವನ್ನು ಮರು ವ್ಯಾಖ್ಯಾನಿಸಿದ ಅತ್ಯಂತ ಅಪ್ರತಿಮ ಆಟಗಾರರಲ್ಲಿ ನೀವು ಒಬ್ಬರು! ನೀವು ಉತ್ತಮ ಮೆನುವನ್ನು “ಕ್ಯಾಚಿಂಗ್” ಮಾಡುವುದನ್ನು ನೋಡಲು ಈಗ ಸಂತೋಷವಾಗಿದೆ!” ಎಂದು ಅಭಿಮಾನಿಯೊಬ್ಬರು ಟ್ವೀಟ್‌ ಮೂಲಕ ಬಣ್ಣಿಸಿದ್ದಾರೆ.

“ಜಾಂಟಿ ಅವರು ಭಾರತದ ಫೀಲ್ಡಿಂಗ್ ಕೋಚ್ ಆಗಿರಬೇಕು. ಇತ್ತೀಚಿನ ದಿನಗಳಲ್ಲಿ ಭಾರತೀಯ ಆಟಗಾರರಿಗೆ ಕ್ಷೇತ್ರ ರಕ್ಷಣೆ ಕೆಲಸ ಕಷ್ಟದ ಕೆಲಸವಾಗಿದೆ. ಆದರೆ, ಭಾರತವು ಈ ವಿಭಾಗದಲ್ಲಿ ಸುಧಾರಿಸಬೇಕಾಗಿದೆ” ಎಂದು ಮತ್ತೊಬ್ಬರು ಟ್ವೀಟ್‌ನಲ್ಲಿ ತಿಳಿಸಿದ್ದಾರೆ.

ಜಾಂಟಿ ರೋಡ್ಸ್ ಅವರು ಸದ್ಯ ಖಾಸಗಿ ಕಾರ್ಯಕ್ರಮದ ಹಿನ್ನೆಲೆಯಲ್ಲಿ ಬೆಂಗಳೂರಿನಲ್ಲಿಯೇ ಇದ್ದಾರೆ.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಮತ್ತೆ ಲಲಿತ್ ಮೋದಿ: ಐಪಿಎಲ್ 2026ಕ್ಕೂ ಮುನ್ನ ಭಾರೀ ಬದಲಾವಣೆ ಸಾಧ್ಯತೆ?

ರಾಜಸ್ಥಾನ ರಾಯಲ್ಸ್ ಫ್ರಾಂಚೈಸಿಯ ಮಾಲೀಕತ್ವದಲ್ಲಿ ಶೀಘ್ರದಲ್ಲೇ ಬದಲಾವಣೆಯಾಗುವ ಸಾಧ್ಯತೆಯಿದ್ದು, ಜಾಗತಿಕ ಹೂಡಿಕೆ...

ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಐಪಿಎಲ್ ಪಂದ್ಯಗಳ ಆಯೋಜನೆಗೆ ಸರ್ಕಾರದ ಅನುಮತಿ

ಬೆಂಗಳೂರಿನ ಐತಿಹಾಸಿಕ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಐಪಿಎಲ್ 2026 ಹಾಗೂ ಅಂತರರಾಷ್ಟ್ರೀಯ...

ಟೀಕೆಗಳ ಸುಳಿಯಲ್ಲೂ ಮಿನುಗಿದ ಕೇರಳದ ತಾರೆ: ಸಂಜು ಸ್ಯಾಮ್ಸನ್ ಎಂಬ ಛಲದಂಕಮಲ್ಲ

ಮೈದಾನದಲ್ಲಿ ಎಂ ಎಸ್  ಧೋನಿಯಂತೆಯೇ ಅತೀವ ಶಾಂತ ಸ್ವಭಾವವನ್ನು ಕಾಯ್ದುಕೊಳ್ಳುವ ಸಂಜು...