ದ್ರಾವಿಡ್‌ಗೆ ಸಿ.ಕೆ. ನಾಯುಡು ಪ್ರಶಸ್ತಿ: ಸಭ್ಯ, ಸಂಭಾವಿತ, ಸಾಧಕನಿಗೆ ಸಂದ ಗೌರವ

Date:

ಅರ್ಹರನ್ನು ಗುರುತಿಸಿ ಪ್ರಶಸ್ತಿ ನೀಡಿದಾಗ, ಪ್ರಶಸ್ತಿಯ ಮೌಲ್ಯ ನೂರು ಪಟ್ಟು ಹೆಚ್ಚುತ್ತದೆ ಎಂಬ ಮಾತಿದೆ. ಆ ಮಾತಿಗೆ ಅರ್ಥ ಬರುವಂತಿರುವ ಸಭ್ಯ, ಸಂಭಾವಿತ, ಸಾಧಕ ಈ ನಮ್ಮ ರಾಹುಲ್ ದ್ರಾವಿಡ್. ಅವರಿಗೆ ಈ ಸಂದರ್ಭದಲ್ಲಿ ಸಂದಿರುವ ಕರ್ನಲ್ ಕೊಟ್ಟಾರಿ ಕನಕಯ್ಯ ನಾಯುಡು ಜೀವಮಾನ ಸಾಧನೆ ಪ್ರಶಸ್ತಿ- ಕ್ರೀಡೆಗೆ ಕಿರೀಟ ತೊಡಿಸಿದೆ.

ಭಾರತೀಯ ಕ್ರಿಕೆಟ್ ಜಗತ್ತಿನ ಕಾಮ್ ಅಂಡ್ ಕೂಲ್ ಪ್ಲೇಯರ್ ಎಂದಾಕ್ಷಣ ನೆನಪಾಗುವುದು ಕನ್ನಡಿಗ ರಾಹುಲ್ ದ್ರಾವಿಡ್. ಇಂತಹ ರಾಹುಲ್ ದ್ರಾವಿಡ್ ಅವರಿಗೆ ಪ್ರತಿಷ್ಠಿತ ಕರ್ನಲ್ ಸಿ.ಕೆ. ನಾಯುಡು ಜೀವಮಾನ ಸಾಧನೆ ಪ್ರಶಸ್ತಿ ಲಭಿಸಿದೆ. ಟೀಂ ಇಂಡಿಯಾದ ಆಟಗಾರನಾಗಿ, ನಾಯಕನಾಗಿ, ನಿವೃತ್ತಿಯ ನಂತರ ತಂಡದ ಮುಖ್ಯ ತರಬೇತುದಾರನಾಗಿ ಸೇವೆ ಸಲ್ಲಿಸಿರುವ ದ್ರಾವಿಡ್ ಅವರಿಗೆ ಈ ಪ್ರಶಸ್ತಿ ಲಭಿಸಿರುವುದು ಸೂಕ್ತವಾಗಿದೆ. ಅರ್ಹ ಮತ್ತು ಯೋಗ್ಯ ಆಟಗಾರನಿಗೆ ಸಿಗುವ ಮೂಲಕ ಆ ಪ್ರಶಸ್ತಿಯ ಮೌಲ್ಯ ಹೆಚ್ಚಿದೆ.

ರಾಹುಲ್ ದ್ರಾವಿಡ್ ಅವರ ಕೋಚಿಂಗ್​ನಲ್ಲಿ ಟೀಂ ಇಂಡಿಯಾ 2024ರ ಟಿ20 ವಿಶ್ವಕಪ್ ಗೆದ್ದಿತ್ತು. ಹಾಗೆಯೇ ಅವರ ಶಿಸ್ತು-ಶ್ರದ್ಧೆಯ ತರಬೇತಿಯಲ್ಲಿ ಸಾಕಷ್ಟು ಆಟಗಾರರು ಟೀಂ ಇಂಡಿಯಾಕ್ಕೆ ದಕ್ಕಿದ್ದರು. ಪ್ರತಿಭಾನ್ವಿತ ಆಟಗಾರರಾಗಿ ಅರಳಿದ್ದರು, ಕ್ರಿಕೆಟ್ ಲೋಕವನ್ನು ಆಳುವಂತಹ ಆಟಗಾರರಾಗಿ ಹೊರಹೊಮ್ಮಿದ್ದರು. ದೇಶಕ್ಕಾಗಿ ಆಡಿದ ಆಟದಿಂದ, ತರಬೇತಿಯಿಂದ, ನಿಸ್ವಾರ್ಥ ಸೇವೆಯಿಂದ ಕ್ರಿಕೆಟ್ ಲೋಕದಲ್ಲಿ ಹೆಸರುವಾಸಿಯಾಗಿರುವ 53ರ ಹರೆಯದ ದ್ರಾವಿಡ್​ ಅವರಿಗೆ ಮಾರ್ಚ್ 15ರಂದು ದೆಹಲಿಯಲ್ಲಿ ನಡೆಯಲಿರುವ ಬಿಸಿಸಿಐ ವಾರ್ಷಿಕ ನಮನ್ ಪ್ರಶಸ್ತಿಗಳ ಸಮಾರಂಭದಲ್ಲಿ ಈ ಪ್ರಶಸ್ತಿ ನೀಡಿ ಗೌರವಿಸಲಾಗುತ್ತಿದೆ.

ಈ ಸಂದರ್ಭ ಹೇಗಿದೆ ಎಂದರೆ, ದೇಶದ ಕ್ರಿಕೆಟ್ ಅಭಿಮಾನಿಗಳು ಭಾರತ ತಂಡ ನ್ಯೂಜಿಲೆಂಡ್ ವಿರುದ್ಧ ಟಿ20 ವಿಶ್ವಕಪ್ ವಿಜಯದ ಮೂಡ್‌ನಿಂದ ಇನ್ನೂ ಹೊರಬಂದಿಲ್ಲ. ಈ ಕ್ಷಣಕ್ಕೂ ಆ ಪಂದ್ಯದ ಒಂದೊಂದು ಕ್ಷಣವನ್ನು ಮೆಲುಕು ಹಾಕುತ್ತಿದ್ದಾರೆ. ಸಂಭ್ರಮದಲ್ಲಿ ತೇಲುತ್ತಿದ್ದಾರೆ. ಇದರ ನಡುವೆ, ಕ್ರಿಕೆಟ್ ಅಭಿಮಾನಿಗಳಿಗಿಂತಲೂ ದೊಡ್ಡದಾಗಿ ಸಂಭ್ರಮಿಸಿದ್ದು, ದೇಶದ ಆರ್ಥಿಕತೆ ಎಂಬ ಮಾತೂ ಕೇಳಿಬರುತ್ತಿದೆ. ಏಕೆಂದರೆ, 30 ದಿನಗಳ ಕ್ರಿಕೆಟ್ ಆಟದ ಸಮಯದಲ್ಲಿ ಸುಮಾರು 7ರಿಂದ 8 ಸಾವಿರ ಕೋಟಿ ರೂಪಾಯಿಗಳ ಚಲಾವಣೆಯಾಗಿದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...
ರಾಹುಲ್ ದ್ರಾವಿಡ್1

ಕ್ರಿಕೆಟ್ ಜಗತ್ತಿನಲ್ಲಿ ಚುಟುಕು ಕ್ರಿಕೆಟ್ ಎಂದೇ ಖ್ಯಾತಿಗೊಂಡ ಟಿ20 ಪಂದ್ಯಗಳು ಇತ್ತೀಚಿನ ದಿನಗಳಲ್ಲಿ ಹಣದ ಸುರಿಮಳೆ ಸುರಿಸುವ ಪಂದ್ಯಗಳಾಗಿ ಮಾರ್ಪಟ್ಟಿವೆ. ಒಂದು ಕ್ರಿಕೆಟ್ ಪಂದ್ಯ 240 ನಿಮಿಷಗಳ ಕಾಲ ನಡೆದರೆ, ಅದರ ಆರ್ಥಿಕ ಅಲೆಗಳು 240 ದಿನಗಳವರೆಗೆ ಏಳುತ್ತಿರುತ್ತವೆ ಎಂಬ ಮಾತು ಈಗ ಕ್ರಿಕೆಟ್ ಜಗತ್ತಿನಲ್ಲಿ ಚಾಲ್ತಿಯಲ್ಲಿದೆ. ಆ ಮಾತಿಗೆ ಒತ್ತು ನೀಡುವಂತೆ, ವಿಶ್ವಕಪ್ ಗೆದ್ದ ಟೀಮ್ ಇಂಡಿಯಾ ತಂಡಕ್ಕೆ ಬಿಸಿಸಿಐ 131 ಕೋಟಿ ರೂ. ನಗದು ಬಹುಮಾನ ಘೋಷಿಸಿದೆ. ಜೊತೆಗೆ ಐಸಿಸಿ ಕಡೆಯಿಂದ 27.60 ಕೋಟಿ ಸಿಕ್ಕಿದೆ.

ಇದನ್ನು ಓದಿದ್ದೀರಾ?: ಟೀಂ ಇಂಡಿಯಾಗೆ 131 ಕೋಟಿ ರೂ. ಬಹುಮಾನ ಘೋಷಿಸಿದ ಬಿಸಿಸಿಐ

ಅಂದರೆ, ಕ್ರಿಕೆಟ್ ಎಂಬುದು ಈಗ ಆಟವಾಗಿಲ್ಲ, ವ್ಯಾಪಾರವಾಗಿದೆ. ಕೋಟ್ಯಂತರ ರೂಪಾಯಿಗಳ ವಹಿವಾಟುಳ್ಳ ಬೃಹತ್ ಉದ್ಯಮವಾಗಿ ಬೆಳೆದು ನಿಂತಿದೆ. ಕ್ರಿಕೆಟ್ ಆಟಗಾರ ರನ್ ಹೊಳೆ ಹರಿಸುವ, ವಿಕೆಟ್ ಉರುಳಿಸುವ, ಕ್ಯಾಚ್ ಹಿಡಿಯುವ ಮಷೀನ್ ಆಗಿದ್ದಾನೆ. ಪ್ರೇಕ್ಷಕರು ಹುಚ್ಚು ಅಭಿಮಾನಿಗಳಾಗಿ, ದೇಶಪ್ರೇಮಿಗಳಾಗಿ ರೂಪಾಂತರಗೊಂಡಿದ್ದಾರೆ. ಅದಕ್ಕೆ ಪುಷ್ಟಿ ನೀಡುವಂತೆ, ಕೇಂದ್ರ ಗೃಹ ಸಚಿವ ಅಮಿತ್ ಶಾ ಪುತ್ರ ಜಯ್ ಶಾ ಕೃಪೆಯಿಂದ ಈಗ ಆಟಕ್ಕೆ ಧರ್ಮದ ಲೇಪವೂ ಅಂಟಿಕೊಂಡಿದೆ. ಇವತ್ತಿನವರೆಗೆ ಆಟ ಎಂದರೆ, ಎಲ್ಲರ ಶ್ರಮ, ಪ್ರತಿಭೆ ಮತ್ತು ಒಗ್ಗಟ್ಟು-ಉತ್ಸಾಹ ಎನಿಸಿಕೊಂಡಿದ್ದು, ಈಗ ದೇವರು-ಧರ್ಮದ ಕೃಪೆಗೆ ಒಳಗಾಗಿದೆ. ಮೊನ್ನೆ ಟಿ20 ವಿಶ್ವಕಪ್ ಗೆದ್ದ ನಂತರ, ಜಯ್ ಶಾ, ತರಬೇತುದಾರ ಗೌತಮ್ ಗಂಭೀರ್, ನಾಯಕ ಸೂರ್ಯಕುಮಾರ್ ಯಾದವ್- ಟ್ರೋಫಿಯನ್ನು ಎತ್ತಿಕೊಂಡು ಅರ್ಧರಾತ್ರಿಯಲ್ಲಿ ಹನುಮಂತನ ದರ್ಶನಕ್ಕೆ ಹೋಗಿದ್ದಾರೆ. ಕ್ರೀಡೆಯ ಕಿರೀಟಪ್ರಾಯವಾದ ಜಾತ್ಯತೀತ ಮೌಲ್ಯಕ್ಕೆ ಮಸಿ ಬಳಿದಿದ್ದಾರೆ.

ಇತ್ತೀಚಿನ ವರ್ಷಗಳಲ್ಲಿ ಕ್ರಿಕೆಟ್ ಅಭಿಮಾನಿಗಳು ಕೂಡ ಬದಲಾಗಿದ್ದಾರೆ. ಗೆದ್ದರೆ ಹೊಗಳುವ, ಸೋತರೆ ಕೆರಳುವ ಜನರಾಗಿ ಪರಿವರ್ತನೆ ಹೊಂದಿದ್ದಾರೆ. ಅದನ್ನೊಂದು ಆಟ, ಅಲ್ಲಿ ಸೋಲು-ಗೆಲುವು ಸಾಮಾನ್ಯ ಎನ್ನುವುದನ್ನೇ ಮರೆತಿದ್ದಾರೆ. ಇಂತಹ ಒತ್ತಡದಲ್ಲಿ ಆಡಬೇಕಾದ ಆಟಗಾರ, ಆಟದ ಸೊಗಸನ್ನು, ಕಲಾತ್ಮಕತೆಯನ್ನು ಕಡೆಗಣಿಸಿ, ತಂತ್ರಗಾರಿಕೆಗೆ ತಲೆಬಾಗಿದ್ದಾನೆ. ಪ್ರೇಕ್ಷಕರು, ಆಯ್ಕೆದಾರರು, ಜಾಹೀರಾತುದಾರರು, ಬೆಟ್ಟಿಂಗ್ ಕಟ್ಟುವವರ ಒತ್ತಡಕ್ಕೆ ಒಳಗಾಗಿ ಜೀವವನ್ನು ಒತ್ತೆಯಿಟ್ಟು ಮೈದಾನಕ್ಕಿಳಿಯಬೇಕಾದ ಸ್ಥಿತಿ ಎದುರಾಗಿದೆ.

ಆದರೆ ರಾಹುಲ್ ದ್ರಾವಿಡ್ ಎಂಬ ಆಟಗಾರನೂ ಬೇರೆ, ಆಟವೂ ಬೇರೆ. ಬ್ಯಾಟಿಂಗ್ ಶೈಲಿಯಂತೂ ಅದ್ಭುತ. ಕರ್ನಾಟಕದ ಹೆಮ್ಮೆಯ ಕ್ರಿಕೆಟಿಗ ಗುಂಡಪ್ಪ ವಿಶ್ವನಾಥ್ ಮತ್ತು ಮೊಹಮ್ಮದ್ ಅಜರುದ್ದೀನ್- ಇಬ್ಬರ ಶೈಲಿಯನ್ನು ಬ್ಯೂಟಿಫುಲ್ಲಾಗಿ ಬ್ಲೆಂಡ್ ಮಾಡಿದ, ಅಳವಡಿಸಿಕೊಂಡ ಆಟವೇ ದ್ರಾವಿಡ್ ಶೈಲಿ. ಅವರ ಒಂದೊಂದು ಸ್ಟ್ರೋಕ್ ಅನ್ನು ಕ್ರಿಕೆಟ್ ಪ್ರೇಮಿಗಳು ಆಸ್ವಾದಿಸುವಂತೆ, ಎದುರಾಳಿ ತಂಡ ಕೂತು ನೋಡಿ ಕಲಿಯುವಂತೆ, ಯೋಚಿಸುವಂತೆ ಹೊಡೆಯುತ್ತಿದ್ದರು. ಸೆಂಚುರಿ ಹೊಡೆಯಲಿ, ಪಂದ್ಯ ಗೆಲ್ಲಲಿ ಅಗತ್ಯಕ್ಕಿಂತ ಹೆಚ್ಚು ಮಾತನಾಡಿದ್ದಿಲ್ಲ, ಮೆರೆದಾಡಿದ್ದಂತೂ ಇಲ್ಲವೆ ಇಲ್ಲ. ಅವರಲ್ಲಿನ ಶಿಸ್ತು, ಶ್ರದ್ಧೆ ಮತ್ತು ತನ್ಮಯತೆ ಮಿಕ್ಕವರಿಗೆ ಮಾದರಿಯಾಗುವಂಥದ್ದು.

ಭಾರತೀಯ ಕ್ರಿಕೆಟ್ ತಂಡದ ಮಾಜಿ ನಾಯಕ ರಾಹುಲ್ ದ್ರಾವಿಡ್ ಎಂದಾಕ್ಷಣ ಎಲ್ಲರೂ ಹೇಳುವ ಮಾತು ಒಂದೆ- ಜಂಟಲ್‌ಮನ್. ಮೃದು ಮಾತಿನ, ಸೌಮ್ಯ ಸ್ವಭಾವದ, ಅಪಾರ ತಾಳ್ಮೆ, ಸಹನೆಯ, ವಿವಾದಗಳಿಲ್ಲದ, ವಿಪರೀತಕ್ಕೆ ಹೋಗದ ಅಪ್ರಥಮ ಕ್ರಿಕೆಟಿಗ. ಆಟದಲ್ಲೂ ಅಷ್ಟೆ, ಕಲಾತ್ಮಕ ಶೈಲಿಯ ಹೊಡೆತಕ್ಕೆ ಹೆಸರಾದ, ತಂಡವಾಗಿ ತುಡಿಯುವ, ದೇಶಕ್ಕಾಗಿ ಆಡುವ, ಜವಾಬ್ದಾರಿಯನ್ನೆಂದೂ ಮರೆಯದ ಆಟಗಾರ. ಗೆದ್ದಾಗ ಮೆರೆಯದ, ಸೋತಾಗ ಸೊರಗದ ಸ್ಥಿತಪ್ರಜ್ಞ. ಮೈದಾನದಿಂದ ಹೊರಗೆ, ಸಾಮಾಜಿಕ ಬದುಕಿನಲ್ಲೂ ಅದೇ ಸಂಯಮದ ನಡೆ-ನುಡಿಗೆ ಹೆಸರಾದವರು. ತಾನೊಬ್ಬ ಸ್ಟಾರ್ ಎಂಬ ಅಹಂನಿಂದ ಆಚೆಗೆ ನಿಂತವರು. ಹಾಗಾಗಿ ರಾಹುಲ್ ದ್ರಾವಿಡ್‌ರ ಆಟ ಮತ್ತು ಅವರು ಮೈಗೂಡಿಸಿಕೊಂಡ ವಿನಯವಂತ ವ್ಯಕ್ತಿತ್ವವೇ ಅವರನ್ನು ಇಷ್ಟು ಎತ್ತರಕ್ಕೆ ತಂದು ನಿಲ್ಲಿಸಿದೆ.

ಇದನ್ನು ಓದಿದ್ದೀರಾ? ಸ್ಟಾರ್ ಆಟಗಾರರಿಲ್ಲದಿದ್ದರೂ ಭಾರತದ ಯುವಪಡೆ ‘ಟಿ20 ವಿಶ್ವಕಪ್’ ಗೆದ್ದಿದ್ದೇ ರೋಚಕ!

ಇಂತಹ ಅಪರೂಪದ ಆಟಗಾರ ರಾಹುಲ್ ದ್ರಾವಿಡ್ ಅವರಿಗೆ ಕರ್ನಲ್ ಸಿ.ಕೆ. ನಾಯುಡು ಜೀವಮಾನ ಸಾಧನೆ ಪ್ರಶಸ್ತಿ ಲಭಿಸಿರುವುದು ಅರ್ಥಪೂರ್ಣವಾಗಿದೆ. 1990ರಲ್ಲಿ ಕರ್ನಾಟಕವನ್ನು ಪ್ರತಿನಿಧಿಸುವ ರಣಜಿ ಆಟಗಾರರಾಗಿ ಮೈದಾನಕ್ಕಿಳಿದ ರಾಹುಲ್ ದ್ರಾವಿಡ್, ಟೀಂ ಇಂಡಿಯಾದ ‘ಬಿಗ್ ಫೋರ್’ ಬ್ಯಾಟಿಂಗ್ ಲೈನ್‌ಅಪ್​ನ ಭಾಗವಾಗಿ ಬೆಳೆದು ನಿಂತವರು. ರಾಹುಲ್ ದ್ರಾವಿಡ್, ಸಚಿನ್ ತೆಂಡೂಲ್ಕರ್, ಸೌರವ್ ಗಂಗೂಲಿ ಮತ್ತು ವಿವಿಎಸ್ ಲಕ್ಷ್ಮಣ್​ರಂತಹ ದಿಗ್ಗಜರ ಸಾಲಿನಲ್ಲಿ ಒಬ್ಬರಾಗಿದ್ದರು. ಒನ್ ಡೇ ಹಾಗೂ ಟೆಸ್ಟ್ ಕ್ರಿಕೆಟ್​ನಲ್ಲಿ ಭಾರತ ತಂಡ ನೆನಪಿಟ್ಟುಕೊಳ್ಳುವಂತಹ ಕೊಡುಗೆ ನೀಡಿದ್ದರು. ಅದರಲ್ಲೂ ಟೆಸ್ಟ್​ ಕ್ರಿಕೆಟ್​ನಲ್ಲಿ ಸಾರ್ವಕಾಲಿಕ ಶ್ರೇಷ್ಠ ಆಟಗಾರರಲ್ಲಿ ಒಬ್ಬರಾಗಿ, ‘ದಿ ವಾಲ್’ ಎಂಬ ಹೆಸರು ಗಳಿಸಿದ್ದರು.

ಒನ್ ಡೇ ಮಾದರಿಯಲ್ಲಿ 10 ಸಾವಿರಕ್ಕೂ ಹೆಚ್ಚು ರನ್ ಗಳಿಸಿರುವ ದ್ರಾವಿಡ್, ಟೆಸ್ಟ್ ಕ್ರಿಕೆಟ್‌ನಲ್ಲಿ ಭಾರತ ಪರ ಅತಿ ಹೆಚ್ಚು ರನ್ (13,288) ಗಳಿಸಿದ ಎರಡನೇ ಆಟಗಾರ ಎನಿಸಿಕೊಂಡಿದ್ದಾರೆ. 2012ರಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್‌ನಿಂದ ನಿವೃತ್ತರಾದ ದ್ರಾವಿಡ್, ಆ ಬಳಿಕ ವೀಕ್ಷಕ ವಿವರಣೆಗಾರನಾಗಿ ಕಾಣಿಸಿಕೊಂಡರು. ನಂತರ ತರಬೇತುದಾರರಾಗಿ ಎರಡನೇ ಇನ್ನಿಂಗ್ಸ್ ಆರಂಭಿಸಿದರು. ತಮ್ಮ ತರಬೇತಿಯಡಿಯಲ್ಲಿ, ಭಾರತ 19 ವರ್ಷದೊಳಗಿನವರ ತಂಡವನ್ನು 2018ರ ವಿಶ್ವಕಪ್​ನಲ್ಲಿ ಚಾಂಪಿಯನ್ ಮಾಡಿದರು. ಆ ನಂತರ 2021ರಲ್ಲಿ ಭಾರತದ ಹಿರಿಯ ತಂಡದ ಕೋಚ್ ಆಗಿ ನೇಮಕಗೊಂಡ ದ್ರಾವಿಡ್, ತಮ್ಮ ತರಬೇತಿಯಲ್ಲಿ ತಂಡವನ್ನು 2023ರ ಏಕದಿನ ವಿಶ್ವಕಪ್ ಫೈನಲ್​ಗೇರಿಸಿದ್ದರು. ಬಳಿಕ 2024ರಲ್ಲಿ ನಡೆದ ಟಿ20 ವಿಶ್ವಕಪ್​ನಲ್ಲಿ ತಂಡವನ್ನು ಚಾಂಪಿಯನ್ ಕೂಡ ಮಾಡಿದ್ದರು.

ರಾಹುಲ್ ದ್ರಾವಿಡ್2

ಅರ್ಹರನ್ನು ಗುರುತಿಸಿ ಪ್ರಶಸ್ತಿ ನೀಡಿದಾಗ, ಪ್ರಶಸ್ತಿಯ ಮೌಲ್ಯ ನೂರು ಪಟ್ಟು ಹೆಚ್ಚುತ್ತದೆ ಎಂಬ ಮಾತಿದೆ. ಆ ಮಾತಿಗೆ ಅರ್ಥ ಬರುವಂತಿರುವ ಸಭ್ಯ, ಸಂಭಾವಿತ, ಸಾಧಕ ಈ ನಮ್ಮ ರಾಹುಲ್ ದ್ರಾವಿಡ್. ಅವರಿಗೆ ಈ ಸಂದರ್ಭದಲ್ಲಿ ಸಂದಿರುವ ಕರ್ನಲ್ ಕೊಟ್ಟಾರಿ ಕನಕಯ್ಯ ನಾಯುಡು ಜೀವಮಾನ ಸಾಧನೆ ಪ್ರಶಸ್ತಿ- ಕ್ರೀಡೆಗೆ ಕಿರೀಟ ತೊಡಿಸಿದೆ, ಹೊಸ ತಲೆಮಾರನ್ನು ಪ್ರಭಾವಿಸುವ ಪ್ರೇರಕ ಶಕ್ತಿಯಾಗಿದೆ.

Basavaraju Megalkeri
+ posts

ಲೇಖಕ, ಪತ್ರಕರ್ತ

ಪೋಸ್ಟ್ ಹಂಚಿಕೊಳ್ಳಿ:

ಬಸವರಾಜು ಮೇಗಲಕೇರಿ
ಬಸವರಾಜು ಮೇಗಲಕೇರಿ
ಲೇಖಕ, ಪತ್ರಕರ್ತ

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಏಪ್ರಿಲ್ 1ರಿಂದ ರಾಜ್ಯಾದ್ಯಂತ ಟೋಲ್ ದರ ಹೆಚ್ಚಳ

ಹಣದುಬ್ಬರಕ್ಕೆ ಅನುಗುಣವಾಗಿ ನಡೆಯುವ ವಾರ್ಷಿಕ ದರ ಪರಿಷ್ಕರಣೆಯ ಭಾಗವಾಗಿ ಏಪ್ರಿಲ್ 1ರಿಂದ...

ಪುದುಚೆರಿ ಚುನಾವಣೆ | ‘ಇಂಡಿಯಾ’ ಗೊಂದಲ ನಿವಾರಣೆ: ಕಾಂಗ್ರೆಸ್ 16, ಡಿಎಂಕೆ 14 ಕ್ಷೇತ್ರಗಳಲ್ಲಿ ಸ್ಪರ್ಧೆ

ಪುದುಚೆರಿಯ 'ಇಂಡಿಯಾ' ಮೈತ್ರಿಕೂಟದ ಪ್ರಮುಖ ಪಕ್ಷಗಳಾದ ಡಿಎಂಕೆ ಮತ್ತು ಕಾಂಗ್ರೆಸ್‌ ಪಕ್ಷಗಳ...

ತಮಿಳುನಾಡು ಚುನಾವಣೆ | ಎಐಎಡಿಎಂಕೆ 178, ಬಿಜೆಪಿ 27 ಕ್ಷೇತ್ರಗಳಲ್ಲಿ ಸ್ಪರ್ಧೆ

ಈ ಬಾರಿಯ ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲಿ ಗೆದ್ದು ಅಧಿಕಾರಕ್ಕೇರಲೇ ಬೇಕೆಂದು ಪಣ...

ಮಧ್ಯಪ್ರಾಚ್ಯ ಸಂಘರ್ಷ | ಕದನ ವಿರಾಮ ಎಂದ ಟ್ರಂಪ್; ಮಾತುಕತೆ ನಡೆದಿಲ್ಲವೆಂದ ಇರಾನ್

ಮಧ್ಯಪ್ರಾಚ್ಯದಲ್ಲಿ ಉಲ್ಬಣಗೊಳ್ಳುತ್ತಿರುವ ಸಂಘರ್ಷವನ್ನು ಕೊನೆಗಾಣಿಸಲು ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್ ನಾನಾ...