ಐಪಿಎಲ್‌ನಲ್ಲಿ 25 ಕೋಟಿ ಕೋಟಿಗೆ ಹರಾಜಾದ ಆಟಗಾರ ಮರುದಿನ ಶೂನ್ಯಕ್ಕೆ ಔಟ್

Date:

ಮಂಗಳವಾರ ನಡೆದಿದ್ದ ಐಪಿಎಲ್ 2026ರ ಮಿನಿ ಹರಾಜಿನಲ್ಲಿ ಆಸ್ಟ್ರೇಲಿಯಾದ ಸ್ಟಾರ್​ ಆಲ್​ರೌಂಡರ್​ ಕ್ಯಾಮೆರೂನ್​ ಗ್ರೀನ್ ದೊಡ್ಡ ಮೊತ್ತಕ್ಕೆ ಮಾರಾಟವಾಗಿದ್ದು ಗೊತ್ತೆ ಇದೆ. ಅವರು ಐಪಿಎಲ್ ಇತಿಹಾಸದಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯುತ್ತಿರುವ ಮೂರನೇ ಕ್ರಿಕೆಟಿಗ ಎನಿಸಿಕೊಂಡಿದ್ದಾರೆ. ಗ್ರೀನ್​ರನ್ನು ಕೋಲ್ಕತ್ತಾ ನೈಟ್ ರೈಡರ್ಸ್ ₹25.20 ಕೋಟಿ ರೂ.ಗೆ ಖರೀದಿಸಿತು. ಮುಂದಿನ ಆವೃತ್ತಿಯಲ್ಲಿ ಗ್ರೀನ್​ ಬ್ಯಾಟಿಂಗ್​ ಮತ್ತು ಬೌಲಿಂಗ್​ ಮೂಲಕ ಅತ್ಯುತ್ತಮ ಪ್ರದರ್ಶನ ನೀಡಲಿದ್ದಾರೆ ಎಂದು ಅಭಿಮಾನಿಗಳು ಈಗಿನಿಂದಲೇ ಮಾತನಾಡಿಕೊಳ್ಳಲು ಪ್ರಾರಂಭಿಸಿದ್ದಾರೆ. ಆದರೆ ಕೆಕೆಆರ್​ ಖರೀದಿಸಿದ ಕೆಲವೇ ಗಂಟೆಗಳಲ್ಲಿ ಗ್ರೀನ್​ ಶೂನ್ಯಕ್ಕೆ ಔಟ್ ಆಗಿದ್ದಾರೆ.

25 ವರ್ಷ ವಯಸ್ಸಿನ ಗ್ರೀನ್ ಅವರನ್ನು ಪಡೆಯಲು ಕೆಕೆಆರ್ ಮತ್ತು ಚೆನ್ನೈ ಸೂಪರ್ ಕಿಂಗ್ಸ್ ತಂಡಗಳ ನಡುವೆ ತೀವ್ರ ಪೈಪೋಟಿ ಏರ್ಪಟ್ಟಿತ್ತು. ಚೆನ್ನೈ ₹25 ಕೋಟಿಯವರೆಗೆ ಬಿಡ್ ಮಾಡಿತ್ತು. ಆದಾಗ್ಯೂ, ₹64.3 ಕೋಟಿ ಬಜೆಟ್‌ನೊಂದಿಗೆ ಹರಾಜಿಗೆ ಎಂಟ್ರಿ ಕೊಟ್ಟಿದ್ದ ಕೆಕೆಆರ್ ಗ್ರೀನ್ ಅನ್ನು ಖರೀದಿಸಿತು ಮತ್ತು ಐಪಿಎಲ್ ಇತಿಹಾಸದಲ್ಲಿ ಅತ್ಯಂತ ದುಬಾರಿ ವಿದೇಶಿ ಆಟಗಾರ ಎಂಬ ದಾಖಲೆಯನ್ನು ಗ್ರೀನ್​ ಬರೆದರು. ಇದರೊಂದಿಗೆ 2024ರ ಋತುವಿನಲ್ಲಿ ಮಿಚೆಲ್ ಸ್ಟಾರ್ಕ್‌ ಪಡೆದಿದ್ದ ₹24.75 ಕೋಟಿಯ ಹಿಂದಿನ ದಾಖಲೆಯನ್ನು ಗ್ರೀನ್​ ಮುರಿದಿದ್ದಾರೆ.

ಆದಾಗ್ಯೂ, ಹರಾಜು ಮುಗಿದ ಕೆಲವೇ ಗಂಟೆಯಲ್ಲಿ ಗ್ರೀನ್ ಡಕೌಟ್​ ಆಗಿದ್ದು ಅಭಿಮಾನಿಗಳಿಗೆ ಆತಂಕ ಶುರವಾಗಿದೆ. ಆ್ಯಶಸ್ ಸರಣಿಯ ಭಾಗವಾಗಿ ಅಡಿಲೇಡ್‌ನಲ್ಲಿ ನಡೆಯುತ್ತಿರುವ ಮೂರನೇ ಟೆಸ್ಟ್‌ನ ಮೊದಲ ಇನಿಂಗ್ಸ್‌ನಲ್ಲಿ ಗ್ರೀನ್ ಡಕೌಟ್​ ಆಗಿದ್ದಾರೆ. ಎರಡು ಎಸೆತಗಳನ್ನು ಎದುರಿಸಿದ ಅವರು ಇಂಗ್ಲೆಂಡ್ ವೇಗಿ ಜೋಫ್ರಾ ಆರ್ಚರ್‌ಗೆ ಕ್ಯಾಚ್ ನೀಡಿ ಶೂನ್ಯ ರನ್ ಗಳಿಸಿ ಪೆವಿಲಿಯನ್​ ಸೇರಿದ್ದಾರೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ಇದನ್ನು ಓದಿದ್ದೀರಾ? ‘ಟೀಂ ಇಂಡಿಯಾ’ ಅಧಿಕೃತವಾಗಿ ಭಾರತವನ್ನು ಪ್ರತಿನಿಧಿಸದ ಖಾಸಗಿ ತಂಡ; ಬಿಸಿಸಿಐಗೆ ಬೀಳುವುದೇ ಸರ್ಕಾರಿ ಮೂಗುದಾರ?

ಆ್ಯಶಸ್ ಸರಣಿಯ ಮೂರನೇ ಟೆಸ್ಟ್‌ನ ಮೂದಲ ಇನಿಂಗ್ಸ್‌ನಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಆಸ್ಟ್ರೇಲಿಯಾ 83 ಓವರ್‌ಗಳಲ್ಲಿ 8 ವಿಕೆಟ್‌ ನಷ್ಟಕ್ಕೆ 326 ರನ್‌ ಗಳಿಸಿದೆ. ವಿಕೆಟ್‌ ಕೀಪರ್‌ ಅಲೆಕ್ಸ್ ಕ್ಯಾರಿ 106 ರನ್‌ ಗಳಿಸಿದರೆ, ಉಸ್ಮಾನ್ ಖವಾಜಾ (82) ರನ್‌ ಬಾರಿಸಿದರು. ಟ್ರಾವಿಸ್ ಹೆಡ್ (10), ಜೇಕ್ ವೆದರೋಲ್ಡ್ (18), ಲ್ಯಾಬುಸ್ಚಾಗ್ನೆ (19) ಮತ್ತು ಕ್ಯಾಮರೂನ್ ಗ್ರೀನ್ (0) ರನ್​ ಗಳಿಸುವಲ್ಲಿ ವಿಫಲರಾದರು. ಇಂಗ್ಲೆಂಡ್ ಬೌಲರ್‌ಗಳಲ್ಲಿ, ಜೋಫ್ರಾ ಆರ್ಚರ್ 3 ವಿಕೆಟ್ ಪಡೆದರೇ, ಬ್ರೈಡನ್ ಕಾರ್ಸ್ ಮತ್ತು ವಿಲ್‌ಜಾಕ್ಸ್ ತಲಾ 2 ವಿಕೆಟ್ ಪಡೆದರು. ಈ ಆಶಸ್ ಸರಣಿಯಲ್ಲಿ ಎರಡು ಪಂದ್ಯಗಳನ್ನು ಗೆದ್ದಿರುವ ಆಸ್ಟ್ರೇಲಿಯಾ 2-0 ಮುನ್ನಡೆಯಲ್ಲಿದೆ.

ಗ್ರೀನ್​ ಐಪಿಎಲ್​ ದಾಖಲೆ: ಕ್ಯಾಮರೂನ್ ಗ್ರೀನ್ ಈ ಹಿಂದೆ 2023 ಮತ್ತು 2024ರ ಐಪಿಎಲ್ ಋತುಗಳಲ್ಲಿ ಮುಂಬೈ ಇಂಡಿಯನ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ಪರ ಆಡಿರುವ ಅನುಭವ ಹೊಂದಿದ್ದಾರೆ. ಐಪಿಎಲ್​ನಲ್ಲಿ ಒಟ್ಟು 29 ಪಂದ್ಯಗಳನ್ನು ಆಡಿರುವ ಅವರು 41.58ರ ಸರಾಸರಿಯಲ್ಲಿ 707 ರನ್ ಗಳಿಸಿದ್ದಾರೆ. 153 ಕ್ಕಿಂತ ಹೆಚ್ಚು ಸ್ಟ್ರೈಕ್ ರೇಟ್ ಹೊಂದಿದ್ದು ಒಂದು ಶತಕ ಮತ್ತು ಎರಡು ಅರ್ಧಶತಕಗಳನ್ನೂ ಬಾರಿಸಿದ್ದಾರೆ. ಅವರ ಬೌಲಿಂಗ್ ಸರಾಸರಿ 41.5 ಕ್ಕಿಂತ ಹೆಚ್ಚಿದ್ದರೂ 16 ವಿಕೆಟ್‌ಗಳನ್ನು ಪಡೆದಿದ್ದಾರೆ. ಆದಾಗ್ಯೂ, ಗಾಯದಿಂದಾಗಿ ಅವರು 2025ರ ಐಪಿಎಲ್ ಹರಾಜಿನಲ್ಲಿ ಭಾಗವಹಿಸಲು ಸಾಧ್ಯವಾಗಿರಲಿಲ್ಲ.

WhatsApp Image 2025 11 17 at 3.21.38 PM
ಈ ದಿನ ಡೆಸ್ಕ್
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಮತ್ತೆ ಲಲಿತ್ ಮೋದಿ: ಐಪಿಎಲ್ 2026ಕ್ಕೂ ಮುನ್ನ ಭಾರೀ ಬದಲಾವಣೆ ಸಾಧ್ಯತೆ?

ರಾಜಸ್ಥಾನ ರಾಯಲ್ಸ್ ಫ್ರಾಂಚೈಸಿಯ ಮಾಲೀಕತ್ವದಲ್ಲಿ ಶೀಘ್ರದಲ್ಲೇ ಬದಲಾವಣೆಯಾಗುವ ಸಾಧ್ಯತೆಯಿದ್ದು, ಜಾಗತಿಕ ಹೂಡಿಕೆ...

ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಐಪಿಎಲ್ ಪಂದ್ಯಗಳ ಆಯೋಜನೆಗೆ ಸರ್ಕಾರದ ಅನುಮತಿ

ಬೆಂಗಳೂರಿನ ಐತಿಹಾಸಿಕ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಐಪಿಎಲ್ 2026 ಹಾಗೂ ಅಂತರರಾಷ್ಟ್ರೀಯ...

ಟೀಕೆಗಳ ಸುಳಿಯಲ್ಲೂ ಮಿನುಗಿದ ಕೇರಳದ ತಾರೆ: ಸಂಜು ಸ್ಯಾಮ್ಸನ್ ಎಂಬ ಛಲದಂಕಮಲ್ಲ

ಮೈದಾನದಲ್ಲಿ ಎಂ ಎಸ್  ಧೋನಿಯಂತೆಯೇ ಅತೀವ ಶಾಂತ ಸ್ವಭಾವವನ್ನು ಕಾಯ್ದುಕೊಳ್ಳುವ ಸಂಜು...