ಫ್ರೆಂಚ್ ಓಪನ್ ಟೆನಿಸ್ ಕಿರೀಟಕ್ಕೆ ಮುತ್ತಿಟ್ಟ ಕಾರ್ಲೋಸ್ ಅಲ್ಕರಾಝ್, ಹೊಸ ಇತಿಹಾಸ ಸೃಷ್ಟಿ

Date:

ಇಟಲಿಯ ಯಾನಿಕ್ ಸಿನ್ನರ್ ಹಾಗೂ ಸ್ಟೇನ್​ನ ಕಾರ್ಲೋಸ್ ಅಲ್ಕರಾಝ್ ನಡುವೆ ಕಂಡು ಬಂದ ಫ್ರೆಂಚ್ ಓಪನ್‌ ಟೆನಿಸ್ ಫೈನಲ್​ ಪಂದ್ಯ ಹೊಸ ಇತಿಹಾಸ ಸೃಷ್ಟಿಸಿದೆ. ಈ ಇತಿಹಾಸದೊಂದಿಗೆ ಅಲ್ಕರಾಝ್ ಫ್ರೆಂಚ್ ಓಪನ್ ಕಿರೀಟಕ್ಕೆ ಮುತ್ತಿಕ್ಕಿದ್ದಾರೆ.

ಪ್ಯಾರಿಸ್​ನ ರೋಲ್ಯಾಂಡ್ ಗ್ಯಾರೋಸ್​ ಮೈದಾನದಲ್ಲಿ ನಡೆದ ಫ್ರೆಂಚ್ ಓಪನ್ ಫೈನಲ್​ನಲ್ಲಿ ಕಾರ್ಲೋಸ್ ಅಲ್ಕರಾಝ್ ಅವರು ಯಾನಿಕ್ ಸಿನ್ನರ್ ಅವರನ್ನು ಸೋಲಿಸಿ ಚಾಂಪಿಯನ್ ಪಟ್ಟ ಅಲಂಕರಿಸಿದ್ದಾರೆ. ಇದು ಕ್ಲೇ ಕೋರ್ಟ್​ನಲ್ಲಿ 22 ವರ್ಷದ ಅಲ್ಕರಾಝ್ ಅವರ 2ನೇ ಪ್ರಶಸ್ತಿಯಾಗಿದೆ.

ಈ ಬಾರಿಯ ಫ್ರೆಂಚ್ ಓಪನ್ ಫೈನಲ್ ಪಂದ್ಯ ನಡೆದದ್ದು ಬರೋಬ್ಬರಿ 5 ಗಂಟೆ 29 ನಿಮಿಷ. ಅಂದರೆ ರೋಲ್ಯಾಂಡ್ ಗ್ಯಾರೋಸ್​ನಲ್ಲಿ ನಡೆದ ಈ ಯುಗದ ಅತ್ಯಂತ ದೀರ್ಘಾವಧಿಯ ಫೈನಲ್ ಪಂದ್ಯ ಇದಾಗಿದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ಇದಕ್ಕೂ ಮುನ್ನ ಓಪನ್ ಯುಗದಲ್ಲಿ ಅತಿ ದೀರ್ಘಾವಧಿಯ ಫ್ರೆಂಚ್ ಓಪನ್ ಫೈನಲ್ ನಡೆದದ್ದು 1982 ರಲ್ಲಿ. ಅಂದು ಮ್ಯಾಟ್ಸ್ ವಿಲಾಂಡರ್ ಹಾಗೂ ಗಿಲ್ಲೆರ್ಮೊ ವಿಲಾಸ್ 4 ಗಂಟೆ 47 ನಿಮಿಷಗಳ ಫೈನಲ್ ಮ್ಯಾಚ್ ಆಡಿ ಇತಿಹಾಸ ನಿರ್ಮಿಸಿದ್ದರು.

AA1FGCbB

ಜಿದ್ದಾಜಿದ್ದಿನ ಪೈಪೋಟಿ

ಜಿದ್ದಾಜಿದ್ದಿನ ಪೈಪೋಟಿಗೆ ಸಾಕ್ಷಿಯಾಗಿದ್ದ ಫೈನಲ್‌ ಪಂದ್ಯದ ಮೊದಲ ಸೆಟ್ ಅನ್ನು ಯಾನಿಕ್ ಸಿನ್ನರ್ ಅವರು 4-6 ಅಂತರದಿಂದ ಜಯ ಸಾಧಿಸಿದ್ದರು. ದ್ವಿತೀಯ ಸೆಟ್​ನಲ್ಲಿ ಅಲ್ಕರಾಝ್ ಕಂಬ್ಯಾಕ್ ಮಾಡುವ ಪ್ರಯತ್ನ ಮಾಡಿದರೂ ಅಂತಿಮವಾಗಿ 6-7 ಅಂತರದಿಂದ ಸೋಲೊಪ್ಪಿಕೊಂಡರು.

ಆದರೆ, ಮೂರನೇ ಸೆಟ್​ನಲ್ಲಿ ಅತ್ಯುತ್ತಮ ಸರ್ವ್​ಗಳ ಮೂಲಕ ಗಮನ ಸೆಳೆದ ಕಾರ್ಲೋಸ್ ಅಲ್ಕರಾಝ್, 6-4 ಅಂತರದಿಂದ ಯಾನಿಕ್ ಸಿನ್ನರ್​ಗೆ ಸೋಲುಣಿಸಿದರು. ಬಳಿಕ ನಡೆದ ಎರಡು ಸೆಟ್​ಗಳು ರಣರೋಚಕ ಕಾಳಗಕ್ಕೆ ಸಾಕ್ಷಿಯಾಯಿತು. ದಾಳಿಗೆ ಪ್ರತಿದಾಳಿ ಎಂಬಂತೆ ಕಂಡು ಬಂದ 4ನೇ ಸೆಟ್ ಅನ್ನು ಅಲ್ಕರಾಝ್ 7-6 ಗೆದ್ದುಕೊಂಡರು.

ಕೊನೆಯ ಸೆಟ್​ನಲ್ಲಿ ತನ್ನ ಅನುಭವವನ್ನು ಧಾರೆಯೆರೆದ ಯಾನಿಕ್ ಸಿನ್ನರ್ ಕಾರ್ಲೊಸ್ ಮೇಲೆ ಪ್ರಬಲ ಒತ್ತಡ ಹಾಕಿದರು. ಆದರೆ ಅಂತಿಮ ಸುತ್ತಿನಲ್ಲಿ ಛಲದಂಕ ಮಲ್ಲನಂತೆ ಆಟವಾಡಿದ ಕಾರ್ಲೋಸ್ ಅಲ್ಕರಾಝ್ 7-6 ಅಂತರದಿಂದ ಗೆದ್ದುಕೊಂಡರು. ಆ ಮೂಲಕ ಯಾನಿಕ್ ಸಿನ್ನರ್​ಗೆ ಸೋಲುಣಿಸಿ ಕಾರ್ಲೋಸ್ ಅಲ್ಕರಾಝ್ ಎರಡನೇ ಬಾರಿ ಫ್ರೆಂಚ್ ಓಪನ್​ ಕಿರೀಟ ಮುಡಿಗೇರಿಸಿಕೊಂಡರು.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಮತ್ತೆ ಲಲಿತ್ ಮೋದಿ: ಐಪಿಎಲ್ 2026ಕ್ಕೂ ಮುನ್ನ ಭಾರೀ ಬದಲಾವಣೆ ಸಾಧ್ಯತೆ?

ರಾಜಸ್ಥಾನ ರಾಯಲ್ಸ್ ಫ್ರಾಂಚೈಸಿಯ ಮಾಲೀಕತ್ವದಲ್ಲಿ ಶೀಘ್ರದಲ್ಲೇ ಬದಲಾವಣೆಯಾಗುವ ಸಾಧ್ಯತೆಯಿದ್ದು, ಜಾಗತಿಕ ಹೂಡಿಕೆ...

ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಐಪಿಎಲ್ ಪಂದ್ಯಗಳ ಆಯೋಜನೆಗೆ ಸರ್ಕಾರದ ಅನುಮತಿ

ಬೆಂಗಳೂರಿನ ಐತಿಹಾಸಿಕ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಐಪಿಎಲ್ 2026 ಹಾಗೂ ಅಂತರರಾಷ್ಟ್ರೀಯ...

ಟೀಕೆಗಳ ಸುಳಿಯಲ್ಲೂ ಮಿನುಗಿದ ಕೇರಳದ ತಾರೆ: ಸಂಜು ಸ್ಯಾಮ್ಸನ್ ಎಂಬ ಛಲದಂಕಮಲ್ಲ

ಮೈದಾನದಲ್ಲಿ ಎಂ ಎಸ್  ಧೋನಿಯಂತೆಯೇ ಅತೀವ ಶಾಂತ ಸ್ವಭಾವವನ್ನು ಕಾಯ್ದುಕೊಳ್ಳುವ ಸಂಜು...