ಹೊಸ ದಾಖಲೆಗಳನ್ನು ಬರೆದ ಅಫ್ಘಾನ್‌ನ ಇಬ್ರಾಹಿಂ ಜದ್ರಾನ್: ಚಾಂಪಿಯನ್ಸ್‌ ಟೂರ್ನಿಯಿಂದ ಹೊರಬಿದ್ದ ಇಂಗ್ಲೆಂಡ್‌

Date:

23 ವರ್ಷದ ಯುವ ಆಟಗಾರ ಇಬ್ರಾಹಿಂ ಜರ್ದಾನ್‌ ಅವರ ದಾಖಲೆಯ ಶತಕದೊಂದಿಗೆ ಅಫ್ಘಾನಿಸ್ತಾನ ತಂಡ ಚಾಂಪಿಯನ್ಸ್‌ ಟ್ರೋಫಿಯಲ್ಲಿ ಸೆಮಿಫೈನಲ್‌ ಆಸೆಯನ್ನು ಇನ್ನೂ ಜೀವಂತಗೊಳಿಸಿದೆ. ಲಾಹೋರ್‌ನ ಗಡ್ಡಾಫಿ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಅಫ್ಘಾನ್‌ ತಂಡ ಪ್ರಬಲ ಇಂಗ್ಲೆಂಡ್‌ ತಂಡವನ್ನು 8 ರನ್‌ಗಳಿಂದ ಸೋಲಿಸಿತು.

ಕೆಲ ದಿನಗಳ ಹಿಂದೆ ಇದೇ ಮೈದಾನದಲ್ಲಿ ಆಸ್ಟ್ರೇಲಿಯಾ ವಿರುದ್ಧ 351 ರನ್‌ಗಳನ್ನು ರಕ್ಷಣೆ ಮಾಡಿಕೊಳ್ಳುವಲ್ಲಿ ವಿಫಲವಾಗಿದ್ದ ಇಂಗ್ಲೆಂಡ್‌ ಈಗ ಅದೇ ಮೈದಾನದಲ್ಲಿ 326 ರನ್‌ಗಳನ್ನು ಗುರಿ ಮುಟ್ಟಲು ಒದ್ದಾಡಿತು. ಜೋ ರೂಟ್‌ ತಂಡಕ್ಕೆ ಶತಕ ಬಾರಿಸಿದರೂ ಆಂಗ್ಲರ ತಂಡದ ಗೆಲುವಿಗೆ ಇದು ನೆರವಾಗಲಿಲ್ಲ.

37 ರನ್‌ಗಳಿಗೆ 3 ವಿಕೆಟ್‌ ಕಳೆದುಕೊಂಡಿದ್ದ ಅಫ್ಘಾನಿಸ್ತಾನ ತಂಡಕ್ಕೆ ಬ್ಯಾಟಿಂಗ್‌ನಲ್ಲಿ ದೊಡ್ಡ ಮೊತ್ತಕ್ಕೆ ಕಾರಣವಾಗಿದ್ದ ಯುವ ಆಟಗಾರ ಇಬ್ರಾಹಿಂ ಜದ್ರಾನ್‌. 146 ಎಸೆತಗಳಲ್ಲಿ 177 ರನ್‌ಗಳನ್ನು ಬಾರಿಸಿದ ಜದ್ರಾನ್‌ ಹಲವು ದಾಖಲೆಗಳನ್ನು ಬರೆದರು. ಅವರ ಸೊಗಸಾದ ಇನಿಂಗ್ಸ್‌ನಲ್ಲಿ ಸೊಗಸಾದ 12 ಬೌಂಡರಿ ಹಾಗೂ 6 ಸಿಕ್ಸರ್‌ಗಳಿದ್ದವು. ಚಾಂಪಿಯನ್ಸ್‌ ಟ್ರೋಫಿಯಲ್ಲಿ ಶತಕ ಬಾರಿಸಿದ ಮೊದಲ ಆಟಗಾರನಾಗಿ ಇಬ್ರಾಹಿಂ ಜದ್ರಾನ್‌ ಹೊರಹೊಮ್ಮಿದರು. ಅದೇ ರೀತಿ ಅಫ್ಘಾನ್‌ ಏಕದಿನ ಕ್ರಿಕೆಟ್ ಇತಿಹಾಸದಲ್ಲಿ ವೈಯಕ್ತಿಕ ಅತೀ ಹೆಚ್ಚು ರನ್‌ ಬಾರಿಸಿದ ಆಟಗಾರನ ಶ್ರೇಯಕ್ಕೂ ಜದ್ರಾನ್‌ ಪಾತ್ರರಾದರು. ಹಾಗೆಯೇ ಏಕದಿನ ಕ್ರಿಕೆಟ್‌ನಲ್ಲಿ ಅಫ್ಘಾನ್‌ ತಂಡ ಅತೀ ಹೆಚ್ಚು ರನ್‌ ಬಾರಿಸಿದ್ದು ಇದೇ ಪಂದ್ಯದಲ್ಲಿ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ಜದ್ರಾನ್‌ರೊಂದಿಗೆ ಅಜ್ಮತುಲ್ಲಾ ಓಮರ್‌ಝೈ ಆಡಿದ ಆಲ್‌ರೌಂಡ್ ಆಟ ಕೂಡ ತಂಡದ ಗೆಲುವು ಕಾರಣವಾಯತು. 31 ಎಸೆತಗಳಲ್ಲಿ 41 ರನ್‌ ಬಾರಿಸಿ ಓಮರ್‌ಝೈ ಬಳಿಕ ಬೌಲಿಂಗ್‌ನಲ್ಲಿ 58 ರನ್‌ ನೀಡಿ 5 ವಿಕೆಟ್‌ ಉರುಳಿಸಿದರು.

ಈ ಸುದ್ದಿ ಓದಿದ್ದೀರಾ? ಚಾಂಪಿಯನ್ಸ್ ಟ್ರೋಫಿ | ‘ಕೊಹ್ಲಿ’ ಶತಕದ ಕೊಯ್ಲು: ಪಾಕ್ ವಿರುದ್ಧ ಟೀಮ್ ಇಂಡಿಯಾಗೆ ಭರ್ಜರಿ ಗೆಲುವು

ಮೊದಲು ಬ್ಯಾಟಿಂಗ್‌ ಮಾಡಿದ ಅಫ್ಘಾನಿಸ್ತಾನ ತಂಡ 7 ವಿಕೆಟ್‌ಗೆ 326 ರನ್‌ ಪೇರಿಸಿದರೆ, ಉತ್ತರವಾಗಿ ಇಂಗ್ಲೆಂಡ್ 49.5 ಓವರ್‌ಗಳಲ್ಲಿ 317 ರನ್‌ಗೆ ಆಲೌಟ್‌ ಆಗಿ ಸೋಲು ಕಂಡಿತು. ಜೋ ರೂಟ್‌ ಬಾರಿಸಿದ 120 ರನ್‌ ಇಂಗ್ಲೆಂಡ್‌ ನೆರವಿಗೆ ಬರಲಿಲ್ಲ.

ಇಂಗ್ಲೆಂಡ್‌ನ ಆರಂಭ ಅಷ್ಟೇನೂ ಉತ್ತಮವಾಗಿರಲಿಲ್ಲ. 30 ರನ್‌ಗಳಿಸುವಷ್ಟರಲ್ಲಿ ಫಿಲ್‌ ಸಾಲ್ಟ್ (12), ಜಾಮಿ ಸ್ಮಿತ್ (9) ವಿಕೆಟ್ ಕಳೆದುಕೊಂಡಿತು. ನಂತರ ಬೆನ್ ಡಕೆಟ್ (38) ರೂಟ್ ಜೋಡಿ 68 ರನ್ ಸೇರಿಸಿತು. ರಶೀದ್ ಖಾನ್ ಡಕೆಟ್ ಅವರನ್ನು ಔಟ್ ಮಾಡುವ ಮೂಲಕ ಅಫ್ಘಾನಿಸ್ತಾನಕ್ಕೆ ಮುನ್ನಡೆ ನೀಡಿದರು. ನಂತರ ಬಂದ ಹ್ಯಾರಿ ಬ್ರೂಕ್ (25), ಜೋಸ್ ಬಟ್ಲರ್ (38), ಲಿಯಾಮ್ ಲಿವಿಂಗ್‌ಸ್ಟೋನ್ (10) ಕಾಣಿಕೆ ತಂಡಕ್ಕೆ ಸಾಲಲಿಲ್ಲ. ಈ ಮಧ್ಯೆ ಜೋ ರೂಟ್ ಕೂಡಾ ಔಟಾದರು. ಇದರಿಂದ ಇಂಗ್ಲೆಂಡ್ 287 ರನ್‌ಗೆ 7 ವಿಕೆಟ್‌ ಕಳೆದುಕೊಂಡು ಗೆಲುವಿನ ಒದ್ದಾಟಕ್ಕೆ ಇಳಿದಿತ್ತು. 111 ಎಸೆತಗಳನ್ನು ಎದುರಿಸಿದ ರೂಟ್ ಒಂದು ಸಿಕ್ಸರ್ ಮತ್ತು 11 ಬೌಂಡರಿಗಳನ್ನು ಗಳಿಸಿದರು.

ರೂಟ್ ಔಟಾದ ನಂತರ ಜಾಮಿ ಓವರ್‌ಟನ್ (32) ಜೋಫ್ರಾ ಆರ್ಚರ್ (14) ಜೋಡಿ ಅಫ್ಘಾನಿಸ್ತಾನಕ್ಕೆ ಆತಂಕ ಮೂಡಿಸಿತು. ಆದರೆ ಇಬ್ಬರೂ ಎರಡು ಓವರ್‌ಗಳ ಅಂತರದಲ್ಲಿ ವಿಕೆಟ್ ಕಳೆದುಕೊಂಡರು. ಇದರಿಂದ ಇಂಗ್ಲೆಂಡ್ 9 ವಿಕೆಟ್‌ಗೆ 313 ರನ್ ಪೇರಿಸಿತ್ತು. ಕೊನೆಯ ಓವರ್‌ನಲ್ಲಿ ಗೆಲ್ಲಲು 13 ರನ್‌ಗಳ ಅಗತ್ಯವಿತ್ತು. ಓಮರ್‌ಜೈ ಎಸೆದ ಮೊದಲ ನಾಲ್ಕು ಎಸೆತಗಳಲ್ಲಿ ಒಂದೊಂದು ರನ್‌ ಬಂದಿತು. ಕೊನೆಯ ಎರಡು ಎಸೆತಗಳಲ್ಲಿ ಗೆಲ್ಲಲು 9 ರನ್‌ಗಳ ಅಗತ್ಯವಿತ್ತು. ಈ ಹಂತದಲ್ಲಿ ಆದಿಲ್ ರಶೀದ್ ಔಟಾಗಿದ್ದರಿಂದ ಅಫ್ಘಾನಿಸ್ತಾನ 8 ರನ್‌ ಗೆಲುವು ಕಂಡಿತು.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಮತ್ತೆ ಲಲಿತ್ ಮೋದಿ: ಐಪಿಎಲ್ 2026ಕ್ಕೂ ಮುನ್ನ ಭಾರೀ ಬದಲಾವಣೆ ಸಾಧ್ಯತೆ?

ರಾಜಸ್ಥಾನ ರಾಯಲ್ಸ್ ಫ್ರಾಂಚೈಸಿಯ ಮಾಲೀಕತ್ವದಲ್ಲಿ ಶೀಘ್ರದಲ್ಲೇ ಬದಲಾವಣೆಯಾಗುವ ಸಾಧ್ಯತೆಯಿದ್ದು, ಜಾಗತಿಕ ಹೂಡಿಕೆ...

ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಐಪಿಎಲ್ ಪಂದ್ಯಗಳ ಆಯೋಜನೆಗೆ ಸರ್ಕಾರದ ಅನುಮತಿ

ಬೆಂಗಳೂರಿನ ಐತಿಹಾಸಿಕ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಐಪಿಎಲ್ 2026 ಹಾಗೂ ಅಂತರರಾಷ್ಟ್ರೀಯ...

ಟೀಕೆಗಳ ಸುಳಿಯಲ್ಲೂ ಮಿನುಗಿದ ಕೇರಳದ ತಾರೆ: ಸಂಜು ಸ್ಯಾಮ್ಸನ್ ಎಂಬ ಛಲದಂಕಮಲ್ಲ

ಮೈದಾನದಲ್ಲಿ ಎಂ ಎಸ್  ಧೋನಿಯಂತೆಯೇ ಅತೀವ ಶಾಂತ ಸ್ವಭಾವವನ್ನು ಕಾಯ್ದುಕೊಳ್ಳುವ ಸಂಜು...