ರೋಹಿತ್‌ ಶರ್ಮಾ ಬೊಜ್ಜು ಹೊಂದಿರುವ ಕ್ರೀಡಾಳು, ತೂಕ ಇಳಿಸಿಕೊಳ್ಳಬೇಕು ಎಂದ ಕಾಂಗ್ರೆಸ್ ನಾಯಕಿ

Date:

ಕಾಂಗ್ರೆಸ್ ವಕ್ತಾರೆ ಶಮಾ ಮೊಹಮ್ಮದ್‌ ಭಾರತೀಯ ಕ್ರಿಕೆಟ್‌ ತಂಡದ ನಾಯಕ ರೋಹಿತ್‌ ಶರ್ಮಾ ಅವರನ್ನು ಬೊಜ್ಜು ಹೊಂದಿರುವ ಕ್ರೀಡಾಪಟು ಎಂದು ಹೇಳಿರುವುದು ಕ್ರಿಕೆಟ್ ಅಭಿಮಾನಿಗಳು ಹಾಗೂ ವಿವಿಧ ವಲಯದ ಗಣ್ಯರ ವಲಯದಿಂದ ಆಕ್ರೋಶ ವ್ಯಕ್ತವಾಗಿದೆ.

ಟ್ವಿಟರ್‌ನಲ್ಲಿ ಪೋಸ್ಟ್‌ ಮಾಡಿರುವ ಶಮಾ ಅವರು ‘ ರೋಹಿತ್‌ ಶರ್ಮಾ ಅವರು ಬೊಜ್ಜು ಹೊಂದಿರುವ ಕ್ರೀಡಾಪಟು! ತೂಕವನ್ನು ಇಳಿಸಿಕೊಳ್ಳಬೇಕು ಹಾಗೂ ಸಹಜವಾಗಿ ಭಾರತ ಕಂಡ ಪ್ರಬಾವಶಾಲಿಯಲ್ಲದ ನಾಯಕರಾಗಿದ್ದಾರೆ” ಎಂದು ಹೇಳಿದ್ದರು.

ಶಮಾ ಅವರು ಇದೇ ಸಂದರ್ಭದಲ್ಲಿ ಬೇರೆ ಕ್ರಿಕೆಟಿಗರಾದ ವಿರಾಟ್‌ ಕೊಹ್ಲಿ, ಸೌರವ್‌ ಗಂಗೂಲಿ, ಕಪಿಲ್‌ ದೇವ್‌ ಅವರನ್ನು ರೋಹಿತ್‌ ಶರ್ಮಾ ಅವರಿಗೆ ಹೋಲಿಕೆ ಮಾಡಿ ಅವರೊಬ್ಬ ಸಾಧಾರಣ ನಾಯಕ ಹಾಗೂ ಆಟಗಾರ ಎಂದು ಹೇಳಿರುವುದಲ್ಲದೆ, ಅದೃಷ್ಟದಿಂದ ಟೀಂ ಇಂಡಿಯಾದ ನಾಯಕರಾಗಿದ್ದಾರೆ ಎಂದಿದ್ದಾರೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ರೋಹಿತ್‌ ಸದೃಢತೆಯ ಬಗ್ಗೆ ಶಮಾ ಪೋಸ್ಟ್‌ ಹಾಕಿರುವುದಕ್ಕೆ ಹಲವರು ಟೀಕಿಸಿದ್ದಾರೆ. ಸಾಮಾಜಿಕ ಮಾಧ್ಯಮದಲ್ಲಿ ವಾಗ್ದಾಳಿಗಳು ಹೆಚ್ಚಾದಂತೆ ಪ್ರತಿಕ್ರಿಯೆ ನೀಡಿರುವ ಶಮಾ ಅವರು ಇದೊಂದು ಸಾಮಾನ್ಯ ಟ್ವೀಟ್‌ ಆಗಿದ್ದು, ದೇಹದ ಬಗ್ಗೆ ಹಗುರವಾಗಿ ಮಾತನಾಡಿರದೆ, ಕ್ರೀಡಾಪಟುವಿನ ಸದೃಢತೆಯ ಬಗ್ಗೆ ಹೇಳಿರುವುದಾಗಿ ತಿಳಿಸಿದ್ದಾರೆ.

“ಕ್ರೀಡಾಪಟುವಿನ ಫಿಟ್‌ನೆಸ್‌ ಬಗ್ಗೆ ನುಡಿದಿರುವ ಸಾಮಾನ್ಯ ಟ್ವೀಟ್‌ ಆಗಿದೆ. ಇದು ದೇಹವನ್ನು ಆಡಿಕೊಳ್ಳುವುದಲ್ಲ. ಕ್ರೀಡಾಪಟು ಯಾವಾಗಲು ಸದೃಢವಾಗಿರಬೇಕೆಂದು ನಾನು ನಂಬುತ್ತೇನೆ. ನನಗನಿಸಿದ್ದು ಅವರು ಸ್ವಲ್ಪ ದಪ್ಪಗಿದ್ದಾರೆ. ನಾನು ಆ ಬಗ್ಗೆ ಟ್ವೀಟ್‌ ಮಾಡಿದ್ದೇನೆ ವಿನಾ ಮನ ನೋಯಿಸುವ ಬೇರೆ ಉದ್ದೇಶವಿರಲಿಲ್ಲ. ಬೇರೆ ಹಿಂದಿನ ನಾಯಕರೊಂದಿಗೆ ಹೋಲಿಕೆ ಮಾಡಿದ್ದು, ಕೇವಲ ಹೇಳಿಕೆ ನೀಡಿರುವುದಷ್ಟೆ. ಪ್ರಜಾಪ್ರಭುತ್ವ ರಾಷ್ಟ್ರದಲ್ಲಿ ಮಾತನಾಡುವ ಹಕ್ಕಿದೆ. ಹೇಳಿರುವುದರಲ್ಲಿ ತಪ್ಪೇನಿದೆ? ಎಂದು ಸುದ್ದಿಸಂಸ್ಥೆಗೆ ಸ್ಪಷ್ಟನೆ ನೀಡಿದ್ದಾರೆ.

ಈ ಸುದ್ದಿ ಓದಿದ್ದೀರಾ? 1800 ಕೋಟಿ ಖರ್ಚು ಮಾಡಿ ಕೇವಲ 16 ಗಂಟೆ ಆಟವಾಡಿದ ಪಾಕಿಸ್ತಾನ ತಂಡ

ಹಿರಿಯ ಪತ್ರಕರ್ತ ರಾಜ್‌ದೀಪ್‌ ಸರ್‌ದೇಸಾಯಿ ಕೂಡ ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದು, ಶಮಾ ಮೇಡಂ, ರೋಹಿತ್‌ ಅವರು ಭಾರತ ಕಂಡಂತ ಅತ್ಯಂತ ಪ್ರಭಾವಶಾಲಿಯಲ್ಲದ ನಾಯಕರಾಗಿದ್ದಾರೆಯೆ? ಅತ್ಯಂತ ವಿಲಕ್ಷಣವಾದ ಹೇಳಿಕೆ ನಿಮಗೆ ಎಲ್ಲಿಂದ ಬಂತು? ನಾನು ಒಂದಷ್ಡು ಕ್ರಿಕೆಟ್‌ ಆಡಿದ್ದೇನೆ. ದೀರ್ಘಕಾಲದ ವೀಕ್ಷಕನಾಗಿ ಹೇಳುವುದಾದರೆ ರೋಹಿತ್‌ ಶರ್ಮಾ ಅವರು ಕೆಲವು ಅತ್ಯುತ್ತಮ ನಿರ್ಧಾರಗಳನ್ನು ತೆಗೆದುಕೊಂಡಿದ್ದಾರೆ. ಅವರು ನಾಯಕನಾಗಿ ಹಲವು ಐಪಿಎಲ್‌ ಟ್ರೋಫಿಗಳನ್ನು ಜಯಿಸಿಕೊಟ್ಟಿದ್ದಾರೆ. ಸೀಮಿತ ಓವರ್‌ ಕ್ರಿಕೆಟ್‌ನಲ್ಲಿ ಅತ್ಯುತ್ತಮ ನಾಯಕ ಅವರಾಗಿದ್ದಾರೆ. ನನ್ನ ವಿನಮ್ರ ಅಭಿಪ್ರಾಯದಂತೆ, ಸೀಮಿತ ಓವರ್‌ಗಳಲ್ಲಿ ರೋಹಿತ್‌ ಶರ್ಮಾ ದೃತಿಗೆಡದೆ ತಂಡವನ್ನು ಮುನ್ನಡೆಸುವ ಟೀಂ ಇಂಡಿಯಾ ಕ್ರಿಕೆಟ್‌ನ ಅತ್ಯುತ್ತಮ ನಾಯಕರಾಗಿದ್ದಾರೆ(ತೂಕದಲ್ಲಿ ಹೇಳುವುದಾದರೆ ಅವರು ಪೇರಿಸಿರುವ ರನ್‌ಗಳನ್ನು ನೋಡಿ ನಿರ್ಣಯಿಸಿ ದಯವಿಟ್ಟು ಅವರ ತೂಕವನ್ನು ಗಮನಿಸಬೇಡಿ )” ಎಂದಿದ್ದಾರೆ.

ಸ್ವಪಕ್ಷವೂ ಸೇರಿ ಎಲ್ಲಡೆಯಿಂದ ಟೀಕೆಗಳು ಹೆಚ್ಚಾದ ನಂತರ ಶಮಾ ಮೊಹಮ್ಮದ್‌ ಅವರು ರೋಹಿತ್‌ ಅವರ ಬಗ್ಗೆ ಮಾಡಿದ್ದ ಪೋಸ್ಟ್‌ಅನ್ನು ಡಿಲೀಟ್‌ ಮಾಡಿದ್ದಾರೆ.

WhatsApp Image 2025 11 17 at 3.21.17 PM
ಈ ದಿನ ಡೆಸ್ಕ್
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಮತ್ತೆ ಲಲಿತ್ ಮೋದಿ: ಐಪಿಎಲ್ 2026ಕ್ಕೂ ಮುನ್ನ ಭಾರೀ ಬದಲಾವಣೆ ಸಾಧ್ಯತೆ?

ರಾಜಸ್ಥಾನ ರಾಯಲ್ಸ್ ಫ್ರಾಂಚೈಸಿಯ ಮಾಲೀಕತ್ವದಲ್ಲಿ ಶೀಘ್ರದಲ್ಲೇ ಬದಲಾವಣೆಯಾಗುವ ಸಾಧ್ಯತೆಯಿದ್ದು, ಜಾಗತಿಕ ಹೂಡಿಕೆ...

ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಐಪಿಎಲ್ ಪಂದ್ಯಗಳ ಆಯೋಜನೆಗೆ ಸರ್ಕಾರದ ಅನುಮತಿ

ಬೆಂಗಳೂರಿನ ಐತಿಹಾಸಿಕ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಐಪಿಎಲ್ 2026 ಹಾಗೂ ಅಂತರರಾಷ್ಟ್ರೀಯ...

ಟೀಕೆಗಳ ಸುಳಿಯಲ್ಲೂ ಮಿನುಗಿದ ಕೇರಳದ ತಾರೆ: ಸಂಜು ಸ್ಯಾಮ್ಸನ್ ಎಂಬ ಛಲದಂಕಮಲ್ಲ

ಮೈದಾನದಲ್ಲಿ ಎಂ ಎಸ್  ಧೋನಿಯಂತೆಯೇ ಅತೀವ ಶಾಂತ ಸ್ವಭಾವವನ್ನು ಕಾಯ್ದುಕೊಳ್ಳುವ ಸಂಜು...