ಕ್ರಿಕೆಟ್ | ದಕ್ಷಿಣ ಆಫ್ರಿಕಾದ ಭಾರತ ಪ್ರವಾಸ; ರೋಚಕತೆ, ದಾಖಲೆಗಳು ಮತ್ತು ಸವಾಲುಗಳು

Date:

ಅಭಿಮಾನಿಗಳಿಗೆ ಈ ಸರಣಿ ನಿಜಕ್ಕೂ ಕ್ರಿಕೆಟ್‌ ಹಬ್ಬದಂತಿದೆ. ಯಾರೆಷ್ಟು ರನ್ ಗಳಿಸಿದರು, ಎಷ್ಟು ವಿಕೆಟ್‌ಗಳು ಬಂತು, ಅಂತಿಮವಾಗಿ ಯಾರು ಗೆದ್ದರು, ಇವೆಲ್ಲಕ್ಕಿಂತ ಮುಖ್ಯವಾದುದು ಎರಡೂ ತಂಡಗಳು ಮೈದಾನದಲ್ಲಿ ತೋರಿಸುವ ಶ್ರಮ, ಕೌಶಲ್ಯ ಮತ್ತು ತಾಳ್ಮೆ. ಅದೇ ಕ್ರಿಕೆಟ್‌ನ ನಿಜವಾದ ಸೌಂದರ್ಯ. ಈ ಪ್ರವಾಸ ಕೇವಲ ಕ್ರಿಕೆಟ್‌ ಆಟವಲ್ಲ, ಜನರನ್ನು ಬೆಸೆಯುವ ಒಂದು ಬಾಂಧವ್ಯವಾಗಿದೆ.

ದಕ್ಷಿಣ ಆಫ್ರಿಕಾ ಕ್ರಿಕೆಟ್ ತಂಡ ಭಾರತ ಪ್ರವಾಸ ಕೈಗೊಂಡಿರುವುದು ಕ್ರಿಕೆಟ್ ಪ್ರಪಂಚದಲ್ಲಿ ಹೊಸ ಚೈತನ್ಯ ಮೂಡಿಸಿದೆ.  ಟೆಸ್ಟ್, ಏಕದಿನ ಮತ್ತು ಟಿ20—ಮೂರು ಮಾದರಿಗಳಲ್ಲಿ ನಡೆಯುವ ಈ ವಿಶಾಲ ಸರಣಿ ಅಭಿಮಾನಿಗಳಿಗೆ ದೀರ್ಘಕಾಲದ ಕ್ರಿಕೆಟ್ ಹಬ್ಬವನ್ನೇ ನೀಡುತ್ತಿದೆ. ಎರಡೂ ತಂಡಗಳು ಅಂತಾರಾಷ್ಟ್ರೀಯ ಮಟ್ಟದಲ್ಲಿ ಬಲಿಷ್ಠ ಪ್ರತಿಸ್ಪರ್ಧಿಗಳು, ಆದ್ದರಿಂದ ಈ ಪ್ರವಾಸವೂ ತೀವ್ರ ಪೈಪೋಟಿ ಮತ್ತು ಹೊಸ ದಾಖಲೆಗಳಿಗೆ ವೇದಿಕೆ ಆಗಲಿದೆ. ಭಾರತ ತನ್ನ ತವರು ಪಿಚ್‌ಗಳಲ್ಲಿ ಸಾಮಾನ್ಯವಾಗಿ ಪ್ರಬಲ ತಂಡವಾಗಿರುತ್ತದೆ, ಮತ್ತೊಂದೆಡೆ ದಕ್ಷಿಣ ಆಫ್ರಿಕಾ ತನ್ನ ವೇಗದ ಬೌಲಿಂಗ್ ಶಕ್ತಿಯಿಂದ ಯಾವಾಗಲೂ ಸವಾಲು ನೀಡುವ ತಂಡ. ಆಟಗಾರರ ಫಾರ್ಮ್, ಹೊಸ ತಂತ್ರಗಳು ಮತ್ತು ಪಿಚ್‌ಗಳ ಬದಲಾವಣೆ ಇವೆಲ್ಲವೂ ಸೇರಿ ಈ ಪ್ರವಾಸವನ್ನು ಇನ್ನಷ್ಟು ಕುತೂಹಲಕರ ಮಾಡಿವೆ. ಒಟ್ಟಾರೆಯಾಗಿ, 2025ರ ಭಾರತ–ದಕ್ಷಿಣ ಆಫ್ರಿಕಾ ಸರಣಿ ಕ್ರಿಕೆಟ್ ಪ್ರಿಯರಿಗೆ ರೋಚಕತೆ, ಸ್ಪರ್ಧಾತ್ಮಕತೆ ಮತ್ತು ಮನರಂಜನೆಯಿಂದ ಕೂಡಿರಲಿದೆ.

ಭಾರತದಕ್ಷಿಣ ಆಫ್ರಿಕಾ ಕ್ರಿಕೆಟ್ ಸಂಬಂಧ

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...
sachin tendulkar

1991ರಲ್ಲಿ ದಕ್ಷಿಣ ಆಫ್ರಿಕಾ ಹಲವು ವರ್ಷಗಳ ಕಾಲ ವರ್ಣಭೇದ ನೀತಿ ಕಾರಣದಿಂದ ಅಂತಾರಾಷ್ಟ್ರೀಯ ಕ್ರಿಕೆಟ್‌ನಿಂದ ದೂರವಿತ್ತು. ನಿರ್ಬಂಧಗಳು ತೆರವಾದ ಮೇಲೆ ದಕ್ಷಿಣ ಆಫ್ರಿಕಾ ಮತ್ತೆ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಕಾಲಿಟ್ಟಾಗ, ಅವರು ಮೊದಲ ಪಂದ್ಯವನ್ನು ಭಾರತದ ಜೊತೆ ಎದುರಾಳಿಯಾಗಿ ಆಡಿದ್ದು ಒಂದು ವಿಶೇಷ ಕ್ಷಣವಾಗಿತ್ತು. ಇದು ಎರಡು ರಾಷ್ಟ್ರಗಳ ಕ್ರಿಕೆಟ್‌ ಸಂಬಂಧಕ್ಕೆ ಹೊಸ ಆರಂಭವಾಗಿತ್ತು. ನಂತರ 1992–93ರಲ್ಲಿ ಭಾರತ ದಕ್ಷಿಣ ಆಫ್ರಿಕಾದಲ್ಲಿ ತಮ್ಮ ಮೊದಲ ಟೆಸ್ಟ್‌ ಸರಣಿಯನ್ನು ಆಡಿತು. ಆ ಸರಣಿಯಲ್ಲಿ ಪ್ರವಾಸಿಗರಾದ ಭಾರತ 1–0ರಿಂದ ಸೋತರೂ, ದಕ್ಷಿಣ ಆಫ್ರಿಕಾ ತಂಡ ದೀರ್ಘ ವಿರಾಮದ ನಂತರವೂ ತಮ್ಮ ಆಟದ ಶಕ್ತಿಯನ್ನು ತೋರಿಸಿತು. ಈ ಮೊದಲ ಟೆಸ್ಟ್‌ ಸರಣಿಯೇ ಎರಡೂ ತಂಡಗಳ ನಡುವಿನ ಪೈಪೋಟಿಗೆ ವೇದಿಕೆಯಾಯಿತು. ನಂತರದ ವರ್ಷಗಳಲ್ಲಿ ಭಾರತ–ದಕ್ಷಿಣ ಆಫ್ರಿಕಾ ನಡುವಿನ ಪ್ರತಿಯೊಂದು ಸರಣಿಯೂ ವಿಭಿನ್ನ ರೀತಿಯ ರೋಚಕ ಪಂದ್ಯಗಳು, ಕಠಿಣ ಸವಾಲುಗಳು ಮತ್ತು ಹೊಸ ಆಟಗಾರರ ಉದಯದಿಂದ ಅಭಿಮಾನಿಗಳಿಗೆ ಯಾವಾಗಲೂ ವಿಶೇಷ ಅನುಭವ ನೀಡುತ್ತ ಬಂದಿದೆ.

ಟೆಸ್ಟ್ ಕ್ರಿಕೆಟ್ನಲ್ಲಿನ ಮುಖಾಮುಖಿ ಪೈಪೋಟಿ

ಭಾರತ–ದಕ್ಷಿಣ ಆಫ್ರಿಕಾ ನಡುವಿನ ಟೆಸ್ಟ್ ಪೈಪೋಟಿ ವೈವಿಧ್ಯಮಯವಾಗಿದೆ. ಎರಡು ತಂಡಗಳು ಒಟ್ಟು 44 ಟೆಸ್ಟ್‌ಗಳನ್ನು ಆಡಿದ್ದು, ದಕ್ಷಿಣ ಆಫ್ರಿಕಾ 18 ಗೆಲುವುಗಳೊಂದಿಗೆ ಅಲ್ಪ ಮುನ್ನಡೆ ಕಾಯ್ದುಕೊಂಡಿದೆ. ಭಾರತ 16 ಪಂದ್ಯಗಳಲ್ಲಿ ಜಯ ಪಡೆದಿದೆ, 10 ಪಂದ್ಯಗಳು ಡ್ರಾದಲ್ಲಿ ಅಂತ್ಯಗೊಂಡಿವೆ. ಆದರೆ ಈ ಒಟ್ಟಾರೆ ಅಂಕಿಅಂಶಕ್ಕೆ ಭಾರತದಲ್ಲಿ ದಕ್ಷಿಣ ಆಫ್ರಿಕಾ ಆಡಿದ ಟೆಸ್ಟ್‌ಗಳನ್ನು ಸೇರಿಸಿದಾಗ, ಚಿತ್ರ ಸಂಪೂರ್ಣ ಬದಲಾಗುತ್ತದೆ. ಭಾರತೀಯ ಪಿಚ್‌ಗಳಲ್ಲಿ ಹರಿಣಗಳ ತಂಡಕ್ಕೆ ಅಷ್ಟೊಂದು ಸುಲಭವಾಗುವುದಿಲ್ಲ. ಭಾರತದಲ್ಲಿ ನಡೆದ 19 ಟೆಸ್ಟ್‌ಗಳಲ್ಲಿ 11ನ್ನು ಭಾರತ ಗೆದ್ದಿದೆ. ದಕ್ಷಿಣ ಆಫ್ರಿಕಾ ತಂಡ ಭಾರತದಲ್ಲಿ ಕೇವಲ 5 ಆಟಗಳಲ್ಲಿ ಮಾತ್ರ ಗೆಲುವು ಸಾಧಿಸಿದೆ, ಉಳಿದ 3 ಪಂದ್ಯಗಳು ಡ್ರಾ ಆಗಿವೆ. ವಿಶೇಷವಾಗಿ ಸ್ಪಿನ್ನರ್‌ಗಳಿಗೆ ಅನುಕೂಲಕರವಾದ ಭಾರತದ ಪಿಚ್‌ಗಳು ಪ್ರವಾಸಿಗರ ಬ್ಯಾಟಿಂಗ್‌ನ್ನು ಹಲವು ಬಾರಿ ಗೊಂದಲಕ್ಕೊಳಪಡಿಸಿವೆ.

jacques kallis ab de villiers

ಇದನ್ನು ಓದಿದ್ದೀರಾ? ಐಪಿಎಲ್ 2026: ಬೆಂಗಳೂರಿನಿಂದ ಎಲ್ಲ ಆರ್‌ಸಿಬಿ ಪಂದ್ಯಗಳು ಸ್ಥಳಾಂತರ

ದಕ್ಷಿಣ ಆಫ್ರಿಕಾದಲ್ಲಿ ಭಾರತಕ್ಕೆ ಎದುರಾಗುವ ಸವಾಲು

ಭಾರತಕ್ಕೆ ದಕ್ಷಿಣ ಆಫ್ರಿಕಾದ ಪಿಚ್‌ಗಳು ಯಾವಾಗಲೂ ಕಠಿಣವಾಗಿರುತ್ತವೆ. ವೇಗ ಮತ್ತು ಬೌನ್ಸ್ ಇರುವ ದಕ್ಷಿಣ ಆಫ್ರಿಕಾ ಪಿಚ್‌ಗಳು ಭಾರತದ ಬ್ಯಾಟ್ಸ್‌ಮನ್‌ಗಳಿಗೆ ದೊಡ್ಡ ತಲೆನೋವಾದದ್ದು ಹಲವಾರು ಬಾರಿ ಸೋಲು ಕಂಡಿದೆ. 1992–93ರಿಂದ 2023–24 ತನಕ ನಡೆದ ಪ್ರವಾಸಗಳಲ್ಲಿ ದಕ್ಷಿಣ ಆಫ್ರಿಕಾ ತಂಡ ಹಲವು ಸರಣಿಗಳಲ್ಲಿ ಹೆಚ್ಚಿನ ಜಯಗಳಿಸಿದೆ. 2017–18ರಲ್ಲಿ ದಕ್ಷಿಣ ಆಫ್ರಿಕಾ 2-1 ರಿಂದ ಸರಣಿ ಗೆದ್ದರೆ, 2021–22ರಲ್ಲಿ ಭಾರತ ಮೊದಲ ಟೆಸ್ಟ್‌ಗೆ ಗೆದ್ದು ಇತಿಹಾಸ ನಿರ್ಮಿಸಿದರೂ, ಸರಣಿಯನ್ನು 1-2 ರಿಂದ ಕಳೆದುಕೊಂಡಿತು. 2023–24ರ ಪ್ರವಾಸದಲ್ಲಿ 1-1ರಿಂದ ಸರಣಿ ಡ್ರಾ ಆದರೂ ದಕ್ಷಿಣ ಆಫ್ರಿಕಾ ನೆಲದಲ್ಲಿ ಭಾರತದ ಅತ್ಯುತ್ತಮ ಪ್ರದರ್ಶನಗಳಲ್ಲಿ ಒಂದೆಂದು ಪರಿಗಣಿಸಲಾಗಿದೆ. ಈ ಅಂಕಿಅಂಶಗಳನ್ನು ಗಮನಿಸಿದರೆ ದಕ್ಷಿಣ ಆಫ್ರಿಕಾ ಪಿಚ್‌ಗಳು ಭಾರತಕ್ಕೆ ಎಷ್ಟು ಕಠಿಣ ಎಂಬುದನ್ನು ತೋರಿಸುತ್ತವೆ.

ತವರಿನಲ್ಲಿ ಹರಿಣಗಳ ಎದುರು ಭಾರತದ ಬಲವಾದ ಪ್ರದರ್ಶನ

ಭಾರತದಲ್ಲಿ ದಕ್ಷಿಣ ಆಫ್ರಿಕಾ ತಂಡಕ್ಕೆ ಟೆಸ್ಟ್ ಕ್ರಿಕೆಟ್‌ ತುಂಬಾ ಕಷ್ಟಕರವಾಗಿರುತ್ತದೆ. 2015–16ರ ಫ್ರೀಡಂ ಟ್ರೋಫಿ ಸರಣಿಯಲ್ಲಿ ಭಾರತ  ದಕ್ಷಿಣ ಆಫ್ರಿಕಾವನ್ನು 3–0 ರಿಂದ ಸೋಲಿಸಿತು. ನಂತರ 2019–20ರಲ್ಲಿ ಮತ್ತೆ 3–0 ರಿಂದ ಗೆದ್ದು ಫ್ರೀಡಂ ಟ್ರೋಫಿ ಪಟ್ಟವನ್ನು ಕಾಯ್ದುಕೊಂಡಿತು. ಭಾರತದ ಪಿಚ್‌ಗಳು, ವಿಶೇಷವಾಗಿ ಸ್ಪಿನ್‌ ಗೆ ಅನುಕೂಲವಾಗುವ ಬಗ್ಗೆ, ಪ್ರವಾಸಿ ತಂಡಕ್ಕೆ ಹೆಚ್ಚಾಗಿ ಸಂಕಷ್ಟ ಉಂಟುಮಾಡುತ್ತವೆ. ವಾಸ್ತವವಾಗಿ, ದಕ್ಷಿಣ ಆಫ್ರಿಕಾ ಭಾರತದಲ್ಲಿ ಟೆಸ್ಟ್‌ ಸರಣಿ ಗೆದ್ದುಬಂದ ಘಟನೆಗಳು ಬಹಳ ವಿರಳ. ಕೊನೆಯ ಬಾರಿ ಹರಿಣಗಳ ತಂಡ 2004–05ರಲ್ಲಿ 1–0ರಿಂದ ಸರಣಿ ಗೆದ್ದಿತ್ತು. ಆ ಸಾಧನೆ ಈಗ ನೋಡುವವರಿಗೆ ಅಸಾಧ್ಯವೆನಿಸುವ ಮಟ್ಟದದ್ದಾಗಿದೆ. ಅದರ ನಂತರ ಹಲವಾರು ಬಾರಿ ಭಾರತಕ್ಕೆ ಪ್ರವಾಸಕ್ಕೆ ಬಂದರೂ ದಕ್ಷಿಣ ಆಫ್ರಿಕಾ ಮತ್ತೆ ಯಾವುದೇ ಟೆಸ್ಟ್‌ ಸರಣಿ ಗೆಲ್ಲಲಿಲ್ಲ. ಒಟ್ಟಿನಲ್ಲಿ, ಭಾರತದಲ್ಲಿ ದಕ್ಷಿಣ ಆಫ್ರಿಕಾ ಟೆಸ್ಟ್ ಕ್ರಿಕೆಟ್ ಆಡುವುದು ಎಂದರೆ ಕಷ್ಟವೇ ಹೆಚ್ಚು. ಇಲ್ಲಿ ಪಿಚ್‌ಗಳು ಕಠಿಣವಾಗಿರುತ್ತವೆ, ಸ್ಪಿನ್‌ ಬೌಲಿಂಗ್‌ ತೀವ್ರವಾಗಿರುತ್ತದೆ, ಮತ್ತು ಭಾರತದ ಬೌಲರ್‌ಗಳ ಎದುರು ರನ್‌ ಗಳಿಸುವುದು ಸುಲಭವಲ್ಲ. ಅದಕ್ಕೇ ಭಾರತದಲ್ಲಿ ದಕ್ಷಿಣ ಆಫ್ರಿಕಾ ಗೆಲುವು ಸಾಧಿಸುವುದು ತುಂಬಾ ಕಷ್ಟವಾಗುತ್ತಿದೆ.

Anil kumble and virat kohli

ಏಕದಿನ ಮತ್ತು ಟಿ20 ದಾಖಲೆಗಳುಸಮಬಲದ ಪೈಪೋಟಿ

ಒಟ್ಟು 92 ಏಕದಿನ ಪಂದ್ಯಗಳಲ್ಲಿ ದಕ್ಷಿಣ ಆಫ್ರಿಕಾ 52 ಪಂದ್ಯಗಳಲ್ಲಿ ಗೆದ್ದು ಭಾರತದ ಮೇಲೆ ಸ್ವಲ್ಪ ಮುನ್ನಡೆ ಸಾಧಿಸಿದೆ. ಭಾರತ 37 ಪಂದ್ಯಗಳಲ್ಲಿ ಜಯಗಳಿಸಿದ್ದರೂ, ಒಟ್ಟಾರೆ ದಾಖಲೆ ನೋಡಿದರೆ ದಕ್ಷಿಣ ಆಫ್ರಿಕಾ ತಂಡವೇ ಸ್ವಲ್ಪ ಮೇಲುಗೈ ಹೊಂದಿದೆ. ಆದರೆ ಇದು ಇಷ್ಟಕ್ಕೆ ಇದು ಮುಗಿಯುವುದಿಲ್ಲ. ಪಂದ್ಯಗಳು ಭಾರತದಲ್ಲಿ ನಡೆದಾಗ ಪರಿಸ್ಥಿತಿ ಸಂಪೂರ್ಣ ಬದಲಾಗುತ್ತದೆ. ಭಾರತದ ನೆಲದಲ್ಲಿ ಆಡುವ ಏಕದಿನ ಪಂದ್ಯಗಳಲ್ಲಿ ಭಾರತೀಯ ತಂಡ ಹೆಚ್ಚು ಬಲವಾಗಿ ಕಾಣಿಸಿದೆ. ಇಲ್ಲಿನ ಪಿಚ್‌ಗಳು, ಹವಾಮಾನ, ಮತ್ತು ಸ್ಥಳೀಯ ಪರಿಸ್ಥಿತಿಗಳು ಭಾರತೀಯ ಆಟಗಾರರಿಗೆ ತುಂಬಾ ಅನುಕೂಲವಾಗುತ್ತವೆ. ಅದಕ್ಕಾಗಿಯೇ ದಕ್ಷಿಣ ಆಫ್ರಿಕಾ ತಂಡ ಭಾರತಕ್ಕೆ ಆಗಮಿಸಿದಾಗ ಹಲವಾರು ಬಾರಿ ಒತ್ತಡಕ್ಕೆ ಸಿಲುಕಿ, ತಮ್ಮ ಸಾಮರ್ಥ್ಯವನ್ನು ತೋರಿಸಲು ಕಷ್ಟಪಡುತ್ತದೆ. ಬಲಿಷ್ಟ ತಂಡವಾಗಿದ್ದರೂ ಭಾರತೀಯ ಪರಿಸ್ಥಿತಿಗಳ ವಿರುದ್ಧ ಅವರು ಮತ್ತೆ ಮತ್ತೆ ಸಮಸ್ಯೆಗಳನ್ನು ಎದುರಿಸಿದ್ದಾರೆ.

ಟಿ20 ಮಾದರಿಯಲ್ಲಿ ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವೆ ಸ್ಪರ್ಧೆ ಇನ್ನೂ ರೋಚಕವಾಗಿರುತ್ತದೆ. ಒಟ್ಟು ಪಂದ್ಯಗಳಲ್ಲಿ ಭಾರತ 15 ಬಾರಿ ಗೆದ್ದು ಮುನ್ನಡೆ ಕಾಯ್ದುಕೊಂಡಿದೆ. ಹರಿಣಗಳ ತಂಡ 11 ಗೆಲುವು ಪಡೆದಿದ್ದರೂ, ಭಾರತ ಟಿ20ಯಲ್ಲಿ ಹೆಚ್ಚು ಸ್ಥಿರತೆ ತೋರಿಸಿದೆ. ವೇಗವಾದ ಆಟ, ಉತ್ತಮ ಬ್ಯಾಟಿಂಗ್‌ ಕ್ರಮ ಮತ್ತು ಬೌಲಿಂಗ್‌ನಲ್ಲಿ ವೈವಿಧ್ಯ,ಇವೆಲ್ಲ ಭಾರತಕ್ಕೆ ಟಿ20ಯಲ್ಲಿ ಹೆಚ್ಚು ಯಶಸ್ಸನ್ನು ತಂದಿವೆ. ಒಟ್ಟಿನಲ್ಲಿ, ದಕ್ಷಿಣ ಆಫ್ರಿಕಾ ತಂಡವು ಹೊರನಾಡಿನಲ್ಲಿ ಬಲಿಷ್ಠದರೂ, ಭಾರತದಲ್ಲಿ ಭಾರತ ತಂಡವೇ ಹೆಚ್ಚು ಹಿಡಿತ ಹೊಂದಿದೆ.

ಮುಖ್ಯ ಆಟಗಾರರು ಮತ್ತು ದಾಖಲೆಗಳು

ಭಾರತದ ಹಲವಾರು ದಿಗ್ಗಜ ಆಟಗಾರರು ದಕ್ಷಿಣ ಆಫ್ರಿಕಾ ವಿರುದ್ಧ ಅದ್ಭುತ ಸಾಧನೆಗಳನ್ನು ಮಾಡಿದ್ದಾರೆ. ಸಚಿನ್ ತೆಂಡೂಲ್ಕರ್ ದಕ್ಷಿಣ ಆಫ್ರಿಕಾ ವಿರುದ್ಧ ಭಾರತದ ಪರ ಅತಿ ಹೆಚ್ಚು ರನ್‌ ಗಳಿಸಿದ ಆಟಗಾರ. ಅವರು 1,741 ರನ್‌ಗಳನ್ನು ಬಾರಿಸಿ ತಮ್ಮ ಸಾಮರ್ಥ್ಯ  ಏನು ಎಂಬುದನ್ನು ತೋರಿಸಿದ್ದಾರೆ. ವಿರಾಟ್ ಕೊಹ್ಲಿಯೂ ಕೂಡ ದಕ್ಷಿಣ ಆಫ್ರಿಕಾ ವಿರುದ್ಧ 1,000ಕ್ಕೂ ಹೆಚ್ಚು ರನ್‌ ಗಳಿಸಿ ತನ್ನ ಸ್ಥಾನ ಇನ್ನಷ್ಟು ಬಲಪಡಿಸಿದ್ದಾರೆ.

Gill and dhoni

ಬೌಲಿಂಗ್‌ ವಿಭಾಗಕ್ಕೆ ಬಂದರೆ, ಅನಿಲ್ ಕುಂಬ್ಳೆ ದಕ್ಷಿಣ ಆಫ್ರಿಕಾ ವಿರುದ್ಧ 84 ವಿಕೆಟ್‌ಗಳನ್ನು ಪಡೆದು ಭಾರತೀಯ ಬೌಲರ್‌ಗಳಲ್ಲಿ ಮೊದಲ ಸ್ಥಾನದಲ್ಲಿದ್ದಾರೆ. ಈ ಸರಣಿಯಲ್ಲಿ ರವೀಂದ್ರ ಜಡೇಜಾ ದೊಡ್ಡ ಸಾಧನೆ ಮಾಡಿದ್ದಾರೆ. ಅವರು ಟೆಸ್ಟ್ ಕ್ರಿಕೆಟ್‌ನಲ್ಲಿ 4,000 ರನ್ ಹಾಗೂ 338 ವಿಕೆಟ್‌ಗಳ ಮೈಲುಗಲ್ಲು ತಲುಪಿ, ಕಪಿಲ್ ದೇವ್ ಅವರಂತೆಯೇ ಆಲ್‌ರೌಂಡರ್‌ ಶ್ರೇಷ್ಠ ಆಲ್‌ರೌಂಡರ್‌ ಸಾಧನೆ ಮಾಡಿದ್ದಾರೆ. ಇದನ್ನೂ ಅವರು 88ನೇ ಟೆಸ್ಟ್‌ ಪಂದ್ಯದಲ್ಲೇ ಸಾಧಿಸಿರುವುದು ವಿಶೇಷ. ರಿಷಭ್‌ ಪಂತ್ ಕೂಡ ದಕ್ಷಿಣ ಆಫ್ರಿಕಾ ವಿರುದ್ಧ ತನ್ನದೇ ಗುರುತು ಮೂಡಿಸಿದ್ದಾರೆ. ಟೆಸ್ಟ್‌ಗಳಲ್ಲಿ ಅತ್ಯಧಿಕ ಸಿಕ್ಸರ್‌ಗಳನ್ನು ದಾಖಲಿಸಿ ವೀರೇಂದ್ರ ಸೆಹ್ವಾಗ್ ಅವರ ದಾಖಲೆಯನ್ನು ಮುರಿದಿದ್ದಾರೆ.

2025ರ ಈ ಪ್ರವಾಸವು ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವಿನ ಕ್ರಿಕೆಟ್‌ ಸಂಬಂಧಕ್ಕೆ ಹೊಸ ಶಕ್ತಿ ತುಂಬುತ್ತಿದೆ. ಎರಡೂ ತಂಡಗಳು ಬಲಿಷ್ಠವಾಗಿದ್ದು, ಈ ಸರಣಿ ಭವಿಷ್ಯದ ಕ್ರಿಕೆಟ್‌ಗೆ ಹೊಸ ಮುಖ ನೀಡುವ ಸಾಮರ್ಥ್ಯ ಹೊಂದಿದೆ. ಹೊಸ ಆಟಗಾರರು ತಮ್ಮ ಪ್ರತಿಭೆಯನ್ನು ತೋರಿಸಲು ಇದು ದೊಡ್ಡ ಅವಕಾಶ, ಜೊತೆಗೆ ಹೊಸ ದಾಖಲೆಗಳೂ ಮೂಡುವ ಸಾಧ್ಯತೆ ಇದೆ. ದಕ್ಷಿಣ ಆಫ್ರಿಕಾ ಹೊರಗೆ ಆಡುತ್ತಿರುವುದರಿಂದ ಅವರಿಗೆ ಇದು ಕಠಿಣ ಪರೀಕ್ಷೆ. ಭಾರತದ ಪಿಚ್‌ಗಳು, ಇಲ್ಲಿರುವ ಹವಾಮಾನ ಮತ್ತು ಭಾರತ ತಂಡದ ಮನೆಯ ಮೈದಾನದಲ್ಲಿನ ಆತ್ಮವಿಶ್ವಾಸ—ಇವನ್ನೆಲ್ಲ ಸೇರಿಸಿದರೆ ದಕ್ಷಿಣ ಆಫ್ರಿಕಾ ತಂಡಕ್ಕೆ ದೊಡ್ಡ ಸವಾಲಾಗುತ್ತದೆ. ಮತ್ತೊಂದೆಡೆ, ಭಾರತ ತನ್ನ ತವರಿನಲ್ಲಿ ಗೆಲುವಿನ ಪರಂಪರೆಯನ್ನು ಮುಂದುವರಿಸಲು ಪ್ರಬಲವಾಗಿ ಪ್ರಯತ್ನಿಸಲಿದೆ. ಅಭಿಮಾನಿಗಳಿಗೆ ಈ ಸರಣಿ ನಿಜಕ್ಕೂ ಕ್ರಿಕೆಟ್‌ ಹಬ್ಬದಂತಿದೆ. ಯಾರೆಷ್ಟು ರನ್ ಗಳಿಸಿದರು, ಎಷ್ಟು ವಿಕೆಟ್‌ಗಳು ಬಂತು, ಅಂತಿಮವಾಗಿ ಯಾರು ಗೆದ್ದರು, ಇವಲ್ಲಕ್ಕಿಂತ ಮುಖ್ಯವಾದುದು ಎರಡೂ ತಂಡಗಳು ಮೈದಾನದಲ್ಲಿ ತೋರಿಸುವ ಶ್ರಮ, ಕೌಶಲ್ಯ ಮತ್ತು ತಾಳ್ಮೆ. ಅದೇ ಕ್ರಿಕೆಟ್‌ನ ನಿಜವಾದ ಸೌಂದರ್ಯ. ಈ ಪ್ರವಾಸ ಕೇವಲ ಕ್ರಿಕೆಟ್‌ ಆಟವಲ್ಲ, ಜನರನ್ನು ಬೆಸೆಯುವ ಒಂದು ಬಾಂಧವ್ಯವಾಗಿದೆ.

2025 ಪ್ರವಾಸದ ಸಂಪೂರ್ಣ ವೇಳಾಪಟ್ಟಿ

ಟೆಸ್ಟ್ಸರಣಿ

ಪ್ರಥಮ ಟೆಸ್ಟ್‌(ಕೋಲ್ಕತ್ತಾ): ನವೆಂಬರ್ 14ರಿಂದ ಆರಂಭ

ಎರಡನೇ ಟೆಸ್ಟ್‌ (ಗುವಾಹಟಿ): ನವೆಂಬರ್ 22–26

ಏಕದಿನ  ಸರಣಿ

ಪ್ರಥಮ ಪಂದ್ಯ (ರಾಂಚಿ): ನವೆಂಬರ್ 30

2ನೇ ಪಂದ್ಯ (ರಾಯ್‌ಪುರ): ಡಿಸೆಂಬರ್ 3

3ನೇ ಪಂದ್ಯ (ವಿಶಾಖಪಟ್ಟಣಂ): ಡಿಸೆಂಬರ್ 6

ಟಿ20 ಸರಣಿ

1ನೇ ಟಿ20: ಡಿಸೆಂಬರ್ 9 – ಕಟಕ್

2ನೇ ಟಿ20: ಡಿಸೆಂಬರ್ 11 – ಚಂಡೀಗಢ

3ನೇ ಟಿ20: ಡಿಸೆಂಬರ್ 14 – ಧರ್ಮಶಾಲಾ

4ನೇ ಟಿ20: ಡಿಸೆಂಬರ್ 17 – ಲಖನೌ

5ನೇ ಟಿ20: ಡಿಸೆಂಬರ್ 19 – ಅಹಮದಾಬಾದ್

ನೇರ ಪ್ರಸಾರ: ಸ್ಟಾರ್‌ ಸ್ಫೋರ್ಟ್ಸ್ ನೆಟ್‌ವರ್ಕ್‌, ಜಿಯೋ ಹಾಟ್‌ ಸ್ಟಾರ್‌ ಒಟಿಟಿ

blank profile picture 973460 640
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಕೇಂದ್ರವನ್ನು ಟೀಕಿಸಿದ ಸಾಮಾಜಿಕ ಮಾಧ್ಯಮ ಖಾತೆಗಳು ಮಂಗಮಾಯ: ಉಳಿಯುವುದು ಬರೀ ಮೋದಿಮಯ!

ಹೀಗೆ ಮೋದಿ ಸರ್ಕಾರವನ್ನು ವಿರೋಧಿಸಿದವರ ಖಾತೆಗಳು ಸಾಮಾಜಿಕ ಮಾಧ್ಯಮಗಳಿಂದ ಅಳಿಸಿ ಕೊನೆಗೆ...

ಒಂದು ಕಡೆ ಖಾದ್ಯತೈಲ ಬೆಲೆ ಏರಿಕೆ; ಮತ್ತೊಂದು ಕಡೆ ಕುಸುಬೆ ಬೆಲೆ ಕುಸಿತದಿಂದ ರೈತರಿಗೆ ಹೊರೆ

ಖಾದ್ಯತೈಲ ಬೆಲೆ ಏರಿಕೆ ಗ್ರಾಹಕರ ಜೇಬಿಗೆ ಭಾರವಾದರೆ, ಕುಸುಬೆ ಬೆಲೆ ಕುಸಿತ...

ಡಾಲರ್ V/s ಯುವಾನ್: ಕೊಲ್ಲಿ ಯುದ್ಧ ಕರೆನ್ಸಿ ಯುದ್ಧವಾಗಿ ಮಾರ್ಪಾಡಾಗುತ್ತಿದೆಯೇ?

ಅಕಸ್ಮಾತ್ ಈ ಯುದ್ಧ ಮುಂದುವರೆದರೆ, ಕೆಲವು ದೇಶಗಳು ಡಾಲರ್ ಬದಲಿಗೆ ಯುವಾನ್...