ದೆಹಲಿಯ ಅರುಣ್ ಜೈಟ್ಲಿ ಕ್ರೀಡಾಂಗಣದಲ್ಲಿ ಇಂದು ನಡೆದ ವಿಶ್ವಕಪ್ ಪಂದ್ಯದಲ್ಲಿ ಭಾರತಕ್ಕೆ ಗೆಲ್ಲಲು ಅಫ್ಘಾನಿಸ್ತಾನ ತಂಡ ರನ್ಗಳ ಗುರಿ ನೀಡಿದೆ.
ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ದುಕೊಂಡ ಹಶ್ಮತುಲ್ಲ ಶಾಹಿದಿ ನೇತೃತ್ವದ ಅಫ್ಘಾನ್ ತಂಡ, 50 ಓವರ್ಗಳಲ್ಲಿ 8 ವಿಕೆಟ್ ಕಳೆದುಕೊಂಡು 272 ರನ್ ದಾಖಲಿಸಿತು.
Innings Break!
4⃣ wickets for @Jaspritbumrah93
2⃣ wickets for vice-captain @hardikpandya7
1⃣ wicket each for @imkuldeep18 & @imShardTarget 🎯 for #TeamIndia – 273
Scorecard ▶️ https://t.co/f29c30au8u#CWC23 | #INDvAFG | #MeninBlue pic.twitter.com/8I5sFgrn6k
— BCCI (@BCCI) October 11, 2023
ನಾಯಕನ ಆಟವಾಡಿದ ಹಶ್ಮತುಲ್ಲ ಶಾಹಿದಿ 88 ಎಸೆತಗಳಲ್ಲಿ ಒಂದು ಸಿಕ್ಸ್ ಹಾಗೂ ಎಂಟು ಬೌಂಡರಿಗಳ ನೆರವಿನೊಂದಿಗೆ 80 ರನ್ ಗಳಿಸಿ, ಟೀಮ್ ಇಂಡಿಯಾ ಸ್ಪಿನ್ನರ್ ಕುಲ್ದೀಪ್ ಯಾದವ್ ಬೌಲಿಂಗ್ನಲ್ಲಿ ಎಲ್ಬಿಡಬ್ಲ್ಯೂ ಬಲೆಗೆ ಬಿದ್ದರು.
ಇನ್ನು ಅಫ್ಘಾನ್ ಪರ ಉತ್ತಮ ಪ್ರದರ್ಶನ ನೀಡಿದ ಅಝ್ಮತುಲ್ಲಾ ಅರ್ಧಶತಕ ದಾಖಲಿಸಿದರು. ಅಝ್ಮತುಲ್ಲಾ, 69 ಎಸೆತಗಳಲ್ಲಿ 62 ರನ್(4 ಸಿಕ್ಸ್, 2 ಬೌಂಡರಿ) ದಾಖಲಿಸಿದರು. ಉಳಿದ ಬ್ಯಾಟರ್ಗಳಾದ ಗುರ್ಬಾಝ್(21), ಮೊಹಮ್ಮದ್ ನಬಿ(19), ಇಬ್ರಾಹೀಂ ಝದ್ರಾನ್(22), ನಜೀಬುಲ್ಲಾ ಝದ್ರಾನ್(2) ಉತ್ತಮ ರನ್ ಗಳಿಸುವಲ್ಲಿ ವಿಫಲರಾದರು.
🎯 Set!
After opting to bat first, #AfghanAtalan have put 272/8 runs on the board, with major contributions coming from the skipper @Hashmat_50 (80) and the all-rounder @AzmatOmarzay (62). 👏
Over to our bowlers now…! #CWC23 | #AFGvIND | #WarzaMaidanGata pic.twitter.com/pSMA8aYFsr
— Afghanistan Cricket Board (@ACBofficials) October 11, 2023
ಟೀಮ್ ಇಂಡಿಯಾ ಪರ ಬೌಲಿಂಗ್ನಲ್ಲಿ ಮಿಂಚಿದ ಜಸ್ಪ್ರೀತ್ ಬುಮ್ರಾ 39ಕ್ಕೆ 4 ವಿಕೆಟ್ ಪಡೆದರೆ, ಹಾರ್ದಿಕ್ ಪಾಂಡ್ಯ 43 ರನ್ ಬಿಟ್ಟುಕೊಟ್ಟು 2 ವಿಕೆಟ್ ಪಡೆಯುವಲ್ಲಿ ಸಫಲರಾದರು. ಉಳಿದಂತೆ ಶಾರ್ದೂಲ್ ಠಾಕೂರ್ ಹಾಗೂ ಸ್ಪಿನ್ನರ್ ಕುಲ್ದೀಪ್ ಯಾದವ್ ತಲಾ ಒಂದು ವಿಕೆಟ್ ಹಂಚಿಕೊಂಡರು.





