ಸಂಜುಗೆ ಧೋನಿ ಕೀಪಿಂಗ್ ಗ್ಲೌಸ್ ಹಸ್ತಾಂತರ; ಮುಂದೆ ನಾಯಕತ್ವವೂ? ಸಿಎಸ್‌ಕೆ ಯೋಜನೆ ಬಗ್ಗೆ ಕುಂಬ್ಳೆ ವಿಶ್ಲೇಷಣೆ

Date:

ಭಾರತದ ಟಿ20 ವಿಶ್ವಕಪ್ ಗೆಲುವಿನಲ್ಲಿ ರುವಾರಿ ಎಂದೇ ಮಿಂಚುತ್ತಿರುವ ಸಂಜು ಸ್ಯಾಮ್ಸನ್, ತಮ್ಮ ಐಪಿಎಲ್ ಪಯಣದಲ್ಲಿ ಹೊಸ ಅಧ್ಯಾಯ ಆರಂಭಿಸಲು ಸಜ್ಜಾಗಿದ್ದಾರೆ. ಕಳೆದ ಕೆಲವು ಸೀಸನ್‌ಗಳಲ್ಲಿ ರಾಜಸ್ಥಾನ್ ರಾಯಲ್ಸ್ ತಂಡವನ್ನು ಮುನ್ನಡೆಸಿದ್ದ ಈ ವಿಕೆಟ್‌ಕೀಪರ್-ಬ್ಯಾಟರ್, ಈಗ ಚೆನ್ನೈ ಸೂಪರ್ ಕಿಂಗ್ಸ್ (CSK) ತಂಡ ಸೇರಿದ್ದಾರೆ. ಅವರು, ಸಿಎಸ್‌ಕೆಯಲ್ಲಿ ನಾಯಕ ರುತುರಾಜ್ ಗಾಯಕ್ವಾಡ್ ಅಡಿಯಲ್ಲಿ ಆಡಲಿದ್ದಾರೆ. ಮಾಜಿ ಟೀಮ್ ಇಂಡಿಯಾ ನಾಯಕ ಎಂ.ಎಸ್ ಧೋನಿ ಇನ್ನೂ ತಂಡದ ಭಾಗವಾಗಿರುವುದರಿಂದ, ವಿಕೇಟ್‌ಕೀಪರ್‌ ಸ್ಥಾನದಲ್ಲಿ ಧೋನಿ ಇರುತ್ತಾರೆಯೇ ಅಥವಾ ಸಂಜು ಇರುವರೇ ಎಂಬ ಚರ್ಚೆಗಳು ನಡೆಯುತ್ತಿವೆ.

ಈ ಚರ್ಚೆಗಳ ನಡುವೆಯೇ ಸಿಎಸ್‌ಕೆಯ ಮುಂದಿನ ಯೋಜನೆಗಳ ಕುರಿತು ಮಾತನಾಡಿದರುವ ಭಾರತ ಕ್ರಿಕೆಟ್‌ ತಂಡದ ಮತ್ತೊಮ್ಮ ಮಾಜಿ ನಾಯಕ ಅನಿಲ್ ಕುಂಬ್ಳೆ, “ಐಪಿಎಲ್‌ಗೂ ಮುನ್ನ ಸ್ಯಾಮ್ಸನ್ ಅವರ ಇತ್ತೀಚಿನ ಫಾರ್ಮ್ ಮತ್ತು ಆತ್ಮವಿಶ್ವಾಸವು ಅವರ ಪ್ರಮುಖ ಧನಾತ್ಮಕ ಅಂಶಗಳಾಗಿವೆ. ಸಂಜು ಅವರ ಪ್ರದರ್ಶನವು ಭಾರತೀಯ ಕ್ರಿಕೆಟ್‌ ನಾಯಕತ್ವದಲ್ಲಿನ ವ್ಯಾಪಕ ಬದಲಾವಣೆಯನ್ನು ಪ್ರತಿಬಿಂಬಿಸುತ್ತದೆ. ಅಂತೆಯೇ, ಸಿಎಸ್‌ಕೆ ತಂಡವನ್ನು ಬಲಪಡಿಸುತ್ತದೆ” ಎಂದು ಹೇಳಿದ್ದಾರೆ.

“ಒಂದು ಪೀಳಿಗೆಯಿಂದ ಇನ್ನೊಂದು ಪೀಳಿಗೆಗೆ ಐಕಾನ್‌ಗಳು ಬದಲಾಗುತ್ತಿದ್ದಾರೆ. ಭಾರತೀಯ ಕ್ರಿಕೆಟ್‌ನಲ್ಲಿ ಸುನಿಲ್ ಗವಾಸ್ಕರ್ ಅವರಿಂದ ಸಚಿನ್ ಅವರಿಗೆ, ನಂತರ ವಿರಾಟ್ ಕೊಹ್ಲಿ ಅವರಿಗೆ ಜವಾಬ್ದಾರಿಯ ದಂಡ ಹಸ್ತಾಂತರವಾಗಿದೆ. ಎಂಎಸ್ ಧೋನಿ ಕೂಡ ಆ ಯುಗದ ಭಾಗವಾಗಿದ್ದರು. ರಾಹುಲ್ ದ್ರಾವಿಡ್ ಮತ್ತು ಸೌರವ್ ಗಂಗೂಲಿ ಅವರ ನಂತರ ಧೋನಿ ಮತ್ತು ವಿರಾಟ್ ಕೊಹ್ಲಿ ಅಧಿಪತ್ಯ ಸಾಧಿಸಿದರು. ಆ ಅರ್ಥದಲ್ಲಿ, ಸಂಜು ಸಿಎಸ್‌ಕೆಗೆ ಬಂದಿರುವುದು ಉತ್ತಮ ನಡೆ” ಎಂದಿದ್ದಾರೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

“ಐಪಿಎಲ್‌ಗೂ ಮುನ್ನ ಅವರ ಅದ್ಭುತ ಫಾರ್ಮ್ ಮತ್ತು ಭಾರತಕ್ಕಾಗಿ ಸತತ ಮೂರು ಇನ್ನಿಂಗ್ಸ್‌ಗಳ ಮೂಲಕ ವಿಶ್ವಕಪ್ ಗೆದ್ದುಕೊಟ್ಟಿರುವುದು ಈ ನಿರ್ಧಾರಕ್ಕೆ ಮತ್ತಷ್ಟು ಮೆರುಗು ನೀಡಿದೆ” ಎಂದು ಕುಂಬ್ಳೆ ಹೇಳಿದ್ದಾರೆ.

“ಸ್ಯಾಮ್ಸನ್ ಅವರ ಮೌಲ್ಯವು ಕೇವಲ ಅವರ ಪ್ರದರ್ಶನಕ್ಕೆ ಸೀಮಿತವಾಗಿಲ್ಲ. ಅವರ ಹಿನ್ನೆಲೆ ಮತ್ತು ತಮಿಳುನಾಡಿನೊಂದಿಗಿನ ಸಂಬಂಧವೂ ಅಭಿಮಾನಿಗಳೊಂದಿಗೆ ಫ್ರಾಂಚೈಸಿಯ ಸಂಬಂಧವನ್ನು ಗಟ್ಟಿಗೊಳಿಸಬಹುದು. ಅವರು ಕೇರಳದಲ್ಲಿ ಜನಿಸಿದವರು, ತಮಿಳು ಮಾತನಾಡುತ್ತಾರೆ, ಆದ್ದರಿಂದ ಅಭಿಮಾನಿಗಳೊಂದಿಗೆ ನೇರ ಸಂಪರ್ಕವಿರುತ್ತದೆ. ಅವರು ವಿಕೆಟ್‌ಕೀಪರ್-ಬ್ಯಾಟರ್ ಆಗಿರುವುದರಿಂದ ಎಂಎಸ್ ಧೋನಿ ಅವರ ಮಾದರಿಯಲ್ಲೇ ಇದ್ದಾರೆ. ಅವರ ಅನುಭವ ಸಿಎಸ್‌ಕೆಗೆ ಅಮೂಲ್ಯವಾಗಲಿದೆ” ಎಂದಿದ್ದಾರೆ.

ಈ ಲೇಖನ ಓದಿದ್ದೀರಾ?: ಟೀಕೆಗಳ ಸುಳಿಯಲ್ಲೂ ಮಿನುಗಿದ ಕೇರಳದ ತಾರೆ: ಸಂಜು ಸ್ಯಾಮ್ಸನ್ ಎಂಬ ಛಲದಂಕಮಲ್ಲ

ಸಿಎಸ್‌ಕೆಯ ನಾಯಕತ್ವದ ರಚನೆಯು ಇತ್ತೀಚಿನ ವರ್ಷಗಳಲ್ಲಿ ಆಗಾಗ್ಗೆ ಬದಲಾವಣೆಗಳನ್ನು ಕಂಡಿದೆ. ರಾಜಸ್ಥಾನ್ ರಾಯಲ್ಸ್ ತಂಡದಲ್ಲಿ ನಾಯಕತ್ವದ ಅನುಭವ ಹೊಂದಿರುವ ಸಂಜು ಇಂತಹ ಸಂದರ್ಭಗಳಲ್ಲಿ ಸಿಎಸ್‌ಕೆಗೆ ಸ್ಥಿರತೆ ತರಲು ಸೂಕ್ತ ವ್ಯಕ್ತಿಯಾಗಿದ್ದಾರೆ. ಸಂಜು ಅವರಿಗೆ ಇದು ಪರಿಪೂರ್ಣ ಪಾತ್ರ. ಅವರು ಉಪನಾಯಕನಂತೆ ಜವಾಬ್ದಾರಿಗಳನ್ನು ನಿಭಾಯಿಸಬಹುದು. ಅವರು ದೀರ್ಘಕಾಲ ರಾಜಸ್ಥಾನವನ್ನು ಮುನ್ನಡೆಸಿದ್ದರಿಂದ ನಾಯಕತ್ವ ಅವರಿಗೆ ಸಹಜವಾಗಿಯೇ ಬರುತ್ತದೆ. ಕಳೆದ ವರ್ಷ ರುತುರಾಜ್ ಗಾಯಗೊಂಡಾಗ ಧೋನಿ ಜವಾಬ್ದಾರಿ ವಹಿಸಬೇಕಾಯಿತು. ಅದಕ್ಕೂ ಮೊದಲು ರವೀಂದ್ರ ಜಡೇಜಾ ನಾಯಕರಾಗಿದ್ದಾಗಲೂ ಧೋನಿ ಮಧ್ಯದಲ್ಲೇ ನಾಯಕತ್ವಕ್ಕೆ ಮರಳಿದ್ದರು. ಹೀಗಾಗಿ ಧೋನಿ ನಂತರ ಮುಂದಿನ ನಾಯಕ ಯಾರು ಎಂಬ ಸವಾಲು ಯಾವಾಗಲೂ ಇತ್ತು. ಈಗ, ಸವಾಲಿಗೆ ಸಂಜು ಉತ್ತರವಾಗಲಿದ್ದಾರೆ” ಎಂದು ಕುಂಬ್ಳೆ ಹೇಳಿದ್ದಾರೆ.

“ರುತುರಾಜ್ ಅವರನ್ನೇ ನಾಯಕನಾಗಿ ಗುರುತಿಸಲಾಗಿದೆ. ಸಂಜು ತಂಡಕ್ಕೆ ಬಂದರೂ ರುತುರಾಜ್ ನಾಯಕರಾಗಿ ಮುಂದುವರಿಯುತ್ತಿರುವುದು ಒಳ್ಳೆಯದು. ಈ ಸೀಸನ್‌ನ ಯಾವುದೋ ಒಂದು ಹಂತದಲ್ಲಿ ಧೋನಿ ಅವರು ಸಂಜು ಅವರಿಗೆ ಕೀಪಿಂಗ್ ಜವಾಬ್ದಾರಿಯನ್ನು ಬಿಟ್ಟುಕೊಟ್ಟರೆ ನನಗೆ ಆಶ್ಚರ್ಯವಿಲ್ಲ. ಒಂದು ವೇಳೆ ರುತುರಾಜ್ ಅಲಭ್ಯರಾದರೆ, ಧೋನಿಗಿಂತ ಹೆಚ್ಚಾಗಿ ಸಂಜು ಅವರೇ ನಾಯಕತ್ವ ವಹಿಸಿಕೊಳ್ಳುವ ಸಾಧ್ಯತೆ ಇದೆ” ಎಂದು ಕುಂಬ್ಳೆ ತಿಳಿಸಿದ್ದಾರೆ.

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ತಮಿಳುನಾಡು ಚುನಾವಣೆ | ಎಐಎಡಿಎಂಕೆ 178, ಬಿಜೆಪಿ 27 ಕ್ಷೇತ್ರಗಳಲ್ಲಿ ಸ್ಪರ್ಧೆ

ಈ ಬಾರಿಯ ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲಿ ಗೆದ್ದು ಅಧಿಕಾರಕ್ಕೇರಲೇ ಬೇಕೆಂದು ಪಣ...

ಮಧ್ಯಪ್ರಾಚ್ಯ ಸಂಘರ್ಷ | ಕದನ ವಿರಾಮ ಎಂದ ಟ್ರಂಪ್; ಮಾತುಕತೆ ನಡೆದಿಲ್ಲವೆಂದ ಇರಾನ್

ಮಧ್ಯಪ್ರಾಚ್ಯದಲ್ಲಿ ಉಲ್ಬಣಗೊಳ್ಳುತ್ತಿರುವ ಸಂಘರ್ಷವನ್ನು ಕೊನೆಗಾಣಿಸಲು ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್ ನಾನಾ...

ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಬ್ಯಾಲೆಟ್ ಪೇಪರ್ ಬಳಕೆ; ವಿಧಾನಸಭೆಯಲ್ಲಿ ಮಸೂದೆ ಅಂಗೀಕಾರ

ರಾಜ್ಯದ ಸ್ಥಳೀಯ ಸಂಸ್ಥೆಗಳ ಚುನಾವಣಾ ಪ್ರಕ್ರಿಯೆಯಲ್ಲಿ ಬದಲಾವಣೆ ತರಲು ರಾಜ್ಯ ಸರ್ಕಾರ...

ಪ್ರಧಾನಿ ಮೋದಿ ಅಮೆರಿಕಕ್ಕೆ 100% ಶರಣಾಗಿದ್ದಾರೆ: ರಾಹುಲ್ ಗಾಂಧಿ

ಪಶ್ಚಿಮ ಏಷ್ಯಾದಲ್ಲಿನ ಯುದ್ಧದ ಪರಿಸ್ಥಿತಿ ಮತ್ತು ದೇಶದ ಆರ್ಥಿಕ ನೀತಿಗಳ ಕುರಿತು...