ಆರ್‌ಸಿಬಿಯ ಬ್ಯಾಟಿಂಗ್ ಕೋಚ್ ಆಗಿ ನೇಮಕವಾದ ದಿನೇಶ್ ಕಾರ್ತಿಕ್

Date:

ಐಪಿಎಲ್‌ ತಂಡ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು(ಆರ್‌ಸಿಬಿ) ಇಂದು ದಿನೇಶ್‌ ಕಾರ್ತಿಕ್‌ ಅವರನ್ನು ಬ್ಯಾಟಿಂಗ್‌ ಕೋಚ್‌ ಹಾಗೂ ಮಾರ್ಗದರ್ಶಕರಾಗಿ ಆಯ್ಕೆ ಮಾಡಿದೆ.

“ಆರ್‌ಸಿಬಿ ಬ್ಯಾಟಿಂಗ್‌ ತಂಡದಲ್ಲಿ ಇವರ ಅಸಾಧಾರಣ ಉಪಸ್ಥಿತಿಯೊಂದಿಗೆ, ಕಾರ್ತಿಕ್ ಅವರು ತಮ್ಮ ಅನುಭವ ಸಂಪತ್ತಿನ ತಿಳುವಳಿಕೆಯನ್ನು ತಂಡಕ್ಕೆ ನೀಡಲಿದ್ದಾರೆ. ಅಲ್ಲದೆ  ಕೋಚಿಂಗ್‌ ಸಿಬ್ಬಂದಿಯನ್ನು ಅತ್ಯುತ್ತಮವಾಗಿ ಸನ್ನಧಗೊಳಿಸುವ ಸಾಮರ್ಥ್ಯ ಹೊಂದಿದ್ದಾರೆ” ಎಂದು ಆರ್‌ಸಿಬಿ ಪ್ರಕಟಣೆಯಲ್ಲಿ ತಿಳಿಸಿದೆ.

ಕಾರ್ತಿಕ್‌ ಅವರು ಆರ್‌ಸಿಬಿ ಪರವಾಗಿ ಮೊದಲ ಬಾರಿಗೆ 2015 ಹಾಗೂ 2016ರಲ್ಲಿ ಆಡಿದ್ದರು. 2024ರ ಆವೃತ್ತಿಯಲ್ಲಿ 15 ಪಂದ್ಯಗಳಿಂದ 187.36 ಸರಾಸರಿಯಂತೆ 326 ರನ್‌ ಬಾರಿಸಿದ್ದರು. ಅವರ ಪ್ರಭಾವವು  ಅವರು ರನ್‌ ಪೇರಿಸಿದಕ್ಕಿಂತ ಹೆಚ್ಚಿನದಾಗಿತ್ತು” ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ಈ ಸುದ್ದಿ ಓದಿದ್ದೀರಾ? 1983ರಲ್ಲಿ ಕಪಿಲ್ ದೇವ್, 2024ರಲ್ಲಿ ಸೂರ್ಯ ಕುಮಾರ್ ಯಾದವ್: ವಿಶ್ವಕಪ್ ಗೆಲ್ಲಿಸಿದ 2 ಅದ್ಭುತ ಕ್ಯಾಚ್‌ಗಳು

ಆರ್‌ಸಿಬಿಯ ಬ್ಯಾಟಿಂಗ್‌ ಕೋಚ್‌ ಆಗಿ ನೇಮಕವಾದ ನಂತರ ಮಾತನಾಡಿದ ದಿನೇಶ್ ಕಾರ್ತಿಕ್, ವೃತ್ತಿಪರ ಹಂತದಲ್ಲಿ ಕೋಚಿಂಗ್‌ ಸ್ಥಾನ ನನಗೆ ನಂಬಲಾಗದಷ್ಟು ಉತ್ಸಾಹವನ್ನು ನೀಡಿದೆ. ನನ್ನ ಜೀವನದ ಹೊಸ ಅಧ್ಯಾಯದಲ್ಲಿ ನಾನು ನಿಜವಾಗಿಯೂ ಭಾವೋದ್ರಿಕ್ತನಾಗಿದ್ದೇನೆ. ಖಂಡಿತವಾಗಿ, ಆಟಗಾರನಾಗಿದ್ದ ನನ್ನ ಅನುಭವಗಳನ್ನು ತಂಡದ ಅಭಿವೃದ್ದಿಗಾಗಿ ಕೊಡುಗೆ ನೀಡಲಿದ್ದು, ಇದು ಇನ್ನಷ್ಟು ಮೌಲ್ಯವನ್ನು ಹೆಚ್ಚಿಸಲಿದೆ ಎಂದು ಹೇಳಿದ್ದಾರೆ.

“ತಾಂತ್ರಿಕ ಪ್ರಾವಿಣ್ಯತೆಯಿಂದ ಮಾತ್ರ ಕ್ರಿಕೆಟ್‌ ಯಶಸ್ಸು ಸಾಧ್ಯವಾಗುವುದಿಲ್ಲ, ಇದು ತಂಡದ ಬುದ್ಧಿವಂತಿಕೆ ಹಾಗೂ ಶಾಂತಚಿತ್ತತೆಯ ಉಪಸ್ಥಿತಿ ಕೂಡ ಪ್ರಮುಖವಾಗಿದೆ ಎಂದು ನಂಬಿದ್ದೇನೆ. ಬ್ಯಾಟಿಂಗ್‌ ತಂಡದ ಕೋಚ್‌ ಹಾಗೂ ಮಾರ್ಗದರ್ಶಕನಾಗಲು ನಾನು ಉತ್ಸುಕನಾಗಿದ್ದೇನೆ. ನನ್ನ ಮಾರ್ಗದರ್ಶನ ತಂಡದ ವಿಧಾನಗಳನ್ನು ಸುಧಾರಿಸುವುದನ್ನು ಮಾತ್ರವಲ್ಲ,  ಒತ್ತಡದ ಪಂದ್ಯದಲ್ಲಿ ಯಾವ ರೀತಿ ಸುಧಾರಿಸಬೇಕು ಎಂಬುದನ್ನು ತಿಳಿಸಿಕೊಡಲಿದೆ. ತಂಡ ಉತ್ತಮವಾಗಿ ಪ್ರದರ್ಶನ ನೀಡುತ್ತಿರುವ ಸಂದರ್ಭದಲ್ಲಿ ನಾನು ಆರ್‌ಸಿಬಿಯ ಭಾಗವಾಗಿರುವುದು ನಿಜಕ್ಕೂ ಸಂತೋಷವಾಗಿದೆ” ಎಂದು ತಿಳಿಸಿದ್ದಾರೆ.

39 ವರ್ಷ ವಯಸ್ಸಿನ ದಿನೇಶ್ ಕಾರ್ತಿಕ್ ಭಾರತದ ಪರವಾಗಿ 94 ಏಕದಿನ, 26 ಟೆಸ್ಟ್ ಹಾಗೂ 60 ಟಿ20 ಪಂದ್ಯಗಳನ್ನು ಆಡಿದ್ದಾರೆ.

WhatsApp Image 2025 11 17 at 3.21.17 PM
ಈ ದಿನ ಡೆಸ್ಕ್
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಮತ್ತೆ ಲಲಿತ್ ಮೋದಿ: ಐಪಿಎಲ್ 2026ಕ್ಕೂ ಮುನ್ನ ಭಾರೀ ಬದಲಾವಣೆ ಸಾಧ್ಯತೆ?

ರಾಜಸ್ಥಾನ ರಾಯಲ್ಸ್ ಫ್ರಾಂಚೈಸಿಯ ಮಾಲೀಕತ್ವದಲ್ಲಿ ಶೀಘ್ರದಲ್ಲೇ ಬದಲಾವಣೆಯಾಗುವ ಸಾಧ್ಯತೆಯಿದ್ದು, ಜಾಗತಿಕ ಹೂಡಿಕೆ...

ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಐಪಿಎಲ್ ಪಂದ್ಯಗಳ ಆಯೋಜನೆಗೆ ಸರ್ಕಾರದ ಅನುಮತಿ

ಬೆಂಗಳೂರಿನ ಐತಿಹಾಸಿಕ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಐಪಿಎಲ್ 2026 ಹಾಗೂ ಅಂತರರಾಷ್ಟ್ರೀಯ...

ಟೀಕೆಗಳ ಸುಳಿಯಲ್ಲೂ ಮಿನುಗಿದ ಕೇರಳದ ತಾರೆ: ಸಂಜು ಸ್ಯಾಮ್ಸನ್ ಎಂಬ ಛಲದಂಕಮಲ್ಲ

ಮೈದಾನದಲ್ಲಿ ಎಂ ಎಸ್  ಧೋನಿಯಂತೆಯೇ ಅತೀವ ಶಾಂತ ಸ್ವಭಾವವನ್ನು ಕಾಯ್ದುಕೊಳ್ಳುವ ಸಂಜು...