ಟಿ20 ವಿಶ್ವಕಪ್ 2026ರ ಪಂದ್ಯಾವಳಿಯ ನಂತರ ಪಾಕ್ ಸ್ಪಿನ್ನರ್ ಉಸ್ಮಾನ್ ತಾರಿಕ್ ಶ್ರೀಲಂಕಾ ಪೊಲೀಸರ ನಡೆಗೆ ಬೇಸರ ಹೊರ ಹಾಕಿದ್ದಾರೆ. ಟೀಮ್ ಇಂಡಿಯಾ ವಿರುದ್ಧ ಸೋತಿದ್ದಕ್ಕೆ ನಮಗೆ ಬೇಸರವಾಗಿಲ್ಲ. ಆದರೆ ಶ್ರೀಲಂಕಾ ಪೊಲೀಸರು ತಮ್ಮನ್ನು ನಡೆಸಿಕೊಂಡ ರೀತಿಗೆ ಸ್ಪಿನ್ನರ್ ಉಸ್ಮಾನ್ ತಾರಿಕ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
“ಪಾಕಿಸ್ತಾನಿ ಆಟಗಾರರು ಭಯೋತ್ಪಾದಕರಂತೆ ಕಾಣುತ್ತಾರೆಯೇ? ನಮ್ಮ ಆಟಗಾರರ ಬ್ಯಾಗ್‌ಗಳನ್ನು ಪದೇ ಪದೇ ಏಕೆ ಪರಿಶೀಲಿಸಲಾಗುತ್ತಿದೆ” ಎಂದು ಉಸ್ಮಾನ್ ತಾರಿಕ್ ಪ್ರಶ್ನಿಸಿದ್ದಾರೆ.
ಟಿ20 ವಿಶ್ವಕಪ್ 2026ರ ಪಂದ್ಯಾವಳಿಯ ಹಿನ್ನೆಲೆಯಲ್ಲಿ ಪಾಕಿಸ್ತಾನ ಸ್ಪಿನ್ನರ್ ಉಸ್ಮಾನ್ ತಾರಿಕ್ ಶ್ರೀಲಂಕಾ ಪೊಲೀಸರ ನಡೆವಳಿಕೆಗಳ ಬಗ್ಗೆ ಕಿಡಿಕಾರಿದ್ದಾರೆ. ಶ್ರೀಲಂಕಾಕ್ಕೆ ಕಾಲಿಟ್ಟಾಗಿನಿಂದ ಶ್ರೀಲಂಕಾ ಪೊಲೀಸರು ಪ್ರತಿ ಹಂತದಲ್ಲೂ ತಮ್ಮ ಬ್ಯಾಗ್‌ಗಳನ್ನು ಪರಿಶೀಲಿಸುತ್ತಿದ್ದಾರೆ. ಭಾರತ ಮತ್ತು ಪಾಕಿಸ್ತಾನ ನಡುವಿನ ಪಂದ್ಯ ಕೊಲಂಬೊದಲ್ಲಿ ನಡೆಯಿತು. ಈ ವೇಳೆ ಶ್ರೀಲಂಕಾ ಪೊಲೀಸರು ನಮ್ಮ ತಂಡದ ಆಟಗಾರರ ಬ್ಯಾಗ್‌ಗಳನ್ನು ಮಾತ್ರ ಪರಿಶೀಲಿಸಿದರು ಎಂದು ಉಸ್ಮಾನ್ ತಾರಿಕ್ ಹೇಳಿದ್ದಾರೆ.
ಇದನ್ನು ಓದಿದ್ದೀರಾ? 6 ದಶಕಗಳ ಕಾಯುವಿಕೆ ಅಂತ್ಯ: ಬಂಗಾಳವನ್ನು ಬಗ್ಗು ಬಡಿದು ರಣಜಿ ಫೈನಲ್ ಪ್ರವೇಶಿಸಿದ ಜಮ್ಮು ಕಾಶ್ಮೀರ
‘ಟೀಂ ಇಂಡಿಯಾ ಆಟಗಾರರ ಬ್ಯಾಗ್‌ಗಳನ್ನು ಯಾಕೆ ಪರಿಶೀಲಿಸಲಿಲ್ಲ. ಕೊಲಂಬೊದಲ್ಲಿ ನಡೆದ ಪಂದ್ಯದಲ್ಲಿ ಟೀಂ ಇಂಡಿಯಾ ವಿರುದ್ಧ ಪಾಕಿಸ್ತಾನ ಸೋತಿದ್ದಕ್ಕೆ ಯಾವುದೇ ವಿಷಾದವಿಲ್ಲ. ಆದರೆ ಭಾರತೀಯ ಆಟಗಾರರ ಬ್ಯಾಗ್‌ಗಳನ್ನು ಪರಿಶೀಲಿಸದಿರುವುದು ತಮಗೆ ಬೇಸರ ತಂದಿದೆ. ನಮ್ಮ ಆಟಗಾರರ ಬ್ಯಾಗ್‌ಗಳನ್ನು ಒಮ್ಮೆ ಪರಿಶೀಲಿಸುವ ಬದಲು ಎರಡು ಬಾರಿ ಪರಿಶೀಲಿಸಲಾಗಿದೆ. ನಮ್ಮನ್ನು ಅಪಹಾಸ್ಯ ಮಾಡಲಾಗಿದೆ. ಪಾಕಿಸ್ತಾನಿ ಆಟಗಾರರು ಭಯೋತ್ಪಾದಕರಂತೆ ಕಾಣುತ್ತಾರೆಯೇ” ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಟೀಂ ಇಂಡಿಯಾ ಮತ್ತು ಪಾಕಿಸ್ತಾನ ನಡುವಿನ ಪಂದ್ಯ ಮಾ.15ರಂದು ಕೊಲಂಬೊದಲ್ಲಿ ನಡೆದಿತ್ತು. ಆದಾಗ್ಯೂ, ಈ ಪಂದ್ಯದ ಸಮಯದಲ್ಲಿ, ಶ್ರೀಲಂಕಾ ಪೊಲೀಸರು ಪಾಕಿಸ್ತಾನಿ ಆಟಗಾರರ ಬ್ಯಾಗ್‌ಗಳನ್ನು ಹಲವು ಬಾರಿ ಪರಿಶೀಲಿಸಿದ್ದಾರೆ. ಇದಕ್ಕೆ ಸಂಬಂಧಿಸಿದ ಫೋಟೋಗಳು ವೈರಲ್ ಆಗಿವೆ.





