ಜೊಕೊವಿಚ್ ಮಣಿಸಿದ ಸ್ಪೇನ್‌ನ ಕಾರ್ಲೋಸ್ ಅಲ್ಕರಾಜ್‌ಗೆ ವಿಂಬಲ್ಡನ್ ಕಿರೀಟ

Date:

ಸ್ಪೇನ್‌ನ ಕಾರ್ಲೋಸ್‌ ಅಲ್ಕರಾಜ್‌ ಅವರು ಭಾನುವಾರ(ಜು.14) ನಡೆದ ವಿಂಬಲ್ಡನ್‌ ಫೈನಲ್‌ನಲ್ಲಿ ನೇರ ಸೆಟ್‌ಗಳಿಂದ ಏಳು ಬಾರಿಯ ಚಾಂಪಿಯನ್‌ ನೊವಾಕ್ ಜೊಕೊವಿಚ್‌ ಅವರನ್ನು ಸೋಲಿಸಿ ಟೆನಿಸ್‌ ಸಿಂಗಲ್ಸ್‌ ಪ್ರಶಸ್ತಿ ಉಳಿಸಿಕೊಂಡರು.

ಶಕ್ತಿಶಾಲಿ ಹೊಡೆತಗಳ ಜೊತೆಗೆ ನವಿರಾದ ‘ಡ್ರಾಪ್‌’ಗಳ ಜೊತೆ ಆಡಿದ ಮೂರನೇ ಶ್ರೇಯಾಂಕದ ಅಲ್ಕರಾಜ್‌ 6–2, 6–2, 7–6 (7–4)ರಿಂದ ಜಯಗಳಿಸಿದರು. ಇದು ಸ್ಪೇನ್‌ ಆಟಗಾರನಿಗೆ ವೃತ್ತಿ ಜೀವನದ ನಾಲ್ಕನೇ ಗ್ರ್ಯಾನ್‌ಸ್ಲಾಮ್‌ ಪ್ರಶಸ್ತಿ.

1968ರಲ್ಲಿ ಟೆನಿಸ್‌ನಲ್ಲಿ ಓಪನ್ ಯುಗ ಆರಂಭವಾದ ಮೇಲೆ 21 ವರ್ಷ ವಯಸ್ಸಿನೊಳಗೇ ಅತಿ ಹೆಚ್ಚು (ತಲಾ ನಾಲ್ಕು) ಗ್ರ್ಯಾನ್‌ಸ್ಲಾಮ್‌ ಪ್ರಶಸ್ತಿಗಳನ್ನು ಗೆದ್ದು ದಾಖಲೆ ಸ್ಥಾಪಿಸಿದ ಮೂವರು ಮಹಾನ್ ಆಟಗಾರರ ಸಾಲಿಗೆ ಈಗ ಅಲ್ಕರಾಜ್ ಸೇರ್ಪಡೆಯಾದರು. ಜರ್ಮನಿಯ ಬೋರಿಸ್‌ ಬೆಕರ್‌, ಸ್ವೀಡನ್‌ನ ಬ್ಯೋನ್‌ ಬೋರ್ಗ್ ಮತ್ತು ಮ್ಯಾಟ್ಸ್‌ ವಿಲಾಂಡರ್‌ ಇತರ ಮೂವರು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ಕೆಲವೇ ವಾರಗಳ ಹಿಂದೆ ಮೊಣಗಂಟಿನ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದ 37 ವರ್ಷದ ಜೊಕೊವಿಚ್‌ ಅವರು 25ನೇ ಗ್ರ್ಯಾನ್‌ಸ್ಲಾಮ್‌ ಪ್ರಶಸ್ತಿ ಗೆಲುವಿನ ಯತ್ನದಲ್ಲಿದ್ದರು. ಸರ್ಬಿಯಾದ ಆಟಗಾರ ಅದನ್ನು ಸಾಧಿಸಿದಲ್ಲಿ ಪುರುಷರ ಅಥವಾ ಮಹಿಳೆಯರ ಟೆನಿಸ್‌ನಲ್ಲಿ ದಾಖಲೆಯಾಗುತಿತ್ತು.

ಈ ಸುದ್ದಿ ಓದಿದ್ದೀರಾ? ಯೂರೋ ಕಪ್ | ನೆದರ್‌ಲೆಂಡ್ಸ್ ಮಣಿಸಿ ಇಂಗ್ಲೆಂಡ್ ಫೈನಲ್‌ಗೆ; ಸ್ಪೇನ್ ವಿರುದ್ಧ ಪೈಪೋಟಿ

ಮೊದಲ ಗೇಮ್‌ನಿಂದಲೇ ಸ್ಪೇನ ಆಟಗಾರ ಹಿಡಿತ ಸಾಧಿಸಿದರು. ಐದನೇ ಗೇಮ್‌ಅನ್ನು ಜೊಕೊವಿಚ್‌ ಡಬಲ್‌ಫಾಲ್ಟ್‌ ಮೂಲಕ ಕಳೆದುಕೊಂಡಾಗ ಅಲ್ಕರಾಜ್ 4–1 ಮುನ್ನಡೆ ಪಡೆದರು. ಹತ್ತನೇ ಬಾರಿ ಇಲ್ಲಿ ಫೈನಲ್ ಆಡುತ್ತಿರುವ ಜೊಕೊವಿಚ್‌ ತಮ್ಮ ಮುಂದಿನ ಸರ್ವ್‌ ವೇಳೆ ಒಂದೂ ಪಾಯಿಂಟ್‌ ಬಿಟ್ಟುಕೊಡದೇ ಹಿನ್ನಡೆಯನ್ನು 5–2ಕ್ಕೆ ಇಳಿಸಿದರು. ಆದರೆ ಅಲ್ಕರಾಜ್ ತಮ್ಮ ಗೇಮ್ ಉಳಿಸಿ ಸೆಟ್‌ ಗೆದ್ದರು.

ಎರಡನೇ ಸೆಟ್‌ನಲ್ಲೂ ಅಲ್ಕರಾಜ್‌ ಹಿಡಿತ ಮುಂದುವರಿಯಿತು. ಮೂರನೇ ಸೆಟ್‌ನಲ್ಲಿ ಜೊಕೊವಿಚ್‌ ಹೋರಾಟ ತೋರಿ ಟೈಬ್ರೇಕರ್‌ವರೆಗೆ ಮುಂದುವರೆಸುವಲ್ಲಿ ಯಶಸ್ವಿಯಾದರು.

ಒಳ್ಳೆಯ ಹಣಾಹಣಿಯ ನಿರೀಕ್ಷೆಯೊಡನೆ ಬಂದಿದ್ದ ಪ್ರೇಕ್ಷಕರಲ್ಲಿ ವೇಲ್ಸ್‌ನ ರಾಜಕುಮಾರಿ ಕ್ಯಾಥರಿನ್‌ ಅವರೂ ಒಳಗೊಂಡಿದ್ದರು. ಆದರೆ ಅವರಿಗೆ ಏಕಪಕ್ಷೀಯ ಪಂದ್ಯ ನಡೆದಿದ್ದು ನಂಬಲಾಗಲಿಲ್ಲ. ಜೊಕೊವಿಚ್ ಈ ವರ್ಷ ಒಂದೂ ಗ್ರ್ಯಾನ್‌ಸ್ಲಾಮ್‌ ಪ್ರಶಸ್ತಿ ಗೆಲ್ಲಲಾಗಿಲ್ಲ.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಮತ್ತೆ ಲಲಿತ್ ಮೋದಿ: ಐಪಿಎಲ್ 2026ಕ್ಕೂ ಮುನ್ನ ಭಾರೀ ಬದಲಾವಣೆ ಸಾಧ್ಯತೆ?

ರಾಜಸ್ಥಾನ ರಾಯಲ್ಸ್ ಫ್ರಾಂಚೈಸಿಯ ಮಾಲೀಕತ್ವದಲ್ಲಿ ಶೀಘ್ರದಲ್ಲೇ ಬದಲಾವಣೆಯಾಗುವ ಸಾಧ್ಯತೆಯಿದ್ದು, ಜಾಗತಿಕ ಹೂಡಿಕೆ...

ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಐಪಿಎಲ್ ಪಂದ್ಯಗಳ ಆಯೋಜನೆಗೆ ಸರ್ಕಾರದ ಅನುಮತಿ

ಬೆಂಗಳೂರಿನ ಐತಿಹಾಸಿಕ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಐಪಿಎಲ್ 2026 ಹಾಗೂ ಅಂತರರಾಷ್ಟ್ರೀಯ...

ಟೀಕೆಗಳ ಸುಳಿಯಲ್ಲೂ ಮಿನುಗಿದ ಕೇರಳದ ತಾರೆ: ಸಂಜು ಸ್ಯಾಮ್ಸನ್ ಎಂಬ ಛಲದಂಕಮಲ್ಲ

ಮೈದಾನದಲ್ಲಿ ಎಂ ಎಸ್  ಧೋನಿಯಂತೆಯೇ ಅತೀವ ಶಾಂತ ಸ್ವಭಾವವನ್ನು ಕಾಯ್ದುಕೊಳ್ಳುವ ಸಂಜು...