ಉದ್ದೀಪನ ಮದ್ದು ಸೇವನೆ: ವಿಶ್ವದ ನಂಬರ್‌ ಒನ್‌ ಟೆನಿಸ್ ಆಟಗಾರನಿಗೆ 3 ತಿಂಗಳು ನಿಷೇಧ

Date:

ಉದ್ದೀಪನ ಮದ್ದು ಸೇವನೆ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಶ್ವದ ನಂಬರ್‌ ಒನ್‌ ಟೆನಿಸ್ ಆಟಗಾರ ಇಟಲಿಯ ಯಾನಿಕ್ ಸಿನ್ನರ್ ಅವರು 3 ತಿಂಗಳು ನಿಷೇಧಕ್ಕೆ ಒಳಗಾಗಿದ್ದಾರೆ.

2024ರ ಮಾರ್ಚ್​ನಲ್ಲಿ ನಡೆಸಲಾದ ಡೋಪಿಂಗ್ ಟೆಸ್ಟ್​ ವೇಳೆ ಸಿನ್ನರ್ ಉದ್ದೀಪನ ಮದ್ದು ಸೇವಿಸಿರುವುದು ದೃಢಪಟ್ಟಿತ್ತು. ಈ ಪರೀಕ್ಷೆ ವೇಳೆ ಯಾನಿಕ್ ಸಿನ್ನರ್ ಅವರ ದೇಹದಲ್ಲಿ ‘ವಾಡಾ’ (ಉದ್ದೀಪನ ಮದ್ದು ಸೇವನೆ ತಡೆ ಏಜೆನ್ಸಿ) ನಿಷೇಧಿತ ವಸ್ತು ‘ಕ್ಲೋಸ್ಟೆಬೋಲ್’ ಕಂಡುಬಂದಿದೆ.

ಅನಾಬಾಲಿಕ್ ಸ್ಟಿರಾಯ್ಡ್ ತೆಗೆದುಕೊಂಡಾಗ ಕ್ಲೋಸ್ಟೆಬೋಲ್ ದೇಹದೊಳಗೆ ಸೇರಿಕೊಂಡಿರುವುದಾಗಿ ಅವರು ತಮ್ಮ ತಪ್ಪನ್ನು ಒಪ್ಪಿಕೊಂಡಿದ್ದಾರೆ. ಇದಾಗ್ಯೂ ಯಾನಿಕ್ ಸಿನ್ನರ್ ಅವರಿಗೆ 3.2 ಲಕ್ಷ ಡಾಲರ್ ಅಂದರೆ ಸುಮಾರು 2.8 ಕೋಟಿ ರೂ. ದಂಡ ವಿಧಿಸಲಾಗಿತ್ತು. ಅಲ್ಲದೆ, ಸ್ವಲ್ಪ ಸಮಯದವರೆಗೆ ಅಮಾನತುಗೊಳಿಸಲಾಗಿತ್ತು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ಈ ಬಗ್ಗೆ ಕ್ರೀಡಾ ಮಧ್ಯಸ್ಥಿಕೆ ನ್ಯಾಯಾಲಯವನ್ನು (ಸಿಎಎಸ್) ಸಂಪರ್ಕಿಸಿದ ಸಿನ್ನರ್ ಪ್ರಕರಣವನ್ನು ಇತ್ಯರ್ಥಗೊಳಿಸಿಕೊಡಬೇಕೆಂದು ಮನವಿ ಮಾಡಿದ್ದರು. ಅದರಂತೆ ಇದೀಗ ಪ್ರಕರಣದಿಂದ ಖುಲಾಸೆಗೊಂಡಿರುವ ಯಾನಿಕ್ ಸಿನ್ನರ್ ‘ವಾಡಾ’ ಮುಂದೆ ತಮ್ಮ ತಪ್ಪನ್ನು ಒಪ್ಪಿಕೊಂಡಿದ್ದಾರೆ. ಹೀಗಾಗಿ ಅವರನ್ನು ಕೇವಲ 3 ತಿಂಗಳುಗಳ ಕಾಲ ಮಾತ್ರ ಟೆನಿಸ್ ಅಂಗಳದಿಂದ ನಿಷೇಧಿಸಲಾಗಿದೆ.

ಈ ಸುದ್ದಿ ಓದಿದ್ದೀರಾ? ಅಗರ್ಕರ್‌ – ಗಂಭೀರ್‌ ನಡುವೆ ಭಿನ್ನಾಭಿಪ್ರಾಯ; ರಾಹುಲ್‌ ಪರ ನಿಂತ ಟೀಂ ಇಂಡಿಯಾ ಕೋಚ್‌

ಉದ್ದೀಪನ ಮದ್ದು ಸೇವನೆ ಪ್ರಕರಣದ ಬಗ್ಗೆ ಮಾತನಾಡಿದ ಯಾನಿಕ್ ಸಿನ್ನರ್, ಈ ಪ್ರಕರಣವು ಸುಮಾರು ಒಂದು ವರ್ಷದಿಂದ ಬಾಕಿ ಇತ್ತು. ಅಲ್ಲದೆ ಇದರ ಪ್ರಕ್ರಿಯೆ ಕೂಡ ವಿಳಂಬವಾಗಿತ್ತು. ಆದರೆ ನಾನು ಡೋಪಿಂಗ್ ನಿಯಮಗಳನ್ನು ಗೌರವಿಸುತ್ತೇನೆ. ಇದು ಬೇಕೆಂತಲೇ ಮಾಡಿದ ತಪ್ಪಲ್ಲ. ಅಜಾಗರೂಕತೆಯಿಂದ ನಡೆದು ಹೋಗಿದೆ. ಹೀಗಾಗಿ ಈ ವಿಷಯವನ್ನು ತ್ವರಿತವಾಗಿ ಪರಿಹರಿಸಲು 3 ತಿಂಗಳ ನಿಷೇಧದ ವಾಡಾ ಪ್ರಸ್ತಾವನೆಯನ್ನು ನಾನು ಒಪ್ಪಿಕೊಂಡೆ ಎಂದು ಅವರು ಹೇಳಿದ್ದಾರೆ.

ಯಾನಿಕ್ ಸಿನ್ನರ್ ಅವರ ದೇಹದಲ್ಲಿ ನಿಷೇಧಿತ ಕ್ಲೋಸ್ಟೆಬೋಲ್ ಅಂಶಗಳು ಕಾಣಿಸಿಕೊಳ್ಳಲು ಮುಖ್ಯ ಕಾರಣ, ವೈದ್ಯರು ಬಳಸಿದ ಸ್ಪ್ರೇ ಎಂದು ತಿಳಿದು ಬಂದಿದೆ. ಕೈ ಬೆರಳಿಗೆ ಗಾಯವಾಗಿದ್ದಾಗ ವೈದ್ಯರು ನೋವಿನ ಸ್ಪ್ರೇ ಬಳಸಿದ್ದರು. ಈ ಸ್ಪ್ರೇನಲ್ಲಿ ಕ್ಲೋಸ್ಟೆಬೋಲ್ ಅಂಶಗಳಿದ್ದವು. ಈ ಜಾಗರೂಕತೆಯಿಂದಾಗಿ ಇದೀಗ ಯಾನಿಕ್ ಸಿನ್ನರ್ ಮೂರು ತಿಂಗಳುಗಳ ನಿಷೇಧಕ್ಕೆ ಒಳಗಾಗಿದ್ದಾರೆ.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಮತ್ತೆ ಲಲಿತ್ ಮೋದಿ: ಐಪಿಎಲ್ 2026ಕ್ಕೂ ಮುನ್ನ ಭಾರೀ ಬದಲಾವಣೆ ಸಾಧ್ಯತೆ?

ರಾಜಸ್ಥಾನ ರಾಯಲ್ಸ್ ಫ್ರಾಂಚೈಸಿಯ ಮಾಲೀಕತ್ವದಲ್ಲಿ ಶೀಘ್ರದಲ್ಲೇ ಬದಲಾವಣೆಯಾಗುವ ಸಾಧ್ಯತೆಯಿದ್ದು, ಜಾಗತಿಕ ಹೂಡಿಕೆ...

ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಐಪಿಎಲ್ ಪಂದ್ಯಗಳ ಆಯೋಜನೆಗೆ ಸರ್ಕಾರದ ಅನುಮತಿ

ಬೆಂಗಳೂರಿನ ಐತಿಹಾಸಿಕ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಐಪಿಎಲ್ 2026 ಹಾಗೂ ಅಂತರರಾಷ್ಟ್ರೀಯ...

ಟೀಕೆಗಳ ಸುಳಿಯಲ್ಲೂ ಮಿನುಗಿದ ಕೇರಳದ ತಾರೆ: ಸಂಜು ಸ್ಯಾಮ್ಸನ್ ಎಂಬ ಛಲದಂಕಮಲ್ಲ

ಮೈದಾನದಲ್ಲಿ ಎಂ ಎಸ್  ಧೋನಿಯಂತೆಯೇ ಅತೀವ ಶಾಂತ ಸ್ವಭಾವವನ್ನು ಕಾಯ್ದುಕೊಳ್ಳುವ ಸಂಜು...