ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಸ್ಪರ್ಧಿಸಿದ್ದ ಈಜಿಪ್ಟ್‌ನ ಫೆನ್ಸರ್ ನಾಡಾ ಹಫೀಜ್ 7 ತಿಂಗಳ ಗರ್ಭಿಣಿ

Date:

ಪ್ಯಾರಿಸ್ ಒಲಿಂಪಿಕ್ಸ್‌ 2024ರಲ್ಲಿ ಸ್ಪರ್ಧಿಸಿದ್ದ ಈಜಿಪ್ಟ್‌ನ ಫೆನ್ಸರ್ ನಾಡಾ ಹಫೀಜ್ ಅವರು ತಾನು 7 ತಿಂಗಳ ಗರ್ಭಿಣಿ ಎಂದು ಬಹಿರಂಗಪಡಿಸಿದ್ದಾರೆ.

ಫೆನ್ಸರ್‌ ಸ್ಪರ್ಧೆಯಲ್ಲಿ 16ನೇ ಸುತ್ತು ಪ್ರವೇಶಿಸಿದಾಗ ಇನ್‌ಸ್ಟಾಗ್ರಾಂನಲ್ಲಿ ಪೋಸ್ಟ್‌ ಮಾಡಿದ್ದ ಹಫೀಜ್‌, “ಪುಟ್ಟ ಒಲಿಂಪಿಯನ್‌ನನ್ನು ಹೊತ್ತುಕೊಂಡಿದ್ದೇನೆ” ಎಂದು ಹೇಳಿದ್ದರು.

26 ವರ್ಷದ ಹಫೀಜ್ ಮಹಿಳೆಯರ ವಿಭಾಗದ ಫೆನ್ಸರ್‌ ಸುತ್ತಿನ ಮೊದಲ ಪಂದ್ಯದಲ್ಲಿ ಗೆಲುವು ಸಾಧಿಸಿದ್ದರು. ಈ ಸಂದರ್ಭದಲ್ಲಿ ಪೋಸ್ಟ್‌ ಮಾಡಿದ್ದ ಅವರು, “ಸ್ಪರ್ಧಾ ಕಣಕ್ಕೆ ಇಳಿದಾಗ ನೀವು ಇಬ್ಬರು ಆಟಗಾರರು ಇರುತ್ತೀರಾ, ಆದರೆ ಇಲ್ಲಿ ಮೂವರಿದ್ದೇವೆ! ನಾನು, ನನ್ನ ಸ್ಪರ್ಧಿ ಹಾಗೂ ಪ್ರಪಂಚಕ್ಕೆ ಕಾಲಿಡಬೇಕಾದ ನನ್ನ ಪುಟ್ಟ ಕಂದ” ಎಂದು ತಿಳಿಸಿದ್ದಾರೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

“ನನ್ನ ಕಂದ ಹಾಗೂ ನಾನು ಸ್ಪರ್ಧೆಯಲ್ಲಿ ನ್ಯಾಯಯುತವಾದ ಸವಾಲುಗಳನ್ನು ಹೊಂದಿದ್ದು,ಇಬ್ಬರು ದೈಹಿಕ ಹಾಗೂ ಭಾವನಾತ್ಮಕವಾಗಿ ಇದ್ದೇವೆ. ಗರ್ಭಾವ್ಯಸ್ಥೆಯು ಕಠಿಣ ಹಂತವಾಗಿದೆ. ಆದರೆ ನಾನು ಜೀವನ ಹಾಗೂ ಕ್ರೀಡೆ ಎರಡರಲ್ಲೂ ಸಮತೋಲನವಾಗಿ ಹೋರಾಟ ನಡೆಸುತ್ತಿರುವುದು ಕಷ್ಟಕರ ಸನ್ನಿವೇಶವಾಗಿಲ್ಲ. ಆದಾಗ್ಯೂ ಮಾನ್ಯತೆಯುಳ್ಳದಾಗಿದೆ” ಎಂದು ತಿಳಿಸಿದ್ದಾರೆ.

ಈ ಸುದ್ದಿ ಓದಿದ್ದೀರಾ? ಪ್ಯಾರಿಸ್ ಒಲಿಂಪಿಕ್ಸ್ 2024: ಮತ್ತೊಂದು ಪದಕ ಗೆಲುವಿನತ್ತ ಮನು ಭಾಕರ್‌ !

“ನನ್ನ ಪತಿ ಹಾಗೂ ಕುಟುಂಬದವರ ನಂಬಿಕೆಯೊಂದಿಗೆ ಇಲ್ಲಿಯವರೆಗೂ ಬಂದಿರುವುದು ನನ್ನ ಅದೃಷ್ಟ. 16ರ ಹಂತಕ್ಕೆ ಬಂದಿರುವುದರಿಂದ ಪೋಸ್ಟ್‌ ಮೂಲಕ ಹಂಚಿಕೊಳ್ಳುತ್ತಿದ್ದೇನೆ” ಎಂದು ಹಫೀಜ್‌ ತಿಳಿಸಿದ್ದಾರೆ.

ಹಫೀಜ್‌ ಅವರು ಅರ್ಹತಾ ಸುತ್ತಿನಲ್ಲಿ ಅಮೆರಿಕದ ಎಲಿಜಬತ್‌ ಅವರನ್ನು 15-13 ಅಂತರದಿಂದ ಸೋಲಿಸಿದ್ದರು. ಆದರೆ 16ರ ಸುತ್ತಿನಲ್ಲಿ ದಕ್ಷಿಣ ಕೊರಿಯಾದ ಜಿಯೋನ್‌ ವಿರುದ್ಧ 15-7 ಅಂತರದಿಂದ ಪರಾಭವಗೊಂಡರು.

ವೈದ್ಯಕೀಯ ಪದವೀಧರೆಯಾದ ಹಫೀಜ್‌ ಅವರದು ಇದು ಮೂರನೇ ಒಲಿಂಪಿಕ್ಸ್ ಸ್ಪರ್ಧೆಯಾಗಿದೆ. ಆಫ್ರಿಕನ್‌ ಕ್ರೀಡೆಗಳಲ್ಲಿ ಈಗಾಗಲೇ ಅವರು ಮೂರು ಕಂಚು ಹಾಗೂ ಒಂದು ಬೆಳ್ಳಿಯ ಪದಕ ಗೆದ್ದಿದ್ದಾರೆ.

ಪ್ಯಾರಿಸ್ ಒಲಿಂಪಿಕ್ಸ್‌ನ ಐದನೇ ದಿನದಾಟ ನಡೆಯುತ್ತಿದ್ದು, ಪದಕ ಪಟ್ಟಿಯಲ್ಲಿ ಜಪಾನ್, ಫ್ರಾನ್ಸ್ ಹಾಗೂ ಚೀನಾ ಕ್ರಮವಾಗಿ ಮೂರು ಸ್ಥಾನಗಳನ್ನು ಗಳಿಸಿಕೊಂಡಿವೆ. ಜಪಾನ್‌ 7 ಚಿನ್ನ, 2 ಬೆಳ್ಳಿ, 4 ಕಂಚು ಗೆದ್ದಿದ್ದರೆ, ಫ್ರಾನ್ಸ್ 6 ಚಿನ್ನ, 9 ಬೆಳ್ಳಿ, 4 ಕಂಚನ್ನು ತಮ್ಮದಾಗಿಸಿಕೊಂಡಿದೆ. ಚೀನಾ ತಲಾ 6 ಚಿನ್ನ ಹಾಗೂ ಬೆಳ್ಳಿ, 2 ಕಂಚನ್ನು ತನ್ನ ತೆಕ್ಕೆಗೆ ಪಡೆದುಕೊಂಡಿದೆ. ಭಾರತ 2 ಕಂಚನ್ನು ಗೆದ್ದಿದೆ.  

WhatsApp Image 2025 11 17 at 3.21.17 PM
ಈ ದಿನ ಡೆಸ್ಕ್
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಮತ್ತೆ ಲಲಿತ್ ಮೋದಿ: ಐಪಿಎಲ್ 2026ಕ್ಕೂ ಮುನ್ನ ಭಾರೀ ಬದಲಾವಣೆ ಸಾಧ್ಯತೆ?

ರಾಜಸ್ಥಾನ ರಾಯಲ್ಸ್ ಫ್ರಾಂಚೈಸಿಯ ಮಾಲೀಕತ್ವದಲ್ಲಿ ಶೀಘ್ರದಲ್ಲೇ ಬದಲಾವಣೆಯಾಗುವ ಸಾಧ್ಯತೆಯಿದ್ದು, ಜಾಗತಿಕ ಹೂಡಿಕೆ...

ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಐಪಿಎಲ್ ಪಂದ್ಯಗಳ ಆಯೋಜನೆಗೆ ಸರ್ಕಾರದ ಅನುಮತಿ

ಬೆಂಗಳೂರಿನ ಐತಿಹಾಸಿಕ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಐಪಿಎಲ್ 2026 ಹಾಗೂ ಅಂತರರಾಷ್ಟ್ರೀಯ...

ಟೀಕೆಗಳ ಸುಳಿಯಲ್ಲೂ ಮಿನುಗಿದ ಕೇರಳದ ತಾರೆ: ಸಂಜು ಸ್ಯಾಮ್ಸನ್ ಎಂಬ ಛಲದಂಕಮಲ್ಲ

ಮೈದಾನದಲ್ಲಿ ಎಂ ಎಸ್  ಧೋನಿಯಂತೆಯೇ ಅತೀವ ಶಾಂತ ಸ್ವಭಾವವನ್ನು ಕಾಯ್ದುಕೊಳ್ಳುವ ಸಂಜು...