ಐಪಿಎಲ್ 2023 | ಕೋಲ್ಕತ್ತಾ ಹ್ಯಾಟ್ರಿಕ್ ಗೆಲುವಿನ ತಡೆಗೆ ಹೈದರಾಬಾದ್‌ ಯತ್ನ

Date:

  • ಸತತ ಎರಡು ಪಂದ್ಯಗಳಲ್ಲಿ ಅಮೋಘ ಗೆಲುವು ದಾಖಲಿಸಿರುವ ಕೆಕೆಆರ್ ತಂಡ
  • 2 ಪಂದ್ಯ ಸೋತಿದ್ದರೂ ಮೂರನೇ ಪಂದ್ಯದಲ್ಲಿ ಪಂಜಾಬ್‌ ಮಣಿಸಿರುವ ಎಸ್‌ಆರ್‌ಹೆಚ್‌  

ಆರ್‌ಸಿಬಿ ಹಾಗೂ ಗುಜರಾತ್‌ ಟೈಟಾನ್ಸ್ ವಿರುದ್ಧ ಸತತ ಎರಡು ಪಂದ್ಯಗಳಲ್ಲಿ ಗೆಲುವು ಸಾಧಿಸಿ ಆತ್ಮವಿಶ್ವಾಸದ ಅಲೆಯಲ್ಲಿರುವ ಕೋಲ್ಕತಾ ನೈಟ್‌ರೈಡ​ರ್ಸ್‌ ಇಂದು ಸನ್‌ರೈಸರ್ಸ್ ಹೈದರಾಬಾದ್‌ ತಂಡವನ್ನು ಎದುರಿಸಲಿದೆ.

ಐಪಿಎಲ್‌ 16ನೇ ಆವೃತ್ತಿಯಲ್ಲಿ ನಾಲ್ಕನೇ ಪಂದ್ಯವಾಡುತ್ತಿರುವ ನಿತೀಶ್ ರಾಣಾ ನೇತೃತ್ವದ ಕೆಕೆಆರ್‌ ಪಡೆ ಮೊದಲ ಪಂದ್ಯವನ್ನು ಪಂಜಾಬ್‌ ಕಿಂಗ್ಸ್ ವಿರುದ್ಧ ಸೋತಿದ್ದರೂ ನಂತರದ ಎರಡು ಪಂದ್ಯಗಳಲ್ಲಿ ಅಮೋಘವಾಗಿ ಗೆಲುವು ಪಡೆದಿದೆ. ಇದೇ ವಿಶ್ವಾಸದಲ್ಲಿ ಹ್ಯಾಟ್ರಿಕ್‌ ಜಯದ ವಿಶ್ವಾಸದಲ್ಲಿದೆ.

ಮೊದಲೆರಡು ಪಂದ್ಯಗಳಲ್ಲಿ ಸೋತಿದ್ದ ಏಡನ್‌ ಮಾರ್ಕ್ರಮ್‌ ಸಾರಥ್ಯದ ಸನ್‌ರೈಸ​ರ್ಸ್ ಹೈದರಾಬಾದ್, ಕಳೆದ ಪಂದ್ಯದಲ್ಲಿ ಪಂಜಾಬ್‌ ಕಿಂಗ್ಸ್ ವಿರುದ್ಧ 8 ವಿಕೆಟ್‌ ಜಯಗಳಿಸಿ ಗೆಲುವಿನ ಖಾತೆ ತೆರೆದಿತ್ತು. ಈಗ ಅದೇ ಜಯದ ಲಯ ಉಳಿಸಿಕೊಳ್ಳುವ ಗುರಿ ಎಸ್‌ಆರ್‌ಹೆಚ್ ಹೊಂದಿದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ಕೆಕೆಆರ್‌ನಲ್ಲಿ ಶಾರ್ದೂಲ್‌ ಠಾಕೂರ್ ಹಾಗೂ ರಿಂಕು ಸಿಂಗ್ ಫಿನಿಶರ್‌ಗಳ ಪಾತ್ರ ನಿಭಾಯಿಸುವ ಭರವಸೆ ಮೂಡಿಸಿದ್ದಾರೆ. ರಹಮಾನುಲ್ಲಾ ಗುರ್ಬಾಜ್‌ ಕೂಡ ಉತ್ತಮ ಪ್ರದರ್ಶನ ನೀಡುತ್ತಿದ್ದಾರೆ. ಜೇಸನ್‌ ರಾಯ್‌ ತಂಡಕ್ಕೆ ಸೇರ್ಪಡೆಯಾಗುವ ಸಾಧ್ಯತೆಯಿದೆ. ಸ್ಪಿನ್‌ ಬೌಲಿಂಗ್‌ನಲ್ಲಿ ವರುಣ್‌ ಚಕ್ರವರ್ತಿ ಹಾಗೂ ಸುನಿಲ್‌ ನರೈನ್‌ ಫಾರ್ಮ್‌ನಲ್ಲಿರುವುದರಿಂದ ಕೆಕೆಆರ್‌ ಬಲ ಹೆಚ್ಚಿಸಿದೆ.

ಕೆಕೆಆರ್‌ ಈ ಆವೃತ್ತಿಯಲ್ಲಿ ಪವರ್‌ ಪ್ಲೇನಲ್ಲಿ ಕೇವಲ 6.6ರ ರನ್‌ರೇಟ್‌ನಲ್ಲಿ ರನ್‌ ಕಲೆಹಾಕಿದರೂ, ಕೊನೆ 5 ಓವರ್‌ಗಳಲ್ಲಿ 11.3 ರನ್‌ರೇಟ್‌ ಹೊಂದಿದೆ.

ಮತ್ತೊಂದೆಡೆ ಸನ್‌ರೈಸ​ರ್ಸ್‌ ಹೈದರಾಬಾದ್‌ ಟೀಂ ವರ್ಕ್‌ನೊಂದಿಗೆ ಕಣಕ್ಕಿಳಿದರೆ, ಯಾವ ತಂಡಕ್ಕೂ ಬೇಕಾದರೂ ಪ್ರಬಲ ಪೈಪೋಟಿ ನೀಡುವ ಸಾಮರ್ಥ್ಯ ಹೊಂದಿದೆ. ರಾಹುಲ್‌ ತ್ರಿಪಾಠಿ, ಮಾರ್ಕ್ರಮ್‌, ಹ್ಯಾರಿ ಬ್ರೂಕ್‌ ಎಸ್‌ಆರ್‌ಹೆಚ್‌ ಬ್ಯಾಟಿಂಗ್‌ನ ಶಕ್ತಿ. ಭುವನೇಶ್ವರ್‌, ನಟರಾಜನ್‌ಗೆ ಅಂತಿಮ ಓವರ್‌ಗಳ ಜವಾಬ್ದಾರಿ ನೀಡಿ ಮಾರ್ಕೊ ಯಾನ್ಸನ್‌ರನ್ನು ಪವರ್‌-ಪ್ಲೇನಲ್ಲಿ ಬಳಸಿದರೆ ಎದುರಾಳಿ ತಂಡಕ್ಕೆ ಪೆಟ್ಟು ನೀಡಬಹುದು. ಈ ಪಂದ್ಯದಲ್ಲಿ ಆದಿಲ್‌ ರಶೀದ್‌ರ ಬದಲು ವೇಗಿ ಫಜಲ್‌ಹಕ್‌ ಫಾರೂಕಿಯನ್ನು ಆಡಿಸುವ ಸಾಧ್ಯತೆಯಿದೆ.

ಸನ್‌ರೈಸರ್ಸ್ ಪವರ್‌-ಪ್ಲೇನಲ್ಲಿ ಕೇವಲ 5.8 ರನ್‌ರೇಟ್‌ ಹೊಂದಿದ್ದು, ಅಂತಿಮ ಓವರ್‌ಗಳಲ್ಲಿ 9.0 ರನ್‌ರೇಟ್‌ನಲ್ಲಿ ರನ್‌ ಗಳಿಸಿದೆ.

ಪಿಚ್ ರಿಪೋರ್ಚ್

ಈಡನ್‌ ಗಾರ್ಡನ್ಸ್‌ನ ಪಿಚ್‌ ಬ್ಯಾಟ್ಸ್ಮನ್‌ಗಳಿಗೆ ಹೆಚ್ಚು ಅನುಕೂಲಕರವಾಗಿದ್ದು, ಈ ಪಂದ್ಯದಲ್ಲೂ ದೊಡ್ಡ ಮೊತ್ತ ದಾಖಲಾಗಬಹುದು. ಸ್ಪಿನ್ನರ್‌ಗಳಿಗೂ ಉಪಯುಕ್ತವಾಗುವುದರಿಂದ ತಂಡಗಳು ಹತ್ತು ಓವರ್‌ಗಳ ನಂತರ ಎಷ್ಟು ಪರಿಣಾಮಕಾರಿಯಾಗಲಿವೆ ಎನ್ನುವುದು ಪಂದ್ಯದ ಫಲಿತಾಂಶವನ್ನು ನಿರ್ಧರಿಸುತ್ತದೆ.

ಒಟ್ಟು ಮುಖಾಮುಖಿ: 23

ಕೆಕೆಆರ್: 15

ಸನ್ರೈಸರ್ಸ್: 08

ಸಂಭವನೀಯ ಆಟಗಾರರ ಪಟ್ಟಿ

ಕೋಲ್ಕತಾ ನೈಟ್ ರೈಡರ್ಸ್‌: ಜೇಸನ್‌ ರಾಯ್‌, ಎನ್‌ ಜಗದೀಶನ್‌, ವೆಂಕಟೇಶ್ ಅಯ್ಯರ್‌, ನಿತೀಶ್‌ ರಾಣಾ (ನಾಯಕ), ರಿಂಕು ಸಿಂಗ್‌, ಆಂಡ್ರೆ ರಸೆಲ್‌, ಸುನಿಲ್ ನರೈನ್‌, ಶಾರ್ದೂಲ್‌ ಠಾಕೂರ್, ಉಮೇಶ್‌ ಯಾದವ್, ಲಾಕಿ ಫಗ್ರ್ಯೂಸನ್‌, ವರುಣ್‌ ಚಕ್ರವರ್ತಿ.

ಸನ್ರೈಸರ್ಸ್ ಹೈದರಾಬಾದ್: ಮಯಾಂಕ್‌ ಅಗರ್‌ವಾಲ್, ಹ್ಯಾರಿ ಬ್ರೂಕ್‌, ರಾಹುಲ್ ತ್ರಿಪಾಠಿ, ಏಯ್ಡನ್ ಮಾರ್ಕ್ರಮ್‌(ನಾಯಕ), ಹೆನ್ರಿಚ್‌ ಕ್ಲಾಸೆನ್‌, ವಾಷಿಂಗ್ಟನ್‌ ಸುಂದರ್, ಮಾರ್ಕೊ ಯಾನ್ಸನ್‌, ಮಯಾಂಕ್‌ ಮಾರ್ಕಂಡೆ, ಭುವನೇಶ್ವರ್‌ ಕುಮಾರ್, ಉಮ್ರಾನ್‌ ಮಲಿಕ್, ಟಿ ನಟರಾಜನ್‌.

ಪಂದ್ಯ: ಸಂಜೆ 7.30ಕ್ಕೆ
ನೇರ ಪ್ರಸಾರ: ಸ್ಟಾರ್‌ ಸ್ಪೋರ್ಟ್ಸ್‌, ಜಿಯೋ ಸಿನಿಮಾ

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಮತ್ತೆ ಲಲಿತ್ ಮೋದಿ: ಐಪಿಎಲ್ 2026ಕ್ಕೂ ಮುನ್ನ ಭಾರೀ ಬದಲಾವಣೆ ಸಾಧ್ಯತೆ?

ರಾಜಸ್ಥಾನ ರಾಯಲ್ಸ್ ಫ್ರಾಂಚೈಸಿಯ ಮಾಲೀಕತ್ವದಲ್ಲಿ ಶೀಘ್ರದಲ್ಲೇ ಬದಲಾವಣೆಯಾಗುವ ಸಾಧ್ಯತೆಯಿದ್ದು, ಜಾಗತಿಕ ಹೂಡಿಕೆ...

ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಐಪಿಎಲ್ ಪಂದ್ಯಗಳ ಆಯೋಜನೆಗೆ ಸರ್ಕಾರದ ಅನುಮತಿ

ಬೆಂಗಳೂರಿನ ಐತಿಹಾಸಿಕ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಐಪಿಎಲ್ 2026 ಹಾಗೂ ಅಂತರರಾಷ್ಟ್ರೀಯ...

ಟೀಕೆಗಳ ಸುಳಿಯಲ್ಲೂ ಮಿನುಗಿದ ಕೇರಳದ ತಾರೆ: ಸಂಜು ಸ್ಯಾಮ್ಸನ್ ಎಂಬ ಛಲದಂಕಮಲ್ಲ

ಮೈದಾನದಲ್ಲಿ ಎಂ ಎಸ್  ಧೋನಿಯಂತೆಯೇ ಅತೀವ ಶಾಂತ ಸ್ವಭಾವವನ್ನು ಕಾಯ್ದುಕೊಳ್ಳುವ ಸಂಜು...