ಚಂಡೀಗಢದ ಮಹಾರಾಜ ಯಾದವೀಂದ್ರ ಸಿಂಗ್ ಅಂತರಾಷ್ಟ್ರೀಯ ಸ್ಟೇಡಿಯಂನಲ್ಲಿ ಇಂದು ನಡೆದ ಐಪಿಎಲ್ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ತಂಡವನ್ನು ಗುಜರಾತ್ ಟೈಟನ್ಸ್ ತಂಡವು ಮೂರು ವಿಕೆಟ್‌ಗಳಿಂದ ಸೋಲಿಸಿದೆ.
ಶುಭ್ಮನ್ ಗಿಲ್ ಪಡೆಯ ಸಂಘಟಿತ ಬೌಲಿಂಗ್ ದಾಳಿಗೆ ತತ್ತರಿಸಿದ್ದ ಪಂಜಾಬ್ ಬ್ಯಾಟರ್‌ಗಳು, ಸಾಲು ಸಾಲು ವಿಕೆಟ್ ಕಳೆದುಕೊಂಡು ಪೆವಿಲಿಯನ್ ಕಡೆ ಹೆಜ್ಜೆ ಹಾಕಿದ್ದರಿಂದ ನಿಗದಿತ 20 ಓವರ್‌ಗಳಲ್ಲಿ ಆಲೌಟ್ ಆಗಿ, ಕೇವಲ 143 ರನ್‌ಗಳ ಗುರಿ ನೀಡಿತ್ತು. ಈ ಗುರಿಯನ್ನು ಬೆನ್ನತ್ತಿದ ಗುಜರಾತ್, 19.1 ಓವರ್‌ಗಳಲ್ಲಿ 7 ವಿಕೆಟ್ ಕಳೆದುಕೊಂಡು 146 ರನ್ ಗಳಿಸಿತು. ಕೊನೆಯ ಓವರ್‌ನ ಮೊದಲ ಎಸೆತವನ್ನು ಬೌಂಡರಿಗೆ ಬಾರಿಸುವ ಮೂಲಕ ರಾಹುಲ್ ತೆವಾಟಿಯಾ ತಂಡಕ್ಕೆ ಗೆಲುವು ತಂದುಕೊಟ್ಟರು.
Rahul Tewatia the man again who is at the finishing line guiding them home 😎
Gujarat Titans have come up on 🔝 in Mullanpur with a clinical performance and have settled their scores with #PBKS 🙌
Scorecard ▶️ https://t.co/avVO2pCwJO#TATAIPL | #PBKSvGT | @gujarat_titans pic.twitter.com/h8BiuB7UVT
— IndianPremierLeague (@IPL) April 21, 2024
ಗುಜರಾತ್ ಪರ ಬ್ಯಾಟಿಂಗ್‌ನಲ್ಲಿ ನಾಯಕ ಶುಭ್‌ಮನ್ ಗಿಲ್ 35, ರಾಹುಲ್ ತೆವಾಟಿಯಾ 36, ಸಾಯಿ ಸುದರ್ಶನ್ 31 ರನ್ ಗಳಿಸಿ, ತಂಡದ ಗೆಲುವಿನಲ್ಲಿ ತಮ್ಮದೇ ಕೊಡುಗೆ ನೀಡಿದರು.
ಪಂಜಾಬ್ ಪರ ಬೌಲಿಂಗ್‌ನಲ್ಲಿ ಹರ್ಷಲ್ ಪಟೇಲ್ 3, ಲಿವಿಂಗ್‌ಸ್ಟನ್ 2, ಸ್ಯಾಮ್ ಕರನ್ ಹಾಗೂ ಅರ್ಷ್‌ದೀಪ್ ಸಿಂಗ್ ತಲಾ ಒಂದೊಂದು ವಿಕೆಟ್ ಪಡೆದರು.
Gujarat Titans defeated Punjab Kings in Mullanpur. 🔥 pic.twitter.com/scXZOxqTzZ
— Mufaddal Vohra (@mufaddal_vohra) April 21, 2024
ಗುಜರಾತ್ ಬೌಲಿಂಗ್ ಪ್ರದರ್ಶನ
ಗುಜರಾತ್ ಪರ ಉತ್ತಮ ಬೌಲಿಂಗ್ ಪ್ರದರ್ಶನ ಇಂದು ಕಂಡು ಬಂತು. ರವಿಶ್ರೀನಿವಾಸನ್ ಸಾಯಿ ಕಿಶೋರ್ ಅವರು ಪ್ರಮುಖ ನಾಲ್ಕು ವಿಕೆಟ್‌ಗಳನ್ನು ಕಬಳಿಸಿ ಮಿಂಚಿದರು. ನೂರ್ ಅಹ್ಮದ್ ಮತ್ತು ಮೋಹಿತ್ ಶರ್ಮಾ ತಲಾ ಎರಡು ವಿಕೆಟ್ ಹಾಗೂ ರಶೀದ್ ಖಾನ್ ಒಂದು ವಿಕೆಟ್ ಉರುಳಿಸುವ ಮೂಲಕ ಪಂಜಾಬ್ ಬ್ಯಾಟರ್‌ಗಳನ್ನು 142ಕ್ಕೆ ಕಟ್ಟಿ ಹಾಕುವಲ್ಲಿ ಯಶಸ್ವಿಯಾದರು.





