IND – SA T20 | ಹಾರ್ದಿಕ್‌ ಪಾಂಡ್ಯ ಸ್ಫೋಟಕ ಅರ್ಧ ಶತಕ; ದಕ್ಷಿಣ ಆಫ್ರಿಕಾಕ್ಕೆ 176 ರನ್ ಗುರಿ

Date:

ದಕ್ಷಿಣ ಆಫ್ರಿಕಾ ವಿರುದ್ಧ ಕಟಕ್‌ನಲ್ಲಿ ನಡೆಯುತ್ತಿರುವ ಮೊದಲ ಟಿ20 ಪಂದ್ಯದಲ್ಲಿ ಟೀಂ ಇಂಡಿಯಾ ಹರಿಣಗಳ ತಂಡಕ್ಕೆ 176 ರನ್‌ ಗುರಿ ನೀಡಿದೆ.

ದಕ್ಷಿಣ ಆಫ್ರಿಕಾ ಟಾಸ್ ಗೆದ್ದು ಫೀಲ್ಡಿಂಗ್ ಆರಿಸಿಕೊಂಡ ನಂತರ ಬ್ಯಾಟಿಂಗ್‌ಗೆ ಇಳಿದ ಭಾರತ 20 ಓವರ್‌ಗಳಲ್ಲಿ 6 ವಿಕೆಟ್ ಕಳೆದುಕೊಂಡು 175 ರನ್ ಪೇರಿಸಿದೆ. ಆರಂಭಿಕ ಕುಸಿತದ ನಡುವೆಯೂ ಹಾರ್ದಿಕ್ ಪಾಂಡ್ಯ ಅವರ ಸೊಗಸಾದ ಅಜೇಯ ಅರ್ಧಶತಕ ಭಾರತದ ಮೊತ್ತಕ್ಕೆ ಬಲ ತುಂಬಿತು.

ಇನಿಂಗ್ಸ್‌ ಆರಂಭವೇ ದಕ್ಷಿಣ ಆಫ್ರಕಾ ಬೌಲರ್‌ಗಳು ಭಾರತಕ್ಕೆ ಆಘಾತ ನೀಡಿದರು. ಮೊದಲ ಓವರ್‌ನ ಮೂರನೇ ಎಸೆತಕ್ಕೆ ಶುಭಮನ್ ಗಿಲ್ (4) ಔಟಾದರು. ಬಳಿಕ ಸೂರ್ಯಕುಮಾರ್ ಯಾದವ್ (12) ಕೂಡ ಹೆಚ್ಚು ಕಾಲ ನಿಲ್ಲದೇ ಪೆವಿಲಿಯನ್ ಸೇರಿದರು. ಆರಂಭಿಕ ಒತ್ತಡದ ನಡುವೆ ಅಭಿಷೇಕ್ ಶರ್ಮಾ 12 ರನ್ ಮಾತ್ರ ಗಳಿಸಿದರು. ಆದರೆ 6.3ನೇ ಓವರ್‌ನಲ್ಲಿ ಭಾರತ 48/3 ಸ್ಕೋರ್ ಆಗಿತ್ತು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ಇದನ್ನು ಓದಿದ್ದೀರಾ? IND – SA ODI | ದಕ್ಷಿಣ ಆಫ್ರಿಕಾ ವಿರುದ್ಧ ಸರಣಿ ಗೆದ್ದ ಭಾರತ: ಜೈಸ್ವಾಲ್‌ ದಾಖಲೆಯ ಚೊಚ್ಚಲ ಶತಕ

ಇದಾದ ನಂತರ ತಿಲಕ್ ವರ್ಮಾ (26) ಮತ್ತು ಅಕ್ಸರ್ ಪಟೇಲ್ (23) ತಲಾ ಉಪಯುಕ್ತ ಆಟವಾಡಿದರೂ ದೀರ್ಘ ಇನಿಂಗ್ಸ್ ಕಟ್ಟುವಲ್ಲಿ ವಿಫಲರಾದರು. ಹಾರ್ದಿಕ್ ಪಾಂಡ್ಯ ಮಾತ್ರ ಒಂದು ತುದಿಯಿಂದ ಭಾರತದ ಮೊತ್ತ ಹೆಚ್ಚಿಸಿದ ಪ್ರಮುಖ ಆಟಗಾರ. 28 ಎಸೆತಗಳಲ್ಲಿ 59 ರನ್‌ಗಳ ಅಜೇಯ ಇನಿಂಗ್ಸ್‌ ಆಡಿದರು. ಅವರ ಆಟದಲ್ಲಿ 6 ಬೌಂಡರಿ ಹಾಗೂ 4 ಸಿಕ್ಸರ್‌ಗಳಿದ್ದವು. ಅಂತಿಮ ಓವರ್‌ಗಳಲ್ಲಿ ವೇಗ ಹೆಚ್ಚಿಸಿದ ಹಾರ್ದಿಕ್‌ಗೆ ಜಿತೇಶ್ ಶರ್ಮಾ ( ಅಜೇಯ 10) ಉತ್ತಮ ಬೆಂಬಲ ನೀಡಿದರು.

ದಕ್ಷಿಣ ಆಫ್ರಿಕಾ ಬೌಲರ್‌ಗಳಲ್ಲಿ ಲುಂಗಿ ಎನ್ಗಿಡಿ 4 ಓವರ್‌ಗಳಲ್ಲಿ 31 ರನ್ ನೀಡಿ 3 ವಿಕೆಟ್ ಕಬಳಿಸಿದರು. ಲುಥೋ ಸಿಪಾಮ್ಲಾ 2 ವಿಕೆಟ್ ಪಡೆದು ಭಾರತಕ್ಕೆ ಒತ್ತಡ ತಂದರು.

ಮುಂದಿನ ಕ್ಷಣಗಳಲ್ಲಿ ಭಾರತ ಬೌಲರ್‌ಗಳ ಪರೀಕ್ಷೆಯ ಜೊತೆಗೆ ಕಟಕ್‌ನ ಮೈದಾನದಲ್ಲಿ ರೋಚಕ ಹೋರಾಟ ನಿರೀಕ್ಷಿಸಲಾಗಿದೆ.

WhatsApp Image 2025 11 17 at 3.21.38 PM
ಈ ದಿನ ಡೆಸ್ಕ್
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಸಂಜುಗೆ ಧೋನಿ ಕೀಪಿಂಗ್ ಗ್ಲೌಸ್ ಹಸ್ತಾಂತರ; ಮುಂದೆ ನಾಯಕತ್ವವೂ? ಸಿಎಸ್‌ಕೆ ಯೋಜನೆ ಬಗ್ಗೆ ಕುಂಬ್ಳೆ ವಿಶ್ಲೇಷಣೆ

ಭಾರತದ ಟಿ20 ವಿಶ್ವಕಪ್ ಗೆಲುವಿನಲ್ಲಿ ರುವಾರಿ ಎಂದೇ ಮಿಂಚುತ್ತಿರುವ ಸಂಜು ಸ್ಯಾಮ್ಸನ್,...

ಮತ್ತೆ ಲಲಿತ್ ಮೋದಿ: ಐಪಿಎಲ್ 2026ಕ್ಕೂ ಮುನ್ನ ಭಾರೀ ಬದಲಾವಣೆ ಸಾಧ್ಯತೆ?

ರಾಜಸ್ಥಾನ ರಾಯಲ್ಸ್ ಫ್ರಾಂಚೈಸಿಯ ಮಾಲೀಕತ್ವದಲ್ಲಿ ಶೀಘ್ರದಲ್ಲೇ ಬದಲಾವಣೆಯಾಗುವ ಸಾಧ್ಯತೆಯಿದ್ದು, ಜಾಗತಿಕ ಹೂಡಿಕೆ...

ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಐಪಿಎಲ್ ಪಂದ್ಯಗಳ ಆಯೋಜನೆಗೆ ಸರ್ಕಾರದ ಅನುಮತಿ

ಬೆಂಗಳೂರಿನ ಐತಿಹಾಸಿಕ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಐಪಿಎಲ್ 2026 ಹಾಗೂ ಅಂತರರಾಷ್ಟ್ರೀಯ...

BREAKING NEWS | ದಾವಣಗೆರೆ, ಬಾಗಲಕೋಟೆ ಉಪಚುನಾವಣೆ ದಿನಾಂಕ ಘೋಷಣೆ

ನಾಲ್ಕು ರಾಜ್ಯಗಳು ಮತ್ತು ಒಂದು ಕೇಂದ್ರಾಡಳಿತ ಪ್ರದೇಶದ ವಿಧಾನಸಭೆ ಚುನಾವಣೆ ಘೋಷಣೆಯ...